Tag: rohan mehra

  • ಪೂಜಾ ಹೆಗ್ಡೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ರೋಹನ್- ಮದುವೆ ಯಾವಾಗ ಎಂದ ನೆಟ್ಟಿಗರು?

    ಪೂಜಾ ಹೆಗ್ಡೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ರೋಹನ್- ಮದುವೆ ಯಾವಾಗ ಎಂದ ನೆಟ್ಟಿಗರು?

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಸಿನಿಮಾಗಿಂತ ಹೆಚ್ಚು ಖಾಸಗಿ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಕೆಲದಿನಗಳಿಂದ ಬಾಲಿವುಡ್ ನಟ ರೋಹನ್ ಮೆಹ್ರಾ (Rohan Mehra) ಜೊತೆ ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಬೆನ್ನಲ್ಲೇ ಪೂಜಾ ಕುಟುಂಬದ ಜೊತೆ ರೋಹನ್ ಕಾಣಿಸಿಕೊಂಡಿದ್ದಾರೆ.

    ತಂದೆ ಮಂಜುನಾಥ್ ಹೆಗ್ಡೆ ಹುಟ್ಟುಹಬ್ಬದಂದು ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡಿ ಕುಟುಂಬದ ಜೊತೆ ನಟಿ ಕಾಲ ಕಳೆದಿದ್ದಾರೆ. ವಿಶೇಷ ಅಂದರೆ, ಇವರ ಜೊತೆ ಬಾಲಿವುಡ್ ನಟ ರೋಹನ್ ಮೆಹ್ರಾ ಕೂಡ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:11 ವರ್ಷಗಳ ನಂತರ ಮತ್ತೆ ಖಾಕಿ ತೊಟ್ಟ ನೆನಪಿರಲಿ ಪ್ರೇಮ್- ಪೋಸ್ಟರ್ ಔಟ್

     

    View this post on Instagram

     

    A post shared by Snehkumar Zala (@snehzala)

    ರೆಸ್ಟೋರೆಂಟ್‌ನಿಂದ ಹೊರಬರುವಾಗ ತಮ್ಮ ಕುಟುಂಬದ ಜೊತೆ ಖುಷಿಯಿಂದ ಪೂಜಾ ಹೆಗ್ಡೆ ಹೊರಬಂದಿದ್ದು, ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸ್ಮೈಲ್ ಮಾಡಿದ್ದಾರೆ. ಈ ವೇಳೆ, ರೋಹನ್ ಕೂಡ ಕಾಣಿಸಿಕೊಂಡು ಕ್ಯಾಮೆರಾಗೆ ಬೈ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಬರೋದನ್ನು ನೋಡಿ ಇಬ್ಬರ ಮದುವೆ ಯಾವಾಗ? ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕ್ತಿದ್ದಾರೆ ನೆಟ್ಟಿಗರು.

    ಸದ್ಯ ಪೂಜಾ ಹೆಗ್ಡೆ ‘ದೇವ’ (Deva) ಸಿನಿಮಾದಲ್ಲಿ ಶಾಹಿದ್ ಕಪೂರ್‌ಗೆ (Shahid Kapoor) ಜೋಡಿಯಾಗಿ ನಟಿಸುತ್ತಿದ್ದಾರೆ. ಜೊತೆ ಸುನೀಲ್ ಶೆಟ್ಟಿ ಪುತ್ರನ ಹೊಸ ಚಿತ್ರಕ್ಕೆ ಕೂಡ ಪೂಜಾ ಹೀರೋಯಿನ್ ಆಗಿದ್ದಾರೆ. ತೆಲುಗಿನ ನಟ ನಾನಿ ಸಿನಿಮಾಗೂ ನಾಯಕಿಯಾಗಿ ಇವರೇ ಬುಕ್ ಆಗಿದ್ದಾರೆ.

  • ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಪೂಜಾ ಹೆಗ್ಡೆ

    ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಪೂಜಾ ಹೆಗ್ಡೆ

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಮೊದಲ ಬಾರಿಗೆ ಬಾಯ್‌ಫ್ರೆಂಡ್ (Boyfriend) ಜೊತೆ ಕಾಣಿಸಿಕೊಂಡಿದ್ದಾರೆ. ಗೆಳೆಯನ ಜೊತೆ ಕಾರಿನಲ್ಲಿ ಕುಳಿತು ಹೋಗುವಾಗ ಕ್ಯಾಮೆರಾ ಕಣ್ಣಿಗೆ ನಟಿ ಸೆರೆಯಾಗಿದ್ದಾರೆ. ಈ ಸುದ್ದಿ ಕೇಳಿ ಪೂಜಾ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

    ಕುಡ್ಲದ ಬೆಡಗಿ ಪೂಜಾ ಹೆಗ್ಡೆ ಹೆಸರು ಸಾಕಷ್ಟು ನಟರ ಜೊತೆ ಸೇರಿಕೊಂಡಿತ್ತು. ಅದರಲ್ಲೂ ಸಲ್ಮಾನ್ ಖಾನ್ (Salman Khan) ಜೊತೆ ಡೇಟಿಂಗ್ ಮಾಡ್ತಿದ್ದಾರೆ ಪೂಜಾ ಅಂತ ಹೆಚ್ಚು ಸುದ್ದಿಯಾಗಿತ್ತು. ಆ ನಂತರ ಆ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ಸಿಕ್ಕಿತ್ತು. ಇದೀಗ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ನಾನಿ ನಟನೆಯ 33ನೇ ಸಿನಿಮಾ ಅನೌನ್ಸ್ : ಒಂದಾಯ್ತು ‘ದಸರಾ’ ಜೋಡಿ

    ಹೋಟೆಲ್‌ನಿಂದ ಹೊರಬಂದು ಕಾರಿನಲ್ಲಿ ರೋಹನ್ ಮೆಹ್ರಾ (Rohan Mehra) ಜೊತೆ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಪೂಜಾ ಸೆರೆಯಾಗಿದ್ದಾರೆ. ಕ್ಯಾಮೆರಾ ಕಾಣಿಸುತ್ತಿದ್ದಂತೆ ನಟಿ ನಾಚಿ ನೀರಾಗಿದ್ದಾರೆ. ಕ್ಯಾಮೆರಾಗೆ ಸರಿಯಾಗಿ ಮುಖ ತೋರಿಸದೇ ಕುಳಿತಿದ್ದಾರೆ. ನಟಿಯ ಈ ನಡೆ ನೋಡಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ.

    ಕಳೆದ ವರ್ಷ ನಟಿಯ ಮನೆಯಲ್ಲಿ ಮದುವೆ ಮಾತುಕತೆ ನಡೆದಿದೆ ಎಂದು ಸುದ್ದಿಯಾಗಿತ್ತು. ಸತತ ಸಿನಿಮಾಗಳ ಸೋಲುಗಳ ಬೆನ್ನಲ್ಲೇ ನಟಿ ಮದುವೆ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಕಳೆದ ಜನವರಿಯಲ್ಲಿ ಪೂಜಾ ಸಹೋದರ ರಿಷಬ್ ಹೆಗ್ಡೆ ಮದುವೆ ಕೂಡ ಅದ್ಧೂರಿಯಾಗಿ ಜರುಗಿತ್ತು. ಹಾಗಾಗಿ ಪೂಜಾ ಮದುವೆ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿತ್ತು. ಇದೀಗ ಅಂತೆ ಕಂತೆ ಸುದ್ದಿಗೆಲ್ಲಾ ಬ್ರೇಕ್‌ ಹಾಕಿ, ರೋಹನ್ ಮೆಹ್ರಾ ಜೊತೆ ಸಂಬಂಧವನ್ನು ನಟಿ ಅಧಿಕೃತಪಡಿಸುತ್ತಾರಾ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಕಾದುನೋಡಬೇಕಿದೆ.

    ಸದ್ಯ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ಪೂಜಾ ಹೆಗ್ಡೆ ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಹೊಸ ಲವ್‌ಸ್ಟೋರಿ ಮೂಲಕ ಸಂಚಲನ ಸೃಷ್ಟಿಸೋಕೆ ಸಜ್ಜಾಗಿದ್ದಾರೆ.