Tag: Roger Binny

  • ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರೋಜರ್ ಬಿನ್ನಿ

    ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರೋಜರ್ ಬಿನ್ನಿ

    – ಮುಂದಿನ ಅಧ್ಯಕ್ಷರ ಆಯ್ಕೆವರೆಗೆ ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷ

    ನವದೆಹಲಿ: ಭಾರತದ ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ (Roger Binny) ಅವರು ಬಿಸಿಸಿಐ  (BCCI) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ಸದ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ಶುಕ್ಲಾ (Rajeev Shukla) ಮುಂದಿನ ಚುನಾವಣೆಯವರೆಗೂ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿಯಮಗಳ ಪ್ರಕಾರ, 70 ವಯಸ್ಸಿನ ನಂತರ ಯಾವುದೇ ಪದಾಧಿಕಾರಿಗಳು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ. ಇತ್ತೀಚಿಗೆ ಜು.19ರಂದು ರೋಜರ್ ಬಿನ್ನಿ ಅವರು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಹೀಗಾಗಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

    2017ರ ಸುಪ್ರೀಂ ಕೋರ್ಟ್‌ನ (Supreme Court) ಶಿಫಾರಸುಗಳ ಪ್ರಕಾರ, ಬಿಸಿಸಿಐನಂತಹ ಕೆಲವು ಭಾರತೀಯ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಒಟ್ಟು ಒಂಬತ್ತು ವರ್ಷಗಳು ಅಥವಾ ಸತತ ಆರು ವರ್ಷಗಳನ್ನು ಪೂರೈಸಿದ ನಂತರ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಈ ನಿಯಮಗಳು ಹೊಸ ನಾಯಕತ್ವವನ್ನು ಉತ್ತೇಜಿಸುವ ಮತ್ತು ಅಧಿಕಾರದ ಕೇಂದ್ರೀಕರಣವನ್ನು ತಡೆಯುವ ಮೂಲ ಗುರಿಯನ್ನು ಹೊಂದಿದೆ.

    ಬುಧವಾರ (ಆ.29) ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯು ಶುಕ್ಲಾ ಅವರ ನೇತೃತ್ವದಲ್ಲಿ ನಡೆದಿತ್ತು. ಸಭೆಯಲ್ಲಿ ಡ್ರೀಮ್ 11 ಒಪ್ಪಂದವನ್ನು ಮುಕ್ತಾಯಗೊಳಿಸುವುದರ ಜೊತೆಗೆ ಮುಂದಿನ ಎರಡೂವರೆ ವರ್ಷಗಳ ಕಾಲ ಹೊಸ ಪ್ರಾಯೋಜಕರ ಹುಡುಕಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನೂ ಸೆಪ್ಟೆಂಬರ್ 10ರಂದು ಏಷ್ಯಾ ಕಪ್ ಪ್ರಾರಂಭವಾಗುವುದರೊಳಗೆ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳುವುದು ಬಿಸಿಸಿಐಗೆ ಹೊಸ ಸವಾಲಾಗಿ ಪರಿಣಮಿಸಿದೆ.

    ಏಷ್ಯಾ ಕಪ್‌ಗೆ ಇನ್ನು ಎರಡೇ ವಾರಗಳು ಬಾಕಿಯಿದ್ದು, ಈ ಸಮಯದಲ್ಲಿ ಹೊಸ ಟೆಂಡರ್ ಹುಡುಕಿ, ಅದರ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಏಷ್ಯಾ ಕಪ್‌ಗೆ ಅಲ್ಪಾವಧಿಯ ಪ್ರಾಯೋಜಕರ ಅವಶ್ಯಕತೆಯಿದೆ. ಆದರೆ ನಾವು ಮುಂದಿನ ಎರಡೂವರೆ ವರ್ಷಗಳ ಕಾಲ ಅಂದರೆ 2027ರ ಏಕದಿನ ವಿಶ್ವಕಪ್‌ವರೆಗೆ ಹೊಸ ಪ್ರಾಯೋಜಕರನ್ನು ಹುಡುಕುವಲ್ಲಿ ಗಮನಹರಿಸುತ್ತಿದ್ದೇವೆ ಎಂದಿರುವುದಾಗಿ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಹುಬ್ಬಳ್ಳಿ | ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ – ಪಾಲಿಕೆಯಿಂದ ಅಧಿಕೃತ ಘೋಷಣೆ

