Tag: Rohit Godara

  • ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

    ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

    ನವದೆಹಲಿ: ಬೆಂಗಳೂರಿನಲ್ಲಿ (Bengaluru) ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಮುನಾವರ್ ಫಾರೂಕಿ (Munawar Faruqui) ಹತ್ಯೆಗೆ ಯತ್ನ ನಡೆಸಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಸದ್ಯ ವಿದೇಶದಲ್ಲಿರುವ ಗ್ಯಾಂಗ್‌ಸ್ಟಾರ್‌ಗಳಾದ​​ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ (Rohit Godara, Goldy Brar) ಸೂಚನೆಯ ಮೇರೆಗೆ ಮುನಾವರ್ ಫಾರೂಕಿಯನ್ನು ಹತ್ಯೆ ಮಾಡಲು ಹಂತಕರು ಸಂಚು ರೂಪಿಸಿದ್ದ ವಿಚಾರ ದೆಹಲಿ ಪೊಲೀಸರ ತನಿಖೆಯಿಂದ ಹೊರ ಬಿದ್ದಿದೆ.

    ಡಿಸೆಂಬರ್‌ 2024 ರಲ್ಲಿ ಹರಿಯಾಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳಾದ ಶೂಟರ್ ರಾಹುಲ್ ಮತ್ತು ಸಾಹಿಲ್ ದೆಹಲಿಯಲ್ಲಿರುವ ಬಗ್ಗೆ ಖಚಿತ ಮಾಹಿತಿ ದೆಹಲಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇಲೆ ಇಬ್ಬರನ್ನು ಹಿಡಿಯಲು ಪೊಲೀಸರು ತೆರಳಿದ್ದರು.

     
    ಗುರುವಾರ ಬೆಳಗ್ಗೆ 3 ಗಂಟೆಗೆ ದೆಹಲಿಯ ಐತ್ಪುರ್-ಕಾಳಿಂದಿ ಕುಂಜ್ ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಇಬ್ಬರನ್ನು ನಿಲ್ಲಿಸುವಂತೆ ಕೇಳಿದಾಗ ಇವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಇವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ವಿಚಾರಣೆಯ ಸಂದರ್ಭದಲ್ಲಿ ಹಿಂದೂ (Hindu) ಧರ್ಮ ಮತ್ತು ದೇವರನ್ನು ಅವಹೇಳನ ಮಾಡುತ್ತಿರುವ ಮುನಾವರ್ ಫಾರೂಕಿ ಹತ್ಯೆ ನಡೆಸುವಂತೆ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಕಡೆಯಿಂದ ನಮಗೆ ಸೂಚನೆ ಬಂದಿತ್ತು. ದೆಹಲಿಯಲ್ಲಿ ಮುನಾವರ್ ಫಾರೂಕಿ ಇರುವ ವಿಚಾರ ತಿಳಿದು ಹತ್ಯೆ ಮಾಡಲು ನಾವು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗಾಯಕ ಜುಬೀನ್ ಗಾರ್ಗ್ ಸಾವು ಕೇಸ್ – ಮ್ಯಾನೇಜರ್, ಸಿಂಗಾಪುರದ ಕಾರ್ಯಕ್ರಮ ಆಯೋಜಕ ಅರೆಸ್ಟ್

    ದೆಹಲಿಗೆ ಬರುವ ಮೊದಲು ಮುಂಬೈ ಮತ್ತು ಬೆಂಗಳೂರಿನಲ್ಲಿ ಫಾರೂಕಿ ಹತ್ಯೆಗೆ ಪ್ಲ್ಯಾನ್‌ ಮಾಡಿದ್ದರು. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದ ಜಾಗದ ಹೊರ ಭಾಗದಲ್ಲಿ ಫಾರೂಕಿ ಹತ್ಯೆಗೆ ಸಂಚು ರೂಪಿಸಿ ಕಾಯುತ್ತಿದ್ದರು. ಆದರೆ ಫಾರೂಕಿ ಬೇರೆ ಕಾರಿನಲ್ಲಿ ಹೊರಟುಹೋಗಿದ್ದರಿಂದ ಕೊನೆ ಕ್ಷಣದಲ್ಲಿ ಈ ಪ್ಲ್ಯಾನ್‌ ವಿಫಲವಾಗಿತ್ತು ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    2021 ರಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕೆ ಫಾರೂಕಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. 1 ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಜಾಮೀನು ಮಂಜೂರು ಮಾಡಿತ್ತು. ಕಳೆದ ವರ್ಷ ಮುಂಬೈ ಪೊಲೀಸರು ಅಕ್ರಮ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿದ ಬಳಿಕ ಮತ್ತೆ ಫಾರೂಕಿಯ ಬಂಧನವಾಗಿತ್ತು.  ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

    ಫಾರೂಕಿ 2024 ರ ಹಿಂದಿ  ಬಿಗ್ ಬಾಸ್ ಗೆದ್ದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 1.4 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.

  • ನಟ ಸಲ್ಮಾನ್ ಖಾನ್ ಹತ್ಯೆಗೆ ಭೂಗತ ಪಾತಕಿ ಪ್ಲ್ಯಾನ್

    ನಟ ಸಲ್ಮಾನ್ ಖಾನ್ ಹತ್ಯೆಗೆ ಭೂಗತ ಪಾತಕಿ ಪ್ಲ್ಯಾನ್

    ಬಾಲಿವುಡ್ ನಟ ಸಲ್ಮಾನ್ ಖಾನ್  ಮನೆ ಮುಂದೆ ಗುಂಡು ಹಾರಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ತೀವ್ರ ವಿಚಾರಣೆಗೂ ಒಳಪಡಿಸಿದ್ದಾರೆ. ಈ ವಿಚಾರಣೆಯಲ್ಲಿ ಭಯಬೀಳಿಸುವಂತ ಪಾತಕಿಯೊಬ್ಬನ ಹೆಸರು ಕೇಳಿ ಬಂದಿದೆ. ಸಲ್ಮಾನ್ ಹತ್ಯೆಗೆ ನಟೋರಿಸ್ ರೋಹಿತ್ ಗೊದಾರ (Rohit Godara) ಸಂಚು ಹಾಕಿದ್ದ ಅನ್ನುವ ಅಂಶ ಬೆಳಕಿಗೆ ಬಂದಿದೆ.

    ಮೊನ್ನೆಯಷ್ಟೇ ಮುಂಬೈ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದರು. ಬಂಧನಕ್ಕೆ ಒಳಗಾದ 6ನೇ ಆರೋಪಿ ಇವನಾಗಿದ್ದಾನೆ. ಬಂಧಿತ ಆರೋಪಿಯನ್ನ ಹರ್ಪಾಲ್ ಎಂದು ಗುರುತಿಸಲಾಗಿದೆ. ಮೊನ್ನೆಯಷ್ಟೇ  ಮೊಹಮ್ಮದ್ ರಫೀಕ್ ಚೌಧರಿ (Mohammed Rafique Chaudhary) ಹೆಸರಿನ 5ನೇ ಆರೋಪಿಯನ್ನು ರಾಜಸ್ಥಾನದ ನಾಗೌರ್ ನಲ್ಲಿ ಬಂಧಿಸಿದ್ದರು ಪೊಲೀಸರು.

    ಈ ಇಬ್ಬರೂ ಕೂಡ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನೆಂದು ಹೇಳಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತನಾದ ಐದನೇ ವ್ಯಕ್ತಿ ಇವನಾಗಿದ್ದಾರೆ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಈ ನಾಲ್ವರಲ್ಲಿ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಲ್ಮಾನ್ ಖಾನ್  (Salman Khan) ಅವರ ಮನೆಮುಂದೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡು ಅವರನ್ನು ವಿಚಾರಣೆ ಮಾಡಲಾಗುತ್ತಿತ್ತು. ಈ ವೇಳೆ ಅನುಜ್ ಥಾಪಸ್ (Anuj Thapas) ಎಂಬ ವ್ಯಕ್ತಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಕುಟುಂಬ ಮುಂಬೈ ಹೈಕೋರ್ಟ್ (Court)  ಮೆಟ್ಟಿಲು ಏರಿದ್ದರು. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

     

    ತಮ್ಮ ಮಗನು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಅವರು ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಠಾಣೆಯಲ್ಲಿನ ಸಿಸಿಟಿವಿ ವಿಡಿಯೋವನ್ನು ಒಪ್ಪಿಸುವಂತೆ ಮತ್ತು ಹೊಸದಾಗಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಥಾಪನ್ ಠಾಣೆಯ ಪೊಲೀಸರ ಹಿಂಸೆಯಿಂದಾಗಿ ತಾವು ಮಗನನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ ಪೋಷಕರು.

