Tag: Roberrt

  • ಡಿ ಬಾಸ್ ಸ್ಟೆಪ್ಸ್, ಶಂಕರ್ ಮಹಾದೇವನ್ ವಾಯ್ಸ್, ರಾಬರ್ಟ್‍ನಿಂದ ರಾಮ ಜಪ

    ಡಿ ಬಾಸ್ ಸ್ಟೆಪ್ಸ್, ಶಂಕರ್ ಮಹಾದೇವನ್ ವಾಯ್ಸ್, ರಾಬರ್ಟ್‍ನಿಂದ ರಾಮ ಜಪ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಜೈ ಶ್ರೀ ರಾಮ್ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದೆ. ದೋಸ್ತಾ ಮೂಲಕ ಹುಚ್ಚೆಬಿಸಿದ್ದ ಚಿತ್ರ ತಂಡ, ಇದೀಗ ರಾಮನನ್ನು ಜಪಿಸುವಂತೆ ಮಾಡಿದೆ.

    ಈ ಮೂಲಕ ರಾಮನವಮಿಗೆ ರಾಬರ್ಟ್ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದ್ದು, ಜೈ ಶ್ರೀರಾಮ ಹಾಡಿನ ಮುಂದುವರಿದ ಭಾಗವನ್ನು ಮೇಕಿಂಗ್ ವಿಡಿಯೋ ಸಮೇತ ಬಿಡುಗಡೆ ಮಾಡಿದೆ. ಇಂದು ಬೆಳಗ್ಗೆ 10.5ಕ್ಕೆ ಹಾಡು ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ಈ ಹಿಂದೆ ದೋಸ್ತಾ ಹಾಡಿನ ಮೂಲಕ ಸ್ನೇಹಿತನ ಮಹತ್ವವನ್ನು ಸಾರಿದ್ದ ರಾಬರ್ಟ್ ಚಿತ್ರತಂಡ ಇದೀಗ ಜೈ ಶ್ರೀರಾಮ ಮೂಲಕ ರಾಮನ ಘಾತೆಯನ್ನು ಪರಿಚಯಿಸಿದೆ.

    ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ರಾಮಾಯ ರಾಮ ಭದ್ರಾಯ, ರಾಮಚಂದ್ರಾಯ ವೇದಸೇ……ರಘುನಾಥಾಯ……ಸೀತಾಯ ಪತಯೇ ನಮಃ ಎಂಬ ಸಾಲುಗಳಿಂದ ಹಾಡು ಪ್ರಾರಂಭವಾಗುತ್ತದೆ. ರಾಮ ನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂದು ಮತ್ತೆ ಮುಂದುವರಿಯುತ್ತದೆ.

    ಹಾಡಿಗೆ ಮೇಕಿಂಗ್ ವಿಡಿಯೋ ಸೇರಿಸಿದ್ದು, ಡಿ ಬಾಸ್ ಸ್ಟೆಪ್ಸ್ ಸಹ ಕೇಂದ್ರೀಕರಿಸಲಾಗಿದೆ. ಅಲ್ಲದೆ ಅರ್ಜುನ್ ಜನ್ಯಾ ಪಿಯಾನೋ ನುಡಿಸುವ ದೃಶ್ಯ ಇದೆ. ಅಲ್ಲಲ್ಲಿ ಆರ್ಕೆಸ್ಟ್ರಾ ಬರುತ್ತದೆ. ಶಂಕರ್ ಮಹದೇವನ್ ಹಾಡುವ ಶೈಲಿಯನ್ನು ತೋರಿಸಲಾಗಿದೆ. ಶಂಕರ್ ಮಹದೇವನ್ ಏರು ಧ್ವನಿಯಲ್ಲಿ ಹಾಡುತ್ತಿದ್ದರೆ, ದೇಹದಲ್ಲಿ ಒಂದು ರೀತಿಯ ಸಂಚಲನವೇ ಸೃಷ್ಟಿಯಾಗುತ್ತದೆ. ಬೀಟ್ಸ್ ಸೌಂಡ್, ರಿಧಂ ಪ್ಯಾಡ್ ಹೊಂದಾಣಿಕೆ ಜುಗಲ್ಬಂಧಿಯಂತಿದೆ.

  • BrotherFromAnotherMother- ರಾಬರ್ಟ್ ಚಿತ್ರದ ಮೂರನೇ ಹಾಡಿಗೆ ಭರ್ಜರಿ ರೆಸ್ಪಾನ್ಸ್

    BrotherFromAnotherMother- ರಾಬರ್ಟ್ ಚಿತ್ರದ ಮೂರನೇ ಹಾಡಿಗೆ ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ಕೊರೊನಾ ಕಂಟಕದಿಂದ ಎರಡು ಮೂರು ಬಾರಿ ಪೇಚಿಗೆ ಸಿಲುಕಿದ್ದ ರಾಬರ್ಟ್ ಸೋಷಿಯಲ್ ಮೀಡಿಯಾದಲ್ಲಿ ಮೂರನೇ ಹಾಡನ್ನು ಅದ್ಧೂರಿಯಾಗಿ ಇಂದು ರಿಲೀಸ್ ಮಾಡಲಾಗಿದೆ.

    ದರ್ಶನ್ ಅಭಿನಯದ ರಾಬರ್ಟ್ ಬಹುನಿರೀಕ್ಷೆಯ ಚಿತ್ರವಾಗಿದ್ದು, ‘ದೋಸ್ತಾ ಕಣೋ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಈಗಾಗಲೇ ಟ್ರೇಲರ್ ಮತ್ತು ಸಾಂಗ್ಸ್ ಮೂಲಕ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಸಾರಥಿ ಹೆಗಲ ಮೇಲೆ ಕುಳಿತ ಪುಟ್ಟ ರಾಮನ ಪರಿಚಯಿಸಿದ ತರುಣ್ ಸುಧೀರ್

    ಟ್ವಿಟ್ಟರಿನಲ್ಲಿ ದರ್ಶನ್ ವಿಡಿಯೋ ಲಿಂಕ್ ಹಾಕಿ ಅದಕ್ಕೆ, ನಮ್ಮ ರಾಬರ್ಟ್ ಚಿತ್ರದ ಮೂರನೇ ಹಾಡು ‘ದೋಸ್ತಾ ಕಣೋ’ ಈಗ ಬಿಡುಗಡೆಯಾಗಿದೆ. ನೋಡಿ ನಿಮ್ಮ ಅನಿಸಿಕೆ ತಿಳಿಸಿ ಎಂದು ಟ್ವೀಟ್ ಮಾಡಿದ್ದರು. ಸದ್ಯ ಈ ಹಾಡನ್ನು ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ಹೇಮಂತ್ ಅವರು ಹಾಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ದಾಖಲೆಗಳನ್ನು ಉಡೀಸ್ ಮಾಡಿದ ರಾಬರ್ಟ್ ಹಾಡು

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕಾಗಿ ವಿದೇಶ ಶೂಟಿಂಗನ್ನು ಕೈಬಿಟ್ಟಿತ್ತು. ನಂತರ ಚಿತ್ರದ ಸಾಂಗ್ ಬಿಡುಗಡೆಗಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಆಡಿಯೋ ರಿಲೀಸ್ ಮಾಡುವ ಪ್ಲಾನ್‍ನಿಂದ ಹಿಂದೆ ಸರಿದಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ಸಾಂಗ್ ರಿಲೀಸ್ ಮಾಡಿದ್ದು, ಫ್ಯಾನ್ಸ್ ಕ್ರೇಜ್ ಹೆಚ್ಚಾಗುವಂತೆ ಮಾಡಿದೆ.

    ಈ ಚಿತ್ರದಲ್ಲಿ ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂಬ ಮೂರು ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ಯೂಟ್ಯೂಬ್ ದಾಖಲೆಗಳನ್ನು ಉಡೀಸ್ ಮಾಡಿದ ರಾಬರ್ಟ್ ಹಾಡು

    ಯೂಟ್ಯೂಬ್ ದಾಖಲೆಗಳನ್ನು ಉಡೀಸ್ ಮಾಡಿದ ರಾಬರ್ಟ್ ಹಾಡು

    ಬೆಂಗಳೂರು: ಹಡಗು ಹಿಡಿದು ಪಡೆಯೆ ಬರಲಿ ಹೊಸಕಿ ಬಿಡುವೆ ಕಾಲಡಿ….ಬಾ ಬಾ ಬಾ ನಾ ರೆಡಿ…. ಎನ್ನುತ್ತಲೇ ಸದ್ದು ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಮೊದಲ ಹಾಡು ಯೂಟ್ಯೂಬ್‍ನಲ್ಲಿನ ದಾಖಲೆಗಳನ್ನು ಉಡೀಸ್ ಮಾಡಿದೆ.

    ಡಿ ಬಾಸ್ ಅಬ್ಬರಕ್ಕೆ ಸಿನಿಮಾಸಕ್ತರು ಫಿದಾ ಆಗಿದ್ದು, ಖಡಕ್, ಖದರ್ ಹಾಡಿಗೆ ಮನಸೋತಿದ್ದಾರೆ. ಹೆಚ್ಚು ವೀಕ್ಷಣೆ ಹಾಗೂ ಲೈಕ್‍ಗಳನ್ನು ಪಡೆಯುವ ಮೂಲಕ ಯೂಟ್ಯೂಬ್‍ನಲ್ಲಿನ ಸ್ಯಾಂಡಲ್‍ವುಡ್ ದಾಖಲೆಗಳನ್ನು ಉಡೀಸ್ ಮಾಡಿದೆ. ಇದರಿಂದಾಗಿ ದರ್ಶನ್ ತಮ್ಮ ಹಿಂದಿನ ದಾಖಲೆಗಳನ್ನು ಮುರಿದು, ಮತ್ತೊಮ್ಮೆ ಯೂಟ್ಯೂಬ್ ಬಾಸ್ ಆಗಿ ಹೊರ ಹೊಮ್ಮಿದ್ದಾರೆ. ಬಾ ಬಾ ಬಾ ನಾ ರೆಡಿ ಲಿರಿಕಲ್ ಹಾಡು ಅತೀ ವೇಗವಾಗಿ 1 ಲಕ್ಷ ವೀವ್ಸ್ ಪಡೆಯುವ ಮೂಲಕ ಯೂಟ್ಯೂಬ್‍ನಲ್ಲಿ ದಾಖಲೆ ಮಾಡಿದೆ.

    ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ತಮ್ಮ ಸಂಗೀತ ಮೂಲಕವೇ ಮೋಡಿ ಮಾಡಿದ್ದು, ಕೇಳುಗರನ್ನು ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಹಾಡಿನ ಸಾಹಿತ್ಯ ಮಾಸ್ ಹೀರೋ ದರ್ಶನ್ ಅವರಿಗಾಗಿಯೇ ರಚಿತವಾದಂತಿದೆ. ಹಡಗು ಹಿಡಿದು ಪಡೆಯೇ ಬರಲಿ, ಹೊಸಕಿ ಬಿಡುವೆ ಕಾಲಡಿ, ಡಿ.. ಡಿ… ಬಾ ನಾ ರೆಡಿ ಸಾಲುಗಳು ಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತವೆ.

    ಹೀಗಾಗಿ ಹೆಚ್ಚು ವೀಕ್ಷಣೆಯಾಗುತ್ತಿದ್ದು, ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದೆ. 5 ನಿಮಿಷದಲ್ಲಿ 1 ಲಕ್ಷ ವೀವ್ಸ್ ಮಾತ್ರವಲ್ಲದೆ, ಕೇವಲ ಒಂದು ಗಂಟೆಯೊಳಗೆ 5 ಲಕ್ಷ ವೀಕ್ಷಣೆ ಪಡೆದು ಮುನ್ನುಗುತ್ತಿದೆ. ಲೈಕ್ಸ್‍ಗಳಲ್ಲಿಯೂ ಮುಂದಿದ್ದು, ಕೇವಲ 28 ನಿಮಿಷಗಳಲ್ಲಿ 50 ಸಾವಿರ ಲೈಕ್ಸ್, ಎರಡು ತಾಸಿನಲ್ಲಿ 90 ಸಾವಿರ ಲೈಕ್ಸ್ ಗಿಟ್ಟಿಸಿಕೊಂಡ ಕನ್ನಡದ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಈ ಹಿಂದೆ ಯುವರತ್ನ 50 ಸಾವಿರ ಲೈಕ್ಸ್ ಪಡೆಯಲು 2 ಗಂಟೆ ತೆಗೆದುಕೊಂಡರೆ, ಪೈಲ್ವಾನ್ 3 ಗಂಟೆ ತೆಗೆದುಕೊಂಡಿತ್ತು. ಹಾಗೆಯೇ ಕೆಜಿಎಫ್ ಸಿನಿಮಾ ಸಹ 22 ಗಂಟೆ ತೆಗೆದುಕೊಂಡಿತ್ತು ಎಂದು ವರದಿಯಾಗಿದೆ.

    ಯಜಮಾನ ಚಿತ್ರದ ಯೋಗರಾಜ್ ಭಟ್ ಸಾಹಿತ್ಯದ ‘ಬಸಣ್ಣಿ ಬಾ’ ಹಾಡು ಕೇವಲ 6 ನಿಮಿಷಗಳಲ್ಲಿ 1 ಲಕ್ಷ ವೀವ್ಸ್ ಪಡೆದಿತ್ತು. ಅಲ್ಲದೆ ಚಕ್ರವರ್ತಿ ಚಿತ್ರದ ‘ಒಂದು ಮುಂಜಾನೆ’ ಹಾಡು ಕೇವಲ 7 ನಿಮಿಷದಲ್ಲಿ 1 ಲಕ್ಷ ಬಾರಿ ವೀಕ್ಷಣೆಯಾಗಿತ್ತು. ಇದೀಗ ಬಾ ಬಾ ಬಾ ನಾ ರೆಡಿ ಹಾಡು ಕೇವಲ 5 ನಿಮಿಷದಲ್ಲಿ 1 ಲಕ್ಷ ವೀವ್ಸ್ ಪಡೆಯುವ ಮೂಲಕ ದರ್ಶನ್ ಅವರ ಈ ಹಿಂದಿನ ಯೂಟ್ಯೂಬ್ ದಾಖಲೆಗಳನ್ನು ಪುಡಿ ಮಾಡಿದೆ. ಇದೀಗ ಬಾ ಬಾ ಬಾ ನಾ ರೆಡಿ ಗೀತೆಯು ಕೇವಲ 22 ತಾಸಿನಲ್ಲಿ 11.38 ಲಕ್ಷ ವೀಕ್ಷಣೆ ಪಡೆದಿದೆ.

    ಆದರೆ ಲೈಕ್ಸ್ ವಿಷಯದಲ್ಲಿ ಕನ್ನಡದಲ್ಲೇ ಅತೀ ವೇಗವಾಗಿ 50 ಸಾವಿರ ಲೈಕ್ಸ್ ಪಡೆದ ಹೆಗ್ಗಳಿಕೆ ಯಜಮಾನ ಚಿತ್ರದ್ದಾಗಿದೆ. ಈ ಚಿತ್ರದ ಶಿವನಂದಿ ಗೀತೆ ಕೇವಲ 20 ನಿಮಿಷದಲ್ಲಿ 50 ಸಾವಿರ ಲೈಕ್ಸ್ ಪಡೆದಿತ್ತು.

    ಅಲ್ಲದೆ ಟ್ರೈಲರ್ ವಿಷಯದಲ್ಲಿಯೂ ಕಳೆದ ವರ್ಷ ಬಿಡುಗಡೆಯಾದ ‘ಒಡೆಯ’ ಚಿತ್ರ ಟಾಪ್‍ನಲ್ಲಿದ್ದು, ಕೇವಲ 3 ನಿಮಿಷದಲ್ಲಿ 10 ಲಕ್ಷ ವೀವ್ಸ್ ಪಡೆದಿತ್ತು. ಏಳು ನಿಮಿಷದಲ್ಲಿ 20 ಲಕ್ಷ ಬಾರಿ ವೀಕ್ಷಣೆಯಾಗಿತ್ತು. ಇದು ಕನ್ನಡ ಚಿತ್ರದ ಇತಿಹಾಸದಲ್ಲೇ ದಾಖಲೆಯಾಗಿದೆ. ಲೈಕ್ಸ್ ವಿಚಾರದಲ್ಲಿಯೂ ಒಡೆಯ 10 ನಿಮಿಷಗಳಲ್ಲಿ 50 ಸಾವಿರ ಲೈಕ್ಸ್ ಪಡೆದಿತ್ತು. ಈ ಮೂಲಕ ತಮ್ಮದೇ ದಾಖಲೆಯನ್ನು ದರ್ಶನ್ ಬ್ರೇಕ್ ಮಾಡಿದ್ದರು. ಇದೇ ಒಡೆಯ ಚಿತ್ರದ ಟೀಸರ್ ಕೇವಲ 12 ನಿಮಿಷದಲ್ಲಿ 50 ಸಾವಿರ ಲೈಕ್ಸ್ ಪಡೆದಿತ್ತು.

