Tag: Rohit Sharma

  • ಈ ವರ್ಷವೇ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ ರೋ-ಕೊ?

    ಈ ವರ್ಷವೇ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ ರೋ-ಕೊ?

    – ಅಕ್ಟೋಬರ್‌ನ ಆಸೀಸ್‌ ಸರಣಿ ಈ ಜೋಡಿಗೆ ನಿರ್ಣಾಯಕ

    ಮುಂಬೈ: ಭಾರತೀಯ ಕ್ರಿಕೆಟ್‌ನ ಐಕಾನ್‌ಗಳಾದ ರೋಹಿತ್‌ ಶರ್ಮಾ (Rohit Sharma) ಹಾಗೂ ವಿರಾಟ್‌ ಕೊಹ್ಲಿ (Virat Kohli) ಏಕದಿನ ಕ್ರಿಕೆಟ್‌ಗೆ ಈ ವರ್ಷದಲ್ಲೇ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೌದು. ಟೆಸ್ಟ್‌‌ ಹಾಗೂ ಟಿ20 ಕ್ರಿಕೆಟ್‌ಗೆ (T20 Cricket) ಈಗಾಗಲೇ ನಿವೃತ್ತಿ ಘೋಷಿಸಿರುವ ರೋಹಿತ್‌, ವಿರಾಟ್‌ ಇದೀಗ ಏಕದಿನ ಕ್ರಿಕೆಟ್‌ ವೃತ್ತಿ ಜೀವನಕ್ಕೂ ತೆರೆ ಎಳೆಯುವ ಸನಿಹದಲ್ಲಿದ್ದಾರೆ. ಮೂಲಗಳ ಪ್ರಕಾರ, 2027ರ ಏಕದಿನ ವಿಶ್ವಕಪ್‌ ತಂಡದಲ್ಲಿ ಈ ಜೋಡಿ ಸ್ಥಾನ ಪಡೆಯುವುದು ಖಚಿತವಿಲ್ಲ. ಈಗಾಗಲೇ ಇಬ್ಬರೂ ದಿಗ್ಗಜರು ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕಾರಣ ಮುಂಬರುವ ವರ್ಷಗಳಲ್ಲಿ ಪಂದ್ಯದ ಸಮಯವೂ ಸೀಮಿತವಾಗಿರಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ (Indian Cricket) ನಿಯಂತ್ರಣ ಮಂಡಳಿ ಕೂಡ ಇವರಿಬ್ಬರ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಇದಕ್ಕೆ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಇದನ್ನೂ ಓದಿ: 1 ತಿಂಗಳ ಬಳಿಕ ಬಿಳಿ ಗಡ್ಡದಲ್ಲಿ ಕೊಹ್ಲಿ ಪ್ರತ್ಯಕ್ಷ – ಏಕದಿನ ನಿವೃತ್ತಿ ಲೋಡಿಂಗ್ ಅಂತ ಪರ-ವಿರೋಧ ಚರ್ಚೆ

    ರೋಹಿತ್‌ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್‌ (World Cup 2027) ರೇಸ್‌ನಲ್ಲಿ ಉಳಿಯಬೇಕಾದ್ರೆ ಈ ವರ್ಷ ಡಿಸೆಂಬರ್‌ನಲ್ಲಿ ಶುರುವಾಗಲಿರುವ ದೇಸಿ ಕ್ರಿಕೆಟ್‌ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗುತ್ತೆ. ಇಲ್ಲದಿದ್ದರೆ, ಬಹುತೇಕ ಏಕದಿನ ಕ್ರಿಕೆಟ್‌ನಿಂದಲೂ ಔಟ್‌ ಆಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

    ಶೀಘ್ರದಲ್ಲೇ ನಿವೃತ್ತಿ ಸಾಧ್ಯತೆ
    ಭಾರತದ ಮುಂದಿನ ಏಕದಿನ ಸರಣಿ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಈ ಸರಣಿ ಐಕಾನಿಕ್‌ ಜೋಡಿಗೆ ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಈ ಸರಣಿಯಲ್ಲಿ ರೋಹಿತ್‌ ಕೊಗ್ಲಿ ಆಡಿದ್ರೆ, ಮುಂದಿನ ಭವಿಷ್ಯದ ಬಗ್ಗೆ ನಿರ್ಧಾರವಾಗಲಿದೆ. ಆಯ್ಕೆ ಸಮಿತಿ ಈ ಸರಣಿಯಿಂದ ಕೈಬಿಟ್ಟರೆ, ಏಕದಿನ ಕ್ರಿಕೆಟ್‌ ವೃತ್ತಿ ಜೀವನಕ್ಕೂ ಈ ಜೋಡಿ ತೆರೆ ಎಳೆಯಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

    ಗಿಲ್‌ ಮೇಲೆ ಹೆಚ್ಚಿದ ಭರವಸೆ
    ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ʻಆಂಡರ್ಸನ್‌-ತೆಂಡೂಲ್ಕರ್‌ʼ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾದ ಯುವ ನಾಯಕ ಗಿಲ್‌ ಅವರ ಯಶಸ್ಸು ಆಯ್ಕೆ ಸಮಿತಿಗೆ ನಂಬಿಕೆ ತಂದುಕೊಟ್ಟಿದೆ. ಹೀಗಾಗಿ 2027ರ ವಿಶ್ವಕಪ್‌ಗೆ ಹೊಸ ಪ್ರತಿಭೆಗಳೊಂದಿಗೆ ಮುನ್ನಡೆಯಲು ಬಿಸಿಸಿಐ ನಿರ್ಧರಿಸಿದ್ದು, ಶುಭಮನ್‌ ಗಿಲ್‌ ಅವರನ್ನೇ ಟೀಂ ಇಂಡಿಯಾದ ದೀರ್ಘಾವಧಿ ನಾಯಕನ್ನಾಗಿ ಆಯ್ಕೆ ಮಾಡಲು ಆಯ್ಕೆ ಸಮಿತಿ ಎದುರುನೋಡುತ್ತಿದೆ ಎಂದು ವರದಿಗಳು ತಿಳಿಸಿವೆ.

  • ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

    ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

    ಅಹಮದಾಬಾದ್‌: ಪಂಜಾಬ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಇಂದು ಕ್ವಾಲಿಫೈಯರ್‌-2 ಕದನ ನಡೆಯಲಿದೆ. ಗೆದ್ದ ತಂಡ ಜೂನ್‌ 3ರಂದು ಆರ್‌ಸಿಬಿ (RCB) ವಿರುದ್ಧ ಟ್ರೋಫಿಗಾಗಿ ಗುದ್ದಾಡಲಿದೆ.

    ಇಂದು ಅಹಮದಾಬಾದ್‌ನಲ್ಲಿ 2ನೇ ಕ್ವಾಲಿಫೈಯರ್ (Qualifier 2 IPL) ಪಂದ್ಯ ನಡೆಯಲಿದ್ದು, ರಾತ್ರಿ 7:30ಕ್ಕೆ ಪಂದ್ಯ ಶುರುವಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಪ್ರಶಸ್ತಿ ಸುತ್ತಿನ ಕಾದಾಟ ನಡೆಸಲಿದೆ. ಈ ನಡುವೆ ಟ್ರೋಫಿ ಗೆಲ್ಲುವ ಲೆಕ್ಕಾಚಾರವೂ ಶುರುವಾಗಿದೆ. ಇದನ್ನೂ ಓದಿ: ರೋ’ಹಿಟ್‌’ ಆಟಕ್ಕೆ ಗಿಲ್‌ ಪಡೆ ಡಲ್‌; ಮುಂಬೈಗೆ 20 ರನ್‌ಗಳ ಜಯ – ಫೈನಲ್‌ ಸ್ಥಾನಕ್ಕೆ ಪಂಜಾಬ್‌ ವಿರುದ್ಧ ಫೈಟ್‌

    ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿವೆ. ಪಂಜಾಬ್‌ ಹಾಗೂ ಮುಂಬೈ ಒಟ್ಟಾರೆ ಐಪಿಎಲ್‌ನಲ್ಲಿ 33 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಮುಂಬೈ 17 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್‌ 16 ಬಾರಿ ಗೆಲುವು ಸಾಧಿಸಿದೆ. ಆದ್ರೆ 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿರುವ ಪಂಜಾಬ್‌ ಕಿಂಗ್ಸ್‌ ಬಲಿಷ್ಠ ಪಡೆಯನ್ನ ಹೊಂದಿದ್ದು, ಪ್ರಶಸ್ತಿಗೆ ಮುತ್ತಿಡುವ ಕನಸು ಕಂಡಿದೆ.

    ಇತ್ತ ಆರಂಭಿಕ 5 ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್‌ ನಿರೀಕ್ಷೆಗೂ ಮೀರಿದ ಪ್ರದರ್ಶನದೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಎಲಿಮಿನೇಟರ್‌-1ನಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನ ಹೊರದಬ್ಬಿ, ಕ್ವಾಲಿಫೈಯರ್‌-2ಗೆ ಲಗ್ಗೆಯಿಟ್ಟಿದೆ. ಇದನ್ನೂ ಓದಿ: ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

    ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈಗಾಗಲೇ 42 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಈ ವೇಳೆ ಮೊದಲು ಹಾಗೂ ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡಗಳು ತಲಾ 21 ಬಾರಿ ಗೆದ್ದಿವೆ. ಈ ಮೈದಾನದಲ್ಲಿ 243 ರನ್‌ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಈ ಅಂಗಳದಲ್ಲಿ 204 ರನ್‌ವರೆಗೆ ಚೇಸಿಂಗ್‌ ಆಗಿದೆ. ಈ ಆವೃತ್ತಿಯಲ್ಲಿ ಈಗಾಗಲೇ ಈ ಮೈದಾನದಲ್ಲಿ 7 ಪಂದ್ಯಗಳು ನಡೆದಿದ್ದು, ಬ್ಯಾಟಿಂಗ್ ಮೊದಲ ಬಾರಿಗೆ ತಂಡ 6 ಪಂದ್ಯಗಳನ್ನು ಗೆದ್ದಿದೆ.

    2023ರ ಆವೃತ್ತಿಯಲ್ಲಿ ಇದೇ ಪಿಚ್‌ನಲ್ಲಿ ಚೆನ್ನೈ 15 ಓವರ್‌ಗಳಲ್ಲಿ 170 ರನ್‌ ಚೇಸ್‌ ಮಾಡಿ 5ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

    ಸ್ಟಾರ್‌ ಬ್ಯಾಟರ್‌ಗಳೇ ಬಲ:
    ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋ ಇನಿಂಗ್ಸ್ ಆರಂಭಿಸಲಿದ್ದು, ದೊಡ್ಡ ಮೊತ್ತಕ್ಕೆ ಈ ಜೋಡ ಭದ್ರ ಅಡಿಪಾಯ ಒಡ್ಡುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಈ ಬಾರಿ ಫಾರ್ಮ್‌ ಸಾಬೀತು ಮಾಡಿದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡ ದೊಡ್ಡ ಮೊತ್ತ ಕಲೆಹಾಕಿದ್ರೆ ಗೆಲುವು ಸಾಧ್ಯತೆಯಿದೆ. ಜಸ್ಪ್ರಿತ್ ಬುಮ್ರಾ, ಟ್ರೆಂಟ್‌ ಬೌಲ್ಟ್‌, ಅಶ್ವನಿ ಕುಮಾರ್‌ ವೇಗದ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಲಿದ್ದು, ಮಿಚೆಲ್‌ ಸ್ಯಾಂಟ್ನರ್ ಸ್ಪಿನ್ ಜಾದು ಸಹ ವರ್ಕೌಟ್‌ ಆಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಇನ್ನೂ ಪಂಜಾಬ್‌ನಲ್ಲೂ ಶ್ರೇಯಸ್‌ ಅಯ್ಯರ್‌, ಪ್ರಿಯಾಂಶ್‌ ಆರ್ಯ, ಸ್ಟೋಯಿನಿಸ್‌, ಶಶಾಂಕ್‌ ಸಿಂಗ್‌ ಅವರಂತಹ ಬ್ಯಾಟಿಂಗ್‌ ಪಡೆಯೇ ಇದೆ.

    ಮುಂಬೈ ಸಂಭಾವ್ಯ ಪ್ಲೇಯಿಂಗ್‌-11
    ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ರಿಚರ್ಡ್ ಗ್ಲೀಸನ್/ರೀಸ್ ಟಾಪ್ಲೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್. ಇದನ್ನೂ ಓದಿ: IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

    ಪಂಜಾವ್‌ ಸಂಭಾವ್ಯ ಪ್ಲೇಯಿಂಗ್‌-11
    ಪ್ರಭ್‌ಸಿಮ್ರನ್‌ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಕೈಲ್ ಜೈಮಿಸನ್, ಯುಜುವೇಂದ್ರ ಚಾಹಲ್, ವಿಜಯಕುಮಾರ್ ವೈಶಾಖ್.

  • ಐಪಿಎಲ್‌ನಲ್ಲಿ ಎರಡೆರಡು ದಾಖಲೆ ಬರೆದ ಹಿಟ್‌ಮ್ಯಾನ್‌

    ಐಪಿಎಲ್‌ನಲ್ಲಿ ಎರಡೆರಡು ದಾಖಲೆ ಬರೆದ ಹಿಟ್‌ಮ್ಯಾನ್‌

    ನ್ಯೂ ಚಂಡೀಗಢ: ಇಲ್ಲಿ ನಡೆಯುತ್ತಿರುವ ಗುಜರಾತ್‌ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ರೋಹಿತ್‌ ಶರ್ಮಾ (Rohit Sharma) ಐಪಿಎಲ್‌ ಇತಿಹಾಸದಲ್ಲಿ ಎರಡೆರಡು ದಾಖಲೆ ಬರೆದಿದ್ದಾರೆ.

    ರೋಹಿತ್ ಶರ್ಮಾ 7000 ರನ್ ಗಳಿಸಿದ್ದು, ಐಪಿಎಲ್‌ನಲ್ಲಿ (IPL 2025) ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 300 ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟರ್‌ ಆಗಿ ಹಿಟ್‌ ಮ್ಯಾನ್‌ ಹೊರಹೊಮ್ಮಿದ್ದಾರೆ. ಅತಿ ಹೆಚ್ಚು ರನ್‌ ಗಳಿಸಿದವರ ಸಾಲಿನಲ್ಲಿ ಆರ್‌ಸಿಬಿ ತಂಡದ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

    ರೋಹಿತ್, ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಪರ 271 ಪಂದ್ಯಗಳಲ್ಲಿ ಈ ರನ್ ಸಾಧನೆ ಮಾಡಿದ್ದಾರೆ. ಸರಾಸರಿ 30 ಕ್ಕಿಂತ ಕಡಿಮೆ, ಅತ್ಯಧಿಕ ಸ್ಕೋರ್ ಔಟಾಗದೆ 109 ರನ್‌ ಗಳಿಸಿದ್ದಾರೆ.

    ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಬ್ಯಾಟರ್‌ಗಳು
    ವಿರಾಟ್ ಕೊಹ್ಲಿ – 266 ಪಂದ್ಯಗಳಲ್ಲಿ 8618 ರನ್‌
    ರೋಹಿತ್ ಶರ್ಮಾ – 271 ಪಂದ್ಯಗಳಲ್ಲಿ 7000 ರನ್‌
    ಶಿಖರ್ ಧವನ್ – 222 ಪಂದ್ಯಗಳಲ್ಲಿ 6769 ರನ್
    ಡೇವಿಡ್ ವಾರ್ನರ್ – 184 ಪಂದ್ಯಗಳಲ್ಲಿ 6565‌ ರನ್
    ಸುರೇಶ್ ರೈನಾ – 205 ಪಂದ್ಯಗಳಲ್ಲಿ 5528‌ ರನ್

  • ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಜಯ – ನಂ.1 ಪಟ್ಟಕ್ಕೇರಿದ ಪಂಜಾಬ್‌ ಕಿಂಗ್ಸ್‌

    ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಜಯ – ನಂ.1 ಪಟ್ಟಕ್ಕೇರಿದ ಪಂಜಾಬ್‌ ಕಿಂಗ್ಸ್‌

    ಜೈಪುರ: ಜೋಶ್ ಇಂಗ್ಲಿಸ್ (Josh Inglis), ಪ್ರಿಯಾಂಶ್‌ ಆರ್ಯ (Priyansh Arya) ಶತಕದ ಜೊತೆಯಾಟ ನೆರವಿನಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಂ.1 ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಪಂಜಾಬ್‌ ಕಿಂಗ್ಸ್‌ (Punjab Kings) ಇದೇ ಮೊದಲಬಾರಿಗೆ ನಂ.1 ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

    ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ (Mumbai Indians) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 184 ರನ್‌ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್‌ 18.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 187 ರನ್‌ ಚಚ್ಚಿ ಗೆಲುವು ಸಾಧಿಸಿತು. ಈ ಪಂದ್ಯದ ಮುಕ್ತಾಯದೊಂದಿಗೆ ಉಭಯ ತಂಡಗಳೂ 18ನೇ ಆವೃತ್ತಿಯ ಲೀಗ್‌ ಸುತ್ತಿನ  ಪಂದ್ಯಗಳನ್ನು ಮುಕ್ತಾಯಗೊಳಿಸಿದವು.

    ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ ಪಂಜಾಬ್‌ 4.2 ಓವರ್‌ಗಳಲ್ಲಿ 34 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 2ನೇ ವಿಕೆಟ್‌ಗೆ ಜೋಶ್‌ ಇಂಗ್ಲಿಸ್‌ ಹಾಗೂ ಪ್ರಿಯಾಂಶ್‌ ಆರ್ಯ ಶತಕದ ಜೊತೆಯಾಟ ನೆರವಿನಿಂದ ಸುಲಭ ಗೆಲುವಿನತ್ತ ಮುನ್ನಡೆಯಿತು. 2ನೇ ವಿಕೆಟಿಗೆ ಈ ಜೋಡಿ 59 ಎಸೆತಗಳಲ್ಲಿ 109 ರನ್‌ ಗಳಿಸಿತು. ಈ ವೇಳೆ ಸ್ಪೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಪ್ರಿಯಾಂಶ್‌ ಆರ್ಯ 35 ಎಸೆತಗಳಲ್ಲಿ 2 ಸಿಕ್ಸರ್‌, 9 ಬೌಂಡರಿ ಸಹಿತ 62 ರನ್‌ ಸಿಡಿಸಿ ಔಟಾಗುತ್ತಿದ್ದಂತೆ ಜೋಶ್‌ ಇಂಗ್ಲಿಷ್‌ ಆರ್ಭಟ ಮುಂದುವರಿಸಿದರು. ಇದಕ್ಕೆ ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಸಾಥ್‌ ನೀಡಿದ್ರು.

    ಇಂಗ್ಲಿಷ್‌ 48 ಎಸೆತಗಳಲ್ಲಿ 73 ರನ್‌ (42 ಎಸೆತ, 3 ಸಿಕ್ಸರ್‌, 9 ಬೌಂಡರಿ) ಚಚ್ಚಿದ್ರೆ, ಶ್ರೇಯಸ್‌ ಅಯ್ಯರ್‌ 16 ಎಸೆತಗಳಲ್ಲಿ ಅಜೇಯ 26 ರನ್‌, ನೇಹಾಲ್‌ ವಧೇರ ಅಜೇಯ 2 ರನ್‌ ಗಳಿಸಿ ಗೆಲುವಿನ ದಡ ಸೇರಿಸಿದ್ರು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಲು ವಿಫಲವಾಯಿತು. ಮೊದಲ ವಿಕೆಟ್​ಗೆ ರೋಹಿತ್​-ರ‍್ಯಾನ್‌ ರಿಕಲ್ಟನ್ ಜೋಡಿ 45 ರನ್​ಗಳ ಜೊತೆಯಾಟ ನೀಡಿತು. ರಿಕಲ್ಟನ್‌ 20 ಎಸೆತಗಳಲ್ಲಿ​ 5 ಬೌಂಡರಿಗಳ ಸಹಿತ 27 ರನ್​ಗಳಿಸಿ ಔಟಾದರು. ರೋಹಿತ್ ಶರ್ಮಾ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಮತ್ತೆ ವಿಫಲರಾದರು. ರೋಹಿತ್‌ ಶರ್ಮಾ 21 ಎಸೆತಗಳಲ್ಲಿ 24 ರನ್​ಗಳಿಸಿ ಔಟಾದರು. ನಂತರ ಬಂದ ತಿಲಕ್ ವರ್ಮಾ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಸ್ಪೋಟಕ ಪ್ರದರ್ಶನ ನೀಡುತ್ತಿದ್ದ ವಿಲ್ ಜಾಕ್ಸ್ ಕೂಡ 8 ಎಸೆತಗಳಲ್ಲಿ 17 ರನ್​ಗಳಿಸಿ ಔಟ್ ಆದರು.

    ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ಮುಂಬೈಗೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಚೇತರಿಕೆ ನೀಡಿದರು. ಇವರಿಬ್ಬರು 5ನೇ ವಿಕೆಟ್ ಜೊತೆಯಾಟದಲ್ಲಿ 23 ಎಸೆತಗಳಲ್ಲಿ 44 ರನ್​ಗಳಿಸಿದರು. ಪಾಂಡ್ಯ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸೇರಿ 26 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಹಾಗೂ ನಮನ್ ಧೀರ್ ಜೋಡಿ 6ನೇ ವಿಕೆಟ್ ಜೊತೆಯಾಟದಲ್ಲಿ 17 ಎಸೆತಗಳಲ್ಲಿ 31 ರನ್​ ಸೇರಿಸಿದರು. ನಮನ್ 12 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 20 ರನ್​ಗಳಿಸಿದರು. ಕೊನೆಯವರೆಗೂ ಹೋರಾಡಿದ ಸೂರ್ಯಕುಮಾರ್ ಯಾದವ್ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ 57 ರನ್​ಗಳಿಸಿ ಕೊನೆಯ ಎಸೆತದಲ್ಲಿ ಅರ್ಷ್‌ದೀಪ್‌ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.

    ಪಂಜಾಬ್ ಕಿಂಗ್ಸ್ ಪರ ಅರ್ಷ್‌ದೀಪ್‌ ಸಿಂಗ್, ಮಾರ್ಕೊ ಜಾನ್ಸನ್, ವೈಶಾಕ್ ವಿಜಯಕುಮಾರ್ ತಲಾ 2 ವಿಕೆಟ್‌ ಕಿತ್ತರೆ, ಹರ್ಪ್ರೀತ್‌ ಬ್ರಾರ್ 1 ವಿಕೆಟ್‌ ಪಡೆದರು.

  • ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಗೆದ್ದ ಅಭಿಮಾನಿಗೆ ಲ್ಯಾಂಬೊರ್ಗಿನಿ ಕಾರು ಗಿಫ್ಟ್‌ ಕೊಟ್ಟ ರೋಹಿತ್‌ ಶರ್ಮಾ

    ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಗೆದ್ದ ಅಭಿಮಾನಿಗೆ ಲ್ಯಾಂಬೊರ್ಗಿನಿ ಕಾರು ಗಿಫ್ಟ್‌ ಕೊಟ್ಟ ರೋಹಿತ್‌ ಶರ್ಮಾ

    ಮುಂಬೈ: ಫ್ಯಾಂಟಸಿ ಕ್ರಿಕೆಟ್‌ ಸ್ಪರ್ಧೆಯಲ್ಲಿ ವಿಜೇತನಾದ ಅಭಿಮಾನಿಗೆ ಮುಂಬೈ ಇಂಡಿಯನ್ಸ್‌ ಸ್ಟಾರ್‌ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ (Rohit Sharma) ತನ್ನ ಐಕಾನಿಕ್‌ ನೀಲಿ ಲ್ಯಾಂಬೊರ್ಗಿನಿ ಉರುಸ್‌ (Lamborghini Urus) ಅನ್ನು ಗಿಫ್ಟ್‌ ಆಗಿ ನೀಡಿದ್ದಾರೆ.

    ಈ ಸ್ಟೈಲಿಶ್ ಐಷಾರಾಮಿ ಕಾರಿನೊಂದಿಗೆ ಬಹಳ ಹಿಂದಿನಿಂದಲೂ ರೋಹಿತ್ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇದು ಅವರ ಏಕದಿನ ಪಂದ್ಯಗಳಲ್ಲಿ ವಿಶ್ವ ದಾಖಲೆಯ 264 ರನ್ ಇನ್ನಿಂಗ್ಸ್‌ಗೆ ಗೌರವವಾಗಿ ಒಲಿದುಬಂದ ಕಾರು. 38 ವರ್ಷದ ಬ್ಯಾಟ್ಸ್‌ಮನ್ ತಮ್ಮ ನೀಲಿ ಲ್ಯಾಂಬೊದಲ್ಲಿ ನಗರದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಸುತ್ತಾಡುತ್ತಿದ್ದರು. ಇದನ್ನೂ ಓದಿ: ಹೈದರಾಬಾದ್‌ಗೆ 6 ವಿಕೆಟ್‌ಗಳ ಅಮೋಘ ಜಯ – ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಲಕ್ನೋ!

    ಐಪಿಎಲ್ 2025 ಕ್ಕೂ ಮೊದಲು, ರೋಹಿತ್ ಸೇರಿದಂತೆ ಅನೇಕ ಕ್ರಿಕೆಟಿಗರು Dream11 ಅಪ್ಲಿಕೇಶನ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನಲ್ಲಿ, ರೋಹಿತ್ ತನ್ನ ಲ್ಯಾಂಬೋರ್ಗಿನಿ ಉರುಸ್ ಅನ್ನು ಅದೃಷ್ಟಶಾಲಿ ವಿಜೇತರಲ್ಲಿ ಒಬ್ಬರಿಗೆ ನೀಡುವುದಾಗಿ ಹೇಳಿದ್ದರು.

    ಈಗ ರೋಹಿತ್ ಅಭಿಮಾನಿಗೆ ಕಾರಿನ ಕೀಲಿಯನ್ನು ಹಸ್ತಾಂತರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ವೈರಲ್‌ ಆಗಿದೆ. ಈ ಕಾರಿನ ಭಾರತದಲ್ಲಿ ಸುಮಾರು 4 ಕೋಟಿ ರೂ. ಇದೆ. ಇದನ್ನೂ ಓದಿ: 18ನೇ ಆವೃತ್ತಿ, ಮೇ 18ರಂದೇ ಪ್ಲೇ-ಆಫ್‌ಗೆ ಎಂಟ್ರಿ – 18ರ ನಂಟು ಮುಂದುವರಿಸಿದ ಆರ್‌ಸಿಬಿ

    67 ಪಂದ್ಯಗಳಲ್ಲಿ 12 ಶತಕಗಳು ಮತ್ತು 18 ಅರ್ಧ ಶತಕಗಳು ಸೇರಿದಂತೆ 4,301 ರನ್ ಗಳಿಸಿದ ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜೊತೆಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮುಂಬರುವ ಐದು ಟೆಸ್ಟ್ ಸರಣಿಗೆ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

    ಐಪಿಎಲ್‌ 2025ರ ಆವೃತ್ತಿಯಲ್ಲಿ ಮುಂಬೈ ತಂಡ ಪ್ಲೇ-ಆಫ್‌ ಹಂತದಲ್ಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಪ್ಲೇ-ಆಫ್ ಸ್ಥಾನಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತೀವ್ರ ಪೈಪೋಟಿ ನಡೆಸಬೇಕಾಗಿದೆ. ಪ್ರಸ್ತುತ ಮುಂಬೈ ತಂಡ 12 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಏಳರಲ್ಲಿ ಗೆದ್ದಿದ್ದು, ಒಟ್ಟು 14 ಅಂಕಗಳನ್ನು ಗಳಿಸಿದೆ. ಇದನ್ನೂ ಓದಿ: ಐಪಿಎಲ್‌ ಪ್ಲೇಆಫ್‌ – 4ನೇ ಸ್ಥಾನಕ್ಕೆ 3 ತಂಡಗಳ ಮಧ್ಯೆ ರೇಸ್‌

    ಡಿಸಿ ತಂಡವು 12 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಗಳಿಸಿದೆ. ಎರಡೂ ತಂಡಗಳು ಬುಧವಾರ ಮುಖಾಮುಖಿಯಾಗಲಿದ್ದು, ಎಂಐ ತಂಡವು ಡಿಸಿ ತಂಡವನ್ನು ಸೋಲಿಸಿದರೆ, ಅವರು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಾರೆ.

  • ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿಟ್ ಮ್ಯಾನ್

    ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿಟ್ ಮ್ಯಾನ್

    ಭಾರತ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ (Rohit Sharma) ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

    ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್ ಮಾತ್ರ ಆಡುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ 2024ರಲ್ಲಿ ಟಿ2ಂ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.ಇದನ್ನೂ ಓದಿ: ಆಪರೇಷನ್ ಸಿಂಧೂರ ಬಳಿಕ ಪಾಕ್ ಸೂಪರ್ ಲೀಗ್ ತೊರೆಯಲು ಮುಂದಾದ್ರಾ ವಿದೇಶಿ ಪ್ಲೇಯರ್ಸ್‌?

