Tag: rod

  • ಮನೆ ಬಳಿ ಮೂತ್ರ ವಿಸರ್ಜಿಸಿದಳೆಂದು ಮಹಿಳೆಯ ಗುಪ್ತಾಂಗಕ್ಕೆ ರಾಡ್‍ನಿಂದ ಹಲ್ಲೆ!

    ಮನೆ ಬಳಿ ಮೂತ್ರ ವಿಸರ್ಜಿಸಿದಳೆಂದು ಮಹಿಳೆಯ ಗುಪ್ತಾಂಗಕ್ಕೆ ರಾಡ್‍ನಿಂದ ಹಲ್ಲೆ!

    ಲಕ್ನೋ: ಮನೆ ಬಳಿ ಮೂತ್ರ ವಿಸರ್ಜನೆ (Urinate) ಮಾಡಿದಳೆಂದು ಆರೋಪಿಸಿ 35 ವರ್ಷದ ಮಹಿಳೆಯೊಬ್ಬರ ಮೇಲೆ ನೆರೆಹೊರೆಯವರು ಥಳಿಸಿದ ಪರಿಣಾಮ ಆಕೆ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ರಾಮಚಂದ್ರ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ತನ್ನ ಮನೆಯ ಸಮೀಪವಿರುವ ಚರಂಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಇದನ್ನು ಗಮನಿಸಿದ ನೆರೆಹೊರೆಯವರು ಮಹಿಳೆಯ ಜೊತೆ ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿ ನೆರೆಹೊರೆಯವರು ಮಹಿಳೆಯ ಖಾಸಗಿ ಭಾಗಗಳಿಗೆ ಕಬ್ಬಿಣದ ರಾಡ್‍ನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಅವರು ಮೂರ್ಛೆ ಹೋದರು ಎಂದು ಸರ್ಕಲ್ ಆಫೀಸರ್ ಬಿಎಸ್ ವೀರ್ ಕುಮಾರ್ ತಿಳಿಸಿದ್ದಾರೆ.

    ನೆರೆಹೊರೆಯವರು ಕಬ್ಬಿಣದ ರಾಡ್‍ನಿಂದ (Iron Rod) ಸಂತ್ರಸ್ತೆಯ ಖಾಸಗಿ ಭಾಗಗಳಿಗೆ ಹೊಡೆದಿದ್ದಾರೆ. ಇದರಿಂದಾಗಿ ಆಕೆಗೆ ಗಂಭೀರ ಗಾಯಗಳಾಗಿದ್ದು, ಮೂರ್ಛೆ ಹೋಗಿದ್ದಾಳೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕುಮಾರ್ ಸೇರಿಸಲಾಗಿದೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಪ್ರಕರಣ ತನಿಖೆ ಆದ್ರೆ ಟೀಕೆ ಮಾಡ್ತಿರೋರೆ ಸಿಕ್ಕಿ ಬೀಳ್ತಾರೆ: ಯತ್ನಾಳ್

    ಐಪಿಸಿಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

    ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

    ರಾಯಚೂರು: ಕ್ಲಾಸ್ ರೂಂನಲ್ಲಿಯೇ ಉಪನ್ಯಾಸಕರ ಎದುರೇ ರಾಡ್ ಹಿಡಿದು ವಿದ್ಯಾರ್ಥಿಗಳು (Students)  ಹೊಡೆದಾಡಿಕೊಂಡಿರುವ ಘಟನೆ ರಾಯಚೂರಿನ (Raichuru) ನವೋದಯ  (Navoodaya) ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.

    ಶಂಕರ್ ಮತ್ತು ಶಂಭುಲಿಂಗ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು, ಇಬ್ಬರ ಮೇಲೂ ರಾಡ್‍ನಿಂದ ರೋಹಿತ್ ಹಲ್ಲೆ ನಡೆಸಿದ್ದಾನೆ. ಈ ಮೂವರೂ ಬಿಎಸ್‍ಸಿ ನರ್ಸಿಂಗ್ (BSC Nursing) ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಶಾಲೆ ಟಾರ್ಗೆಟ್ ಮಾಡಿ ಸೇನೆಯಿಂದ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು

    ಆಗಾಗ ಶಂಭುಲಿಂಗ, ಶಂಕರ್ ರೇಗಿಸುತ್ತಿದರೂ ಸಹಿಸಿಕೊಂಡಿದ್ದ ರೋಹಿತ್ ತನ್ನ ತಾಯಿ ಬರ್ತ್‍ಡೇಗೆ ಸ್ಟೇಟಸ್ ಹಾಕಿದ್ದ. ಆದರೆ ರೋಹಿತ್ ತಾಯಿಯ ಫೋಟೋವನ್ನು ಶಂಕರ್ ಮತ್ತು ಶಂಭುಲಿಂಗ ದುರ್ಬಳಕೆ ಮಾಡಿದ ಆರೋಪದಿಂದ ರೊಚ್ಚಿಗೆದ್ದ ರೋಹಿತ್ ಕಾಲೇಜಿನ ಟೆರೆಸ್ ಮೇಲಿದ್ದ ರಾಡ್ (Rod) ತೆಗೆದುಕೊಂಡು ಬಂದು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಉಪನ್ಯಾಸಕರ (Lecturer) ಕಣ್ಣೆದುರೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯು ನೇತಾಜಿ ನಗರ ಪೊಲೀಸ್ ಠಾಣಾ (Netaji Nagar Police Station) ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮುಂಬೈ: ಮಗಳನ್ನು(Daughter) ಪ್ರೀತಿಸುತ್ತಿದ್ದ ಪ್ರಿಯಕರನ (Lover) ಮುಖಕ್ಕೆ ಮೆಣಸಿನ ಪುಡಿ (Chilli Powder) ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಆರೋಪದಡಿ ಮಹಿಳೆ ಮತ್ತು ಆಕೆಯ ಪುತ್ರನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 13 ರಂದು ಚಿಂಚ್‍ವಾಡ್ ಪ್ರದೇಶದ ಪಾಶ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ವಿಶಾಲ್ ಕಸ್ಬೆ(Vishal Kasbe) ಎಂದು ಗುರುತಿಸಲಾಗಿದ್ದು, ಕಳೆದ ಆರು ವರ್ಷಗಳಿಂದ ಯುವಕ ಹಾಗೂ ಮಹಿಳೆಯ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಯುವತಿಯನ್ನು ಭೇಟಿಯಾಗಲು ಯುವಕ ಬಂದಿದ್ದನು. ಆದರೆ ಆತ ತನ್ನ ಗೆಳತಿಯನ್ನು (Girlfriend) ಭೇಟಿಯಾಗುವ ಮುನ್ನವೇ ಆಕೆಯ ತಾಯಿ ಮತ್ತು ಇಬ್ಬರು ಅಪ್ರಾಪ್ತ ಸಹೋದರರು ಮನೆಯಿಂದ ಹೊರಬಂದು ಯುವಕನನ್ನು ವಿಚಾರಿಸಲು ಆರಂಭಿಸಿದ್ದಾರೆ. ಈ ವೇಳೆ ಮಾತು ಜಗಳಕ್ಕೆ ತಿರುಗಿದೆ.

    ನಂತರ ಯುವಕನ ಮುಖಕ್ಕೆ ಮಹಿಳೆ ಮೆಣಸಿನ ಪುಡಿ ಎರಚಿದ್ದಾಳೆ. ಇದರಿಂದ ಅಸಹಾಯಕನಾದ ಯುವಕನಿಗೆ ಮಹಿಳೆಯ ಪುತ್ರರು ರಾಡ್‍ನಿಂದ(Rod) ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು(Residents) ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಪ್ರಿಯಕರ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾನೆ ಮತ್ತು ಆತನ ತಲೆಗೆ ಹಲವಾರು ಗಾಯಗಳಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ – ಡಿಕ್ಕಿ ಹೊಡೆದು, ಬೈಕ್ ಸವಾರನ ಎಳೆದೊಯ್ದ ಲಾರಿ

    ಸದ್ಯ ಗೆಳತಿಯ ತಾಯಿ ಹಾಗೂ ಆಕೆಯ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

    Live Tv
    [brid partner=56869869 player=32851 video=960834 autoplay=true]

  • ನೀರು ಕೊಡಲು ನಿರಾಕರಣೆ – ವಿಧವೆಯ ಗುಪ್ತಾಂಗಕ್ಕೆ ರಾಡ್ ತುರುಕಿದ್ರು!

    ನೀರು ಕೊಡಲು ನಿರಾಕರಣೆ – ವಿಧವೆಯ ಗುಪ್ತಾಂಗಕ್ಕೆ ರಾಡ್ ತುರುಕಿದ್ರು!

    – ಶಸ್ತ್ರ ಚಿಕಿತ್ಸೆಯ ಮೂಲಕ ರಾಡ್ ತೆಗೆದ ವೈದ್ಯರು
    – ಮಹಿಳೆಯ ಸ್ಥಿತಿ ಗಂಭೀರ

    ಭೋಪಾಲ್: ನೀರು ಕೊಡಲು ನಿರಾಕರಿಸಿದ ವಿಧವೆಯನ್ನು ಮನೆಯಿಂದ ಹೊರಗೆಳೆದು ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವಿಕೃತಿ ಮೆರೆದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.

    ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಗಂಭೀರ ಗಾಯಗೊಂಡಿದ್ದು, ರೇವಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಹಿಳೆ ತನ್ನ ಇಬ್ಬರು ಪುತ್ರರೊಂದಿಗೆ ಶಾಂತಿ ನಗರದಲ್ಲಿ ವಾಸವಾಗಿದ್ದಾರೆ. ಅಲ್ಲದೆ ಅಮಾಲಿಯಾ ಪ್ರದೇಶಲ್ಲಿ ಟೀ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಏಕಾಏಕಿ ಬಂದ ಮೂವರು ನೀರು ಕೊಡುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆ ನೀರು ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮೂವರು, ಮಹಿಳೆಯನ್ನು ಮನೆಯಿಂದ ಹೊರಗೆಳೆದು ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವಿಕೃತಿ ಮೆರೆದಿದ್ದಾರೆ.

    ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಕೂಡಲೇ ರೇವಾ ಜಿಲ್ಲೆಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಮೂಲಕ ವೈದ್ಯರು ಮಹಿಳೆಯ ಖಾಸಗಿ ಅಂಗದಿಂದ ರಾಡ್ ತೆಗೆದಿದ್ದಾರೆ.

    ಪ್ರಕರಣ ಸಂಬಂಧ ಗೃಹ ಸಚಿವ ನರೋಟ್ಟಂ ಮಿಶ್ರಾ ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

  • ಫೋನ್ ನಂಬರ್ ಕೊಡದ ಅಪ್ರಾಪ್ತೆ ಮೇಲೆ ರಾಡ್‍ನಿಂದ ಹಲ್ಲೆ

    ಫೋನ್ ನಂಬರ್ ಕೊಡದ ಅಪ್ರಾಪ್ತೆ ಮೇಲೆ ರಾಡ್‍ನಿಂದ ಹಲ್ಲೆ

    – ದಾರಿ ಮಧ್ಯೆ ಅಡ್ಡಹಾಕಿದ ಆರೋಪಿ
    – ಘಟನೆ ಸಂಬಂಧ ಇಬ್ಬರು ಅರೆಸ್ಟ್

    ಲಕ್ನೋ: ಪೋಷಕರು ಹಾಗೂ ಅವರ ಅಪ್ರಾಪ್ತೆ ಮಗಳ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‍ನ ವಿಜಯನಗರದಲ್ಲಿ ನಡೆದಿದೆ. ಪ್ರಮುಖ ಆರೋಪಿ ಫೋನ್ ನಂಬರ್ ಕೊಡುವಂತೆ ಅಪ್ರಾಪ್ತೆಯ ಬಳಿ ಕೇಳಿದ್ದಾನೆ. ಈ ವೇಳೆ ಆಕೆ ನಂಬರ್ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ತನ್ನ ಗೆಳೆಯರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ.

    ಶನಿವಾರ ರಾತ್ರಿ 9.30ರ ಸುಮಾರಿಗೆ 17 ವರ್ಷದ ಹುಡುಗಿ ಸ್ಥಳೀಯ ಅಂಗಡಿಗೆ ತೆರಳಿದ್ದಾಳೆ. ಈ ವೇಳೆ ಆರೋಪಿ ಶರದ್ ಎಂಬಾತ ಆಕೆಯನ್ನು ದಾರಿ ಮಧ್ಯೆ ಅಡ್ಡಹಾಕಿ ಫೋನ್ ನಂಬರ್ ಕೊಡುವಂತೆ ಪೀಡಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ನಾನು ಆತನಿಗೆ ಫೋನ್ ನಂಬರ್ ಕೊಡಲು ನಿರಾಕರಿಸಿದಾಗ ಆತ ನನ್ನನ್ನು ನಿಂದಿಸಿದ್ದಾನೆ. ಈ ವೇಳೆ ನಾನು ಕಿರುಚಿಕೊಂಡೆ. ಕೂಡಲೇ ನನ್ನ ಪೋಷಕರು ಹಾಗೂ ಸಂಬಂಧಿಕರು ಬಂದು ನನ್ನನ್ನು ಕಾಪಾಡಿದರು. ಇದೇ ವೇಳೆ ಆರೋಪಿ ಶರದ್ ಕೂಡ ಆತನ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡ. ಅಂತೆಯೇ ರೋಹಿತ್, ಪಿಂಕು, ರೀಸವ್ ಹಾಗೂ ಮತ್ತೊಬ್ಬ ಗೆಳೆಯ ಸ್ಥಳಕ್ಕೆ ದೌಡಾಯಿಸಿ ನನ್ನ ಮೇಲೆ ಹಲ್ಲೆ ಮಾಡಿದರು. ಇದನ್ನು ವಿರೋಧಿಸಲು ಯತ್ನಿಸಿದಾಗ ಅವರು ನನ್ನ ಹಾಗೂ ನನ್ನ ಹೆತ್ತವರ ಮೇಲೆಯೂ ಹಲ್ಲೆ ಮಾಡಿದರು ಎಂದು ಘಟನೆಯ ಬಗ್ಗೆ ಅಪ್ರಾಪ್ತೆ ವಿವರಿಸಿದ್ದಾಳೆ.

    ಆರೋಪಿಗಳನ್ನು ನಮ್ಮ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ನನಗೆ ಹಾಗೂ ತಂದೆಗೆ ಗಾಯಘಳಾಗಿವೆ ಎಂದು ಕೂಡ ಅಪ್ರಾಪ್ತೆ ಆರೋಪ ಮಾಡಿದ್ದಾಳೆ.

  • ಮೂಗಿನೊಳಗೆ ರಾಡ್ ತೂರಿಸಿ ಕೊಲೆಗೈದ್ರು!

    ಮೂಗಿನೊಳಗೆ ರಾಡ್ ತೂರಿಸಿ ಕೊಲೆಗೈದ್ರು!

    ಭುವನೇಶ್ವರ್: ಇಲ್ಲಿನ ನಯಾಗರ್ ಜಿಲ್ಲೆಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೇರೆ ಗ್ರಾಮದ ಜನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಪ್ರಮೋದ್ ಪರಿದ್ ಎಂದು ಗುರುತಿಸಲಾಗಿದ್ದು, ಈತ ಬೊಡಪದ ಗ್ರಾಮದವನಾಗಿದ್ದಾನೆ. ಮಾತಿಗೆ ಮಾತು ಬೆಳೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

    ಏನಿದು ಘಟನೆ?
    ಬಾಲುಗಾನ್ ಗ್ರಾಮದಲ್ಲಿ ಮೃತ ಪ್ರಮೋದ್, ಗುಂಪಿನ ಜೊತೆ ಮಾತನಾಡುತ್ತಾ ಮದ್ಯಪಾನ ಮಾಡಿದ್ದಾನೆ. ಹೀಗೆ ಮಾತನಾಡುತ್ತಿರುವಾಗ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಗುಂಪು ಹಾಗೂ ಪ್ರಮೋದ್ ಮಧ್ಯೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದ ಪರಿಣಾಮ ಗುಂಪು, ಪ್ರಮೋದ್ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ ಕಬ್ಬಿಣದ ರಾಡನ್ನು ಪ್ರಮೋದ್ ಮೂಗಿಗೆ ತೂರಿದ್ದಾರೆ.

    ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕುಟುಂಬಸ್ಥರು ಪ್ರಮೋದ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯ ಪ್ರಮೋದ್ ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ನಯಾಗರ್ ಎಸ್‍ಡಿಪಿಒ ನಿಹಾರ್ ರಂಜನ್ ಪಧಿ ತಿಳಿಸಿದ್ದಾರೆ.

  • ನಿವೃತ್ತಿ ಹಣ ಕೊಟ್ಟಿಲ್ಲವೆಂದು ಸಹೋದರಿಯರ ಜೊತೆ ಸೇರಿ ಅಪ್ಪನನ್ನೇ ಕೊಂದ!

    ನಿವೃತ್ತಿ ಹಣ ಕೊಟ್ಟಿಲ್ಲವೆಂದು ಸಹೋದರಿಯರ ಜೊತೆ ಸೇರಿ ಅಪ್ಪನನ್ನೇ ಕೊಂದ!

    ಹೈದರಾಬಾದ್: ನಿವೃತ್ತಿ ಹಣ ನೀಡಿಲ್ಲವೆಂದು ರಾಡ್ ನಿಂದ ಹೊಡೆದು ಮಗ ತನ್ನ ಇಬ್ಬರು ಸಹೋದರಿಯರ ಜೊತೆ ಸೇರಿ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

    ಈ ಘಟನೆ ತೆಲಂಗಾಣದ ರಾಚಕೊಂಡ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿ ತಂದೆಯನ್ನು ಕೃಷ್ಣಾ ಎಂದು ಗುರುತಿಸಲಾಗಿದೆ. ಇವರು ತನ್ನ 22 ವರ್ಷದ ತನ್ನ ಮಗ ತರುಣ್ ಹಾಗೂ ಇಬ್ಬರು ಹೆಣ್ಣು ಮಕ್ಕಳಿಂದಲೇ ಕೊಲೆಗೀಡಾಗಿದ್ದಾರೆ.

    ಕೃಷ್ಣ ಅವರು ನೀರು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು. ಹೀಗಾಗಿ ಅವರಿಗೆ ಸರ್ಕಾರ 6 ಲಕ್ಷ ನಿವೃತ್ತಿ ಹಣವನ್ನು ನೀಡಿತ್ತು. ಇದರ ಜೊತೆಗೆ ತಮ್ಮ ಹೆಸರಿನಲ್ಲಿದ್ದ ಫ್ಲಾಟ್ 10 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ವಿಚಾರವನ್ನು ತಿಳಿದ ಮಗ ತುರುಣ್ ಆ ಹಣದಲ್ಲಿ ತನಗೆ ಹಾಗೂ ಇಬ್ಬರು ಸಹೋದರಿಯರಿಗೆ ಪಾಲು ನೀಡಬೇಕೆಂದು ತಗಾದೆ ತೆಗೆದಿದ್ದಾನೆ ಅಂತ ವನಸ್ತಲಿಪುರಂನ ಎಸಿಪಿ ನಾರಾಯಣ ಅವರು ಘಟನೆ ಬಗ್ಗೆ ತಿಳಿಸಿದ್ದಾರೆ.

    ಮಗನ ಮಾತಿನಂತೆ ಕೃಷ್ಣ ಅವರು ತನ್ನಲ್ಲಿದ್ದ ಹಣದಲ್ಲಿ 2 ಲಕ್ಷ ಉಳಿಸಿಕೊಂಡು ಉಳಿದ ಹಣವನ್ನು ಮಕ್ಕಳಿಗೆ ನೀಡಿದ್ದಾರೆ. ಇದಾದ ಕೆಲ ತಿಂಗಳ ಬಳಿಕ ತರುಣ್ ತನ್ನ ತಂದೆಯ ಬಳಿ ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ. ಈ ವೇಳೆ ಕೃಷ್ಣಾ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ತರುಣ್, ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ತಂದೆಯ ತಲೆಗೆ ಹೊಡೆದಿದ್ದಾನೆ. ತಂದೆಯ ಮೇಲೆ ಹಲ್ಲೆ ನಡೆಸಲು ತರುಣ್ ಸಹೋದರಿಯರು ಸಹಕರಿಸಿದ್ದಾರೆ.

    ಪರಿಣಾಮ ತೀವ್ರ ರಕ್ತಸ್ರಾವವಾಗಿ ಕೃಷ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಘಟನೆಯ ಬಳಿಕ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ಕೂಡಲೇ ಕೃಷ್ಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅವರು ಅದಾಗಲೇ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಕಾಮುಕನಿಂದ ಪೈಶಾಚಿಕ ಕೃತ್ಯ!

    ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಕಾಮುಕನಿಂದ ಪೈಶಾಚಿಕ ಕೃತ್ಯ!

    ಕೊಲ್ಕತ್ತಾ: ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಕುಟುಂಬವೊಂದರ ಮಹಿಳೆ ಮೇಲೆ ಅತ್ಯಾಚಾರಗೈದು ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ಹಾಕಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳ ಜಲ್ಪಾಯ್ ಗುರಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ರತ್ನು ಮುಂಡ ಮತ್ತು ಪರಿಮಲ್ ರಾಯ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಏನಿದು ಪ್ರಕರಣ?
    ಆರೋಪಿಗಳು ಸಂತ್ರಸ್ತೆಯ ಪತಿಯನ್ನು ಲೆಬು ಬಗಾನ್ ಪ್ರದೇಶಕ್ಕೆ ಶನಿವಾರ ರಾತ್ರಿ ಸುಮಾರು 8 ಗಂಟೆ ಮದ್ಯದ ಪಾರ್ಟಿಗೆ ಆಹ್ವಾನಿಸಿದ್ದಾರೆ. ಆದರೆ ಇದಕ್ಕೆ ಆಕೆಯ ಪತಿ ನಿರಾಕರಿಸಿದ್ದಾನೆ. ಆದರೂ ಆರೋಪಿಗಳು ಹಳೆಯ ವೈಯಕ್ತಿಕ ವಿವಾದವನ್ನು ಬಗೆಹರಿಸುವುದಾಗಿ ಹೇಳಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಇತ್ತ ಪಾರ್ಟಿ ಗೆಂದು ಹೋದ ಪತಿ ರಾತ್ರಿ 10 ಗಂಟೆವರೆಗೂ ಮನೆಗೆ ಬರದಿದ್ದಾಗ ಪತಿಯನ್ನು ಹುಡುಕಿಕೊಂಡು ಸಂತ್ರಸ್ತೆ ಹೋಗಿದ್ದಾರೆ. ಆಗ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ.

    ಈ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿಗಳಲ್ಲಿ ಒಬ್ಬ, ಮಹಿಳೆಯನ್ನು ಸಮೀಪವಿರೋ ಪ್ರದೇಶದಲ್ಲಿ ಪೊದೆಗೆ ಎಳೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮತ್ತೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿಲ್ಲ. ಆದರೆ ಈ ಕೃತ್ಯಕ್ಕೆ ಸಾಥ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅತ್ಯಾಚಾರ ಮಾಡಿದಲ್ಲದೇ ಸಂತ್ರಸ್ತೆಯ ಗುಪ್ತಾಂಗಕ್ಕೆ ಸಣ್ಣ ಕಬ್ಬಿಣದ ರಾಡ್ ಅನ್ನು ತುರುಕಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಜಲ್ಪಾಯ್ ಗುರಿ ಸಾದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಈ ಘಟನೆಯಿಂದ ಕೋಪಗೊಂಡ ಸ್ಥಳೀಯರು ಆರೋಪಿಗಳ ಮನೆಗಳ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಪರಿಸ್ಥಿತಿಯನ್ನು ಸ್ಥಳೀಯ ಪೊಲೀಸರು ನಿಯಂತ್ರಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರು ಧುಪ್ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರತ್ನು ಮುಂಡಾ ಮತ್ತು ಪರಿಮಲ್ ರಾಯ್ ಆರೋಪಿಗಳನ್ನು ಬಂಧಿಸಲಾಗಿದ್ದು, ನಮ್ಮ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಈ ಘಟನೆಯು ನವದೆಹಲಿಯಲ್ಲಿ 2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ನೆನಪಿಸುವಂತಿದೆ. ಯುವತಿಯೊಬ್ಬಳ ಮೇಲೆ ಆಕೆಯ ಬಾಯ್ ಫ್ರೆಂಡ್ ಎದುರೇ ಚಲಿಸುತ್ತಿರುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೇ ಓರ್ವ ಆರೋಪಿ ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿದ್ದನು. ನಂತರ ಬಸ್ಸಿನಿಂದ ಆಕೆಯನ್ನು ಹೊರದಬ್ಬಿದ್ದರು ಎಂದು ಪೊಲೀಸರು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸತ್ತ ಇಲಿಯನ್ನು ಮತ್ತೊಬ್ಬರ ಮನೆ ಮುಂದೆ ಎಸೆದು ಕೊಲೆಯಾದ!

    ಸತ್ತ ಇಲಿಯನ್ನು ಮತ್ತೊಬ್ಬರ ಮನೆ ಮುಂದೆ ಎಸೆದು ಕೊಲೆಯಾದ!

    ನವದೆಹಲಿ: ಸತ್ತಿರುವ ಇಲಿಯನ್ನು ಮನೆಯ ಮುಂದೆ ಎಸೆದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ರಾಡ್‍ನಿಂತ ಹೊಡೆದು, ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಕಿರಾರಿ ಪ್ರದೇಶದಲ್ಲಿ ಸೋಮವಾರ ಘಟನೆ ನಡೆದಿದ್ದು, ಹಲ್ಲೆಗೆ ಒಳಗಾಗಿದ್ದ 40 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ತಕ್ಷಣ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಆದರೆ ಆರೋಪಿಯನ್ನು ಇನ್ನೂ ವಶಕ್ಕೆ ಪಡೆದಿಲ್ಲ ಎಂದು ಪೊಲೀಸ್ ಉಪ ಆಯುಕ್ತ ಸೆಜು ಪಿ ಕುರುವಿಲ್ಲಾ ಸ್ಪಷ್ಟಣೆ ನೀಡಿದ್ದಾರೆ. ಇದನ್ನು ಓದಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ಈ ಹಿಂದೆ ಇಂತಹದ್ದೇ ಪ್ರಕರಣವೊಂದು ದೆಹಲಿಯಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಕಾರ್ ಪಾರ್ಕ್ ಮಾಡುತ್ತಿದ್ದ ವೇಳೆ ನಾಯಿಯ ಮೇಲೆ ಹರಿಸಿದ್ದ. ಇದರಿಂದ ಕೋಪಗೊಂಡ ನಾಯಿಯ ಮಾಲೀಕ ವ್ಯಕ್ತಿಯನ್ನು ಥಳಿಸಿ, ಕೊಲೆ ಮಾಡಿದ್ದ. ಒಂದೇ ತಿಂಗಳಿನಲ್ಲಿ ಇಂತಹ ಎರಡು ಪ್ರಕರಣಗಳು ನಡೆದಿದ್ದು, ದೆಹಲಿ ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರ್ಮಾಣ ಹಂತದ ಕಟ್ಟಡದಿಂದ ಬೈಕ್ ಸವಾರನ ಮೇಲೆ ಬಿದ್ದ ರಾಡ್- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ನಿರ್ಮಾಣ ಹಂತದ ಕಟ್ಟಡದಿಂದ ಬೈಕ್ ಸವಾರನ ಮೇಲೆ ಬಿದ್ದ ರಾಡ್- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬೈಕ್ ಸವಾರನ ಮೇಲೆ ರಾಡ್ ಬಿದ್ದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆಗಸ್ಟ್ 31 ರಂದು ಹಲಸೂರು ಗೇಟ್ ಬಳಿಯ ಸುಣಕಲ್ ಪೇಟೆ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಸುಣಕಲ್ ಪೇಟೆ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಬಳಸಲಾದ ಕಬ್ಬಿಣ ರಾಡ್ ನಾಲ್ಕನೇ ಅಂತಸ್ತಿನಿಂದ ಬಿದಿದ್ದೆ. ರಾಡ್ ಬಿದ್ದ ಪರಿಣಾಮ ಕೇವಲ 20 ಸೆಕೆಂಡ್‍ಗಳಲ್ಲಿ ತರಕಾರಿ ಮಾರುವ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸುಣಕಲ್ ಪೇಟೆ ಕ್ರಾಸ್ ಬಳಿ ಬರುತ್ತಿದ್ದ ಬೈಕ್ ಸವಾರ ಚಂದನ್ ತಲೆ ಮೇಲೆ 4-5 ಅಡಿಯ ರಾಡ್ ಬಿದಿದ್ದೆ. ಗಂಭೀರವಾಗಿ ಗಾಯಗೊಂಡಿದ್ದ ಚಂದನ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.

    ರಾಥೋಡ್ ಇನ್ವೆಸ್ಟ್ ಮೆಂಟ್ ಮಾಲೀಕ ಹಾಗೂ ಕಾಂಟ್ರಾಕ್ಟರ್ ಜೈರಾಮ್ ವಿರುದ್ಧ ಬೇಜವಾಬ್ದಾರಿತನದ ಆರೋಪ ಕೇಳಿ ಬಂದಿದೆ. ಸದ್ಯ ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv