Tag: Rocky Sawant

  • ಮುಂಬೈ ಬೀದಿಯ ಕಸ ಎತ್ತಿ, ಆಯುಕ್ತರನ್ನು ತರಾಟೆ ತೆಗೆದುಕೊಂಡ ರಾಕಿ ಸಾವಂತ್

    ಮುಂಬೈ ಬೀದಿಯ ಕಸ ಎತ್ತಿ, ಆಯುಕ್ತರನ್ನು ತರಾಟೆ ತೆಗೆದುಕೊಂಡ ರಾಕಿ ಸಾವಂತ್

    ತತ ಮಳೆಯಿಂದಾಗಿ ಮುಂಬೈ ಸೇರಿದಂತೆ ಹಲವು ನಗರಗಳು ಕಸದಿಂದ ತುಂಬಿ ಹೋಗಿವೆ. ಕಸ ತಗೆಯುವುದಕ್ಕೆ ಆಗದೇ ಇರುವಷ್ಟು ಮಳೆ ಆವಾಂತರ ಸೃಷ್ಟಿ ಮಾಡಿದೆ. ಈಗೀಗ ಮಳೆ ನಿಂತರೂ ಕಸದ ಸಮಸ್ಯೆ ಮಾತ್ರ ನಿಂತಿಲ್ಲ. ಹಾಗಾಗಿ ಮುಂಬೈ ನಗರದಲ್ಲಿ ಅಲ್ಲಲ್ಲಿ ಬೀದಿಯಲ್ಲಿ ಕಸದ ರಾಶಿಯೇ ಬಿದ್ದಿವೆ. ಇದನ್ನು ಗಮನಿಸಿದ ವಿವಾದಿತ ನಟಿ ರಾಕಿ ಸಾವಂತ್, ತಾವೇ ಸಲಕಿ ಹಿಡಿದು ಕಸ ತಗೆಯಲು ಮುಂದಾಗಿದ್ದಾರೆ.

    ದಿನವೂ ಜಿಮ್ ಗೆ ಹೋಗುವ ರಾಕಿ ಸಾವಂತ್, ತಾವು ಜಿಮ್ ಗೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹಲವು ದಿನಗಳಿಂದ ನೋಡಿದ್ದಾರೆ. ಮುಂಬೈನ ಬಿಎಂಸಿ ಸಿಬ್ಬಂದಿಗಳು ಯಾವಾಗ ಇದನ್ನು ಸರಿ ಮಾಡುತ್ತಾರೆ ಎಂದು ಕಾದಿದ್ದಾರೆ. ಎರಡ್ಮೂರು ದಿನಗಳ ನಂತರವೂ ಆ ಕಸ ಹಾಗೆಯೇ ಇದ್ದ ಕಾರಣಕ್ಕಾಗಿ ತಾವೇ ಸಲಕಿ ತಗೆದುಕೊಂಡು ಅದನ್ನು ತಗೆಯಲು ಮುಂದಾಗಿದ್ದಾರೆ. ಒಂದಷ್ಟು ಕಸವನ್ನೂ ಅವರು ಸ್ವಚ್ಚಗೊಳಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:ಆಗಸ್ಟ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಸಿನಿಮಾ ಟೈಟಲ್ ಲಾಂಚ್ : ಶಿವರಾಜ್ ಕುಮಾರ್ ಹೀರೋ

    ರಸ್ತೆಯನ್ನು ಸ್ವಚ್ಚ ಮಾಡುವುದರ ಜೊತೆಗೆ ಬಿಎಂಸಿ ಸಿಬ್ಬಂದಿ ಮತ್ತು ಕಮಿಷ್ನರ್ ಅವರನ್ನು ತರಾಟೆಗೆ ತಗೆದುಕೊಂಡಿರುವ ರಾಕಿ, ಅವರೆಲ್ಲರೂ ಗಡದ್ದಾಗಿ ನಿದ್ದೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಸದಾ ವಿವಾದವನ್ನೇ ಮಾಡಿಕೊಂಡು ಓಡಾಡುತ್ತಿದ್ದ ರಾಕಿಯ ಈ ನಡೆ ಕಂಡು ಬಹುತೇಕರು ಹೊಗಳಿದ್ದಾರೆ. ಇಂತಹ ಕೆಲಸಗಳ ಮೂಲಕ ಒಳ್ಳೆಯವರಾಗಿ ಎಂದು ಹಾರೈಸಿದ್ದಾರೆ. ರಾಕಿಯ ಈ ವಿಡಿಯೋವಂತೂ ಮುಂಬೈ ರಸ್ತೆಗಳ ದಾರುಣ ಸ್ಥಿತಿಯನ್ನು ಕಟ್ಟಿಕೊಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆಲಿಯಾ- ರಣಬೀರ್ ಮದುವೆಗೆ ರಾಕಿ ಸಾವಂತ್‌ಗಿಲ್ಲ ಆಹ್ವಾನ: ರಾಕಿ ಆ ಬಯಕೆ ಈಡೇರಲೇ ಇಲ್ಲ

    ಆಲಿಯಾ- ರಣಬೀರ್ ಮದುವೆಗೆ ರಾಕಿ ಸಾವಂತ್‌ಗಿಲ್ಲ ಆಹ್ವಾನ: ರಾಕಿ ಆ ಬಯಕೆ ಈಡೇರಲೇ ಇಲ್ಲ

    ಕೆಲವು ದಿನಗಳ ಹಿಂದೆಯಷ್ಟೇ ಉತ್ಸುಕರಾಗಿದ್ದ ವಿವಾದಿತ ತಾರೆ ರಾಕಿ ಸಾವಂತ್, ತಾವು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಲ್ಲಿ ಅವರ ಶೂಗಳನ್ನು ಬಚ್ಚಿಟ್ಟು ಒಂದು ಕೋಟಿ ರೂಪಾಯಿ ಕೇಳುತ್ತೇನೆ ಎಂದು ಹೇಳಿದ ವಿಡಿಯೋವನ್ನು ರಿಲೀಸ್ ಮಾಡಿದ್ದರು. ವಧು ವರರ ಶೂ ಮತ್ತು ಚಪ್ಪಲಿಗಳನ್ನು ಬಚ್ಚಿಟ್ಟು ಅವರಿಂದ ಹಣ ಪಡೆಯುವ ಸಂಪ್ರದಾಯವು ಹಲವು ಮದುವೆಗಳಲ್ಲಿದೆ. ಹಾಗಾಗಿ ರಣಬೀರ್ ಶೂ ಮರೆಮಾಚಿ, ಒಂದು ಕೋಟಿ ಹಣಕ್ಕೆ ಬೇಡಿಕೆ ಇಡುವುದಾಗಿ ಅವರು ಹೇಳಿದ್ದರು. ಆದರೆ, ರಾಕಿಗೆ ಮದುವೆಯ ಆಹ್ವಾನವೇ ಹೋಗಿಲ್ಲ. ಇದನ್ನೂ ಓದಿ : ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ರಣಬೀರ್ ಮತ್ತು ಆಲಿಯಾ ಜೋಡಿ ಕೆಲವೇ ಕೆಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ಹೆಸರಾಂತ ನಟ ನಟಿಯರಿಗೂ ಆ ಮದುವೆಗೆ ಆಹ್ವಾನವಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ತನ್ನನ್ನು ಆ ಸ್ಟಾರ್ ಜೋಡಿ ಮದುವೆಗೆ ಕರೆಯುತ್ತಾರೆ ಎಂದು ರಾಕಿ ಹೇಗೆ ಅಂದುಕೊಂಡಿದ್ದರೋ ಗೊತ್ತಿಲ್ಲ. ಮದುವೆಗೆ ಎರಡು ದಿನ ಮುಂಚಿತವಾಗಿಯೇ ವಿಡಿಯೋವೊಂದನ್ನು ಹಾಕಿದ್ದರು. ಜತೆಗೆ ಡಿಡಿಎಲ್‍ಜಿ ಸಿನಿಮಾದ ‘ಮೆಹಂದಿ ಲಗಾ ಕೇ ರಖ್ನಾ, ಡೋಲಿ ಸಜಾ ಕೇ ರಖ್ನಾ..’ ಹಾಡನ್ನು ಹೇಳಿದ್ದರು. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಎರಡು ದಿನಗಳ ಹಿಂದೆಯೇ ಈ ಸ್ಟಾರ್ ಜೋಡಿ ಹಸೆಮಣೆ ಏರಿದೆ. ಸದ್ಯಕ್ಕೆ ಆರತಕ್ಷತೆ ಕಾರ್ಯಕ್ರಮವನ್ನೂ ಆಯೋಜನೆ ಮಾಡುವುದಿಲ್ಲ ಎಂದು ಕಪೂರ್ ಕುಟುಂಬ ಹೇಳಿಕೊಂಡಿದೆ. ಅಲ್ಲದೇ, ಆಲಿಯಾ ಮತ್ತು ರಣಬೀರ್ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವುದರಿಂದ ಹನಿಮೂನ್ ಕೂಡ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ.

  • ಆರ್‌ಆರ್‌ಆರ್‌ ಸಕ್ಸಸ್ ಪಾರ್ಟಿ- ರಾಕಿ ಸಾವಂತ್ ಸೊಂಟದಲ್ಲಿ ಗನ್

    ಆರ್‌ಆರ್‌ಆರ್‌ ಸಕ್ಸಸ್ ಪಾರ್ಟಿ- ರಾಕಿ ಸಾವಂತ್ ಸೊಂಟದಲ್ಲಿ ಗನ್

    ಬಾಲಿವುಡ್ ಮಂದಿಗಾಗಿಯೇ ಆರ್.ಆರ್.ಆರ್ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಈ ಸಂದರ್ಭದಲ್ಲಿ ಆರ್.ಆರ್.ಆರ್ ಸಿನಿಮಾ ತಂಡ ಮತ್ತು ಬಾಲಿವುಡ್ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಆಮೀರ್ ಖಾನ್, ಕರಣ್ ಜೋಹಾರ್, ಜಾವೇದ್ ಅಖ್ತರ್, ದಿ ಕಾಶ್ಮೀರ್ ಫೈಲ್ಸ್ ನಟ ದರ್ಶನ್ ಸಿಂಗ್, ತುಷಾರ್ ಕಪೂರ್ ಹೀಗೆ ಬಾಲಿವುಡ್ ದಿಗ್ಗಜರೇ ಈ ಪಾರ್ಟಿಗೆ ಬಂದಿದ್ದರು. ಯಾರೇ ದಿಗ್ಗಜರು ಬಂದಿದ್ದರೂ, ಅಲ್ಲಿ ಫಳಫಳ ಹೊಳೆದದ್ದು ಮಾತ್ರ ಮಾದಕ ನಟಿ ರಾಕಿ ಸಾವಂತ್. ಇದನ್ನೂ ಓದಿ : ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

    ಪಾರ್ಟಿಗೆ ಅವರು ಬಂದಿದ್ದ ಲುಕ್ಕೇ ವಿಭಿನ್ನವಾಗಿತ್ತು. ತುಂಬಾ ಬೋಲ್ಡ್ ಆಗಿ ಕಾಣುವಂತಹ ರೆಡ್ ಡ್ರೆಸ್ ನಲ್ಲಿ ರಾಕಿ ಆಗಮಿಸಿ, ಎಲ್ಲರ ಗಮನ ಸೆಳೆದರು. ಬರೀ ಕಾಸ್ಟ್ಯೂಮ್ ಮಾತ್ರವಲ್ಲ, ಗೋಲ್ಡನ್ ಕಲರ್ ನಿಂದ ಹೆಣೆಯಲ್ಪಟ್ಟ ಕೇಶ ವಿನ್ಯಾಸ ಮತ್ತು ಸೊಂಟದಲ್ಲಿ ಹಾಕಿಸಿಕೊಂಡಿದ್ದ ರಿವಲ್ವಾರ್ ಟ್ಯಾಟೋ ಕ್ಯಾಮೆರಾಗಳು ಕಣ್ಣಿಗೆ ಆಹಾರವಾಗಿದ್ದಂತೂ ಸುಳ್ಳಲ್ಲ. ಹಾಗಂತ ರಾಕಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅಲ್ಲಿಗೆ ಬಂದಿದ್ದ ಅಷ್ಟೂ ಸಿಲಿಬ್ರಿಟಿಗಳ ಜತೆ ಫೋಟೋ ತಗೆಸಿಕೊಂಡರು. ತಮಾಷೆ ಮಾಡಿಕೊಂಡು ಇಡೀ ಪಾರ್ಟಿಗೆ ಕಳೆ ತಂದಿದ್ದಾರೆ. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ

    ರಾಕಿಯ ಉತ್ಸಾಹ ಕಂಡು ಎಲ್ಲರೂ ದಂಗಾಗಿದ್ದರು. ಅಲ್ಲದೇ, ತಾನು ಸೊಂಟದಲ್ಲಿ ಬರೆಯಿಸಿಕೊಂಡಿದ್ದ ಗನ್ ಟ್ಯಾಟೋವನ್ನು ಎಲ್ಲರಿಗೂ ತೋರಿಸುವುದೇ ಆ ಸಂದರ್ಭದಲ್ಲಿ ಅವರ ಕಾಯಕವಾಗಿತ್ತು. ಬಂದವರಿಗೆಲ್ಲ ಟ್ಯಾಟೋ ತೋರಿಸಿ, ಮನರಂಜನೆ ನೀಡುತ್ತಿದ್ದರು ರಾಕಿ ಸಾವಂತ್. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಈಗಾಗಲೇ ಆರ್.ಆರ್.ಆರ್ ಸಿನಿಮಾ ವಿಶ್ವದಾದ್ಯಂತ ಭಾರೀ ಗೆಲುವು ಕಂಡಿದೆ. ಇನ್ನೇನು ಸದ್ಯದಲ್ಲೇ 1000 ಕೋಟಿ ಕ್ಲಬ್ ಕೂಡ ಸೇರಲಿದೆ. ಹಿಂದಿಯಲ್ಲೂ ಭರ್ಜರಿ ಹಿಟ್ ಆಗಿದೆ. ಹಾಗಾಗಿ ಇಡೀ ತಂಡ ಬಾಲಿವುಡ್ ಮಂದಿಗೆ ಪಾರ್ಟಿ ಆಯೋಜನೆ ಮಾಡಿತ್ತು. ರಾಮ್ ಚರಣ್ ತೇಜ್, ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರ ತಂಡವೇ ಅಲ್ಲಿತ್ತು.