Tag: rona

  • ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

    ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

    – ಮಾಡಳ್ಳಿ-ಗುಂಜಳ ರಸ್ತೆ ಸಂಚಾರ ಸ್ಥಗಿತ

    ಗದಗ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಬಳಿ ಸೇತುವೆಯೊಂದು ಕೊಚ್ಚಿ ಹೋಗಿ ಮಾಡಳ್ಳಿ – ಗುಂಜಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ಬಿಡದೇ ಸುರಿಯುತ್ತಿರುವ ಮಳೆಗೆ ಕಲ್ಲಿನ ಹಳೆಯ ಸೇತುವೆ ಕೊಚ್ಚಿಹೋಗಿದ್ದು, ಮಾಗಡಿ, ಮಾಡಳ್ಳಿ, ಗುಂಜಳದಿಂದ ಕುಂದಗೋಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದೀಗ ರೈತರು, ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಜಿಲ್ಲೆಯಲ್ಲಿ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರೋಣ ತಾಲೂಕಿನ ಬೆಳವಣಕಿ ಗ್ರಾಮದ ಬಳಿ ಸೇತುವೆ ಸಂಪೂರ್ಣ ಜಲಾವೃತವಾಗಿವೆ. ತುಂಬಿ ಹರಿಯುತ್ತಿರುವ ಬೆಳವಣಕಿ ಬಿಸಿ ಬೂದಿಹಳ್ಳದ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿ ಹೋಗಿವೆ. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಹರಿಯುವ ನೀರಲ್ಲಿ ಜನರು ಹುಚ್ಚಾಟ ಮಾಡುತ್ತಿದ್ದು, ನೀರಿನ ಸೆಳೆತದ ನಡುವೆಯೂ ಅತ್ತಿಂದಿತ್ತ ಸಂಚರಿಸುತ್ತಿದ್ದಾರೆ. ಕೊಚ್ಚಿಹೋದ ರಸ್ತೆಯಿಂದ ಬೆಳವಣಕಿ, ಬಳಗಾನೂರ ಗದಗ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಮೇಲ್ಸೇತುವೆ ಮಾಡುವಂತೆ ಸಾರ್ವಜನಿಕರು ಸಾಕಷ್ಟು ಮನವಿ ಮಾಡಿದ್ರೂ ಸ್ಪಂದಿಸದೇ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

  • ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವು

    ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವು

    ಗದಗ: ರಥೋತ್ಸವದ (Chariot Festival) ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವನ್ನಪ್ಪಿದ್ದು, ಓರ್ವನಿಗೆ ಗಾಯವಾದ ಘಟನೆ ಜಿಲ್ಲೆಯ ರೋಣ (Rona) ಪಟ್ಟಣದಲ್ಲಿ ನಡೆದಿದೆ.

    ರೋಣದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಇಂದು ಮಹಾ ರಥೋತ್ಸವ ನಡೆಯಿತು. ಈ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯವಾಗಿದೆ. ಮೃತ ಭಕ್ತರು ರೋಣ ಮೂಲದ ನಿವಾಸಿಗಳು ಎನ್ನಲಾಗಿದೆ. ಮಲ್ಲಪ್ಪ ಲಿಂಗನಗೌಡ (55) ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವ ಮೃತನ ಹೆಸರು ತಿಳಿದು ಬಂದಿಲ್ಲ. ಮುಖದ ಮೇಲೆ ರಥದ ಗಾಲಿ ಹರಿದಿರುವುದರಿಂದ ಮುಖ ನಜ್ಜುಗುಜ್ಜಾಗಿ ವ್ಯಕ್ತಿಯ ಗುರುತು ಪತ್ತೆ ಸಿಗದಂತಾಗಿದೆ. ಇದನ್ನೂ ಓದಿ: ನಿಮ್ಮ ಸೇವೆಗೆ ದೇವರು ನನ್ನ ಕಳುಹಿಸಿದ್ದಾನೆ: ಮೋದಿ

    ರಥ ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾದ ಹಿನ್ನೆಲೆ ಘಟನೆ ನಡೆದಿದೆ. ರಥಕ್ಕೆ ಎಸೆಯುವ ಬಾಳೆ ಹಣ್ಣು ಹಾಗೂ ಉತ್ತತ್ತಿ ಆಯ್ದುಕೊಳ್ಳುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ರಥದ ಗಾಲಿಗೆ ಸಿಲುಕಿದ್ದಾರೆ. ಓರ್ವನ ಮುಖ ಹಾಗೂ ಮತ್ತೋರ್ವನ ಮರ್ಮಾಂಗದ ಮೇಲೆ ರಥದ ಚಕ್ರ ಹರಿದು ಇಬ್ಬರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬರ ಪರಿಹಾರ ಹಣ ಬಿಡುಗಡೆ – ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

    ಈ ವೀರಭದ್ರೇಶ್ವರನ ಜಾತ್ರೆಗೆ ರೋಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಲಕ್ಷಾಂತರ ಭಕ್ತ ಸಾಗರವೇ ಸೇರುತ್ತದೆ. ಈ ದುರ್ಘಟನೆ ನಂತರ ಜನರನ್ನು ಚದುರಿಸಲು ಪೊಲೀಸರು ಕೆಲಕಾಲ ಹರಸಾಹಸ ಪಡಬೇಕಾಯಿತು. ಇನ್ನೋರ್ವನ ಗುರುತು ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚುನಾವಣಾ ಅಕ್ರಮಕ್ಕೆ ಆಯೋಗ ಕೊಕ್ಕೆ – 8,889 ಕೋಟಿ ಮೌಲ್ಯದ ನಗದು, ಡ್ರಗ್ಸ್‌, ಮದ್ಯ ಜಪ್ತಿ!

  • ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ವೃತ್ತಿ ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದವರು ಹೆಚ್ಚು. ಆದರೆ, ಸಿನಿಮಾ ಮತ್ತು ಕಿರುತೆರೆಯಲ್ಲಿ ಪಾಪ್ಯುಲರ್ ಆದವರು ಮತ್ತೆ ವೃತ್ತಿ ರಂಗಭೂಮಿಯತ್ತ ಮುಖವೆತ್ತಿ ಕೂಡ ನೋಡುವುದಿಲ್ಲ. ಆದರೆ, ಅಗ್ನಿಸಾಕ್ಷಿ, ಸತ್ಯ ಸೇರಿದಂತೆ ಹಲವು ಪಾಪ್ಯುಲರ್ ಧಾರಾವಾಹಿಯಲ್ಲಿ ನಟಿಸಿದ ಚಂದ್ರಿಕಾ ಇದೀಗ ವೃತ್ತಿ ರಂಗಭೂಮಿಯತ್ತ ಮುಖ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿರುವ ‘ಖಾನಾವಳಿ ಚೆನ್ನಿ’ ನಾಟಕದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

    ರಾಣೇಬೆನ್ನೂರು ಮಂಜುನಾಥ ನಾಟ್ಯ ಸಂಘವು ರೋಣ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿರುವ ‘ಖಾನಾವಳಿ ಚೆನ್ನಿ’ ನಾಟಕವು ಜೂನ್ 11 ಮತ್ತು 12 ರಂದು ಎರಡೆರಡು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗಿದೆ. ಇದು ಈ ನಾಟಕದ ಹಾಸ್ಯ ಪಾತ್ರಧಾರಿ ಶ್ರೀದೇವಿ ಅವರ ಮದುವೆ ಸಹಾರ್ಥವಾಗಿ ನಡೆಯಲಿದೆ. ಹಾಗಾಗಿ ಚಂದ್ರಿಕಾ ಪ್ರಮುಖ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ನಾಟಕದ ಕುರಿತು ಮಾತನಾಡಿರುವ ಸಂಘದ ಮಾಲೀಕರಾದ ನಾಗರತ್ನ ಚಿಕ್ಕಮಠ ಮಾತನಾಡಿ, “ಕವಿ ಬಿ.ಆರ್. ಅರಶಿನಗೋಡೆ ಅವರು ಬರೆದಿರುವ ಖಾನಾವಳಿ ಚೆನ್ನಿ ಹೆಸರಾಂತ ಹಾಸ್ಯ ನಾಟಕ. ಈ ನಾಟಕವನ್ನು ರೋಣದಲ್ಲಿ ಆಯೋಜನೆ ಮಾಡಲಾಗಿದೆ. ಖ್ಯಾತ ಧಾರಾವಾಹಿ ಕಲಾವಿದೆ ಚಂದ್ರಿಕಾ ಅವರು ಪ್ರಧಾನ ಪಾತ್ರ ಮಾಡುತ್ತಿದ್ದರೆ, ಜ್ಯೂನಿಯರ್ ಯಶ್ ಕೂಡ ಈ ನಾಟಕದಲ್ಲಿ ಮತ್ತೊಂದು ಪಾತ್ರ ಮಾಡುತ್ತಿದ್ದಾರೆ. ಸಂಘದ ಕಲಾವಿದೆ ಶ್ರೀದೇವಿ ಅವರ ಮದುವೆಗಾಗಿ ಇದನ್ನು ಆಯೋಜನೆ ಮಾಡಲಾಗಿದೆ’ ಎಂದರು.

    ಖಾನಾವಳಿ ಚೆನ್ನಿ ನಾಟಕದಲ್ಲಿ ಹಾಸ್ಯದ ಜೊತೆ ಡಬಲ್ ಮೀನಿಂಗ್ ಡೈಲಾಗ್ ಕೂಡ ಇವೆ. ಚೆನ್ನಿಯ ಪಾತ್ರದ ಸುತ್ತ ಇಡೀ ನಾಟಕ ಕಟ್ಟಲಾಗಿದೆ. ಈಗಾಗಲೇ ಈ ನಾಟಕ ಉತ್ತರ ಕರ್ನಾಟಕದಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ಹೆಸರಾಂತ ಕಲಾವಿದೆಯರು ಈಗಾಗಲೇ ಚೆನ್ನಿ ಪಾತ್ರವನ್ನು ಮಾಡಿದ್ದಾರೆ. ಪ್ರತಿ ಪ್ರಯೋಗವೂ ಯಶಸ್ಸು ಕಂಡಿರುವುದು ನಾಟಕದ ಹೆಗ್ಗಳಿಕೆ ಕೂಡ.

  • ವಸತಿ ಶಾಲೆ ನಾಲ್ವರು ವಿದ್ಯಾರ್ಥಿಗಳು, ಓರ್ವ ಸಿಬ್ಬಂದಿಗೆ ಕೊರೊನಾ

    ವಸತಿ ಶಾಲೆ ನಾಲ್ವರು ವಿದ್ಯಾರ್ಥಿಗಳು, ಓರ್ವ ಸಿಬ್ಬಂದಿಗೆ ಕೊರೊನಾ

    ಗದಗ: ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು ಹಾಗೂ ಓರ್ವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿರುವ ಘಟನೆ ಗದಗದ ರೋಣ ಪಟ್ಟಣದಲ್ಲಿ ಕಂಡುಬಂದಿದೆ.

    175ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ. ಮೊದಲು ಓರ್ವ ಅಡುಗೆ ಸಿಬ್ಬಂದಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಕೂಡಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಕ್ಕಳಿಗೆ ಪರೀಕ್ಷೆ ಮಾಡಿದಾಗ ನಾಲ್ಕು ವಿದ್ಯಾರ್ಥಿಗಳಿಗೆ ಕೊರೊನಾ ಕಾಣಿಸಿಕೊಂಡಿದೆ.

    ನೂರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಆತಂಕ ಶುರುವಾಗಿದೆ. ಈಗ ವಸತಿ ಶಾಲೆಯ ಎಲ್ಲಾ ಸಿಬ್ಬಂದಿ ಹಾಗೂ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ರೋಣ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ.

  • ಗದಗ ಜಿಲ್ಲೆಯ ವ್ಯಕ್ತಿಗೆ ನಿಪಾ ವೈರಸ್‍ನ ಲಕ್ಷಣಗಳಿಲ್ಲ

    ಗದಗ ಜಿಲ್ಲೆಯ ವ್ಯಕ್ತಿಗೆ ನಿಪಾ ವೈರಸ್‍ನ ಲಕ್ಷಣಗಳಿಲ್ಲ

    ಗದಗ: ಜಿಲ್ಲೆ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ವ್ಯಕ್ತಿಯೊಬ್ಬರಿಗೆ ನಿಪಾ ವೈರಸ್ ಕಾಣಿಸಿಕೊಂಡಿಲ್ಲ ಎಂದು ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ಗಂಗಾಧರ್ ಎಂಬವರಿಗೆ ನಿಪಾ ವೈರಸ್ ಕಾಣಿಸಿಕೊಂಡಿದೆ ಎಂಬ ಶಂಕೆಯಿಂದ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಅವರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ವೈರಲಾಜಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಫಲಿತಾಂಶ ಬಂದಿದ್ದು, ಗಂಗಾಧರ್ ಅವರಿಗೆ ನಿಪಾ ವೈರಸ್ ಕಾಣಿಸಿಕೊಂಡಿಲ್ಲ, ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ ಎಂದು ವೈದ್ಯ ಭೂಸರೆಡ್ಡಿ ಹೇಳಿದ್ದಾರೆ. ಇದನ್ನು ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಗಂಗಾಧರ್ ಅವರು ಕಳೆದ 6 ತಿಂಗಳಿನಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು. ನಿಪಾ ವೈರಸ್ ಹಾವಳಿ ಹೆಚ್ಚಾಗಿದ್ದರಿಂದ ಅವರು ತಮ್ಮ ಗ್ರಾಮಕ್ಕೆ ಬಂದಿದ್ದರು. ಒಂದು ವಾರದಿಂದ ಜ್ವರ, ಕೆಮ್ಮು, ತಲೆಸುತ್ತು ಕಾಣಿಸಿಕೊಂಡಿದ್ದರಿಂದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಿಪಾ ಶಂಕೆ ವ್ಯಕ್ತವಾಗಿದ್ದರಿಂದ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಲಾಗಿತ್ತು. ಸದ್ಯ ಗಂಗಾಧರ್ ರಕ್ತದಲ್ಲಿ ನಿಪಾ ವೈರಸ್ ಇಲ್ಲವೆಂದು ಎಂದು ರಿಪೋರ್ಟ್ ಮೂಲಕ ಸ್ಪಷ್ಟವಾಗಿದೆ.

  • ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಗದಗ: ಜಿಲ್ಲೆಯ ರೋಣ ತಾಲೂಕಿನ ಜಕ್ಜಲಿ ಗ್ರಾಮದ ಸರಳ, ಸಜ್ಜನಿ, ಮೌಲ್ಯಾಧಾರಿತ ರಾಜಕಾರಣಿ ಹಾಗೂ ಸಾಹಿತಿಯಾಗಿದ್ದ ಜ್ಞಾನದೇವ ದೊಡ್ಡಮೇಟಿ ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರಾದ ದಿವಂಗತ ಅಂದಾನಪ್ಪ ದೊಡ್ಡಮೇಟಿ ಅವರ ಪುತ್ರರಿವರು. ಇವರು ಕೂಡಾ ಸ್ವಾತಂತ್ರ್ಯ ಹೋರಾಟ ಕಂಡಂತವರು. 1983 ಹಾಗೂ 85 ರಲ್ಲಿ ಎರಡು ಬಾರಿ ರೋಣ ಕ್ಷೇತ್ರದಿಂದ ಜನತಾಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಜ್ಞಾನದೇವ ದೊಡ್ಡಮೇಟಿಯವರು ಸಾಹಿತಿ ಸಹ ಆಗಿದ್ರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮತ್ತು ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

    ದೊಡ್ಡಮೇಟಿ ಅವರು ನಾಲ್ವರು ಪುತ್ರರು, ಓರ್ವ ಪುತ್ರಿ ಸೇರದಂತೆ ಅಪಾರ ಬಂಧು-ಬಳಗವನ್ನ ಅಗಲಿದ್ದಾರೆ. ಇಂದು ಸಂಜೆ ಗದಗ ಜಿಲ್ಲೆಯ ಜಕ್ಕಲ್ಲಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ದೊಡ್ಡಮೇಟಿ ಅವರ ಅಗಲಿಕೆಯಿಂದ ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಜ್ಞಾನದೇವ ದೊಡ್ಡಮೇಟಿ ಅವರಿಗೆ 86 ವರ್ಷ ವಯಸ್ಸಾಗಿತ್ತು.