Tag: Robert Vadra

  • ಶಿಕೋಹ್‌ಪುರ ಭೂ ವ್ಯವಹಾರ ಕೇಸ್‌ – ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಚಾರ್ಜ್‌ಶೀಟ್

    ಶಿಕೋಹ್‌ಪುರ ಭೂ ವ್ಯವಹಾರ ಕೇಸ್‌ – ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಚಾರ್ಜ್‌ಶೀಟ್

    ನವದೆಹಲಿ: ಹರಿಯಾಣದ ಶಿಕೋಹ್‌ಪುರದಲ್ಲಿ ನಡೆದ ಭೂ ವ್ಯವಹಾರದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ (Robert Vadra) ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ಚಾರ್ಜ್‌ ಶೀಟ್‌ ಸಲ್ಲಿಸಿದೆ.

    56 ವರ್ಷದ ವಾದ್ರಾ ಅವರನ್ನ ಕ್ರಿಮಿನಲ್ ಪ್ರಕರಣದಲ್ಲಿ ಹೆಸರಿಸಿ ತನಿಖಾ ಸಂಸ್ಥೆಯೊಂದು ಪ್ರಾಸಿಕ್ಯೂಷನ್ ದೂರು ದಾಖಲಿಸಿರುವುದು ಇದೇ ಮೊದಲ ಬಾರಿಯಾಗಿದೆ. ವಾದ್ರಾ ಮತ್ತು ಅವರ ಸಂಬಂಧಿತ ಸಂಸ್ಥೆಗಳಾದ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸಂಬಂಧಿಸಿದ 37.64 ಕೋಟಿ ರೂ. ಮೌಲ್ಯದ 43 ಸ್ಥಿರಾಸ್ತಿಗಳನ್ನು ಇ ಡಿ. ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ದನ್ನೂ ಓದಿ: ಪ್ರಿಯಾಂಕ್‌ ಖರ್ಗೆ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಸಂತೋಷ್ ಲಾಡ್‌ಗೆ ಬಡ್ಡಿ ಸಮೇತ ಚುಕ್ತಾ ಮಾಡ್ತಿನಿ: ಪ್ರತಾಪ್‌ ಸಿಂಹ

    ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ನಿಬಂಧನೆಗಳ ಅಡಿಯಲ್ಲಿ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮುಂದೆ ಆರೋಪಪಟ್ಟಿ ಇದೆ ಎಂದು ಮೂಲಗಳು ತಿಳಿಸಿವೆ. ದನ್ನೂ ಓದಿ: ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಮಾಜಿ ಸಚಿವ ಪಭು ಚೌಹಾಣ್ ಪುತ್ರನ ವಿರುದ್ಧ ದೂರು

    ವಾದ್ರಾ, ಅವರೊಂದಿಗೆ ಸಂಬಂಧ ಹೊಂದಿರುವ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೆಟ್‌ ಲಿಮಿಟೆಡ್ ಸಂಸ್ಥೆ, ಸತ್ಯಾನಂದ್ ಯಾಜಿ ಮತ್ತು ಕೇವಲ್ ಸಿಂಗ್ ವಿರ್ಕ್, ಅವರ ಕಂಪನಿ ಓಂಕಾರೇಶ್ವರ ಪ್ರಾಪರ್ಟೀಸ್ ಪ್ರೈವೆಟ್‌ ಲಿಮಿಟೆಡ್ ಮತ್ತು ಇತರ ಕೆಲವು ಸಂಸ್ಥೆಗಳು ಸೇರಿದಂತೆ ಒಟ್ಟು 11 ಸಂಸ್ಥೆಗಳನ್ನ ಆರೋಪಿಗಳೆಂದು ಹೆಸರಿಸಲಾಗಿದೆ. ದನ್ನೂ ಓದಿ: ಸಂಘದ ಶಾಖೆಗೆ ಕರೆದೊಯ್ದು ಸಂಸ್ಕಾರ ಕಲಿಸಿದ್ರು ನನ್ನಪ್ಪ: ಅಗಲಿದ ತಂದೆ ನೆನೆದು ಶಾಸಕ ಸುನಿಲ್‌ ಕುಮಾರ್‌ ಭಾವುಕ ಪತ್ರ

  • ಮುಸ್ಲಿಮರು ದುರ್ಬಲರಾಗ್ತಿದ್ದಾರೆ ಅಂತ ಉಗ್ರರಿಗೆ ಅನ್ನಿಸಿದೆ – ಪಹಲ್ಗಾಮ್ ದಾಳಿಗೆ ಹಿಂದುತ್ವವೇ ಕಾರಣವಂತೆ: ರಾಬರ್ಟ್ ವಾದ್ರಾ

    ಮುಸ್ಲಿಮರು ದುರ್ಬಲರಾಗ್ತಿದ್ದಾರೆ ಅಂತ ಉಗ್ರರಿಗೆ ಅನ್ನಿಸಿದೆ – ಪಹಲ್ಗಾಮ್ ದಾಳಿಗೆ ಹಿಂದುತ್ವವೇ ಕಾರಣವಂತೆ: ರಾಬರ್ಟ್ ವಾದ್ರಾ

    – ಸೋನಿಯಾ ಗಾಂಧಿ ಅಳಿಯ ಭಯೋತ್ಪಾದಕ ಕೃತ್ಯವನ್ನ ನಾಚಿಕೆಯಿಲ್ಲದೇ ಸಮರ್ಥಿಸಿಕೊಳ್ಳುತ್ತಾರೆ: ಮಾಳವಿಯಾ

    ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಪೈಶಾಚಿತ ಕೃತ್ಯವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪತಿ ರಾಬರ್ಟ್ ವಾದ್ರಾ (Robert Vadra) ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಶ್ಮೀರದ ನರಮೇಧವನ್ನು ಬಿಜೆಪಿಯ ಹಿಂದುತ್ವದ ಜೊತೆಗೆ ಲಿಂಕ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಭಾರತದಲ್ಲಿ ಅಲ್ಪಸಂಖ್ಯಾತರು ಅನಾನುಕೂಲ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಬಿಜೆಪಿಯ ಹಿಂದುತ್ವದ ಪ್ರಚೋದನೆಯೇ ಇದಕ್ಕೆ ಕಾರಣ ಎಂದು ದೂಷಿಸಿದರು. ಮುಂದುವರಿದು.. ನಮ್ಮ ದೇಶದಲ್ಲಿ ಇಂದಿನ ಬಿಜೆಪಿ ಸರ್ಕಾರ (BJP Government) ಪದೇ ಪದೇ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ನಾವು ನೋಡುತ್ತಿದ್ದೇವೆ. ಮತ್ತೊಂದೆಡೆ ಅಲ್ಪಸಂಖ್ಯಾತರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ದುಷ್ಕೃತ್ಯವನ್ನು ಏಕೆ ಮಾಡಿದ್ದಾರೆ ಅಂತ ವಿಶ್ಲೇಷಣೆ ಮಾಡಿದ್ರೆ, ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಭಜನೆ (ಒಡಕು) ಉಂಟಾಗಿದೆ ಎಂದು ಹೇಳಿದ್ದಾರೆ.

    ಗುರುತನ್ನು ಪರಿಶೀಲಿಸಿ, ಹಿಂದೂಗಳನ್ನು ಮಾತ್ರವೇ ಕೊಲ್ಲುವ ಭಯೋತ್ಪಾದಕರ ಕೃತ್ಯವು ಪ್ರಧಾನಿ ಮೋದಿ (PM Modi) ಅವರಿಗೆ ನೀಡಿದ ಸಂದೇಶವಾಗಿದೆ. ಹಿಂದೂಗಳು ಎಲ್ಲಾ ಮುಸ್ಲಿಮರಿಗೆ (Muslims) ತೊಂದರೆ ಕೊಡುತ್ತಿದ್ದಾರೆ ಅಂತ ಈ ರೀತಿಯ ಉಗ್ರ ಸಂಘಟನೆಗಳಿಗೆ ಅನ್ನಿಸಿದೆ. ಗುರುತನ್ನು ಪತ್ತೆ ಹಚ್ಚಿ ನಂತರ ಯಾರನ್ನೊ ಕೊಲ್ಲುವುದು ಪ್ರಧಾನಿಗೆ ನೀಡಿದ ಸಂದೇಶವಾಗಿದೆ. ಕಾರಣ, ಮುಸ್ಲಿಮರು ದುರ್ಬಲರಾಗಿದ್ದಾರೆ ಎನ್ನುವ ಭಾವನೆ ಉಗ್ರ ಸಂಘಟನೆಗಳಲ್ಲಿ ಇದೆ. ಅಲ್ಪಸಂಖ್ಯಾತರಲ್ಲಿ ದುರ್ಬಲರೆಂಬ ಭಾವನೆಯಿದೆ. ನಮ್ಮ ದೇಶದಲ್ಲಿ ನಾವು ಸುರಕ್ಷಿತರು ಮತ್ತು ಜಾತ್ಯತೀತರು ಎಂಬ ಭಾವನೆ ಸರ್ಕಾರದ ಮಟ್ಟದಿಂದ ಬರಬೇಕು. ಆಗ ಈ ರೀತಿಯ ಕೃತ್ಯಗಳು ನಡೆಯುವುದನ್ನು ನಾವು ನೋಡುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ.

    ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ, ರಾಬರ್ಟ್‌ ವಾದ್ರಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸೋನಿಯಾ ಗಾಂಧಿ ಅವರ ಅಳಿಯ ಭಯೋತ್ಪಾದಕ ಕೃತ್ಯವನ್ನು ನಾಚಿಕೆಯಿಲ್ಲದೇ ಸಮರ್ಥಿಸಿಕೊಳ್ಳುತ್ತಾರೆ. ಭಯೋತ್ಪಾದಕರನ್ನು ಖಂಡಿಸುವ ಬದಲು ಅವರಿಗೆ ರಕ್ಷಣೆ ನೀಡುತ್ತಾರೆ. ಪಾಕಿಸ್ತಾನಿ ಭಯೋತ್ಪಾದಕರು ಮಾಡಿದ ದೌರ್ಜನ್ಯಗಳಿಗೆ ಭಾರತದ ಮೇಲೆ ಹೊಣೆಯನ್ನು ಹೊರಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • 7.5 ಕೋಟಿಗೆ ಭೂಮಿ ಖರೀದಿಸಿ 55 ಕೋಟಿಗೆ ಮಾರಾಟ ಆರೋಪ – ರಾಬರ್ಟ್ ವಾದ್ರಾಗೆ ಇಡಿ ಸಮನ್ಸ್‌

    7.5 ಕೋಟಿಗೆ ಭೂಮಿ ಖರೀದಿಸಿ 55 ಕೋಟಿಗೆ ಮಾರಾಟ ಆರೋಪ – ರಾಬರ್ಟ್ ವಾದ್ರಾಗೆ ಇಡಿ ಸಮನ್ಸ್‌

    ನವದೆಹಲಿ: ಸಂಸದೆ ಪ್ರಿಯಾಂಕಾ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ (Robert Vadra) ಅವರಿಗೆ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಸಮನ್ಸ್ ಜಾರಿ ಮಾಡಿದೆ.

    ಹರಿಯಾಣದ ಗುರು ಗ್ರಾಮ್‌ನಲ್ಲಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿ, ಅತಿ ಹೆಚ್ಚು ಬೆಲೆಗೆ ಜಮೀನು ಮಾರಾಟ ಮಾಡಿದ ಆರೋಪ ಅವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ‌ ‌ಮೊದಲು ಏ.8 ರಂದು ಸಮನ್ಸ್ ನೀಡಲಾಗಿತ್ತು. ಅಂದು ವಿಚಾರಣೆಗೆ ಗೈರಾದ ಹಿನ್ನಲೆ ಮತ್ತೊಂದು ಸಮನ್ಸ್ ಜಾರಿ ಮಾಡಲಾಗಿದೆ.

    ಇಡಿ ಕಚೇರಿಗೆ ತೆರಳುವಾಗ ಇಡಿ ಸಮನ್ಸ್‌ನ್ನು ಬಿಜೆಪಿಯ ರಾಜಕೀಯ ದ್ವೇಷ ಎಂದು ದೂರಿದ್ದಾರೆ. ನಾನು ಜನರ ಪರ ಧ್ವನಿ ಎತ್ತಿದಾಗಲೆಲ್ಲಾ ಅವರು ನನ್ನನ್ನು ನಿಗ್ರಹಿಸಲು ಪ್ರಯತ್ನಿಸುತ್ತಾರೆ. ನನ್ನಲ್ಲಿ ಮುಚ್ಚಿಡಲು ಏನೂ ಇಲ್ಲ. ಏನು ಕೇಳಿದರೂ ನಾನು ಅವರಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.

    ಫೆಬ್ರವರಿ 2008 ರಲ್ಲಿ ವಾದ್ರಾ ಅವರಿಗೆ ಸೇರಿದ ಸೈ ಲೈಟ್ ಹಾಸ್ಪಿಟಾಲಿಟಿ ಕಂಪನಿ ಗುರುಗ್ರಾಮ್‌ನ ಸೆಕ್ಟರ್ 83, ಶಿಕೊಪುರ, ಸಿಕಂದರ್‌ಪುರ, ಖೇದಿ ದೌಲಾ ಮತ್ತು ಸಿಹಿಯಲ್ಲಿ 7.5 ಕೋಟಿ ರೂ.ಗೆ ಭೂಮಿ ಖರೀದಿಸಿ, 55 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ದೂರು ನೀಡಲಾಗಿತ್ತು. ಇದು ಅಕ್ರಮ ಹಣ ವರ್ಗಾವಣೆ ಇರಬಹುದು ಎಂದು ಇಡಿ ಶಂಕಿಸಿದೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ, ಹೇಳಿಕೆ ದಾಖಲಿಸುವಂತೆ ಇಡಿ ಸಮನ್ಸ್‌ ಜಾರಿ ಮಾಡಿದೆ.

    ವಾದ್ರಾ ಅವರು ಇಡಿ ಮುಂದೆ ಹಾಜರಾದ ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

  • 12 ಕೋಟಿ ರೂ. ಆಸ್ತಿ, ಎರಡು ಎಫ್‌ಐಆರ್‌ – ಪ್ರಿಯಾಂಕಾ ಗಾಂಧಿ ಬಳಿ ಚಿನ್ನ, ಭೂಮಿ ಎಷ್ಟಿದೆ?

    12 ಕೋಟಿ ರೂ. ಆಸ್ತಿ, ಎರಡು ಎಫ್‌ಐಆರ್‌ – ಪ್ರಿಯಾಂಕಾ ಗಾಂಧಿ ಬಳಿ ಚಿನ್ನ, ಭೂಮಿ ಎಷ್ಟಿದೆ?

    ವಯನಾಡು: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi ) ಸುಮಾರು 12 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಅವರ ಪತಿ ರಾಬರ್ಟ್ ವಾದ್ರಾ (Robert Vadra) ಅವರು ಸುಮಾರು 66 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

    ವಯನಾಡು ಲೋಕಸಭಾ ಉಪಚುನಾವಣಾ (Wayanad Bypoll) ಕಣದಲ್ಲಿರುವ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದು ಅಫಿಡವಿತ್‌ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ವಾದ್ರಾ ದಂಪತಿಯ ಆಸ್ತಿ ಮೌಲ್ಯ ಬಹಿರಂಗವಾಗಿದೆ.

    ಬಾಡಿಗೆ, ಬ್ಯಾಂಕ್‌ ಬಡ್ಡಿ ದರ, ಇತರ ಹೂಡಿಕೆಯಿಂದ 2023-24ರ ಹಣಕಾಸು ವರ್ಷದಲ್ಲಿ 46.39 ಲಕ್ಷ ರೂ. ಆದಾಯ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಪ್ರಿಯಾಂಕಾ 4.24 ಕೋಟಿ ರೂ. ಚರಾಸ್ತಿ, 7.74 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

    ಪ್ರಿಯಾಂಕಾ ಅವರ ಅತ್ಯಮೂಲ್ಯ ಆಸ್ತಿ ಶಿಮ್ಲಾ ಬಳಿಯಿರುವ ಅವರ 12,000 ಚದರ ಅಡಿ ಫಾರ್ಮ್‌ಹೌಸ್ ಆಗಿದೆ. ಅಫಿಡವಿಟ್ ಪ್ರಕಾರ ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 5.64 ಕೋಟಿ ರೂ. ಆಗಿದೆ. 8 ಲಕ್ಷ ರೂ. ಮೌಲ್ಯದ ಹೋಂಡಾ ಸಿಆರ್‌ವಿ ಕಾರನ್ನು ಹೊಂದಿದ್ದಾರೆ. ಇದನ್ನು ಪತಿ ವಾದ್ರಾ ಉಡುಗೊರೆ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.  ಇದನ್ನೂ ಓದಿ: 5 ವರ್ಷಗಳ ಬಳಿಕ ಮುಖಾಮುಖಿ; ರಷ್ಯಾದಲ್ಲಿ ಮೋದಿ-ಜಿನ್‌ಪಿಂಗ್ ನಡ್ವೆ ದ್ವಿಪಕ್ಷೀಯ ಮಾತುಕತೆ

    ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು ಪ್ರಸ್ತುತ ಅದರ ಮೌಲ್ಯ 2.24 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ. 1.16 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಮೆಹ್ರೌಲಿಯಲ್ಲಿ 2.10 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. 2012-13 ರಲ್ಲಿ 15.75 ಲಕ್ಷ ರೂ. ತೆರಿಗೆ ಬಾಕಿ ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಎರಡು ಎಫ್‌ಐಆರ್‌, 1 ನೋಟಿಸ್‌
    ತನ್ನ ಮೇಲೆ ಎರಡು ಎಫ್‌ಐಆರ್‌ ದಾಖಲಾಗಿದೆ ಮತ್ತು ಅರಣ್ಯ ಇಲಾಖೆಯಿಂದ ನೋಟಿಸ್‌ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಕೋವಿಡ್‌ ಸಮಯದಲ್ಲಿ ಅತ್ಯಾಚಾರ ಸಂತ್ರಸ್ತೆಯ ಭೇಟಿಗೆ ತೆರಳಿದಾಗ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ 2020ರಲ್ಲಿ ಇವರ ಮೇಲೆ ಮೊದಲ ಎಫ್‌ಐಆರ್‌ ದಾಖಲಾಗಿದೆ. ತಪ್ಪು ಸಂದೇಶ ಇರುವ ಟ್ವೀಟ್‌ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರಯ ನೀಡಿದ ದೂರಿನ ಆಧಾರದಲ್ಲಿ 2023 ರಲ್ಲಿ ಮಧ್ಯಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ಪ್ರಿಯಾಂಕಾಗಿಂತ ಪತಿ ವಾದ್ರಾ ಹೆಚ್ಚು ಶ್ರೀಮಂತರಾಗಿದ್ದಾರೆ. ವಾದ್ರಾ ಬಳಿ 53 ಲಕ್ಷ ರೂ. ಮೌಲ್ಯದ ಲ್ಯಾಂಡ್ ಕ್ರೂಸರ್, 1.5 ಲಕ್ಷ ರೂ.ಮೌಲ್ಯದ ಮಿನಿ ಕೂಪರ್ ಮತ್ತು 4.22 ಲಕ್ಷ ರೂಪಾಯಿ ಮೌಲ್ಯದ ಸುಜುಕಿ ಮೋಟಾರ್ ಸೈಕಲ್ ಇದೆ. ವಾದ್ರಾ ಅವರು ವಿವಿಧ ಕಂಪನಿಗಳಲ್ಲಿ ಪಾಲುದಾರರಾಗಿ ಸುಮಾರು 35.5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

    ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪ್ರಕಾರ 27.64 ಕೋಟಿ ಮೌಲ್ಯದ ಗುರುಗ್ರಾಮ್‌ನಲ್ಲಿ ವಾದ್ರಾ ವಿವಿಧ ಆಸ್ತಿಗಳನ್ನು ಹೊಂದಿದ್ದಾರೆ. ಈ ಆಸ್ತಿಗಳನ್ನು 2.78 ಕೋಟಿ ರೂ, ನೀಡಿ ಖರೀದಿಸಿದ್ದು ಅಭಿವೃದ್ಧಿಯ ಮೂಲಕ 3.62 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

    ಪ್ರಿಯಾಂಕಾ ಗಾಂಧಿ ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ ವಾದ್ರಾ ಅವರು ಸುಮಾರು 10 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.

  • ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ: ರಾಬರ್ಟ್ ವಾದ್ರಾ

    ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ: ರಾಬರ್ಟ್ ವಾದ್ರಾ

    ನವದೆಹಲಿ: ಪ್ರಿಯಾಂಕಾ ಗಾಂಧಿ (Priyanka Gandhi) ವಯನಾಡಿನಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ. ಅವರು ಸಂಸತ್ತಿನಲ್ಲಿ ಇರಬೇಕು ಎನ್ನುವುದು ನನ್ನ ಆಸೆ. ಜನರು ಪ್ರಿಯಾಂಕಾರನ್ನ ಆಯ್ಕೆ ಮಾಡುವ ಮೂಲಕ ಒಳ್ಳೆಯ ತೀರ್ಪು ನೀಡಲಿದ್ದಾರೆ ಎಂದು ರಾಬರ್ಟ್ ವಾದ್ರಾ (Robert Vadra) ಹೇಳಿದ್ದಾರೆ.

    ಪ್ರಿಯಾಂಕಾ ಗಾಂಧಿ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ನಾನು ಯಾವಾಗಲೂ ಸಕ್ರಿಯ ರಾಜಕಾರಣದಲ್ಲಿರಲು ಬಯಸುತ್ತೇನೆ. ಪ್ರಿಯಾಂಕಾ ಗಾಂಧಿ ಸಂಸದರಾಗಬೇಕೆಂದು ನಾನು ಬಯಸುತ್ತೇನೆ. ಅವರು ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಜನರ ನಿಜವಾದ ಸಮಸ್ಯೆಗಳನ್ನು ಪ್ರಸ್ತಾಪಿಸಬೇಕೆಂದು ನಾನು ಬಯಸುತ್ತೇನೆ. ಪ್ರಿಯಾಂಕಾ ಬುದ್ಧಿವಂತ ಮಹಿಳೆ. ಅವರು ನನಗಿಂತ ಮೊದಲು ಸಂಸತ್ತಿನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಅಕ್ರಮ- 0.001 %ರಷ್ಟು ನಿರ್ಲಕ್ಷ್ಯ ಕಂಡುಬಂದ್ರೂ ಕೂಲಂಕುಷವಾಗಿ ನಿಭಾಯಿಸಬೇಕು: ಸುಪ್ರೀಂ

    ಆದರೆ ನಮ್ಮ ಈ ನಿರ್ಧಾರದಿಂದ ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ. ಮುಂದೇನು ಮಾಡಬಹುದೆಂಬುದನ್ನು ಅರ್ಥಮಾಡಿಕೊಳ್ಳಲು ಅವರು ಒಟ್ಟಿಗೆ ಸೇರುತ್ತಿದ್ದಾರೆ. ಪ್ರಿಯಾಂಕಾ ಅವರು ಸಮಸ್ಯೆಗಳನ್ನು ಎತ್ತುತ್ತಾರೆ. ಲಡ್ಕಿ ಹೂಂ ಲಾಡ್ ಸಕ್ತಿ ಹೂಂ ಎಂಬ ಘೋಷಣೆಯನ್ನು ನೀಡಿ ಅವರು ಮಹಿಳೆಯರಿಗಾಗಿ ದೀರ್ಘಕಾಲ ಹೋರಾಡಿದವರು. ಹೀಗಾಗಿ ಬಿಜೆಪಿ ಹೆದರುತ್ತಿದೆ ಎಂದು ತಿಳಿಸಿದ್ದಾರೆ.

  • ರಾಯ್‌ಬರೇಲಿ, ಅಮೇಠಿಗೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

    ರಾಯ್‌ಬರೇಲಿ, ಅಮೇಠಿಗೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

    ನವದೆಹಲಿ: ಐದನೇ ಹಂತದ ಲೋಕಸಭೆ ಚುನಾವಣೆಗೆ (Lok Sabha Election) ನಾಮಪತ್ರ ಸಲ್ಲಿಸಲು ಶುಕ್ರವಾರ ಮಾತ್ರ ಅವಕಾಶವಿದೆ. ಆದರೂ ರಾಯ್‌ಬರೇಲಿ (Raebareli) ಮತ್ತು ಅಮೇಥಿ (Amethi) ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ (Congress) ಇನ್ನೂ ಅಂತಿಮಗೊಳಿಸಿಲ್ಲ.

    ರಾಹುಲ್ ಗಾಂಧಿ (Rahul Gandhi) ಅಮೇಠಿ, ರಾಯ್‌ಬರೇಲಿ ಪೈಕಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಅಥವಾ ಕಣಕ್ಕೆ ಇಳಿಯಲ್ವೋ ಎಂದು ಕುತೂಹಲ ಮನೆ ಮಾಡಿದೆ. ಅದೇ ರೀತಿ ಪ್ರಿಯಾಂಕಾ ವಾದ್ರಾ (Priyanka Vadra) ಸ್ಪರ್ಧೆ ಮಾಡ್ತಾರೋ ಇಲ್ವೋ ಎಂಬ ವಿಚಾರ ಕೂಡ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಪ್ರಜ್ವಲ್‌ ಕೇಸ್‌ – ಜಡ್ಜ್‌ ಮುಂದೆ ಸಂತ್ರಸ್ತೆಯಿಂದ ಹೇಳಿಕೆ: ಏನಿದು ಸಿಆರ್​ಪಿಸಿ ಸೆಕ್ಷನ್ 164? ಹೇಳಿಕೆಗೆ ಯಾಕಿಷ್ಟು ಮಹತ್ವ?

    ಸದ್ಯದ ಮಾಹಿತಿ ಪ್ರಕಾರ ರಾಹುಲ್ ರಾಯ್‌ಬರೇಲಿಯಿಂದ ರಾಬರ್ಟ್ ವಾದ್ರಾ (Robert Vadra) ಅಮೇಠಿಯಿಂದ ಕಣಕ್ಕೆ ಇಳಿಯುವ ಇಳಿಯುವ ಲೆಕ್ಕಾಚಾರಗಳು ಕೇಳಿಬರುತ್ತಿದೆ. ರಾಹುಲ್ ಅಮೇಠಿಯಿಂದ ಸ್ಪರ್ಧೆ ಮಾಡಲಿ, ನಮ್ಮ ಬೆಂಬಲವಿದೆ ಎಂದು ಅಖಿಲೇಶ್ ಯಾದವ್‌ ಹೇಳಿದ್ದಾರೆ ಎನ್ನಲಾಗಿದೆ.

    ಮೋದಿ ಬಂದಲ್ಲಿ ಹೋದಲ್ಲಿ ಕಾಂಗ್ರೆಸ್ ಪರಿವಾರವಾದಿ ಪಕ್ಷ ಎಂದು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾರನ್ನು ಕಣಕ್ಕೆ ಇಳಿಸಲು ರಾಹುಲ್ ಗಾಂಧಿ ಹಿಂದೇಟು ಹಾಕ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.

     

  • ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ದೇಶದ ಕರೆಯಾಗಿದೆ: ರಾಬರ್ಟ್ ವಾದ್ರಾ

    ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ದೇಶದ ಕರೆಯಾಗಿದೆ: ರಾಬರ್ಟ್ ವಾದ್ರಾ

    ನವದೆಹಲಿ: ಅಮೇಥಿಯ (Amethi) ಜನರು ನನ್ನ ಸ್ಪರ್ಧೆ ಬಯಸಿದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ಕೈಗಾರಿಕೋದ್ಯಮಿ ರಾಬರ್ಟ್ ವಾದ್ರಾ (Robert Vadra) ಈಗ ನಾನು ಸಕ್ರಿಯ ರಾಜಕಾರಣಕ್ಕೆ (Politics) ಬರಬೇಕೆಂಬುದು ದೇಶದ ಕರೆಯಾಗಿದೆ ಎಂದು ಹೇಳಿದ್ದಾರೆ.

    ಋಷಿಕೇಶ್ ತ್ರಿವೇಣಿ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ರಾಜಕೀಯ ತಪ್ಪು, ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡಬೇಕು. ಬಿಜೆಪಿ (BJP) ಆಡಳಿತದಲ್ಲಿ ಸಾಮಾನ್ಯ ನಾಗರಿಕರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಜನರಲ್ಲಿ ಭಯವನ್ನು ಹರಡುವುದು ಬಿಜೆಪಿಯ ಆಡಳಿತದ ವಿಧಾನವಾಗಿದೆ. ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ನಂತರ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವರದಿ ಬಂದಿದೆ: ಸಿದ್ದರಾಮಯ್ಯ

    ಅಮೇಥಿಯಿಂದ ಚುನಾವಣೆಗೆ (Lok Sabha Election) ಸ್ಪರ್ಧಿಸುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಬರ್ಟ್ ವಾದ್ರಾ, ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂಬುದು ಇಡೀ ದೇಶದ ಕರೆಯಾಗಿದೆ. ನಾನು ಯಾವಾಗಲೂ ದೇಶದ ಜನರಿಗಾಗಿ ಹೋರಾಡುತ್ತೇನೆ. ನಾನು ಜನರ ನಡುವೆ ಬದುಕುತ್ತೇನೆ. ಸಮಾಜಕ್ಕಾಗಿ ದುಡಿಯುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿನಾಯಕಿಯಿಂದ್ಲೇ ಏನೂ ಮಾಡೋಕೆ ಆಗಲಿಲ್ಲ- ತಂಗಡಗಿಗೆ ರೆಡ್ಡಿ ಟಾಂಗ್

  • ಅಮೇಥಿಯಿಂದ ಕಣಕ್ಕಿಳಿಯುತ್ತಾರ ರಾಬರ್ಟ್ ವಾದ್ರಾ? – ಕುತೂಹಲ ಮೂಡಿಸಿದ ಗಾಂಧಿ ಕುಟುಂಬದ ಅಳಿಯನ ಹೇಳಿಕೆ

    ಅಮೇಥಿಯಿಂದ ಕಣಕ್ಕಿಳಿಯುತ್ತಾರ ರಾಬರ್ಟ್ ವಾದ್ರಾ? – ಕುತೂಹಲ ಮೂಡಿಸಿದ ಗಾಂಧಿ ಕುಟುಂಬದ ಅಳಿಯನ ಹೇಳಿಕೆ

    ನವದೆಹಲಿ: ಸೋನಿಯಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ (Robert Vadra) ಈಗ ಚುನಾವಣೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಮಾತನಾಡುತ್ತಾ ಅವರು ಪರೋಕ್ಷವಾಗಿ ಅಮೇಥಿಯಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

    ಐದು ಅವಧಿಗೆ ರಾಯ್‌ಬರೇಲಿ ಪ್ರತಿನಿಧಿಸಿದ್ದ ಸೋನಿಯಾ ಗಾಂಧಿ ಚುನಾವಣಾ ರಾಜಕೀಯ ಬಿಟ್ಟು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ವಯನಾಡಿನಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದ್ದರು. ಸದ್ಯ ವಯನಾಡಿನಿಂದ ಸ್ಪರ್ಧಿಸಿರುವ ಅವರು ಅಮೇಥಿಯಿಂದ (Amethi) ಸ್ಪರ್ಧಿಸುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಹೀಗಾಗೀ ಗಾಂಧಿ ಕುಟುಂಬದ ಭದ್ರಕೋಟೆ ಎನಿಸಿಕೊಂಡಿರುವ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಕಾರ್ಯಕರ್ತರ‌ ನಂಬಿಕೆ ಪ್ರಕಾರ ಸೋನಿಯಾ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ (Priyanka Gandhi), ಅಮೇಥಿಯಿಂದ ರಾಹುಲ್ ಗಾಂಧಿ ಮತ್ತೆ ಕಣಕ್ಕಿಳಿಬಹುದು ಎಂದು ಅಂದಾಜಿಸಲಾಗಿದೆ. ಈ ಲೆಕ್ಕಚಾರದ ನಡುವೆ ರಾಬರ್ಟ್ ವಾದ್ರಾ ಹೇಳಿಕೆ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬುದನ್ನು ಮೋದಿ ನೋಡಿ ಕಲಿಯಿರಿ: ಹೇಮಾ ಮಾಲಿನಿ

    ರಾಯ್ ಬರೇಲಿ ಅಥವಾ ಅಮೇಥಿಯನ್ನು ಪ್ರತಿನಿಧಿಸುವವರು ಜನರ ಪ್ರಗತಿ, ಅವರ ಭದ್ರತೆಗಾಗಿ ಕೆಲಸ ಮಾಡಬೇಕು. ತಾರತಮ್ಯದ ರಾಜಕೀಯವನ್ನು ಮಾಡಬಾರದು. ಅಮೇಥಿಯ ಜನರು ತಮ್ಮ ಪ್ರಸ್ತುತ ಸಂಸದರ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಾರೆ. ಹಾಲಿ ಸಂಸದೆ ಸ್ಮೃತಿ ಇರಾನಿ ಗಾಂಧಿ ಕುಟುಂಬ ಈ ಕ್ಷೇತ್ರದಿಂದ ದೂರ ಉಳಿಯಲಿ ಎಂದು ಬಯಸುತ್ತಿದ್ದಾರೆ. ಆದರೆ ಅಮೇಥಿ, ರಾಯ್‌ಬರೇಲಿ, ಸುಲ್ತಾನ್‌ಪುರ ಮತ್ತು ಜಗದೀಶ್‌ಪುರದ ಜನರಿಗಾಗಿ ಗಾಂಧಿ ಕುಟುಂಬವು ವರ್ಷಗಳಿಂದ ಶ್ರಮಿಸಿದೆ. ಗಾಂಧಿ ಕುಟುಂಬದ ಸದಸ್ಯರು ಕ್ಷೇತ್ರಕ್ಕೆ ಮರಳಬೇಕು ಎಂದು ಜನರು ಬಯಸುತ್ತಾರೆ. ಒಂದು ವೇಳೆ ನಾನು ಸಂಸತ್ತಿನ ಸದಸ್ಯನಾಗಲು ನಿರ್ಧರಿಸಿದರೆ ನಾನು ಅವರ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ ಎಂದು ಅವರು ನಿರೀಕ್ಷಿಸುತ್ತಿದ್ದಾರೆ. ಜನರು ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ನನ್ನ ಸಂಪರ್ಕದಲ್ಲಿದ್ದಾರೆ. ನನ್ನ ಜನ್ಮದಿನವೂ ಆಚರಿಸುತ್ತಾರೆ ಎಂದು ರಾಬರ್ಟ್‌ ವಾದ್ರಾ ಹೇಳಿದ್ದಾರೆ.

    ಈ ಮೂಲಕ ರಾಬರ್ಟ್ ವಾದ್ರಾ ತಮ್ಮ‌ ಬಯಕೆಯನ್ನು ಜನರ ಅಭಿಪ್ರಾಯದಂತೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಈ ಹೇಳಿಕೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಿದೆ ಗೊತ್ತಿಲ್ಲ. ಈಗಾಗಲೇ ಕುಟುಂಬ ರಾಜಕೀಯದ ಆರೋಪದಿಂದ ಸೊರಗಿರುವ ಗಾಂಧಿ ಕುಟುಂಬ ಅಳಿಯನನ್ನು ಕಣಕ್ಕಿಳಿಸುವ ಪ್ರಯತ್ನ ಮಾಡುತ್ತದೆಯೇ ಎಂಬುದು ಕುತೂಹಲದ ಸಂಗತಿ. ಇದನ್ನೂ ಓದಿ: ಕಿಡ್ನಾಪ್ ಉದ್ಯಮಕ್ಕೆ ಹೆಸರಾದವ್ರು ರಾಜ್ಯದಲ್ಲಿ ರಸ್ತೆ ನಿರ್ಮಿಸಲು ಬಿಡ್ಲಿಲ್ಲ- RJD ವಿರುದ್ಧ ಮೋದಿ ವಾಗ್ದಾಳಿ

  • ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ ಮಗಳು

    ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ ಮಗಳು

    ಜೈಪುರ: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi), ರಾಬರ್ಟ್ ವಾದ್ರಾ (Robert Vadra) ಹಾಗೂ ಅವರ ಪುತ್ರಿ ಪಾಲ್ಗೋಂಡಿದ್ದರು.

    ರಾಜಸ್ಥಾನದ ಬುಂದಿ ಜಿಲ್ಲೆಯಿಂದ ಭಾರತ್ ಜೋಡೋ ಯಾತ್ರೆ (Bharat Jodo Yatra) ಪುನಾರಂಭಗೊಂಡಿದ್ದು, ಈ ವೇಳೆ ನೂರಾರು ಜನರು ಭಾಗವಹಿಸಿದ್ದರು. ಅಷ್ಟೇ ಅಲ್ಲದೇ ಈ ದಿನವನ್ನು ಕಾಂಗ್ರೆಸ್‍ನಿಂದ ಮಹಿಳಾ ಸಬಲೀಕರಣದ ದಿನವಾಗಿ ಆಚರಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಿಳೆಯರು ಸೇರಿದಂತೆ ಹೆಚ್ಚಿನ ಜನರು ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕೋಟಾ-ಲಾಲ್ಸೋಟ್ ಮೆಗಾ ಹೆದ್ದಾರಿಯಲ್ಲಿ ಬಾಬಾಯಿಯಿಂದ ಸ್ವೈಮಾಧೋಪುರ ಜಿಲ್ಲೆಯ ಪಿಪಾಲ್ವಾಡಕ್ಕೆ ಹೆಜ್ಜೆ ಹಾಕಿದರು.

    ಸೆ. 7ರಂದು ಆರಂಭವಾದ ಭಾರತ್ ಜೋಡೋ ಯಾತ್ರೆಯ 96ನೇ ದಿನದಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಾಬಾಯಿ ಗ್ರಾಮದ ತೇಜಾಜಿ ಮಹಾರಾಜ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಾರಿ ಶಕ್ತಿ ಪಾದಯಾತ್ರೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಮತ್ತು ಮೆರವಣಿಗೆಯಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಮಹಿಳೆಯರು ರಸ್ತೆಬದಿಯಲ್ಲಿ ನಿಂತಿದ್ದರು. ಇದನ್ನೂ ಓದಿ: ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ಬಿಜೆವೈ ರಾಜ್ಯ ಸಹ-ಸಂಯೋಜಕ ಕಪಿಲ್ ಯಾದವ್ ಮಾತನಾಡಿ, ಬಿಜೆವೈಯ 96ನೇ ದಿನವು ಮಹಿಳಾ ಸಬಲೀಕರಣವನ್ನು ಮೀಸಲಿಟ್ಟಿದೆ. ಅದಕ್ಕಾಗಿಯೇ ಈ ದಿನವನ್ನು ನಾರಿ ಶಕ್ತಿ ಪಾದ ಯಾತ್ರೆ ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ

    Live Tv
    [brid partner=56869869 player=32851 video=960834 autoplay=true]

  • ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಅಳಿಯ ರಾಬರ್ಟ್ ವಾದ್ರಾ

    ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಅಳಿಯ ರಾಬರ್ಟ್ ವಾದ್ರಾ

    ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಕುರಿತು ಸಕ್ರೀಯ ರಾಜಕಾರಣದಿಂದ ದೂರವೇ ಉಳಿದಿರುವ ಅವರ ಅಳಿಯ ಇದೀಗ ರಾಜಕೀಯ ಪ್ರವೇಶಿಸುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

    ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿರುವುದರ ವಿರುದ್ಧ ಕಿಡಿಕಾರಿರುವ ಅವರ ಅಳಿಯ ರಾಬರ್ಟ್ ವಾದ್ರಾ, ಅಗತ್ಯ ಉಂಟಾದರೆ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಶಿವಾನಿ ಆತ್ಮಹತ್ಯೆ ಪ್ರಕರಣ – ಕಾಲೇಜ್‍ನಲ್ಲಿ ಕೊಟ್ಟ ಕಿರುಕುಳವೇ ಕಾರಣ: ಪೋಷಕರ ಆರೋಪ

    ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡ ಒಬ್ಬ ಬಿಜೆಪಿ ನಾಯಕನ ಹೆಸರನ್ನು ಹೇಳಲಿ ನೋಡೋಣ. ಪ್ರತಿ ಬಾರಿಯೂ ತನ್ನ ನೀತಿಗಳ ಬಗ್ಗೆ ದೇಶಕ್ಕೆ ಅಸಮಾಧಾನ ಉಂಟಾಗುತ್ತಿದೆ ಎಂಬ ಭಾವನೆ ಬಿಜೆಪಿಯಲ್ಲಿ ಮೂಡಿದಾಗ, ಗಾಂಧಿ ಕುಟುಂಬಕ್ಕೆ ತೊಂದರೆ ಕೊಡಲು ಆರಂಭಿಸುತ್ತದೆ ಎಂದು ಟೀಕಿಸಿದ್ದಾರೆ.

    ಈ ದೇಶದಲ್ಲಿ ಬದಲಾವಣೆಯ ಅಗತ್ಯವಿದೆ. ದೇಶಕ್ಕೆ ಅಗತ್ಯವಿರುವ ಬದಲಾವಣೆಯನ್ನು ನಾನು ತರಬಲ್ಲೆ ಎಂದು ಜನರಿಗೆ ಅನಿಸಿದರೆ, ನಾನು ರಾಜಕಾರಣ ಪ್ರವೇಶಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    ಜನರು ಜಿಎಸ್‌ಟಿ ವಿಚಾರವಾಗಿ ಅಸಮಾಧಾನಗೊಂಡಿದ್ದಾರೆ ಎಂಬ ಕಾರಣಕ್ಕೆ ಇ.ಡಿ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ. ನಾನು ಅವರಿಗೆ (ಸೋನಿಯಾ ಗಾಂಧಿ) ತನಿಖಾ ಸಂಸ್ಥೆಯನ್ನು ಹೇಗೆ ನಿಭಾಯಿಸಬೇಕು ಎಂದು ಸಲಹೆ ನೀಡಿದ್ದೆ. ಏಕೆಂದರೆ ನಾನು 15 ಬಾರಿ ಇ.ಡಿಗೆ ಹೋಗಿದ್ದೆ ಮತ್ತು 23,000 ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]