Tag: robinhood film

  • ನಿತಿನ್‌ಗೆ ಜೊತೆಯಾಗಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಶ್ರೀಲೀಲಾ

    ನಿತಿನ್‌ಗೆ ಜೊತೆಯಾಗಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಶ್ರೀಲೀಲಾ

    ಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ (Tollywood) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ‘ರಾಬಿನ್‌ಹುಡ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ಮಾ.30ರಂದು ರಿಲೀಸ್‌ ಆಗಲಿದೆ ಸಲ್ಮಾನ್‌ ಖಾನ್‌ ನಟನೆಯ ‘ಸಿಕಂದರ್‌’ ಸಿನಿಮಾ

    ಇತ್ತೀಚೆಗೆ ಶ್ರೀಲೀಲಾ ನಟಿಸಿರುವ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ.  ಹಾಗಂತ ಅವರಿಗೆ ಅವಕಾಶಗಳ ಕೊರತೆಯಿಲ್ಲ. ‘ಪುಷ್ಪ 2’ನಲ್ಲಿ (Pushpa 2) ಅಲ್ಲು ಅರ್ಜುನ್ (Allu Arjun) ಜೊತೆ ಶ್ರೀಲೀಲಾ ಸೊಂಟ ಬಳುಕಿಸಿದ್ದು, ಪಡ್ಡೆಹುಡುಗರಿಗೆ ಕಿಕ್ ಕೊಟ್ಟಿತ್ತು. ಈಗ ‘ರಾಬಿನ್‌ಹುಡ್’ ಜೊತೆ ನಟಿ ಬರುತ್ತಿದ್ದಾರೆ.

    ‘ರಾಬಿನ್‌ಹುಡ್’ ‘(Robinhood) ಸಿನಿಮಾದಲ್ಲಿ ನಿತಿನ್ (Nithin) ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. 2ನೇ ಬಾರಿ ನಿತಿನ್‌ಗೆ ಅವರು ಜೋಡಿಯಾಗಿದ್ದಾರೆ. ಇದೇ ಮಾ.28ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾ ಹಿಟ್ ಆದರೆ ಮತ್ತಷ್ಟು ಅವಕಾಶಗಳು ನಟಿಯನ್ನು ಅರಸಿ ಬರಲಿದೆ. ಈ ಚಿತ್ರದ ಮೂಲಕ ನಿತಿನ್ ಜೊತೆ ಮತ್ತೊಮ್ಮೆ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಈ ಹಿಂದೆ ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಸಿನಿಮಾದಲ್ಲಿ ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ‘ರಾಬಿನ್‌ಹುಡ್’ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ‘ಪುಷ್ಪ 2’ ನಿರ್ಮಿಸಿದ್ದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. 2ನೇ ಬಾರಿಯಾದರೂ ನಿತಿನ್‌ ಮತ್ತು ಶ್ರೀಲೀಲಾ ಜೋಡಿ ಕಮಾಲ್‌ ಮಾಡುತ್ತಾ? ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಶಿವಕಾರ್ತಿಕೇಯನ್ ಜೊತೆ ತಮಿಳು ಸಿನಿಮಾ, ಪವನ್ ಕಲ್ಯಾಣ್ ಜೊತೆ ತೆಲುಗು ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆ ಬಾಲಿವುಡ್ ಚಿತ್ರ, ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆಯೊಂದು ಚಿತ್ರ ಸೇರಿದಂತೆ ಹಲವಾರು ಅವಕಾಶಗಳು ನಟಿಯ ಕೈಯಲ್ಲಿವೆ.

  • ‘ಪುಷ್ಪ 2’ ಚಿತ್ರತಂಡದಿಂದ ಬಿಗ್ ಅನೌನ್ಸ್‌ಮೆಂಟ್- ಶ್ರೀಲೀಲಾ ಫ್ಯಾನ್ಸ್‌ಗೆ ಶಾಕ್

    ‘ಪುಷ್ಪ 2’ ಚಿತ್ರತಂಡದಿಂದ ಬಿಗ್ ಅನೌನ್ಸ್‌ಮೆಂಟ್- ಶ್ರೀಲೀಲಾ ಫ್ಯಾನ್ಸ್‌ಗೆ ಶಾಕ್

    ನ್ನಡತಿ, ‘ಕಿಸ್ಸಿಕ್’ ಬೆಡಗಿ ಶ್ರೀಲೀಲಾ (Sreeleela) ಫ್ಯಾನ್ಸ್‌ಗೆ ಇದು ಕಹಿ ಸುದ್ದಿ. ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಚಿತ್ರ (Robinhood Film) ನೋಡಲು ಕಾಯುತ್ತಿದ್ದವರಿಗೆ ಈ ವಿಚಾರ ಬೇಸರ ಮೂಡಿಸಿದೆ. ಡಿ.25ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮತ್ತೆ ಮುಂದೂಡಲಾಗಿದೆ. ಇದನ್ನೂ ಓದಿ:BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್

    ಶ್ರೀಲೀಲಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟು 4 ವರ್ಷಗಳಾಗಿವೆ. ಇವರ ನಟನೆ ಮತ್ತು ಡ್ಯಾನ್ಸ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅದರಲ್ಲೂ ಇತ್ತೀಚಿನ ‘ಪುಷ್ಪ 2’ ಸಿನಿಮಾದಲ್ಲಿನ ಅವರ ‘ಕಿಸ್ಸಿಕ್’ ಡ್ಯಾನ್ಸ್ ನೋಡಿದ್ಮೇಲೆ ನಟಿಯ ಮೇಲಿನ ಕ್ರೇಜ್ ಹೆಚ್ಚಾಗಿದೆ. ಹೀಗಿರುವಾಗ ಬಹುನಿರೀಕ್ಷಿತ ‘ರಾಬಿನ್‌ಹುಡ್’ ಚಿತ್ರ ಮುಂದಕ್ಕೆ ಹೋಗಿರುವ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

     

    View this post on Instagram

     

    A post shared by Mythri Movie Makers (@mythriofficial)

    ಕಾರಣಾಂತರಗಳಿಂದ ಡಿ.25ರಂದು ‘ರಾಬಿನ್‌ಹುಡ್’ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಸದ್ಯದಲ್ಲೇ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ. ನಿಮ್ಮ ಕಾಯುವಿಕೆಯು ಮುಂದೆ ನಮ್ಮ ಸಿನಿಮಾ ಬೇಸರ ಮೂಡಿಸಲ್ಲ ಎಂದು ‘ಪುಷ್ಪ 2’ (Pushpa 2) ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತಿಳಿಸಿದೆ.

    ಅಂದಹಾಗೆ, ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ‘ರಾಬಿನ್‌ಹುಡ್’ ಚಿತ್ರದ ಮೂಲಕ 2ನೇ ಬಾರಿ ಜೋಡಿಯಾಗಿದ್ದಾರೆ. ಈ ಚಿತ್ರದ ಮೂಲಕ ನಟಿಗೆ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.

  • ನಿತಿನ್, ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಟೀಸರ್‌ ಔಟ್-‌ ರಿಲೀಸ್‌ ಡೇಟ್‌ ಅನೌನ್ಸ್

    ನಿತಿನ್, ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಟೀಸರ್‌ ಔಟ್-‌ ರಿಲೀಸ್‌ ಡೇಟ್‌ ಅನೌನ್ಸ್

    ನ್ನಡದ ಭರಾಟೆ ಬ್ಯೂಟಿ ಶ್ರೀಲೀಲಾ (Sreeleela) ಮತ್ತು ನಿತಿನ್ ನಟನೆಯ ‘ರಾಬಿನ್‌ಹುಡ್‌’ (Robinhood) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ‘ರಾಬಿನ್‌ಹುಡ್’ ಸಿನಿಮಾದ ಹೊಸ ಬಿಡುಗಡೆ ಚಿತ್ರತಂಡ ತಿಳಿಸಿದೆ. ಮತ್ತೆ ರಿಲೀಸ್‌ ಡೇಟ್‌ ಅನ್ನು ಚಿತ್ರತಂಡ ಮುಂದಕ್ಕೆ ಹಾಕಿದೆ. ಇದನ್ನೂ ಓದಿ:BBK 11: ಧರ್ಮ ಜೊತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ ಐಶ್ವರ್ಯಾ

    ‘ರಾಬಿನ್‌ಹುಡ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಿತಿನ್ ನಟನೆ, ಶ್ರೀಲೀಲಾ (Sreeleela) ಗ್ಲ್ಯಾಮರ್ ನೋಡುಗರಿಗೆ ಕಿಕ್ ಕೊಟ್ಟಿದೆ. 1:34 ಸೆಕೆಂಡಿನ ಟೀಸರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷದ ಅಂತ್ಯ ಡಿ.25ಕ್ಕೆ ಶ್ರೀಲೀಲಾ ನಟನೆಯ ಈ ಚಿತ್ರ ರಿಲೀಸ್ ಆಗಲಿದೆ. ಈ ಹಿಂದೆ ಡಿ.20ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿತ್ತು. ಕಾರಣಾಂತರಗಳಿಂದ ಇನ್ನೂ 5 ದಿನ ಮುಂದಕ್ಕೆ ರಿಲೀಸ್ ದಿನಾಂಕವನ್ನು ಘೋಷಿಸಿದೆ ಚಿತ್ರತಂಡ.

     

    View this post on Instagram

     

    A post shared by Mythri Movie Makers (@mythriofficial)

    ಈ ಹಿಂದೆ ಎಕ್ಸ್ಟಾಆರ್ಡಿನರಿ ಸಿನಿಮಾದಲ್ಲಿ ನಿತಿನ್, ಶ್ರೀಲೀಲಾ ಜೊತೆಯಾಗಿ ನಟಿಸಿದರು. `ರಾಬಿನ್‌ಹುಡ್’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ರಶ್ಮಿಕಾ ಕೈಬಿಟ್ಟ ಚಿತ್ರಕ್ಕೆ ನಾಯಕಿಯಾದ ಶ್ರೀಲೀಲಾ

    ರಶ್ಮಿಕಾ ಕೈಬಿಟ್ಟ ಚಿತ್ರಕ್ಕೆ ನಾಯಕಿಯಾದ ಶ್ರೀಲೀಲಾ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಬೇಕಿದ್ದ ಚಿತ್ರಕ್ಕೆ ಕನ್ನಡದ ‘ಕಿಸ್’ ನಟಿ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಕೈಬಿಟ್ಟ ಚಿತ್ರಕ್ಕೆ ಶ್ರೀಲೀಲಾ (Sreeleela) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ರಾಯಲ್ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಶ್ರೀಲೀಲಾ ಹುಟ್ಟುಹಬ್ಬದ (ಜೂನ್.14) ಸಂಭ್ರಮದಲ್ಲಿದ್ದಾರೆ. ನಟಿಯ ಜನ್ಮದಿನದಂದೇ ‘ರಾಬಿನ್ ಹುಡ್’ ಚಿತ್ರಕ್ಕೆ ಕಿಸ್ ನಟಿ ಹೀರೋಯಿನ್ ಎಂದು ಸ್ಪೆಷಲ್ ಟೀಸರ್ ರಿಲೀಸ್ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ:ಮಾಲಿವುಡ್ ಸ್ಟಾರ್ ಮಮ್ಮುಟ್ಟಿ ಸಿನಿಮಾದಲ್ಲಿ ಸಮಂತಾ

     

    View this post on Instagram

     

    A post shared by Mythri Movie Makers (@mythriofficial)

    ಕೆಂಪು ಬಣ್ಣದ ಉಡುಗೆಯಲ್ಲಿ ಸ್ಟೈಲೀಶ್ ಆಗಿ ವಿಮಾನದಿಂದ ನಟಿ ಇಳಿದು ಬರುತ್ತಿರುವ ಟೀಸರ್ ರಿವೀಲ್ ಮಾಡಿ ನಟಿಗೆ ಚಿತ್ರತಂಡ ಶುಭಕೋರಿದೆ. ಇನ್ನೂ ‘ರಾಬಿನ್ ಹುಡ್’ ಚಿತ್ರದ ಮೂಲಕ ನಿತಿನ್‌ಗೆ 2ನೇ ಬಾರಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.

    ಈ ಹಿಂದೆ ರಶ್ಮಿಕಾ ಮಂದಣ್ಣ ನಾಯಕಿ ಎಂದು ಘೋಷಿಸಿದ್ದರು. ಆದರೆ ಡೇಟ್ಸ್ ಹೊಂದಾಣಿಕೆಯಿಂದ ನಟಿ ಸಿನಿಮಾದಿಂದ ಹೊರಬಂದಿದ್ದರು. ಈಗ ಅದೇ ಚಿತ್ರಕ್ಕೆ ಕನ್ನಡದ ‘ಕಿಸ್’ ನಟಿ ಆಯ್ಕೆಯಾಗಿದ್ದಾರೆ.‌ ಇದನ್ನೂ ಓದಿ:ಝಹೀರ್ ಜೊತೆಗಿನ ಮದುವೆ ನನ್ನ ಆಯ್ಕೆ- ಟ್ರೋಲಿಗರ ಬಾಯಿ ಮುಚ್ಚಿಸಿದ ಸೋನಾಕ್ಷಿ

    ಆ್ಯಕ್ಷನ್ ಕಮ್ ಕಾಮಿಡಿಯಾಗಿರುವ ಈ ಸಿನಿಮಾವನ್ನು ವೆಂಕಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ಡಿಸೆಂಬರ್ 20ರಂದು ಸಿನಿಮಾ ರಿಲೀಸ್ ಆಗುತ್ತಿದೆ.

    ಅಂದಹಾಗೆ, ಸೈಫ್ ಅಲಿ ಖಾನ್ ಪುತ್ರನ ಬಾಲಿವುಡ್ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ರವಿತೇಜ ಹೊಸ ಚಿತ್ರಕ್ಕೆ ನಟಿ ಫೈನಲ್ ಆಗಿದ್ದಾರೆ. ಇತ್ತೀಚೆಗೆ ಮುಹೂರ್ತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿದೆ.

  • ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

    ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

    ನ್ನಡತಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಾಯಕಿಯಾಗಿದ್ದರು. ಇದೀಗ ಅದ್ಯಾಕೋ ಅದೃಷ್ಟ ಕೈ ಕೊಟ್ಟಂತಿದೆ. ನಿತಿನ್ ಸಿನಿಮಾದಿಂದ ಕಿಕ್ ಔಟ್ ಆಗಿದ್ದ ಪ್ರಾಜೆಕ್ಟ್‌ಗೆ ಹಾಟ್ ಬ್ಯೂಟಿ ರಾಶಿ ಖನ್ನಾ (Raashii Khanna) ಎಂಟ್ರಿ ಕೊಟ್ಟಿದ್ದಾರೆ. ನಿತಿನ್‌ ಜೊತೆ ರಾಶಿ ರೊಮ್ಯಾನ್ಸ್‌ ಮಾಡಲಿದ್ದಾರೆ.

    ‘ರಾಬಿನ್ ಹುಡ್’ (Robinhood) ಸಿನಿಮಾದಿಂದ ಶ್ರೀಲೀಲಾರನ್ನು ಕೈಬಿಟ್ಟಿರುವ ವಿಚಾರ ಕೆಲದಿನಗಳಿಂದ ಭಾರೀ ಸುದ್ದಿಯಾಗುತ್ತಿದೆ. ಈ ಚಿತ್ರದಿಂದ ಮೊದಲು ಹೊರಬಂದಿದ್ದು, ರಶ್ಮಿಕಾ ಮಂದಣ್ಣ. ಹಿಂದಿ ಸಿನಿಮಾದಲ್ಲಿ ಬ್ಯುಸಿಯಾದ ಕಾರಣ ನಿತಿನ್ (Actor Nithin) ಚಿತ್ರಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ನಾಯಕಿ ಪಟ್ಟ ಶ್ರೀಲೀಲಾ ಪಾಲಿಗೆ ದಕ್ಕಿದ್ದು. ಕೆಲ ಮನಸ್ತಾಪಗಳಿಂದ ಶ್ರೀಲೀಲಾರನ್ನು ಕೂಡ ಚಿತ್ರತಂಡ ಹೊರಗಿಟ್ಟಿದೆ ಎನ್ನಲಾಗಿದೆ.

    ತೆಲುಗು ಮತ್ತು ತಮಿಳಿನಲ್ಲಿ ಮೋಡಿ ಮಾಡಿರುವ ನಟಿ ರಾಶಿ ಖನ್ನಾ ಇತ್ತೀಚೆಗೆ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ನಟಿಸಿದ್ದರು. ಬಾಲಿವುಡ್‌ನಲ್ಲಿಯೂ ನಟಿಗೆ ಬೇಡಿಕೆಯಿದೆ. ಹಾಗಾಗಿ ನಿತಿನ್‌ಗೆ ಸೂಕ್ತ ನಾಯಕಿ ಎಂದೆನಿಸಿ ರಾಶಿಗೆ ಚಿತ್ರತಂಡ ಮಣೆ ಹಾಕಿದೆ. ಇದನ್ನೂ ಓದಿ:ಮಗನ ಹೆಸರು ರಿವೀಲ್ ಮಾಡಿದ ‘ಕಾರ್ತಿಕೇಯ’ ನಟ ನಿಖಿಲ್

    ಡೈರೆಕ್ಟರ್ ವೆಂಕಿ ಕುಡುಮುಲ ಹೆಣೆದಿರುವ ಕಥೆ ಕೇಳಿ ರಾಶಿ ಖನ್ನಾ ಕೂಡ ಥ್ರಿಲ್ ಆಗಿ ಸಿನಿಮಾ ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾತಂಡವನ್ನು ನಟಿ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಮಾಲಿವುಡ್ ನಟ ಮೋಹನ್‌ಲಾಲ್‌ರನ್ನು ಭೇಟಿಯಾದ ರಿಷಬ್ ಶೆಟ್ಟಿ

    ಒಂದು ಟೈಮ್‌ನಲ್ಲಿ ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ನಟಿ ಶ್ರೀಲೀಲಾ ಈಗ ಸಖತ್ ಸೈಲೆಂಟ್ ಆಗಿದ್ದಾರೆ. ಮತ್ತೆ ಶ್ರೀಲೀಲಾ ಧಮಾಕ ಯಾವಾಗ ಶುರುವಾಗುತ್ತೆ ಎಂದು ಕಾದುನೋಡಬೇಕಿದೆ.