Tag: Rohit Sardana

  • ಖ್ಯಾತ ಪತ್ರಕರ್ತ, ಹಿರಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾಗೆ ಬಲಿ

    ಖ್ಯಾತ ಪತ್ರಕರ್ತ, ಹಿರಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾಗೆ ಬಲಿ

    ನವದೆಹಲಿ: ಟೆಲಿವಿಷನ್‍ನ ಪತ್ರಕರ್ತ ಮತ್ತು ಹಿರಿಯ ನಿರೂಪಕ ರೋಹಿತ್ ಸರ್ದಾನರವರು ಶುಕ್ರವಾರ ಕೊರೊನಾದಿಂದ ನಿಧನರಾಗಿದ್ದಾರೆ.

    ರೋಹಿತ್ ಸರ್ದಾನ ಅವರು ಆಜ್‍ತಕ್ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಜನಪ್ರಿಯ ಕಾರ್ಯಕ್ರಮ ‘ದಂಗಲ್’ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಸಕ್ತ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಈ ಮುನ್ನ ಜೀ ನ್ಯೂಸ್‍ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಕೂಡ ಚರ್ಚಾ ಆಧಾರಿತ ‘ತಾಲ್ ಥೋಕ್ ಕೆ’ ಎಂಬ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ್ದರು.

    ರೋಹಿತ್ ಸರ್ದಾನಾ ಅವರಿಗೆ ಸರ್ಕಾರವು 2018ರಲ್ಲಿ ‘ಗಣೇಶ ಶಂಕರ್ ವಿದ್ಯಾರ್ಥ’ ಪುರಸ್ಕರ ಪ್ರಶಸ್ತಿಯನ್ನು ನೀಡಿತ್ತು. ಮಾಧ್ಯಮದ ಮಿತ್ರರು, ಮಂತ್ರಿಗಳು ಸೇರಿದಂತೆ ಅನೇಕ ರಾಜಕಾರಣಿಗಳು ಸದ್ಯ ನಿರೂಪಕನಿಗೆ ಕಂಬನಿ ಮಿಡಿಯುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ರೋಹಿತ್ ಸರ್ದಾನಾ ಬಹು ಬೇಗ ನಮ್ಮನ್ನು ಅಗಲಿದ್ದಾರೆ. ಭಾರತದ ಅಭಿವೃದ್ದಿ ಕುರಿತಂತೆ ಬಹಳ ಉತ್ಸಾಹ ಹೊಂದಿದ್ದರು. ಹೃದಯ ವಂತರು. ಅವರ ಅಕಾಲಿಕ ಮರಣವು ಮಾಧ್ಯಮ ಜಗತ್ತಿಗೆ ತುಂಬಾಲಾರದ ನಷ್ಟವನ್ನುಂಟು ಮಾಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾರವರು, ರೋಹಿತ್ ಸರ್ದಾನ ಅವರ ಸಾವಿನ ಸುದ್ದಿ ನೋವುಂಟು ಮಾಡಿದೆ. ಪಕ್ಷಪಾತವಿಲ್ಲದ ಮತ್ತು ನ್ಯಾಯಯುತ, ಬುದ್ದಿವಂತ ಪತ್ರಕರ್ತನನ್ನು ದೇಶವು ಕಳೆದುಕೊಂಡಿದೆ. ಈ ದುರಂತ ನಷ್ಟವನ್ನು ಭರಿಸಲು ದೇವರು ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ. ಅವರ ಕುಟುಂಬ ಹಾಗೂ ಅನುಯಾಯಿಗಳಿಗೆ ನನ್ನ ಸಂತಾಪ ಎಂದು ಟ್ವೀಟ್ ಮಾಡಿದ್ದಾರೆ.