  • ಬಿಷ್ಣೋಯ್, ಗೋದಾರಾ ಗ್ಯಾಂಗ್‍ನ ಐವರು ಶೂಟರ್‌ಗಳ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಬಿಷ್ಣೋಯ್, ಗೋದಾರಾ ಗ್ಯಾಂಗ್‍ನ ಐವರು ಶೂಟರ್‌ಗಳ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಚಂಡೀಗಢ: ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ರೋಹಿತ್ ಗೋದಾರಾ (Rohit Godara) ಗ್ಯಾಂಗ್‍ಗೆ ಸೇರಿದ ಐವರು ಶೂಟರ್‌ಗಳನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ದಿನೇಶ್ ಅಲಿಯಾಸ್ ದೀನು, ಜಗದೀಶ್ ಅಲಿಯಾಸ್ ಜಗ್ಗು, ವಿಷ್ಣು, ಸಾಗರ್ ಮತ್ತು ಪ್ರದೀಪ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಮೂರು ವಿದೇಶಿ ನಿರ್ಮಿತ ಗ್ಲೋಕ್ ಪಿಸ್ತೂಲ್, ಐದು ಸ್ವಯಂಚಾಲಿತ ಪಿಸ್ತೂಲ್‍ಗಳು ಮತ್ತು 55 ಸಜೀವ ಕಾಟ್ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಗಳಿಂದ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ ಮೂವರು ನಕ್ಸಲರ ಹತ್ಯೆ

    ಎಲ್ಲಾ ಶೂಟರ್‍ಗಳು ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ರೋಹಿತ್ ಗೋದಾರಾ ಗ್ಯಾಂಗ್ ಜೊತೆ ಕೆಲಸ ಮಾಡಿದ್ದಾರೆ. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಿನೇಶ್‍ನನ್ನು ಶನಿವಾರ ಫರೂಖ್‍ನಗರದಲ್ಲಿ ಬಂಧಿಸಲಾಗಿತ್ತು. ಆತನನ್ನು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನಿಡಿದ್ದ. ಈ ಮಾಹಿತಿ ಆಧರಿಸಿ ಉಳಿದ ನಾಲ್ವರನ್ನು ಪಂಜಾಬ್‍ನ ಫಾಜಿಲ್ಕಾ ಬಳಿಯ ಅಬೋಹರ್‍ನಲ್ಲಿ ಬಂಧಿಸಲಾಗಿದೆ.

    ಫರೂಖ್‍ನಗರದಲ್ಲಿ ವೈ-ಫೈ ಕನೆಕ್ಷನ್ ಪ್ರೊವೈಡರ್ ಶಾಪ್ ನಡೆಸುತ್ತಿರುವ ದಿನೇಶ್ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ರೋಹಿತ್ ಗೋಡಾರಾರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಆತ ಶೂಟರ್‌ಗಳಿಗಾಗಿ ಅಡಗುದಾಣಗಳನ್ನು ಸಿದ್ಧಪಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಗುರುಗ್ರಾಮ್ ಪ್ರದೇಶದಲ್ಲಿ ಗ್ಯಾಂಗ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಮುಂದಾಗಿತ್ತು ಎಂದು ಪೊಲಿಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳು ಗ್ಯಾಂಗ್ ಲೀಡರ್‌ಗಳ ಸೂಚನೆಯ ಮೇರೆಗೆ ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಸೀರಿಯಲ್‌ ಚಿತ್ರೀಕರಣದ ವೇಳೆ ಮಾಡಿದ ತಪ್ಪು – ʻಸೀತಾರಾಮʼ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌!