Tag: Rock Climbing

  • ಆನೆಗೊಂದಿ ಉತ್ಸವದಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ

    ಆನೆಗೊಂದಿ ಉತ್ಸವದಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ

    ಕೊಪ್ಪಳ: ಆನೆಗೊಂದಿ ಉತ್ಸವ 2020ರ ನಿಮಿತ್ತ ನಫಾಸನ ಸಂಸ್ಥೆ ವತಿಯಿಂದ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ ನಡೆಯಿತು.

    ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು ನಡೆದ ರಾಕ್ ಕ್ಲೈಂಬಿಂಗ್ ಪ್ರದರ್ಶನಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಋಷಿಮುಖ ಪರ್ವದಲ್ಲಿ ಚಾಲನೆ ನೀಡಿದರು. ಆನೆಗೊಂದಿಯ ಶ್ರೀ ಕೇಷ್ಣದೇವರಾಯ ವೇದಿಕೆ ರಸ್ತೆಯ ಪಕ್ಕದಲ್ಲಿ ನಡೆದ ರಾಕ್ ಕ್ಲೈಂಬಿಂಗ್ ಪ್ರದರ್ಶನದಲ್ಲಿ ರ‍್ಯಾಪ್ಲಿಂಗ್, ಜಿಫ್‍ಲೈನ್ ಕೃತಕ ಗೊಡೆ, ಆರ್ಚರಿ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆದವು.

    ಈ ಪ್ರದರ್ಶನದಲ್ಲಿ ಭಾಗವಹಿಸಲು ಮಕ್ಕಳು ಸ್ವಇಚ್ಛೆಯಿಂದ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು ವಿಶೇಷವಾಗಿತ್ತು. ನಫಾಸನ ಸಂಸ್ಥೆಯ ಸಹಾಯಕ ನಿರ್ದೇಶಕ ವಿರೇಶ್.ಎಂ ಹಾಗೂ ಅವರ ಸಂಸ್ಥೆಯ ಸಾಹಸಿ ರಾಕ್ ಕ್ಲೈಂಬಿಂಗ್ ಪ್ರದರ್ಶನವನ್ನು ನಡೆಸಿಕೊಟ್ಟಿತು.

  • ಏಕಲವ್ಯನಂತೆ ರಾಕ್ ಕ್ಲೈಂಬಿಂಗ್ ಕಲಿತ ಯುವಕನಿಗೆ ಬೇಕಿದೆ ಸಹಾಯ

    ಏಕಲವ್ಯನಂತೆ ರಾಕ್ ಕ್ಲೈಂಬಿಂಗ್ ಕಲಿತ ಯುವಕನಿಗೆ ಬೇಕಿದೆ ಸಹಾಯ

    ಹುಬ್ಬಳ್ಳಿ: ಕೋತಿಯಂತೆ ಜಿಗಿಯುತ್ತಾ ಕೋಟೆ ಗೋಡೆಯನ್ನು ಸರಸರನೇ ಹತ್ತುವ ಭಾರತದ ಸ್ಪೈಡರ್ ಮ್ಯಾನ್ ಖ್ಯಾತಿಯ ಚಿತ್ರದುರ್ಗದ ಕೋತಿ ರಾಜ ಹಾದಿಯಲ್ಲೇ ಹುಬ್ಬಳ್ಳಿ ಯುವಕ ಸಾಗಿದ್ದು, ಜೀವದ ಹಂಗು ತೊರೆದು ಬೆಟ್ಟ, ಕೋಟೆಯನ್ನು ಲೀಲಾಜಾಲವಾಗಿ ಹತ್ತುತ್ತ ನಿಬ್ಬೆರಗಾಗಿಸುತ್ತಿದ್ದಾರೆ.

    ಹುಬ್ಬಳ್ಳಿ, ಧಾರವಾಡ ಅವಳಿ ನಗರದ 26 ವರ್ಷದ ಬಸವರಾಜ್ ಶಿವಪ್ಪ ಕಾಳಿ ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಕೋಟದ ನಿವಾಸಿ. ಚಿಕ್ಕವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಬಸವರಾಜ್ ಬಡತನದಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಕೋಟೆ ನಾಡಿನ ಕೋತಿ ರಾಜ್ ಸಾಹಸದ ದೃಶ್ಯಗಳನ್ನು ನೋಡುತ್ತಾ ಈ ಸಾಹಸ ಕ್ರೀಡೆಯನ್ನು ಕಲಿತು ಏಕಲವ್ಯನಂತೆ ವಾಲ್ ಕ್ಲೈಂಬಿಂಗ್, ರಾಕ್ ಕ್ಲೈಂಬಿಂಗ್‍ನಲ್ಲಿ ಪರಿಣಿತನಾಗಿದ್ದಾರೆ.

    ಬಸವರಾಜ್ ಶಿವಪ್ಪ ಕಾಳಿಯ ಸಾಹಸಗಳನ್ನು ಕಂಡು ಸೇನೆ ಕೂಡ ಸೈನಿಕರಿಗೆ ತರಬೇತಿ ನೀಡಲು ಕರೆಸಿಕೊಂಡಿದ್ದು, ತಮಿಳುನಾಡಿನಲ್ಲಿ ಪ್ರವಾಹ ಬಂದಾಗಲೂ ಅಲ್ಲಿನ ಸರ್ಕಾರ ಇವರ ಸಹಾಯ ಪಡೆದಿದೆ. ಪ್ರವಾಹದಲ್ಲಿ ಜೀವದ ಹಂಗು ತೊರೆದು ಅನೇಕರನ್ನು ರಕ್ಷಣೆ ಮಾಡಿದ್ದಾರೆ ಬಸವರಾಜ್.

    ಆದರೆ ಕಡುಬಡತನಲ್ಲಿ ಜೀವನ ಸಾಗಿಸುತ್ತಿರುವ ಬಸವರಾಜ್‍ಗೆ ಸಾಹಸಮಯ ಕ್ರೀಡೆಯಲ್ಲಿ ಸಾಧನೆ ಮಾಡುವ ಹಂಬಲವಿದೆ. ಆದರೆ ತರಬೇತಿ ಪಡೆಯಲು ಬೇಕಾಗಿರುವ ಸಾಧನ ಸಲಕರಣೆಗಳು ಇವರ ಬಳಿ ಇಲ್ಲ. ಸದ್ಯ ಬೆಟ್ಟ ಹತ್ತಲು ಅನ್ಯರು ಉಪಯೋಗಿಸಿ ಬಿಟ್ಟಿರುವ ಶೂಗಳನ್ನ ಉಪಯೋಗಿಸಿ ತರಬೇತಿ ಪಡೆಯುತ್ತಿದ್ದಾರೆ. ಬಡತನ ಸಾಹಸಮಯ ಕ್ರೀಡಾ ಸಾಧನೆಗೆ ಅಡ್ಡಿಯಾಗಿದ್ದು, ದಾನಿಗಳು ತನ್ನ ಸಾಧನೆಗೆ ಬೆಂಬಲ ನೀಡಿ ಬೆಳಕು ಕಾರ್ಯಕ್ರಮದ ಮೂಲಕ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=xJejFQQE2Cg