Tag: Rocking Star Yash

  • ಮಲ್ಪೆಯ ಬ್ಲ್ಯಾಕ್ ರಾಕ್ ನಡುವೆ ರಾಕಿಂಗ್ ಸ್ಟಾರ್ ಯಶ್ ಖದರ್

    ಮಲ್ಪೆಯ ಬ್ಲ್ಯಾಕ್ ರಾಕ್ ನಡುವೆ ರಾಕಿಂಗ್ ಸ್ಟಾರ್ ಯಶ್ ಖದರ್

    ಉಡುಪಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-1 ಚಿತ್ರ 2018ರಲ್ಲಿ ವಿಶ್ವದಾದ್ಯಂತ ಸೌಂಡ್ ಮಾಡಿತ್ತು. ಇದೀಗ ಕೆಜಿಎಫ್-2 ಮತ್ತೆ ಧೂಳೆಬ್ಬಿಸಲು ತಯಾರಾಗುತ್ತಿದೆ. ಲಾಕ್‍ಡೌನ್ ಫ್ರೀ ಆದ ನಂತರ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಇದೀಗ ಚಿತ್ರದ ಜಬರ್ದಸ್ತ್ ಸೀಕ್ವೆನ್ಸ್ ಉಡುಪಿಯ ಮಲ್ಪೆಯಲ್ಲಿ ನಡೆಯುತ್ತಿದೆ.

    ಕಪ್ಪು ಬಣ್ಣದ 8-10 ಕಾರುಗಳು, ಅರಬ್ಬಿ ಸಮುದ್ರದ ತಟದಲ್ಲಿ ಐದಾರು ಬೋಟುಗಳು, ಬ್ರೌನ್ ಅಂಡ್ ವೈಟ್ ಡ್ರೆಸ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಿಂಚುತ್ತಿದ್ದಾರೆ. ಕೊರೊನ ಲಾಕ್‍ಡೌನ್ ಮುಗಿಸಿದ ನಂತರ ಕೆಜಿಎಫ್ ಚಿತ್ರತಂಡ ಚಿತ್ರೀಕರಣ ಜೋರಾಗಿ ನಡೆಸುತ್ತಿದೆ. ಪ್ರಶಾಂತ್ ನೀಲ್ ಬೆಟಾಲಿಯನ್ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಪಡುಕೆರೆ ಕಡಲಕಿನಾರೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

    ಎಂಟು ಹತ್ತು ಕಾರುಗಳು ಗಿರ್ ಗಿರ್ ಅಂತ ರೌಂಡ್ ಹೊಡೀತಿದ್ರೆ ನಡುವೆ ಯಶ್ ಬಿಳಿ ಅಂಗಿ ಬ್ರೌನ್ ಪ್ಯಾಂಟ್ ನಲ್ಲಿ ಮಿರ ಮಿರ ಮಿಂಚುತ್ತಿದ್ದರು. ಪಕ್ಕದಲ್ಲಿ ಶ್ರೀನಿಧಿ ಗೋಲ್ಡನ್ ಮತ್ತು ಬ್ಲ್ಯಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸೀಕ್ವೆನ್ಸ್ ಒಂದನ್ನು ಪಡುಕೆರೆ ಕಡಲಕಿನಾರೆಯಲ್ಲಿ ಚಿತ್ರೀಕರಿಸಲಾಯಿತು. 2 ಗ್ಯಾಂಗ್ ಸ್ಟರ್ ಗುಂಪುಗಳು ಅರಬ್ಬಿ ಸಮುದ್ರದಲ್ಲಿ ಮುಖಾಮುಖಿಯಾಗುವ ದೃಶ್ಯವನ್ನು ಕೂಡ ಈ ಸಂದರ್ಭದಲ್ಲಿ ಸೆರೆಹಿಡಿಯಲಾಯಿತು. ಅರಬ್ಬಿ ಸಮುದ್ರದಲ್ಲಿ ಒಟ್ಟು ಮೂರು ಮೀನುಗಾರಿಕಾ ಬೋಟ್ ಗಳನ್ನು ಕೆಜಿಎಫ್-2 ಚಿತ್ರಕ್ಕೆ ಬಳಸಲಾಗಿದೆ.

    ರಾಕಿ ಬಾಯ್‍ನನ್ನು ನೋಡಬೇಕು ಸೆಲ್ಫಿ ತೆಗಿಬೇಕು ಅಂತ ನೂರಾರು ಮಂದಿ ಪಡುಕೆರೆ ಕಡಲಕಿನಾರೆಗೆ ಬಂದಿದ್ದರು. ಆದರೆ ಸಮುದ್ರ ತೀರದಲ್ಲಿ ಸುಮಾರು ನೂರು ಮಂದಿ ಬೌನ್ಸರ್ ಗಳು ಮೊಬೈಲ್ ಚಿತ್ರೀಕರಣ ನಡೆಸದಂತೆ ತಡೆದರು ಯಶ್ ಅವರನ್ನು ಹತ್ತಿರದಿಂದ ನೋಡಬೇಕು ಎಂದು ದೂರದ ಊರುಗಳಿಂದ ಬಂದಿದ್ದ ಯುವಕ-ಯುವತಿಯರಿಗೆ ನಿರಾಶೆಯಾಯಿತು.

    ಉಡುಪಿಯಲ್ಲಿ ಕೆಜಿಎಫ್ ಚಿತ್ರ ತಂಡ ಮೂರು ದಿನ ಟೆಂಡ್ ಹಾಕಿದೆ. ಮಲ್ಪೆ ಬೀಚ್, ಮಲ್ಪೆ ಬಂದರು, ಪಡುಕೆರೆ ಬ್ರಿಜ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿರುವುದರಿಂದ ಮಲ್ಪೆ-ಪಡುಕೆರೆ ಕಡಲ ತೀರವನ್ನು ಮುಂಬೈ ಮಾದರಿಯಲ್ಲಿ ಚಿತ್ರೀಕರಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

  • ನಾಳೆಯಿಂದ ಅಖಾಡದಲ್ಲಿ ರಾಖಿ – ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ

    ನಾಳೆಯಿಂದ ಅಖಾಡದಲ್ಲಿ ರಾಖಿ – ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ

    ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಅವರು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಹಿ ಸುದ್ದಿಯನ್ನು ನೀಡಿದ್ದಾರೆ.

    ಕೆಜಿಎಫ್-1 ಸಿನಿಮಾದ ಮುಂದುವರಿದ ಭಾಗ ಕೆಜಿಎಫ್-2ಗಾಗಿ ಇಡೀ ಭಾರತ ಚಿತ್ರರಂಗವೇ ಕಾದು ಕುಳಿತಿದೆ. ಕೊರೊನಾ ಕಾರಣದಿಂದ ನಿಂತಿದ್ದ ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಈಗ ನಾಳೆಯಿಂದ ರಾಕಿಂಗ್ ಸ್ಟಾರ್ ಯಶ್ ಅವರು ಅಂತಿಮ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯನ್ನು ಕಾರ್ತಿಕ್ ಗೌಡ ನೀಡಿದ್ದಾರೆ.

    ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಕಾರ್ತಿಕ್ ಗೌಡ ಅವರು, ನಾಳೆಯಿಂದ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್-2 ಸಿನಿಮಾದ ಅಂತಿಮ ಹಂತದ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಾವು ಚಿತ್ರೀಕರಣವನ್ನು ಪೂರ್ಣಗೊಳಿಸಿ ಚಿತ್ರದ ಬಿಡುಗಡೆಯ ಕಡೆ ಸಾಗುತ್ತೇವೆ ಎಂದು ಬಿಗ್ ಅಪ್ಡೇಟ್ ನೀಡಿದ್ದಾರೆ. ಇದನ್ನು ಕಂಡ ಯಶ್ ಅಭಿಮಾನಿಗಳು ಖುಷಿಯಾಗಿದ್ದು, ಟ್ವಿಟ್ಟರಿನಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ.

    ಚಿತ್ರತಂಡ ಈ ಮುಂಚೆಯೇ ಅಕ್ಟೋಬರ್ 23ಕ್ಕೆ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರದ ಶೂಟಿಂಗ್ ಆರಂಭವಾಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಚಿತ್ರ ಮುಂದಿನ ವರ್ಷ ಜನವರಿ 14ರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ. ಕೆಜಿಎಫ್ ಮೊದಲ ಚಾಪ್ಟರ್ ನೋಡಿ ಥ್ರಿಲ್ ಆಗಿದ್ದ ಚಿತ್ರಪ್ರೇಮಿಗಳು ಈಗ ಕೆಜಿಎಫ್-2ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್ ಮುಗಿದ ಬಳಿಕ ಈಗಾಗಲೇ ಆಗಸ್ಟ್ 26ರಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹಿರಿಯ ನಟ ಪ್ರಕಾಶ್ ರೈ ಮತ್ತು ಮಾಳವಿಕಾ ಅವರು ನಟಿಸಿರುವ ದೃಶ್ಯಗಳನ್ನು ಚಿತ್ರೀಕರಣವನ್ನು ಮಾಡಲಾಗಿದೆ. ಕೊರೊನಾ ಲಾಕ್‍ಡೌನ್‍ಗೂ ಮುನ್ನ ಬಾಲಿವುಡ್‍ನ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿ ಹೋಗಿದ್ದಾರೆ.

    ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಈ ಬಾರಿಯ ದಸರಾಗೆ ರಾಖಿಬಾಯ್ ಚಿತ್ರಮಂದಿರಗಳಿಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಆದರೆ ಈ ತಿಂಗಳಲ್ಲೇ ಸಿನಿಮಾ ಚಿತ್ರೀಕರಣ ಅಂತ್ಯವಾಗುವ ಕಾರಣ, ಅಕ್ಟೋಬರ್ ಕೊನೆಯಲ್ಲಿ ಕೆಜಿಎಫ್-2 ಸಿನಿಮಾದ ಟ್ರೈಲರ್ ನೋಡಬಹುದು ಎಂದು ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಚಿತ್ರತಂಡ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ.

  • ರಾಕಿಂಗ್ ಸ್ಟಾರ್ ಯಶ್ ಮನೆಯ ಕಾಂಪೌಂಡಿಗೆ ಟ್ರ್ಯಾಕ್ಟರ್ ಡಿಕ್ಕಿ – ಬೈಕ್ ಜಖಂ

    ರಾಕಿಂಗ್ ಸ್ಟಾರ್ ಯಶ್ ಮನೆಯ ಕಾಂಪೌಂಡಿಗೆ ಟ್ರ್ಯಾಕ್ಟರ್ ಡಿಕ್ಕಿ – ಬೈಕ್ ಜಖಂ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಮನೆಗೆ ಟ್ರ್ಯಾಕ್ಟರ್ ಒಂದು ಡಿಕ್ಕಿ ಹೊಡೆದಿರುವ ಘಟನೆ ನೆನ್ನೆ ರಾತ್ರಿ ಸಂಭವಿಸಿದೆ.

    ಮಂಗಳವಾರ ರಾತ್ರಿ ಸಿಲಿಕಾನ್ ಸಿಟಿಯ ಹೊಸಕೆರೆಹಳ್ಳಿಯಲ್ಲಿರೋ ರಾಕಿಂಗ್ ಸ್ಟಾರ್ ಯಶ್ ಮನೆಗೆ ಕಾಂಪೌಂಡಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ಪರಿಣಾಮ ಮನೆಯ ಮುಂದೆ ನಿಲ್ಲಸಲಾಗಿದ್ದ ಬೈಕ್ ಒಂದು ಜಖಂ ಆಗಿದೆ.

    ಬ್ರೇಕ್ ಫೇಲ್ ಆಗಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಯಶ್ ಮನೆಯ ಕಾಂಪೌಂಡಿಗೆ ಡಿಕ್ಕಿಯಾಗಿದೆ. ಆದರೆ ಆ ಸಮಯದಲ್ಲಿ ಘಟನಾ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ಏನೂ ತೊಂದರೆ ಆಗಿಲ್ಲ. ಬಳಿಕ ಸ್ಥಳಕ್ಕೆ ಪೊಲೀಸರು ಬಂದಿದ್ದು, ಜೆಸಿಬಿ ಮೂಲಕ ಟ್ರ್ಯಾಕ್ಟರ್ ಅನ್ನು ಸ್ಥಳಾಂತರಿಸಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಯಶ್ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.

  • ಮನವಿಯಂತೆ ಚಿತ್ರನಗರಿಗೆ 500 ಕೋಟಿ ರೂ. ಅನುದಾನ- ಸಿಎಂಗೆ ಅಭಿನಂದನೆ ಸಲ್ಲಿಸಿದ ಯಶ್

    ಮನವಿಯಂತೆ ಚಿತ್ರನಗರಿಗೆ 500 ಕೋಟಿ ರೂ. ಅನುದಾನ- ಸಿಎಂಗೆ ಅಭಿನಂದನೆ ಸಲ್ಲಿಸಿದ ಯಶ್

    – ಮೈಸೂರು ಫಿಲ್ಮ್ ಸಿಟಿಗೆ ಉತ್ತಮ ಜಾಗ
    – ಫಿಲ್ಮ್ ಸಿಟಿ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

    ಬೆಂಗಳೂರು: ಮನವಿಯಂತೆ ರಾಜ್ಯ ಬಜೆಟ್ ಮಂಡನೆಯಲ್ಲಿ ಚಿತ್ರನಗರಿಗೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಂದನೆ ಸಲ್ಲಿಸಿದ್ದಾರೆ.

    ನಗರದಲ್ಲಿ ಇಂದು ಓಬೆರಾಯನ ಕಥೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, ಇಡೀ ಚಿತ್ರರಂಗದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮನವಿ ಸಲ್ಲಿಸಿದಾಗ ಸಿಎಂ ವೇದಿಕೆ ಮೇಲೆಯೇ ಮಾತು ಕೊಟ್ಟಿದ್ದರು. ಅದರಂತೆ ಇಂದು ಬಜೆಟ್‍ನಲ್ಲಿ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಬಹಳ ಖುಷಿ ತಂದಿದೆ ಎಂದರು. ಇದನ್ನೂ ಓದಿ: ಯಶ್ ಬೇಡಿಕೆ ಬೆನ್ನಲ್ಲೇ ಬೆಂಗ್ಳೂರಲ್ಲಿ ಫಿಲಂ ಸಿಟಿಗೆ 500 ಕೋಟಿ ರೂ. ಘೋಷಣೆ

    ನಮ್ಮ ಸಿನಿಮಾ ಉದ್ಯಮಕ್ಕೆ ಫಿಲ್ಮ್ ಸಿಟಿ ತುಂಬಾ ಅವಶ್ಯಕತೆ ಇದೆ. ನಾವು ಎಲ್ಲೋ ಹೋಗಿ ಶೂಟ್ ಮಾಡುವಾಗ ನಮ್ಮ ರಾಜ್ಯದಲ್ಲೂ ಇಂತಹ ವ್ಯವಸ್ಥೆ ಇರಬೇಕು ಎನ್ನುವ ಅಭಿಪ್ರಾಯ ಬರುತ್ತದೆ. ಸಿನಿಮಾ ಕ್ಷೇತ್ರಕ್ಕೆ ಸೃಜನಶೀಲ ಕಲಾವಿದರು, ಬರಹಗಾರರು, ಯುವಕರಿಗೆ ಅಗತ್ಯವಿದೆ. ಸಿನಿಮಾ ಒಂದು ಉದ್ಯಮ. ಇದನ್ನು ಇನ್ನಷ್ಟು ಚೆನ್ನಾಗಿ ಬೆಳೆಯಲು ಸರ್ಕಾರ ಕೈ ಜೋಡಿಸಬೇಕು ಎಂದು ಕೇಳಿಕೊಂಡರು.

    ಫಿಲ್ಮ್ ಸಿಟಿ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ. ಈ ಬಗ್ಗೆ ಡಿಸಿಎಂ ಅಶ್ವಥ್‍ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಭೂಮಿ ಇದೆ ಅಂತ ಅವರು ಹೇಳಿದ್ದಾರೆ. ಅಲ್ಲಿಯೇ ಫಿಲ್ಮ್ ಸಿಟಿ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಿದರೆ ಉತ್ತಮ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಏಕೆಂದರೆ ಅಲ್ಲಿ ಜನದಟ್ಟಣೆ, ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಮೊದಲಿನಿಂದಲೂ ಮೈಸೂರಿನಲ್ಲಿ ಸಿನಿಮಾಗೆ ಪೂರಕ ವಾತಾವರಣ ಸಿಗುತ್ತಾ ಬಂದಿದೆ ಎಂದು ತಿಳಿಸಿದರು.

    ಸದ್ಯಕ್ಕೆ ನಮ್ಮ ರಾಜ್ಯಕ್ಕೆ ಫಿಲ್ಮ್ ಸಿಟಿ ಅಗತ್ಯವಿದೆ. ಸರ್ಕಾರ ಎಲ್ಲಿ ನಿರ್ಮಾಣ ಮಾಡಿದರೂ ಓಕೆ. ಚಿತ್ರರಂಗದ ಹಿರಿಯರು ಈ ಬಗ್ಗೆ ಸರ್ಕಾರದ ಜೊತೆಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದರು.

  • ಕೆಜಿಎಫ್ ಗಾಗಿ ಕಾಯ್ತಿರೋ ಬಾಲಿವುಡ್ ನಟನಿಗೆ ರಾಕಿ ಉತ್ತರ

    ಕೆಜಿಎಫ್ ಗಾಗಿ ಕಾಯ್ತಿರೋ ಬಾಲಿವುಡ್ ನಟನಿಗೆ ರಾಕಿ ಉತ್ತರ

    -ಕೆಜಿಎಫ್ ಬಿಡುಗಡೆಯ ಸುಳಿವು ನೀಡಿದ ಯಶ್

    ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಕಾಯುತ್ತಿರುವ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಗೆ ರಾಕಿಬಾಯ್ ಯಶ್ ಉತ್ತರಿಸುವ ಮೂಲಕ ಚಿತ್ರದ ಬಿಡುಗಡೆಯ ಸುಳಿವು ನೀಡಿದ್ದಾರೆ.

    ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಇಡೀ ಭಾರತೀಯ ಸಿನಿ ಲೋಕವೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಬಿಡುಗಡೆ ಮುನ್ನವೇ ಕೆಜಿಎಫ್-ಚಾಪ್ಟರ್ 2 ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದು, ನಟ ಫರ್ಹಾನ್ ಅಖ್ತರ್, ರಾಕಿಗಾಗಿ ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಫರ್ಹಾನ್ ಅಖ್ತರ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ರಾಮಾಚಾರಿ, ರಾಕಿಯ ಬಿರುಗಾಳಿ (ತೂಫಾನ್)ಶೀಘ್ರದಲ್ಲೇ ಬರಲಿದೆ ಎಂದು ಉತ್ತರಿಸಿದ್ದಾರೆ. ಫರ್ಹಾನ್ ಅಖ್ತರ್ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯ ಫೋಟೋ ಹಂಚಿಕೊಂಡಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಜಿಎಫ್-ಚಾಪ್ಟರ್ 2 ಇದೆ. ಉಳಿದಂತೆ ಗೋಲ್‍ಮಾಲ್-5, ಬ್ರಹ್ಮಾಸ್ತ್ರ, ಸೂರ್ಯವಂಶಿ ಮತ್ತು ’83’ ಸಿನಿಮಾಗಳು ಕ್ರಮವಾಗಿ 2,3,4 ಹಾಗೂ 5ನೇ ಸ್ಥಾನದಲ್ಲಿವೆ. ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿರುವ ಕೆಜಿಎಫ್ ಮೊದಲ ಸ್ಥಾನದಲ್ಲಿದೆ.

    ಸಿನಿಮಾದಲ್ಲಿ ಸಂಜಯ್ ದತ್ ಮತ್ತು ರವೀನಾ ಟಂಡನ್ ನಟಿಸಿದ್ದು, ಚಿತ್ರ ಪ್ರತಿದಿನ ಕುತೂಹಲವನ್ನ ಹುಟ್ಟು ಹಾಕುತ್ತಿದೆ. ಅಭಿಮಾನಿಗಳು ಸಹ ಕೆಜಿಎಫ್ ಅಂಗಳದಿಂದ ಬರೋ ವಿಷಯಗಳಿಗಾಗಿ ಕಾಯುತ್ತಿರುತ್ತಾರೆ.

  • ನಕ್ಕು ನಗಿಸಲು ಬರ್ತಿದ್ದಾರೆ ಶ್ರೀ ಭರತ ಬಾಹುಬಲಿ

    ನಕ್ಕು ನಗಿಸಲು ಬರ್ತಿದ್ದಾರೆ ಶ್ರೀ ಭರತ ಬಾಹುಬಲಿ

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಜುಗಲ್‍ಬಂದಿಯಾಗಿ ನಟಿಸಿರೋ ಶ್ರೀ ಭರತ ಬಾಹುಬಲಿ ಚಿತ್ರ ಜನವರಿ 17ಕ್ಕೆ ರಾಜ್ಯದ್ಯಂತ ತೆರೆ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಜನಪ್ರಿಯರಾಗಿದ್ದ ಮಂಜು ಮಾಂಡವ್ಯ ನಟನಾಗಿ ಅಭಿನಯಿಸುತ್ತಿರುವ ಚಿತ್ರವಿದು.

    ನಟನೆ ಜೊತೆಗೆ ಚಿತ್ರಕ್ಕೆ ನಿರ್ದೇಶನ ಕೂಡ ಮಂಜು ಮಾಂಡವ್ಯ ಮಾಡಿದ್ದಾರೆ. ಒಂದೊಳ್ಳೆ ಟೀಂ ಕಟ್ಟಿಕೊಂಡು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಇರೋ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ ಮಂಜು ಮಾಂಡವ್ಯ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

    ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೈಲರ್ ಕೂಡ ಒಳ್ಳೆಯ ಟಾಕ್ ಕ್ರಿಯೇಟ್ ಮಾಡಿದ್ದು ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮಣಿಕಾಂತ್ ಕದ್ರಿ ಮ್ಯೂಸಿಕ್, ಪರ್ವೇಜ್.ಕೆ ಸಿನಿಮಾಟೋಗ್ರಾಫಿ ಶ್ರೀ ಭರತ ಬಾಹುಬಲಿ ಚಿತ್ರಕ್ಕಿದೆ. ಶ್ರೀನಿವಾಸ್ ಮೂರ್ತಿ, ಪುಷ್ಪಲತಾ, ಕರಿಸುಬ್ಬು, ಶ್ರೇಯಾ ಶೆಟ್ಟಿ, ಅಚ್ಯುತ್ ರಾವ್ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 17ಕ್ಕೆ ಭರತ ಬಾಹುಬಲಿ ಕಥೆ ನೋಡಲು ರೆಡಿಯಾಗಿ.

  • ಚಿಕ್ಕಣ್ಣ-ಮಂಜು ಮಾಂಡವ್ಯ ಜುಗಲ್‍ಬಂದಿಯ ಚಿತ್ರ ಈ ವಾರ ತೆರೆಗೆ!

    ಚಿಕ್ಕಣ್ಣ-ಮಂಜು ಮಾಂಡವ್ಯ ಜುಗಲ್‍ಬಂದಿಯ ಚಿತ್ರ ಈ ವಾರ ತೆರೆಗೆ!

    ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಈಗ ತಾವೇ ಕ್ಯಾಮೆರಾ ಮುಂದೆ ಬಂದು ಡೈಲಾಗ್ ಹೇಳ್ತಿದ್ದಾರೆ.

    ಹೌದು, ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನ್ನುತ್ತಿದ್ದಾರೆ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ನಟನಾಗಿಯೂ ಛಾಪು ತೋರಿಸಲು ಸಿದ್ದರಾಗಿದ್ದಾರೆ ಮಂಜು ಮಾಂಡವ್ಯ. ನಟನೆ ಜೊತೆಗೆ ಸ್ವತಃ ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀ ಭರತ ಬಾಹುಬಲಿ ಟೈಟಲ್ಲೇ ವಿಭಿನ್ನವಾಗಿದ್ದು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಚಿತ್ರದಲ್ಲಿದೆಯಂತೆ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಗೆಳೆಯನ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದು, ಟ್ರೈಲರ್ ಮೆಚ್ಚುಗೆ ಪಡೆದುಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡ್ತಿವೆ. ಜನವರಿ 17ಕ್ಕೆ ಶ್ರೀ ಭರತ ಬಾಹುಬಲಿ ಚಿತ್ರ ತೆರೆಗೆ ಬರಲು ರೆಡಿಯಾಗಿದ್ದು, ಟಿ. ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ರೊಮ್ಯಾಂಟಿಕ್ ಹಾಡುಗಳೊಂದಿಗೆ ಬಹುನಿರೀಕ್ಷಿತ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ತಡವಾದಷ್ಟೂ ಕಾತರವನ್ನು ಹೆಚ್ಚಾಗಿಸುತ್ತಿರೋ ಈ ಸಿನಿಮಾ ಇದೀಗ ಬಿಡುಗಡೆಯ ನಿರ್ಣಾಯಕ ಹಂತ ತಲುಪಿಕೊಂಡಿದೆ. ಅದರ ಭಾಗವಾಗಿ ಚೆಂದದ್ದೊಂದು ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ರೆಡಿಯಾಗಿದೆ. ಈ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಪ್ರೀತಿಯಿಂದ ಬಿಡುಗಡೆ ಮಾಡಲಿದ್ದಾರೆ.

    ಇದೇ ಶುಕ್ರವಾರ, 23ನೇ ತಾರೀಕಿನಂದು ರಾಕಿಂಗ್ ಸ್ಟಾರ್ ಯಶ್ ಕಿಸ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಯಶ್ ಬಹು ಕಾಲದ ಸ್ನೇಹಿತರು. ಈ ಸೆಳೆತದಿಂದಲೇ ತಮ್ಮ ಬ್ಯುಸಿಯಾದ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಕಿಸ್ ಟ್ರೇಲರ್ ಲಾಂಚ್ ಮಾಡಲು ಅವರೊಪ್ಪಿಕೊಂಡಿದ್ದಾರೆ. ಈ ಮೂಲಕವೇ ಕಿಸ್ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತೆಯೂ ಆಗಿದೆ. ಕಿಸ್ ಈವರೆಗೂ ಸೃಷ್ಟಿಸಿರೋ ಕ್ರೇಜ್ ಕಂಡು ಯಶ್ ಸಂತಸಗೊಂಡಿದ್ದಾರಂತೆ.

    ವಿರಾಟ್ ಮತ್ತು ಶ್ರೀಲೀಲಾ ಕಿಸ್‍ನಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿರೋ ಶೀಲ ಸುಶೀಲ ಯೂ ಡೋಂಟುವರಿ ಎಂಬ ಹಾಡಂತೂ ಈ ಕ್ಷಣಕ್ಕೂ ಟ್ರೆಂಡಿಂಗ್‍ನಲ್ಲಿದೆ. ಆ ನಂತರ ಬಂದಿರೋ ಹಾಡುಗಳೂ ಕೂಡಾ ಮಿಲಿಯನ್ನುಗಟ್ಟಲೆ ವೀವ್ಸ್‍ನೊಂದಿಗೆ ದಾಖಲೆ ಬರೆದಿವೆ. ಆದರೆ ಈ ಸಿನಿಮಾದ ಕಥೆ ಏನಿರಬಹುದೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದು ಕೊಂಡಿದೆ. ಶುಕ್ರವಾರ ಯಶ್ ಬಿಡುಗಡೆಗೊಳಿಸಲಿರೋ ಟ್ರೇಲರ್‍ನಲ್ಲಿ ಅದರ ಸಿಳಿವಿರಬಹುದಾ? ಅಥವಾ ಆ ಮೂಲಕವೇ ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗುವಂತೆ ಈ ಟ್ರೇಲರ್ ಅನ್ನು ರೂಪಿಸಿದ್ದಾರಾ ಅನ್ನೋದೆಲ್ಲ ಜಾಹೀರಾಗಲು ಇನ್ನೊಂದು ದಿನ ಕಾಯಬೇಕಿದೆಯಷ್ಟೆ!

  • ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ

    ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ

    ದೋಹಾ: ಸಾಕಷ್ಟು ಕೂತೂಹಲ ಕೆರಳಿಸಿದ್ದ 2019ರ ಸೈಮಾ ಪ್ರಶಸ್ತಿಗೆ ತೆರೆಬಿದ್ದಿದೆ. ಕತಾರ್ ನ ರಾಜಧಾನಿ ದೋಹಾದಲ್ಲಿ ದಕ್ಷಿಣ ಭಾರತದ 8ನೇ ಅಂತರಾಷ್ಟ್ರೀಯ ವರ್ಣರಂಜಿತ ಸಮಾರಂಭ ನಡೆದಿದ್ದು 2019ರ ಸೈಮಾ ಪ್ರಶಸ್ತಿ ಘೋಷಣೆಯಾಗಿದೆ.

    ಕನ್ನಡ-ತೆಲುಗು-ತಮಿಳು-ಮಲೆಯಾಳಂ ಭಾಷೆಯ ಸಿನಿದಿಗ್ಗಜರು ಒಟ್ಟಾಗಿ ಸೇರಿದ್ದು ಸೈಮಾ ಗೋಲ್ಡನ್ ಟ್ರೋಪಿಗೆ ಮುತ್ತಿಕ್ಕಿದ್ದಾರೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಖಳನಾಯಕ. ಅತ್ಯುತ್ತಮ ನಟಿ ಸೇರಿದಂತೆ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ.

    ಅತ್ಯುತ್ತಮ ನಟನಾಗಿ ಮಿಂಚಿದ ರಾಕಿಭಾಯ್, ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಅವರಿಗೆ 2019ರ ಸೈಮಾ ಅತ್ಯುತ್ತಮ ನಟನಾಗಿ ಗೋಲ್ಡನ್ ಬ್ಯೂಟಿಗೆ ಮುತ್ತಿಕ್ಕಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ದೇಶದಾದ್ಯಂತ ಉತ್ತಮ ಯಶಸ್ಸು ಕಂಡಿತ್ತು.

    ಕೆಜಿಎಫ್‍ನಂತಹ ಬಿಗ್ ಬಜೆಟ್ ಸಿನಿಮಾ ಮಾಡಿ ಸೈ ಅನಿಸಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸೈಮಾದ ಅತ್ಯುತ್ತಮ ನಿರ್ದೇಶಕನಾಗಿ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದಲ್ಲೇ ಉಗ್ರಂ ರೀತಿಯ ಮಾಸ್ ಹಿಟ್ ಕೊಟ್ಟಿದ್ದ ಪ್ರಶಾಂತ್ ತನ್ನ ಎರಡನೇ ಚಿತ್ರದಲ್ಲಿ ಕೆಜಿಎಫ್‍ನಂತಹ ಬಿಗ್ ಸಿನಿಮಾ ಮಾಡಿ ಗೆದ್ದಿದ್ದರು.

    ಕನ್ನಡ ವಿಭಾಗ ಸೈಮಾ ಪ್ರಶಸ್ತಿಯ ಬಹುಪಾಲು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಕೆಜಿಎಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಯಶ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ್ದ ಅರ್ಚನಾ ಜೋಯಿಸ್ ಅವರಿಗೆ ಸೈಮಾದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರತಿದೆ.

    ಕೆಜಿಎಫ್ ಸಿನಿಮಾಗೆ ಒಟ್ಟು ಐದು ಪ್ರಶಸ್ತಿಗಳು ಲಭಿಸಿದ್ದು, ಕೆಜಿಎಫ್ ಸಿನಿಮಾದಲ್ಲಿ ರಾಜಕಾರಣಿಯಾಗಿ ಅಭಿನಯಸಿದ್ದ ಅಚ್ಯುತ್ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ಕೆಜಿಎಫ್ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಮಾಡಿದ್ದ ಭುವನ್ ಗೌಡ ಅವರಿಗೆ ಸೈಮಾದ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.

    ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರಕ್ಕೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದ್ದು, ಈ ಚಿತ್ರದಲ್ಲಿ ಡಾಲಿ ಎಂಬ ಹೆಸರಿನ ಪಾತ್ರದಲ್ಲಿ ತನ್ನ ವಿಭಿನ್ನ ನಟನೆಯ ಮೂಲಕ ಸಖತ್ ಮನೋರಂಜನೆ ನೀಡಿದ್ದ ಡಾಲಿ ಧನಂಜಯ ಅವರಿಗೆ 2019ರ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದೆ.

    ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ಅಯೋಗ್ಯ ಚಿತ್ರ ತಂಡಕ್ಕೆ ಸಿಕ್ಕಿದೆ. ಸತೀಶ್ ನಿನಾಸಂ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಕಿಕೊಂಡು ಉತ್ತಮ ಕೌಟುಂಬಿಕ ಕಾಮಿಡಿ ಚಿತ್ರ ಮಾಡಿದ ಮಹೇಶ್ ಅವರಿಗೆ ಸೈಮಾದ ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ದೊರಕಿದೆ. ಇದೇ ಚಿತ್ರದ `ಏನಮ್ಮಿ ಏನಮ್ಮಿ’ ಪದ್ಯ ಬರೆದ ಚೇತನ್ ಕುಮಾರ್ ಅವರಿಗೆ ಅತ್ಯುತ್ತಮ ಚಿತ್ರ ಸಾಹಿತಿ ಪ್ರಶಸ್ತಿ ಸಿಕ್ಕಿದೆ.

    ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ ಕರಾಳರಾತ್ರಿ ಸಿನಿಮಾಗೆ ಅತ್ಯುತ್ತಮ ನವ ನಟಿ ಪ್ರಶಸ್ತಿ ಸಿಕಿದ್ದು, ಈ ಚಿತ್ರದಲ್ಲಿ ಜೆಕೆ ಜೊತೆ ನಾಯಕಿಯಾಗಿ ನಟಿಸಿದ್ದ ಬಿಗ್‍ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ಪ್ರಶಸ್ತಿ ಗೆದ್ದಿದ್ದಾರೆ.

    ಬೆಲ್‍ಬಾಟಮ್ ಖ್ಯಾತಿಯ ನಟ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ಕಾಮಿಡಿ ಟೈಮಿಂಗ್ ಮೂಲಕ ಹೆಸರುವಾಸಿಯಾದ ಪ್ರಕಾಶ್ ತುಮಿನಾಡ್ ಅವರಿಗೆ ಸೈಮಾ ಪ್ರಶಸ್ತಿ ಒಲಿದಿದೆ.

  • ರಾಕಿಭಾಯ್‍ಗೆ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

    ರಾಕಿಭಾಯ್‍ಗೆ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈ ಸಾಲಿನ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ.

    ಕತಾರ್‍ ನಲ್ಲಿ ನಡೆದ ಎಂಟನೇ ದಕ್ಷಿಣ ಭಾರತ ಅಂತರಾಷ್ಟ್ರೀಯ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್‍ನ ರಾಕಿಭಾಯ್ ಪಾತ್ರಕ್ಕೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಶ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ಸೈಮಾ ಅವಾರ್ಡ್ಸ್ ನ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ಕೆಜಿಎಫ್ ಚಿತ್ರದಿಂದ ಯಶ್, ಟಗರು ಸಿನಿಮಾದಿಂದ ಶಿವಣ್ಣ, ರ್ಯಾಂಬೋ 2 ಶರಣ್, ಅಯೋಗ್ಯ ಸಿನಿಮಾದಿಂದ ಸತೀಶ್ ನಿನಾಸಂ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಿಂದ ಅನಂತ್ ನಾಗ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಈ ಐವರನ್ನು ಹಿಂದಿಕ್ಕಿ ರಾಕಿಭಾಯ್ ಬ್ಲಾಕ್ ಬ್ಯೂಟಿಗೆ ಮುತ್ತಿಕ್ಕಿದ್ದಾರೆ.

    ಎಂಟನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸೈಮಾ ಪ್ರಶಸ್ತಿ ಸಮಾರಂಭ ಕತಾರ್‍ನ ರಾಜಧಾನಿ ದೋಹಾದಲ್ಲಿ ನಡೆಯುತ್ತಿದ್ದು, ದಕ್ಷಿಣ ಭಾರತದ ಎಲ್ಲಾ ತಾರೆಯರ ಸಮ್ಮಿಲನವಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಶ್ ಅವರು ಗುರುವಾರ ಕತಾರ್‍ ಗೆ ಹೋಗಿದ್ದರು.