ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri), ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
`ತಡೆಯಾಜ್ಞೆ ಇದ್ದರೂ, ರೂಪಾ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಾತನಾಡಿದ್ರೆ ಪರವಾಗಿಲ್ಲ, ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯಡಿಯೂರಪ್ಪರಿಗೆ ಕಣ್ಣೀರು ಹಾಕಿಸಿದ ಬಗ್ಗೆ ಮೋದಿ ಉತ್ತರ ಕೊಡಲಿ- ಡಿಕೆಶಿ
ಚಾಮರಾಜನಗರದ ಅಮ್ಲಜನಕ ಸಿಲಿಂಡರ್ ದುರಂತ ಪ್ರಕರಣದಲ್ಲಿ ಈಗಾಗಲೇ ಸರ್ಕಾರ ತನಿಖೆ ನಡೆಸಿದೆ. ಸರ್ಕಾರ ವರದಿ ನೀಡಿದ್ದರೂ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ಜಡ್ಜ್ ಗಮನಕ್ಕೆ ತಂದರು.
ರೋಹಿಣಿ ಹೇಳಿಕೆ ಆಧರಿಸಿ, ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೋರ್ಟ್ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿದೆ.
ಬೆಂಗಳೂರು/ಮೈಸೂರು: ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಟಿ ಸಿವಿಲ್ ಕೋರ್ಟ್ (City Civil Court) ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಮಾತನಾಡದಂತೆ ಎಚ್ಚರಿಕೆ ಕೊಟ್ಟಿತ್ತು. ಇದಾದ ಬಳಿಕವೂ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D Roopa), ಸಿಂಧೂರಿ ವಿರುದ್ಧ ಗುಡುಗಿದ್ದಾರೆ.
ಮೈಸೂರು ಎಟಿಐ (Mysuru ATI) ನಿಂದ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನ ತಗೆದುಕೊಂಡು ಹೋದದ್ದು, ಅವುಗಳು ಡಿಸಿ ಮನೆಯಲ್ಲಿ ಕೂಡ ಇಲ್ಲ ಎಲ್ಲಿ ಹೋದವು? ಸಿಂಧೂರಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಸರ್ಕಾರಿ ವಸ್ತು 50 ರೂಪಾಯಿ ಇರಲಿ 50 ಕೋಟಿ ಇರಲಿ ತಪ್ಪು ತಪ್ಪೇ. 1,000 ರೂ. ಲಂಚ ತಗೆದುಕೊಂಡವರೂ ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗೂ ಗುಮಾಸ್ತನಿಗೂ ಒಂದೇ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವಿನ ಜಟಾಪಟಿಗೆ ಸಿಟಿ ಸಿವಿಲ್ ಕೋರ್ಟ್ (City Civil Court) ಬ್ರೇಕ್ ಹಾಕಿತ್ತು.
ಡಿ. ರೂಪಾ ವಿರುದ್ಧ ಮಾಡಿದ್ದ ಆರೋಪಗಳನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದರು. ವಿನಾಕಾರಣ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರೋ ರೂಪಾ ಅವರು ಮಾತನಾಡದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ರೋಹಿಣಿ ಸಿಂಧೂರಿ ಅವರ ವಾದ ಆಲಿಸಿದ ಕೋರ್ಟ್ ರೋಹಿಣಿ ಸಿಂಧೂರಿ ಅವರ ವಿರುದ್ಧ ರೂಪಾ ಮಾತನಾಡದಂತೆ ತಡೆಯಾಜ್ಞೆ ನೀಡಿತ್ತು. ಇದನ್ನೂ ಓದಿ: ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ
ನಂತರ ಐಪಿಎಸ್ (IPS) ಅಧಿಕಾರಿ ಡಿ.ರೂಪಾ ಪರ ವಕೀಲರು ತಮ್ಮ ಮನವಿ ಪುರಸ್ಕರಿಸುವಂತೆ ಮನವಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಕೋರ್ಟ್ ರೂಪಾ ಪರ ವಕೀಲರ ಮನವಿಯನ್ನೂ ಪುರಸ್ಕರಿಸಿದೆ. ಹಾಗಾಗಿ ರೂಪಾ ಫೇಸ್‌ಬುಕ್ (Facebook) ವಾಲ್‌ನಲ್ಲಿ ತಮ್ಮ ವಾದ ಕೇಳಲು ಅವಕಾಶ ನೀಡಿದ ಕೋರ್ಟ್‌ಗೆ ನಾನು ಅಬಾರಿಯಾಗಿದ್ದೇನೆ. ಜೊತೆಗೆ ನನ್ನ ಬೆಂಬಲಕ್ಕೆ ನಿಂತವರಿಗೆ ನಾನು ಧನ್ಯವಾದಗಳನ್ನ ತಿಳಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ
ನನಗೆ ಬೆಂಬಲ ಕೋರಿ ಮಾಡಿದ ಸಂದೇಶಗಳಿಂದ ನನ್ನ ಮೆಸೇಜ್ ಬಾಕ್ಸ್ ಪ್ರವಾಹದಂತೆ ತುಂಬಿ ಹೋಗಿದೆ, ನನಗೆ ಅತೀವ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದು ಕೊನೆಯಲ್ಲಿ `ಸತ್ಯ ಮೇವ ಜಯತೆ’ ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ನಿಂದ ರಿಲೀಫ್ ಸಿಕ್ಕ ಬೆನ್ನಲ್ಲೇ ಇದೀಗ ಮತ್ತೆ ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ದೂರು ನೀಡಿದ್ದಾರೆ.
ರೂಪ ವಿರುದ್ಧ ನಾನು ನೀಡಿದ್ದ ದೂರಿನ ಸಂಬಂಧ ಎಫ್‍ಐಆರ್ (FIR) ದಾಖಲಿಸಿಲ್ಲ. ಹೀಗಾಗಿ ಸೆಕ್ಷನ್ 354ಸಿ, 463 ಅಡಿ ಪ್ರಕರಣ ದಾಖಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ರೋಹಿಣಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರೋಹಿಣಿ ವಿರುದ್ಧ ರೂಪಾ ಮಾತನಾಡಬಾರದು- ಕೋರ್ಟ್ ಆದೇಶ
ಸಿಂಧೂರಿಗೆ ರಿಲೀಫ್: ಕಳೆದ ಮೂರ್ನಾಲ್ಕು ದಿನಗಳಿಂದ ವೈಯಕ್ತಿಕ ಮಟ್ಟದಲ್ಲಿ ವಾಗ್ದಾಳಿಗೆ ತುತ್ತಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಕೋರ್ಟ್ ಮೂಲಕ ಬಿಗ್ ರಿಲೀಫ್ ಸಿಕ್ಕಿದೆ. ಸರ್ಕಾರದ ಆದೇಶ ಮೀರಿ ರೋಹಿಣಿ ವಿರುದ್ಧ ಆರೋಪಗಳನ್ನು ಮುಂದುವರೆಸಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧ ಹೇರಿ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸೋಷಿಯಲ್ ಮೀಡಿಯಾ ಸೇರಿ ಯಾವುದೇ ರೀತಿಯ ಮಾಧ್ಯಮಗಳಲ್ಲಿ ಮಾನಹಾನಿಕರ ಹೇಳಿಕೆ, ಬರಹಗಳಿಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ. ಡಿ ರೂಪಾಗೆ ಆಕ್ಷೇಪಣೆ ಸಲ್ಲಿಸು ಕೋರ್ಟ್ ಮಾರ್ಚ್ ಏಳರವರೆಗೂ ಅವಕಾಶ ನೀಡಿದೆ. ನಿನ್ನೆಯಷ್ಟೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ರು. ಬುಧವಾರ 1 ಕೋಟಿ ಮೊತ್ತದ ಮಾನನಷ್ಟ ಕೇಸ್ ಹಾಕೋದಾಗಿ ಡಿ ರೂಪಾಗೆ ರೋಹಿಣಿ ಸಿಂಧೂರಿ ಲೀಗಲ್ ನೊಟೀಸ್ ಕಳಿಸಿದ್ರು. ಇದಕ್ಕೆ ಡಿ ರೂಪಾ ಇನ್ನೂ ಉತ್ತರಿಸಿಲ್ಲ.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ಕಳೆದ 5 ದಿನದಿಂದ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ರೂಪಾ (D. Roopa) ಮಧ್ಯೆ ನಡೆಯುತ್ತಾ ಇದ್ದ ದೊಡ್ಡ ಪ್ರಹಸನಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.
