ಬೆಂಗಳೂರು: ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಪಠ್ಯಪುಸ್ತಕ ಪುಸ್ತಕ ಪರಿಶೀಲನಾ ಸಮಿತಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಠ್ಯ ಸಂಘರ್ಷಕ್ಕಿಂತ ಇದು ಜಾತಿ ಸಂಘರ್ಷವಾಗಿ ಮಾರ್ಪಡುತ್ತಿತ್ತು. ಈ ಹಿನ್ನೆಲೆ ಎಚ್ಚೆತ್ತ ಸಿಎಂ ಬೊಮ್ಮಾಯಿ ನಿನ್ನೆ ಸಮಿತಿಯನ್ನು ವಿಸರ್ಜಿಸಿದ್ದೇವೆ ಎಂದು ತಿಳಿಸಿದ್ದರು.
ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು @BSBommai ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು, ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು.
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) June 4, 2022
ಈ ಹಿನ್ನೆಲೆ ಟ್ವೀಟ್ ಮಾಡಿದ ನಾರಾಯಣಗೌಡ ಅವರು, ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು@BSBommai ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು. ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
– ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ
– ಇಂದು ಅಥವಾ ನಾಳೆ ಸಿಎಂಗೆ ನಾಗೇಶ್ ವರದಿ ಸಲ್ಲಿಕೆ ಸಾಧ್ಯತೆ
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಇಂದು ಸಂಜೆ ಅಥವಾ ನಾಳೆ ಸಿಎಂಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ.
ಗುರುವಾರ ರಾತ್ರಿ ಗುಜರಾತ್‍ನಿಂದ ವಾಪಸ್ ಆಗಿರುವ ಸಚಿವರು, ಪಠ್ಯ ಪುಸ್ತಕ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆಯಿದೆ. ಈಗಾಗಲೇ ಪಠ್ಯಪುಸ್ತಕ ಗೊಂದಲದ ಬಗ್ಗೆ ಶಿಕ್ಷಣ ಇಲಾಖೆ ವರದಿ ಸಿದ್ಧ ಮಾಡಿದ್ದು, ಇದನ್ನು ನೋಡಿದ ಬಳಿಕ ಸಿಎಂಗೆ ಆ ವರದಿಯನ್ನು ಸಲ್ಲಿಸುತ್ತಾರೆ. ಸಾಹಿತಿಗಳ ಆರೋಪಕ್ಕೆ ಶಿಕ್ಷಣ ಇಲಾಖೆ ದಾಖಲಾತಿ ಸಮೇತ ವರದಿ ಸಿದ್ಧ ಮಾಡಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಏನಾಗಿದೆ? ಯಾವ ಪಠ್ಯ ಸೇರ್ಪಡೆ ಮಾಡಲಾಗಿದೆ? ಯಾವ ಪಠ್ಯ ಕೈಬಿಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ವರದಿಯಲ್ಲಿ ಉಲ್ಲೇಖ ಮಾಡಿದ್ದು, ಈಗ ಕೇಳಿ ಬಂದಿರುವ ಆರೋಪಗಳ ಬಗ್ಗೆ ದಾಖಲಾತಿ ಸಮೇತ ವಿವರಣೆ ನೀಡಲಿದೆ.
ಪರಿಷ್ಕರಣೆ ಸಮಿತಿ ಅಧ್ಯಕ್ಷರ ವಿವರ ಒಳಗೊಂಡು, ಟಿಪ್ಪು, ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ವಿವಾದಿತ ಪಠ್ಯಗಳ ಬಗ್ಗೆ ಸಂಪೂರ್ಣ ದಾಖಲಾತಿ ಸಮೇತ ವಿವರಣೆ ನೀಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವರದಿಯಲ್ಲಿ ಏನಿದೆ?:
ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕನ್ನಡ ಕಾವ್ಯ, ಇತಿಹಾಸವನ್ನು ಅಳವಾಗಿ ಅಭ್ಯಾಸ ಮಾಡಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅವರು ಅರ್ಹರಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದೆ. ಇದರ ಜೊತೆಗೆ ನಾಡಿಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಮತ್ತು ಆರೋಪದ ವಿಚಾರವಾಗಿ 2017ರಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಕುವೆಂಪು ಪಠ್ಯದ ಬಗ್ಗೆ ಗೊಂದಲ ಬಗ್ಗೆ ದಾಖಲಾತಿ ಸಮೇತ ವಿವರ ನೀಡಿದ್ದು, 2015-16 ಡಾ. ಮುಡಂಬಡಿತ್ತಾಯ ಸಮಿತಿ ಕುವೆಂಪು ಅವರ 8 ಪಠ್ಯವನ್ನು ಇಟ್ಟಿದ್ದರು. ಆದರೆ ಬರಗೂರು ಸಮಿತಿ ಕುವೆಂಪು ಅವರು ಒಂದು ಪಠ್ಯ ಕಡಿತ ಮಾಡಿ 7 ಪಠ್ಯ ಅಳವಡಿಕೆ ಮಾಡಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಹೊಸದಾಗಿ ಮತ್ತೆ ಕುವೆಂಪು ಅವರ 3 ಪಠ್ಯ ಸೇರ್ಪಡೆ ಮಾಡಿದೆ ಎಂಬುದರ ಬಗ್ಗೆ ಪಠ್ಯದ ಸಮೇತ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
4ನೇ ತರಗತಿಯಲ್ಲಿ ಪರಿಸರ ಅಧ್ಯಯನದಲ್ಲಿ ಕುವೆಂಪುರಿಗೆ ಅಪಮಾನ ಮಾಡಿದೆ ಎಂಬ ಆರೋಪ ಮಾಡಲಾಗಿದೆ. ಆದರೆ ರೋಹಿತ್ ಸಮಿತಿ 6ರಿಂದ 10ನೇ ತರಗತಿ ಪಠ್ಯ ಮಾತ್ರ ಪರಿಷ್ಕರಣೆ ಮಾಡಿದೆ. 4ನೇ ತರಗತಿ ಪಠ್ಯ ಬರಗೂರು ರಾಮಚಂದ್ರಪ್ಪ ಸಮಿತಿಯದ್ದೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಮೈಸೂರು ಒಡೆಯರ್ ಪಠ್ಯಕ್ಕೆ ಬರಗೂರು ಸಮಿತಿ ಕತ್ತರಿ ಹಾಕಿತ್ತು. ಈಗ ಅದನ್ನು ಸರಿ ಮಾಡಲಾಗಿದೆ. ಮೈಸೂರು ಒಡೆಯರ್ ಪೂರ್ಣ ಇತಿಹಾಸ ಅಳವಡಿಕೆ ಮಾಡಲಾಗಿದೆ.
ಬರಗೂರು ಸಮಿತಿಯೂ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಒಡೆಯರ್ ಪಠ್ಯವನ್ನು ಸಂಕ್ಷಿಪ್ತ ಮಾಡಿ ಟಿಪ್ಪು ಪಠ್ಯವನ್ನು ಹೆಚ್ಚಾಗಿ ಸೇರ್ಪಡೆ ಮಾಡಿತ್ತು. ಈಗ ಇದನ್ನು ಸರಿ ಮಾಡಲಾಗಿದೆ. ಅದರ ಜೊತೆಗೆ ಬರಗೂರು ಸಮಿತಿಯೂ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಲಾಗಿತ್ತು. ಅದನ್ನು ಪರಿಷ್ಕರಣೆ ಮಾಡಿ ಟಿಪ್ಪುವಿನ ಇತಿಹಾಸ ಸಂಪೂರ್ಣವಾಗಿ ಸೇರ್ಪಡೆ ಮಾಡಲಾಗಿದೆ. ಆದರೆ ಟಿಪ್ಪು ಪಠ್ಯವನ್ನು ಕೈಬಿಟ್ಟಿದ್ದಾರೆ ಅನ್ನೋದು ಶುದ್ಧ ಸುಳ್ಳಾಗಿದೆ.
ರೋಹಿತ್ ಚಕ್ರತೀರ್ಥ ಸಮಿತಿಯೂ ಎಲ್ಲಾ ಪಠ್ಯವನ್ನು ಪರಿಷ್ಕರಣೆ ಮಾಡಿಲ್ಲ. 1 ರಿಂದ 10 ಕನ್ನಡ ಭಾಷಾ ಪುಸ್ತಕ ಮತ್ತು 6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಮಾತ್ರ ಪರಿಷ್ಕರಣೆ ಮಾಡಿದೆ. ಈಗಾಗಲೇ 76.87% ಪಠ್ಯ ಮುದ್ರಣ ಆಗಿದೆ. ಇದರಲ್ಲಿ 63.01% ಪಠ್ಯ ಶಾಲೆಗಳಿಗೆ ಸರಬರಾಜು ಆಗಿದೆ. ಬರಗೂರು ಸಮಿತಿ ಪರಿಷ್ಕರಣೆಯಲ್ಲಿ ಹೆಚ್ಚು ಲೋಪಗಳು ಇದ್ದವು. ಇದನ್ನು ಸರಿ ಮಾಡಲಾಗಿದೆ. ಇದನ್ನೂ ಓದಿ:ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್ ಭಾಗವತ್
ಹೊಸ ಧರ್ಮಗಳ ಉದಯ ಪಠ್ಯದಲ್ಲಿ ವೈದಿಕ ಧರ್ಮ ಹಾಗೂ ಬ್ರಾಹ್ಮಣರನ್ನು ನಿಂದಿಸಲಾಗಿತ್ತು. ಇಂದ್ರ ದೇವನು ವಿಪರೀತ ಸೋಮ ರಸ ಕುಡಿಯುತ್ತಿದ್ದನು ಅಂತ ಸೇರಿಸಲಾಗಿತ್ತು. ಅಷ್ಟೇ ಅಲ್ಲದೇ 1857 ಸ್ವಾತಂತ್ರ್ಯ ಸಂಗ್ರಾಮವನ್ನ ದಂಗೆ ಅಂತ ಕರೆಯಲಾಗಿತ್ತು. ಹಿಂದೂ ಮಹಾಸಾಗರವನ್ನ ಹಿಂದು ಅಂತ ಹೆಸರು ಇತ್ತು ಅಂತ ಇಂಡಿಯನ್ ಓಷನ್ ಅಂತ ಬದಲಾವಣೆ ಮಾಡಲಾಗಿತ್ತು. ಇದನ್ನ ಪರಿಷ್ಕರಣೆ ಮಾಡಿದ್ದೇವೆ.
ಬರಗೂರು ಸಮಿತಿಯು 6ನೇ ತರಗತಿಯಲ್ಲಿ ಇತಿಹಾಸ ಪರಿಚಯ ಪಾಠ ಸೇರಿಸಿತ್ತು. ಇದು 6ನೇ ತರಗತಿ ವಯೋಮಾನದ ಮಕ್ಕಳಿಗೆ ಮೀರಿದ ಪಠ್ಯ ಆಗಿತ್ತು. ಇದರಲ್ಲಿ ಪಾಶ್ಚಾತ್ಯ ಇತಿಹಾಸಕಾರರ ಬಗ್ಗೆ ಮಾತ್ರ ಉಲ್ಲೇಖ ಇತ್ತು. ಈಗ ಅದನ್ನು ಬಿಟ್ಟು ಭಾರತ ನಮ್ಮ ಹೆಮ್ಮೆ ಎಂಬ ಪಾಠ ಸೇರ್ಪಡೆ ಮಾಡಲಾಗಿದೆ.
ಟಿಪ್ಪು, ತುಘಲಕ್, ಮೊಘಲ್ ದೊರೆಗಳ ಬಗ್ಗೆ ಪುಟಗಟ್ಟಲೆ ಉಲ್ಲೇಖ ಬರಗೂರು ಸಮಿತಿ ಮಾಡಿತ್ತು. ಭಾರತೀಯ ರಾಜರ ಸಾಹಸ, ಶೌರ್ಯದ ಪಠ್ಯ ಇರಲಿಲ್ಲ. ಇದನ್ನು ಸರಿ ಮಾಡಲಾಗಿದೆ. ಟಿಪ್ಪುವಿನ ವೈಭವೀಕರಣಕ್ಕೆ ಕಡಿವಾಣ ಹಾಕಲಾಗಿದೆ. ಟಿಪ್ಪು ಬಗ್ಗೆ ಸತ್ಯದ ಮಾಹಿತಿ ನೀಡಲಾಗಿದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಮದಕರಿ ನಾಯಕರ ಪಠ್ಯ ಇರಲಿಲ್ಲ. ಸಮಿತಿ ಈಗ ಅವರ ಪಠ್ಯ ಸೇರ್ಪಡೆ ಮಾಡಿದೆ. ಬರಗೂರು ಸಮಿತಿ 10ನೇ ತರಗತಿ ಪಠ್ಯದಲ್ಲಿ ಅಂಬೇಡ್ಕರ್, ಗಾಂಧಿಯವರ ಕುರಿತು ಮಾಹಿತಿ ಹೊಂದಿದ ಉದಾತ್ತ ಚಿಂತನೆಗಳು ಪಾಠ ತೆಗೆಯಲಾಗಿತ್ತು. ಈಗ ಅದನ್ನು ಮರು ಸೇರ್ಪಡೆ ಮಾಡಲಾಗಿದೆ.
ಭಗತ್ ಸಿಂಗ್, ನಾರಾಯಣ ಗುರು, ಪೆರಿಯಾರ್ ಪಠ್ಯವನ್ನು ಹೊಸ ಸಮಿತಿ ಕೈಬಿಟ್ಟಿಲ್ಲ. ಸುಮ್ಮನೆ ವಿವಾದ ಮಾಡಿದ್ದಾರೆ. ಭಗತ್ ಸಿಂಗ್‍ರ ಒಂದು ಹೆಚ್ಚುವರಿ ಪಠ್ಯ ತಾಯಿ ಭಾರತೀಯ ಅಮರ ಯೋಧರು ಎನ್ನುವ ಪಠ್ಯ ಸೇರ್ಪಡೆ ಮಾಡಲಾಗಿದೆ. ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದೇವೆ.
ಬರಗೂರು ಸಮಿತಿ 8ನೇ ತರಗತಿಯಲ್ಲಿ ಸಿಂಧೂ ಸಂಸ್ಕೃತಿ ಪಾಠ ತೆಗೆದು ನೆಹರು ಅವರ ಪತ್ರಗಳ ಪಾಠ ಸೇರಿಸಿದ್ದರು. ಹೊಸ ಸಮಿತಿಯೂ ಸಿಂಧೂ ಸಂಸ್ಕೃತಿಯ ನಾಗರೀಕತೆ ಪಠ್ಯ ಸೇರ್ಪಡೆ ಮಾಡಿದೆ. ಬರಗೂರು ಸಮಿತಿ ಚರ್ಚ್, ಮಸೀದಿಗಳ ಫೋಟೋವನ್ನು ಪಠ್ಯದಲ್ಲಿ ಬಳಸಿ ದೇವಾಲಯ ಫೋಟೋವನ್ನು ಕೈಬಿಟ್ಟಿತ್ತು. ಇದನ್ನ ಈಗ ಸರಿ ಮಾಡಲಾಗಿದೆ.
ಮೊಘಲರ ದಾಳಿ ತಡೆದ ಭಾರತೀಯ ಅಹೋಮ್ ರಾಜಯ ಪರಿಚಯ ಮಾಡಿಕೊಡಲಾಗಿದೆ. ಕಾಶ್ಮೀರದ ಕಾರ್ಕೋಟ ರಾಜರ ಪಠ್ಯ ಸೇರ್ಪಡೆ ಮಾಡಲಾಗಿದೆ. ಮೈಸೂರಿನ ಲ್ಯಾನ್ಸರ್ ರೆಜಿಮೆಂಟ್ ಕುರಿತು ಮಾಹಿತಿ ಸೇರಿಸಲಾಗಿದೆ. ಭಾರತದ ನಾಗಬುಡಕಟ್ಟು ಮಹಿಳೆಯ ಸಾಹಸ ಕಥೆ ಗಾಯಿಡಿನ್ ಲೂ ಅವರ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್
ಕ್ರೈಸ್ತ, ಇಸ್ಲಾಂ, ಜೈನ, ಮತಗಳ ಬಗ್ಗೆ ಉಲ್ಲೇಖ ಇತ್ತು. ಆದರೆ ಸನಾತನ ಧರ್ಮದ ಪಠ್ಯ ಇರಲಿಲ್ಲ. ಈಗ ಸನಾತನ ಧರ್ಮದ ಪಠ್ಯ ಸೇರ್ಪಡೆ ಮಾಡಲಾಗಿದೆ. ಕೇರಳ ರಾಜ ಮಾರ್ತಾಂಡ ವರ್ಮನ ವಿವರ ನೀಡಲಾಗಿದೆ. ತಮಿಳುನಾಡಿನ ವೀರ ಪಾಂಡೆ ಕಟ್ಟಾ ಬೊಮ್ಮರವರ ಮಾಹಿತಿ ಕನ್ನಡದಲ್ಲಿ ಸೇರ್ಪಡೆ ಮಾಡಲಾಗಿದೆ.
ಸಮಾಜ ವಿಜ್ಞಾನ ಹೊರ ಇಳಿಸಲು 6 ಮತ್ತು 7ನೇ ತರಗತಿಯಲ್ಲಿ 1 ಅಧ್ಯಾಯ, 8ನೇ ತರಗತಿಯಲ್ಲಿ 2 ಅಧ್ಯಾಯ, 9ನೇ ತರಗತಿಯಲ್ಲಿ 4 ಮತ್ತು 10ನೇ ತರಗತಿಯಲ್ಲಿ 4 ಅಧ್ಯಾಯ ಕೈಬಿಟ್ಟು ಪಠ್ಯದ ಹೊರೆ ಇಳಿಸಲಾಗಿದೆ. ವಿವೇಕಾನಂದರ ಜನ್ಮದಿನ ಕುರಿತು ಪಠ್ಯ ಸೇರ್ಪಡೆ ಮಾಡಲಾಗಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದ ಬಗ್ಗೆ ಮಾಹಿತಿ ನೀಡಲಾಗಿದೆ.
ಚನ್ನಭೈರಾದೇವಿ, ನಿಟ್ಟೂರು ಶ್ರೀನಿವಾಸರಾಯರು, ಕೆ.ಟಿ.ಗಟ್ಟಿಯವರ ಪಾಠ ಸೇರ್ಪಡೆ ಮಾಡಲಾಗಿದೆ. ಬರಗೂರು ಸಮಿತಿ ಏಣಗಿ ಬಾಳಪ್ಪ ಜೀವನ ಪರಿಚಯ ಕೈಬಿಟ್ಟಿತ್ತು. ಕೆ.ಎಸ್. ನರಸಿಂಹಸ್ವಾಮಿಯವರ ಭಾರತೀಯತೆ ಕವನ ಕೈ ಬಿಡಲಾಗಿತ್ತು. ಅದನ್ನ ಸೇರ್ಪಡೆ ಮಾಡಲಾಗಿದೆ. ಇದರ ಜೊತೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಬರಗೂರು ಸಮಿತಿ ಕೈ ಬಿಟ್ಟಿತ್ತು ಜೊತೆಗೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಮಾಹಿತಿಯನ್ನು ತೆಗೆದಿತ್ತು. ಹೊಸ ಸಮಿತಿ ಕೆಂಪೇಗೌಡರ ಪಠ್ಯ ಸೇರ್ಪಡೆ ಮಾಡಿದೆ.
ಹುಬ್ಬಳ್ಳಿಯ ಸಿದ್ದರೂಢ ಜಾತ್ರೆ, ಮಂಜೇಶ್ವರ ಗೋವಿಂದ್ ಪೈ, ಪಂಜೆ ಮಂಗೇಶರಾಯರು ಪಠ್ಯ ಸೇರ್ಪಡೆ ಮಾಡಲಾಗಿದೆ. ಬಸವಣ್ಣನವರ ಪಠ್ಯವನ್ನು ರೋಹಿತ್ ಸಮಿತಿ ಪರಿಷ್ಕರಣೆ ಮಾಡಿಲ್ಲ. 2015-16ರಲ್ಲಿ ಡಾ. ಮುಡಂಬಡಿತ್ತಾಯ ಸಮಿತಿ ನೀಡಿದ್ದ ಪಠ್ಯವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ.
ಬರಗೂರು ಸಮಿತಿ ಪರಿಷ್ಕರಣೆ ವಿವಾದ ಆಗಿದ್ದರಿಂದ ಬರಗೂರು ಸಮಿತಿ ಪರಿಷ್ಕರಣೆ ಕೈಬಿಡಲಾಗಿದೆ. ಚಿಂತಕ ಹೆಡ್ಗೆವಾರ್ ಅವರ ಭಾಷಣದ ಒಂದು ಭಾಗವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಆರ್‍ಎಸ್‍ಎಸ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೇವಲ ರಾಷ್ಟ್ರೀಯ ಭಾವನೆಯ ಪಠ್ಯ ಇದಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ 107 ಪಾಠಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
ಕನ್ನಡ ಪ್ರಥಮ ಭಾಷೆಯಲ್ಲಿ 2021-22ರಲ್ಲಿ 195 ಪಾಠ ಇತ್ತು. 2022-23ರಲ್ಲಿ 198 ಪಠ್ಯ ಆಗಿದೆ. ಇದರಲ್ಲಿ 33 ಪಠ್ಯ ಮಾತ್ರ ಬದಲಾವಣೆ ಆಗಿದೆ. ಹೊಸದಾಗಿ 3 ಪಾಠ ಮಾತ್ರ ಸೇರಿಸಲಾಗಿದೆ. 165 ಪಾಠ ಹಾಗೇ ಉಳಿಸಿಕೊಳ್ಳಲಾಗಿದೆ. ಕನ್ನಡ ದ್ವೀತಿಯ ಭಾಷೆಯಲ್ಲಿ 170 ಪಾಠಗಳ ಪೈಕಿ 8 ಪಾಠ ಮಾತ್ರ ಬದಲಾವಣೆ ಮಾಡಲಾಗಿದೆ. 162 ಪಾಠ ಹಳೆ ಸಮಿತಿಯದ್ದೇ ಉಳಿಸಿಕೊಳ್ಳಲಾಗಿದೆ ಎಂಬ ಸಂಪೂರ್ಣ ದಾಖಲಾತಿಗಳ ಸಮೇತ ಇಲಾಖೆ ವರದಿ ಸಿದ್ಧ ಮಾಡಿದೆ.
ಮೈಸೂರು: ಪಠ್ಯ ಪರಿಷ್ಕರಣೆ ವಿಚಾರವಾಗಿ ದಿನಕ್ಕೊಂದು ವಿವಾದ ಭುಗಿಲೇಳುತ್ತಿದ್ದು, ರಾಜ್ಯ ಸರ್ಕಾರ ತೀವ್ರ ಒತ್ತಡ ಎದುರಿಸುತ್ತಿರುವಂತೆ ಕಾಣುತ್ತಿದೆ. ಅದ್ರಲ್ಲೂ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಲೆದಂಡಕ್ಕೆ ದಿನೇ ದಿನೇ ಆಗ್ರಹ ಹೆಚ್ಚುತ್ತಿದೆ. ದೇವನೂರ ಮಹಾದೇವ ಸೇರಿದಂತೆ 6 ಮಂದಿ ಸಾಹಿತಿಗಳು ಪಠ್ಯವಾಪ್ಸಿ ಚಳವಳಿ ಆರಂಭಿಸಿದ್ದಾರೆ.
ಬೆಂಗಳೂರು, ಚಾಮರಾಜನಗರ, ಬಾಗಲಕೋಟೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ರಾಷ್ಟ್ರಕವಿ ಕುವೆಂಪುರನ್ನು ಅಪಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಆದಿಚುಂಚನಗಿರಿ ಶ್ರೀಗಳ ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ
ಈಗಾಗಲೇ ತಮ್ಮ ಪಠ್ಯವನ್ನು ಹಿಂಪಡೆಯುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದ ಹಿರಿಯ ಸಾಹಿತಿ ದೇವನೂರ ಮಹಾದೇವ ಶಿಕ್ಷಣ ಸಚಿವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ತಮ್ಮ ಪಠ್ಯವನ್ನು ಹಿಂಪಡೆದಿರುವುದಾಗಿ ಹೇಳಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರೂ ಲೆಕ್ಕಿಸದೇ ಇರುವುದು ನನಗೆ ದಬ್ಬಾಳಿಕೆ ಅನ್ನಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: BBMP ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ: ಬೊಮ್ಮಾಯಿ
ಪತ್ರದಲ್ಲಿ ಏನಿದೆ?
ಈ ಹಿಂದೆ 10ನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈ ಬಿಡಬೇಕೆಂದು ತಮಗೆ ವಿನಂತಿಸಿ ಮೇ 26ರಂದು ಪತ್ರ ಬರೆದು ಕೊರಿಯರ್ ಮುಖಾಂತರ ರವಾನಿಸಿದ್ದೆ. ಅದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಬರೆದು ಕೊರಿಯರ್ ಮಾಡಿದ್ದೆ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೇ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು.
ಮತ್ತೂ ಹೇಳಬೇಕೆಂದರೆ, ಚಾತುವರ್ಣ ವಿರೋಧಿ ಬಸವಣ್ಣನವರ ಪಾಠವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕತ್ತು ಹಿಸುಕಿರುವುದು, ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿಸಿರುವುದು, ಒಂದು ಒಕ್ಕೂಟ ಸರ್ಕಾರದಲ್ಲಿ ಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜವೂ ಬೇಕು ಎಂದು ದನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಮಕ್ಕಳ ಪಠ್ಯ ಪರಿಷ್ಕರಣೆ ಮಾಡಲು ಅಧ್ಯಕ್ಷನನ್ನಾಗಿಸಿರುವುದು ಮತ್ತು ಸಮರ್ಥಿಸುತ್ತಿರುವುದು ಅಸಮಾಧಾನ ತಂದಿದೆ.
ಭಿನ್ನಾಭಿಪ್ರಾಯಗಳನ್ನು ಟೂಲ್‌ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲು ಕಸ ಮಾಡಿ, ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ.
ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ – ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು ಎಂದು ಕೋರಿದ್ದಾರೆ.
ಬೆಂಗಳೂರು: ಎನ್‍ಇಪಿ ಮುಖಾಂತರ ಹಾವಿನಪುರದವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿಪರರು, ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ದಾರ್ಶನಿಕರು, ಹೋರಾಟಗಾರರ ಪಠ್ಯ ಕೈಬಿಟ್ಟಿದ್ದಾರೆ. ಸಾಣೆಹಳ್ಳಿ ಶ್ರೀಗಳು, ಆದಿ ಚುಂಚನಗಿರಿ ಶ್ರೀಗಳು ವಿರೋಧ ವ್ಯಕ್ಯಪಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು, ಬಸವಣ್ಣನವರ ಪಾಠ ಕೈಬಿಟ್ಟಿದ್ದು ಸರಿಯಲ್ಲ. ಕೂಡಲೇ ಪಾಠಗಳಲ್ಲಿ ಸೇರಿಸುವಂತೆ ಒತ್ತಾಯಿಸಿದ್ದಾರೆ. ಆರ್‌ಎಸ್‍ಎಸ್ ಅಣತಿಯಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ನಾಗಪುರ, ಹಾವಿನಪುರದ ಒತ್ತಡಕ್ಕೆ ಸರ್ಕಾರ ಮಣಿದಿದೆ. ಸರ್ಕಾರ ಹಿಡನ್ ಅಜೆಂಡಾ ಜಾರಿಗೆ ತರ್ತಿದೆ. ಇದಕ್ಕೆ ನಮ್ಮದು ತೀವ್ರ ವಿರೋಧವಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ
ಕಾಂಗ್ರೆಸ್ ಅಭ್ಯರ್ಥಿ ಹಾಕಿದ್ದಕ್ಕೆ ಜೆಡಿಎಸ್ ಬೇಸರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾತ್ಯಾತೀತ ತತ್ವದ ಮೇಲೆ ಅಭ್ಯರ್ಥಿ ಹಾಕಿರಲಿಲ್ಲ. ದೇವೇಗೌಡರ ಹಿರಿತನಕ್ಕೆ ಗೌರವ ಕೊಟ್ಟು ಅವರ ವಿರುದ್ಧ ನಾವು ಇಳಿಸಿರಲಿಲ್ಲ. ಜಾತ್ಯಾತೀತ ತತ್ವದಲ್ಲಿ ಜೆಡಿಎಸ್‍ಗೆ ನಂಬಿಕೆ ಇದ್ದರೆ ಮತ ಹಾಕಲಿ ಎಂದು ಜೆಡಿಎಸ್‍ಗೆ ಪರೋಕ್ಷ ಸವಾಲೆಸೆದರು. ಇದನ್ನೂ ಓದಿ:ನಾನು ಕುವೆಂಪು ನಾಡಗೀತೆಯನ್ನು ಅಪಮಾನ ಮಾಡಿಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ
ಬೆಂಗಳೂರು: ಪಠ್ಯ ಪುಸ್ತಕದ ವಿವಾದ ಬೆನ್ನಲ್ಲೇ ಸಾಹಿತಿ ದೇವನೂರು ಮಹಾದೇವ ಅವರು ತನ್ನ ಕಥೆಯನ್ನು ಪಠ್ಯದಿಂದ ಕೈಬಿಡಬೇಕೆಂದು ಪ್ರಕಟಣೆ ನೀಡಿದ್ದಾರೆ.
ಪತ್ರದಲ್ಲಿ ಏನಿದೆ?
ಪಠ್ಯ ಪರಿಷ್ಕರಣೆಯ ವಾದ ವಿವಾದಗಳು ನಡೆಯುತ್ತಿದೆ. 10ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ನನ್ನದೂ ಒಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಪಠ್ಯದ ಪಿಡಿಎಫ್ ಬರಹಗಳನ್ನು ಇಲ್ಲ ಅಂತ, ಉಂಟು ಅಂತ, ಕೆಲವು ಸಲ ಸೇರಿದ್ದನ್ನು ಕೈ ಬಿಡುವುದು, ಮತ್ತೆ ಸೇರಿಸುವುದು ಇತ್ಯಾದಿ ಗಳಿಗೆ-ಗಳಿಗೆಗೂ ಬದಲಾಗುತ್ತಿದೆ. ಇರಲಿ, ನನ್ನ ಕಥನದ ಭಾಗ ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ಸೇರಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸುವುದಕ್ಕಾಗಿ ಈ ಪ್ರಕಟಣೆ ನೀಡುತ್ತಿದ್ದೇನೆ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ
ಏಕೆಂದರೆ..
(1) ಈ ಹಿಂದೆ ಪಠ್ಯಗಳಲ್ಲಿದ್ದ ಎಲ್.ಬಸವರಾಜು, ಎ.ಎನ್.ಮೂರ್ತಿರಾವ್, ಪಿ.ಲಂಕೇಶ್, ಸಾರಾ ಅಬೂಬಕರ್ ಮುಂತಾದವರ ಕಥೆ, ಲೇಖನಗಳನ್ನು ಕೈ ಬಿಡಲಾಗಿದೆ ಎಂದರೆ, ಯಾರು ಕೈ ಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಎಂತಲೇ ಅರ್ಥ.
(2) ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ತನಗೆ ಲೇಖಕರ ಜಾತಿ ತಿಳಿದಿಲ್ಲ ಎನ್ನುತ್ತಾರೆ. ಭಾರತದಂತಹ ಸಂಕೀರ್ಣ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಅಲ್ಲಿ ಸಹಜವಾಗಿ ಶೇ.90ರಷ್ಟು ಅವರ ಜಾತಿಯವರೇ ತುಂಬಿಕೊಳ್ಳುತ್ತಾರೆ. ಅವರವರ ಅಡಿಗೆ ಮನೆ ವಾಸನೆ ಪ್ರಿಯವಾಗುವಂತೆ. ಹೀಗಾಗಿ ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿದೆ. ಇದು ಈಗಿನದ್ದಲ್ಲ. ಡಾ.ಮುರಳಿ ಮನೋಹರ ಜೋಶಿ ಅವರು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಾತುವರ್ಣ ಹಿಂದೂ ಪ್ರಭೇದದ ಆರ್‌ಎಸ್‍ಎಸ್ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸಗಳ ಕುತ್ತಿಗೆಗೆ. ಇಲ್ಲೂ ಇದೇ ಆಗಿದೆ. ಇದನ್ನೂ ಓದಿ: ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್
ಈ ಪಠ್ಯಗಳಲ್ಲಾ ಪ್ರಕಟವಾದ ಮೇಲೆ ಅವುಗಳನ್ನು ಪರಿಶೀಲಿಸಿ, ಅಲ್ಲಿನ ತಪ್ಪು ಮತ್ತು ಕೊರತೆಗಳನ್ನು ತುಂಬಲು, ನಮ್ಮ ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳನ್ನು, ಪೂರಕ ವಿಷಯಗಳನ್ನು ಮುಖ್ಯವಾಗಿ ಸಂವಿಧಾನವನ್ನು ಬಿತ್ತರಿಸುವ ವಾಟ್ಸಾಪ್, ಇ-ಮೇಲ್, ಆನ್‍ಲೈನ್ ಕ್ಲಾಸ್ ಇತ್ಯಾದಿಗಳನ್ನು ರೂಪಿಸಲು ಆಲೋಚಿಸುತ್ತಿರುವ ನಾಡಿನ ಆರೋಗ್ಯವಂತ ಮನಸ್ಸುಗಳ ಜೊತೆ ನಾನಿರಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‍ಎಸ್) ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಭಾಷಣವನ್ನು 2022-23ನೇ ಸಾಲಿನ ಹತ್ತನೆಯ ತರಗತಿಯ ಶೈಕ್ಷಣಿಕ ವರ್ಷದ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ಶಿಕ್ಷಣದ ಕೇಸರೀಕರಣದ ಮುಂದುವರಿದ ಭಾಗವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡ್ಗೆವಾರ್ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಗದ್ಯಪುಸ್ತಕದಲ್ಲಿ ಐದನೇ ಪಠ್ಯವಾಗಿ ಸೇರಿಸಿದೆ. ದೇಶಾದ್ಯಂತ ನರಮೇಧಗಳನ್ನು ನಡೆಸಿದ, ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್‌ಎಸ್‍ಎಸ್ ಸಂಸ್ಥಾಪಕ ಹೆಡ್ಗೆವಾರ್ ಹೇಗೆ ಆದರ್ಶ ಪುರುಷನಾಗಲು ಸಾಧ್ಯ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ ವಿದ್ಯಾರ್ಥಿಗಳು
ಕಾರಣವೇನು?
ಹೆಗ್ಡೆವಾರ್ ಅವರ ಶಿಕ್ಷಣದ ನಂತರ ಬಂಗಾಳದಲ್ಲಿ ಅನುಶೀಲನ್ ಸಮಿತಿ(ಹಿಂದೂ ಕ್ರಾಂತಿಕಾರಿಗಳು) ಅದರ ಭಾಗವಾಗಿದ್ದರು. 1920ರ ದಶಕದಲ್ಲಿ ಕಾಂಗ್ರೆಸ್‍ಗೆ ಸೇರಿದರು. ಆದರೆ ಹಿಂದೂ ಮತ್ತು ಮುಸಲ್ಮಾನರ ನಡುವೆ ಐಕ್ಯತೆಯ ನೀತಿಯನ್ನು ಕಾಂಗ್ರೆಸ್ ಪಾಲಿಸುತ್ತಿದೆಯೆಂದು ಅದನ್ನು ತೊರೆದರು. ಖಿಲಾಫತ್ ಹೋರಾಟದಿಂದಾಗಿ ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳುವಳಿಯನ್ನು ಹೆಡ್ಗೆವಾರ್ ಒಪ್ಪಲಿಲ್ಲ, ನಂತರ ಹಿಂದೂ ರಾಷ್ಟ್ರದ ಗುರಿಗಾಗಿ 1925ರಲ್ಲಿ ಆರ್‌ಎಸ್‌ಎಸ್ ಸ್ಥಾಪಿಸಿದರು.
1929ರಲ್ಲಿ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪೂರ್ಣ ಸ್ವರಾಜ್ ಅಂಗೀಕರಿಸಿತು. ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಅವರು ಭಗವಾಧ್ವಜವನ್ನು ಹಾರಿಸಲು ಆರ್‌ಎಸ್‍ಎಸ್ ಕಾರ್ಯಕರ್ತರನ್ನು ಒತ್ತಾಯಿಸಿದರು. ಸಂಘದ ಯಾವುದೇ ಜವಾಬ್ದಾರಿಯುತ ಕಾರ್ಯಕರ್ತರು 1930ರ ದಶಕದಲ್ಲಿ ನಡೆದ ಗಾಂಧೀಜಿಯವರ ದಂಡಿಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು ಎಂದು ಸಿ.ಪಿ.ಭಿಷಿಕರ್ ಬರೆದ ಹೆಡ್ಗೆವಾರ್ ಅವರ ಅಧಿಕೃತ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು: ಸಿದ್ದು ವಿರುದ್ಧ ಬೋಪಯ್ಯ ಕಿಡಿ
ಇಂತಹ ದೇಶದ್ರೋಹಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಸಿದ್ಧಾಂತದ ಹೇರಿಕೆಯೆಂಬುದು ಸ್ಪಷ್ಟವಾಗಿದೆ. ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ವಿರೋಧಿಸಿದೆ. ಈ ಹೆಡ್ಗೆವಾರ್ ಭಾಷಣವನ್ನು ಶೀಘ್ರವೇ ಪಠ್ಯಕ್ರಮದಿಂದ ಕೈ ಬಿಡಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.