Tag: rooster

  • ಮುಂಜಾನೆ ಕೋಳಿ ಕೂಗು- ನೆರೆ ಮನೆಯವರ ವಿರುದ್ಧ ದೂರು ಕೊಟ್ಟ ವೈದ್ಯ

    ಮುಂಜಾನೆ ಕೋಳಿ ಕೂಗು- ನೆರೆ ಮನೆಯವರ ವಿರುದ್ಧ ದೂರು ಕೊಟ್ಟ ವೈದ್ಯ

    ಭೋಪಾಲ್: ಮುಂಜಾನೆ ಕೋಳಿಯ (Rooster) ಕೂಗು ಕೇಳಿ ಗ್ರಾಮೀಣ ಭಾಗದಲ್ಲಿ ಜನರು ಎಚ್ಚರಗೊಳ್ಳುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ವೈದ್ಯನೊಬ್ಬ (Doctor) ಮುಂಜಾನೆ ಕೋಳಿ ಕೂಗುತ್ತದೆ ಎಂದು ನೆರೆ ಮನೆಯವರ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಮಧ್ಯಪ್ರದೇಶದ ಇಂದೋರ್‌ನ ಪಲಾಸೊಯಾ ಪ್ರದೇಶದಲ್ಲಿ ಅಲೋಕ್ ಮೋದಿ ಎಂಬವರು ವಾಸವಿದ್ದರು. ಇವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರತಿದಿನ ಕೆಲಸ ಮುಗಿಸಿ ಬರುವುದು ತಡರಾತ್ರಿ ಆಗುತ್ತಿತ್ತು. ಆದರೆ ಇವರು ನೆರೆ ಮನೆಯಲ್ಲಿದ್ದ ಕೋಳಿಯೊಂದು ಮುಂಜಾನೆ 5 ಗಂಟೆ ಆದ ತಕ್ಷಣ ಕೂಗುತ್ತಿತ್ತು. ಇದರಿಂದ ಕೋಪಗೊಂಡ ಅಲೋಕ್ ಮೋದಿ ಪೊಲೀಸ್ (Police) ಠಾಣೆಗೆ ಹೋಗಿ ಕೋಳಿ ಸಾಕಿದ್ದ ತನ್ನ ನೆರೆಮನೆಯ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?: ತನ್ನ ಮನೆಯ ಸಮೀಪ ಮಹಿಳೆಯೊಬ್ಬರು ಕೋಳಿ ಮತ್ತು ನಾಯಿಯನ್ನು ಸಾಕಿದ್ದಾರೆ. ಆದರೆ ಆ ಕೋಳಿಯು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಕೂಗುತ್ತಿದೆ. ಇದರಿಂದಾಗಿ ತೊಂದರೆ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಡಿ ವಿವಾದ – ರಾಜ್ಯದ ನಿಲುವು ಸಂವಿಧಾನಬದ್ಧ: ಬೊಮ್ಮಾಯಿ

    ಈ ವೇಳೆ ಪಾಲಾಸಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಸಿಂಗ್ ಬೈನ್ಸ್ ಮಾತನಾಡಿ, ಮೊದಲು ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಿ. ಆ ವೇಳೆಯೂ ಸಮಸ್ಯೆ ಬಗೆಹರಿಯದಿದ್ದರೇ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?

    Live Tv
    [brid partner=56869869 player=32851 video=960834 autoplay=true]

  • ಕಾಟ ಕೊಟ್ಟ ಹುಂಜದ ವಿರುದ್ಧ ಮಹಿಳೆ ದೂರು

    ಕಾಟ ಕೊಟ್ಟ ಹುಂಜದ ವಿರುದ್ಧ ಮಹಿಳೆ ದೂರು

    ಪುಣೆ: ಹುಂಜದ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬಳು ಅದರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರ ಮೊರೆ ಹೋಗಿರುವ ವಿಚಿತ್ರ ಘಟನೆ ಪುಣೆಯಲ್ಲಿ ನಡೆದಿದೆ.

    ಹೌದು. ವಿಚಿತ್ರ ಎನಿಸಿದರೂ ಇದು ನಿಜ. ಹುಂಜ ಕಾಟ ಕೊಡುತ್ತಿದೆ ಎಂದು ಪೊಲೀಸ್ ಠಾಣೆಗೆ ಬಂದ ಮಹಿಳೆ, ಹುಂಜ ಹಾಗೂ ಅದರ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾಳೆ.

    ಪ್ರತಿದಿನ ಮನೆ ಮುಂದೆ ಬಂದು ಹುಂಜ ಕೂಗಿ ನನ್ನ ನಿದ್ರೆಯನ್ನು ಹಾಳು ಮಾಡುತ್ತಿದೆ. ಒಂದು, ಎರಡು ದಿನವಾದರೆ ಹೇಗೋ ಹುಂಜದ ಕಾಟ ತಡೆದುಕೊಳ್ಳಬಹುದಾಗಿತ್ತು. ಆದರೆ ಇದು ದಿನಾಲೂ ನನಗೆ ಕಾಟ ಕೊಡುತ್ತೆ. ಇದರಿಂದ ನನ್ನ ನಿದ್ರೆ ಹಾಳಾಗುತ್ತಿದೆ ಎಂದು ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.

    ದೂರು ನೀಡಿದ್ದ ಮಹಿಳೆ, ಸಹೋದರಿ ಮನೆಗೆ ಉಳಿಯಲು ಬಂದಾಗ ಈ ಘಟನೆ ನಡೆದಿದೆ. ಸ್ವಲ್ಪ ದಿನ ಸಹೋದರಿ ಮನೆಯಲ್ಲಿದ್ದ ಮಹಿಳೆ ಈಗ ತನ್ನ ಊರಿಗೆ ವಾಪಸ್ ಆಗಿದ್ದಾಳೆ. ಆದರೆ ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು ಸಹೋದರಿ ಮನೆಗೆ ವಿಚಾರಣೆಗೆ ಹೋದಾಗ, ಮಹಿಳೆ ವಿಲಕ್ಷಣ ಸ್ವಭಾವದವಳು. ಹಾಗಾಗಿ ವಿಚಾರಣೆ ಬೇಡವೆಂದು ಸಹೋದರಿ ಪೊಲೀಸರಿಗೆ ಹೇಳಿದ್ದಾಳೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ವಿಡಿಯೋ: 15 ಅಡಿ ಉದ್ದದ ದೈತ್ಯ ಹೆಬ್ಬಾವು ನುಂಗಿದ್ದ ಹುಂಜವನ್ನ ಹೊರಗೆ ಉಗುಳಿಸಿದ್ರು!

    ವಿಡಿಯೋ: 15 ಅಡಿ ಉದ್ದದ ದೈತ್ಯ ಹೆಬ್ಬಾವು ನುಂಗಿದ್ದ ಹುಂಜವನ್ನ ಹೊರಗೆ ಉಗುಳಿಸಿದ್ರು!

    ಬ್ಯಾಂಕಾಕ್: ದೈತ್ಯ ಹೆಬ್ಬಾವೊಂದು ಹುಂಜವನ್ನ ನುಂಗಿ ನಂತರ ಅದನ್ನ ಬಾಯಿಂದ ಹೊರಹಾಕುವ ಮೈ ಜುಮ್ಮೆನಿಸೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಥೈಲ್ಯಾಂಡಿನ ಪಾತುಮ್ ಥಾನಿ ಎಂಬಲ್ಲಿ ರೈತ ನುಟ್ ವಟ್ಟಾನಾ ಎಂಬವರು ತನ್ನ ಹಿತ್ತಲಿನಿಂದ ಎರಡು ಹುಂಜಗಳು ಕಾಣೆಯಾಗಿವೆಯಲ್ಲಾ ಅಂತ ತಲೆಕೆಡಿಸಿಕೊಂಡಿದ್ರು. ಮೊದಲಿಗೆ ಅವು ತಪ್ಪಿಸಿಕೊಂಡಿರಬಹುದು ಎಂದು ಊಹಿಸಿದ್ದರು. ಆದ್ರೆ ಛಾವಣಿ ಮೇಲೆ 15 ಅಡಿ ಉದ್ದದ ದೈತ್ಯ ಹೆಬ್ಬಾವೊಂದು ಹೊಟ್ಟೆ ಊದಿಸಿಕೊಂಡಿ ನೇತಾಡ್ತಿರೋದನ್ನ ಕಂಡು ದಂಗಾಗಿದ್ರು.