ಸಾಮಾಜಿಕ ಜಾಲತಾಣ (Social Media) ದಲ್ಲಿ ಬಡಿದಾಡಿಕೊಳ್ತಾ ಇದ್ದ ರೋಹಿಣಿ-ರೂಪಾ ಇಬ್ಬರೂ ಪರಸ್ಪರ ಮಾತನಾಡದಂತೆ ತಡೆಯಾಜ್ಞೆ ನೀಡಿದೆ. ರೋಹಿಣಿ ವಿರುದ್ಧ ರೂಪಾ ಮಾತನಾಡದಂತೆ ನಿರ್ಬಂಧ ಹೇರಿ ಕೋರ್ಟ್ ಆದೇಶ ನೀಡಿದೆ. ಶನಿವಾರ ರಾತ್ರಿ ಪ್ರಾರಂಭವಾಗಿದ್ದ ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಿನ ಕಾದಾಟಕ್ಕೆ ಕೊನೆಗೆ ಬ್ರೇಕ್ ಬಿದ್ದಂತೆ ಆಗಿದೆ.
ಹೌದು, ರೂಪಾ ತನ್ನ ಫೇಸ್ ಬುಕ್ (Facebook) ಅಕೌಂಟ್ ಅಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗಲಾಟೆ ಶುರುಮಾಡಿಕೊಂಡಿದ್ರು. ಈ ಪ್ರಕರಣ ಆರೋಪ ಪ್ರತ್ಯಾರೋಪದೊಂದಿಗೆ ಬರೋಬ್ಬರಿ 5 ದಿನಗಳ ಕಾಲ ಕಾದಾಟವೇ ನಡೆದುಹೋಗಿತ್ತು. ಇದನ್ನೆಲ್ಲಾ ನೋಡಿದ ಸರ್ಕಾರ ಇಬ್ಬರನ್ನು ವರ್ಗಾವಣೆ ಮಾಡಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ
ಇಬ್ಬರು ಎಂದಿನಂತೆ ಬಡಿದಾಟ ಮುಂದುವರಿಸಿ ಕೊನೆಗೆ ರೂಪಾ ವಿರುದ್ಧ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ರು. ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದಿದ್ರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ (Court) ಕೊನೆಗೂ ರೂಪಾಗೆ ಬ್ರೇಕ್ ಹಾಕಿದ್ದು ಬಹಿರಂಗವಾಗಿ ಎಲ್ಲೂ ಮಾತನಾಡದಂತೆ ತಡೆಯಾಜ್ಞೆಯನ್ನು ನೀಡಿದೆ.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ರೂಪಾ, ರೋಹಿಣಿ ಜಟಾಪಟಿ ನಿಂತು ನಿಲ್ಲದಂತೆ ಮುಂದುವರಿಯುತ್ತಲೇ ಇದೆ. ಅಸ್ತ್ರ – ಪ್ರತ್ಯಾಸ್ತ್ರದ ಯುದ್ಧಕ್ಕೆ ಕಾನೂನಿನ ಕಲೆ ಬಂದಿದೆ. ಕಾನೂನು ಹೋರಾಟ ಮಾಡಲು ಸಿದ್ಧವಾಗಿರುವ ರೋಹಿಣಿ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾರೆ.
ರೋಹಿಣಿ ಸಿಂಧೂರಿ (Rohini Sindhuri), ರೂಪಾ (D Roopa) ಕಥೆ ಶುರುವಾದಾಗಿನಿಂದ ದಿನಕ್ಕೊಂದು ಸ್ಫೋಟಕ ಟ್ವಿಸ್ಟ್ ಸಿಗುತ್ತಲೆ ಇದೆ. ಒಬ್ಬರ ಮೇಲೋಬ್ಬರು ಯುದ್ಧ ಸಾರುತ್ತಲೇ ಇದ್ದಾರೆ. ಈಗ ಅದಕ್ಕೆ ಕಾನೂನಿನ ಬಣ್ಣ ಬಂದಿದೆ. ರೂಪಾ ಐಪಿಎಸ್ ಅಧಿಕಾರಿ ಆಗಿದ್ರೂ ಮಹಿಳೆಯ ಗೌರವಕ್ಕೆ ಧಕ್ಕೆಯಾಗುವಂತೆ ವೈಯಕ್ತಿಕ ಫೋಟೋಗಳನ್ನು ಫೇಸ್‍ಬುಕ್ ಅಲ್ಲಿ ಹಾಕಿದ್ದಾರೆ. ಅವರ ವಿರುದ್ಧ ನಿರ್ಬಂಧಾಜ್ಞೆಯನ್ನು ಹೇರಬೇಕು ಎಂದು ರೋಹಿಣಿ ಸಿಂಧೂರಿ ಕೋರ್ಟ್ (Court) ಮೆಟ್ಟಿಲೇರಿದ್ದಾರೆ.
ರೂಪಾ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಸೈಬರ್ ಸೆಲ್‍ನ ಮುಖ್ಯಸ್ಥರು ಆಗಿದ್ದರು. ಆ ಸಂದರ್ಭದಲ್ಲಿ ರೋಹಿಣಿಯವರ ಫೋಟೋ ಕಳವು ಮಾಡಿರಬಹುದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಪರ ವಕೀಲರು ವಾದ ಮಂಡಿಸಿದ್ದಾರೆ.
ರೂಪಾ ವಿರುದ್ಧ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೂಡ ದೂರು ನೀಡಿದ್ದರೂ, ಚೌಕಟ್ಟು ಮೀರಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ವಾದವನ್ನು ಆಲಿಸಿದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಭದ್ರಕೋಟೆ ಸಂಡೂರಿಗೆ ಬರುತ್ತಿದ್ದಾರೆ ಅಮಿತ್ ಶಾ : ಬಿಜೆಪಿ ಪ್ಲ್ಯಾನ್ ಏನು?
ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೂಪಾಗೆ ಹಿರಿಯ ವಕೀಲರ ಮೂಲಕ ನೋಟಿಸ್ ನೀಡಲಾಗಿದೆ. 24 ಗಂಟೆಯ ಒಳಗಡೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು. ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಮಾಡಿರುವ ಮಾನಹಾನಿ ಆರೋಪಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಕೋರ್ಟ್‍ನಲ್ಲಿ 1 ಕೋಟಿ ರೂ. ಮಾನನಷ್ಟ ಕೇಸ್ ಹೂಡುವುದಾಗಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯದ ಉನ್ನತ ಮಹಿಳಾ ಅಧಿಕಾರಿಗಳ ಕಚ್ಚಾಟ ಇದೀಗ ಕೋರ್ಟ್ (Court) ವರೆಗೆ ತಲುಪಿದೆ. ಐಪಿಎಸ್ (IPS) ಅಧಿಕಾರಿ ಡಿ ರೂಪಾ (D Roopa) ವಿರುದ್ಧ ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕೋರ್ಟ್ ಮೆಟ್ಟಿಲೇರಿದ್ದಾರೆ.
ರೋಹಿಣಿ ಮಾಧ್ಯಮಗಳು ಹಾಗೂ ರೂಪಾ ವಿರುದ್ಧ ನಿರ್ಬಂಧಕಾಜ್ಞೆ ಅರ್ಜಿ ಸಲ್ಲಿಸಿದ್ದಾರೆ. ರೂಪಾ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಿಎಸ್‌ಗೆ ದೂರು ನೀಡಿದರೂ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರು ತಮ್ಮ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಬೇಕು ಎಂದು ರೋಹಿಣಿ ವಾದ ಮಂಡಿಸಿದ್ದಾರೆ.
ಈಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳಕ್ಕೆ ಸರ್ಕಾರ ಅಂತ್ಯ ಹಾಡಿದೆ. ರೋಹಿಣಿ ಸಿಂಧೂರಿ, ರೂಪಾ, ಹಾಗೂ ರೂಪಾ ಪತಿ ಮುನೀಷ್ ಮೌದ್ಗಿಲ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದರ ಬೆನ್ನಲ್ಲೇ ಆರ್‌ಟಿಐ ಕಾರ್ಯಕರ್ತ ಗಂಗರಾಜು ಜೊತೆಗೆ ರೂಪಾ ಮಾತನಾಡಿರುವ ಆಡಿಯೋವೊಂದು ಲೀಕ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.
ಜನವರಿ 30ರಂದು ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ರನ್ನು ಆರ್‌ಟಿಐ ಕಾರ್ಯಕರ್ತ ಗಂಗರಾಜು ಭೇಟಿ ಮಾಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಅಧಿಕಾರಿ ರೂಪಾ, ಗಂಗರಾಜುಗೆ ಕರೆ ಮಾಡಿ ಹೀನಾಮಾನವಾಗಿ ಬೈಯ್ದಿದ್ದಾರೆ. ಗಂಗರಾಜು, ರೋಹಿಣಿ ಸಿಂಧೂರಿ ಪರವಾಗಿ ಮೌದ್ಗಿಲ್‌ರನ್ನು ಭೇಟಿ ಮಾಡಲು ಬಂದಿದ್ದಾರೆ ಎಂದು ಕೆಟ್ಟ ಭಾಷೆಗಳಲ್ಲಿ ನಿಂದಿಸಿದ್ದಾರೆ. ರೋಹಿಣಿ ಸಿಂಧೂರಿ ಬಗ್ಗೆಯೂ ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗಂಗರಾಜು, ತಾವು ರೋಹಿಣಿ ಸಿಂಧೂರಿ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭೂ ಅಕ್ರಮದ ದೂರು ನೀಡಲು ಮೌದ್ಗಿಲ್ ಕಚೇರಿಗೆ ಹೋಗಿದ್ದೆ. ಇಷ್ಟಕ್ಕೆ ನನಗೆ ರೂಪಾ ನಿಂದಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದಿದ್ದಾರೆ. ಈ ವಿಚಾರ ಪರಿಷತ್‌ನಲ್ಲಿಯೂ ಸದ್ದು ಮಾಡಿದೆ.
ಬೆಂಗಳೂರು: ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಐಪಿಎಸ್ (IPS) ಅಧಿಕಾರಿ ರೂಪಾ (Roopa) ಕಿತ್ತಾಟದ ಇನ್ನಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ರೋಹಿಣಿ ಸಿಂಧೂರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ತಾವು ಮಾಡಿರೋ ಆಸ್ತಿಯನ್ನು ಮುಚ್ಚಿಡೋ ಪ್ರಯತ್ನ ಮಾಡ್ತಾ ಇದ್ದಾರೆ ಅಂತ ರೂಪಾ ಆರೋಪ ಮಾಡಿದ್ರು.
ಅಲ್ಲದೇ ಜಾಲಹಳ್ಳಿ ಮನೆಯ ಬಗ್ಗೆ ಪ್ರಶ್ನೆ ಮಾಡಿರೋ ರೂಪಾ, ಅಕ್ರಮವಾಗಿ ಫರ್ನಿಚರ್ ಗಳನ್ನು ತರಿಸ್ತಾ ಇದ್ದಾರೆ. ಐಎಎಸ್ ಅಧಿಕಾರಿಯ ಲಾಭ ಪಡೆಯುತ್ತಾ ಇದ್ದಾರೆ ಅಂತ ಆರೋಪಿಸಿದ್ರು. ಇದಕ್ಕೆ ಉತ್ತರ ನೀಡಿರೋ ರೋಹಿಣಿ ನನ್ನ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದೇನೆ ಅಂದಿದ್ದಾರೆ.
ಎಲ್ಲೆಲ್ಲಿ ರೋಹಿಣಿ ಸಿಂಧೂರಿ ಆಸ್ತಿ ಇದೆ..? * ಕಲ್ಲೂರು, ತೆಲಂಗಾಣ (Telangana):
> ಆಸ್ತಿ ಮೌಲ್ಯ: 1 ಕೋಟಿ
> ವಿಸ್ತೀರ್ಣ: 1122 ಚದರ ಅಡಿ
> ಪೆಟ್ರೋಲ್ ಬಂಕ್ ಲೀಸ್
> ವಾರ್ಷಿಕ ಆದಾಯ: 2 ಲಕ್ಷ
> ಯಾರ ಆಸ್ತಿ: ತಾಯಿ ಆಸ್ತಿ
> ಅವಿಭಜಿತ ಆಸ್ತಿ
* ರುದ್ರಾಕ್ಷಪಲ್ಲಿ, ಕಮ್ಮಂ ಜಿಲ್ಲೆ
> ಆಸ್ತಿ ಮೌಲ್ಯ: 2.5 ಕೋಟಿ
> ಕೃಷಿ ಭೂಮಿ: 55 ಎಕರೆ
> ವಾರ್ಷಿಕ ಆದಾಯ: 7.00 ಲಕ್ಷ
> ಯಾರ ಆಸ್ತಿ: ಪಿತ್ರಾರ್ಜಿತ ಆಸ್ತಿ
> ಅವಿಭಜಿತ ಆಸ್ತಿ (ಪಿರ್ತಾಜಿತ ಆಸ್ತಿ, ಇನ್ನೂ ಪಾಲಾಗಿಲ್ಲ)
* ಕಮ್ಮಂ ಜಿಲ್ಲೆ, ತೆಲಂಗಾಣ
> ಆಸ್ತಿ ಮೌಲ್ಯ: 1.5 ಕೋಟಿ
> ವಿಸ್ತೀರ್ಣ: 2300 ಚದರ ಅಡಿ
> ವಾರ್ಷಿಕ ಆದಾಯ: 1 ಲಕ್ಷ
> ಹೋಟೆಲ್‍ವೊಂದಕ್ಕೆ ಲೀಸ್
> ಯಾರ ಆಸ್ತಿ: ತಾಯಿ ಆಸ್ತಿ
> ಅವಿಭಜಿತ ಆಸ್ತಿ
* ಕಮ್ಮಂ ಜಿಲ್ಲೆ, ತೆಲಂಗಾಣ
> ಆಸ್ತಿ ಮೌಲ್ಯ: 1 ಕೋಟಿ
> ಜಮೀನು: 1 ಎಕರೆ
> ಯಾರ ಆಸ್ತಿ: ತಂದೆ ಹೆಸರಿನಲ್ಲಿದೆ
> ವಾರ್ಷಿಕ ಆದಾಯ; 2 ಲಕ್ಷ
* ಹೈದ್ರಾಬಾದ್, ನಿವೇಶನ: 3
> ಆಸ್ತಿ ಮೌಲ್ಯ: 1 ಕೋಟಿ
> ವಾರ್ಷಿಕ ಆದಾಯ: 2.5 ಲಕ್ಷ
> ಯಾರ ಆಸ್ತಿ; ತಾಯಿ ಹೆಸರಿನಲ್ಲಿದೆ
> ಅವಿಭಜಿತ ಆಸ್ತಿ
* ತಲ್ಲಾಪುರ, ಮೇಧಕ್ ಜಿಲ್ಲೆ
> ಆಸ್ತಿ ಮೌಲ್ಯ: 40 ಲಕ್ಷ
> ವಿಸ್ತೀರ್ಣ: 500 ಚದರ ಗಜ
> ಯಾರ ಆಸ್ತಿ: ತಂದೆ ಹೆಸರಿನಲ್ಲಿದೆ
> ವಾರ್ಷಿಕ ಆದಾಯ ಇಲ್ಲ
> ಅವಿಭಜಿತ ಆಸ್ತಿ
* ಶಂಷಾಬಾದ್, ರಂಗಾರೆಡ್ಡಿ ಜಿಲ್ಲೆ
> ವಿಸ್ತೀರ್ಣ: 600 ಚದರ ಗಜ
> ಯಾರ ಆಸ್ತಿ: ತಂದೆ ಹೆಸರಿನಲ್ಲಿದೆ
> ವಾರ್ಷಿಕ ಆದಾಯ ಇಲ್ಲ
> ಅವಿಭಜಿತ ಆಸ್ತಿ
* ಸೀಗೆಹಳ್ಳಿ, ಯಲಹಂಕ, ಬೆಂಗಳೂರು
> ವಿಸ್ತೀರ್ಣ: 4123 ಚದರಡಿ
> ಆಸ್ತಿ ಮೌಲ್ಯ: 60 ಲಕ್ಷ
> ಮಂಜೂರು: ಐಎಎಸ್ ಸಹಕಾರ ಸಂಘ
> ರೋಹಿಣಿ ಹೆಸರಿಗೆ ರಿಜಿಸ್ಟರ್ ಆಗಿಲ್ಲ
ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ಸ್ವಯಂ ಘೋಷಣೆ ಮಾಡಿಕೊಂಡಿರೋ ಪ್ರಕಾರ, ಈಗಿರೋ ಆಸ್ತಿಯೆಲ್ಲಾ ಪಿತ್ರಾರ್ಜಿತವಾಗಿದೆ. ಹೀಗಾಗಿ ರೂಪಾ ಮಾಡಿರೋ ಆರೋಪ ಎಷ್ಟು ಸತ್ಯ…? ಎಷ್ಟು ಸುಳ್ಳು ಅನ್ನೋ ಚರ್ಚೆ ಆಗುತ್ತಿದೆ.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ (IPS) ಅಧಿಕಾರಿ ಡಿ.ರೂಪಾ (D Roopa) ನಡುವಿನ ಕಿತ್ತಾಟ ಪ್ರಕರಣ ವಿಧಾನ ಪರಿಷತ್‌ನಲ್ಲಿ (Legislative Council) ಸದ್ದು ಮಾಡಿದೆ. ಶೂನ್ಯ ವೇಳೆಯಲ್ಲಿ ಬಿಜೆಪಿ (BJP) ಸದಸ್ಯ ಹೆಚ್ ವಿಶ್ವನಾಥ್ (H Vishwanath) ವಿಷಯ ಪ್ರಸ್ತಾಪ ಮಾಡಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿದರು.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್, ರಾಜ್ಯದ ಹಿರಿಯ ಅಧಿಕಾರಿಗಳಾದ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಬೀದಿ ಜಗಳ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಧಾರಾವಾಹಿಯಾಗಿ 3 ದಿನಗಳಿಂದ ಪ್ರಾರಂಭವಾಗಿದೆ ಎಂದು ಕುಟುಕಿದರು.
ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ ಮಹೇಶ್ ನಡುವಿನ ಆರೋಪಗಳ ಬಗ್ಗೆ ಸಂಧಾನವನ್ನು ಖಾಸಗಿ ಹೋಟೆಲ್ ಒಂದರಲ್ಲಿ ನಡೆಸುತ್ತಿರುವ ಐಎಎಸ್ ಅಧಿಕಾರಿ ಪಿ ಮಣಿವಣ್ಣನ್ ಅವರಿಗೆ ಸರ್ಕಾರ ಅಧಿಕಾರ ಕೊಟ್ಟಿದೆಯಾ? ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಮಾಡಿರುವ ಆರೋಪಗಳು ಇನ್ನೂ ಮುಕ್ತಾಯವಾಗದೇ ಇರುವ ಸಂದರ್ಭದಲ್ಲಿ ಸಂಧಾನ ನಡೆಸಲು ಪ್ರಯತ್ನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೂಪಾ ಮೌದ್ಗಿಲ್ ಮೇಲೂ ಸಹ ಕರಕುಶಲ ನಿಗಮದಲ್ಲಿ ಹಲವಾರು ಆಪಾದನೆಗಳಿದ್ದು, ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿಯವರು ಮೌನವಾಗಿದ್ದಾರೆ. ಇವೆಲ್ಲವನ್ನೂ ಮಾಧ್ಯಮಗಳ ಮೂಲಕ ನೋಡುತ್ತಿರುವ ನಾಡಿನ ಜನರು ನಮ್ಮ ಆಡಳಿತದ ವ್ಯವಸ್ಥೆಯ ಬಗ್ಗೆ ಕೆಟ್ಟದಾಗಿ ಅರ್ಥೈಸುತ್ತಿದ್ದಾರೆ ಮತ್ತು ಸರ್ಕಾರದ ಕ್ಷಮತೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಕ್ಕೆ ಇವರ ಪರವಾಗಿ ಹಣ ಕಟ್ಟುತ್ತಿರುವವರು ಇವರೇ ಸೃಷ್ಟಿಸಿಕೊಂಡಿರುವ ಇವರ ಅಭಿಮಾನಿಗಳು ಎಂದು ಅವರೇ ಹೇಳಿಕೊಳ್ಳುತ್ತಿದ್ದಾರೆ. ನಾಡಿನ ಆಡಳಿತ ಮತ್ತು ಅಭಿವೃದ್ಧಿಯ ಹಿತಕ್ಕೆ ಮಾರಕವಾಗಿರುವ ಇಬ್ಬರು ಮಹಿಳಾ ಅಧಿಕಾರಿಗಳನ್ನು ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು, ವಿಚಾರಣೆ ಪ್ರಾರಂಭಿಸಿ. ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಅಧಿಕಾರಿಗಳ ಇಂತಹ ನಡವಳಿಕೆಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಜನರಲ್ಲಿ ಭಾವನೆ ಮೂಡಿಸಬೇಕು ಎಂದರು. ಇದನ್ನೂ ಓದಿ: ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ
ನೈತಿಕತೆ ಕಳೆದುಕೊಂಡ ನಡತೆಗೆಟ್ಟ ಇಂತಹ ಅಧಿಕಾರಿಗಳು ನಮ್ಮ ನಾಡಿಗೆ ಬೇಕಾ? ಕೂಡಲೇ ಈ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ವಿಶ್ವನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್, ಸರ್ಕಾರದ ಎಲ್ಲಾ ವಿಚಾರಗಳನ್ನು ಸಾರ್ವಜನಿಕ ವಲಯದಲ್ಲಿ ತಿಳಿಸುವ ಅಧಿಕಾರಿಗಳು ಇವರು. ಈಗಾಗಲೇ ಈ ಚಟುವಟಿಕೆ ಗಮನಿಸಿ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇವೆ. ಆದರೆ ಅವರಿಗೆ ಜಾಗ ತೋರಿಸಿಲ್ಲ. ಈ ಪ್ರಕರಣದಲ್ಲಿ ಬಿಗಿಯಾದ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.