Tag: Rocking Star Yash

  • ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ – ಡೂಪ್ಲಿಕೇಟ್ `ಕೆಜಿಎಫ್’ ಲೋಕ ಸೃಷ್ಟಿಸಿದ್ದವನಿಗೆ ಸಿಸಿಬಿ ಶಾಕ್

    ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ – ಡೂಪ್ಲಿಕೇಟ್ `ಕೆಜಿಎಫ್’ ಲೋಕ ಸೃಷ್ಟಿಸಿದ್ದವನಿಗೆ ಸಿಸಿಬಿ ಶಾಕ್

    ಬೆಂಗಳೂರು: ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ ಕೊಟ್ಟು ಡೂಪ್ಲಿಕೇಟ್ `ಕೆಜಿಎಫ್’ (KGF) ಲೋಕವನ್ನು ಸೃಷ್ಟಿಸಿ ವೈರಲ್ ಮಾಡಿದ್ದ ರೀಲ್ಸ್ ಸ್ಟಾರ್ ಶ್ರೀನಿವಾಸ್‌ಗೆ ಸಿಸಿಬಿ (CCB) ಶಾಕ್ ನೀಡಿದೆ.

    ರೀಲ್ಸ್ ಸ್ಟಾರ್ ಶ್ರೀನಿವಾಸ್ ರಾಜ್ ಎಂಬಾತನಿಗೆ ಸಿಸಿಬಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಹಿಂದೆ ಮುಂದೆ ಜನರನ್ನು ಇಟ್ಟುಕೊಂಡು ಹೀರೋ ರೀತಿಯಲ್ಲೇ ಪೋಸ್ ಕೊಟ್ಟು ರೀಲ್ಸ್ ಮಾಡಿದ್ದ. ರಾಕಿಂಗ್ ಸ್ಟಾರ್ ಯಶ್ ಸ್ಟೈಲ್‌ನ್ನು ಕಾಪಿ ಮಾಡಿ, ಚಾಕು, ಚೂರಿ ಮತ್ತು ಗನ್ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ.ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

    ಈ ವಿಡಿಯೋ ಪೊಲೀಸ್ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಕಣ್ಣಿಗೆ ಬಿದ್ದಿದ್ದು, ಸಿಸಿಬಿ ಪೊಲೀಸರು ಶ್ರೀನಿವಾಸ್‌ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇದೆಲ್ಲ ಡೂಪ್ಲಿಕೇಟ್ ವೆಪನ್ಸ್ ಎಂದು ಮಾಹಿತಿ ನೀಡಿದ್ದಾನೆ.

    ಸದ್ಯ ಪೊಲೀಸರು ವಿಡಿಯೋದಲ್ಲಿ ಬಳಸಿದ್ದ ಎಲ್ಲಾ ವಸ್ತುಗಳನ್ನು ತಂದೊಪ್ಪಿಸಲು ಸೂಚಿಸಿದ್ದಾರೆ. ಯಾವುದೇ ಒಂದು ಮಾರಕಾ‌ಸ್ತ್ರ ತಪ್ಪಿಸಿದರೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.ಇದನ್ನೂ ಓದಿ:‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ  5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು

  • ಯಶ್‌ಗೆ ಹಾಲಿವುಡ್‌ನ ಆಸ್ಕರ್ ವಿಜೇತ ಪ್ರೊಡ್ಯೂಸರ್ ಬಲ!

    ಯಶ್‌ಗೆ ಹಾಲಿವುಡ್‌ನ ಆಸ್ಕರ್ ವಿಜೇತ ಪ್ರೊಡ್ಯೂಸರ್ ಬಲ!

    ರಾಮಾಯಣ (Ramayana) ಚಿತ್ರವನ್ನು ಯಶ್ (Yash) ನಟಿಸಿ, ನಿರ್ಮಿಸುತ್ತಿದ್ದಾರೆ. ಭಾರತದ ಧಾರ್ಮಿಕ ನಂಬಿಕೆಯ ಈ ಚಿತ್ರವನ್ನು ಯಶ್ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಭರವಸೆಯನ್ನು ಈ ಹಿಂದೆಯೇ ಕೊಟ್ಟಿದ್ದರು. ಅದರಂತೆ ಯಶ್ ಈಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

    ರಾಮಾಯಣ ಚಿತ್ರವನ್ನ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕಾರಣ ಈ ಚಿತ್ರಕ್ಕೆ ಓರ್ವ ನಿರ್ಮಾಪಕರಾಗಿ ಹಾಲಿವುಡ್‌ನ ಆಸ್ಕರ್ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಚಾರ್ಲಿ ರೋವನ್ ಸೇರ್ಪಡೆಯಾಗಿದ್ದಾರೆ. ಆದರೆ ಈ ಕುರಿತು ಸದ್ಯ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.ಇದನ್ನೂ ಓದಿ: ನೀನು ಚಪ್ಪಲಿ ಹೊಲಿಯಲು ಯೋಗ್ಯನಲ್ಲ – ನಿಂದಿಸಿದ್ದ ಮೂವರು ಇಂಡಿಗೋ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್‌

    ರಾಮಾಯಣ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಚಿತ್ರವನ್ನ ಯಶ್ ನಟಿಸಿ, ನಿರ್ಮಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದು, ರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಎರಡು ಸರಣಿಯಲ್ಲಿ ಚಿತ್ರ ತೆರೆಕಾಣಲಿದ್ದು, ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ.

    ಬಿಗ್ ಬಜೆಟ್‌ನಲ್ಲಿ ತಯಾರಾಗ್ತಿರುವ ರಾಮಾಯಣ ಚಿತ್ರವನ್ನ ಯಶ್ ತಮ್ಮ ನಿರ್ಮಾಣ ಸಂಸ್ಥೆ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ಇನ್ನೋರ್ವ ನಿರ್ಮಾಪಕರಾಗಿ ಪ್ರೈಮ್‌ ಫೋಕಸ್ ಸ್ಟುಡಿಯೋ ನಮಿತ್ ಮಲ್ಹೋತ್ರಾ ಕೂಡ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಇದೀಗ ವಿಶ್ವ ಮಟ್ಟದಲ್ಲಿ ರಾಮಾಯಣ ಚಿತ್ರವನ್ನ ತಲುಪಿಸುವ ಸಲುವಾಗಿ ಯಶ್ ಜೊತೆ ಹಾಲಿವುಡ್‌ನ ಖ್ಯಾತ ನಿರ್ಮಾಪಕ ಚಾರ್ಲಿ ರೋವನ್ (Charles Roven) ಕೈಜೋಡಿಸಿದ್ದು, ರಾಮಾಯಣಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಈಗಾಗ್ಲೇ ಯಶ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.ಇದನ್ನೂ ಓದಿ: 7 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ – ಇಬ್ಬರು ಬಾಲಕರು ಅರೆಸ್ಟ್‌

  • ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!

    ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!

    ರಾಕಿಂಗ್‌ಸ್ಟಾರ್ ಯಶ್ (Rocking Star Yash) `ಕೆಜಿಎಫ್’ (KGF) ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಆಗಿದ್ದಾರೆ. `ಟಾಕ್ಸಿಕ್’ (Toxic) ಸಿನಿಮಾದಿಂದ ಇಂಟರ್‌ನ್ಯಾಷನಲ್ ಸ್ಟಾರ್ ಆದ್ರೂ ಆಶ್ಚರ್ಯವೇನಿಲ್ಲ. ಯಾಕಂದ್ರೆ ಯಶ್ ಸಿನಿಮಾಗಾಗಿ ಮಾಡಿಕೊಳ್ಳುವ ತಯಾರಿ, ಡೇಡಿಕೇಶನ್ ಹಾಗಿರುತ್ತೆ. ಅದಕ್ಕೆ ತಾಜಾ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಒಂದೊಮ್ಮೆ ಯಶ್ ಆಡಿದ ಮಾತುಗಳು ನಿಜವಾದಾಗ ಎಲ್ಲರೂ ಹುಬ್ಬೇರಿಸಿ, ಬಾಯಿಮೇಲೆ ಬೆರಳಿಟ್ಟುಕೊಂಡಿದ್ದರು.

    ಸದ್ಯ ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಾಕಿಭಾಯ್ (Rocky Bhai) ಅವರ ಚಿತ್ರದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲಿ ಮೂಗಿನಿಂದಲೂ ಉಸಿರು ಬಿಡುತ್ತಿಲ್ಲ. ಅಷ್ಟೂ ಸಸ್ಪೆನ್ಸ್ ಆಗಿಟ್ಟಿದ್ದಾರೆ. ಹಿಂದೊಮ್ಮೆ ಬಾಂಬೆಯಲ್ಲಿ ಅಭಿಮಾನಿಗಳತ್ತ ಕೈ ಮಾಡಿದ ಯಶ್ ವಿಡಿಯೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ವು. ಜೊತೆಗೆ ಅವರ ಸ್ಟೈಲಿಶ್ ಲುಕ್ ಕೂಡಾ ರಿವೀಲ್ ಆಗಿತ್ತು.ಇದನ್ನೂ ಓದಿ: ಹುಡುಗರಂತೆ ವರ್ಕೌಟ್ ಮಾಡಿ ಬೈಸಿಪ್ಸ್ ಪ್ರದರ್ಶಿಸಿದ ಚೈತ್ರಾ ವಾಸುದೇವನ್

    ಯಶ್ ಇದೀಗ ಮುಂಬೈ ಶಹರ್‌ನಲ್ಲಿ ಪತ್ನಿ ರಾಧಿಕಾ ಜೊತೆ ರೌಂಡ್ಸ್ ಹಾಕ್ತಿದ್ದಾರೆ. ಮುಂಬೈನಲ್ಲಿ ಯಶ್ ಸೆಲ್ಫಿಗೆ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಫ್ಯಾನ್ಸ್ಗೆ ಶೇಕ್‌ಹ್ಯಾಂಡ್ ಕೊಟ್ಟಿದ್ದಾರೆ ರಾಕಿಭಾಯ್. ಅಭಿಮಾನಿಯೋರ್ವ ಕನ್ನಡದಲ್ಲೇ “ಆರಾಮ ಸರ್, ಆರಾಮ ಮೇಡಂ” ಎಂದು ಕುಶಲೋಪರಿ ವಿಚಾರಿಸಿದ್ದಾನೆ. ಈ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಟಾಕ್ಸಿಕ್’ ಸಿನಿಮಾ ಬ್ಯುಸಿಯ ನಡುವೆಯೂ ಪತ್ನಿ ಜೊತೆ ಯಶ್ ಮುಂಬೈನಲ್ಲಿ ಸುತ್ತಾಟ ನಡೆಸಿದ್ದಾರೆ. ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಮೋಸ್ಟ್ ಅವೈಟೆಡ್ ಟಾಕ್ಸಿಕ್ ಸ್ಯಾಂಪಲ್ಸ್‌ನಿಂದಲೇ ಅಟ್ರ್ಯಾಕ್ಟ್‌ ಮಾಡಿದೆ. `ಟಾಕ್ಸಿಕ್’ ಮುಂದಿನ ಅಪ್‌ಡೇಟ್‌ಗಾಗಿ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.ಇದನ್ನೂ ಓದಿ: ಸ್ವಿಮ್ ಸೂಟ್ ಧರಿಸಿ ನೀರಿಗಿಳಿದ ರಾಗಿಣಿ

  • ವಿಶ್ವದಾದ್ಯಂತ ಕೆಜಿಎಫ್ ಅಬ್ಬರಕ್ಕೆ ಮೂರೇ ದಿನ ಬಾಕಿ -ನ್ಯೂಯಾರ್ಕ್‍ನ ಎಲ್‍ಇಡಿ ಸ್ಕ್ರೀನ್‍ನಲ್ಲಿ ಯಶ್ ಟ್ರೇಲರ್

    ವಿಶ್ವದಾದ್ಯಂತ ಕೆಜಿಎಫ್ ಅಬ್ಬರಕ್ಕೆ ಮೂರೇ ದಿನ ಬಾಕಿ -ನ್ಯೂಯಾರ್ಕ್‍ನ ಎಲ್‍ಇಡಿ ಸ್ಕ್ರೀನ್‍ನಲ್ಲಿ ಯಶ್ ಟ್ರೇಲರ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಬಿಡುಗಡೆಗೆ ಇನ್ನೂ ಮೂರು ದಿನವಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳು ಕೆಜಿಎಫ್ ವೆಲ್‍ಕಂಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಕಟೌಟ್‍ಗಳಿಗೆ ಹೂವಿನ ಅಲಂಕಾರ, ಥಿಯೇಟರ್‍ಗಳಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಬಹುತೇಕ ಕಡೆಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗಿದೆ. ಕೆಜಿಎಫ್-2 ಸಿನಿಮಾ 1000 ಕೋಟಿ ಕ್ಲಬ್ ಸೇರುವ ಲೆಕ್ಕಾಚಾರದಲ್ಲಿದೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸುವತ್ತ ರಾಕಿಭಾಯ್ ಮುನ್ನುಗ್ಗುತ್ತಿದ್ದಾರೆ. ಇದನ್ನೂ ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ಕೆಜಿಎಎಫ್-2 ಚಿತ್ರ ವೀಕ್ಷಣೆಗೆ ಮಹಿಳಾ ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ಕೆಜಿಎಫ್ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಸೋಲ್ಡೌಟ್ ಆಗಿದೆ. ಅಖಿಲ ಕರ್ನಾಟಕ ಯಶ್ ಮಹಿಳಾ ಅಭಿಮಾನಿಗಳು ಕೆಂಗೇರಿಯ ವೆಂಕಟೇಶ್ವರ ಥಿಯೇಟರ್ ನಲ್ಲಿ ಇಡೀ ಶೋ ಟಿಕೆಟ್ ಖರೀದಿ ಮಾಡಿದ್ದಾರೆ. ಗುರುವಾರ ಬೆಳಗ್ಗೆ 10 ಗಂಟೆ ಶೋಗೆ ಲೇಡಿ ಫ್ಯಾನ್ಸ್ 2,06,500 ರೂಪಾಯಿ ಮೌಲ್ಯದ ಟಿಕೆಟ್ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ತಂಡದ ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್

    ಕೆಜಿಎಫ್-2 ವೆಲ್‍ಕಂಗೆ ವಿಶ್ವದಾದ್ಯಂತ ಕಾತರರಾಗಿದ್ದಾರೆ. ಅಮೆರಿಕದಲ್ಲಿ ಏಪ್ರಿಲ್ 13ಕ್ಕೆ ಕೆಜಿಎಫ್ ಬಿಡುಗಡೆಯಾಗಲಿದೆ. ಅದ್ಧೂರಿ ವೀಡಿಯೋ ಮೂಲಕ ಚಿತ್ರಕ್ಕೆ ಭರ್ಜರಿ ವೆಲ್‍ಕಂ ಮಾಡಲಾಗುತ್ತಿದೆ. ದಲ್ಲಾಸ್‍ನಲ್ಲಿ ಯಶ್ ಫ್ಯಾನ್ಸ್ ಸಲಾಂ ರಾಕಿಭಾಯ್ ಎನ್ನುತ್ತಿದ್ದಾರೆ. ನ್ಯೂಯಾರ್ಕ್‍ನಲ್ಲಿ ಎಲ್‍ಇಡಿ ಟ್ರಕ್‍ನಲ್ಲಿ ಕೆಜಿಎಫ್ ಟ್ರೇಲರ್ ಹಾಕಲಾಗುತ್ತಿದೆ. ಇದನ್ನೂ ಓದಿ: ಕೆಜಿಎಫ್ 2 : ಐದೂ ಭಾಷೆಯಲ್ಲೂ ಡಬ್ ಮಾಡಿದ ಏಕೈಕ ಕಲಾವಿದ ಪ್ರಕಾಶ್ ರೈ

    ಇತ್ತ ಮುಂಬೈನಲ್ಲೂ ಯಶ್ ಕೆಜಿಎಫ್ ಹವಾ ಕ್ರಿಯೇಟ್ ಆಗಿದೆ. ಮುಂಬೈ ರೈಲ್ವೆ ಸ್ಟೇಷನ್‍ನಲ್ಲಿ ಕೆಜಿಎಫ್ ಬಿಗ್ ಪೋಸ್ಟರ್ ಹಾಕಲಾಗಿದೆ. ಏಪ್ರಿಲ್ 14ಕ್ಕೆ ಮುಂಬೈನಲ್ಲೂ ಕೆಜಿಎಫ್ ತೆರೆ ಕಾಣಲಿದೆ. ಒಟ್ಟಿನಲ್ಲಿ ಈ ಹಿಂದೆ ಕನ್ನಡ ಸಿನಿಮಾ ಬೇರೆನೇ ಲೆವೆಲ್‍ಗೆ ಹೋಗುತ್ತೆ ಎಂದು ಯಶ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಈ ಮಾತು ನಿಜವಾಗುವುದಂತು ಸತ್ಯ. ಈ ಬಾರಿ ಕೆಜಿಎಫ್ 2 ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

  • ತಂದೆ-ತಾಯಿ ಬಗ್ಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ: ಯಶ್

    ತಂದೆ-ತಾಯಿ ಬಗ್ಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ: ಯಶ್

    – ನಾವೂ ಅಪ್ಪ, ಅಮ್ಮನಿಗೆ ಹುಟ್ಟಿರುವ ಮಕ್ಕಳೇ
    – ನಾನು ಹಾಸನದಲ್ಲೇ ಹುಟ್ಟಿರುವ ಮಗ

    ಹಾಸನ: ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ. ತಂದೆ- ತಾಯಿ ಬಗ್ಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಸಾಧ್ಯವಾಗಲ್ಲ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ಜಮೀನು ವಿಚಾರವಾಗಿ ಗ್ರಾಮಸ್ಥರು ಮತ್ತು ಯಶ್ ಹೆತ್ತವರ ನಡುವೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಯಶ್ ಅವರು ಇಂದು ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಬಳಿಕ ಘಟನೆ ಬಗ್ಗೆ ತಮ್ಮ ಬೆಂಬಲಿಗರಿಂದ ಮಾಹಿತಿ ಪಡೆದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಕಿಂಗ್ ಸ್ಟಾರ್, ಸೆಲೆಬ್ರಿಟಿ ಆದವರಿಗೆ ಶಾಪ. ನಮ್ಮ ಹಣೆಬರಹ. ನಮ್ಮ ಬಗ್ಗೆ ಯಾರಾದ್ರು ಏನಾದ್ರು ಹೇಳಿದ್ರೆ ನೀವು ಹಾಕ್ತೀರಾ. ಅದನ್ನ ನೋಡಿ ನಾವು ತಿಳಿದುಕೊಳ್ಳಬೇಕು. ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಜಮೀನಿನ ಒಳಗೆ ಬಂದು ಕೆಲವರು ಏನೇನೋ ಮಾಡ್ತಾರೆ. ಕೆಲಸ ಮಾಡುವ ಹುಡುಗರ ಬಗ್ಗೆ ಮಾತಾಡ್ತಾರೆ. ಅಲ್ಲದೆ ಕೆಲಸ ಮಾಡುವವರು ಕೂಡ ನಮ್ಮ ಮನೆಯವರಂತೆ. ಆ ಹುಡುಗರ ಮೇಲೆ ಕೈ ಮಾಡಿದ್ರೆ ಹೇಗೆ..? ಅದಕ್ಕಾಗಿ ಬಂದು ಈಗ ಮಾತನಾಡುತ್ತಿದ್ದೇನೆ ಎಂದರು.

    ರಸ್ತೆ ವಿಚಾರ ಮಾತನಾಡುತ್ತಾರೆ. ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ಏನಾದ್ರು ಒಂದು ಎಕ್ಸಾಂಪಲ್ ಸೆಟ್ ಮಾಡಲು ಜಮೀನು ಮಾಡಿದ್ದೇವೆ. ಬೇಕಾದ್ರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ..? ನಮ್ಮ ತಂದೆ-ತಾಯಿಯೂ ಹಳ್ಳಿ ಜನ ಅವರೂ ಮಾತನಾಡ್ತಾರೆ, ಇವರೂ ಮಾತನಾಡ್ತಾರೆ. ಯಾವ ರೀತಿ ಮಾತನಾಡಬೇಕು ಆ ರೀತಿ ಮಾತನಾಡಬೇಕು ಎಂದು ಯಶ್ ಹೇಳಿದರು.

    ಮೀಡಿಯಾ ಇದೆ ಅಂತಾರೆ, ಎಲ್ಲರದ್ದೂ ಇದೇ ಆಗಿದೆ. ಮೀಡಿಯಾ ಇದ್ದರೆ ಇರಲಿ ಬಿಡಿ. ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ. ತಂದೆ-ತಾಯಿಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತಾ ಹೇಳ್ತಾರಂತೆ. ನಾನು ಹಾಸನದಲ್ಲೇ ಹುಟ್ಟಿರುವ ಮಗ. ನಮ್ಮ ತಂದೆ-ತಾಯಿ ಹಾಸನದಲ್ಲಿ ಹುಟ್ಟಿದವರು. ಹಾಸನ, ಬೆಳಗಾವಿ, ಮಂಗಳೂರು ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರು ಮಾಡ್ತೀನಿ. ಬಣ್ಣ ಕಟ್ಟುತ್ತಾರೆ, ದಯವಿಟ್ಟು ನಂಬಬೇಡಿ ಎಂದು ರಾಕಿಂಗ್ ಸ್ಟಾರ್ ಮನವಿ ಮಾಡಿಕೊಂಡರು.

    ಬಡವರಿಗೆ ಉಪಯೋಗ ಆಗುತ್ತೆ ಎಂದು ಹತ್ತು ಎಕರೆ ಜಾಗ ತಗೊಂಡೆ. ಯಾರಿಗಾದ್ರು ಬೇಕಾ..? ಸರ್ಕಾರಿ ಶಾಲೆ, ಜನರ ಉಪಯೋಗಕ್ಕೆ ಕೇಳಿದ್ರೆ ನಾನೇ ಬಿಟ್ಟು ಕೊಡ್ತೇನೆ. ಆಸ್ತಿ, ಜಮೀನು ದೊಡ್ಡ ವಿಷಯವಲ್ಲ. ಅವರು ಹೇಳಿದ್ದೆಲ್ಲ ಸತ್ಯ ಅನ್ಕೊಂಡ್ರೆ ಹೇಗೆ ಎಂದು ಯಶ್ ಪ್ರಶ್ನಿಸಿದರು.

    ಇತ್ತ ಯಶ್ ಬರುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಠಾಣೆ ಮುಂದೆ ಅಭಿಮಾನಿಗಳು ಮುಗಿಬಿದ್ದರು. ಹೀಗಾಗಿ ಪೊಲೀಸ್ ಠಾಣೆಯ ಮುಂಬಾಗಿಲ ಗೇಟ್ ಹಾಕಿ ಅಭಿಮಾನಿಗಳನ್ನು ಪೊಲೀಸರು ತಡೆದರು. ಕೆಲವರು ರೈತ ವಿರೋಧಿ ಎಂದು ಯಶ್‍ಗೆ ಧಿಕ್ಕಾರ ಕೂಗಿದರೆ. ಮತ್ತೆ ಕೆಲವರು ಯಶ್‍ಗೆ ಜೈಕಾರ ಕೂಗಿದರು.

  • ಯಶ್, ಸುದೀಪ್ ಭೇಟಿಯಾದ ಜಮೀರ್ ಅಹ್ಮದ್

    ಯಶ್, ಸುದೀಪ್ ಭೇಟಿಯಾದ ಜಮೀರ್ ಅಹ್ಮದ್

    ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಇಂದು ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

    https://twitter.com/BZZameerAhmed/status/1349628440820019200

    ಈ ಕುರಿತು ಜಮೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಯಶ್ ಹಾಗೂ ಸುದೀಪ್ ಭೇಟಿಯಾದ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.

    https://twitter.com/BZZameerAhmed/status/1349641284080857088

    ಕೆಲವೇ ದಿನಗಳಲ್ಲಿ ಜಮೀರ್ ಪುತ್ರಿ ವಿವಾಹ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ಜಮೀರ್ ಈಗಾಗಲೇ ಗಂಯರಿಗೆ ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರವನ್ನು ಹಂಚುತ್ತಿದ್ದಾರೆ. ಅದೇ ರೀತಿ ಇಂದು ರಾಕಿಬಾಯ್ ಹಾಗೂ ಸುದೀಪ್ ಅವರ ನಿವಾಸಕ್ಕೆ ತೆರಳಿ ಆಹ್ವಾನಿಸಿದ್ದಾರೆ. ಇಂದು ನಾನು ನನ್ನ ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ಯಶ್ ಹಾಗೂ ಸುದೀಪ್ ಮನೆಗೆ ತೆರಳಿರುವುದಾಗಿ ಟ್ವಿಟ್ಟರ್ ಬರೆದುಕೊಂಡಿದ್ದಾರೆ.

    https://twitter.com/BZZameerAhmed/status/1349619694551105543

    ಇದೇ ವೇಳೆ ಜಮೀರ್ ಅವರಿಗೆ ನಟ ಜನಬ್ ಝೈದ್ ಜಮೀರ್ ಖಾನ್ ಸಾಥ್ ನೀಡಿದರು. ಇದಕ್ಕೂ ಮೊದಲು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ರಾಘವೇಂದ್ರ ರಾಜ್ ಕುಮಾರ್ ಅವರನ್ನು ಕೂಡ ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದರು.

    https://twitter.com/BZZameerAhmed/status/1349609486185598979

  • ರಾಕಿಂಗ್ ಸ್ಟಾರ್ ಯಶ್‍ಗೆ ನೋಟಿಸ್ – ಸುಧಾಕರ್ ಸ್ಪಷ್ಟನೆ

    ರಾಕಿಂಗ್ ಸ್ಟಾರ್ ಯಶ್‍ಗೆ ನೋಟಿಸ್ – ಸುಧಾಕರ್ ಸ್ಪಷ್ಟನೆ

    ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

    ಕೆಜಿಎಫ್ -2 ಟೀಸರ್ ಹಾಗೂ ಪೋಸ್ಟರ್ ನಲ್ಲಿ ಯಶ್ ಸಿಗರೇಟು ಸೇದುವ ದೃಶ್ಯಾವಳಿ ಪ್ರಸಾರ ಮಾಡಿರುವುದರಿಂದ ಇಲಾಖೆ ಈ ನೋಟಿಸ್ ನೀಡಿದೆ.

    ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಡಾ. ಸುಧಾಕರ್, ನಟ ಯಶ್ ಗೆ ನೋಟಿಸ್ ಅಲ್ಲ ಮನವಿ ಅಷ್ಟೇ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮನವಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬರೀ ಯಶ್ ಗೆ ಮಾತ್ರ ಅಲ್ಲ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಸಾವಿರಾರು ಅಭಿಮಾನಿಗಳು ನಿಮ್ಮನ್ನು ಫಾಲೋ ಮಾಡುತ್ತಾರೆ. ಹಾಗಿರುವಾಗ ಸಿಗರೇಟ್ ಸೇದುವುದನ್ನ ಎಲ್ಲಾ ತೋರಿಸಬಾರದು. ಏಕೆಂದರ್ ಕ್ಯಾನ್ಸರ್ ಪೀಡಿತರು ಜಾಸ್ತಿ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನೆಲ್ಲ ತೋರಿಸಬಾರದು, ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಯೂಟ್ಯೂಬ್ ನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಸಿನಿಮಾದ ಟೀಸರ್ ಗೆ ಎಲ್ಲಾ ಕಡೆಯಿಂದಲೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಈ ಮಧ್ಯೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಶ್ ಗೆ ನೋಟಿಸ್ ಕೊಟ್ಟಿದೆ.

    ಟೀಸರ್ ನಲ್ಲಿ ಯಶ್ ಸಿಗರೇಟ್ ಹಚ್ಚುವ ದೃಶ್ಯವಿದ್ದು, ಇದಕ್ಕೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘಟನೆಯಾಗಿದೆ. ಹೀಗಾಗಿ ಸಿಗರೇಟ್ ಸೇದುವ ದೃಶ್ಯವನ್ನು ತೆಗೆದುಹಾಕುವಂತೆ ಇಲಾಖೆ ನೋಟಿಸ್ ನಲ್ಲಿ ತಿಳಿಸಿದೆ.

  • ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್‍ಗೆ ಮುಹೂರ್ತ ಫಿಕ್ಸ್

    ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್‍ಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್ ಜನವರಿ 8, 2021ರಂದು ಬೆಳಗ್ಗೆ 10.18ಕ್ಕೆ ಬಿಡುಗಡೆಯಾಗಲಿದೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ ಮೊದಲ ಭಾಗ ತೆರೆಕಂಡು ಇಂದಿಗೆ 2 ವರ್ಷ. ಆದ್ರೆ ಮೂರು ವರ್ಷವಾದ್ರು ಕಥೆಯ ತಾಜಾತನ ಅಭಿಮಾನಿಗಳ ಕಣ್ಮುಂದೆ ಇನ್ನು ಹಾಗೇ ಇದೆ. ಇನ್ನೂ ಎರಡನೇ ಭಾಗಕ್ಕಾಗಿ ಶಬರಿಯಂತೆ ಕಾಯುತ್ತಿರೋ ಅಭಿಮಾನಿಗಳಿಗೆ ಕೆಜಿಎಫ್ ಸೂತ್ರದಾರ ಪ್ರಶಾಂತ್ ನೀಲ್ ಸಿಹಿ ಸುದ್ದಿ ನೀಡಿದ್ದಾರೆ.

    ಭಾನುವಾರ ಕೆಜಿಎಫ್ ಚಾಪ್ಟರ್ -2 ಚಿತ್ರೀಕರಣ ಮುಗಿದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಧಗಧಗಿಸುತ್ತಿವೆ. ಕ್ಲೈಮ್ಯಾಕ್ಸ್ ನಲ್ಲಿ ಅಧೀರ ಮತ್ತು ರಾಕಿಯ ಕಾಳಗ ಇರಲಿದೆ ಎಂಬುದನ್ನ ಪ್ರಶಾಂತ್ ನೀಲ್ ಟೀಂ ಕನ್ಫರ್ಮ್ ಮಾಡಿದೆ. ಕೆಜಿಎಫ್ ಕೊನೆ ಶೆಡ್ಯೂಲ್ ಮುಗಿಸಿದ ಟೀಂ ಜೊತೆಯಾಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನ ಡಿಓಪಿ ಭುವನ್ ಗೌಡ ಶೇರ್ ಮಾಡ್ಕೊಂಡಿದ್ರು.

    ಕೆಲ ದಿನಗಳ ಹಿಂದೆ ಅಧೀರ ಮತ್ತು ರಾಕಿಯ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದರು. ಇತ್ತೀಚೆಗೆ ಗುಣಮುಖರಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂಜಯ್ ದತ್ ಡೂಪ್ ಸಹ ಬಳಸದೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂದು ವರದಿ ಆಗಿತ್ತು.

    ಅಂದುಕೊಂಡಂತೆ ಆಗಿದ್ರೆ ಈಗಾಗಲೇ ಕೆಜಿಎಫ್ ಇಡೀ ದೇಶದಾದ್ಯಂತ ಅಬ್ಬರಿಸುತ್ತಿತ್ತು. ಕೊರೊನಾದಿಂದ ಶೂಟಿಂಗ್ ಸ್ಥಗಿತಗೊಂಡ ಹಿನ್ನೆಲೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಾ ಬಂದಿತ್ತು. ಇನ್ನು ಅಭಿಮಾನಿಗಳು ಸಿನಿಮಾ ಟೀಸರ್ ಬಿಡುಗಡೆ ಮಾಡಿ ಅಂತಾ ಟ್ವಿಟ್ಟರ್ ನಲ್ಲಿ ಒತ್ತಾಯಿಸಿದ್ದರು. ಇದೀಗ ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷಕ್ಕೆ ಚಿತ್ರತಂಡದಿಂದ ಮಹತ್ವದ ಘೋಷಣೆ ಹೊರ ಬಿದ್ದಿದೆ.

    https://twitter.com/prashanth_neel/status/1340879166258855936

  • ವಿಲನ್ ಫಾರ್ ಎವೆರ್ – ರಾಕಿ ಭಾಯ್ ಖಡಕ್ ಲುಕ್ ಔಟ್

    ವಿಲನ್ ಫಾರ್ ಎವೆರ್ – ರಾಕಿ ಭಾಯ್ ಖಡಕ್ ಲುಕ್ ಔಟ್

    ಬೆಂಗಳೂರು: ಕೆಜಿಎಫ್ ಚಾಪ್ಟರ್-2 ಅಂಗಳದಿಂದ ಬರೋ ಹೊಸ ಸುದ್ದಿಗಾಗಿ ರಾಕಿಂಗ್ ಸ್ಟಾರ್ ಬಳಗ ತುದಿಗಾಲಿನಲ್ಲಿ ನಿಂತು ವೇಟ್ ಮಾಡುತ್ತಿರುತ್ತೆ. ಬೆಳಗ್ಗೆ ತಿಂಡಿ ಜೊತೆ ಕೆಜಿಎಫ್ ವಿಷಯ ತಿಳಿದುಕೊಂಡಿದ್ದ ರಾಕಿ ಫ್ಯಾನ್ಸ್ ಗೆ ರಾತ್ರಿ ವೇಳೆಗೆ ಮತ್ತೊಂದು ಗನ್ ಹಿಡಿದ ಗಜಕೇಸರಿಯ ದರ್ಶನವಾಗಿದೆ.

    ಹೌದು, ಡಿಓಪಿ ಭುವನ್ ಗೌಡ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ರಾಕಿ ಬಾಯ್ ಜಬರ್ ದಸ್ತ್ ಫೋಟೋವನ್ನ ರಾಕಿಂಗ್ ಸ್ಟಾರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಜೊತೆಗೆ ಖಡಕ್ ಲೈನ್ಸ್ ಬರೆದುಕೊಳ್ಳುವ ಮೂಲಕ ವಿಲನ್ ಫಾರ್ ಎವೆರ್ ಎಂದಿದ್ದಾರೆ.

    ಭಾರೀ ನಿರೀಕ್ಷೆ ಮೂಡಿಸಿರುವ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಈ ನಡುವೆ ಇಂದು ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಕುರಿತ ವಿಚಾರವೊಂದನ್ನು ಹಂಚಿಕೊಂಡಿದ್ದರು.

    ಸಿನಿಮಾದ ಕುರಿತು ಟ್ವಿಟ್ ಮಾಡಿದ್ದ ಪ್ರಶಾಂತ್ ನೀಲ್, ರಾಕಿ – ಅಧಿರಾ ಎಂದು ಬರೆದು ನಡುವೆ ಜಗಳ ಸಿಂಬಲ್ ಹಾಕಿದ್ದಾರೆ. ಅಂದರೆ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಹಾಗೂ ಸಂಜಯ್ ದತ್ ನಡುವೆ ಕದನ ನಡೆಯಲಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಖ್ಯಾತ ಆ್ಯಕ್ಷನ್ ಡೈರೆಕ್ಟರ್‍ಗಳಾದ ಅನ್ಬರಿವ್ ಬ್ರದರ್ಸ್ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿದ್ದು, ಈ ಮೂಲಕ ರಾಕಿ ಭಾಯ್ ಹಾಗೂ ಅಧೀರನ ಯದ್ಧಕ್ಕೆ ಫೈಟ್ ಮಾಸ್ಟರ್ಸ್ ರೆಡಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದರು.

  • ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಕೆಜಿಎಫ್-2 ಶೂಟಿಂಗ್‍ಗೆ ‘ಅಧೀರ’ ರೆಡಿ

    ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಕೆಜಿಎಫ್-2 ಶೂಟಿಂಗ್‍ಗೆ ‘ಅಧೀರ’ ರೆಡಿ

    – ಹೈದರಾಬಾದ್‍ನಲ್ಲಿ ರಾಖಿ ಹವಾ

    ಮುಂಬೈ: ಕ್ಯಾನ್ಸರ್ ಚಿಕಿತ್ಸೆಯ ನಂತರ ಕೆಜಿಎಫ್-2ಗಾಗಿ ನಟ ಸಂಜಯ್ ದತ್ ಅವರು ತಯಾರಿ ಮಾಡಿಕೊಳ್ಳುತ್ತಿರುವ ಸಂದೇಶ ನೀಡಿದ್ದಾರೆ.

    ಬಾಲಿವುಡ್ ನಟ ಹಾಗೂ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದೇ ಇದೆ. ಇದಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ಈ ಸಂಬಂಧ ವಿದೇಶಕ್ಕೂ ಹೋಗಿದ್ದರು. ಹೀಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ವಾಪಸ್ ಆಗಿರುವ ಅಧೀರ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಸ್ಟೈಲಿಶ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಸಂಜಯ್ ದತ್ ಅವರು ಮೂರು ಫೋಟೋಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧೀರನಿಗಾಗಿ ತಯಾರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನವೆಂಬರ್ ನಲ್ಲಿ ಆರಂಭವಾಗಲಿರುವ ಕೆಜಿಎಫ್-2 ಅಧೀರನ ಶೂಟಿಂಗ್ ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಸುದ್ದಿ ತಿಳಿದ ಅಧೀರನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ಗೂ ಮುನ್ನ ಸಂಜಯ್ ದತ್ ಅವರು ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಂತರ ಅವರಿಗೆ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಆಸ್ಪತ್ರೆ ಸೇರಿದ್ದರು. ಇದರಿಂದ ಮತ್ತೆ ಅವರು ಬಂದು ಶೂಟಿಂಗ್‍ಗೆ ಸೇರಿಕೊಳ್ಳುತ್ತಾರಾ ಎಂಬ ಅನುಮಾನಗಳು ಮೂಡಿದ್ದವು. ಆದರೆ ಈಗ ಅವರು ಮುಂಬೈಗೆ ವಾಪಸ್ ಬಂದಿದ್ದು, ಸಲೂನ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.

    ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ನವೆಂಬರ್ ನಲ್ಲಿ ಕೆಜಿಎಫ್-2 ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ವರ್ಕೌಟ್ ಸಹ ಮಾಡುತ್ತಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ. ಸದ್ಯ ಮಂಗಳೂರಿನಲ್ಲಿ ಕೆಜಿಎಫ್-2 ಸಿನಿಮಾದ ಶೂಟಿಂಗ್ ಮುಗಿದಿದೆ. ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಭಾಗದ ಚಿತ್ರೀಕರಣ ಮಂಗಳೂರಿನ ಕಡಲ ತೀರದಲ್ಲಿ ನಡೆದಿತ್ತು.

    ಹೈದರಾಬಾದಿನಲ್ಲಿ ರಾಖಿ ಹವಾ
    ಇದರ ಮಧ್ಯದಲ್ಲಿ ಮಂಗಳೂರಿನಲ್ಲಿ ನಡೆದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅವರು, ಮುಂದಿನ ಚಿತ್ರೀಕರಣಕ್ಕೆ ಹೈದರಾಬಾದಿಗೆ ಹಾರಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜಾಕೆಟ್ ಧರಿಸಿ, ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟು ರಾಖಿ ಭಾಯ್ ನಡೆದುಕೊಂಡು ಹೋಗುತ್ತಿರುವ ಖಡಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ರಾಖಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.