Tag: roopa

  • ರೋಹಿಣಿ ವಿರುದ್ಧ ನಿಲ್ಲದ ಸಮರ – ಮತ್ತೆ ಪೋಸ್ಟ್‌ ಹಂಚಿಕೊಂಡ ರೂಪಾ

    ರೋಹಿಣಿ ವಿರುದ್ಧ ನಿಲ್ಲದ ಸಮರ – ಮತ್ತೆ ಪೋಸ್ಟ್‌ ಹಂಚಿಕೊಂಡ ರೂಪಾ

    ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಮಾತನಾಡಬಾರದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈಯಕ್ತಿಕ ಮಾನಹಾನಿ ಮಾಡಬಾರದು ಎಂದು ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ರೂಪಾ (IPS Roopa) ಮತ್ತೆ ಪೋಸ್ಟ್‌ ಹಾಕುವುದನ್ನು ಮುಂದುವರಿಸಿದ್ದಾರೆ.

    ರೋಹಿಣಿ ಸಿಂಧೂರಿ ವಿರುದ್ದ ಸರ್ಕಾರದ ಕೆಲವು ಕ್ರಮಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.  ಈ ಮಾಧ್ಯಮ ವರದಿಯ ಕೆಲವು ಪೋಸ್ಟ್‌ಗಳನ್ನು ತಮ್ಮ ಫೇಸ್ ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

    ರೋಹಿಣಿ ಸಿಂಧೂರಿ ಅವರು ಡಿ. ರೂಪಾ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮಂಗಳವಾರ ಪತಿ ಸುಧೀರ್ ರೆಡ್ಡಿ (Sudhir Reddy) ಜೊತೆ ಖುದ್ದು 24ನೇ ಎಸಿಎಂಎಂ ಕೋರ್ಟ್‌ಗೆ (ACMM Court) ಹಾಜರಾಗಿದ್ದ ರೋಹಿಣಿ ಸಿಂಧೂರಿ, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು.

    ತಡೆಯಾಜ್ಞೆ ಇದ್ದರೂ, ರೂಪಾ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಾತನಾಡಿದರೆ ಪರವಾಗಿಲ್ಲ, ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

    ರೋಹಿಣಿ ಹೇಳಿಕೆ ಆಧರಿಸಿ ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೋರ್ಟ್ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿದೆ.

  • ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ

    ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ

    ಬೆಂಗಳೂರು: ಕಳೆದ 5 ದಿನದಿಂದ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ರೂಪಾ (D. Roopa) ಮಧ್ಯೆ ನಡೆಯುತ್ತಾ ಇದ್ದ ದೊಡ್ಡ ಪ್ರಹಸನಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.

    ಸಾಮಾಜಿಕ ಜಾಲತಾಣ (Social Media) ದಲ್ಲಿ ಬಡಿದಾಡಿಕೊಳ್ತಾ ಇದ್ದ ರೋಹಿಣಿ-ರೂಪಾ ಇಬ್ಬರೂ ಪರಸ್ಪರ ಮಾತನಾಡದಂತೆ ತಡೆಯಾಜ್ಞೆ ನೀಡಿದೆ. ರೋಹಿಣಿ ವಿರುದ್ಧ ರೂಪಾ ಮಾತನಾಡದಂತೆ ನಿರ್ಬಂಧ ಹೇರಿ ಕೋರ್ಟ್ ಆದೇಶ ನೀಡಿದೆ. ಶನಿವಾರ ರಾತ್ರಿ ಪ್ರಾರಂಭವಾಗಿದ್ದ ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಿನ ಕಾದಾಟಕ್ಕೆ ಕೊನೆಗೆ ಬ್ರೇಕ್ ಬಿದ್ದಂತೆ ಆಗಿದೆ.

    ಹೌದು, ರೂಪಾ ತನ್ನ ಫೇಸ್ ಬುಕ್ (Facebook) ಅಕೌಂಟ್ ಅಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗಲಾಟೆ ಶುರುಮಾಡಿಕೊಂಡಿದ್ರು. ಈ ಪ್ರಕರಣ ಆರೋಪ ಪ್ರತ್ಯಾರೋಪದೊಂದಿಗೆ ಬರೋಬ್ಬರಿ 5 ದಿನಗಳ ಕಾಲ ಕಾದಾಟವೇ ನಡೆದುಹೋಗಿತ್ತು. ಇದನ್ನೆಲ್ಲಾ ನೋಡಿದ ಸರ್ಕಾರ ಇಬ್ಬರನ್ನು ವರ್ಗಾವಣೆ ಮಾಡಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

    ಇಬ್ಬರು ಎಂದಿನಂತೆ ಬಡಿದಾಟ ಮುಂದುವರಿಸಿ ಕೊನೆಗೆ ರೂಪಾ ವಿರುದ್ಧ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ರು. ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದಿದ್ರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ (Court) ಕೊನೆಗೂ ರೂಪಾಗೆ ಬ್ರೇಕ್ ಹಾಕಿದ್ದು ಬಹಿರಂಗವಾಗಿ ಎಲ್ಲೂ ಮಾತನಾಡದಂತೆ ತಡೆಯಾಜ್ಞೆಯನ್ನು ನೀಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

    ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

    ಬೆಂಗಳೂರು: ರೂಪಾ, ರೋಹಿಣಿ ಜಟಾಪಟಿ ನಿಂತು ನಿಲ್ಲದಂತೆ ಮುಂದುವರಿಯುತ್ತಲೇ ಇದೆ. ಅಸ್ತ್ರ – ಪ್ರತ್ಯಾಸ್ತ್ರದ ಯುದ್ಧಕ್ಕೆ ಕಾನೂನಿನ ಕಲೆ ಬಂದಿದೆ. ಕಾನೂನು ಹೋರಾಟ ಮಾಡಲು ಸಿದ್ಧವಾಗಿರುವ ರೋಹಿಣಿ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾರೆ.

    ರೋಹಿಣಿ ಸಿಂಧೂರಿ (Rohini Sindhuri), ರೂಪಾ (D Roopa) ಕಥೆ ಶುರುವಾದಾಗಿನಿಂದ ದಿನಕ್ಕೊಂದು ಸ್ಫೋಟಕ ಟ್ವಿಸ್ಟ್ ಸಿಗುತ್ತಲೆ ಇದೆ. ಒಬ್ಬರ ಮೇಲೋಬ್ಬರು ಯುದ್ಧ ಸಾರುತ್ತಲೇ ಇದ್ದಾರೆ. ಈಗ ಅದಕ್ಕೆ ಕಾನೂನಿನ ಬಣ್ಣ ಬಂದಿದೆ. ರೂಪಾ ಐಪಿಎಸ್ ಅಧಿಕಾರಿ ಆಗಿದ್ರೂ ಮಹಿಳೆಯ ಗೌರವಕ್ಕೆ ಧಕ್ಕೆಯಾಗುವಂತೆ ವೈಯಕ್ತಿಕ ಫೋಟೋಗಳನ್ನು ಫೇಸ್‍ಬುಕ್ ಅಲ್ಲಿ ಹಾಕಿದ್ದಾರೆ. ಅವರ ವಿರುದ್ಧ ನಿರ್ಬಂಧಾಜ್ಞೆಯನ್ನು ಹೇರಬೇಕು ಎಂದು ರೋಹಿಣಿ ಸಿಂಧೂರಿ ಕೋರ್ಟ್ (Court) ಮೆಟ್ಟಿಲೇರಿದ್ದಾರೆ.

    ರೂಪಾ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಸೈಬರ್ ಸೆಲ್‍ನ ಮುಖ್ಯಸ್ಥರು ಆಗಿದ್ದರು. ಆ ಸಂದರ್ಭದಲ್ಲಿ ರೋಹಿಣಿಯವರ ಫೋಟೋ ಕಳವು ಮಾಡಿರಬಹುದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಪರ ವಕೀಲರು ವಾದ ಮಂಡಿಸಿದ್ದಾರೆ.

    ರೂಪಾ ವಿರುದ್ಧ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೂಡ ದೂರು ನೀಡಿದ್ದರೂ, ಚೌಕಟ್ಟು ಮೀರಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ವಾದವನ್ನು ಆಲಿಸಿದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ ಭದ್ರಕೋಟೆ ಸಂಡೂರಿಗೆ ಬರುತ್ತಿದ್ದಾರೆ ಅಮಿತ್‌ ಶಾ : ಬಿಜೆಪಿ ಪ್ಲ್ಯಾನ್‌ ಏನು?

    ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೂಪಾಗೆ ಹಿರಿಯ ವಕೀಲರ ಮೂಲಕ ನೋಟಿಸ್ ನೀಡಲಾಗಿದೆ. 24 ಗಂಟೆಯ ಒಳಗಡೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು. ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಮಾಡಿರುವ ಮಾನಹಾನಿ ಆರೋಪಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಕೋರ್ಟ್‍ನಲ್ಲಿ 1 ಕೋಟಿ ರೂ. ಮಾನನಷ್ಟ ಕೇಸ್ ಹೂಡುವುದಾಗಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಆಸ್ತಿ ಆರೋಪ- IAS ಅಧಿಕಾರಿ ಆಸ್ತಿಯ Exclusive  ಡೀಟೆಲ್ಸ್ ಇಲ್ಲಿದೆ

    ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಆಸ್ತಿ ಆರೋಪ- IAS ಅಧಿಕಾರಿ ಆಸ್ತಿಯ Exclusive ಡೀಟೆಲ್ಸ್ ಇಲ್ಲಿದೆ

    ಬೆಂಗಳೂರು: ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಐಪಿಎಸ್ (IPS) ಅಧಿಕಾರಿ ರೂಪಾ (Roopa) ಕಿತ್ತಾಟದ ಇನ್ನಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ರೋಹಿಣಿ ಸಿಂಧೂರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ತಾವು ಮಾಡಿರೋ ಆಸ್ತಿಯನ್ನು ಮುಚ್ಚಿಡೋ ಪ್ರಯತ್ನ ಮಾಡ್ತಾ ಇದ್ದಾರೆ ಅಂತ ರೂಪಾ ಆರೋಪ ಮಾಡಿದ್ರು.

    ಅಲ್ಲದೇ ಜಾಲಹಳ್ಳಿ ಮನೆಯ ಬಗ್ಗೆ ಪ್ರಶ್ನೆ ಮಾಡಿರೋ ರೂಪಾ, ಅಕ್ರಮವಾಗಿ ಫರ್ನಿಚರ್ ಗಳನ್ನು ತರಿಸ್ತಾ ಇದ್ದಾರೆ. ಐಎಎಸ್ ಅಧಿಕಾರಿಯ ಲಾಭ ಪಡೆಯುತ್ತಾ ಇದ್ದಾರೆ ಅಂತ ಆರೋಪಿಸಿದ್ರು. ಇದಕ್ಕೆ ಉತ್ತರ ನೀಡಿರೋ ರೋಹಿಣಿ ನನ್ನ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದೇನೆ ಅಂದಿದ್ದಾರೆ.

    ಇದರ ಬೆನ್ನಲ್ಲೇ, ಪಬ್ಲಿಕ್ ಟಿವಿ ರೋಹಿಣಿ ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕಿದೆ. ಇದರ ಪ್ರಕಾರ, ರೋಹಿಣಿ ಘೋಷಿಸಿಕೊಂಡಿರೋ ಪ್ರಕಾರ, ಅವರ ಆಸ್ತಿಯೆಲ್ಲಾ ಪಿತ್ರಾರ್ಜಿತವಾಗಿದೆ (Property Details). ಇದನ್ನೂ ಓದಿ: ರೋಹಿಣಿ, ರೂಪಾರನ್ನು ಅಮಾನತು ಮಾಡಿ ತನಿಖೆ ನಡೆಸಿ: ಹೆಚ್.ವಿಶ್ವನಾಥ್ ಆಗ್ರಹ

    ಎಲ್ಲೆಲ್ಲಿ ರೋಹಿಣಿ ಸಿಂಧೂರಿ ಆಸ್ತಿ ಇದೆ..?
    * ಕಲ್ಲೂರು, ತೆಲಂಗಾಣ (Telangana):
    > ಆಸ್ತಿ ಮೌಲ್ಯ: 1 ಕೋಟಿ
    > ವಿಸ್ತೀರ್ಣ: 1122 ಚದರ ಅಡಿ
    > ಪೆಟ್ರೋಲ್ ಬಂಕ್ ಲೀಸ್
    > ವಾರ್ಷಿಕ ಆದಾಯ: 2 ಲಕ್ಷ
    > ಯಾರ ಆಸ್ತಿ: ತಾಯಿ ಆಸ್ತಿ
    > ಅವಿಭಜಿತ ಆಸ್ತಿ

    * ರುದ್ರಾಕ್ಷಪಲ್ಲಿ, ಕಮ್ಮಂ ಜಿಲ್ಲೆ
    > ಆಸ್ತಿ ಮೌಲ್ಯ: 2.5 ಕೋಟಿ
    > ಕೃಷಿ ಭೂಮಿ: 55 ಎಕರೆ
    > ವಾರ್ಷಿಕ ಆದಾಯ: 7.00 ಲಕ್ಷ
    > ಯಾರ ಆಸ್ತಿ: ಪಿತ್ರಾರ್ಜಿತ ಆಸ್ತಿ
    > ಅವಿಭಜಿತ ಆಸ್ತಿ (ಪಿರ್ತಾಜಿತ ಆಸ್ತಿ, ಇನ್ನೂ ಪಾಲಾಗಿಲ್ಲ)

    * ಕಮ್ಮಂ ಜಿಲ್ಲೆ, ತೆಲಂಗಾಣ
    > ಆಸ್ತಿ ಮೌಲ್ಯ: 1.5 ಕೋಟಿ
    > ವಿಸ್ತೀರ್ಣ: 2300 ಚದರ ಅಡಿ
    > ವಾರ್ಷಿಕ ಆದಾಯ: 1 ಲಕ್ಷ
    > ಹೋಟೆಲ್‍ವೊಂದಕ್ಕೆ ಲೀಸ್
    > ಯಾರ ಆಸ್ತಿ: ತಾಯಿ ಆಸ್ತಿ
    > ಅವಿಭಜಿತ ಆಸ್ತಿ

    * ಕಮ್ಮಂ ಜಿಲ್ಲೆ, ತೆಲಂಗಾಣ
    > ಆಸ್ತಿ ಮೌಲ್ಯ: 1 ಕೋಟಿ
    > ಜಮೀನು: 1 ಎಕರೆ
    > ಯಾರ ಆಸ್ತಿ: ತಂದೆ ಹೆಸರಿನಲ್ಲಿದೆ
    > ವಾರ್ಷಿಕ ಆದಾಯ; 2 ಲಕ್ಷ

    * ಹೈದ್ರಾಬಾದ್, ನಿವೇಶನ: 3
    > ಆಸ್ತಿ ಮೌಲ್ಯ: 1 ಕೋಟಿ
    > ವಾರ್ಷಿಕ ಆದಾಯ: 2.5 ಲಕ್ಷ
    > ಯಾರ ಆಸ್ತಿ; ತಾಯಿ ಹೆಸರಿನಲ್ಲಿದೆ
    > ಅವಿಭಜಿತ ಆಸ್ತಿ

    * ತಲ್ಲಾಪುರ, ಮೇಧಕ್ ಜಿಲ್ಲೆ
    > ಆಸ್ತಿ ಮೌಲ್ಯ: 40 ಲಕ್ಷ
    > ವಿಸ್ತೀರ್ಣ: 500 ಚದರ ಗಜ
    > ಯಾರ ಆಸ್ತಿ: ತಂದೆ ಹೆಸರಿನಲ್ಲಿದೆ
    > ವಾರ್ಷಿಕ ಆದಾಯ ಇಲ್ಲ
    > ಅವಿಭಜಿತ ಆಸ್ತಿ

    * ಶಂಷಾಬಾದ್, ರಂಗಾರೆಡ್ಡಿ ಜಿಲ್ಲೆ
    > ವಿಸ್ತೀರ್ಣ: 600 ಚದರ ಗಜ
    > ಯಾರ ಆಸ್ತಿ: ತಂದೆ ಹೆಸರಿನಲ್ಲಿದೆ
    > ವಾರ್ಷಿಕ ಆದಾಯ ಇಲ್ಲ
    > ಅವಿಭಜಿತ ಆಸ್ತಿ

    * ಸೀಗೆಹಳ್ಳಿ, ಯಲಹಂಕ, ಬೆಂಗಳೂರು
    > ವಿಸ್ತೀರ್ಣ: 4123 ಚದರಡಿ
    > ಆಸ್ತಿ ಮೌಲ್ಯ: 60 ಲಕ್ಷ
    > ಮಂಜೂರು: ಐಎಎಸ್ ಸಹಕಾರ ಸಂಘ
    > ರೋಹಿಣಿ ಹೆಸರಿಗೆ ರಿಜಿಸ್ಟರ್ ಆಗಿಲ್ಲ

    ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ಸ್ವಯಂ ಘೋಷಣೆ ಮಾಡಿಕೊಂಡಿರೋ ಪ್ರಕಾರ, ಈಗಿರೋ ಆಸ್ತಿಯೆಲ್ಲಾ ಪಿತ್ರಾರ್ಜಿತವಾಗಿದೆ. ಹೀಗಾಗಿ ರೂಪಾ ಮಾಡಿರೋ ಆರೋಪ ಎಷ್ಟು ಸತ್ಯ…? ಎಷ್ಟು ಸುಳ್ಳು ಅನ್ನೋ ಚರ್ಚೆ ಆಗುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಮ್ಮ ಕುಟುಂಬ ಚೆನ್ನಾಗಿ ಇರಬೇಕು ಅಂತಾ ಹೋರಾಟ ಮಾಡುತ್ತಿದ್ದೇವೆ: ರೂಪಾ

    ನಮ್ಮ ಕುಟುಂಬ ಚೆನ್ನಾಗಿ ಇರಬೇಕು ಅಂತಾ ಹೋರಾಟ ಮಾಡುತ್ತಿದ್ದೇವೆ: ರೂಪಾ

    ಬೆಂಗಳೂರು: ನಾನು, ನನ್ನ ಗಂಡ ಇನ್ನೂ ಒಟ್ಟಾಗಿದ್ದೇವೆ. ನಮ್ಮ ಕುಟುಂಬ ಚೆನ್ನಾಗಿ ಇರಬೇಕು ಅಂತಾ ಹೋರಾಟ ಮಾಡುತ್ತಿದ್ದೇವೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ತಿಳಿಸಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಆರ್‍ಟಿಐ ಕಾರ್ಯಕರ್ತ ಗಂಗರಾಜು ಜೊತೆಗಿನ ಆಡಿಯೋ ಸಂಭಾಷಣೆ ವಿಚಾರವಾಗಿ ಸ್ಪಷ್ಟನೆ ನೀಡಿದರು. ಒಬ್ಬ ಐಎಎಸ್ ಅಧಿಕಾರಿ ಕರ್ನಾಟಕದಲ್ಲಿ ಮೃತಪಟ್ಟಿದ್ದರು, ಐಪಿಎಸ್ ಅಧಿಕಾರಿಯೊಬ್ಬರು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ಐಎಎಸ್ ದಂಪತಿ ಬೇರೆ ಆಗಿದ್ದಾರೆ ಎಂದರು.

    ಸುಖ-ಸಂಸಾರಗಳಿಗೆ ಅಡ್ಡಿ ಆಗುತ್ತಿರುವವರನ್ನು ಪ್ರಶ್ನೆ ಮಾಡಿ. ಇಲ್ಲವಾದರೆ, ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಧೈರ್ಯವಾದ ಮಹಿಳೆ, ನಾನು ಹೋರಾಡುತ್ತೇನೆ. ಎಲ್ಲ ಮಹಿಳೆಯರಿಗೂ ಆ ಶಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಧ್ವನಿಯಾಗೋಣ. ಕೌಟುಂಬಿಕ ಮೌಲ್ಯಗಳಿಗೆ ಭಾರತ ಹೆಸರುವಾಸಿಯಾಗಿದೆ ಅದನ್ನು ಮುಂದುವರಿಸೋಣ ಎಂದು ಹೇಳಿದರು. ಇದನ್ನೂ ಓದಿ: ಗಂಗರಾಜು ಜೊತೆ ರೂಪಾ ಮಾತಾಡಿರೋ ಆಡಿಯೋ ಲೀಕ್

    ನಾನು ಯಾವತ್ತೂ ಭ್ರಷ್ಟಾಚಾರ ಪರವಾಗಿ ಕೆಲಸ ಮಾಡಿಲ್ಲ. ನಾನು ಯಾವತ್ತಿಗೂ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತೇನೆ. ಅವತ್ತು, ಇವತ್ತಿಗೂ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡೋಳು. ಗಂಗರಾಜುಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ನಿಲ್ಲಿಸಲು ನಾನು ಹೇಳಿಲ್ಲ. ನಿಲ್ಲಿಸಿ ಅಂತಾ ಹೇಳಿದ್ರೆ ಅದನ್ನು ಪ್ರೂವ್ ಮಾಡಲಿ. ಅನಾವಶ್ಯಕವಾಗಿ ಆಡಿಯೋ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ರೋಹಿಣಿ ಸಿಂಧೂರಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಚರ್ಚೆ ಆಗಲಿ. ಇಲ್ಲಿ ಕೌಟುಂಬಿಕ ಮತ್ತು ವೈಯಕ್ತಿಕ ವಿಚಾರಗಳ ಚರ್ಚೆ ಬೇಡ ಎಂದರು.

    ಗಂಗರಾಜು ಮೇಲೆ ಕೂಡ ಹಲವು ಕ್ರಿಮಿನಲ್ ಕೇಸ್‍ಗಳಿವೆ. ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಾರೆ, ಯಾವ್ಯಾವ ಐಎಎಸ್ ದಂಪತಿ ಬೇರ್ಪಟ್ಟಿದ್ದಾರೆ. ತಮಿಳುನಾಡಿನ ಯಾವ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಯಾಕೆ ಮಾಡಿಕೊಂಡರು. ಯಾರಿಂದ ಯಾರು, ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಇದು ಚರ್ಚೆ ಆಗಲಿ ಎಂದು ಹೇಳಿದರು. ಇದನ್ನೂ ಓದಿ: ಡಿ.ರೂಪಾ ವಿರುದ್ಧ ದೂರು, ದಾಖಲಾಗದ ಎಫ್‍ಐಆರ್- ಕೋರ್ಟ್ ಮೋರೆ ಹೋಗಿ FIRಗೆ ಸಿದ್ಧತೆ?

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಂಗರಾಜು ಜೊತೆ ರೂಪಾ ಮಾತಾಡಿರೋ ಆಡಿಯೋ ಲೀಕ್

    ಗಂಗರಾಜು ಜೊತೆ ರೂಪಾ ಮಾತಾಡಿರೋ ಆಡಿಯೋ ಲೀಕ್

    ಮೈಸೂರು: ಐಪಿಎಸ್ ಅಧಿಕಾರಿ ರೂಪಾ (Roopa) ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ. ಈ ಆಡಿಯೋದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ (Rohini Sindhuri) ರೂಪಾ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ.

    ಈಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪ ನಡುವಿನ ಜಗಳಕ್ಕೆ ಸರ್ಕಾರ ಅಂತ್ಯ ಹಾಡಿದೆ. ರೋಹಿಣಿ ಸಿಂಧೂರಿ, ರೂಪಾ, ಹಾಗೂ ರೂಪಾ ಪತಿ ಮುನೀಷ್ ಮೌದ್ಗಿಲ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದರ ಬೆನ್ನಲ್ಲೇ ಆರ್‌ಟಿಐ ಕಾರ್ಯಕರ್ತ ಗಂಗರಾಜು (Gangaraju) ಜೊತೆಗೆ ರೂಪಾ ಮಾತನಾಡಿರುವ ಆಡಿಯೋವೊಂದು ಲೀಕ್ ಆಗಿದ್ದು, ಚರ್ಚೆಗೆ ಕಾರಣವಾಗುತ್ತದೆ. ಇದನ್ನೂ ಓದಿ: ಹಣವಿಲ್ಲದೇ ಸ್ಥಳೀಯ ಚುನಾವಣೆಯನ್ನು ಮುಂದೂಡಿದ ಶ್ರೀಲಂಕಾ

    ಆಡಿಯೋದಲ್ಲಿ ಏನಿದೆ?: ನಮ್ಮವರನ್ನ ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡುತ್ತಿದ್ದಾಳೆ. ಅವಳಿಂದ ಎಷ್ಟೋ ಮನೆ ಹಾಳಾಗಿದೆ. ಗಂಡನ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಪಡೆದಿದ್ದಾಳೆ. ಇದನ್ನು ಬೇಕಾದ್ರೆ ರೆಕಾರ್ಡ್ ಮಾಡ್ಕೊಳ್ಳಿ. ನೀವು ಅಕ್ರಮವಾಗಿ ಕೆಲಸ ಮಾಡಿಸಿಕೊಳ್ಳಲು ಬಂದಿದ್ದೀಯಾ ಇಲ್ಲಿಂದ ಎದ್ದು ಹೋಗು ಎಂದು ವ್ಯಕ್ತಿಗೆ ಬೈದು ರೂಪಾ ಕಳುಹಿಸಿದ್ದಾರೆ. ಇದನ್ನೂ ಓದಿ: ಬೇಸಿಗೆ ಆರಂಭದಲ್ಲೇ ಹಣ್ಣು, ತರಕಾರಿ ಏರಿಕೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ

    ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ

    ಬೆಂಗಳೂರು: ಐಪಿಎಸ್ ವರ್ಸಸ್ ಐಎಎಸ್ ಜಟಾಪಟಿ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದ್ದು, ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ಹಾಗೂ ಐಎಎಸ್ ರೋಹಿಣಿ ಸಿಂಧೂರಿ (Rohini Sindhuri) ಅವರನ್ನು ವರ್ಗಾವಣೆಗೊಳಿಸಲು ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

    ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಂಬಂಧಿಸಿ ಸ್ಥಳ ನಿಯುಕ್ತಿಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಡಿ. ರೂಪಾ ಕರಕುಶಲ ಅಭಿವೃದ್ಧಿ ನಿಗಮ ಎಂಡಿಯಾಗಿದ್ದರು ಹಾಗೂ ರೋಹಿಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದರು. ಇವರ ಜೊತೆಗೆ ರೂಪಾ ಅವರ ಪತಿ ಐಎಎಸ್ ಅಧಿಕಾರಿ ಮುನೀಷ್ ಮೌದ್ಗಿಲ್‍ರನ್ನು ರಾಜ್ಯಸರ್ಕಾರ ವರ್ಗಾವಣೆ ಮಾಡಿದೆ.

    ಹೆಚ್.ಬಸವರಾಜೇಂದ್ರ ಅವರನ್ನು ರೋಹಿಣಿ ಅವರ ಸ್ಥಾನಕ್ಕೆ ನಿಯೋಜಿಸಿದ್ದರೆ ಭಾರತಿ ಅವರನ್ನು ರೂಪಾ ಅವರ ಜಾಗಕ್ಕೆ ನಿಯೋಜಿಸಲಾಗಿದೆ. ಅಚ್ಚರಿ ಎಂಬಂತೆ ರೂಪಾ ಪತಿ ಮುನಿಶ್ ಮೌದ್ಗಿಲ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪರ್ಸನಲ್ ಮತ್ತು ಅಡ್ಮಿನಿಸ್ಟ್ರೇಟಿವ್ ರಿಫಾರ್ಮ್ಸ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಮಂಡ್ಯ ಉಸ್ತುವಾರಿಯನ್ನ ಬಿಜೆಪಿ ಪಕ್ಷವೇ ತೆಗೆದುಕೊಂಡಿದೆ : ವಿಜಯೇಂದ್ರ

    ಸರ್ವೆ, ಭೂದಾಖಲೆಗಳ ಇಲಾಖೆ ಆಯುಕ್ತರಾಗಿದ್ದ ಮುನೀಶ್ ಮೌದ್ಗಿಲ್‌ರನ್ನು ಡಿಪಿಎಆರ್ ಇಲಾಖೆಯ ಪ್ರಭಾವಯಿಲ್ಲದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗ ಮಾಡಲಾಗಿದೆ. ಮುನೀಶ್ ಮೌದ್ಗಿಲ್ ಇದ್ದ ಸರ್ವೆ, ಭೂ ದಾಖಲೆಗಳ ಇಲಾಖೆ ಆಯುಕ್ತರ ಜಾಗಕ್ಕೆ ಸಿ. ಎನ್. ಶ್ರೀಧರ್‌ ವರ್ಗಾವಣೆಗೊಂಡಿದ್ದಾರೆ. ಈ ಕಿತ್ತಾಟಕ್ಕೆ ಮುನೀಶ್ ಮೌದ್ಗಿಲ್ ಸಂಬಂಧಪಟ್ಟಿದ್ದಾರೆ ಎಂದು ಆ ಮೂಲಕ ಸರ್ಕಾರವೇ ಹೇಳಿದಂತಿದೆ. ಇದರಲ್ಲಿ ಮುನೀಶ್ ಮೌದ್ಗಿಲ್ ಅವರದ್ದು ಯಾವ ಥರ ಸಂಬಂಧ, ಖಾಸಗಿನಾ, ವೃತ್ತಿಯದ್ದಾ ಅನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಕಳೆದ ಎರಡು ದಿನಗಳಿಂದ ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟ ತಾರಕಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ಒತ್ತಡ, ಮುಜುಗರಕ್ಕೆ ಒಳಗಾದ ಸರ್ಕಾರ ಇಬ್ಬರಿಗೂ ಕರೆಸಿ ಸ್ಪಷ್ಟನೆ ಪಡೆದು, ಬಹಿರಂಗ ಹೇಳಿಕೆ ನೀಡದಂತೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ, ಅಖಿಲ ಭಾರತ ಸೇವೆಗಳ ನಿಯಮಗಳಿಗೆ ಬದ್ಧರಾಗಿರುವಂತೆ ಖಡಕ್ ಎಚ್ಚರಿಕೆ ಕೊಟ್ಟಿತ್ತು. ಇವತ್ತು ಅದರ ಮುಂದುವರಿದ ಭಾಗವಾಗಿ ವರ್ಗಾವಣೆ ಶಾಕ್ ಕೊಟ್ಟಿದೆ.‌

    ವರ್ಗಾವಣೆ ಮಾತ್ರನಾ? ಇನ್ನೂ ಬೇರೆ ಶಿಸ್ತು ಕ್ರಮ ಇದೆಯೋ?: ಸದ್ಯಕ್ಕೆ ಇಬ್ಬರು ಮಹಿಳಾ ಅಧಿಕಾರಿಗಳು ಹಾಗೂ ಮುನೀಶ್ ಮೌದ್ಗಿಲ್ ವರ್ಗ ಮಾಡಿ, ತನ್ನ ವ್ಯಾಪ್ತಿಯಲ್ಲಿ ಸರ್ಕಾರ ಶಿಸ್ತುಕ್ರಮ ಕೈಗೊಂಡಿದೆ. ಆದ್ರೆ ಇಷ್ಟು ಮಾತ್ರದ ಕ್ರಮದಿಂದ ಸಮಸ್ಯೆ ಬಗೆಹರಿಯುತ್ತಾ? ಸರ್ಕಾರಕ್ಕೆ ಹೋದ ಮಾನ ವಾಪಸ್ ಬರುತ್ತಾ? ಆ ಅಧಿಕಾರಿಗಳು ಬುದ್ಧಿ ಕಲೀತಾರಾ? ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಬೇರೆ ಕಠಿಣ ಶಿಕ್ಷೆ ಇಲ್ವಾ ಅನ್ನೋ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ. ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸಕ್ಕೆ 4ರ ಬಾಲಕ ಬಲಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ

    ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ

    ಬೆಂಗಳೂರು: ಇನ್ನೊಬ್ಬ ಸರ್ಕಾರಿ ಅಧಿಕಾರಿಯ ವಿರುದ್ಧದ ಆರೋಪಕ್ಕೆ ಮಾಧ್ಯಮ ಬಳಕೆ ಮಾಡಬೇಡಿ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆಯಿದೆ ಎಂದು ಮಹಿಳಾ ಅಧಿಕಾರಿಗಳಿಗಿಬ್ಬರಿಗೂ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ.

    ರೋಹಿಣಿ ಸಿಂಧೂರಿ (Rohini Sindhuri), ಡಿ. ರೂಪಾ (D Roopa) ಬೀದಿ ರಂಪಾಟ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಸರ್ಕಾರ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಆದರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಿ. ಇದರಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಆಗಿದೆ. ಇದು ಅಖಿಲ ಭಾರತೀಯ ಸೇವಾ ನಿಯಮಗಳ ಉಲ್ಲಂಘನೆ ಎಂದು ತಿಳಿಸಿದೆ.

    ನಿಮ್ಮ ಆರೋಪಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಮಾಡಬಹುದು. ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದೀರಾ. ಹೀಗಾಗಿ ನೀವು ಇನ್ನು ಮುಂದೆ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ತಾಕೀತು ಮಾಡಿದೆ. ಇದನ್ನೂ ಓದಿ: ಮಹಿಳೆ, ಮಕ್ಕಳು ಸೇರಿ ನಾಲ್ವರ ಮೇಲೆ ಆ್ಯಸಿಡ್ ದಾಳಿ

    ರಾಜ್ಯ ಸರ್ಕಾರದಿಂದ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದೆ. ಸಿಎಂ ಸೂಚನೆ ಬಳಿಕ ಮಹಿಳಾ ಅಧಿಕಾರಿಗಳಿಗೆ ನೊಟೀಸ್ ಜಾರಿಯಾಗಿದ್ದು ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ ಮತ್ತೆ ಭಾರೀ ಭೂಕಂಪ – ಭೂಮಿಯೇ ಹೋಳಾಗೋ ಭೀತಿಯಲ್ಲಿದ್ದಾರೆ ಜನ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೋಹಿಣಿ ಬಗ್ಗೆ ಮಾತನಾಡೋದಕ್ಕೆ ರೂಪಾ ಯಾರು?: ಸುಧೀರ್ ರೆಡ್ಡಿ ಆಕ್ರೋಶ

    ರೋಹಿಣಿ ಬಗ್ಗೆ ಮಾತನಾಡೋದಕ್ಕೆ ರೂಪಾ ಯಾರು?: ಸುಧೀರ್ ರೆಡ್ಡಿ ಆಕ್ರೋಶ

    ಬೆಂಗಳೂರು: ರೋಹಿಣಿ ವಿಚಾರಕ್ಕೆ ಬಗ್ಗೆ ಮಾತನಾಡೋದಕ್ಕೆ ಡಿ ರೂಪಾ (Roopa IPS)  ಯಾರು? ಅವರು ಹೊಟ್ಟೆಕಿಚ್ಚಿಗೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ (Rohini Sindhuri) ಪತಿ ಸುಧೀರ್ ರೆಡ್ಡಿ (Sudhir Reddy) ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ರೂಪಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಫಾಲೋವರ್ಸ್ ಇದ್ದಾರೆ. ಅವರು ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಕನ್ನಡಿಗ ನಾನು ಭಾರತಿಯ. ಆಂಧ್ರಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮದು ಸುಶಿಕ್ಷಿತ ಕುಟುಂಬವಾಗಿದ್ದು, ನಮ್ಮ ಕುಟುಂಬದ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ ಎಂದು ರೂಪಾ ವಿರುದ್ಧ ವಾಗ್ದಾಳಿ ನಡೆಸಿದರು.

    ರೋಹಿಣಿ ಸಿಂಧೂರಿಯ ಫೋಟೋಗಳೆಲ್ಲವೂ ಸಹಜ ಫೋಟೋಗಳಾಗಿದೆ. ನಾನು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದೆ. ತಂದೆ ತಾಯಿ ಇಲ್ಲೇ ಇರುವ ಕಾರಣ ನಾನು ಉದ್ಯೋಗ ತೊರೆದು ಬಂದಿದ್ದೇನೆ. ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಫೋಟೋಸ್‍ಗಳನ್ನು ತಗೆದುಕೊಂಡಿರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ದೂರು ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ

    ಈ ವೇಳೆ ಡಿ.ಕೆ ರವಿ ಬಗ್ಗೆ ನಾನು ಮಾತನಾಡಲ್ಲ. ಮೃತಪಟ್ಟವರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ನನಗೂ ಸಂಸ್ಕಾರ ಗೊತ್ತಿದೆ. ನಮ್ಮ ತಂದೆಯವರು 50 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲಿನಿಂದಲೂ ನಮ್ಮ ಆಸ್ತಿಗಳು ಇಲ್ಲಿವೆ. ರೋಹಿಣಿ ಅವರನ್ನು ಮದುವೆಯಾಗುವ ಮೊದಲೇ ನಮ್ಮ ಕುಟುಂಬ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುಕೊಂಡು ಬಂದಿತ್ತು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ

    ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ

    ಬೆಂಗಳೂರು: ಐಎಎಸ್ ಮತ್ತು ಐಪಿಎಸ್ ಬೆಳವಣಿಗೆ ಬಗ್ಗೆ ನಾನು ಮಾತಾಡಲ್ಲ. ಆದರೆ ನಾನು ದೇವರನ್ನು ನಂಬುತ್ತೇನೆ ಎಂದು ಡಿ.ಕೆ ರವಿ (DK Ravi) ಪತ್ನಿ ಕುಸುಮಾ (Kusuma) ತಿಳಿಸಿದ್ದಾರೆ.

    ಐಪಿಎಸ್‌ ಅಧಿಕಾರಿ ರೂಪಾ (Roopa IPS) ಹಾಗೂ ರೋಹಿಣಿ ಸಿಂಧೂರಿಯ (Rohin Sindhuri) ಜಟಾಪಟಿಗೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಮ ಯಾರನ್ನು ಬಿಡುವುದಿಲ್ಲ. ಇದೇ ಜನ್ಮದಲ್ಲಿ ಇಲ್ಲೇ ಅನುಭವಿಸುತ್ತೇವೆ ಎಂಬ ನಂಬಿಕೆ ಇಟ್ಟಿಕೊಂಡಿದ್ದೇನೆ. ನಾನು ಯಾರ ಪರನೂ ನಿಲ್ಲಲ್ಲ. ಆದರೆ ನನಗೆ ಆದ ನೋವು ಬೇರೆ ಯಾರಿಗೂ ಆಗಬಾರದು ಅನ್ನೋದಷ್ಟೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

    ನನಗೆ ಆದ ನೋವು, ನನ್ನ ಕುಟುಂಬಕ್ಕೆ ಆದ ನೋವು ಬೇರೆ ಯಾರಿಗೂ ಆಗಬಾರದು. ಸಿಬಿಐ ರಿಪೋರ್ಟ್ ಬಂದ ಮೇಲೆ, ಅದರಲ್ಲಿ ಏನಿತ್ತು ಎನ್ನುವುದನ್ನು ಯಾರು ತಿಳಿದುಕೊಳ್ಳಲಿಲ್ಲ. ಇನ್ನೂ ಹಲವು ಸತ್ಯಗಳಿವೆ. ಅದನ್ನು ಯಾರು ಯೋಚನೆ ಮಾಡಿಲ್ಲ. ರಿಪೋರ್ಟ್‍ನಲ್ಲಿ ಎಲ್ಲವೂ ವಿಸ್ತಾರವಾಗಿ ವಿವರಣೆ ಇದೆ. ಅದು ಎಲ್ಲರಿಗೂ ಗೊತ್ತಾಗಲಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ

    ಯಾವ ಕಾರಣಕ್ಕೆ ರವಿ ಸಾವನ್ನಪ್ಪಿದ್ರು ಅನ್ನೋದು ಸಿಬಿಐ ವರದಿಯಲ್ಲಿದೆ. ಡಿ.ಕೆ ರವಿಗೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ಇರಲಿಲ್ಲ. ಆ ರೀತಿಯ ಹೇಳಿಕೆ ನೀಡುತ್ತಿರುವುದು ಡಿ.ಕೆ ರವಿಗೆ ನೀಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಲ್ಲು-ಬಾಣಕ್ಕೆ 2000 ಕೋಟಿ ಡೀಲ್ – ಸಂಜಯ್ ರಾವತ್ ಬಾಂಬ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k