  • ಬೀದಿ ನಾಯಿಗಳಿಗೆ ಊಟ ನೀಡುವ ಕಾಯಕ – BCCI ಅಧ್ಯಕ್ಷರ ಶ್ವಾನ ಪ್ರೀತಿಗೆ ಜನರ ಮೆಚ್ಚುಗೆ

    ಬೀದಿ ನಾಯಿಗಳಿಗೆ ಊಟ ನೀಡುವ ಕಾಯಕ – BCCI ಅಧ್ಯಕ್ಷರ ಶ್ವಾನ ಪ್ರೀತಿಗೆ ಜನರ ಮೆಚ್ಚುಗೆ

    ಚಾಮರಾಜನಗರ: ಶ್ವಾನಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅವು ಸಹ ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ, ಮನುಷ್ಯರಂತೆಯೇ ಪ್ರೀತಿ, ಕಾಳಜಿ, ಗುಣಮಟ್ಟದ ಸಮಯವನ್ನು ಬಯಸುತ್ತವೆ. ಹಾಗಾಗಿಯೇ ನಗರ ಭಾಗದ ಬಹುತೇಕ ಮನೆಗಳಲ್ಲಿ ಶ್ವಾನವೂ (Dog) ಮನೆ ಸದಸ್ಯರ ಭಾಗವಾಗಿಬಿಟ್ಟಿವೆ.

    ಅದೇ ರೀತಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ರೋಜರ್‌‌ ಬಿನ್ನಿ‌‌ಗೆ (Roger Binny) ಬೀದಿನಾಯಿಗಳೆಂದರೆ ಬಲು ಪ್ರೀತಿ. ಆದ್ದರಿಂದಲೇ ಸಮಯ ಸಿಕ್ಕಾಗೆಲ್ಲ ಬೀದಿ ನಾಯಿಗಳಿಗೂ (Street Dog) ಊಟ ನೀಡುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಅರಣ್ಯದಂಚಿನಲ್ಲಿ ಬಹಳ ಹಿಂದೆಯೇ ಜಮೀನು ಖರೀದಿಸಿದ್ದಾರೆ. ತಮ್ಮ ಜಮೀನಿಗೆ ಹೋಗುವಾಗೆಲ್ಲಾ ಮಾರ್ಗದ ಉದ್ದಕ್ಕೂ ದಾರಿಯಲ್ಲಿ ಸಿಗುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ‌ ಮಾನವೀಯತೆ ಮೆರೆಯುತ್ತಿದ್ದಾರೆ ಬಿನ್ನಿ. ಬೀದಿ ನಾಯಿಗಳನ್ನು ಕಂಡ ತಕ್ಷಣ ಕಾರು ನಿಲ್ಲಿಸಿ ಅವುಗಳ ಹಸಿವು ನೀಗಿಸುತ್ತಿದ್ದಾರೆ. ಹಸಿದ ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆಯುವ ಕೆಲಸ ಮಾಡ್ತಿದ್ದಾರೆ. ಬಿಸಿಸಿಐ ಅಧ್ಯಕ್ಷರಿಗಿರುವ ಶ್ವಾನ ಪ್ರೀತಿಯನ್ನು ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

    ಸದ್ಯ ರೋಜರ್‌ ಬಿನ್ನಿ ಬೀದಿನಾಯಿಯೊಂದಕ್ಕೆ ಆಹಾರ ನೀಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆ ಚಾಮರಾಜನಗರದಲ್ಲಿ ಜಮೀನಿನ ಉಳುಮೆಗಾಗಿ ಟ್ರ್ಯಾಕ್ಟರ್‌ ಕೂಡ ಖರೀದಿ ಮಾಡಿದ್ದರು. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

  • ಕೋಲ್ಕತ್ತಾ ಪೊಲೀಸರಿಂದ ಬಿಸಿಸಿಐಗೆ ನೋಟಿಸ್

    ಕೋಲ್ಕತ್ತಾ ಪೊಲೀಸರಿಂದ ಬಿಸಿಸಿಐಗೆ ನೋಟಿಸ್

    ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ಭಾನುವಾರ ನಡೆಯತ್ತಿರುವ ಭಾರತ (India) ಮತ್ತು ದಕ್ಷಿಣ ಆಫ್ರಿಕಾ (South Africa) ನಡುವಿನ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯದ ಟಿಕೆಟ್‌ಗಳನ್ನು‌ ಬ್ಲ್ಯಾಕ್ ಮಾರ್ಕೆಟಿಂಗ್ ಮಾಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಈವೆಂಟ್‌ನ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ನೀಡುವಂತೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವರಿಗೆ ನೋಟಿಸ್ (Notice) ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶನಿವಾರ ಸಂಜೆ ತಡವಾಗಿ ಹೊರಡಿಸಲಾದ ನೋಟಿಸ್‌ನಲ್ಲಿ, ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್ (Black Marketing) ಕುರಿತು ದೂರುಗಳ ತನಿಖೆ ನಡೆಸುತ್ತಿರುವ ಮೈದಾನ ಪೊಲೀಸ್ ಠಾಣೆಯ ಅಧಿಕಾರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಬಿಸಿಸಿಐ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನಾನು, ಧೋನಿ ಆತ್ಮೀಯ ಸ್ನೇಹಿತರಲ್ಲ: ಯುವರಾಜ್‌ ಸಿಂಗ್‌

    ಮಂಗಳವಾರದ ಕೆಲಸದ ಸಮಯದಲ್ಲಿ ಮೈದಾನ ಪಿಎಸ್‌ನ ತನಿಖಾಧಿಕಾರಿಗೆ ವೈಯಕ್ತಿಕವಾಗಿ ಅಥವಾ ಅವರ ಸಂಸ್ಥೆಯ ಯಾವುದೇ ಸಮರ್ಥ ವ್ಯಕ್ತಿಯ ಮೂಲಕ ಟಿಕೆಟ್‌ಗಳ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸುವಂತೆ ಬಿಸಿಸಿಐ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಿಂದ ಹೊರಗುಳಿದ ಪಾಂಡ್ಯ – ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ

    ಬ್ಲ್ಯಾಕ್ ಮಾರ್ಕೆಟಿಂಗ್ ಕುರಿತು ಕೋಲ್ಕತ್ತಾ ಪೊಲೀಸರು ಇದುವರೆಗೆ 19 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 108 ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಏಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಿಂದಲೇ ಪಾಂಡ್ಯ ಔಟ್‌ – ಬದಲಿ ಆಟಗಾರನಾಗಿ ಈ ಕನ್ನಡಿಗ ಆಯ್ಕೆ

  • ಚೆಲುವ ಚಾಮರಾಜನಗರದಲ್ಲಿ ಟ್ರ್ಯಾಕ್ಟರ್‌ ಓಡಿಸಿದ BCCI ಅಧ್ಯಕ್ಷ ರೋಜರ್ ಬಿನ್ನಿ

    ಚೆಲುವ ಚಾಮರಾಜನಗರದಲ್ಲಿ ಟ್ರ್ಯಾಕ್ಟರ್‌ ಓಡಿಸಿದ BCCI ಅಧ್ಯಕ್ಷ ರೋಜರ್ ಬಿನ್ನಿ

    – IPL ನಿಂದ ಅಂತರಾಷ್ಟ್ರೀಯ ಟೂರ್ನಿಗಳಿಗೆ ತೊಂದರೆಯಿಲ್ಲ, ಟಿ20, ಐಪಿಎಲ್‌, ಏಕದಿನ ಕ್ರಿಕೆಟ್‌ಗೆ ವ್ಯತ್ಯಾಸವಿದೆ 

    ಚಾಮರಾಜನಗರ: ಬಿಸಿಸಿಐ ಅಧ್ಯಕ್ಷರಾದ ನಂತರ ಇದೇ ಮೊದಲಬಾರಿಗೆ ಚಾಮರಾಜನಗರಕ್ಕೆ (Chamarajanagar) ರೋಜರ್‌ ಬಿನ್ನಿ (Roger Binny) ಶುಕ್ರವಾರ ಭೇಟಿ ನೀಡಿದ್ದರು.

    ಖಾಸಗಿ ಕಾರ್ಯಕ್ರಮದ ಹಿನ್ನೆಲೆ ನಗರಕ್ಕೆ ಭೇಟಿ ನೀಡಿದ್ದ ಅವರು, ಇದೇ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಓಡಿಸಿ ಖುಷಿಪಟ್ಟರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಒಂದೇ ಎಸೆತದಲ್ಲಿ 18 ರನ್ ಕೊಟ್ಟ ರಣಧೀರ – ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಟಿಎನ್‍ಪಿಎಲ್ ಆಟಗಾರ

    IPL ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಿಗೆ ತೊಂದರೆಯಿಲ್ಲ. T20, ಏಕದಿನ, ಟೆಸ್ಟ್‌ ಹಾಗೂ ಏಕದಿನ ಟೂರ್ನಿಗಳಿಗೆ ವ್ಯತ್ಯಾಸವಿದೆ. ನಾವು ಟೆಸ್ಟ್ ಕ್ರಿಕೆಟ್‌ ಅನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಟೆಸ್ಟ್ ನಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೀತಿದೆ. ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ (WTC) ಫೈನಲ್‌ ಪಂದ್ಯದಲ್ಲಿ ಮೊದಲ ದಿನ ಭಾರತ (Team India), ಆಸ್ಟ್ರೇಲಿಯಾ (Australia) ವಿರುದ್ಧ ಸರಿಯಾಗಿ ಆಡಲಿಲ್ಲ. ಟೀಂ ಆಯ್ಕೆಯ ವೇಳೆಯಲ್ಲೂ ಸಣ್ಣ ತಪ್ಪು ಆಗಿದೆ. ಇಲ್ಲದಿದ್ದರೆ ಆ ಪಂದ್ಯ ಗೆಲ್ಲುತ್ತಿದ್ದೆವು. ಪಂದ್ಯ ಗೆಲ್ಲಬೇಕೆಂದರೆ ಇಡೀ ವರ್ಷ ಅಭ್ಯಾಸ ಮಾಡುವ ಅವಶ್ಯಕತೆಯಿಲ್ಲ. ಬದಲಿಗೆ ಟಿ20, ಏಕದಿನ, ಟೆಸ್ಟ್‌ ಕ್ರಿಕೆಟ್‌ ಯಾವುದೇ ಆಗಲಿ, ಎಲ್ಲದಕ್ಕೂ ಆಟಗಾರರು ಹೊಂದಾಣಿಕೆ ಆಗಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆ ಎಂದು ತಿಳಿಸಿದರು.

  • ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?

    ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?

    ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ (Roger Binny) ಬಿಸಿಸಿಐ (BCCI) ಅಧ್ಯಕ್ಷರಾದ ಬಳಿಕ ಕೆಎಸ್‍ಸಿಎ ಅಧ್ಯಕ್ಷ ಹುದ್ದೆ ಖಾಲಿಯಾಗಿದೆ. ಇದೀಗ ಮುಂದಿನ ಕೆಎಸ್‍ಸಿಎ ಅಧ್ಯಕ್ಷ ಯಾರು ಎಂಬ ಕುತೂಹಲ ಮೂಡಿದೆ.

    2019ರಲ್ಲಿ ಪೂರ್ಣ ಬಹುಮತದೊಂದಿಗೆ ಕೆಎಸ್‍ಸಿಎ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಇದೀಗ ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೆಎಸ್‍ಸಿಎ ಅಧ್ಯಕ್ಷೀಯ ಪಟ್ಟಕ್ಕೆ ಪೈಪೋಟಿ ಇದೆ. ಮುಂದಿನ ವಾರದಲ್ಲಿ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಆ ಎರಡು ವಿಷಯಗಳ ಕುರಿತು ನಾನು ಗಂಭೀರವಾಗಿ ಚಿಂತಿಸಿದ್ದೇನೆ: ರೋಜರ್ ಬಿನ್ನಿ

    ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium)  ಬಿಸಿಸಿಐ ಅಧ್ಯಕ್ಷರಾದ ರೋಜರ್ ಬಿನ್ನಿಗೆ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಆಡಳಿತ ಮಂಡಳಿ ಸಭೆ ನಡೆಯುವ ಸಾಧ್ಯತೆ ಇದೆ. ಇಂದಿನ ಸಭೆಯಲ್ಲಿ ಯಾರು ನೂತನ ಬಾಸ್ ಎನ್ನುವ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: AisaCup ಕ್ರಿಕೆಟ್‌ಗೆ ಭಾರತ ಪಾಕಿಸ್ತಾನಕ್ಕೆ ಹೋಗಲ್ಲ: BCCI ಅಧಿಕೃತ ಪ್ರಕಟ

    ಸದ್ಯಕ್ಕೆ ಹಂಗಾಮಿ ಅಧ್ಯಕ್ಷರ ನೇಮಕ ಮಾಡುವ ನಿರೀಕ್ಷೆ ಇದ್ದು, ಮುಂದಿನ ಒಂದು ವಾರದೊಳಗೆ ಚುನಾವಣೆ ನಡೆದು ನೂತನ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚಿದೆ. ಅಧ್ಯಕ್ಷ ಹುದ್ದೆಗೆ ಸದ್ಯ ಕೆಎಸ್‍ಸಿಎ ಖಜಾಂಜಿಯಾಗಿರುವ ವಿನಯ್ ಮೃತ್ಯುಂಜಯ ಅವರ ಹೆಸರು ಮುಂಚೂಣಿಯಲ್ಲಿದೆ. ವಿನಯ್ ಕಳೆದ ಕೆಲ ವರ್ಷಗಳಿಂದ ಕೆಎಸ್‍ಸಿಎ ಆಡಳಿತದಲ್ಲಿ ಸಕ್ರಿಯರಾಗಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಹಾಗಾಗಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆ ಎರಡು ವಿಷಯಗಳ ಕುರಿತು ನಾನು ಗಂಭೀರವಾಗಿ ಚಿಂತಿಸಿದ್ದೇನೆ: ರೋಜರ್ ಬಿನ್ನಿ

    ಆ ಎರಡು ವಿಷಯಗಳ ಕುರಿತು ನಾನು ಗಂಭೀರವಾಗಿ ಚಿಂತಿಸಿದ್ದೇನೆ: ರೋಜರ್ ಬಿನ್ನಿ

    ಮುಂಬೈ: ನಾನು ಬಿಸಿಸಿಐ (BCCI) ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಆ ಎರಡು ವಿಷಯಗಳನ್ನು ಕುರಿತು ಗಂಭೀರವಾಗಿ ಪರಿಗಣಿಸಿ ಇನ್ನಷ್ಟು ಅಭಿವೃದ್ಧಿಯತ್ತ ಭಾರತೀಯ ಕ್ರಿಕೆಟ್‍ನ್ನು ಕೊಂಡೊಯ್ಯುತ್ತೇನೆ ಎಂದು ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಹೇಳಿದ್ದಾರೆ.

    ಬಿಸಿಸಿಐಯ 36ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಇದೀಗ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ಎರಡು ವಿಷಯಗಳ ಕುರಿತು ಗಂಭೀರವಾಗಿ ಚಿಂತಿಸಿದ್ದೇನೆ. ಮೊದಲನೆಯದು ಗಾಯಗೊಂಡಿರುವ ಆಟಗಾರರ ಕುರಿತು ಹೆಚ್ಚಿನ ನಿಗಾ ವಹಿಸುತ್ತೇನೆ. ಎರಡನೆಯದು ಭಾರತದಲ್ಲಿರುವ ಕ್ರಿಕೆಟ್ ಪಿಚ್‍ಗಳ (Pitches) ಕುರಿತು ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗ ರೋಜರ್ ಬಿನ್ನಿ ಇನ್ಮುಂದೆ BCCI ಕ್ಯಾಪ್ಟನ್

    ಸೌರವ್ ಗಂಗೂಲಿ (Sourav Ganguly) ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಬಿನ್ನಿ ನೇಮಕಗೊಂಡಿದ್ದಾರೆ. ನಿನ್ನೆ ನಡೆದ 91ನೇ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಬಿನ್ನಿ ಅವರನ್ನು ಒಮ್ಮತದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿಯಾಗಿದ್ದರು ಹಾಗಾಗಿ ಅವರಿಗೆ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಇದನ್ನೂ ಓದಿ: ದಾದಾ ಪರ ದೀದಿ ಬ್ಯಾಟಿಂಗ್ – ICC ಚುನಾವಣೆಗೆ ಅವಕಾಶ ಕೊಡುವಂತೆ ಮೋದಿಗೆ ಪತ್ರ

    1955 ಜುಲೈ 19ರಂದು ಜನಿಸಿದ ರೋಜರ್ ಬಿನ್ನಿ 1979 ರಿಂದ 1987ರ ವರೆಗೆ ಭಾರತ ಕ್ರಿಕೆಟ್ ತಂಡದಲ್ಲಿದ್ದರು. ಈವರೆಗೆ 27 ಟೆಸ್ಟ್ ಪದ್ಯಗಳಲ್ಲಿ 830 ರನ್‍ಗಳಿಸಿ, ಬೌಲಿಂಗ್‍ನಲ್ಲಿ 47 ವಿಕೆಟ್ ಪಡೆದಿದ್ದಾರೆ. 72 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 629 ರನ್ ಗಳಿಸಿ, 77 ವಿಕೆಟ್ ಪಡೆದು ಮಿಂಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಿಗ ರೋಜರ್ ಬಿನ್ನಿ ಇನ್ಮುಂದೆ BCCI ಕ್ಯಾಪ್ಟನ್

    ಕನ್ನಡಿಗ ರೋಜರ್ ಬಿನ್ನಿ ಇನ್ಮುಂದೆ BCCI ಕ್ಯಾಪ್ಟನ್

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ (Roger Binny) ನೇಮಕಗೊಂಡಿದ್ದಾರೆ.

    ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿಯಾಗಿದ್ದರು. ಸೌರವ್ ಗಂಗೂಲಿ (Sourav Ganguly) ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ (BCCI) ಅಧ್ಯಕ್ಷರಾಗಿ ಬಿನ್ನಿ ನೇಮಕಗೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಪುತ್ರ ಜಯ್ ಶಾ (JayShah) 2ನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ರಾಜೀವ್ ಶುಕ್ಲ (Rajeev Shukl) ಬಿಸಿಸಿಐ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

    1955 ಜುಲೈ 19ರಂದು ಜನಿಸಿದ ರೋಜರ್ ಬಿನ್ನಿ 1979ರಿಂದ 1987ರ ವರೆಗೆ ಭಾರತ ಕ್ರಿಕೆಟ್ ತಂಡದಲ್ಲಿದ್ದರು. ಈವರೆಗೆ 27 ಟೆಸ್ಟ್ ಪದ್ಯಗಳಲ್ಲಿ 830 ರನ್‌ಗಳಿಸಿ, ಬೌಲಿಂಗ್‌ನಲ್ಲಿ 47 ವಿಕೆಟ್ ಪಡೆದಿದ್ದಾರೆ. 72 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 629 ರನ್ ಗಳಿಸಿ, 77 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಕನ್ನಡಿಗ ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ?

    ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧ್ಯಕ್ಷ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಬೇಕೆಂದ ಧ್ವನಿ ಹೆಚ್ಚಾಗುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆದು ಗಂಗೂಲಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಕೋಲ್ಕತ್ತಾ: ಸೌರವ್ ಗಂಗೂಲಿ (SouravGanguly) ಅವರು ಬಿಜೆಪಿ (BJP) ಸೇರಲು ನಿರಾಕರಿಸಿದ್ದರಿಂದಲೇ 2ನೇ ಬಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಆಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (TMC) ಹೇಳಿದೆ.

    ಈ ಕುರಿತು ಮಾತನಾಡಿರುವ ಟಿಎಂಸಿ (TMC) ವಕ್ತಾರ ಕುನಾಲ್ ಘೋಷ್ (Kunal Ghosh), ಕಳೆದ ವಿಧಾನಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ (West Bengal) ಜನಪ್ರಿಯತೆ ಗಳಿಸಿರುವ ಸೌರವ್ ಗಂಗೂಲಿ ಅವರು ಪಕ್ಷಕ್ಕೆ ಸೇರುತ್ತಾರೆ ಎಂದು ಬಿಜೆಪಿ ಬಿಂಬಿಸಿತ್ತು. ಆದರೆ ಗಂಗೂಲಿ ಅವರು ಪಕ್ಷಕ್ಕೆ ಸೇರಲು ನಿರಾಕರಿಸಿದ್ದರಿಂದ ಬಿಜೆಪಿ ಅವರನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಬಿಸಿಸಿಐ ಅಧ್ಯಕ್ಷರನ್ನಾಗಿ (BCCI President) ರೋಜರ್ ಬಿನ್ನಿ (Roger Binny) ಅವರನ್ನ ಬದಲಿಸಲು ಮುಂದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗ ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ?

    1983ರ ವಿಶ್ವಕಪ್ (WorldCup) ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಮಂಗಳವಾರ ಬಿಸಿಸಿಐ  ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಪುತ್ರ ಜಯ್ ಶಾ ಸಹ ನಾಮಪತ್ರ ಸಲ್ಲಿಸಿದ್ದಾರೆ. ಜಯ್ ಶಾ (Jay Shah) 2ನೇ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದು. ಆದರೆ ಗಂಗೂಲಿ ಅವರನ್ನು ಹಾಗೆ ಮಾಡುತ್ತಿಲ್ಲ. ಇದು ಸೇಡಿನ ರಾಜಕಾರಣದ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.

    ಇಂತಹ ವಿಷಯಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಬಿಜೆಪಿಯು ಇಂತಹ ಪ್ರಚಾರವನ್ನು ಮಾಡಿದ್ದರಿಂದ, ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದು ನಮ್ಮ ಜವಾಬ್ದಾರಿ. ಗಂಗೂಲಿ ಅವರು 2ನೇ ಬಾರಿಗೆ ಬಿಸಿಸಿಐಗೆ ಆಯ್ಕೆಯಾಗದಿರುವ ಹಿಂದೆ ರಾಜಕೀಯವಿದೆ. ಸೌರವ್ ಅವರನ್ನು ಅವಮಾನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಭರ್ಜರಿ ಬ್ಯಾಟಿಂಗ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ

    ಈ ಆರೋಪ ತಳ್ಳಿಹಾಕಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಟಿಎಂಸಿ ಆರೋಪ ಆಧಾರ ರಹಿತವಾಗಿದೆ. ಬಿಜೆಪಿ ಎಂದಿಗೂ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸಿಲ್ಲ. ಗಂಗೂಲಿ ಒಂದು ದಂತಕತೆ. ಆದರೆ ಬಿಸಿಸಿಐ ಅಧ್ಯಕ್ಷರಾದ ಮೇಲೆ ಅವರ ಪಾತ್ರ ಏನಾದರೂ ಇದೆಯೇ? ಟಿಎಂಸಿ ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಿಗ ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ?

    ಕನ್ನಡಿಗ ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ?

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಕನ್ನಡಿಗರಾದ ರೋಜರ್ ಬಿನ್ನಿ (Roger Binny)  ಪಟ್ಟಕ್ಕೇರಬಹುದೆಂದ ಚರ್ಚೆ ಜೋರಾಗಿದೆ.

    ಅ.18ಕ್ಕೆ ಬಿಸಿಸಿಐನ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಸಿಸಿಐನ ಮುಂದಿನ ಅಧ್ಯಕ್ಷ, ಕಾರ್ಯದರ್ಶಿಯನ್ನು ನಿರ್ಧರಿಸುವ ಚುನಾವಣೆಯೂ ನಡೆಯಲಿದೆ. ಈ ನಡುವೆ ಸೌರವ್ ಗಂಗೂಲಿ (Sourav Ganguly) ಅಧಿಕಾರವಧಿ ಅಂತ್ಯದ ಬಳಿಕ ಅಧ್ಯಕ್ಷ ಗಾದಿಯಲ್ಲಿ ಇದೀಗ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಜರ್ ಬಿನ್ನಿ ಹೆಸರು ಕೇಳಿ ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಈವರೆಗೆ ಬಿಸಿಸಿಐನ ಸರ್ವಸದಸ್ಯರ ಸಭೆಯಲ್ಲಿ ಕೆಎಸ್‍ಸಿಎಯನ್ನು‌ (KSCA) ಕಾರ್ಯದರ್ಶಿ ಸಂತೋಷ್ ಮೆನನ್ ಪ್ರತಿನಿಧಿಸುತ್ತಿದ್ದರು. ಈ ಬಾರಿ ಆ ಪಟ್ಟಿಯಲ್ಲಿ ಕೆಎಸ್‍ಸಿಎ ಅಧ್ಯಕ್ಷ ರೋಜರ್ ಬಿನ್ನಿ ಹೆಸರು ಕಾಣಿಸಿಕೊಂಡಿರುವುದು ಇನ್ನಷ್ಟು ಅನುಮಾನ ಮೂಡಿಸಿದೆ. ಇದನ್ನೂ ಓದಿ: ಗೂಳಿಗಳ ಗುದ್ದಿಗೆ ಟೈಟಾನ್ಸ್ ಪಲ್ಟಿ

    ಅ. 18ಕ್ಕೆ ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೋ, ಅವರೇ ಚುನಾವಣೆಗೆ ಸ್ಪರ್ಧಿಸಲು ಸಾಧ್ಯ. ಈಗಿನ ನಿಯಮಗಳ ಪ್ರಕಾರ ಒಂದು ರಾಜ್ಯಸಂಸ್ಥೆಯಿಂದ ಒಬ್ಬರು ಮಾತ್ರ ಪಾಲ್ಗೊಳ್ಳಲು ಸಾಧ್ಯ. ಈ ಸಭೆಯಲ್ಲಿ ಸ್ವತಃ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಪ.ಬಂಗಾಲ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಎಲ್ಲಾ ಮಾಹಿತಿಗಳನ್ನು ಗಮನಿಸುತ್ತಿದ್ದಂತೆ ಬಿನ್ನಿಗೆ ಅಧ್ಯಕ್ಷ ಪಟ್ಟ ಸಿಗುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

    ಮೂಲಗಳ ಪ್ರಕಾರ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧ್ಯಕ್ಷ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

    ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅ. 11 ಮತ್ತು 12ರಂದು ನಾಮಪತ್ರ ಸಲ್ಲಿಸಬಹುದಾಗಿದೆ. ಅ. 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ. 14ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, ಅಕ್ಟೋಬರ್ 18ರಂದು ಮುಂಬೈನಲ್ಲಿ ಚುನಾವಣೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ ಗೆದ್ದ ಅವಿಸ್ಮರಣೀಯ ಮೊದಲ ವಿಶ್ವಕಪ್‍ಗೆ ಇಂದು 36ರ ಸಂಭ್ರಮ

    ಭಾರತ ಗೆದ್ದ ಅವಿಸ್ಮರಣೀಯ ಮೊದಲ ವಿಶ್ವಕಪ್‍ಗೆ ಇಂದು 36ರ ಸಂಭ್ರಮ

    ನವದೆಹಲಿ: 1983 ಜೂನ್ 25 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ಹೊಸ ಇತಿಹಾಸವನ್ನು ಈ ದಿನ ಸೃಷ್ಟಿಸಿತ್ತು.

    ಇಂದಿಗೆ ಭಾರತ ತಂಡ ಈ ಸಾಧನೆ ಮಾಡಿ 36 ವರ್ಷವಾಗಿದೆ. ಇಂಗ್ಲೆಂಡಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ವಿಶ್ವಕಪ್‍ನ್ನು ಗೆದ್ದು ಬೀಗಿತ್ತು. ಆ ಕಾಲಕ್ಕೆ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ದೈತ್ಯ ವಿಂಡೀಸ್ ಪಡೆಯ ವಿರುದ್ಧ ಭಾರತ 43 ರನ್‍ಗಳ ಅಂತರದಲ್ಲಿ ಗೆಲುವು ಪಡೆದಿತ್ತು.

    ಅಂದು ಮೊದಲು ಟಾಸ್ ಗೆದ್ದು ವಿಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ರಾಬಟ್ರ್ಸ್, ಮಾರ್ಶಲ್, ಗಾರ್ನರ್, ಹೋಲ್ಡಿಂಗ್‍ನಂತಹ ಘಟಾನುಘಟಿ ಬೌಲರ್‍ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ಕೇವಲ 54.4 ಓವರ್ ಗಳಲ್ಲಿ 183 ರನ್ ಗಳಿಸಿ ಅಲೌಟ್ ಆಗಿತ್ತು. ಇದರಲ್ಲಿ ಭಾರತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಮಾತ್ರ 57 ಎಸೆತಗಳನ್ನು ಆಡಿ 38 ರನ್ ಗಳಿಸಿದ್ದರು. ಇದನ್ನು ಬಿಟ್ಟರೆ ನಾಯಕ ಕಪಿಲ್ ದೇವ್, ಕೀರ್ತಿ ಆಜಾದ್, ರೋಜರ್ ಬಿನ್ನಿ ಬ್ಯಾಟಿಂಗ್‍ನಲ್ಲಿ ವಿಫಲರಾಗಿದ್ದರು.

    ಈ ಸುಲಭ ಗುರಿಯನ್ನು ಬೆನ್ನಟ್ಟಿದ್ದ ವಿಂಡೀಸ್ ತಂಡಕ್ಕೆ ಬಹುದೊಡ್ಡ ಶಾಕ್ ಕಾದಿತ್ತು. ಭಾರತೀಯ ಬೌಲರ್‍ಗಳಾದ ಮೊಹಿಂದರ್ ಅಮರ್‍ನಾಥ್ ಮತ್ತು ಮದನ್ ಲಾಲ್ ಮಾರಕ ದಾಳಿಗೆ ಬಲಿಷ್ಠ ವಿಂಡೀಸ್ ಪಡೆ ನಲುಗಿ ಹೋಗಿತ್ತು. 7 ಓವರ್ ಬೌಲ್ ಮಾಡಿದ ಅಮರ್‍ನಾಥ್ 12 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮದನ್ ಲಾಲ್ 31 ರನ್ ನೀಡಿ 3 ವಿಕೆಟ್ ಬಲಿ ಪಡೆದು ವಿಂಡೀಸ್ ಆಟಗಾರಿಗೆ ಪೆವಿಲಿಯನ್ ದಾರಿ ತೋರಿಸಿದ್ದರು.

    ಕಪಿಲ್ ಕ್ಯಾಚ್ ಭಾರತಕ್ಕೆ ಟ್ರೋಫಿ:
    ಒಂದು ಉತ್ತಮ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ ಎನ್ನುವ ಮಾತಿಗೆ ಪೂರಕ ಎಂಬಂತೆ 28 ಎಸೆತದಲ್ಲಿ 33 ರನ್ ಗಳಿಸಿ ಗೆಲುವಿನ ದಡಕ್ಕೆ ಮುನ್ನಡೆಸುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟಿಗ ವಿವಿಯನ್  ರಿಚರ್ಡ್ಸ್ ಬಾರಿಸಿದ ಚೆಂಡನ್ನು ಕಪಿಲ್ ಹಿಮ್ಮುಖವಾಗಿ ಓಡಿ ಕ್ಯಾಚ್ ಹಿಡಿದ್ದಿದ್ದರು. ಈ ಮೂಲಕ ಭಾರತ ತಂಡವನ್ನು ಮೊದಲ ವಿಶ್ವಕಪ್ ಕಡೆಗೆ ಕರೆದುಕೊಂಡು ಹೋಗಿದ್ದರು.

    ಎರಡು ಬಾರಿ ಗೆದಿದ್ದ ವೆಸ್ಟ್ ಇಂಡೀಸ್‍ನ ಗೆಲುವಿನ ಓಟಕ್ಕೆ ಭಾರತ ಪೂರ್ಣ ವಿರಾಮ ಹಾಕಿತು. 184 ರನ್ ಬೆನ್ನಟ್ಟಿದ ವಿಂಡೀಸ್ 140 ರನ್‍ಗಳಿಗೆ ಪತನ ಹೊಂದಿತ್ತು. ಈ ಮೂಲಕ ಭಾರತ 42 ರನ್‍ಗಳ ಜಯ ದಾಖಲಿಸಿ ತನ್ನ ಮೊದಲ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.