Tag: rohith chakrathirtha

  • ವಿವಾದಿತ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ ಸರ್ಕಾರ

    ವಿವಾದಿತ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ ಸರ್ಕಾರ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿದ್ದ, 2022ರ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ಪಠ್ಯಗಳನ್ನು ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. ಸರ್ಕಾರ ಆದೇಶದಂತೆ ಎಂಟು ಪಠ್ಯಗಳನ್ನು ಹೊಸದಾಗಿ ಪರಿಷ್ಕರಣೆ ಮಾಡಿ ಇಲಾಖೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದೆ.

    text book bjp

    ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯ 59 ಪುಟಗಳ ಪರಿಷ್ಕೃತ ಪಠ್ಯ ಬಿಡುಗಡೆ ಮಾಡಲಾಗಿದೆ. 6,7,9ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳು, 7ನೇ ತರಗತಿಯ ಕನ್ನಡ ಭಾಷೆಯ ಪದ್ಯ ಮತ್ತು 4ನೇ ತರಗತಿಯ ಪರಿಸರ ಅಧ್ಯಯನ ಒಂದು ಪಠ್ಯ ಪರಿಷ್ಕರಣೆ ಮಾಡಲಾಗಿದೆ.

    ನಮ್ಮ ಸಂವಿಧಾನ, ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ, ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ, ಮೈಸೂರು ಮತ್ತು ಇತರ ಸಂಸ್ಥಾನಗಳು, ಭಾರತದ ಮತ ಪ್ರವರ್ತಕರು, ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು, ಪ್ರತಿಯೊಬ್ಬರ ವಿಶಿಷ್ಟ, ಗೊಂಬೆ ಕಲಿಸುವ ನೀತಿ ಪಠ್ಯಗಳನ್ನು ಪರಿಷ್ಕರಣೆ ಮಾಡಲಾಗಿದೆ. ಶೀಘ್ರವೇ ಶಾಲೆಗಳಿಗೆ ಹೊಸ ಪರಿಷ್ಕರಣೆ ಪಠ್ಯ ರವಾನೆ ಮಾಡಲಾಗುತ್ತದೆ. ಹೊಸ ಪರಿಷ್ಕೃತ ಪಠ್ಯವನ್ನೇ ಬೋಧನೆ ಮಾಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಲಾಗಿದೆ.

    ಏನೇನು ಪರಿಷ್ಕರಣೆ ಆಗಿದೆ?
    ನಮ್ಮ ಸಂವಿಧಾನ (9ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅನ್ನೋ ವಾಕ್ಯ ಮರು ಸೇರ್ಪಡೆ ಮಾಡಲಾಗಿದೆ.

    ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ (7ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಈ ಪಠ್ಯ ಇರಲಿಲ್ಲ. ಹೊಸದಾಗಿ ಪರಿಷ್ಕರಣೆ ಮಾಡಿರುವ ಪಠ್ಯದಲ್ಲಿ ಹೊಸ ಪಠ್ಯ ಸೇರ್ಪಡೆ ಮಾಡಲಾಗಿದೆ.
    * ಅಕ್ಕಮಹಾದೇವಿ, ಕನಕದಾಸ, ಪುರಂದರದಾಸರು ಶರೀಫರು ಸೇರಿದಂತೆ ಅನೇಕ ದಾರ್ಶನಿಕರು ವಿಚಾರಧಾರೆಗಳು ಇರುವ ಪಠ್ಯ ಸೇರ್ಪಡೆ.

    ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (6ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸಿದ್ದಗಂಗಾ ಮಠವೂ ಸಾವಿರಾರು ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ಮಾಡುತ್ತಿದೆ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಆ ವಾಕ್ಯವನ್ನು ಸೇರ್ಪಡೆ ಮಾಡಲಾಗಿದೆ.

    ಮೈಸೂರು ಮತ್ತು ಇತರ ಸಂಸ್ಥಾನಗಳು (7ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸುರಪುರದ ನಾಯಕರ ಇತಿಹಾಸ ಕೈ ಬಿಡಲಾಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸುರಪುರ ನಾಯಕರ ಇತಿಹಾಸ ಪಠ್ಯ ಸೇರ್ಪಡೆ ಮಾಡಲಾಗಿದೆ.

    ಭಾರತದ ಮತ ಪ್ರವರ್ತಕರು (9ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಷ್ಕರಣೆಯಲ್ಲಿ ಬಸವಣ್ಣರ ಕುರಿತಾದ ಪಠ್ಯ ಭಾರೀ ವಿರೋಧಕ್ಕೆ ಕಾರಣವಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಬಸವಣ್ಣನವರ ವಿವಾದಿತ ಪಠ್ಯ ತೆಗೆದು ಹೊಸ ಪಠ್ಯವನ್ನ ಸೇರ್ಪಡೆ ಮಾಡಲಾಗಿದೆ.

    ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿವಿವಾದಗಳು (7ನೇ ತರಗತಿ ಸಮಾಜ ವಿಜ್ಞಾನ)
    * 2022 ರ ಪರಿಷ್ಕರಣೆಯಲ್ಲಿ ಆಲೂರು ವೆಂಕಟರಾಯರು, ರಾಷ್ಟ್ರಕವಿ ಗೋವಿಂದ ಪೈ ಭಾವ ಚಿತ್ರ ಮಾತ್ರ ನೀಡಲಾಗಿತ್ತು. ಕುವೆಂಪು ಭಾವ ಚಿತ್ರ ಕೈ ಬಿಡಲಾಗಿದೆ ಅಂತ ಆರೋಪ ಇತ್ತು.
    * ಹೊಸ ಪರಿಷ್ಕರಣೆಯಲ್ಲಿ ಕುವೆಂಪು, ಹುಯಿಲಗೋಳ ನಾರಾಯಣರಾವ್‍ರ ಭಾವಚಿತ್ರ ಸೇರ್ಪಡೆ ಮಾಡಲಾಗಿದೆ.

    ಪ್ರತಿಯೊಬ್ಬರು ವಿಶಿಷ್ಟ (4ನೇ ತರಗತಿ ಪರಿಸರ ಅಧ್ಯಯನ)
    * ಕಾಂಗ್ರೆಸ್ ಸರ್ಕಾರದ ಪರಿಷ್ಕರಣೆಯಲ್ಲಿ ಅನೇಕರ ಪ್ರೋತ್ಸಾಹದಿಂದ ಕುವೆಂಪು ಪ್ರಖ್ಯಾತ ಕವಿ ಎನಿಸಿಕೊಂಡಿದ್ದರು ಎಂಬ ವಿವಾದಿತ ಅಂಶ ಸೇರ್ಪಡೆ ಮಾಡಲಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಈ ವಿವಾದಿತ ಅಂಶವನ್ನು ಕೈ ಬಿಡಲಾಗಿದೆ.

    ಗೊಂಬೆ ಕಲಿಸುವ ನೀತಿ (7ನೇ ತರಗತಿ ಕನ್ನಡ ಭಾಷೆ)
    * 2022ರ ಪರಿಷ್ಕರಣೆಯಲ್ಲಿ ಆಡಿಸಿ ನೋಡಿ ಬೀಳಿಸಿ ನೋಡು ಪದ್ಯದ ಸಾಹಿತ್ಯ ಬರೆದವರು ಆರ್.ಎನ್. ಜಯಗೋಪಾಲ್ ಅಂತ ತಪ್ಪಾಗಿ ಮುದ್ರಣ ಮಾಡಲಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಅದನ್ನು ಸರಿ ಮಾಡಿ ಸಾಹಿತಿ ಚಿ.ಉದಯ್ ಶಂಕರ್ ಅವರ ಪರಿಚಯ ಸೇರ್ಪಡೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಈ ದೇಶದ ಪ್ರಧಾನಿ, ಮೈಸೂರಿಗೆ ಬರೋದ್ರಲ್ಲಿ ತಪ್ಪೇನಿಲ್ಲ: ಸಿದ್ದರಾಮಯ್ಯ

    ಮೋದಿ ಈ ದೇಶದ ಪ್ರಧಾನಿ, ಮೈಸೂರಿಗೆ ಬರೋದ್ರಲ್ಲಿ ತಪ್ಪೇನಿಲ್ಲ: ಸಿದ್ದರಾಮಯ್ಯ

    ವಿಜಯಪುರ: ಮೋದಿ ಈ ದೇಶದ ಪ್ರಧಾನಿ ಅವರು ಮೈಸೂರಿಗೆ ಬರೋದ್ರಲ್ಲಿ ತಪ್ಪೇನಿಲ್ಲ. ಆದರೆ ಪ್ರಧಾನಿ ಬರುತ್ತಿರುವುದು ಅಂತಾರಾಷ್ಟ್ರೀಯ ಯೋಗದಿನಕ್ಕೆ ಮಾತ್ರವಲ್ಲ, ರಾಜಕೀಯ ಮಾಡುವುದಕ್ಕೂ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

    ವಿಜಯಪುರದ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅಂತಾರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡುವುದರ ಕುರಿತು ಅವರು ಮಾತನಾಡಿದ್ದಾರೆ. ಮೋದಿ ದೇಶದ ಪ್ರಧಾನಿ, ಮೈಸೂರಿಗೆ ಬರೋದರಲ್ಲಿ ತಪ್ಪಿಲ್ಲ. ಬರಬೇಡ ಅಂತ ಹೇಳೋಕೆ ಆಗುತ್ತಾ. ಲೆಟ್ ಹಿಮ್ ಕಂ, ಅಟೆಂಡ್ ದಿ ಫಂಕ್ಷನ್. ದೇಶದ ಪ್ರಧಾನಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತಾರೆ. ರಾಜಕೀಯ ಕೂಡಾ ಮಾಡಲಿಕ್ಕೆ ಬರ್ತಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಾಲ್ಯ ಸ್ನೇಹಿತ ಅಬ್ಬಾಸ್ ನೆನಪಿಸಿಕೊಂಡ ಮೋದಿ – ನೆಟ್ಟಿಗರಿಗೆ ಕುತೂಹಲ

    text book bjp

    ಬಿ.ಸಿ.ನಾಗೇಶ್ ರಾಜೀನಾಮೆ ಕೊಡಲಿ: ಪಠ್ಯಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಬಿ.ಸಿ.ನಾಗೇಶ್ ವಿರುದ್ಧ ಹರಿಹಾಯ್ದಿದ್ದಾರೆ. ಪುಸ್ತಕ ಪರಿಷ್ಕರಣೆ ಹಿಂದೆ ಇರೋದು ಬಿ.ಸಿ.ನಾಗೇಶ್, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಏಕೆಂದರೆ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹಕ್ಕಿ ಡಿಕ್ಕಿಯಾಗಿ 185 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ!

    ಚಕ್ರತೀರ್ಥನನ್ನು ಅರೆಸ್ಟ್ ಮಾಡಿ: ರೋಹಿತ್ ಚಕ್ರತೀರ್ಥ ಅರೆಸ್ಟ್ ಆಗಬೇಕು. ಈ ಪಠ್ಯ ವಾಪಾಸ್ ತೆಗೆದುಕೊಳ್ಳಬೇಕು. ಚಕ್ರತೀರ್ಥ ಕೇಸರೀಕರಣಕ್ಕಾಗಿ ಹೀಗೆ ಮಾಡಿದ್ದಾರೆ. ತಿರುಚಿದ ಪಠ್ಯವನ್ನ ಮಕ್ಕಳಿಗೆ ಬೋಧಿಸಬಾರದು. ಮಕ್ಕಳಿಗೆ ವೈಚಾರಿಕ, ವೈಜ್ಞಾನಿಕ ಜ್ಞಾನ ಕೊಡಬೇಕು. ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಬಾಲಗಂಗಾಧರ ಸ್ವಾಮೀಜಿ, ಸಿದ್ದಗಂಗಾಶ್ರೀಗಳಿಗೆ ಪಠ್ಯದಲ್ಲಿ ಅಪಮಾನವಾಗಿದೆ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    Live Tv

  • PUC ಪಠ್ಯ ಪರಿಷ್ಕರಣೆ – ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ತೀರ್ಮಾನ

    PUC ಪಠ್ಯ ಪರಿಷ್ಕರಣೆ – ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ತೀರ್ಮಾನ

    ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಣ್ಣಗಾಗುವ ಮುನ್ನವೇ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚನೆಯ ಆದೇಶವನ್ನು ಶಿಕ್ಷಣ ಇಲಾಖೆ ಹಿಂಪಡೆದು ಸಮಿತಿಯನ್ನು ವಿಸರ್ಜಿಸಿದೆ.

    TEXT BOOK

    ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ ಮಾಡಿದ್ದ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿಯ `ಹೊಸ ಧರ್ಮಗಳ ಉದಯ’ ಪಠ್ಯ ಮಾತ್ರ ಪರಿಷ್ಕರಣೆಗೆ ವಹಿಸಿತ್ತು. ಶಾಲಾ ಪಠ್ಯ ಪುಸ್ತಕ ಗೊಂದಲ ಆದ ಹಿನ್ನಲೆಯಲ್ಲಿ ಪಿಯುಸಿ ಪಠ್ಯ ಪರಿಷ್ಕರಣೆ ಕೈ ಬಿಡಲು ತೀರ್ಮಾನಿಸಿ, ರೋಹಿತ್ ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದೇ ಇರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥಗೆ ಸಂಘಟನೆಗಳಿಂದ ಧಮ್ಕಿ – ಪೊಲೀಸರಿಂದ ಬಿಗಿ ಭದ್ರತೆ

    TEXTBOOK

    ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ದ್ವಿತೀಯ ಪಿಯುಸಿಯ ಇತಿಹಾಸದ ಒಂದು ಪಠ್ಯವನ್ನು ಪರಿಷ್ಕರಣೆಗಾಗಿ ಸಮಿತಿಗೆ ನೀಡಲಾಗಿತ್ತು. ಈಗಾಗಲೇ ಮುಖ್ಯಮಂತ್ರಿಗಳು ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಿದ್ದಾರೆ. ಹೀಗಾಗಿ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯೂ ವಿಸರ್ಜನೆ ಆಗಿದೆ. ರೋಹಿತ್ ಚಕ್ರತೀರ್ಥ ಸಮಿತಿಯಿಂದ ವರದಿ ಸ್ವೀಕಾರ ಮಾಡುವುದಿಲ್ಲ. ದ್ವಿತೀಯ ಪಿಯುಸಿಯ ಒಂದು ಪಠ್ಯವನ್ನೂ ಸಹ ಪರಿಷ್ಕರಣೆ ಮಾಡುವುದಿಲ್ಲ. ಈಗ ಇರುವ ಪಠ್ಯವನ್ನು ಯಥಾವತ್ತಾಗಿ ಉಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು

    ಪಠ್ಯ ಪರಿಷ್ಕರಣೆ ಜನಾಭಿಪ್ರಾಯಕ್ಕೆ: ಪಠ್ಯಪುಸ್ತಕ ಪರಿಷ್ಕರಣೆಯನ್ನ ಜನಾಭಿಪ್ರಾಯಕ್ಕೆ ಬಿಡುತ್ತೇವೆ. ಯಾವ ಪಠ್ಯದಲ್ಲಿ ತಪ್ಪಾಗಿದೆ? ಎಲ್ಲಿ ಲೋಪ ಉಂಟಾಗಿದೆ? ಅದನ್ನ ಸರಿ ಮಾಡಿಕೊಳ್ಳುತ್ತೇವೆ. ಬಸವಣ್ಣನವರ ಸಾಲು ಸೇರಿಸುತ್ತೇವೆ. ಸಂವಿಧಾನ ಶಿಲ್ಪಿ ಬಿರುದನ್ನೂ ಸೇರ್ಪಡೆ ಮಾಡುತ್ತೇವೆ. ಜನಾಭಿಪ್ರಾಯದಲ್ಲಿ ಏನಾದರೂ ಆಕ್ಷೇಪಗಳು ಬಂದರೆ ಅದನ್ನ ಸ್ವೀಕಾರ ಮಾಡಿ, ಸರಿ ಇದ್ದರೆ ಅದನ್ನ ಪರಿಷ್ಕರಣೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಬರಗೂರು ಸಮಿತಿಯ ಬಹುತೇಕ ಪಠ್ಯವನ್ನು ಉಳಿಸಿಕೊಂಡಿದ್ದೇವೆ. ಅದರ ಬಗ್ಗೆ ಯಾರೂ ವಿವಾದ ಮಾಡಿಲ್ಲ. ಬೇರೆಲ್ಲ ಪಠ್ಯದ ಬಗ್ಗೆ ಮಾತ್ರ ವಿವಾದ ಮಾಡ್ತಿದ್ದಾರೆ. ಬಸವಣ್ಣನವರ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಏನು ಪರಿಷ್ಕರಣೆ ಮಾಡಿತ್ತೋ ಅದನ್ನು ಹಾಗೇ ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ರೋಹಿತ್ ಚಕ್ರತೀರ್ಥಗೆ ಸಂಘಟನೆಗಳಿಂದ ಧಮ್ಕಿ – ಪೊಲೀಸರಿಂದ ಬಿಗಿ ಭದ್ರತೆ

    ರೋಹಿತ್ ಚಕ್ರತೀರ್ಥಗೆ ಸಂಘಟನೆಗಳಿಂದ ಧಮ್ಕಿ – ಪೊಲೀಸರಿಂದ ಬಿಗಿ ಭದ್ರತೆ

    ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬೆನ್ನಲ್ಲೇ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರಿಗೆ ಕೆಲ ಸಂಘಟನೆಗಳಿಂದ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.

    ಪಠ್ಯಗಳ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಅನೇಕ ಸಂಘಟನೆಗಳು ರೋಹಿತ್ ಚಕ್ರತೀರ್ಥರಿಗೆ ಬೆದರಿಕೆ ಹಾಕಿವೆ. ಸಂಘಟನಾಕಾರರು ಫೋನ್ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ರೋಹಿತ್ ಚಕ್ರತೀರ್ಥ ನಿವಾಸಕ್ಕೆ ಬಿಗಿ ಭದ್ರತೆ ನೀಡಲಾಗಿದೆ. ಇದನ್ನೂ ಓದಿ: ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು

    TEXT BOOK

    ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕದಲ್ಲಿ 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ 10ನೇ ತರಗತಿಯಲ್ಲಿ ಅಂಬೇಡ್ಕರ್ ಪಠ್ಯ ಇರುವುದಾಗಿ ಫೋಟೋವನ್ನು ಟ್ವೀಟ್ ಮಾಡಿತ್ತು.

    ನಿನ್ನೆ 7ನೇ ತರಗತಿ ಪಠ್ಯಪುಸ್ತಕದ ಕರ್ನಾಟಕ ಏಕೀಕರಣ ಅಧ್ಯಾಯದಲ್ಲಿ ಕುವೆಂಪು ಅವರ ಫೋಟೋ ಕೈಬಿಡಲಾಗಿದೆ ಎಂದು ಅನೇಕ ಸಂಘನಾಕಾರರು ಹಾಗೂ ಕುವೆಂಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿರುವ ಹೊತ್ತಿನಲ್ಲೇ ಬೆದರಿಕೆಯ ಕರೆಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ನಿವಾಸಕ್ಕೆ ಬಿಗಿ ಭದ್ರತೆ ನೀಡಲಾಗಿದೆ.

  • ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು

    ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು

    ಬೆಂಗಳೂರು: ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಬಿರುದನ್ನು ಕೈ ಬಿಡಲಾಗಿದೆ ಹಾಗೂ ಅಂಬೇಡ್ಕರ್ ಪಠ್ಯವನ್ನು ಕೈಬಿಡಲಾಗಿದೆ ಎಂದು ಬಿಜೆಪಿ ವಿರುದ್ಧ ಪ್ರತಿಪಕ್ಷದ ನಾಯಕರು ಹಾಗೂ ಸಾಹಿತಿಗಳು ಮುಗಿಬಿದ್ದಿದ್ದರು.

    TEXT BOOK

    ಇದಕ್ಕೆ ಸಾಕ್ಷಿಯೊಂದಿಗೆ ಸ್ಪಷ್ಟನೆ ನೀಡಿರುವ ಬಿಜೆಪಿ 10ನೇ ತರಗತಿಯ ಪಠ್ಯಪುಸ್ತಕದಲ್ಲಿರುವ ಅಂಬೇಡ್ಕರ್ ಪಾಠದ ಚಿತ್ರವನ್ನು ಟ್ವೀಟ್ ಮಾಡಿದೆ. `ಉದಾತ್ತ ಚಿಂತನೆಗಳು’ ಮೊದಲ ಅಧ್ಯಾಯದಲ್ಲಿ ಅಂಬೇಡ್ಕರ್ ಎನ್ನುವ ಒಂದು ಪುಟದ ಮಾಹಿತಿಯನ್ನು ದಲಿತ ವಿರೋಧಿ ಕಾಂಗ್ರೆಸ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    `ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಪಠ್ಯವೇ ಇರಲಿಲ್ಲ. ನಮ್ಮ ಸರ್ಕಾರ ಅಂಬೇಡ್ಕರ್ ಅವರ ಪಠ್ಯವನ್ನು ಸೇರಿಸಿ ಕಾಂಗ್ರೆಸ್ ಮಾಡಿದ ತಪ್ಪನ್ನು ಅಳಿಸಿ ಹಾಕಿದೆ. ಸಂವಿಧಾನ ಪಿತಾಮಹರನ್ನು ಕಾಂಗ್ರೆಸ್ ಮರೆತಿತ್ತೇ ಹೊರತು, ನಾವಲ್ಲ ಎಂದೂ ಬರೆದುಕೊಂಡಿದೆ. ಇದನ್ನೂ ಓದಿ: ರಸ್ತೆ ಬದಿಗೆ ಉರುಳಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್ – ಐವರಿಗೆ ಗಾಯ

    TEXTBOOK

    ಏನಿದು ವಿವಾದ?
    7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ನಿನ್ನೆ ಆರೋಪಿಸಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಅದಕ್ಕೆ ಸ್ಪಷ್ಟ ಉತ್ತರ ನೀಡಿರುವ ಬಿಜೆಪಿ ಅಂಬೇಡ್ಕರ್‌ಗೆ 1 ಪುಟದ ಮಾಹಿತಿಯನ್ನು ಮೀಸಲಿಟ್ಟಿರುವುದಾಗಿ ತಿಳಿಸಿದೆ.

  • ಅವರು ಚಡ್ಡಿ ಸುಟ್ಕೊಂಡೇ ಇರಲಿ, ನಾವು ನಮ್ಮ ಹಳೆ ಚಡ್ಡಿಗಳನ್ನು ಕೊಡ್ತೇವೆ: ಸಿ.ಟಿ.ರವಿ ವ್ಯಂಗ್ಯ

    ಅವರು ಚಡ್ಡಿ ಸುಟ್ಕೊಂಡೇ ಇರಲಿ, ನಾವು ನಮ್ಮ ಹಳೆ ಚಡ್ಡಿಗಳನ್ನು ಕೊಡ್ತೇವೆ: ಸಿ.ಟಿ.ರವಿ ವ್ಯಂಗ್ಯ

    ಚಿಕ್ಕಮಗಳೂರು: ಅವರು ಚಡ್ಡಿ ಸುಟ್ಕೊಂಡೇ ಇರಲಿ, ನಾವು ನಮ್ಮ ಹಳೆ ಚಡ್ಡಿಗಳನ್ನು ಕಳುಹಿಸಿಕೊಡ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

    ಚಿಕ್ಕಮಗಳೂರಿನ ಬಸವಹನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, `ಬಿಜೆಪಿಗೆ ಕೋಮು ನಶೆ ಏರಿದೆ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಬಿರುದು ಕೈಬಿಟ್ಟ ರೋಹಿತ್ ಚಕ್ರತೀರ್ಥ ಸಮಿತಿ – ಎಲ್ಲೆಡೆ ಆಕ್ರೋಶ

    ಮಧ್ಯದಲ್ಲಿ ಎಲ್ಲಿಡಲಿ ಅಂತಾರೆ ಸಿದ್ದರಾಮಯ್ಯ: ಹೆಡ್ಗೆವಾರ್ ಕಂಡರೆ ಇವರಿಗೆ ಯಾಕೆ ಸಂಕಟ. ಹೆಡ್ಗೆವಾರ್ ಭಾರತ್ ಮಾತಾ ಕಿ ಜೈ ಅನ್ನೋ ಶಿಕ್ಷಣವನ್ನ ಕಲಿಸಿದ್ದಾರೆಯೇ ಹೊರತು ಭಾರತಕ್ಕೆ ಬಾಂಬ್ ಹಾಕುವುದನ್ನು ಕಲಿಸಿಲ್ಲ. ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು. ಭಾರತ್ ಮಾತಾ ಕೀ ಜೈ ಅಂದರೆ ಇವರಿಗೆ ಉರಿ ಹತ್ತುತ್ತೆ ಎಂದು ಪ್ರಶ್ನಿಸಿದ್ದಾರೆ.

    ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಸಿದ್ದರಾಮಯ್ಯ ಯಾರು? ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದೆ. ಸರ್ಕಾರ ಅದನ್ನ ಒಪ್ಪಿದೆ. ಮಧ್ಯದಲ್ಲಿ ನಂದು ಎಲ್ಲಿಡಲಿ ಅಂತ ಕೇಳೋಕೆ ಇವರ್ಯಾರು? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಚಡ್ಡಿ ವಿಚಾರಕ್ಕೆ ಕಿಡಿ ಕಾರಿದ ಸಿಟಿ ರವಿ ಅವರು, ಇದೇ ಚಡ್ಡಿ, ಸಂಘಿ ನರೇಂದ್ರ ಮೋದಿಯವರೇ ಅಂಬೇಡ್ಕರ್ ಹುಟ್ಟೂರನ್ನ ಅಭಿವೃದ್ಧಿ ಮಾಡಿದ್ದು. ಭೀಮ್ ಆಪ್ ತಂದಿದ್ದು. 2 ಬಾರಿ ಅನಕ್ಷರಸ್ಥ ವ್ಯಕ್ತಿಯನ್ನ ಅಂಬೇಡ್ಕರ್ ಎದುರು ನಿಲ್ಲಿಸಿ ಸೋಲಿಸಿದ್ದು ಇದೇ ಕಾಂಗ್ರೆಸ್. ಇಂದು ಅಂಬೇಡ್ಕರ್ ಬಗ್ಗೆ ನಮಗೆ ಹೇಳುತ್ತಾರೆ. ಅಂಬೇಡ್ಕರ್ ಬಗ್ಗೆ ನಮಗಿರೋ ಅಭಿಮಾನಕ್ಕೆ ಇವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.

    CTR

    ಜವಾಹರ್‌ಲಾಲ್ ನೆಹರೂ ಭಾರತರತ್ನವನ್ನ ತಮಗೆ ತಾವೇ ಕೊಟ್ಕೊಂಡ್ರು. ಆದರೆ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡುವಂತೆ ಶಿಫಾರಸ್ಸು ಮಾಡಿದ್ದು ಬಿಜೆಪಿ ಸರ್ಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ. ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್ ಪಾರ್ಟಿಯೂ ಅಲ್ಲ. ಕಾಂಗ್ರೆಸ್ ಹೆಜ್ಜೆ-ಹೆಜ್ಜೆಗೂ ಅಂಬೇಡ್ಕರ್ ಅವರನ್ನು ತುಳಿಯುತ್ತಲೇ ಬಂದಿದೆ. ಇಂಥವರು ಅಂಬೇಡ್ಕರ್ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ಪಂಚ್ ಕೊಟ್ಟಿದ್ದಾರೆ.

    ಚುನಾವಣೆ ಕುರಿತು ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಕರ್ನಾಟಕದಲ್ಲೂ ಹೋಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ

    text book bjp

    ದುರಹಂಕಾರ ಹಾಗೂ ಓಲೈಕೆ ರಾಜಕಾರಣವನ್ನ ರಾಜ್ಯದ ಜನ ಒಪ್ಪಲ್ಲ, ಕ್ಷಮಿಸಲ್ಲ ಎಂದು ಹೇಳಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಡಿಕೆಶಿ-ಸಿದ್ದು ಬಾಯಿ ಬಂದ್ ಆಗಿತ್ತು. ಬೆಂಕಿ ಹಾಕಿದವರೆಲ್ಲಾ ಇದೆ ಸಿದ್ದು ಅಂಡ್ ಡಿಕೆಶಿ ಬ್ರದರ್ಸ್ ಅದಕ್ಕೆ ಬಾಯಿ ಬಂದ್ ಆಗಿತ್ತು. ಈಗ ಡಿಜೆ ಹಳ್ಳಿ – ಕೆಜೆ ಹಳ್ಳಿಯಲ್ಲಿ ನಡೆದ ಘಟನೆಯಂತೆ ಇಡೀ ರಾಜ್ಯದಲ್ಲಿ ಮಾಡಲು ಹೊರಟಿದ್ದಾರೆ. ಮತಾಂದತೆ ಬೆಳೆಸೋದೆ ಇವರ ಗುರಿ ಇದ್ದಂತೆ ಕಾಣುತ್ತದೆ ಎಂದು ಕಿಡಿ ಕಾರಿದ್ದಾರೆ.

  • ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಬಿರುದು ಕೈಬಿಟ್ಟ ರೋಹಿತ್ ಚಕ್ರತೀರ್ಥ ಸಮಿತಿ – ಎಲ್ಲೆಡೆ ಆಕ್ರೋಶ

    ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಬಿರುದು ಕೈಬಿಟ್ಟ ರೋಹಿತ್ ಚಕ್ರತೀರ್ಥ ಸಮಿತಿ – ಎಲ್ಲೆಡೆ ಆಕ್ರೋಶ

    ಬೆಂಗಳೂರು: ಪಠ್ಯಪುಸ್ತಕ ಸಮಿತಿಯ ನೂತನ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ಕೈ ಬಿಡಲಾಗಿದೆ. ಇದರಿಂದ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ದಿಗ್ಗಜರೂ ಬಿಜೆಪಿ ಸರ್ಕಾರ ವಿರುದ್ಧ ಮುಗಿಬಿದ್ದಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಭಾರತ ನಿಂತಿರೋದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಮೇಲೆ. ಅದರಲ್ಲೇ ನಮಗೆ ಎಲ್ಲ ಹಕ್ಕು ಕೊಟ್ಟಿದ್ದಾರೆ. ಅದಕ್ಕಾಗಿ ಇಡೀ ದೇಶದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಇರುವಷ್ಟು ಯಾರದ್ದೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಕಳೆದ 75 ವರ್ಷದಿಂದ ಸಂವಿಧಾನವನ್ನು ಒಪ್ಪಿದ್ದೇವೆ. ಈಗ 6ನೇ ತರಗತಿ ಪಠ್ಯದಲ್ಲಿ ಅಂಬೇಡ್ಕರ್ ಬಗ್ಗೆ ಯಿದ್ದ ಪಠ್ಯವನ್ನು ತೆಗೆದಿದ್ದಾರೆ. 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯನ್ನೇ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನೇ ತೆಗೆದುಹಾಕಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ರೋಹಿತ್ ಚಕ್ರತೀರ್ಥ ಬಗ್ಗೆ ಮಾತನಾಡುವುದರಲ್ಲಿಯೂ ಅರ್ಥವಿಲ್ಲ. ಏಕೆಂದರೆ ಇದು ಸರ್ಕಾರದ ಬೇಜಾಬ್ದಾರಿ ಎಂದು ಕಿಡಿ ಕಾರಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಂಬೇಡ್ಕರ್ ಬಗ್ಗೆ ಸಂವಿಧಾನ ಶಿಲ್ಪಿ ಎಂಬ ಸಾಲು ತೆಗೆದಿದ್ದಾರೆ. ಇದರಲ್ಲಿ ಪರಿಷ್ಕರಣೆ ಮಾಡಿರುವುದನ್ನು ಕೈಬಿಡಬೇಕು. ಈ ಹಿಂದೆ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಉಲ್ಲೇಖಿಸಿದ್ದನ್ನೇ ಮುಂದುವರೆಸಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ

    ಬಿಜೆಪಿ ಅವರಿಗೆ ಕೋಮು ನಶೆ ತಲೆಗೆ ಹತ್ತಿದೆ. ಅದರಿಂದ ಅವರು ಹೊರಗೆ ಬರಬೇಕು. ಸಂವಿಧಾನ ವಿರೋಧಿಗಳಿಗೆ ಅಧಿಕಾರ ಕೊಟ್ಟದ್ದೇ ತಪ್ಪು ಎನ್ನುವಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

    Siddaramaiah

    ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಹ ಕಿಡಿ ಕಾರಿದ್ದಾರೆ. ಈಗಾಗಲೇ ಬಿಜೆಪಿ ತತ್ವಜ್ಞಾನಿಗಳ ಬರಹಗಳನ್ನ ಪಠ್ಯದಲ್ಲಿ ಕೈಬಿಟ್ಟಿದ್ದಾರೆ. ನಂತರ ದಲಿತ ಸಾಹಿತಿಗಳಿಗೆ ಅಪಮಾನ ಮಾಡಿ, ಇದೀಗ ಅಂಬೇಡ್ಕರ್ ಅವರಿಗೂ ಅಪಮಾನ ಮಾಡಿದ್ದಾರೆ. ಸಂವಿಧಾನ ಶಿಲ್ಪಿ ಅನ್ನೋದನ್ನೇ ಕೈಬಿಟ್ಟಿದ್ದು, ರಚನಾ ಸಮಿತಿ ಅಧ್ಯಕ್ಷರು ಅಂತ ಪುಸ್ತಕದಲ್ಲಿ ಸೇರಿಸಿದ್ದಾರೆ. ಇವರ ಐಡಿಯಾಲಜಿಗೆ ತಕ್ಕಂತೆ ಪುಸ್ತಕಗಳಲ್ಲಿ ಪಾಠ ಇಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಂವಿಧಾನ ರಚನೆ ಹೇಗಾಯ್ತು ಅಂತಾ ಇವರಿಗೆ ಗೊತ್ತೇ ಇಲ್ವಾ? ಆದರೂ ಮನುಸ್ಮೃತಿಯನ್ನೇ ಸಂವಿಧಾನ ಅಂತಾರೆ. ಮೊದಲು ಅವರು ಇತಿಹಾಸ ಓದಿಕೊಳ್ಳಲಿ ಎಂದು ಕುಟಕಿದ್ದಾರೆ.

  • RSS ಚಡ್ಡಿ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್ ಸರ್ವನಾಶ: ಭೈರತಿ ಬಸವರಾಜ್

    RSS ಚಡ್ಡಿ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್ ಸರ್ವನಾಶ: ಭೈರತಿ ಬಸವರಾಜ್

    ದಾವಣಗೆರೆ: ಕಾಂಗ್ರೆಸ್‍ನವರು ಚಡ್ಡಿಗಳನ್ನು ಇಡೀ ದೇಶದಿಂದಲೇ ಸುಟ್ಟು ಹಾಕಬೇಕು ಎಂದು ಹೇಳುತ್ತಿದ್ದಾರೆ. ಆರ್‌ಎಸ್‍ಎಸ್ ಚಡ್ಡಿ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್‍ನವರು ಸರ್ವನಾಶ ಆಗುತ್ತಾರೆ ಎಂದು ದಾವಣಗೆರೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

    ದಾವಣಗೆರೆಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‍ಎಸ್ ಚಡ್ಡಿ ಸುಟ್ಟರೇ ನಾವೇನು ಸುಮ್ಮನೇ ಇರಲ್ಲ. ದೇಶದಲ್ಲಿ ಈಗ ಕಾಂಗ್ರೆಸ್ ಯಾವ ಸ್ಥಿತಿ ಇದೆ. ಅದೇ ರೀತಿಯಾಗಿ ಇಡೀ ದೇಶದಿಂದಲೇ ಸರ್ವನಾಶ ಆಗುತ್ತದೆ. ಅಲ್ಲದೆ ಚಡ್ಡಿ ಅಭಿಯಾನದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಅವರಿಗೆ ಬುದ್ಧಿಯಿಲ್ಲ ಎಂದು ಟೀಕಿಸಿದರು.

    ಆರ್‌ಎಸ್‍ಎಸ್ ದೇಶ ಸೇವೆಗೆ ಹೆಸರಾದ ಸಂಸ್ಥೆ. ಇಂತಹ ಸಂಘಟನೆ ಬಗ್ಗೆ ಮಾತಾಡುವುದು ನೋಡಿದರೆ ಕಾಂಗ್ರೆಸ್ ನವರಿಗೆ ಬುದ್ಧಿ ಭ್ರಮಣೆಯಾಗಿದೆ. ಅಲ್ಲದೆ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು, ಈ ರೀತಿ ಹೇಳಿಕೆ ನೀಡುವುದು, ಅವರ ವ್ಯಕ್ತಿತ್ವ ಸರಿಯಾದಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ

    Congress

    ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರ ಬಗ್ಗೆ ಮಾತನಾಡಿದ ಅವರು, ಈಗಾಗಲೇ ರೋಹಿತ್ ಚಕ್ರತೀರ್ಥ ಅವರು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಕೆಲ ತಿದ್ದುಪಡಿ ಮಾಡಕೊಂಡು ಮಕ್ಕಳಿಗೆ ಪುಸ್ತಕ ನೀಡಲಾಗುತ್ತದೆ. ಆದರೆ ಇದೇ ಚಕ್ರತೀರ್ಥರನ್ನು ಪಿಯುಸಿ ಪಠ್ಯ ಪರಿಷ್ಕರಣೆ ಜವಾಬ್ದಾರಿ ನೀಡಿದ್ದು, ನನ್ನ ಗಮನಕ್ಕೆ ಬಂದಿಲ್ಲ ಎಂದರು. ಇದನ್ನೂ ಓದಿ: ನೆಚ್ಚಿನ ನಟ ಪವನ್ ಕಲ್ಯಾಣ್ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ!

  • ಎಡಪಂಥೀಯ ಸಾಹಿತಿಗಳು Vs ಸರ್ಕಾರ: ಬೇಡಿಕೆ ಏನು?

    ಎಡಪಂಥೀಯ ಸಾಹಿತಿಗಳು Vs ಸರ್ಕಾರ: ಬೇಡಿಕೆ ಏನು?

    ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್, ಎಡಪಂಥೀಯ ಸಾಹಿತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರವನ್ನು ತರಾಟೆಗೆ ತೆಗದುಕೊಳ್ಳುತ್ತಿದ್ದರೆ ಇತ್ತ ರೋಹಿತ್ ಚಕ್ರತೀರ್ಥ ಅವರನ್ನು ಬೆಂಬಲಿಸಿ ಅಭಿಯಾನ ನಡೆಯುತ್ತಿದೆ.

    ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮತ್ತು ಪಠ್ಯಪುಸ್ತಕ ಕೇಸರೀಕರಣದ ಆರೋಪದ ವಿರುದ್ಧ ಎಡಪಂಥೀಯ ಸಾಹಿತಿಗಳು ಆರಂಭಿಸಿರುವ ಪಠ್ಯ ವಾಪಸ್ ಅಭಿಯಾನ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ 6ಕ್ಕೂ ಹೆಚ್ಚು ಎಡಪಂಥೀಯ ಸಾಹಿತಿಗಳು ಪಠ್ಯ ವಾಪಸ್ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರಿಗೆ ತಮ್ಮ ಪಠ್ಯ ಕೈಬಿಡುವಂತೆ ಸಾಹಿತಿಗಳ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೇ ಇನ್ನೂ ಕೆಲವು ಸಾಹಿತಿಗಳು ಸರ್ಕಾರದ ಅಧೀನ ಪ್ರತಿಷ್ಠಾನಗಳಿಗೂ ರಾಜೀನಾಮೆ ನೀಡಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಕುವೆಂಪು ನಾಡಗೀತೆಯನ್ನು ಅಪಮಾನ ಮಾಡಿಲ್ಲ: ರೋಹಿತ್‌ ಚಕ್ರತೀರ್ಥ ಸ್ಪಷ್ಟನೆ

    ದೇವನೂರು ಮಹಾದೇವ, ಸರಜೂ ಕಾಟ್ಕರ್, ಎಸ್.ಜಿ. ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಚಂದ್ರಶೇಖರ್ ತಾಳ್ಯ, ಈರಪ್ಪ ಎಂ ಕಂಬಳಿ, ರೂಪಾ ಹಾಸನ, ಬೋಳುವಾರು ಮಹಮದ್ ಅವರು ಕೃತಿ ಬಳಸಲು ಅನುಮತಿ ನೀಡಿದನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು

    ಹಂಪಾ ನಾಗರಾಜಯ್ಯ, ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರೊ.ಕೆ.ಎಸ್. ಮಧುಸೂದನ್ ಒಂಬತ್ತನೇ ತರಗತಿ ಪಠ್ಯ ಪುಸ್ತಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಬೇಡಿಕೆ ಏನು?:
    ಪಠ್ಯದಿಂದ ಆರ್‌ಎಸ್‍ಎಸ್ ಸಂಸ್ಥಾಪಕ ಕೇಶವ್ ಹೆಡ್ಗೆವಾರ್ ಪಠ್ಯವನ್ನು ಕೈ ಬಿಡಬೇಕು. ಇದರ ಜೊತೆಗೆ ಪಠ್ಯದಲ್ಲಿ ಕೇಸರೀಕರಣ ತುಂಬುವುದನ್ನು ಕೈಬಿಡಬೇಕು. ಅಷ್ಟೇ ಅಲ್ಲದೇ ಸರ್ಕಾರ ಹೊಸ ಪಠ್ಯಪುಸ್ತಕ ಪರಿಷ್ಕರಣೆ ವರದಿ ತಿರಸ್ಕಾರ ಮಾಡಬೇಕು. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬೊಮ್ಮಾಯಿಗೆ ಪತ್ರ ಬರೆದ ಡಿಕೆಶಿ

    ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಪುಸ್ತಕವನ್ನು ಮುಂದುವರಿಸಬೇಕು. ಜೊತೆಗೆ ರೋಹಿತ್ ಚಕ್ರತೀರ್ಥರನ್ನು ಪರಿಷ್ಕರಣೆ ಸಮಿತಿಯಿಂದ ವಜಾ ಮಾಡಬೇಕು. ಲಂಕೇಶ್, ಸಾರಾ ಅಬೂಬುಕ್ಕರ್ ಸೇರಿದಂತೆ ಕೈಬಿಟ್ಟಿರುವ ಹಲವು ಸಾಹಿತಿಗಳ ಪಠ್ಯ ಮತ್ತೆ ಸೇರ್ಪಡೆ ಮಾಡಬೇಕು. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ವಜಾ? – ಸಚಿವರ ವರದಿ ಆಧರಿಸಿ ಕ್ರಮ ಕೈಗೊಳ್ತೇನೆಂದ ಸಿಎಂ

    BaraguruRamachandrappa

    ಎಡಪಂಥೀಯ ವಾದಿಗಳಿಂದ ವಿರೋಧ ವ್ಯಕ್ತವಾಗಿದ್ದರೆ ಬರಹಗಾರ ರೋಹಿತ್ ಚಕ್ರತೀರ್ಥ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಗೊಂಡಿದೆ. ಪಠ್ಯದಲ್ಲಿ ಸುಳ್ಳುಗಳನ್ನು ಸೇರಿಸಲಾಗಿತ್ತು. ಈ ಸುಳ್ಳುಗಳನ್ನು ತೆಗೆದಿದ್ದಕ್ಕೆ ರೋಹಿತ್ ಚಕ್ರತೀರ್ಥ ಅವರನ್ನು ಗುರಿ ಮಾಡಲಾಗಿದೆ. ಆರಂಭದಲ್ಲಿ ಪಠ್ಯ ತೆಗೆದಿದ್ದಕ್ಕೆ ವಿರೋಧ ಮಾಡಿದರು. ಬಳಿಕ ಕುವೆಂಪುಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು. ಇವುಗಳನ್ನು ಬರಗೂರು ರಾಮಚಂದ್ರಪ್ಪನವರ ಸಮಿತಿ ಮಾಡಿದೆ ಎಂದು ಗೊತ್ತಾದ ಬಳಿಕ ಈಗ ರೋಹಿತ್ ಚಕ್ರತೀರ್ಥ ಅವರನ್ನು ಗುರಿ ಮಾಡಿ ವೈಯಕ್ತಿಕ ಟೀಕೆ ಮಾಡಿ ತೇಜೋವಧೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

  • ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

    ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

    ಬೆಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯದ ಪರಿಷ್ಕರಣೆ ಕಾರ್ಯ ಮುಕ್ತಾಯವಾಗಿದೆ.

    ಇತಿಹಾಸದ ಒಂದು ಪಠ್ಯ ಪರಿಷ್ಕರಣೆಗೆ ಸರ್ಕಾರ ಸಮಿತಿ ನೇಮಿಸಿತ್ತು. ದ್ವಿತೀಯ ಇತಿಹಾಸದ ಹೊಸ ಧರ್ಮಗಳ ವಿವಾದ ಪಠ್ಯ ಪರಿಷ್ಕರಣೆಗೆ ಸಮಿತಿ ರಚನೆ ಮಾಡಿತ್ತು. ಒಂದು ಸಮುದಾಯದ ಭಾವನೆಗೆ ಧಕ್ಕೆ ಆಗಿದೆ ಎನ್ನುವ ಹಿನ್ನಲೆಯಲ್ಲಿ ಪಠ್ಯ ಪರಿಷ್ಕರಣೆ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥರಿಗೆ ಕೊಡಲಾಗಿತ್ತು. ಈಗ ಸಮಿತಿಯೂ ಪರಿಷ್ಕರಣೆ ಕೆಲಸ ಮುಕ್ತಾಯ ಮಾಡಿದೆ. ಶೀಘ್ರವೇ ಪರಿಷ್ಕರಣೆ ಪಠ್ಯವನ್ನು ಶಿಕ್ಷಣ ಇಲಾಖೆಗೆ ಸಮಿತಿ ನೀಡಲಿದೆ. ಸಮಿತಿ ವರದಿ ಒಪ್ಪಿಕೊಂಡ ಬಳಿಕ ಪರಿಷ್ಕೃತ ಪಠ್ಯ ಅಳವಡಿಕೆ ಆಗುತ್ತದೆ.

    TEXTBOOK

    ಏನು ಪರಿಷ್ಕರಣೆಯಾಗಿದೆ?
    ಪಿಯುಸಿ ಇತಿಹಾಸ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಅಧ್ಯಾಯದಲ್ಲಿ ಯಜ್ಞ, ಯಾಗದಿಗಳ ಬಗ್ಗೆ ವಿವಾದಿತ ಅಂಶ ಉಲ್ಲೇಖ ಮಾಡಲಾಗಿತ್ತು. ಯಜ್ಞ-ಯಾಗದಿಗಳಿಗೆ ಕೃಷಿಗೆ ಬಳಸುತ್ತಿದ್ದ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರು ಎಂಬ ಅಂಶ ಸೇರ್ಪಡೆ ಮಾಡಲಾಗಿತ್ತು. ಇದರ ಜೊತೆಗೆ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿರುವ ಅಂಶಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿತ್ತು. ಈಗ ಆಕ್ಷೇಪಾರ್ಹ ಅಂಶಗಳನ್ನು ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕೃತ ಪಠ್ಯದಿಂದ ಕೈಬಿಡಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

    TET EXAM 2

    ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಇತ್ತು. ಇದನ್ನ ಸರಿ ಮಾಡಲು ಅನೇಕ ಜನ ಶ್ರೀಗಳು ಒತ್ತಾಯ ಮಾಡಿದ್ದರು. ಈ ಹಿನ್ನಲೆಯಲ್ಲಿ ಈಗ ಈ ಒಂದು ಪಠ್ಯವನ್ನ ಪರಿಷ್ಕರಣೆ ಮಾಡಲಾಗಿದೆ. ರೋಹಿತ್ ಚಕ್ರತೀರ್ಥ ಸಮಿತಿಯೂ ಬ್ರಾಹ್ಮಣರಿಗೆ ಮಾಡಿದ್ದ ಅಪಮಾನವನ್ನು ಪಠ್ಯದಲ್ಲಿ ತೆಗೆಯಲಾಗಿದೆ.

    ಪಠ್ಯದಲ್ಲಿ ಏನಿತ್ತು?
    ಹೊಸ ಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು ಎಂಬ ಶೀರ್ಷಿಕೆಯಡಿ, ವೈದಿಕ ಧರ್ಮದಲ್ಲಿನ ಗೊಂದಲಗಳು ಹೊಸ ಧರ್ಮದ ಉದಯಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು.

    EXAM

    ಜನರು ಅಸಂತುಷ್ಟರಾದರು ಮತ್ತು ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸ ಧರ್ಮಗಳಲ್ಲಿ ಕಂಡುಕೊಂಡರು. ಪುರೋಹಿತ ವರ್ಗದ ಪರಮಾಧಿಕಾರ ನೀತಿ ಅನುಸರಿದರು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯಗಳನ್ನು ಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.

    ಪ್ರಾಣಿ ಬಲಿ, ಶಾಸ್ತ್ರ ವಿಧಿಗಳ ಒಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಯಿತು. ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ ಸಂಕೀರ್ಣವಾದವು, ಲೌಕಿಕ ಪಾಪ್ತಿಗಳಾದ, ಮಕ್ಕಳನ್ನು ಪಡೆಯಲು, ಯುದ್ಧದಲ್ಲಿ ಜಯಗಳಿಸಲು, ರೋಗ ಗುಣಪಡಿಸಲು ಮತ್ತು ಮುಕ್ತಿಯನ್ನು ಪಡೆಯಲು ಯಾಗ ಮತ್ತು ಶಾಸ್ತ್ರೋಕ್ತ ವಿಧಿಗಳನ್ನು ಮಾಡಲು ಸಲಹೆ ಮಾಡುತ್ತಿದ್ದರು. ವಿಚಾರವಾದಿಗಳು ಅವುಗಳನ್ನು ವ್ಯರ್ಥ ಎಂದು ಭಾವಿಸಿದರು. ಇದನ್ನೂ ಓದಿ: ರಾಜ್ಯಕ್ಕೆ ಮುಂಗಾರು ಪ್ರವೇಶ – ಮುಂದಿನ 3, 4 ದಿನ ಭಾರೀ ಮಳೆ ಸಾಧ್ಯತೆ

    ಮಂತ್ರಗಳ ಪಠಣ (ಸಂಸ್ಕೃತ ಶ್ಲೋಕಗಳು) ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯದ ಮೇಲೆ ಪುರೋಹಿತರ ಪ್ರಭುತ್ವವಿತ್ತು. ಜನಸಾಮಾನ್ಯರಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ. ಸ್ಪಷ್ಟ ತಿಳುವಳಿಕೆಯ ಕೊರತೆಯಿಂದ ಜನರು ಮಂತ್ರ ಪಠಣೆಯಲ್ಲಿ ನಂಬಿಕೆ ಕಳೆದುಕೊಂಡರು.

    ಜಾತಿ ಪದ್ಧತಿ ಸಾಮಾಜಿಕ ವ್ಯವಸ್ಥೆ ಜಟಿಲವಾಗಿತ್ತು. ಬೇರೆ ಬೇರೆ ಜಾತಿಗಳ ಮಧ್ಯೆ ಭೇದಭಾವವಿತ್ತು. ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು. ಸಮಾಜದಲ್ಲಿನ ಅಸಮಾನತೆಯಿಂದಾಗಿ ಜನರು ಅತೃಪ್ತರಾಗಿದ್ದರು. ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಇಂದು ಯೋಗಿ ಶಂಕುಸ್ಥಾಪನೆ