    18 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಒಟ್ಟು 67 ಟೆಸ್ಟ್‌ಗಳಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳೊಂದಿಗೆ 40.57 ರನ್‌ರೇಟ್‌ನಲ್ಲಿ 4301 ರನ್ ಗಳಿಸಿದರು. ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು.

    ಪೋಸ್ಟ್‌ನಲ್ಲಿ ಏನಿದೆ?
    ಎಲ್ಲರಿಗೂ ನಮಸ್ಕಾರ, ಬಿಳಿ ಬಣ್ಣದ ಉಡುಪಿನಲ್ಲಿ ಭಾರತವನ್ನು ಪ್ರತಿನಿಧಿಸುವುದು ಗೌರವದ ಚಿಹ್ನೆ. ಇಂದು ನಾನು ಟೆಸ್ಟ್ ಕ್ರಿಕೆಟ್‌ನಿಂದ ವಿದಾಯ ಘೋಷಿಸುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಆದರೆ ನಾನು ಏಕದಿನ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕಾಗಿ ಹೊಸ ನಾಯಕನ ಆಯ್ಕೆ ಮಾಡಬೇಕಿದ್ದು, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಶುಭ್‌ಮನ್ ಗಿಲ್ ಮತ್ತು ರಿಷಭ್ ಪಂತ್ ಹೆಸರುಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ, ರೋಹಿತ್ ಶರ್ಮಾ ನಂತರ ಭಾರತ ಕ್ರಿಕೆಟ್ ತಂಡದ ಟೆಸ್ಟ್ ಕ್ರಿಕೆಟ್‌ಗೆ ನಾಯಕನಾಗಲು ಶುಭಮನ್ ಗಿಲ್ ಮುಂಚೂಣಿಯಲ್ಲಿದ್ದಾರೆ.ಇದನ್ನೂ ಓದಿ: 9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?

  • 161 ರನ್‌ಗೆ ಲಕ್ನೋ ಆಲೌಟ್‌ – ಮುಂಬೈಗೆ 54 ರನ್‌ಗಳ ಭರ್ಜರಿ ಜಯ

    161 ರನ್‌ಗೆ ಲಕ್ನೋ ಆಲೌಟ್‌ – ಮುಂಬೈಗೆ 54 ರನ್‌ಗಳ ಭರ್ಜರಿ ಜಯ

    – ಆರ್‌ಸಿಬಿ, ಡೆಲ್ಲಿ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಪಾಂಡ್ಯ ಪಡೆ

    ಮುಂಬೈ: ಆರಂಭದಲ್ಲಿ ಮುಗ್ಗರಿಸಿ ನಂತರ ಸತತ ಗೆಲುವುಗಳೊಂದಿಗೆ ಮಿಂಚುತ್ತಿರುವ ಮುಂಬೈ ಇಂದು ಮತ್ತೊಂದು ಜಯವನ್ನು ಮುಡಿಗೇರಿಸಿಕೊಂಡಿದೆ. ಪಾಂಡ್ಯ ಪಡೆ ಲಕ್ನೋ ವಿರುದ್ಧ 54 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಆರ್‌ಸಿಬಿ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿತು. 216 ರನ್‌ ಗುರಿ ಬೆನ್ನತ್ತಿದ ಲಕ್ನೋ ನಿಗದಿತ ಓವರ್‌ಗೆ 161 ರನ್‌ ಗಳಿಸಿ ಆಟೌಟ್‌ ಆಗಿ ಹೀನಾಯ ಸೋಲು ಕಂಡಿತು. ಇದನ್ನೂ ಓದಿ: ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್‌ ಅಫ್ರಿದಿ

    ಮುಂಬೈ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರು. ರಯಾನ್ ರಿಕೆಲ್ಟನ್ ಮತ್ತು ಸೂರ್ಯಕುಮಾರ್‌ ಯಾದವ್‌ ಅರ್ಧಶತಕ ಆಟದ ಮೂಲಕ ಗಮನ ಸೆಳೆದರು. ರಿಯಾನ್‌ 32 ಬಾಲ್‌ಗೆ 6 ಫೋರ್‌, 4 ಸಿಕ್ಸರ್‌ನೊಂದಿಗೆ 58 ಹಾಗೂ ಸೂರ್ಯಕುಮಾರ್‌ ಯಾದವ್‌ 28 ಬಾಲ್‌ಗೆ 4 ಫೋರ್‌, 4 ಸಿಕ್ಸರ್‌ನೊಂದಿಗೆ 54 ರನ್‌ ಗಳಿಸಿ ತಂಡಕ್ಕೆ ನೆರವಾದರು. ವಿಲ್‌ ಜಾಕ್ಸ್‌ 29, ನಮನ್ ಧೀರ್ (ಔಟಾಗದೇ) 25, ಕಾರ್ಬಿನ್ ಬಾಷ್ 20 ರನ್‌ಗಳೊಂದಿಗೆ ಮುಂಬೈ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು.

    ಲಕ್ನೋ ಪರ ಮಯಾಂಕ್‌ ಯಾದವ್‌, ಆವೇಶ್‌ ಖಾನ್‌ ತಲಾ 2, ಪ್ರಿನ್ಸ್‌ ಯಾದವ್‌, ದಿಗ್ವೇಶ್‌ ರಾಥಿ, ರವಿ ಬಿಷ್ಣೋಯ್‌ ತಲಾ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಈಡನ್‌ ಗಾರ್ಡನ್‌ನಲ್ಲಿ ಗೆದ್ದ ಮಳೆ – PBKS vs KKR ಪಂದ್ಯ ರದ್ದು, 4ನೇ ಸ್ಥಾನಕ್ಕೇರಿದ ಪಂಜಾಬ್‌

    ಮುಂಬೈ ನೀಡಿ 216 ರನ್‌ ಗುರಿ ನೀಡಿದ ಲಕ್ನೋ ಬ್ಯಾಟಿಂಗ್‌ನಲ್ಲಿ ಮುಗ್ಗಿರಿಸಿತು. 6 ಓವರ್‌ ಹೊತ್ತಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಮಿಚೆಲ್‌ ಮಾರ್ಷ್‌ 34, ಆಯುಷ್‌ ಬದೋನಿ 35, ನಿಕೊಲಸ್‌ ಪೂರನ್‌ 27, ಡೇವಿಡ್‌ ಮಿಲ್ಲರ್‌ 24 ರನ್‌ ಗಳಿಸಿದರು.

    ಉಳಿದಂತೆ ಯಾವ ಬ್ಯಾಟರ್‌ ಕೂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಈ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿರುವ ಕ್ಯಾಪ್ಟನ್ ರಿಷಬ್‌ ಪಂತ್‌‌ ಕಳೆಗುಂದಿದ್ದಾರೆ. ಪಂತ್ ಕೇವಲ 4 ರನ್‌ ಗಳಿಸಿ ಔಟಾಗಿದ್ದು,‌ ನಿರಾಸೆ ಮೂಡಿಸಿತು. ಲಕ್ನೋ ಬ್ಯಾಟರ್‌ಗಳನ್ನು ಪಾಂಡ್ಯ ಪಡೆ ಬೌಲರ್‌ಗಳು ಚೆಂಡಾಡಿದರು. ಕಳಪೆ ಬ್ಯಾಟಿಂಗ್‌ನಿಂದ ಲಕ್ನೋ ಅಂತಿಮವಾಗಿ 20 ಓವರ್‌ಗೆ 161 ರನ್‌ಗೆ ಆಲೌಟ್‌ ಆಯಿತು.

    ಮುಂಬೈ ಪರ ಜಸ್ಪ್ರಿತ್‌ ಬುಮ್ರಾ ಕಮಾಲ್‌ ಮಾಡಿದರು. ಪ್ರಮುಖ 4 ವಿಕೆಟ್‌ ಕಿತ್ತು ಮಿಂಚಿದರು. ಇವರ ಜೊತೆ ಜೊತೆಗೆ ಟ್ರೆಂಟ್‌ ಬೌಲ್ಟ್‌ ಕೂಡ 3 ವಿಕೆಟ್‌ ಕಬಳಿಸಿ ನಿರ್ಣಾಯಕ ಪಾತ್ರ ವಹಿಸಿದರು. ವಿಲ್‌ ಜಾಕ್ಸ್‌ 2, ಕಾರ್ಬಿನ್ ಬಾಷ್ 1 ವಿಕೆಟ್‌ ಪಡೆದರು.

  • IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

    IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

    ದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2025) 18ನೇ ಆವೃತ್ತಿಯಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲಾರಂಭಿಸಿವೆ. ಅತ್ತ ಬಿಸಿಸಿಐನಿಂದ (BCCI) ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಶಾನ್ ‌ಕಿಶನ್‌ ಶತಕ ಸಿಡಿಸಿ ಅಬ್ಬರಿಸಿದ್ರೆ, ಇದೇ ಚೊಚ್ಚಲ ಐಪಿಎಲ್‌ ಪಂದ್ಯವನ್ನಾಡಿದ ಕೇರಳ ಮೂಲದ ಯುವಕ ಸದ್ಯ ಕ್ರಿಕೆಟ್‌ ಲೋಕದಲ್ಲಿ ಸುದ್ದಿಯಲ್ಲಿದ್ದಾರೆ.

    ಸೂಪರ್‌ ಸಂಡೇ ಚೆಪಾಕ್‌ನಲ್ಲಿ ನಡೆದ ಐಪಿಎಲ್‌ನ 3ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ (CKS) 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಮೂಲಕ 18ನೇ ಆವೃತ್ತಿಯಲ್ಲಿ ಗೆಲುವಿನ ಶುಭಾರಂಭ ಮಾಡಿತು. ಆದ್ರೆ ಈ ಪಂದ್ಯದಲ್ಲಿ ಮಿಂಚಿದ್ದು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಕೇರಳ ಮೂಲದ ಯುವಕ ʻವಿಘ್ನೇಶ್‌ ಪುತ್ತೂರುʼ (Vignesh Puthur).

    ಹೌದು. ಕೇರಳದ ಮಲಪ್ಪುರಂನ 24 ವರ್ಷದ ವಿಘ್ನೇಶ್‌, ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದಾರೆ. ಸೂಪರ್‌ ಸಂಡೇ ರೋಹಿತ್ ಶರ್ಮಾ (Rohit Sharma) ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ವಿಘ್ನೇಶ್ ತಮ್ಮ ಸ್ಪಿನ್‌ ಮೋಡಿಯಿಂದ ಆಕರ್ಷಿಸಿದರು. ಸ್ವಾರಸ್ಯವೆಂದರೆ ವಿಘ್ನೇಶ್‌ ಕೇರಳ ಪರ ಹಿರಿಯರ ಮಟ್ಟದಲ್ಲಿ ಈ ವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿದವರಲ್ಲ. ಆದರೂ ಘಟಾನುಘಟಿಗಳ ಅಖಾಡಕ್ಕೆ ಧುಮುಕಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು, ಫೀಲ್ಡಿಂಗ್‌ನಲ್ಲೂ ವಿಘ್ನೇಶ್‌ ಗಮನ ಸೆಳೆದಿದ್ದು ವಿಶೇಷ.

    ಮುಂಬೈ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಕೇರಳದ ಮೂಲದ ವಿಘ್ನೇಶ್‌ ಪುತ್ತೂರು, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಉತ್ತಮವಾಗಿ ಬೌಲಿಂಗ್ ಮಾಡಿದ ವಿಘ್ನೇಶ್ ಅವರ ಬಳಿ ಸ್ವತಃ ಧೋನಿಯೇ ಹೋಗಿ ಭುಜ ತಟ್ಟಿ ಶ್ಲಾಘಿಸಿದರು. ಧೋನಿಯಿಂದ ಮೆಚ್ಚುಗೆ ಪಡೆದು ವಿಘ್ನೇಶ್‌ ಸಂತಸಗೊಂಡರು.

    ಯಾರು ಈ ವಿಘ್ನೇಶ್‌ ಪುತ್ತೂರು?
    ವಿಘ್ನೇಶ್‌ ಪುತ್ತೂರು ಬಲಗೈ ಬ್ಯಾಟರ್‌ ಹಾಗೂ ಎಡಗೈ ಸ್ಪಿನ್ ಬೌಲರ್‌. 2001ರ ಮಾರ್ಚ್‌ 2 ರಂದು ಜನಿಸಿದ ವಿಘ್ನೇಶ್ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. 14 ವರ್ಷದೊಳಗಿನ ಮತ್ತು 19 ವರ್ಷದೊಳಗಿನ ಮಟ್ಟದಲ್ಲಿ ಕೇರಳ ಪರ ಮಾತ್ರ ಆಡಿದ್ದಾರೆ. ಇನ್ನೂ ಹಿರಿಯರ ಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪ್ಪಲ್ಸ್ ಪರ ಆಡಿದ್ದು, ಮೂರು ಪಂದ್ಯಗಳಿಂದ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದರು. ಈ ಮಧ್ಯೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿಯೂ ಸಹ ಆಡಿದ್ದಾರೆ.

    ಹೆತ್ತವರ ಪ್ರೋತ್ಸಾಹವೇ ಶ್ರೀರಕ್ಷೆ
    ವಿಘ್ನೇಶ್ ಬೆಳವಣಿಗೆ ಹಿಂದೆ ಹೆತ್ತವರ ಪ್ರೋತ್ಸಾಹವಿದೆ. ಆರ್ಥಿಕ ಸವಾಲುಗಳನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ವಿಘ್ನೇಶ್‌, ಎಂದಿಗೂ ಕ್ರೀಡೆಯ ಮೇಲಿನ ತನ್ನ ಆಸಕ್ತಿ ಕಡಿಮೆ ಮಾಡಿಕೊಂಡಿರಲಿಲ್ಲ. ತಂದೆ ಸುನಿಲ್ ಕುಮಾರ್ ಆಟೋ ಚಾಲಕರಾಗಿದ್ದರೆ, ತಾಯಿ ಕೆ.ಪಿ. ಬಿಂದು ಗೃಹಿಣಿ. ಆರಂಭದಲ್ಲಿ ಮಧ್ಯಮ ವೇಗ ಮತ್ತು ಸ್ಪಿನ್ ಬೌಲಿಂಗ್ ಮಾಡುತ್ತಿದ್ದರು. ತಮ್ಮ ಬೌಲಿಂಗ್ ಅನ್ನು ಸುಧಾರಿಸಿಕೊಳ್ಳುತ್ತಲೇ ಇದ್ದರು. ನಂತರ ಅವರು ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ತ್ರಿಶೂರ್‌ಗೆ ತೆರಳಿದರು. ಅಲ್ಲಿ ಸೇಂಟ್ ಥಾಮಸ್ ಕಾಲೇಜಿನ ಪರ ಕೇರಳ ಕಾಲೇಜು ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ಪರ ಪಾದಾರ್ಪಣೆ ಮಾಡುವ ಮೊದಲು 2025ರ ಟಾಟಾ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 30 ಲಕ್ಷ ರೂ.ಗೆ ಹರಾಜಾದರು.

    ದಕ್ಷಿಣ ಆಫ್ರಿಕಾಗೆ ತೆರಳಿದ್ದ ವಿಘ್ನೇಶ್‌
    ವಿಘ್ನೇಶ್ ಪುತ್ತೂರು ಅವರನ್ನು SA T20 ಲೀಗ್‌ಗಾಗಿ ಮುಂಬೈ ಕೇಪ್‌ಟೌನ್‌ನೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು. ಈ ಟೂರ್ನಿಯಲ್ಲಿ ರಶೀದ್‌ ಖಾನ್‌, ಟ್ರೆಂಟ್‌ ಬೌಲ್ಡ್‌ ಅವರಂತಹ ದಿಗ್ಗಜ ಬೌಲರ್‌ಗಳೊಂದಿಗೆ ಸಮಯ ಕಳೆದ ವಿಘ್ನೇಶ್‌ ಬೌಲಿಂಗ್‌ ಟ್ರಿಕ್ಸ್‌ ಕಲಿತು ದೇಶಕ್ಕೆ ಮರಳಿದ್ದರು. ಇದೇ ಅವಕಾಶ ಇಂದು ಅವರನ್ನು ದೇಶಾದ್ಯಂತ ಮೆಚ್ಚುಗೆ ಗಳಿಸುವಂತೆ ಮಾಡಿದೆ. ಸೋಷಿಯಲ್‌ ಮಿಡಿಯಾ ಎಕ್ಸ್‌ನಲ್ಲೂ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದಾರೆ.

  • IPl 2025 | ರನ್‌ ಹೊಳೆ, ದಾಖಲೆಗಳ ಸುರಿಮಳೆ – ಇಲ್ಲಿದೆ ಐತಿಹಾಸಿಕ ದಾಖಲೆಗಳ ಪಟ್ಟಿ

    IPl 2025 | ರನ್‌ ಹೊಳೆ, ದಾಖಲೆಗಳ ಸುರಿಮಳೆ – ಇಲ್ಲಿದೆ ಐತಿಹಾಸಿಕ ದಾಖಲೆಗಳ ಪಟ್ಟಿ

    2008ಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ (Ipl) ಲೀಗ್ ಇದೀಗ 18ನೇ ಆವೃತ್ತಿಗೆ ಕಾಲಿಟ್ಟಿದೆ. 2007ರಲ್ಲಿ ಟಿ20 ವಿಶ್ವಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ವಿಶ್ವವಿಜಯಿಯಾದಾಗ ಬಿಸಿಸಿಐ ತಲೆಗೆ ಇಂತಹದ್ದೊಂದು ಐಡಿಯಾ ಹೊಳೆದಿತ್ತು. ಆದರೆ ಅದು ಇಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎಂದು ಮಾತ್ರ ಯಾರೂ ಊಹಿಸಿರಲಿಲ್ಲ.

    ಸದ್ಯ ಈ ಐಪಿಎಲ್‌ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಎಲ್ಲದರ ಖ್ಯಾತಿಯನ್ನೂ ಮೀರಿ ಬೆಳೆದಿದೆ ಐಪಿಎಲ್. ಅಷ್ಟೇ ಅಲ್ಲದೆ ಜಗತ್ತಿನ ಬೇರಾವ ವೃತ್ತಿಪರ ಕ್ರಿಕೆಟ್ ಟೂರ್ನಿಗೂ ಇಲ್ಲದ ಜನಪ್ರಿಯತೆ ಇದಕ್ಕಿದೆ. ಈವರೆಗೆ ಒಟ್ಟು 17 ಬಾರಿ ಐಪಿಎಲ್ ಟೂರ್ನಿಗಳು ನಡೆದಿದ್ದು, ಇದೀಗ 18ನೇ ಆವೃತ್ತಿಗೆ ಕಾಲಿಟ್ಟಿದೆ.

    ಈ ಚುಟುಕು ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸುವವರೇನೂ ಕಡಿಮೆಯಿಲ್ಲ. ಕೆಲವೊಮ್ಮೆ ಬೌಲಿಂಗ್‌ ವೇಗಕ್ಕೆ ಚುರುಕು ಮುಟ್ಟಿಸಿ ರನ್‌ ಹೊಳೆ ಹರಿಸುವ ದೈತ್ಯ ಬ್ಯಾಟರ್‌ಗಳು, ಆ ತಂಡ ಹೆಚ್ಚು ಗಮನ ಸೆಳೆಯುತ್ತದೆ. ಅದರಂತೆ ಕಳೆದ 17 ಆವೃತ್ತಿಗಳಲ್ಲಿ ಅತಿಹೆಚ್ಚು ರನ್‌ ಗಳಿಸಿದ ದೈತ್ಯ ಬ್ಯಾಟರ್‌ಗಳು, ಕಡಿಮೆ ಎಸೆತಗಳಲ್ಲಿ ತೂಫಾನ್‌ ಶತಕ ಸಿಡಿಸಿದ ಶತಕ ವೀರರ ಪಟ್ಟಿ ಇಲ್ಲಿದೆ…..

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    * ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ
    * ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ – ಆರ್‌ಸಿಬಿ ವಿರುದ್ಧ
    * ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ – ಪಂಜಾಬ್‌ ಕಿಂಗ್ಸ್‌ ವಿರುದ್ಧ
    * ಪಂಜಾಬ್‌ ಕಿಂಗ್ಸ್‌ – 93 ರನ್‌ – 2024ರಲ್ಲಿ – ಕೆಕೆಆರ್‌ ವಿರುದ್ಧ
    * ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ – ಮುಂಬೈ ಇಂಡಿಯನ್ಸ್‌ ವಿರುದ್ಧ

    ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ರನ್‌ ಚಚ್ಚಿದ ಟಾಪ್‌-5 ತಂಡಗಳು
    * ಸನ್ ರೈಸರ್ಸ್ ಹೈದರಾಬಾದ್ – 287 ರನ್ – 2024ರಲ್ಲಿ – ಆರ್‌ಸಿಬಿ ವಿರುದ್ಧ
    * ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌ – 2024ರಲ್ಲಿ – ಮುಂಬೈ ವಿರುದ್ಧ
    * ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌ – 2024ರಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ
    * ಸನ್‌ ರೈಸರ್ಸ್‌ ಹೈದರಾಬಾದ್‌ – 266 ರನ್‌ – 2024ರಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ
    * ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌ – 2013ರಲ್ಲಿ – ಪುಣೆ ವಾರಿಯರ್ಸ್‌ ವಿರುದ್ಧ

    CHRIS GAYLE

    ಒಂದೇ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಟಾಪ್‌-5 ಪ್ಲೇಯರ್ಸ್‌
    * ಕ್ರಿಸ್‌ ಗೇಲ್‌ – 2013ರಲ್ಲಿ – 175 ರನ್‌ – 66 ಎಸೆತ
    * ಬ್ರೆಂಡನ್‌ ಮೆಕಲಂ – 2008ರಲ್ಲಿ – 158 ರನ್‌ – 73 ಎಸೆತ
    * ಕ್ವಿಂಟನ್‌ ಡಿಕಾಕ್‌ – 2022 ರಲ್ಲಿ – 140 ರನ್‌ – 70 ಎಸೆತ
    * ಎಬಿ ಡಿವಿಲಿಯರ್ಸ್‌ – 2015 ರಲ್ಲಿ – 133 ರನ್‌ – 59 ಎಸೆತ
    * ಕೆ.ಎಲ್‌ ರಾಹುಲ್‌ – 2020 – 132 ರನ್‌ – 69 ಎಸೆತ

    ತೂಫಾನ್‌ ಶತಕ ಬಾರಿಸಿದ ಟಾಪ್‌-5 ಆಟಗಾರರು ನೋಡಿ
    * ಕ್ರಿಸ್‌ ಗೇಲ್‌ – 2013ರಲ್ಲಿ – 30 ಎಸೆತಗಳಲ್ಲಿ ಶತಕ
    * ಯೂಸುಫ್‌ ಪಠಾಣ್‌ – 2010 – 37 ಎಸೆತಗಳಲ್ಲಿ ಶತಕ
    * ಡೇವಿಡ್‌ ಮಿಲ್ಲರ್‌ – 2013ರಲ್ಲಿ – 38 ಎಸೆತಗಳಲ್ಲಿ ಶತಕ
    * ಟ್ರಾವಿಸ್‌ ಹೆಡ್‌ – 2024ರಲ್ಲಿ – 39 ಎಸೆತಗಳಲ್ಲಿ ಶತಕ
    * ವಿಲ್‌ ಜಾಕ್ಸ್‌ – 2024 – 41 ಎಸೆತಗಳಲ್ಲಿ ಶತಕ

    ಐಪಿಎಲ್‌ ಇತಿಹಾಸದಲ್ಲಿ ಹೆಚ್ಚು ರನ್‌ ಗಳಿಸಿದ ಟಾಪ್‌-5 ದೈತ್ಯ ಬ್ಯಾಟರ್ಸ್‌
    * ವಿರಾಟ್‌ ಕೊಹ್ಲಿ – 8004 ರನ್‌ – 252 ಪಂದ್ಯ
    * ಶಿಖರ್‌ ಧವನ್‌ – 6,769 ಪಂದ್ಯ – 222 ಪಂದ್ಯ
    * ರೋಹಿತ್‌ ಶರ್ಮಾ – 6,628 ರನ್‌ – 257 ಪಂದ್ಯ
    * ಡೇವಿಡ್‌ ವಾರ್ನರ್‌ – 6,565 ರನ್‌ – 184 ಪಂದ್ಯ
    * ಸುರೇಶ್‌ ರೈನಾ – 5,528 ರನ್‌ – 264 ಪಂದ್ಯ

  • ಭಾರತದ ಟೆಸ್ಟ್ ಟೀಂ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ ರೋಹಿತ್ ಶರ್ಮಾ – ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ನಾಯಕತ್ವಕ್ಕೆ ಬೂಸ್ಟ್!

    ಭಾರತದ ಟೆಸ್ಟ್ ಟೀಂ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ ರೋಹಿತ್ ಶರ್ಮಾ – ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ನಾಯಕತ್ವಕ್ಕೆ ಬೂಸ್ಟ್!

    ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ (Test Series) ಟೀಮ್ ಇಂಡಿಯಾ (Team India) ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಮುಂದುವರೆಯುವ ಸಾಧ್ಯತೆಯಿದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿದೆ.

    ಜೂನ್ 20ರಿಂದ ಇಂಗ್ಲೆಂಡ್‌ ವಿರುದ್ಧ ಶುರುವಾಗಲಿರುವ ಈ ಸರಣಿಗಾಗಿ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಹಿಂದೇಟು ಹಾಕಿದೆ ಎಂದು ವರದಿಯಾಗಿದೆ. ಬದಲಾಗಿ ಹಿಟ್‌ಮ್ಯಾನ್‌ಗೆ ಮತ್ತೊಂದು ಅವಕಾಶ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 3 ಪಂದ್ಯಗಳಲ್ಲಿ ಕೇವಲ 31 ರನ್‌ಗಳಿಸಿದ ನಂತರ, ರೋಹಿತ್ ಅವರು ನಾಯಕನಾಗಿ ಉಳಿಯುವ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದವು. ಆದರೂ, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ರೋಹಿತ್ ಅವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಜಯ ಸಾಧಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

    ‘ರೋಹಿತ್ ಶರ್ಮಾ ಅವರು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಮುನ್ನಡೆಸಲು ಅವರು ಸರಿಯಾದ ಅಭ್ಯರ್ಥಿ ಎಂದು ಪ್ರತಿಯೊಬ್ಬ ಆಟಗಾರರೂ ಭಾವಿಸುತ್ತಾರೆ. ರೋಹಿತ್ ಕೂಡ ರೆಡ್-ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

    ಐಸಿಸಿ ಅಧಿಕೃತ ವೆಬ್‌ಸೈಟ್ ಪ್ರಕಾರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅನುಭವವು ಭಾರತದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಯಶಸ್ಸಿಗೆ ಬೆನ್ನೆಲುಬಾಗಿದ್ದರೂ, ತಂಡಕ್ಕೆ ಆಲ್‌ರೌಂಡರ್‌ಗಳಿಂದ ಅತ್ಯುನ್ನತ ಬೆಂಬಲ ಸಿಕ್ಕಿತು. ಟೂರ್ನಮೆಂಟ್‌ನಾದ್ಯಂತ ಅವರ ಆಲ್‌ರೌಂಡರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

    ಒಂದು ವೇಳೆ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವಿಫಲರಾದರೆ, ಬಿಸಿಸಿಐ ಟೆಸ್ಟ್ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡುವುದು ಖಚಿತ. ಅಂದರೆ ಇದು ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಅವರಿಗೆ ಕೊನೆಯ ಅವಕಾಶ.

    ಏಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ 5 ಇನಿಂಗ್ಸ್‌ಗಳಲ್ಲಿ ಕಲೆಹಾಕಿದ್ದು ಕೇವಲ 31 ರನ್‌ಗಳು ಮಾತ್ರ. ಹೀಗಾಗಿಯೇ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಆದರೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಲ್ಲದೇ, ನಾಯಕನಾಗಿಯೂ ಯಶಸ್ವಿಯಾಗಿದ್ದಾರೆ. ಹೀಗಾಗಿ ಇದೀಗ ಟೆಸ್ಟ್ ತಂಡದ ನಾಯಕತ್ವದಿಂದ ಅವರನ್ನು ಕೆಳಗಿಸಿಳಿದರೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂಬ ನಿರ್ಧಾರಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಬಂದಿದೆ.

    ಇದೇ ಕಾರಣದಿಂದ ಇದೀಗ ರೋಹಿತ್ ಶರ್ಮಾ ಅವರಿಗೆ ಮತ್ತೈದು ಪಂದ್ಯಗಳಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅದರಂತೆ ಜೂನ್ 20ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.