ಹಾಸನ/ ಚಾಮರಾಜನಗರ/ ಚಿಕ್ಕಬಳ್ಳಾಪುರ: ಭಾರತ – ಪಾಕಿಸ್ತಾನ (Ind vs Pak) ನಡುವಿನ ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಬಾಕಿಯಿದೆ. ಬ್ಲಾಕ್‌ಬಸ್ಟರ್ ಸಂಡೇ (ಇಂದು)ಯಂದು ಮಧ್ಯಾಹ್ನ 2:30ರ ವೇಳೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಶುರುವಾಗಲಿದೆ. ಈ ರಣರೋಚಕ ಕದನಕ್ಕೆ ಕಾದು ಕುಳಿತಿರುವ ರಾಜ್ಯದ ಕ್ರೀಡಾ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇ ಪೂಜೆ ಹಮ್ಮಿಕೊಂಡಿದ್ದರೆ, ಇನ್ನೂ ಕೆಲವರು ತಾವಿದ್ದಲ್ಲೇ ಗೆದ್ದು ಬಾ ಭಾರತ, ಆಲ್ ದಿ ಬೆಸ್ಟ್ ಟೀಂ ಇಂಡಿಯಾ ಅಂತ ಶುಭ ಹಾರೈಸಿದ್ದಾರೆ. ಯಾವ ಜಿಲ್ಲೆಯಲ್ಲಿ ಏನಾಗಿದೆ ಎಂಬುದನ್ನು ಮುಂದೆ ನೋಡೋಣ…
ಹಾಸನ
ಇಂದು ಭಾರತ-ಪಾಕಿಸ್ತಾನ ತಂಡಗಳ ನಡುವೆ ದುಬೈನಲ್ಲಿ ಹೈವೋಲ್ಟೇಜ್ ಪಂದ್ಯವಿದ್ದು ಟೀಂ ಇಂಡಿಯಾ ಗೆದ್ದೆ ಗೆಲ್ಲುತ್ತದೆ ಎಂದು ಹಾಸನದ ಕ್ರಿಕೆಟ್ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯವೆಂದರೆ ಯುದ್ಧದ ರೀತಿ ಇರುತ್ತದೆ. ಏನೇ ಆಗಲಿ ಭಾರತ ಗೆಲ್ಲಲಿ ಅಂತ ತಂಡಕ್ಕೆ ಶುಭಕೋರಿದ್ದಾರೆ.
ಚಾಮರಾಜನಗರ
ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗೆ ಚಾಮರಾಜನಗರದಲ್ಲಿ ಕ್ರಿಕೆಟ್ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರದ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಾರತ ಜಯಗಳಿಸಲಿ ಎಂದು ಸಂಕಲ್ಪ ಮಾಡಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರ ಹೆಸರಿನಲ್ಲಿ ಅರ್ಚನೆ ಸಹ ಮಾಡಿಸಿದ್ದಾರೆ. ದೇವರ ಪಾದದ ಬಳಿ ಆಟಗಾರರ ಹೆಸರುಳ್ಳ ಕಾರ್ಡ್ ಇಟ್ಟು ಪೂಜೆ ಮಾಡಿಸಿದ್ದಾರೆ.
ಚಿಕ್ಕಬಳ್ಳಾಪುರ
ಬದ್ಧವೈರಿಗಳ ಕಾಳಗದಲ್ಲಿ ಭಾರತ ಗೆದ್ದು ಬೀಗಲಿ ಅಂತ ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಪುಟಾಣಿ ಕ್ರಿಕೆಟಿಗರು ಶುಭ ಕೋರಿದ್ದಾರೆ.
ದಾವಣಗೆರೆ
ಇಂಡೋ ಪಾಕ್ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಜಯಿಯಾಗಲಿ, ಟ್ರೋಫಿಯನ್ನೂ ಗೆಲ್ಲಲ್ಲಿ. 2017ರ ಸೋಲಿನ ಸೇಡು ತೀರಿಸಿಕೊಳ್ಳಲಿ ಅಂತ ದಾವಣಗೆರೆಯ ಕ್ರೀಡಾಭಿಮಾನಿಗಳು ಶುಭಕೋರಿದ್ದಾರೆ. ಭಾರತ ಖಂಡಿತಾ 2017ರ ಸೇಡು ತೀರಿಸಿಕೊಳ್ಳಲಿದೆ. ನಮ್ಮ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬೌಲಿಂಗ್ ಲೈನ್ ಆಪ್, ಬ್ಯಾಂಟಿಂಗ್ ಹಾಗೂ ಫಿಲ್ಡಿಂಗ್ ಲೈನ್ನಪ್ ಕೂಡ ಉತ್ತಮವಾಗಿದೆ ಎಂದು ಕ್ರಿಕೇಟ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಧಾರವಾಡ
ವಿದ್ಯಾಕಾಶಿ ಧಾರವಾಡದಲ್ಲೂ ಭಾರತದ ಕ್ರಿಕೆಟ್ ತಂಡಕ್ಕೆ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಧಾರವಾಡ ಕರ್ನಾಟಕ ವಿವಿಯಲ್ಲಿ ಇವತ್ತು ಡಿಪಿಎಲ್ ಮ್ಯಾಚ್ ನಡೆಯುವ ಸ್ಥಳದಿಂದಲೇ ಆಲ್ ದಿ ಬೆಸ್ಟ್ ಇಂಡಿಯಾ ಎಂದು ಶುಭ ಕೊರಿರುವ ಅಭಿಮಾನಿಗಳು, ಇವತ್ತು ಬದ್ಧ ವೈರಿ ಪಾಕಿಸ್ತಾನದ ಹುಟ್ಟಡಗಿಸಲಿ ಎಂದು ಹಾರೈಸಿದ್ದಾರೆ.


























