Tag: Rohith shetty

  • ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    `ಸಿಂಗಂ’ ಮತ್ತು `ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರಗಳನ್ನು ನಿರ್ದೇಶನ ಮಾಡುವುದರ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ನಿರ್ದೇಶಕ ಕಮ್ ನಿರ್ಮಾಪಕ ರೋಹಿತ್ ಶೆಟ್ಟಿ ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಅವರ ಬಯೋಪಿಕ್ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಚಿತ್ರಗಳನ್ನ ನಿರ್ದೇಶನ ಮತ್ತು ನಿರ್ಮಾಣ ಮಾಡುವುದರ ಮೂಲಕ ಗಮನ ಸೆಳೆದಿರೋ ರೋಹಿತ್ ಶೆಟ್ಟಿ ಈ ಬಾರಿ ಖಡಕ್ ಪೊಲೀಸ್ ಆಫೀಸರ್ ಕಥೆಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಮುಂಬೈನ ಮಾಜಿ ಕಾಪ್ ರಾಕೇಶ್ ಮಾರಿಯಾ ಜೀವನ ಚರಿತ್ರೆಯನ್ನ ರಿಲಯನ್ಸ್ ಎಂಟರ್‌ಟೈನ್ಮೆಂಟ್‌ನೊಂದಿಗೆ ಈ ಚಿತ್ರ ನಿರ್ಮಾಣ ಮಾಡಲು ಸಾಥ್ ನೀಡಿದ್ದಾರೆ.

    ರಾಕೇಶ್ ಮಾರಿಯಾ ಮುಂಬೈನ ಖಡಕ್ ಪೊಲೀಸ್ ಆಧಿಕಾರಿಯಾಗಿದ್ರು. 36 ವರ್ಷಗಳ ಕಾಲ ಭಯೋತ್ಪಾದನೆಯ ಮುಖವನ್ನು ಹತ್ತಿರದಿಂದ ನೋಡಿದರು. ಮುಂಬೈನಲ್ಲಿ ಸಾಕಷ್ಟು ಮೇಜರ್ ಸನ್ನಿವೇಷಗಳ ಕುರಿತು ಸಿನಿಮಾ ಮಾಡಲಾಗುತ್ತಿದೆ. 2020ರ ರಾಕೇಶ್ ಮಾರಿಯಾ ಅವರ ಜೀವನ ಚರಿತ್ರೆಯನ್ನ `ಲೆಟ್ ಮಿ ಸೇ ಇಟ್ ನೌ’ ಪುಸ್ತಕದ ಮೂಲಕ ಅನಾವರಣ ಮಾಡಲಾಗಿತ್ತು. ಇದೀಗ ಇದೇ ಬಯೋಗ್ರಫಿ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಇದನ್ನೂ ಓದಿ: ಸಾನಿಯಾ ಮಿರ್ಜಾ ಮಗನ ರೇಟು ರೂ.500 ಎಂದ ನಿರ್ದೇಶಕಿ ಫರಾ ಖಾನ್

    ಇತ್ತೀಚೆಗಷ್ಟೆ ನಿರ್ಮಾಪಕ ರಾಕೇಶ್ ಮಾರಿಯಾ ಅವರನ್ನ ಭೇಟಿಯಾಗಿ ಅವರ ಬಯೋಪಿಕ್ ಕುರಿತು ಮಾತಾನಾಡಿದ್ದಾರೆ. ಈ ಸುದ್ದಿ ಕೇಳಿ ಮಾಜಿ ಪೊಲೀಸ್ ಅಧಿಕಾರಿ ರಾಕೇಶ್ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಖಡಕ್ ಪೊಲೀಸ್ ಅಧಿಕಾರಿಯಾಗಿ ಅದ್ಯಾವ ಬಿಟೌನ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಅಂತಾ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಕೆರಳಿಸಿದೆ.

  • ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ಮುಂಬೈ: ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸುತ್ತಿರುವ ಸಿಂಭಾ ಚಿತ್ರದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ನಟಿ ದೀಪಿಕಾ ಪಡುಕೋಣೆ ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆಶೀರ್ವಾದ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ನಟ ರಣ್‍ವೀರ್ ಸಿಂಗ್ ಹಾಗೂ ಸಾರಾ ಅಲಿಖಾನ್ ಅಭಿನಯದ ಸಿಂಭಾ ಚಿತ್ರ ಸಿನಿ ಪ್ರೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರು ಚಿತ್ರ ನೋಡಿ ಬಹಳ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದು, ಕರಣ್ ಜೋಹರ್ ನಿರ್ಮಿಸಿದ್ದಾರೆ. ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದ್ದು, ಈವರೆಗೆ ಸರಿಸುಮಾರು 190 ಕೋಟಿ ರೂ. ಕಲೆಕ್ಷನ್ ಮಾಡಿದೆ.

    ಅದ್ಭುತವಾಗಿ ಪ್ರದರ್ಶನ ಕಾಣುತ್ತಿರುವ ಸಿಂಭಾ ಚಿತ್ರದ ಯಶಸ್ಸಿನ ಖುಷಿಯನ್ನು ಸಂಭ್ರಮಿಸಲು, ನಿರ್ಮಾಪಕ ಕರಣ್ ಜೋಹರ್ ತಮ್ಮ ಮುಂಬೈ ನಿವಾಸದಲ್ಲಿ ಚಿತ್ರ ತಂಡಕ್ಕೆ ಪಾರ್ಟಿಯನ್ನು ಆಯೋಜಿಸಿದ್ದರು. ಈ ವೇಳೆ ತೆಗೆದ ಸಂಭ್ರಮಾಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಅವರು ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆರ್ಶಿವಾದ ಮಾಡುತ್ತಿರುವ ಕ್ಯೂಟ್ ಫೋಟೋ ಅಭಿಮಾನಿಗಳ ಮನ ಗೆದ್ದಿದೆ.

    ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅಕ್ಷಯ್ ಕುಮಾರ್, ರಣ್‍ವೀರ್ ಸಿಂಗ್, ಅಜಯ್ ದೇವಗನ್, ಕರಣ್ ಜೋಹರ್ ಜೊತೆ ತಾವು ಇರುವ ಫೋಟೋವನ್ನು ಹಾಕಿ, ನಿಮಗೆ ಗೊತ್ತಿರದ ಗುಟ್ಟೊಂದನ್ನು ನಾನು ಹೇಳಲಾ, ಸಿಂಗಂ ಸಿಂಭಾ ಸೂರ್ಯವಂಶಿ ಬರುತ್ತಿದೆ ಅಂತ ಬರೆದು ಪೋಸ್ಟ್ ಮಾಡಿದ್ದಾರೆ.

    ಸಿಂಭಾ ಚಿತ್ರ ತೆರೆಕಂಡ ಎರಡನೇ ವಾರಕ್ಕೆ ಸುಮಾರು 190 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಅಲ್ಲದೆ 2018ರಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಸದ್ಯ ಸಿಂಭಾ ಚಿತ್ರ ಮೂರನೇ ಸ್ಥಾನದಲ್ಲಿದೆ.

    https://www.instagram.com/p/BsV98rqhB3j/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv