ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಡಿಐಜಿ ರೂಪಾ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದೆ.
ಹೌದು, ಡಿಐಜಿ ರೂಪಾ ಮತ್ತು ಗುಪ್ತಚರ ಇಲಾಖೆಯ ಡಿಜಿಪಿ ಎಂಎನ್ ರೆಡ್ಡಿ ಅವರನ್ನು ವರ್ಗಾವಣೆ ಗೊಳಿಸಿ ಆದೇಶಿಸಿದೆ. ರೂಪಾ ಅವರನ್ನ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ.
ಬಂಟ್ವಾಳ ಗಲಾಟೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಎಂಎನ್ ರೆಡ್ಡಿ ಅವರನ್ನು ಎಸಿಬಿಗೆ ಸರ್ಕಾರ ವರ್ಗಾಯಿಸಿದೆ. ಗುಪ್ತಚರ ಇಲಾಖೆಯ ಐಜಿಯಾಗಿ ಅಮೃತ್ ಪೌಲ್ ನೇಮಕವಾಗಿದ್ದರೆ, ಕಾರಾಗೃಹದ ಎಡಿಜಿಪಿಯಾಗಿ ಮೇಘರಿಕ್ ನೇಮಕವಾಗಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರದ ಅವ್ಯವಹಾರವನ್ನು ಬಯಲು ಮಾಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಡಿಐಜಿ ರೂಪಾ ಅವರು ನನಗೆ ಮಾತ್ರ ನೋಟಿಸ್ ನೀಡಿದ್ದು ಯಾಕೆ ಎಲ್ಲರ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಐಪಿಎಸ್ ಅಧಿಕಾರಿಯಾಗಿದ್ದ ಸೋನಿಯಾ ನಾರಂಗ್ ಮೇಲೆ ಗಣಿಗಾರಿಕೆ ಆರೋಪದ ಬಂದಿತ್ತು. ಈ ವೇಳೆ ಅವರೇ ಮಾಧ್ಯಮಗಳ ಮುಂದೆ ಬಂದು ನನ್ನ ಮೇಲಿನ ಆರೋಪ ಸುಳ್ಳು ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಸಿಎಂ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈಗ ನಾನು ಮಾಧ್ಯಮದ ಮುಂದೆ ಬಂದಿದ್ದೆ ತಪ್ಪಾಯ್ತು ಎನ್ನುವ ಹಾಗೆ ಸಿಎಂ ಮಾತನಾಡ್ತಿದ್ದಾರೆ ಎಂದು ಹೇಳಿದರು.
ಮಾಧ್ಯಮ ಮುಂದೆ ನಾನು ಯಾವುದೇ ವರದಿ ಕೊಟ್ಟಿಲ್ಲ. ಅನ್ಯಾಯ ನಡೆಯುತ್ತಿದೆ ಅಂತ ಅಷ್ಟೇ ಹೇಳಿದ್ದೆ. ಆದ್ರೆ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಎಲ್ಲರ ಬಗ್ಗೆಯೂ ತನಿಖೆಗೆ ಆದೇಶ ಮಾಡಲಿ ಎಂದು ಸವಾಲು ಹಾಕಿದರು.
ಮಾಧ್ಯಮದ ಮುಂದೆ ನಾನು ಹೋಗಿಲ್ಲ. ಅಷ್ಟೇ ಅಲ್ಲದೇ ವರದಿ ಬಗ್ಗೆ ನಾನು ಮಾತನಾಡಿಲ್ಲ, ವರದಿ ಕೊಟ್ಟಿದ್ದೇನೆ ಎಂದು ಹೇಳಿದ್ದೇನೆ. ಆದರೆ ವರದಿ ಬಗ್ಗೆ ಮಾತನಾಡಿದ್ದು ಡಿಜಿ ಅವರು. ತನಿಖೆಗೆ ಆದೇಶ ನೀಡಿದ್ದನ್ನು ಸ್ವಾಗತ ಮಾಡುತ್ತೇನೆ. ನನ್ನನ್ನ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನ ತನಿಖೆಗೆ ಒಳಪಡಿಸಿ. ಈ ವಿಚಾರಕ್ಕೆ ನನ್ನನ್ನು ಮಾತ್ರ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು.