Tag: Rohit Shetty

  • Singham 3: ಅಜಯ್ ದೇವಗನ್ ಸಹೋದರಿಯಾಗಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ

    Singham 3: ಅಜಯ್ ದೇವಗನ್ ಸಹೋದರಿಯಾಗಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ

    ‘ಪಠಾಣ್’ (Pathaan) ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಸಿನಿಮಾ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ. ಸಿಂಗಮ್ 3ನಲ್ಲಿ (Singham 3) ಅಜಯ್ ದೇವಗನ್‌ಗೆ (Ajay Devgn) ಸಹೋದರಿಯಾಗಿ ನಟಿಸಲು ದೀಪಿಕಾ ಸಜ್ಜಾಗಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿ ಕಾಣಿಸಿಕೊಳ್ತಿದ್ದಾರೆ.

    ಶಾರುಖ್ ಜೊತೆ ‘ಪಠಾಣ್’ (Pathaan) ಸಿನಿಮಾದಲ್ಲಿ ನಟಿಸಿ ಗೆದ್ದು ಬೀಗಿದ ಮೇಲೆ ಕನ್ನಡದ ಬ್ಯೂಟಿ ದೀಪಿಕಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುತ್ತಿದೆ. ನಂಬರ್ ಒನ್ ನಾಯಕಿಯಾಗಿ ಕರಾವಳಿ ಕ್ವೀನ್ ಮಿಂಚ್ತಿದ್ದಾರೆ. ಹೀಗಿರುವಾಗ ನಿರ್ಮಾಪಕ ರೋಹಿತ್ ಶೆಟ್ಟಿ ನಿರ್ಮಾಣದ ‘ಸಿಂಗಮ್ 3’ನಲ್ಲಿ ನಟಿಸಲು ದೀಪಿಕಾ ಪಡುಕೋಣೆಗೆ ಬುಲಾವ್ ಬಂದಿದೆ.

    ಸಿಂಗಮ್ 3ನಲ್ಲಿ ದೀಪಿಕಾ ಲೇಡಿ ಸಿಂಗಮ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ ಕೇಳಿ ಥ್ರಿಲ್ ಆಗಿ, ಅಜಯ್ ದೇವಗನ್‌ಗೆ ಸಹೋದರಿಯಾಗಿ ಜೀವ ತುಂಬಲು ಓಕೆ ಎಂದಿದ್ದಾರೆ. 50 ದಿನಗಳ ಕಾಲ್‌ಶೀಟ್ ಕೂಡ ನೀಡಿದ್ದಾರೆ. ದೀಪಿಕಾ- ಅಜಯ್ ಇಬ್ಬರ ಪಾತ್ರಕ್ಕೂ ಬಹಳಷ್ಟು ಪ್ರಾಮುಖ್ಯತೆಯಿದ್ದು, ಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳೋದಕ್ಕೆ ಚಿತ್ರತಂಡ ಸಜ್ಜಾಗಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

    ಸದ್ಯ ಶಾರುಖ್ ಖಾನ್ (Sharukh Khan) ಜೊತೆ ಜವಾನ್, ಹೃತಿಕ್ ರೋಷನ್ ಜೊತೆ ಫೈಟರ್, ಪ್ರಭಾಸ್ ಜೊತೆ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ದೀಪಿಕಾ ಪಡುಕೋಣೆ ಕೈಯಲ್ಲಿವೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಬಾಲಿವುಡ್ (Bollywood) ನಿರ್ದೇಶಕ, ಕರ್ನಾಟಕ ಮೂಲದ ರೋಹಿತ್ ಶೆಟ್ಟಿ (Rohit Shetty) ಶೂಟಿಂಗ್ ವೇಳೆ ತೀವ್ರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹೈದರಾಬಾದ್‌ನಲ್ಲಿ (Hydrabad) ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ.

    ಕರಾವಳಿ ಮೂಲದ ಪ್ರತಿಭೆ ರೋಹಿತ್ ಶೆಟ್ಟಿ ಸದ್ಯ `ಇಂಡಿಯನ್ ಪೊಲೀಸ್ ಫೋರ್ಸ್’ (Indian Police Force) ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ (Ramoji Filmcity) `ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿ ಚಿತ್ರೀಕರಣ ನಡೆಯುತ್ತಿದೆ. ಈ ಸರಣಿಯ ಚೇಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು ಆಗ ರೋಹಿತ್ ಶೆಟ್ಟಿ ಅವರಿಗೆ ತೀವ್ರ ಏಟಾಗಿದೆ ಎನ್ನಲಾಗಿದೆ.

    ಅವಘಡದ ಬಳಿಕ ತಕ್ಷಣ ಅವರನ್ನು ಸಮೀಪದ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರೋಹಿತ್ ಶೆಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಟ್‌ ಆದಮೇಲೆ ಅವಳ ಬೆಲೆ ರೂಪೇಶ್‌ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

     

    View this post on Instagram

     

    A post shared by Rohit Shetty (@itsrohitshetty)

    ಅಂದಹಾಗೆ ಇದೇ ಸರಣಿಯ ಚಿತ್ರೀಕರಣ ವೇಳೆ ಈ ಮೊದಲು ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಗಾಯಗೊಂಡಿದ್ದರು. ಹಾಗೂ ನಟಿ ಶಿಲ್ಪಾ ಶೆಟ್ಟಿ ಕಾಲಿಗೆ ಏಟು ಮಾಡಿಕೊಂಡಿದ್ದರು. ಇದೀಗ ರೋಹಿತ್ ಆಸ್ಪತ್ರೆ ಸೇರಿದ್ದಾರೆ. ಅಂದಹಾಗೆ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಸುಮಾರು 20 ಕೋಟಿಗೂ ಅಧಿಕ ಖರ್ಚು ಮಾಡಿ ಆ್ಯಕ್ಷನ್ ದೃಶ್ಯ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸರಣಿಯ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯ ಮತ್ತು ಕಾರ್ ಚೇಸಿಂಗ್ ಸೀಕ್ವೆನ್ಸ್ ಶೂಟಿಂಗ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಣ್ವೀರ್ ಸಿಂಗ್, ದೀಪಿಕಾ ಮುಂಬೈ ಬಿಡಲು ‘ಸರ್ಕಸ್’ ಸಿನಿಮಾ ಸೋಲು ಕಾರಣ: ಹೀಗೊಂದು ಚರ್ಚೆ

    ರಣ್ವೀರ್ ಸಿಂಗ್, ದೀಪಿಕಾ ಮುಂಬೈ ಬಿಡಲು ‘ಸರ್ಕಸ್’ ಸಿನಿಮಾ ಸೋಲು ಕಾರಣ: ಹೀಗೊಂದು ಚರ್ಚೆ

    ಬಾಲಿವುಡ್ ಖ್ಯಾತ ನಟ ರಣ್ವೀರ್ ಸಿಂಗ್ (Ranveer Singh) ನಟನೆಯ ‘ಸರ್ಕಸ್’ (Circus) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿತ್ರತಂಡ ಅಂದುಕೊಂಡಂತೆ ಸಿನಿಮಾ ಗೆಲ್ಲಲಿಲ್ಲ ಎನ್ನುವ ಮಾತು ಸ್ವತಃ ಬಾಲಿವುಡ್ ಅಂಗಳದಿಂದಲೇ ಕೇಳಿ ಬರುತ್ತಿದೆ. ಈ ಸೋಲನ್ನು ಅರಗಿಸಿಕೊಳ್ಳಲಾಗದೇ ನಟ ರಣ್ವೀರ್ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಜೊತೆ ಮುಂಬೈ ತೊರೆದಿದ್ದಾರೆ ಎನ್ನುವುದು ಸದ್ಯಕ್ಕಿರುವ ಸುದ್ದಿ.

    ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ದೋಣಿ ಹತ್ತಿರ ಹೊರಟಿರುವ ಫೋಟೋಗಳು ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದ್ದು, ಸೋಲಿನ ಕಾರಣದಿಂದಾಗಿಯೇ ಪತ್ನಿಯೊಂದಿಗೆ ರಣವೀರ್ ಮುಂಬೈ ತೊರೆದಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಸರ್ಕಸ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹೊಂದಲಾಗಿತ್ತು. ಸೋಲರಿಯದ ಸರದಾರ ಎಂದೇ ಖ್ಯಾತರಾಗಿರುವ ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾವಾಗಿದ್ದು, ಈ ಸಿನಿಮಾ ಕೂಡ ಭರ್ಜರಿ ಗೆಲ್ಲುತ್ತದೆ ಎನ್ನುವ ಮಾತಿತ್ತು. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ

    ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ಕಾರಣದಿಂದಾಗಿಯೇ ರೋಹಿತ್ ಶೆಟ್ಟಿ (Rohit Shetty) , ಬಾಲಿವುಡ್ ತೆಗಳುವವರು ವಿರುದ್ಧ ಗುಡುಗಿದ್ದರು. ಬಾಲಿವುಡ್ ಗೆ ಒಂದು ವರ್ಷ ಹಿನ್ನೆಡೆಯಾಗಿರಬಹುದು. ಹಾಗಂತ ಸೋತಿದೆ ಎಂದು ಹೇಳಬೇಡಿ. ಅದು ಮತ್ತೆ ಎದ್ದೇಳುತ್ತದೆ ಎಂದೂ ಮಾತನಾಡಿದ್ದರು. ಈ ಮಾತಿಗೂ ಕೂಡ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ ಅನ್ನು ಗೆಲ್ಲಿಸುವ ಸಿನಿಮಾ ಮಾಡಿ ಎಂದು ಸಲಹೆ ಕೂಡ ಹಲವರು ನೀಡಿದ್ದಾರೆ.

    ರಣ್ವೀರ್ ಸಿಂಗ್ ಸಿನಿಮಾಗೆ ದೀಪಿಕಾ ಪಡುಕೋಣೆ ಮುಳುವಾದರಾ ಎನ್ನುವ ಚರ್ಚೆ ಕೂಡ ನಡೆದಿದೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿ, ಹಾಡಿಗೆ ಡಾನ್ಸ್ ಮಾಡಿದ್ದರು. ಹಾಗಾಗಿ ಬೈಕಾಟ್ ಪಠಾಣ್ ಅಭಿಯಾನ ಶುರುವಾಗಿದೆ. ದೀಪಿಕಾ ನಟನೆಯ ಸಿನಿಮಾ ನೋಡಬೇಡಿ ಎಂದು ಹಲವರು ಬರೆದುಕೊಂಡಿದ್ದರು. ಈ ಬಿಸಿ ಏನಾದರೂ ದೀಪಿಕಾ ಪತಿಗೂ ತಟ್ಟಿದೆಯಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಖಾನ್ ಸಿನಿಮಾಗಳನ್ನು ಮೀರಿಸಿ ಗೆಲುವಿನ ನಗೆ ಬೀರಿದ ಅಕ್ಷಯ್ ಕುಮಾರ್

    ಖಾನ್ ಸಿನಿಮಾಗಳನ್ನು ಮೀರಿಸಿ ಗೆಲುವಿನ ನಗೆ ಬೀರಿದ ಅಕ್ಷಯ್ ಕುಮಾರ್

    ಮುಂಬೈ: ಬಾಲಿವುಡ್ ಎಂದರೆ ನಮಗೆ ನೆನಪಾಗುವುದು ಖಾನ್ ಗಳ ಸಿನಿಮಾ. ಶಾರುಖ್, ಸಲ್ಮಾನ್ ಮತ್ತು ಅಮಿರ್ ಸಿನಿಮಾಗಳ ಬಾಕ್ಸ್ ಆಫೀಸ್ ನಲ್ಲಿ ಯಾವಾಗಲೂ ಸದ್ದು ಮಾಡುತ್ತವೆ. ಆದರೆ ಇಂದು ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.

     

    View this post on Instagra

    wrap;”>A post shared by Akshay Kumar (@akshaykumar

    ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಸಿದ್ಧವಾಗಿರುವ ‘ಸೂರ್ಯವಂಶಿ’ ಸಿನಿಮಾ ನ.5ರಂದು ರಿಲೀಸ್ ಆಗಿದ್ದು, ರಿಲೀಸ್ ಆದ 9 ದಿನಗಳಲ್ಲಿ ವಿಶ್ವಾದ್ಯಂತ 209 ಕೋಟಿ ರೂ. ಆದಾಯವನ್ನು ಗಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 164.10 ಕೋಟಿ ರೂ. ಹಾಗೂ ವಿದೇಶಿ ಬಾಕ್ಸ್ ಆಫೀಸ್‍ನಲ್ಲಿ 45.40 ಕೋಟಿ ರೂ. ಆದಾಯವನ್ನು ಗಳಿಸಿದೆ. ಈ ಹಿನ್ನೆಲೆ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದ್ದು, ಇದನ್ನು ನೋಡಿದ ಅಕ್ಕಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಿ ವಾರ ಕಳೆದರು ಉತ್ತಮ ಪ್ರದರ್ಶನವನ್ನು ಕಾಣುತ್ತಿದ್ದು, ಈ ಹಿಂದೆ ಅಕ್ಷಯ್ ನಟನೆಯ ‘ಬೆಲ್ ಬಾಟಂ’ ಸಿನಿಮಾ ನಿರೀಕ್ಷೆ ಮಟ್ಟವನ್ನು ತಲುಪಿರಲಿಲ್ಲ. ಆದರೆ ಈ ಸಿನಿಮಾದ ಕಲೆಕ್ಷನ್ ನೋಡಿ ಅಕ್ಕಿ ಗೆಲುವಿನ ನಗೆಯನ್ನು ಬೀರಿದ್ದಾರೆ.

    ಕೊರೊನಾ ಸಮಸ್ಯೆ ಇಲ್ಲದೇ ಹೋಗಿದ್ದರೆ ಈ ಹಿಂದೆಯೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಈ ಸಿನಿಮಾವನ್ನು ಓಟಿಟಿಗೆ ಬಿಡುವಂತೆ ಕೆಲವರು ಆಫರ್ ಸಹ ಮಾಡಿದ್ದರು. ಆದರೆ ನಿರ್ಮಾಪಕರು ಇದಕ್ಕೆ ಒಪ್ಪಿಕೊಳ್ಳದೆ, ಚಿತ್ರಮಂದಿರದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಿದ್ದು, ಈಗ ತಮ್ಮ ನಿರ್ಧಾರಕ್ಕೆ ಶಭಾಷ್ ಎನ್ನುವ ಮಟ್ಟಿಗೆ ‘ಸೂರ್ಯವಂಶಿ’ ಸಿನಿಮಾ ಯಶಸ್ಸನ್ನು ಕಾಣುತ್ತಿದೆ.

     

    View this post on Instagram

     

    A post shared by Akshay Kumar (@akshaykumar)

    ಅದು ಅಲ್ಲದೇ ಈ ಸಿನಿಮಾವನ್ನು ನೋಡಲು ಹಲವು ಕಾರಣಗಳಿದ್ದು, ಅವುಗಳು, ಹಲವು ದಿನಗಳು ಬಳಿಕ ಚಿತ್ರಮಂದಿರದಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ರಿಲೀಸ್ ಮಾಡಲಾಗಿದ್ದು, ಈ ಪರಿಣಾಮ ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಅಕ್ಷಯ್ ಮತ್ತು ಕತ್ರಿನಾ ಕೈಫ್ ಕಾಂಬಿನೇಷನ್ ಹೇಗೆ ಇರುತ್ತೆ ಎಂಬ ಕುತೂಹಲದಿಂದಲೂ ಈ ಸಿನಿಮಾ ಯಶಸ್ಸು ಆಗಿದೆ. ಇವರಿಬ್ಬರನ್ನು ತೆರೆ ಮೇಲೆ ನೋಡಿ ಫ್ಯಾನ್ಸ್ ಗಳು ಸಹ ಫಿದಾ ಆಗಿದ್ದಾರೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯುಟ್ಯೂಬ್ ಅಡ್ಮಿನ್ ಅರೆಸ್ಟ್

    ಈ ಸಿನಿಮಾಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಹಸ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿದ್ದು, ಈ ಎಲ್ಲ ಕಾರಣಗಳಿಂದ ‘ಸೂರ್ಯವಂಶಿ” ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ.

  • ಕೊರೊನಾ ಕೇರ್ ಸೆಂಟರ್ ತೆರೆದ ನಿರ್ದೇಶಕ ರೋಹಿತ್ ಶೆಟ್ಟಿ

    ಕೊರೊನಾ ಕೇರ್ ಸೆಂಟರ್ ತೆರೆದ ನಿರ್ದೇಶಕ ರೋಹಿತ್ ಶೆಟ್ಟಿ

    ನವದೆಹಲಿ: ಬಾಲಿವುಡ್ ಸಿನಿಮಾ ನಿರ್ದೇಶಕ ರೋಹಿತ್ ಶೆಟ್ಟಿ ಕೊರೊನಾ ರೋಗಿಗಳ ಆರೈಕೆ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

    ದೇಶವನ್ನು ಕಾಡುತ್ತಿರುವ ಕೊರೊನಾ 2ನೇ ಅಲೆಗೆ ಬೆಡ್ ಸಿಗದೆ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ದುಸ್ಥಿತಿ ಸಂದರ್ಭದಲ್ಲಿ ರೋಹಿತ್ ಶೆಟ್ಟಿ ನೆರವಿಗೆ ಧಾವಿಸಿದ್ದಾರೆ. ನವದೆಹಲಿಯಲ್ಲಿ ಆಕ್ಸಿಜನ್ ಸಹಿತ 25 ಬೆಡ್‍ಗಳ ಕೊರೊನಾ ಸೆಂಟರ್ ಸ್ಥಾಪಿಸಿದ್ದಾರೆ. ಆಸ್ಪತ್ರೆ ಬಿಲ್ ಕಟ್ಟಲಾಗದ ಬಡ ರೋಗಿಗಳಿಗೆ ಇಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ಮಾಡಲಾಗಿದೆ.

    ರೋಹಿತ್ ಶೆಟ್ಟಿಯವರು ಈ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಹಿತ್ ಅವರಂತೆ ಬಾಲಿವುಡ್ ಅನೇಕ ತಾರೆಯರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಅಕ್ಷಯ್‍ಕುಮಾರ್, ಸಲ್ಮಾನ್‍ಖಾನ್, ಸೋನು ಸೂದ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿಂದತೆ ಹಲವರು ಜಾಗೃತಿ ಮೂಡಿಸುವುದು ಜೊತೆಗೆ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

  • ಕೊರೊನಾ ವಾರಿಯರ್ಸ್‍ಗಾಗಿ 8 ಐಶಾರಾಮಿ ಹೋಟೆಲ್‍ಗಳನ್ನೇ ಬಿಟ್ಟುಕೊಟ್ಟ ರೋಹಿತ್ ಶೆಟ್ಟಿ

    ಕೊರೊನಾ ವಾರಿಯರ್ಸ್‍ಗಾಗಿ 8 ಐಶಾರಾಮಿ ಹೋಟೆಲ್‍ಗಳನ್ನೇ ಬಿಟ್ಟುಕೊಟ್ಟ ರೋಹಿತ್ ಶೆಟ್ಟಿ

    ಮುಂಬೈ: ಕೊರೊನಾ ವೈರಸ್ ಹಾವಳಿಗೆ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಲಾಕ್‍ಡೌನ್ ಅಂತ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಮಂದಿ ಮಾತ್ರ ಕೊರೊನಾ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಸೆಲೆಬ್ರಿಟಿಗಳು ಆರೋಗ್ಯ ಯೋಧರ ಸಹಾಯಕ್ಕೆ ದೇಣಿಗೆ ನೀಡಿದ್ದಾರೆ. ಹೀಗೆ ಕೊರೊನಾ ಯೋಧರಿಗೆ ನೆರವಿಗೆ ಮುಂದೆ ಬಂದವರ ಪಟ್ಟಿಗೆ ಬಾಲಿವುಡ್‍ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಈಗ ಸೇರಿಕೊಂಡಿದ್ದಾರೆ.

    ಹೌದು. ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು, ಆರೋಗ್ಯ ಕಾರ್ಯಕರ್ತರು ಈ ಮಹಾಮಾರಿ ಹರಡಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಜೀವವನ್ನು ಪಣಕ್ಕಿಟ್ಟು ದೇಶ ಸೇವೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಇಂತಹ ಕಷ್ಟದ ಸಮಯದಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಪೊಲೀಸರ ಸಹಾಯಕ್ಕೆ ರೋಹಿತ್ ಶೆಟ್ಟಿ ಧಾವಿಸಿದ್ದಾರೆ. ಪೊಲೀಸರಿಗಾಗಿ ತಮ್ಮ 8 ಐಶಾರಾಮಿ ಹೋಟೆಲ್ ಅನ್ನೇ ರೋಹಿತ್ ಬಿಟ್ಟುಕೊಟ್ಟಿದ್ದಾರೆ. ಹೆಚ್ಚಾಗಿ ರೋಹಿತ್ ಶೆಟ್ಟಿ ಪೊಲೀಸರ ಶೌರ್ಯ, ಸಾಹಸಭರಿತ ಕತೆಗಳನ್ನೇ ಸಿನಿಮಾ ಮಾಡುತ್ತಾರೆ. ಪೊಲೀಸರ ಮೇಲಿರುವ ವಿಶೇಷ ಪ್ರೀತಿ, ಗೌರವದಿಂದ ಇಂದು ಪೊಲೀಸರ ಸಹಾಯಕ್ಕೆ ಧಾವಿಸಿದ್ದಾರೆ.

    https://twitter.com/iaRohitShetty/status/1252640598693199872

    ಮುಂಬೈನಲ್ಲಿನ ತಮ್ಮ 8 ಹೋಟೆಲ್‍ಗಳನ್ನು ಪೊಲೀಸರಿಗಾಗಿ ಉಚಿತವಾಗಿ ರೋಹಿತ್ ಬಿಟ್ಟುಕೊಟ್ಟಿದ್ದಾರೆ. ಪೊಲೀಸರಿಗಾಗಿ ಈ ಹೋಟೆಲ್‍ಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೇ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಮುಂಬೈ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ರೋಹಿತ್ ಶೆಟ್ಟಿ ನೆರವಿಗೆ ಧನ್ಯವಾದ ಹೇಳಿದ್ದಾರೆ.

    ಈ ಹಿಂದೆ ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ಪಂಚತಾರಾ ಹೋಟೆಲ್ ಅನ್ನು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ ಬಿಟ್ಟುಕೊಟ್ಟಿದ್ದರು. ಹಾಗೆಯೇ ಬಿಟೌನ್ ಕಿಂಗ್‍ಖಾನ್ ಶಾರುಖ್ ಖಾನ್ ತಮ್ಮ ನಾಲ್ಕು ಅಂತಸ್ತಿನ ಕಚೇರಿಯನ್ನು ಕೊರೊನಾ ರೋಗಿಗಳ ಚಿಕಿತ್ಸೆಗೆ ಬಿಟ್ಟುಕೊಟ್ಟಿದ್ದರು. ಈಗ ರೋಹಿತ್ ಶೆಟ್ಟಿ ಅವರು ಪೊಲೀಸರಿಗಾಗಿ 8 ಹೋಟೆಲ್‍ಗಳನ್ನು ಬಿಟ್ಟುಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಹಾಮಾರಿ ವಿರುದ್ಧದ ಹೋರಾಟಕ್ಕೆ ದೇಶದ ಕೊರೊನಾ ವಾರಿಯರ್ಸ್ ಜೊತೆ ಕೈಜೋಡಿಸಿದ್ದಾರೆ.

  • ಶೂಟಿಂಗ್ ಸೆಟ್‍ನಲ್ಲೇ ಹೊಡೆದಾಡಿಕೊಂಡ ಅಕ್ಷಯ್- ರೋಹಿತ್ ಶೆಟ್ಟಿ

    ಶೂಟಿಂಗ್ ಸೆಟ್‍ನಲ್ಲೇ ಹೊಡೆದಾಡಿಕೊಂಡ ಅಕ್ಷಯ್- ರೋಹಿತ್ ಶೆಟ್ಟಿ

    ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಶೂಟಿಂಗ್ ಸೆಟ್‍ನಲ್ಲಿ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ಇವರಿಬ್ಬರ ಜಗಳವನ್ನು ಬಿಡಿಸಲು ಪೊಲೀಸರು ಹಾಗೂ ಕರಣ್ ಜೋಹರ್ ಸ್ಥಳಕ್ಕೆ ಭೇಟಿ ನೀಡಿದ್ದರು.

    ವೈರಲ್ ಆಗಿರುವ ವಿಡಿಯೋದಲ್ಲಿ ಅಕ್ಷಯ್ ಹಾಗೂ ರೋಹಿತ್ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಸ್ವತಃ ಪೊಲೀಸರೇ ಸ್ಥಳಕ್ಕೆ ಭೇಟಿ ನೀಡಿ ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ಈ ವಿಡಿಯೋವನ್ನು ಅಕ್ಷಯ್ ಕುಮಾರ್ ಅವರು ಪೋಸ್ಟ್ ಮಾಡಿದ್ದು, ಈ ವಿಡಿಯೋ ಹಿಂದಿನ ಸತ್ಯಾಂಶ ಬೇರೆ ಇದೆ.

    ವೆಬ್‌ಸೈಟ್‌ಯೊಂದರಲ್ಲಿ, ‘ಸೂರ್ಯವಂಶಿ’ ಚಿತ್ರದ ಸೆಟ್‍ನಲ್ಲಿ ಅಕ್ಷಯ್ ಹಾಗೂ ರೋಹಿತ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕರಣ್ ಜೋಹರ್ ಅವರ ಜಗಳವನ್ನು ಬಿಡಿಸಿದ್ದಾರೆ ಎಂದು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ಸಂಪೂರ್ಣ ಫೇಕ್ ಆಗಿದ್ದು, ಇದನ್ನು ನೋಡಿದ ಅಕ್ಷಯ್ ತಮಾಷೆಗಾಗಿ ರೋಹಿತ್ ಜೊತೆ ಜಗಳವಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    https://twitter.com/akshaykumar/status/1194155278960336896

    ಈ ವಿಡಿಯೋ ನಟಿ ಕತ್ರಿನಾ ಕೈಫ್ ಕೂಡ ಸಾಥ್ ನೀಡಿದ್ದಾರೆ. ಕತ್ರಿನಾ ಅವರೇ ಮೊದಲು ರೋಹಿತ್ ಹಾಗೂ ಅಕ್ಷಯ್ ಅವರ ಜಗಳವಾಡುತ್ತಿರುವ ವಿಡಿಯೋವನ್ನು ತೋರಿಸಿದ್ದರು. ಅಕ್ಷಯ್ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ, “ಬ್ರೇಕಿಂಗ್ ನ್ಯೂಸ್- ಈ ಜಗಳ ನೋಡಿದರೆ ನಿಮ್ಮ ದಿನ ಸರಿಯಾಗುತ್ತೆ” ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/karanjohar/status/1194164205932421120

    ಸೂರ್ಯವಂಶಿ ಚಿತ್ರವನ್ನು ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿ ಸೇರಿ ನಿರ್ಮಿಸುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ ಹಾಗೂ ರೋಹಿತ್ ಶೆಟ್ಟಿ ಪಿಕ್ಚರ್ಸ್ ಬ್ಯಾನರ್ ಅಡಿ ತಯಾರಾದ ಈ ಚಿತ್ರ ಮುಂದಿನ ವರ್ಷ ಮಾರ್ಚ್ 27ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ದೃಶ್ಯವೊಂದರಲ್ಲಿ ನಟ ರಣ್‍ವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಕಾಣಿಸಿಕೊಳ್ಳುತ್ತಿದ್ದಾರೆ.

  • ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಜೊತೆ ತುಳು ಸಿನಿಮಾ ಮಾಡ್ತಾರಾ ಸುನೀಲ್ ಶೆಟ್ಟಿ?

    ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಜೊತೆ ತುಳು ಸಿನಿಮಾ ಮಾಡ್ತಾರಾ ಸುನೀಲ್ ಶೆಟ್ಟಿ?

    ಮುಂಬೈ: ಮಂಗಳೂರು ಸೀಮೆಯ ಕರಾವಳಿ ಪ್ರದೇಶದಿಂದ ಹೋದವರು ಪ್ರಸಿದ್ಧ ನಟ ನಟಿಯರಾಗಿ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದಾರೆ. ಅಂಥ ಕರಾವಳಿಗರ ಸಾಲಿನಲ್ಲಿ ಐಶ್ವರ್ಯಾ ರೈ, ಸುನೀಲ್ ಶಿಟ್ಟಿ, ಶಿಲ್ಪಾ ಶೆಟ್ಟಿ ಮುಂತಾದವರು ಬಾಲಿವುಡ್ ಐಕಾನ್‍ಗಳಾಗಿ ಮಿಂಚುತ್ತಿದ್ದಾರೆ. ಇವರೆಲ್ಲರೂ ಸೇರಿಕೊಂಡು ತುಳು ಸಿನಿಮಾವೊಂದನ್ನು ಮಾಡಿದರೆ ತುಳುವರ ಪಾಲಿಗದು ಹಬ್ಬ. ಇಂಥಾದ್ದೊಂದು ಹಬ್ಬ ಶುರುವಾಗೋ ಸೂಚನೆಯನ್ನು ಸುನೀಲ್ ಶೆಟ್ಟಿ ರವಾನಿಸಿದ್ದಾರೆ!

    ಬಾಲಿವುಡ್ ನಲ್ಲಿ ಸ್ಟಾರ್ ಆಗಿದ್ದರೂ ಕೂಡಾ ತುಳುನಾಡ ಸಂಸ್ಕೃತಿ, ತುಳು ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿರುವವರು ಸುನೀಲ್ ಶೆಟ್ಟಿ. ಕರಾವಳಿಯ ಕಾರ್ಯಕ್ರಮಗಳಿಗೆಲ್ಲ ಓಡೋಡಿ ಬಂದು ಪಾಲ್ಗೊಳ್ಳುವ ಸುನೀಲ್ ಉಡುಪಿಯಲ್ಲಿ ನಡೆದ ಬಂಟರ ಕಾರ್ಯಕ್ರಮಕ್ಕೂ ಹಾಜರಾಗಿದ್ದರು. ಇದರಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಆ ಸಮುದಾಯದ ಸ್ಯಾಂಡಲ್‍ವುಡ್ ನಟ ನಟಿಯರೂ ಪಾಲ್ಗೊಂಡಿದ್ದರು.

    ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರ ಹೆಸರು ಹೇಳಿಯೇ ಅಭಿನಂದಿಸಿದ ಸುನೀಲ್ ತುಳುನಾಡು ತಮ್ಮ ತಾಯಿ ನೆಲ. ತುಳು ಭಾಷೆ ತಮ್ಮ ಶಕ್ತಿ ಅಂದಿದ್ದಾರೆ. ಇದೇ ಸಂದರ್ಭದಲ್ಲಿ ತಾವು ಕನ್ನಡ ಚಿತ್ರದಲ್ಲಿ ನಟಿಸುತ್ತಿರೋ ವಿಚಾರವನ್ನೂ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಿವುಡ್ ಸ್ನೇಹಿತರು ಮತ್ತು ತುಳುನಾಡಿನವರಾದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಮತ್ತು ರೋಹಿತ್ ಶೆಟ್ಟಿ ಮುಂತಾದವರು ಜೊತೆಗೂಡಿ ತುಳು ಚಿತ್ರವೊಂದನ್ನು ಮಾಡುವ ಆಲೋಚನೆ ಇರೋದಾಗಿಯೂ ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರ್ತ್ ಡೇಗೂ ಮುನ್ನವೇ ರಣ್‍ವೀರ್ ಗೆ ಸಿಕ್ತು ಸೆಕ್ಸಿ ಗಿಫ್ಟ್

    ಬರ್ತ್ ಡೇಗೂ ಮುನ್ನವೇ ರಣ್‍ವೀರ್ ಗೆ ಸಿಕ್ತು ಸೆಕ್ಸಿ ಗಿಫ್ಟ್

    ಮುಂಬೈ: ಬಾಲಿವುಡ್‍ನ ಮೋಸ್ಟ್ ಸೆಕ್ಸಿ ಮ್ಯಾನ್ ಅಂತಾ ಕರೆಸಿಕೊಳ್ಳುವ ನಟ ರಣ್‍ವೀರ್ ಸಿಂಗ್ ಇದೇ ತಿಂಗಳು ಜುಲೈ 6ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈಗಾಗಲೇ ರಣ್‍ವೀರ್ ಆಪ್ತರು ಮತ್ತು ಅಭಿಮಾನಿಗಳು ಹುಟ್ಟು ಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.

    ಬರ್ತ್ ಡೇ ಮುನ್ನವೇ ರಣ್‍ವೀರ್ ಸಿಂಗ್ ಅತ್ಯಂತ ಅಮೂಲ್ಯವಾದ ಗಿಫ್ಟ್ ಸಿಕ್ಕಿದೆ. ಹೌದು, ಈ ಬಗ್ಗೆ ಖುದ್ದು ರಣ್‍ವೀರ್ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿ ಬರೆದುಕೊಂಡಿದ್ದಾರೆ. ನಿರ್ದೇಶಕ ರೋಹಿತ್ ಶೆಟ್ಟಿ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ದುಬಾರಿ ವಾಚ್ ಬರ್ತ್ ಡೇ ಗಿಫ್ಟ್ ಆಗಿ ನೀಡಿದ್ದಾರೆ.

    ರಣ್‍ವೀರ್ ಸಿಂಗ್ ಪದ್ಮಾವತ್ ಚಿತ್ರದ ಬಳಿಕ ಸಿಂಬಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿಂಬಾ ಸಿನಿಮಾ ರೋಹಿತ್ ಶೆಟ್ಟಿ ಮತ್ತು ಕರಣ್ ಜೋಹರ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಸಿಂಬಾ ಚಿತ್ರೀಕರಣ ಆರಂಭವಾಗಿದ್ದು, ರೋಹಿತ್ ಶೆಟ್ಟಿ ತನ್ನ ಸಿನಿಮಾದ ನಟನಾದ ರಣ್‍ವೀರ್ ಸಿಂಗ್‍ಗೆ ಎಲ್ಲರಿಗಿಂತಲೂ ಮೊದಲೇ ಗಿಫ್ಟ್ ನೀಡುವುದು ಮೂಲಕ ಸರ್ಪ್ರೈಸ್ ನೀಡಿದ್ದಾರೆ.

    ಇದು ನನ್ನ ಬಾಸ್ ಕಡೆಯಿಂದ ಸಿಕ್ಕ ಬರ್ತ್ ಡೇ ಗಿಫ್ಟ್. ಎಲ್ಲರಿಗಿಂತ ಮೊದಲ ವಿಶ್ ಮಾಡಿದ್ದಾರೆ. ನನ್ನ ಬಳಿಯಿರುವ ವಾಚ್‍ಗಳಲ್ಲಿ ಇದು ಸೆಕ್ಸಿಯಾಗಿದೆ ಅಂತಾ ರಣ್‍ವೀರ್ ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸಿಂಬಾ ಸಿನಿಮಾದಲ್ಲಿ ರಣ್‍ವೀರ್‍ಗೆ ಜೊತೆಯಾಗಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ಖಾನ್ ನಟಿಸುತ್ತಿದ್ದಾರೆ. ಇತ್ತ ರಣ್‍ವೀರ್ ಗಲ್ಲಿ ಭಾಯ್ ಸಿನಿಮಾದ ಚಿತ್ರೀಕರಣದಲ್ಲಿಯೂ ಭಾಗಿಯಾಗುತ್ತಿದ್ದಾರೆ.