Tag: robin uttappa

  • ಅಕ್ರಮ ಬೆಟ್ಟಿಂಗ್ ಆಪ್ ಕೇಸ್; ಇಡಿ ವಿಚಾರಣೆಗೆ ಹಾಜರಾದ ರಾಬಿನ್ ಉತ್ತಪ್ಪ

    ಅಕ್ರಮ ಬೆಟ್ಟಿಂಗ್ ಆಪ್ ಕೇಸ್; ಇಡಿ ವಿಚಾರಣೆಗೆ ಹಾಜರಾದ ರಾಬಿನ್ ಉತ್ತಪ್ಪ

    ನವದೆಹಲಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣದ ಜಾರಿ ನಿರ್ದೇಶನಾಲಯ (ED) ತನಿಖೆಗೆ ಇಂದು ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa)  ಹಾಜರಾಗಿದ್ದಾರೆ.

    ದೆಹಲಿಯ (Delhi) ಇ.ಡಿ ಕಚೇರಿಗೆ ವಕೀಲರೊಂದಿಗೆ ರಾಬಿನ್ ಉತ್ತಪ್ಪ ಹಾಜರಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    ಇದೇ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಹಾಗೂ ನಟ ಸೋನು ಸೂದ್‌ಗೆ (Sonu Sood) ಸಹ ವಿಚಾರಣೆ ಹಾಜರಾಗುವಂತೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು. ಸೆ.23 ರಂದು ಯುವರಾಜ್ ಸಿಂಗ್ ಹಾಗೂ ಸೆ.34 ರಂದು ನಟ ಸೋನು ಸೂದ್ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಈ ಹಿಂದೆ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ನಟ ಅಂಕುಶ್ ಹಜ್ರಾ, ಕ್ರಿಕೆಟಿಗ ಶಿಖರ್ ಧವನ್, ಸುರೇಶ್ ರೈನಾ ಈ ಪ್ರಕರಣದ ಇ.ಡಿ ತನಿಖೆಯನ್ನು ಎದುರಿಸಿದ್ದರು.

  • ಗಂಡು ಮಗುವಿಗೆ ತಂದೆಯಾದ ರಾಬಿನ್ ಉತ್ತಪ್ಪ

    ಗಂಡು ಮಗುವಿಗೆ ತಂದೆಯಾದ ರಾಬಿನ್ ಉತ್ತಪ್ಪ

    ನವದೆಹಲಿ: ಕ್ರಿಕೆಟರ್ ರಾಬಿನ್ ಉತ್ತಪ್ಪ ಹಾಗೂ ಶೀತಲ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಷಯವನ್ನ ಉತ್ತಪ್ಪ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಮಗು ಹಾಗೂ ಪತ್ನಿ ಜೊತೆಗಿನ ಫೋಟೋ ಅಪ್ಲೋಡ್ ಮಾಡಿದ್ದಾರೆ.

    ನಮ್ಮ ಮಗು ನೈಲಿ ನೋಲನ್ ಉತ್ತಪ್ಪ ಆಗಮಿಸಿದ್ದಾನೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಅಂತ ಉತ್ತಪ್ಪ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ತನ್ನ ಬಹುಕಾಲದ ಪ್ರೇಯಸಿಯಾಗಿದ್ದ ಮಾಜಿ ಟೆನ್ನಿಸ್ ಆಟಗಾರ್ತಿ ಶೀತಲ್ ಅವರನ್ನ ಉತ್ತಪ್ಪ ಕಳೆದ ವರ್ಷ ಮಾರ್ಚ್ ನಲ್ಲಿ ಮದುವೆಯಾಗಿದ್ದರು.

    ಉತ್ತಪ್ಪ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಕಳೆದ 15 ವರ್ಷಗಳಿಂದ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರವಾಗಿ ಆಟವಾಡಿದ್ದ ಉತ್ತಪ್ಪ, ಪ್ರಸ್ತುತ ಸೀಜನ್‍ನಲ್ಲಿ ಸೌರಾಷ್ಟ್ರದ ಪರವಾಗಿ ಆಟವಾಡಲು ಆಯ್ಕೆ ಮಾಡಿಕೊಂಡಿದ್ದಾರೆ.

  • ಅಮ್ಮಾ.. ಪ್ರೀತಿಯಿಂದ ಹೇಳಿಕೊಡಿ- ಪುಟಾಣಿ ವಿಡಿಯೋ ನೋಡಿ ಕೊಹ್ಲಿ, ಶಿಖರ್, ರಾಬಿನ್ ಉತ್ತಪ್ಪ ಹೀಗಂದ್ರು

    ಅಮ್ಮಾ.. ಪ್ರೀತಿಯಿಂದ ಹೇಳಿಕೊಡಿ- ಪುಟಾಣಿ ವಿಡಿಯೋ ನೋಡಿ ಕೊಹ್ಲಿ, ಶಿಖರ್, ರಾಬಿನ್ ಉತ್ತಪ್ಪ ಹೀಗಂದ್ರು

    ಮುಂಬೈ: ಕೆಲದಿನಗಳಿಂದ ಸಾಮಾಜಿಕ ಜಾಲತಾಣ ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ತಾಯಿಯೊಬ್ಬರು ಮಗುವಿಗೆ ಗದರಿಸಿ ಪಾಠ ಹೇಳಿಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

    ಈ ವಿಡಿಯೋವನ್ನು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶೀಖರ್ ಧವನ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವರು ಶೇರ್ ಮಾಡಿದ್ದು, ಶಿಕ್ಷಣದ ನೆಪದಲ್ಲಿ ಮಕ್ಕಳನ್ನು ಶಿಕ್ಷಿಸಬೇಡಿ ಅಂತ ತಾಯಂದಿರಿಗೆ ಸಲಹೆ ನೀಡಿದ್ದಾರೆ.

    ವಿಡಿಯೋದಲ್ಲಿ ಹೋಂ ವರ್ಕ್ ಮಾಡಿಸುವ ಸಂದರ್ಭದಲ್ಲಿ ಮಗು ಅಂಕಿಗಳನ್ನು ತಪ್ಪಾಗಿ ಹೇಳಿದೆ. ಈ ವೇಳೆ ತಾಯಿ ಆಕೆಗೆ ಹೊಡೆದಿದ್ದಾರೆ. ಪರಿಣಾಮ ಮಗು ಬಿಕ್ಕಿ ಬಿಕ್ಕಿ ಅಳುತ್ತಾ ಗದರಬೇಡಿ ನಿಧಾನವಾಗಿ, ಪ್ರೀತಿಯಿಂದ ಒಂದು ಎರಡು ಹೇಳಿಕೊಡಿ ಎಂದು ಬೇಡಿಕೊಳ್ಳುವ ದೃಶ್ಯ ಮನಕಲಕುವಂತಿದೆ. ಆದರೂ ಕರುಣೆ ತೋರದ ಪಾಪಿ ತಾಯಿ ಮಗುವಿನ ಮೇಲೆ ತನ್ನ ಕ್ರೂರ ವರ್ತನೆ ತೋರಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಿದ ಕ್ರಿಕೆಟಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಮಕ್ಕಳಿಗೆ ಪ್ರೀತಿಯಿಂದ ಶಿಕ್ಷಣವನ್ನು ನೀಡಿ. ಒತ್ತಾಯಪೂರ್ವಕವಾಗಿ ಗದರಿಸಿ ಪಾಠ ಹೇಳಿಕೊಡಬೇಡಿ. ಇದರಿಂದ ಏನೂ ಪ್ರಯೋಜನವಾಗಲ್ಲ. ಇದರಿಂದ ಮಕ್ಕಳು ಏನನ್ನೂ ಕಲಿಯಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಶಿಕ್ಷಣ ವಿಚಾರದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಬೆಳೆಸಿ. ಈ ವಿಡಿಯೋ ಮನಕಲಕುವಂತಿದೆ. ಪುಟ್ಟ ಮಕ್ಕಳಿಗೆ ಈ ರೀತಿ ಹೇಳಿಕೊಡದೇ, ಸಹನೆಯಿಂದ ಹೇಳಿಕೊಡಿ ಅಂತ ಕೊಹ್ಲಿ ಸಲಹೆಯಿತ್ತಿದ್ದಾರೆ.

    ಹೆತ್ತವರು ತಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದಿರಿ ಎಂದು ನಾನು ಮನವಿ ಮಾಡುತ್ತೇನೆ. ಪ್ರತಿಯೊಂದು ಮಗುವೂ ಒಂದೊಂದು ಹಂತದಲ್ಲಿ ಕಲಿಯುತ್ತದೆ. ಮಗುವಿಗೆ ಹೊಡೆದು ಕಲಿಸುವುದನ್ನು ನಿಲ್ಲಿಸಿ ಎಂದು ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ.

    ಇದು ಹೃದಯ ವಿದ್ರಾವಕ ಆಗಿದೆ. ಮಕ್ಕಳನ್ನು ಈ ರೀತಿ ಬೆಳೆಸುವುದು ಸರಿಯಲ್ಲ. ಇದು ನಿಲ್ಲಬೇಕು, ಮಕ್ಕಳಲ್ಲಿ ಭಯ ಹುಟ್ಟಿಸುವುದಕ್ಕಿಂತ ಪ್ರೀತಿಯಿಂದ ಬೆಳೆಸಬೇಕು ಎಂದು ರಾಬಿನ್ ಉತ್ತಪ್ಪ ಕೂಡ ಟ್ವೀಟಿಸಿದ್ದಾರೆ.

    https://www.instagram.com/p/BX9ovhvAsbe/