    ನಂತರ ರೈತ ಉರಗ ರಕ್ಷಕರನ್ನ ಸಂಪರ್ಕಿಸಿ ಸ್ಥಳಕ್ಕೆ ಕರೆಸಿದ್ರು. ಉರಗ ತಜ್ಞರು ಬಂದು ಹಾವು ನುಂಗಿದ್ದ ಹುಂಜವನ್ನ ಹೊರಕ್ಕೆ ಉಗುಳುವಂತೆ ಮಾಡಿದ್ದಾರೆ. ಹಾವನ್ನ ನೆಲದ ಮೇಲೆ ಮಲಗಿಸಿ ರಾಡ್ ನಿಂದ ಆಗಾಗ ಸವರಿ ಹುಂಜವನ್ನ ಉಗುಳುವಂತೆ ಮಾಡಿದ್ದಾರೆ. ಮೊದಲಿಗೆ ಹಾವಿನ ಬಾಯಲ್ಲಿ ಹುಂಜದ ಕಾಲು ಮಾತ್ರ ಕಾಣುತ್ತದೆ. ಆದ್ರೆ ನಂತರ ಹಾವು ಬಾಯಗಲಿಸಿದಾಗ ಸತ್ತ ಹುಂಜದ ದೇಹ ಹೊರಬರೋದನ್ನ ವಿಡಿಯೋದಲ್ಲಿ ಕಾಣಬಹುದು.

    ಈ ಘಟನೆ ಡಿಸೆಂಬರ್ 27ರಂದು ನಡೆದಿದ್ದು, ಕಾಣೆಯಾಗಿದ್ದ ಮತ್ತೊಂದು ಹುಂಜವೂ ಹತ್ತಿರದಲ್ಲೇ ಸತ್ತುಬಿದ್ದಿತ್ತು ಎಂದು ರೈತ ಹೇಳಿದ್ದಾರೆ.

    ಹೆಬ್ಬಾವುಗಳು ಸಾಮಾನ್ಯವಾಗಿ ಇಷ್ಟು ಗಾತ್ರದ ಹುಂಜವನ್ನ ತಿಂದಾಗ ಅದು ಜೀರ್ಣವಾಗಲು 2 ವಾರ ಬೇಕಾಗುತ್ತದೆ. ಹಾವಿಗೆ ಯಾರೂ ತೊಂದರೆ ಮಾಡದಿದ್ದರೆ ಅದು ಕೆಲವು ವಾರಗಳ ಕಾಲ ಯಾವುದೇ ಆಹಾರವಿಲ್ಲದೆ ಬದುಕುತ್ತದೆ. ಆದ್ರೆ ಈ ಹಾವಿನಿಂದ ಹುಂಜವನ್ನ ಉಗುಳಿಸಿದ ಕಾರಣ ಅದು ಮತ್ತೆ ಆಹಾರ ಹುಡುಕಬೇಕಾಗುತ್ತದೆ.

    ಹಾವಿನ ಬಾಯಿಂದ ಹುಂಜ ಉಗುಳಿಸಿದ ನಂತರ ಉರಗ ರಕ್ಷಕರು ಅದಕ್ಕೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ನೀಡಿ ನಂತರ ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

    https://www.youtube.com/watch?v=y7TufLHI798