Tag: Rose day

  • ವಾಲೆಂಟೆನ್ಸ್ ಡೇಗೆ ಗುಲಾಬಿ ಕೊಡೋ ವಿಚಾರಕ್ಕೆ ಗಲಾಟೆ – ಮತ್ತೆ ರೋಡ್ ಸೈಡಲ್ಲಿ ಬಡಿದಾಡಿಕೊಂಡ ಹುಡುಗಿರು

    ವಾಲೆಂಟೆನ್ಸ್ ಡೇಗೆ ಗುಲಾಬಿ ಕೊಡೋ ವಿಚಾರಕ್ಕೆ ಗಲಾಟೆ – ಮತ್ತೆ ರೋಡ್ ಸೈಡಲ್ಲಿ ಬಡಿದಾಡಿಕೊಂಡ ಹುಡುಗಿರು

    ಆನೇಕಲ್: ಕಳೆದ ಮೂರು ದಿನಗಳ ಹಿಂದೆಯಷ್ಟೇ ವಾಲೆಂಟೆನ್ಸ್ ಡೇಗೆ ಗುಲಾಬಿ ನೀಡುವ ವಿಚಾರಕ್ಕಾಗಿ ಬಸ್ ನಿಲ್ದಾಣದಲ್ಲಿ ಕಿತ್ತಾಡಿಕೊಂಡ ಹುಡುಗಿರ ವಿಡಿಯೋ ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿತ್ತು. ಆದೇ ಹುಡುಗಿಯರು ಇಂದು ಮತ್ತೆ ರಸ್ತೆಯಲ್ಲಿ ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

    ಇಂದು ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಹುಡುಗಿಯರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ರಸ್ತೆ ಎಂದು ಕೂಡ ನೋಡದೇ ಕಿತ್ತಾಡಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿದೆ. ಶಾಲಾ ಸಮವಸ್ತ್ರದಲ್ಲಿ ಇರುವಾಗಲೇ ಹುಡುಗಿರ ಮಧ್ಯೆ ಜಗಳ ನಡೆದಿದೆ. ಶಾಲಾ ಸಮಯದಲ್ಲಿ ಇರುವಾಗಲೇ ಹುಡುಗಿಯ ನಡುವೇ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕೇಳಿಬಂದಿದೆ.

    ಕಳೆದ ಮೂರು ದಿನಗಳ ಹಿಂದೆ ಆನೇಕಲ್ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ಘಟನೆ ನಡೆದಿತ್ತು. ಪ್ರಿಯಕರನಿಗೆ ಮತ್ತೋರ್ವ ಹುಡುಗಿ ಗುಲಾಬಿ ಹೂ ಕೊಟ್ಟಳೆಂದು ಹುಡುಗಿಯರು ಹೊಡೆದಾಡಿಕೊಂಡಿದ್ದರು. ಈ ವೇಳೆ ಸ್ಥಳೀಯರು ಜಗಳ ಬಿಡಿಸಿ ಹುಡುಗಿಯರಿಗೆ ಬುದ್ಧಿವಾದ ಹೇಳಿ ಹೇಳಿದ್ದರು. ಆದರೆ ಹಿರಿಯರ ಮಾತಿಗೆ ಬೆಲೆ ನೀಡಿದ ಹುಡುಗಿಯರು ಮತ್ತೆ ಗ್ಯಾಂಗ್ ಕಟ್ಟಿಕೊಂಡು ಜಗಳ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಹುಡುಗಿಯರ ಕಿತ್ತಾಟ!

    ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಹುಡುಗಿಯರ ಕಿತ್ತಾಟ!

    ಬೆಂಗಳೂರು: ಪ್ರಿಯಕರನಿಗೆ ಮತ್ತೋರ್ವ ಹುಡುಗಿ ಗುಲಾಬಿ ಕೊಟ್ಟಳೆಂದು ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಶಾಲಾ ಹುಡುಗಿಯರು ಹೊಡೆದಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.

    ಪರಸ್ಪರ ಹೊಡೆದಾಡಿಕೊಂಡ ಹುಡುಗಿಯರು ಸ್ಥಳೀಯ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿನಿಯರಾಗಿದ್ದು, ಸಮಸ್ತ್ರದಲ್ಲಿ ಇದ್ದಾಗಲೇ ಸಾರ್ವಜನಿಕ ಸ್ಥಳದಲ್ಲಿ ಕಿತ್ತಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಆಗಿದ್ದೇನು?:
    ಪ್ರೇಮಿಗಳ ದಿನವಾದ ಫೆಬ್ರವರಿ 14ಕ್ಕೂ ಮುನ್ನ ಅಂದರೆ ಫೆ. 7ರಂದು ಗುಲಾಬಿ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆ ಇಬ್ಬರು ಹುಡುಗಿಯರು ಇಂದು ಒಬ್ಬ ಹುಡುಗನಿಗೆ ಗುಲಾಬಿ ಹೂ ನೀಡಿದ್ದಾರೆ. ಇದರಿಂದಾಗಿ ಈ ಮೊದಲೇ ಆ ಹುಡುಗನನ್ನು ಪ್ರೀತಿಸುವ ಹುಡುಗಿಯು ಕೋಪಗೊಂಡಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ದಾಳಿ ನಡೆದಿದ್ದು, ಬಳಿಕ ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.

    ಇಬ್ಬರ ಜಗಳವನ್ನು ಬಿಡಿಸಲು ಹೋದ ಇತರ ವಿದ್ಯಾರ್ಥಿನಿಯರು ಸಹ ಪರಸ್ಪರ ಹೊಡೆದಾಡಿ ಗ್ಯಾಂಗ್ ವಾರ್ ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ವಿದ್ಯಾರ್ಥಿನಿಯರಿಗೆ ಬುದ್ಧಿವಾದ ಹೇಳಿ ಜಗಳ ಬಿಡಿಸಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv