Tag: roopa

  • ಪ್ರಕಟಿಸಿದ ಫೋಟೋಗಳು ಸ್ಯಾಂಪಲ್‌ ಅಷ್ಟೇ: ರೋಹಿಣಿ ವಿರುದ್ಧ ರೂಪಾ ಕೆಂಡ

    ಪ್ರಕಟಿಸಿದ ಫೋಟೋಗಳು ಸ್ಯಾಂಪಲ್‌ ಅಷ್ಟೇ: ರೋಹಿಣಿ ವಿರುದ್ಧ ರೂಪಾ ಕೆಂಡ

    ಬೆಂಗಳೂರು: ರೋಹಿಣಿ ಸಿಂಧೂರಿಯ (Rohin Sindhuri) ಫೋಟೋ ಪ್ರಕಟ ಮಾಡಿದ್ದು ಕೇವಲ ಸ್ಯಾಂಪಲ್‌ ಅಷ್ಟೇ. ಅವರು ಕಳುಹಿಸಬಾರದಂತಹ ಫೋಟೋಗಳನ್ನು ಕೆಲ ಐಎಎಸ್ ಅಧಿಕಾರಿಗಳಿಗೆ (IAS Officer) ಕಳುಹಿಸಿದ್ದಾರೆ ಎಂದು ಐಪಿಎಸ್‌ ಅಧಿಕಾರಿ ರೂಪಾ (Roopa IPS) ಸ್ಫೋಟಕ ಆರೋಪ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರೂಪಾ, ಐಎಎಸ್‌ ಜವಾಬ್ದಾರಿಯುತ ಹುದ್ದೆಯಾಗಿದೆ. ಹೀಗಿರುವಾಗ ಸ್ಪಾ, ತಲೆ ದಿಂಬಿನ ಫೋಟೋ ಕಳುಹಿಸುತ್ತಾರೆ ಅಂದರೆ ಏನು ಅರ್ಥ? ಒಂದು ತಿಂಗಳ ಹಿಂದೆ ನನಗೆ ಫೋಟೋ ಸಿಕ್ಕಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ತನಿಖೆ ನಡೆಯುತ್ತದೆ. ಕ್ರಮ ಏನಾಗುತ್ತದೆ ಎಂದು ಕಾದು ನೋಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮನುಷ್ಯತ್ವ ಇರೋರು ಜನ ಸಾಯುತ್ತಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ –  ರೋಹಿಣಿ ವಿರುದ್ಧ ರೂಪಾ ಕಿಡಿ

    ಗೌರವಾನ್ವಿತ ಶಾಸಕರ ಜೊತೆ ರೋಹಿಣಿ ಸಿಂಧೂರಿ ಸಂಧಾನಕ್ಕೆ ಹೋಗಿದ್ದಾರೆ ಎಂದರೆ ಏನು ಅರ್ಥ? ರೋಹಿಣಿ ಸಿಂಧೂರಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಮೊರೆ ಹೋದಾಗ ಅದರ ಕರಡನ್ನು ಬರೆದುಕೊಟ್ಟವರು ನನ್ನ ಪತಿ. ಆರಂಭದಲ್ಲಿ ಇವರ ನಡವಳಿಕೆ ಹೇಗಿತ್ತು ಗೊತ್ತಿಲ್ಲ. ಸಂಧಾನ ವಿಷಯ ಬಂದಾಗ ಮೈ ಉರಿದು ಹೋಯ್ತು. ಜನ ಸಾಯುತ್ತಿದ್ದರೂ ತನ್ನ ಮೋಜಿಗೆ ಸ್ವಿಮ್ಮಿಂಗ್‍ಪೂಲ್ ಮಾಡಿಸಿಕೊಂಡರು ಅಂದರೆ ಏನರ್ಥ? ಆಕೆಗೆ ಮಾನವೀಯತೆ ಇದೆಯೇ ಎಂದು ನೇರವಾಗಿಯೇ ಪ್ರಶ್ನಿಸಿದರು. ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ

    ನಾನು ನಮ್ಮ ಮನೆಯವರು ಸಾಕಷ್ಟು ಸಹಾಯ ಮಾಡಿದ್ದೇವೆ. ಆದರೆ ಬರ ಬರುತ್ತಾ ಆಕೆಯ ವರ್ತನೆ ಸರಿ ಇಲ್ಲ ಎನ್ನುವುದು ಗೊತ್ತಾಯಿತು. ಆಕೆ ಪ್ರೊಬೇಷನರಿ ಅವಧಿಯಲ್ಲಿದ್ದಾಗ ಜಿಲ್ಲಾಧಿಕಾರಿ ಹಾಗೂ ಅವರ ಪತ್ನಿಯ ಸಂಬಂಧ ಹಾಳಾಗಿದೆ. ಇದರ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 100 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

    100 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

    ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಬಿಬಿಎಂಪಿ ಅದ್ದೂರಿಯಾಗಿ ಆಚರಿಸಿದೆ. ಬಿಬಿಎಂಪಿಯ ಗಾಜಿನ ಮನೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪಬ್ಲಿಕ್ ಟಿವಿ ಕಾರ್ಯನಿರ್ವಾಹಕ ಸಂಪಾದಕ ಸಿ ದಿವಾಕರ್ ಸೇರಿದಂತೆ ನೂರು ಮಂದಿ ಸಾಧಕರಿಗೆ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಅಶ್ವಥ್‍ನಾರಾಯಣ್ ಪ್ರಶಸ್ತಿ ಪ್ರದಾನ ಮಾಡಿದರು.

    ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಐಪಿಎಸ್ ಅಧಿಕಾರಿ ಡಿ.ರೂಪಾ, ಗಾಯಕಿ ಮಂಜುಳಾ ಗುರುರಾಜ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪ್ರಶಸ್ತಿ ಸ್ವೀಕರಿಸಿದ್ರು. ಇದೇ ವೇಳೆ, ಲಕ್ಷ್ಮಿದೇವಿ ಪ್ರಶಸ್ತಿ, ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ವಿತರಿಸಲಾಯ್ತು.

    ಈ ಬಾರಿ ಶಿವೈಕ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ 5 ಸಂಸ್ಥೆಗಳಿಗೆ ಪ್ರಶಸ್ತಿ ನೀಡಿದರೆ 10 ಮಂದಿ ಸಾಧಕಿಯರಿಗೆ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

  • ಐಪಿಎಸ್ ರೂಪಾ ಹೆಸರಿನಲ್ಲಿ ಲಕ್ನೋ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿದ್ದ ಆರೋಪಿ ಸಿಕ್ಕಿಬಿದ್ಳು

    ಐಪಿಎಸ್ ರೂಪಾ ಹೆಸರಿನಲ್ಲಿ ಲಕ್ನೋ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿದ್ದ ಆರೋಪಿ ಸಿಕ್ಕಿಬಿದ್ಳು

    ಬೆಂಗಳೂರು: ಐಪಿಎಸ್ ಹಿರಿಯ ಅಧಿಕಾರಿ ರೂಪಾ ಅವರ ಹೆಸರಲ್ಲಿ ಕರೆ ಮಾಡಿ ರೂಮ್ ಬುಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.

    ಆಶಾ ಪ್ರಕಾಶ್ ಬಂಧಿತ ಮಹಿಳೆ. ಈಕೆ ಹಿರಿಯ ಪೊಲೀಸ್ ಅಧಿಕಾರಿ ರೂಪಾ ಅವರು ಹೆಸರಲ್ಲಿ ಹೋಟೆಲ್‍ ಬುಕ್ ಮಾಡಿದ್ದಳು. ನಾನು ರೂಪಾ ಕೆಲಸದ ನಿಮಿತ್ತ ಜನವರಿಯಲ್ಲಿ ಉತ್ತರ ಪ್ರದೇಶದ ಲಕ್ನೋಗೆ ಬರುತ್ತಿರುವುದಾಗಿ ಲಕ್ನೋ ಎಸ್‍ಪಿಗೆ ಕರೆ ಮಾಡಿ ಮೂರು ದಿನಕ್ಕೆ ರೂಮ್ ಬುಕ್ ಮಾಡಿಸಿದ್ದಳು. ಮೂರು ದಿನ ಆದರೂ ರೂಪಾ ಬಾರದೇ ಇದ್ದಾಗ ಎಸ್‍ಪಿ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಲಕ್ನೋ ಎಸ್‍ಪಿ ರೂಪಾಗೆ ಕರೆ ಮಾಡಿ ಕೇಳಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಐಪಿಎಸ್ ಅಧಿಕಾರಿ ಡಿ. ರೂಪಾ ಹೆಸರಿನಲ್ಲಿ ಲಕ್ನೋ ಹೋಟೆಲ್ ನಲ್ಲಿ ರೂಂ ಬುಕ್!

    ಕಾಲ್ ಮಾಡಿದ್ದು ಯಾಕೆ?
    ಪತಿ ಇಲ್ಲ ಆಶಾ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಹೀಗಾಗಿ ಈಕೆಗೆ ಅನೇಕ ದೊಡ್ಡ ದೊಡ್ಡ ರಾಜಕಾರಿಣಿಗಳ, ಅಧಿಕಾರಿಗಳ ಲಿಂಕ್ ಇತ್ತು. ರೂಪಾ ಅವರು ಕೂಡ ಕರ್ನಾಟಕದಲ್ಲಿ ದೊಡ್ಡ ಅಧಿಕಾರಿಯಾಗಿದ್ದಾರೆ. ಹೀಗಾಗಿ ಇವರ ಹೆಸರು ಬಳಿಸಿಕೊಂಡರೆ ತಾನು ಸಿಕ್ಕಿಹಾಕಿಕೊಳ್ಳಲ್ಲ ಎಂದು ಪ್ಲಾನ್ ಮಾಡಿ ಅವರ ಹೆಸರನ್ನು ಬಳಸಿಕೊಂಡು ರೂಮ್ ಬುಕ್ ಮಾಡಿದ್ದಳು. ಲಕ್ನೋ ಪೊಲೀಸರು ಈ ಕುರಿತು ವಿಚಾರಣೆ ಮಾಡುವ ವೇಳೆ ಈಕೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಬಂದಿದೆ.

    ಏನಿದು ಪ್ರಕರಣ?
    ಮಹಿಳೆಯೊಬ್ಬರು ರೂಪಾ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಉತ್ತರ ಪ್ರದೇಶದ ಲಕ್ನೋ ಪೊಲೀಸರಿಗೆ ಕರೆ ಮಾಡಿದ್ದಳು. ನಾನು ಗೃಹ ರಕ್ಷಕ ದಳದ ಐಜಿಪಿ ಡಿ.ರೂಪಾ ಮಾತನಾಡುತ್ತಿದ್ದೇನೆ. ಕೆಲಸದ ನಿಮಿತ್ತ ಲಕ್ನೋಗೆ ಬರುತ್ತಿದ್ದೇನೆ. ಡಿಸೆಂಬರ್ 29 ರಿಂದ ಜನವರಿ 3ರವರೆಗೆ ಒಳ್ಳೆಯ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿ ಎಂದು ಹೇಳಿದ್ದಳು. ಅವರ ಮಾತನ್ನು ನಂಬಿದ್ದ ಅಧಿಕಾರಿ, ರೂಂ ಕೂಡ ಬುಕ್ ಮಾಡಿದ್ದರು. ಈ ಬಗ್ಗೆ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ರೂಪಾಗೆ ಕರೆ ಮಾಡಿ ವಿಚಾರಿಸಿದಾಗ ಈ ಕೃತ್ಯ ಬಯಲಾಗಿತ್ತು.

    ಯಾರೋ ನಿಮ್ಮ ಹೆಸರು ಹೇಳಿಕೊಂಡು ಈ ನಂಬರ್ ನಿಂದ ಕರೆ ಮಾಡಿದ್ದರು ಎಂದು ತ್ರಿಪಾಠಿ ಅವರು ರೂಪಾ ಅವರಿಗೆ ಕರೆ ಬಂದಿದ್ದ ನಂಬರ್ ನೀಡಿದ್ದರು. ರೂಪಾ ಅವರು ಆ ನಂಬರ್ ಗೆ ಕರೆ ಮಾಡಿದಾಗ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಪೊಲೀಸರಿಗೆ ದೂರು ನೀಡಿದ್ದರು.

    ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡ ಮಹಿಳೆಯನ್ನು ಪತ್ತೆ ಮಾಡುವಂತೆ ಬನಶಂಕರಿ ಪೊಲೀಸ್ ಠಾಣೆಗೆ ರೂಪಾ ಅವರು ದೂರು ಕೊಟ್ಟಿದ್ದರು. ಈ ಕುರಿತು ಪೊಲೀಸರು ವಂಚನೆ ಹಾಗೂ ಅಪರಾಧ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಐಪಿಸಿ 417, 420(ವಂಚನೆ) 511 (ಅಪರಾಧ ಕೃತ್ಯ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಈಗ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಆಶಾ ಪ್ರಕಾಶ್ ನನ್ನು ಬಂಧಿಸಿದ್ದಾರೆ. ಐಪಿಎಸ್‍ಅಧಿಕಾರಿ ರೂಪಾ ಅವರು ಈಗ ರೈಲ್ವೇ ಪೊಲೀಸ್ ವಿಭಾಗದ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

    ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿಐಜಿ ಡಿ ರೂಪ ಅವರು ಫ್ಯಾಷನ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಖ್ಯಾತ ಮಹಿಳಾ ಫ್ಯಾಶನ್ ಡಿಸೈನರ್ ಮೀನು ಸರವಣನ್ ಅವರು ಡಿಸೈನ್ ಮಾಡಿದ್ದ ಕಡು ನೀಲಿ ಬಣ್ಣದ ಗೌನ್ ಧರಿಸಿ ಮಾಡೆಲ್ ರೀತಿಯಾಗಿ ಮಿಂಚಿದ್ದಾರೆ. ರೂಪಾ ಅವರ ಮನೆಯಲ್ಲೇ ಈ ಫೋಟೋ ಶೂಟ್ ನಡೆದಿದ್ದು, ಯಾವ ಮಾಡೆಲ್‍ಗೂ ಕಡಿಮೆ ಇಲ್ಲದಂತೆ ಐಪಿಎಸ್ ಅಧಿಕಾರಿ ಮಿಂಚುತ್ತಿದ್ದಾರೆ. ಈ ವೇಳೆ ರೂಪ ಅವರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ರೂಪ ಅವರು 1998 ರಲ್ಲಿ ಮಿಸ್ ಬೆಂಗಳೂರು ಯುನಿವರ್ಸಿಟಿ ಕಿರೀಟ ಮತ್ತು ಮಿಸ್ ದಾವಣಗೆರೆ ಪ್ರಶಸ್ತಿಯನ್ನು ಗೆದ್ದಿದ್ದರು.

    ನಾನು ಪೊಲೀಸ್ ಕೆಲಸ ಬಿಟ್ಟು ಮಾಡೆಲಿಂಗ್ ಗೆ ಹೋಗಿಲ್ಲ. ಈ ಮೂಲಕ ಒಬ್ಬ ಸಬಲೀಕೃತ ಮಹಿಳೆ ಕೂಡ ಫ್ಯಾಷನ್ ಆಗಿ ಇರಬಲ್ಲಳು. ಕೇವಲ ಮಾಡೆಲ್ ಮತ್ತು ಚಿತ್ರ ತಾರೆಯರು ಮಾತ್ರ ಫ್ಯಾಷನ್ ಮಾಡಬಲ್ಲರು, ಸಾಮಾನ್ಯ ಜನರು ಕೂಡ ಫ್ಯಾಷನ್ ಮಾಡಬಲ್ಲರು ಎಂಬ ಸಂದೇಶವನ್ನು ತಿಳಿಸಲು ಈ ರೀತಿ ಮಾಡಿದ್ದೇನೆ. ನನ್ನ ಜೊತೆಗೆ ಮೂರು-ನಾಲ್ಕು ಸಾಮಾನ್ಯ ಮಹಿಳೆಯರು ಫೋಟೋ ಶೂಟ್ ಮಾಡಿಸಿದ್ದಾರೆ ಎಂದು ರೂಪ ಅವರು ಹೇಳಿದ್ದಾರೆ.

    “ನಾನು ಮೊದಲಿಗೆ ನಾಗರಿಕ ಸೇವೆಗಳಲ್ಲಿ ಸೇರಿಕೊಂಡಾಗ, ನಾನು ಕಾಲೇಜಿನಲ್ಲಿ ನನ್ನ ಸಾಧನೆಗಳ ಬಗ್ಗೆ ಯಾರಿಗೂ ಹೇಳಲಿಲ್ಲ. ಯಾಕೆಂದರೆ ಜನರು ನನ್ನನ್ನು ಅಧಿಕಾರಿ ಎಂದು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಮೀನು ಸರವಣನ್ ಅವರು ನನಗೆ ಸುಮಾರು 10 ತಿಂಗಳುಗಳ ಕಾಲ ಸಲಹೆ ನೀಡುತ್ತಿದ್ದರು. ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಅವರ ಒತ್ತಾಯಪೂರ್ವಕವಾಗಿ ನಾನು ಯೋಚಿಸಿ ಫೋಟೋಶೂಟ್ ಮಾಡಿಸಿಕೊಂಡೆ ಎಂದು ಹೇಳಿದ್ದಾರೆ.

    ರೂಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಶಶಿಕಲಾ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ವಾಸ ಮಾಡ್ತಿದ್ದಾರೆ: ನಾಗಲಕ್ಷ್ಮೀಬಾಯಿ

    ಶಶಿಕಲಾ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ವಾಸ ಮಾಡ್ತಿದ್ದಾರೆ: ನಾಗಲಕ್ಷ್ಮೀಬಾಯಿ

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಸಾಮಾನ್ಯ ಕೈದಿಯಂತೆ ವಾಸ ಮಾಡುತ್ತಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಹೇಳಿದ್ದಾರೆ.

    ಇಂದು ಕಾರಾಗೃಹಕ್ಕೆ ಭೇಟಿ ಕೊಟ್ಟ ನಾಗಲಕ್ಮೀಬಾಯಿ ಅವರು ಮಹಿಳಾ ಕೈದಿಗಳ ಯೋಗಕ್ಷೇಮ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಈ ವೇಳೆ ಶಶಿಕಲಾ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗಿದೆಯೇ ಎಂಬ ಪ್ರಶ್ನೆಗೆ, ನನಗೂ ಬಹಳ ಜನ ಶಶಿಕಲಾ ಜೈಲಿನಲ್ಲಿ ವಿಲಾಸಿಮಯ ಜೀವನ ನಡೆಸುತ್ತಿದ್ದಾರೆ ಅಂತಾ ಹೇಳಿದ್ರು. ಆದ್ರೆ ಇಂದು ನಾನೇ ನೋಡಿದ್ದು, ಸಾಮಾನ್ಯ ಕೈದಿಯಂತೆ ಶಶಿಕಲಾ ಇದ್ದಾರೆ. ಅಂತಹ ವಿಲಾಸಿಮಯ ಸೌಲಭ್ಯಗಳನ್ನು ಅವರಿಗೆ ಒದಗಿಸಿಲ್ಲ. ಶಶಿಕಲಾ ಜೊತೆ ಮತ್ತೊಬ್ಬ ಮಹಿಳಾ ಕೈದಿ ಇದ್ದಾರೆ ಅಂತಾ ಉತ್ತರಿಸಿದ್ರು.

    ಮಹಿಳಾ ಕೈದಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಜೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸ್ಪತ್ರೆ ಇದ್ದು ವೈದ್ಯರ ಕೊರತೆ ಇದೆ. 60 ವರ್ಷಕ್ಕೂ ಮೇಲ್ಪಟ್ಟ ಕೆಲವು ಮಹಿಳಾ ಕೈದಿಗಳು ಸಹ ಇದ್ದಾರೆ. ಅವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

  • ಐಪಿಎಸ್ ರೂಪಾ ಬಿಜೆಪಿಯಂತೆ! – ಟೀಕಿಸಿದವರಿಗೆ ಐಜಿಪಿಯಿಂದ ಕ್ಲಾಸ್

    ಐಪಿಎಸ್ ರೂಪಾ ಬಿಜೆಪಿಯಂತೆ! – ಟೀಕಿಸಿದವರಿಗೆ ಐಜಿಪಿಯಿಂದ ಕ್ಲಾಸ್

    ಬೆಂಗಳೂರು: ಐಪಿಎಸ್ ಅಧಿಕಾರಿ ಪ್ರಸ್ತುತ ಹೋಮ್‌ಗಾರ್ಡ್ಸ್‌ ಮತ್ತು ನಾಗರಿಕ ರಕ್ಷಣೆ ವಿಭಾಗದ ಐಜಿಪಿಯಾಗಿರುವ ರೂಪ ಬಿಜೆಪಿಯಂತೆ. ಹೀಗೊಂದು ಪರ, ವಿರೋಧ ಚರ್ಚೆ ಈಗ ಆರಂಭಗೊಂಡಿದೆ.

    ನಗರದಲ್ಲಿ ನಡೆದ ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಐಪಿಎಸ್ ಅಧಿಕಾರಿ ರೂಪ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಜೊತೆ ಸೆಲ್ಫಿ ಕ್ಲಿಕ್ಕಿಸಿತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು.

    ಸುಬ್ರಮಣಿಯನ್ ಸ್ವಾಮಿ ಅಂತಹವರು ಕೊಟ್ಟ ದೂರಿನಿಂದಾಗಿನೇ ಜೈಲಿನಲ್ಲಿ ವೈಭೋಗ ಅನುಭವಿಸುತ್ತಿದ್ದ ಮಹಿಳೆ ವಿಚಾರವನ್ನು ನಾನು ಬಯಲಿಗೆ ಎಳೆಯಲು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದರು. ಇನ್ನೊಂದು ಟ್ವೀಟ್ ನಲ್ಲಿ ನೀವು ನಮಗೆಲ್ಲಾ ಸ್ಪೂರ್ತಿ ಎಂದು ಬರೆದುಕೊಂಡಿದ್ದರು.

    ಇದರಿಂದ ಕೆರಳಿರುವ ಕೆಲ ಟ್ವಿಟಿಗರು ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿಗಳು ಅಧಿಕಾರಕ್ಕೆ ಬರುವ ಬೇರೆ ಬೇರೆ ಪಕ್ಷಗಳೊಡನೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ರೀತಿ ಒಂದು ಪಕ್ಷದವರ ಪರ ಮಾತನಾಡುವುದು ಒಳ್ಳೆಯದಲ್ಲ. ಬಿಜೆಪಿ ನಿಮ್ಮನ್ನ ಗೌರವಿಸಿದರೆಂದು ಅವರ ಪರ ನೀವು ಮಾತನಾಡುತ್ತಿದ್ದೀರ ಎಂದು ಟೀಕಿಸಿ ಟ್ವೀಟ್ ಮಾಡಿದ್ದರು.

    ಈ ಫೋಟೋ ನಿಮ್ಮ ಕ್ಯಾಮೆರಾ ಇಂದ ತೆಗೆದ ಫೋಟೋ ಅಲ್ಲ. ನಿಮ್ಮ ಮೊಬೈಲ್ ಇಂದ ತೆಗೆದ ಫೋಟೋ ಎಲ್ಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶ ದಿಂದ ಶಶಿಕಲಾ ಜೈಲಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

    ತನ್ನ ವಿರುದ್ಧ ಬಂದ ಟ್ವೀಟ್ ಗಳಿಗೆ ಜೈಲಿನ ಅಕ್ರಮಗಳನ್ನು ನಾನು ಬಯಲಿಗೆ ಎಳೆದಿದ್ದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಪ್ರಕಾರ ಒಂದು ವರ್ಷದ ಒಳಗಡೆ ಅಧಿಕಾರಿಯನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ರಾಜಕೀಯ ಪ್ರೇರಿತವಾಗಿ ಟ್ವೀಟ್ ಮಾಡಿದ ವ್ಯಕ್ತಿಗಳನ್ನು ಅವರು ಬ್ಲಾಕ್ ಮಾಡಿದ್ದರು. ಪರ, ವಿರೋಧ ಚರ್ಚೆಯಾದ ಕಾರಣ ರೂಪ ಅವರ ಹೆಸರು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿತ್ತು.

    ಈ ಟ್ವೀಟ್ ಗೆ, ರೂಪ ಅವರು ಕರ್ತವ್ಯದಲ್ಲಿ ಧೈರ್ಯ ತೋರಿದ್ದಾರೆ ಎಂದು ಬರೆದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ ಹೊಗಳಿದ್ದಾರೆ.

     

     

     

     

  • ಐಪಿಎಸ್ ಅಧಿಕಾರಿ ರೂಪಾ ಬಗ್ಗೆ ಸಿನಿಮಾ ಮಾಡಲು ಮುಂದಾದ ನಿರ್ದೇಶಕ ರಮೇಶ್

    ಐಪಿಎಸ್ ಅಧಿಕಾರಿ ರೂಪಾ ಬಗ್ಗೆ ಸಿನಿಮಾ ಮಾಡಲು ಮುಂದಾದ ನಿರ್ದೇಶಕ ರಮೇಶ್

    ಬೆಂಗಳೂರು: ಅಟ್ಟಹಾಸ, ಸೈನೈಡ್ ಹೀಗೆ ನೈಜಕಥೆಗಳ ಆಧಾರಿತ ಸಿನಿಮಾ ಮಾಡಿರುವ ನಿರ್ದೇಶಕ ಎಎಂಆರ್ ರಮೇಶ್ ಇದೀಗ ಡಿ. ರೂಪ ಅವರ ಜೀವನಾಧರಿತ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದಾರೆ.

    ಇತ್ತಿಚೆಗಷ್ಟೇ ಐಪಿಎಸ್ ಅಧಿಕಾರಿ ಡಿ. ರೂಪಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಲಲಿತಾ ಆಪ್ತೆ ಶಶಿಕಲಾಗೆ ಸಿಗ್ತಿದ್ದ ಐಷಾರಾಮಿ ಸೌಲಭ್ಯಗಳು ಸೇರಿದಂತೆ ಹಲವು ಭ್ರಷ್ಟಾಚಾರವನ್ನು ಬಯಲು ಮಾಡಿದ್ರು. ನಂತರ ರೂಪಾ ವರ್ಗಾವಣೆಯಾದ್ರು. ರೂಪಾ ಈಗ ದೇಶಾದ್ಯಂತ ಸುದ್ದಿಯಾಗಿ ಒಂದು ರೀತಿ ಸೆಲೆಬ್ರಿಟಿ ಆಗಿದ್ದಾರೆ. ಹೀಗಾಗಿ ರೂಪಾ ಜೀವನ ಕಥೆ ಆಧಾರಿತ ಸಿನಿಮಾಕ್ಕೆ ಎಎಂಆರ್ ರಮೇಶ್ ರೆಡಿಯಾಗಿದ್ದು, ರೂಪ ಅವರ ಗ್ರೀನ್ ಸಿಗ್ನಲ್‍ಗಾಗಿ ಕಾಯುತ್ತಿದ್ದಾರೆ. ರೂಪ ಪಾತ್ರಕ್ಕೆ ಇನ್ನಷ್ಟೇ ನಾಯಕಿ ಆಯ್ಕೆ ಆಗಬೇಕಿದೆ.

    ಈ ಸಿನಿಮಾ ಸಂಬಂಧ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಜೊತೆ ಈಗಾಗಲೇ ಚರ್ಚಿಸಿದ್ದು, ಜುಲೈ 29ರಂದು ಮತ್ತೊಮ್ಮೆ ಈ ಬಗ್ಗೆ ಚರ್ಚಿಸಲಿದ್ದೇನೆ. ಅಲ್ಲದೇ ಸಿನಿಮಾದ ಟೈಟಲ್ ನಲ್ಲಿ ರೂಪಾ ಅವರ ಹೆಸರು ಇರುವುದರಿಂದ ಅವರನ್ನು ಕೂಡ ಮಾತನಾಡಿಸಲಿದ್ದೇನೆ ಅಂತ ರಮೇಶ್ ಹೇಳಿದ್ದಾರೆ.

    ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ನಿರ್ದೇಶಿಸಲು ಚಿಂತಿಸಿರುವುದಾಗಿ ಅವರು ಹೇಳಿದ್ದಾರೆ.

  • ಶಶಿಕಲಾಗೆ ಸೆಂಟ್ರಲ್ ಜೈಲಲ್ಲಿ ಹೈಫೈ ಸೌಲಭ್ಯ: ರೂಪಾ ಆರೋಪಕ್ಕೆ ಇಲ್ಲಿದೆ ದೃಶ್ಯ `ರೂಪ’ಕ

    ಶಶಿಕಲಾಗೆ ಸೆಂಟ್ರಲ್ ಜೈಲಲ್ಲಿ ಹೈಫೈ ಸೌಲಭ್ಯ: ರೂಪಾ ಆರೋಪಕ್ಕೆ ಇಲ್ಲಿದೆ ದೃಶ್ಯ `ರೂಪ’ಕ

    ಬೆಂಗಳೂರು: ಛಾಪಾಕಾಗದ ಹಗರಣದ ರೂವಾರಿ ತೆಲಗಿಯ ಹೈ-ಫೈ ಲೈಫ್ ಬಗ್ಗೆ ನಿಮ್ಮ ಪಬ್ಲಿಕ್ ಟಿವಿಯ ವರದಿ ರಾಷ್ಟ್ರಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈಗ ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಯಾಗಿರುವ ಶಶಿಕಲಾಗೆ ಫೈವ್ ಸ್ಟಾರ್ ಹೊಟೇಲ್‍ನಂಥ ಫೆಸಿಲಿಟಿ ಕೊಟ್ಟಿರೋದು ಸೋಮವಾರ ಜಗಜ್ಜಾಹೀರಾಗಿದೆ.

    ಹೌದು. ಚಿನ್ನಮ್ಮ ಶಶಿಕಲಾಗೆ ಜೈಲಿನಲ್ಲಿ ಅಧಿಕಾರಿಗಳು 5 ಬಿಹೆಚ್‍ಕೆ ಪ್ಯಾಸೇಜ್ ನೀಡಿದ್ದರು. 5 ಬಿಹೆಚ್‍ಕೆ ಪ್ಯಾಸೇಜ್‍ಗಾಗಿಯೇ ಶಶಿಕಲಾ 2 ಕೋಟಿ ರೂ. ನೀಡಿದ್ದರು. 2 ಕೋಟಿ ಲಂಚದ ಜೊತೆಗೆ ವಾರಕ್ಕೆ ಎರಡೂವರೆ ಲಕ್ಷ ರೂ. ಹಣವನ್ನು ನೀಡಲಾಗುತಿತ್ತು ಎನ್ನುವ ಹೊಸ ಆರೋಪವೂ ಈಗ ಕೇಳಿಬಂದಿದೆ.

    ವಿಶೇಷ ಸೌಲಭ್ಯ ಏನಿದೆ?
    ಪೂಜೆಗೆ ಮಾಡಲೆಂದೇ ತುಳಸಿ ಗಿಡ ಇರುವ ವಿಶೇಷ ರೂಮ್, ಗಣ್ಯರು-ಅತಿಥಿಗಳ ಜೊತೆ ಮಾತನಾಡಲು ಸ್ಪೆಷಲ್ ರೂಮ್. ಮಲಗಲು ವಿಶೇಷ ಕೊಠಡಿ, ಬಟ್ಟೆಗಳನ್ನು ಇಡಲು ಪ್ರತ್ಯೇಕ ವಾರ್ಡ್‍ ರೋಬ್, 51 ಇಂಚಿನ ದೊಡ್ಡ ಟಿವಿ ಸೌಲಭ್ಯ ನೀಡಲಾಗಿತ್ತು.

    ಶಶಿಕಲಾ ಚಲನವಲನ ಬೇರೆಯವರಿಗೆ ಗೊತ್ತಾಗದಂತೆ ಕೊಠಡಿ ಸುತ್ತ ಪರದೆಯನ್ನು ಹಾಕಲಾಗಿತ್ತು. ಎರಡೆಲೆ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಟಿಟಿವಿ ದಿನಕರನ್ ನೇರವಾಗಿ ಈ ರೂಮ್‍ಗೆ ಬಂದು ಚರ್ಚೆ ಮಾಡುತ್ತಿದ್ದರು. ಚಿನ್ನಮ್ಮ ಸೇವೆಗಾಗಿ ತಮಿಳು ಬಲ್ಲ ಮೇರಿ-ರೇಖಾ ಜೊತೆ ಮತ್ತಿಬ್ಬರು ಕೈದಿಗಳ ನಿಯೋಜನೆ ಮಾಡಲಾಗಿತ್ತು ಎನ್ನುವ ಸ್ಪೋಟಕ ಮಾಹಿತಿ ಈಗ ಲಭ್ಯವಾಗಿದೆ.

    ಇದನ್ನೂ ಓದಿ:ಡಿಐಜಿ ರೂಪಾ ವರ್ಗಾವಣೆ ಮಾಡಿದ್ದು ಯಾಕೆ: ಸಿಎಂ ಸಮರ್ಥನೆ ನೀಡಿದ್ದು ಹೀಗೆ

    ತೆಲಗಿಗೆ ನೀಡಿದ ವಿಶೇಷ ಸೌಲಭ್ಯಗಳ ಫೋಟೋಗಳು ಇಲ್ಲಿವೆ

     

    https://youtu.be/VUvHqCfFg0E

  • ಡಿಐಜಿ ರೂಪಾ ವರ್ಗಾವಣೆ ಮಾಡಿದ್ದು ಯಾಕೆ: ಸಿಎಂ ಸಮರ್ಥನೆ ನೀಡಿದ್ದು ಹೀಗೆ

    ಡಿಐಜಿ ರೂಪಾ ವರ್ಗಾವಣೆ ಮಾಡಿದ್ದು ಯಾಕೆ: ಸಿಎಂ ಸಮರ್ಥನೆ ನೀಡಿದ್ದು ಹೀಗೆ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಡಿಐಜಿ ರೂಪಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.

    ಇದೀಗ ಅಧಿಕಾರಿಗಳ ವರ್ಗಾವಣೆಯನ್ನು ಸಮರ್ಥಿಸಿಕೊಂಡಿರುವ ಸಿಎಂ, ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಸಹಿಸಲು ಸಾಧ್ಯವಿಲ್ಲ. ವರ್ಗಾವಣೆ ಮಾಡಿ ಪರಿಸ್ಥಿತಿ ಕಂಟ್ರೋಲ್ ಮಾಡಿದ್ದೇನೆ ಎಂದು ತಮ್ಮ ಆಪ್ತರ ಶಾಸಕರ ಜೊತೆ ಹೇಳಿಕೊಂಡಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇದನ್ನೂ ಓದಿ: ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

    ಶಾಸಕರು ಕಾರಾಗೃಹ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದಾಗ, ಅದೇನೇ ಇದ್ರೂ ನಮ್ಮ ಬಳಿಗೆ ಬಂದು ಹೇಳಬಹುದಿತ್ತು. ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು ಸರಿಯಿಲ್ಲ. ಅಧಿಕಾರಿಗಳು ಆದವರು ಇದನ್ನೇ ಮಾಡುತ್ತಿದ್ದರೆ ಹೇಗೆ? ಹೀಗಾಗಿ ಈ ಮೂಲಕ ಅಧಿಕಾರಿ ವರ್ಗಕ್ಕೆ ಒಂದು ಸಂದೇಶ ಕೊಟ್ಟಿದ್ದೇನೆ ಎಂದು ಸಿಎಂ ತನ್ನ ಆಪ್ತ ಶಾಸಕರ ಬಳಿ ಹೇಳಿಕೊಂಡಿರುವ ವಿಚಾರ ಈಗ ಸಿಕ್ಕಿದೆ.

    ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಕಾರಾಗೃಹ ಇಲಾಖೆಯ ಡಿಐಜಿ ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ಸರ್ಕಾರ ವರ್ಗಾವಣೆ ಮಾಡಲಾಗಿದೆ.

  • ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ: ಸಿಟಿ ರವಿ

    ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ: ಸಿಟಿ ರವಿ

    ಬೆಂಗಳೂರು: ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ ಎಂದು ಬಿಜೆಪಿ ಶಾಸಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

    ಡಿಐಜಿ ರೂಪಾ ಅವರನ್ನು ವರ್ಗಾವಣೆಗೊಳಿಸಿದ ಸಂಬಂಧವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಸತ್ಯದ ಮೇಲೆ ಸಮಾಧಿ ಕಟ್ಟುವ ಕೆಲಸ ಮಾಡುತ್ತಿದೆ. ಈ ಹಿಂದೆ ಗಂಭೀರ ಆರೋಪ ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಟ್ಟು ಎಡವಟ್ಟು ಮಾಡಿದ್ದಾರೆ. ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಸರ್ಕಾರದಿಂದ ಆಗುತ್ತಿದೆ ಎಂದು ಅವರು ಕಿಡಿಕಾರಿದರು.

    ಸೆರೆಮನೆ ಅರಮನೆಯಾಗಿದ್ದು, ಶಿಕ್ಷೆಯಾದವರಿಗೆ ಹೇಗೆಲ್ಲ ಸೌಲಭ್ಯ ಸಿಗಲಿದೆ ಎನ್ನುವುದನ್ನು ಸ್ಪಷ್ಟವಾಗಿ ವರದಿ ರವಾನಿಸಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿಷ್ಪಕ್ಷಪಾತವಾಗಿ ತನಿಖೆ ನಡಸಬೇಕಿತ್ತು ಎಂದು ಅವರು ಹೇಳಿದರು.

    ಈ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಕಾರಾಗೃಹ ಇಲಾಖೆಯ ಡಿಐಜಿ ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.