  • ರಾಬರ್ಟ್ ಸಿನಿಮಾದಿಂದ ಹೊರಬಿತ್ತು ಸಿಹಿ ಸುದ್ದಿ

    ರಾಬರ್ಟ್ ಸಿನಿಮಾದಿಂದ ಹೊರಬಿತ್ತು ಸಿಹಿ ಸುದ್ದಿ

    ಬೆಂಗಳೂರು: ಬಹು ನಿರೀಕ್ಷೆಯಿಂದ ಕಾಯುತ್ತಿರುವ ರಾಬರ್ಟ್ ಸಿನಿಮಾದ ಅಡ್ಡಾದಿಂದ ನಿರ್ದೇಶಕ ತರುಣ್ ಸುಧೀರ್ ಸಿಹಿ ಸುದ್ದಿ ನೀಡಿದ್ದಾರೆ.

    ಟ್ವೀಟ್ ಮಾಡಿರುವ ನಿರ್ದೇಶಕ ತರುಣ್ ಸುಧೀರ್ ಅವರು, ರಾಬರ್ಟ್ ಸಿನಿಮಾದ ಹಾಡೊಂದು ಮಾರ್ಚ್ 3ರಂದು ಸಂಜೆ 5.01 ಕ್ಕೆ ಬಿಡುಗಡೆಯಾಗಲಿದೆ. ಈ ಹಾಡು ಡಿಬಾಸ್ ಅಭಿಮಾನಿಗಳಿಗೆ ಒಂದು ಉಡುಗೊರೆಯಾಗಿದೆ. ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಳೆ ಸಂಜೆ 5 ಗಂಟೆವರೆಗೆ ಕಾಯಿರಿ. ಯಾವಾಗಲೂ ನಮ್ಮೊಂದಿಗೆ ಇರಿ ಎಂದು ಬರೆದುಕೊಂಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ ರಾಬರ್ಟ್ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ. ಚಿತ್ರತಂಡವು ಈಗಾಗಲೇ ತಂಡ ಶೇ.90 ರಷ್ಟು ಚಿತ್ರೀಕರಣ ಮುಗಿಸಿದ್ದು, ಇನ್ನುಳಿದಿರುವುದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ.

    ದರ್ಶನ್ ಅವರ 43ನೇ ಹುಟ್ಟುಹಬ್ಬದ ಸಂಭ್ರಮದಂತೆ ರಾಬರ್ಟ್ ಚಿತ್ರ ತಂಡ ರಾಬರ್ಟ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು. ಈ ಮೂಲಕ ಡಿ ಬಾಸ್ ಹಾಗೂ ಅವರ ಅಭಿಮಾನಿಗಳಿಗೆ ಉಡುಗೊರೆ ನೀಡಿತ್ತು.

    ಇದಕ್ಕೂ ಎರಡು ದಿನ ಮುನ್ನ ಅಂದ್ರೆ ಪ್ರೇಮಿಗಳ ದಿನದಂದು ‘ರಾಬರ್ಟ್’ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಇದರ ಬೆನ್ನಲ್ಲೇ ಫೆಬ್ರವರಿ 29ರ ಸಂಜೆ 5 ಗಂಟೆಗೆ ರಾಬರ್ಟ್ ಚಿತ್ರಕ್ಕೆ ಸಂಬಂಧಪಟ್ಟಂತೆ ವಿಷಯವೊಂದನ್ನು ಘೋಷಣೆ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿದ್ದರು. ಈ ವಿಷಯ ಹೊರಬೀಳುತ್ತಿದ್ದಂತೆ ಮತ್ತೊಮ್ಮೆ ರಾಬರ್ಟ್ ಕುರಿತಾದ ಚರ್ಚೆಗಳು ಪ್ರಾರಂಭವಾಗಿತ್ತು.

    ಇಂದು ಪ್ರತಿಕ್ರಿಯೆ ನೀಡಿರುವ ತರುಣ್ ಸುಧೀರ್ ಅವರು ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಬರ್ಟ್ ಅನ್ನು ಏಪ್ರಿಲ್ 9ರಂದು ತೆರೆಗೆ ತರಲು ಚಿತ್ರತಂಡ ಡೇಟ್ ಫಿಕ್ಸ್ ಮಾಡಿಕೊಂಡಿದೆ. ಕ್ರೈಸ್ತರ ಪವಿತ್ರ ದಿನ ಗುಡ್ ಫ್ರೈಡೆ ಉಡುಗೊರೆಯಾಗಿ ರಾಬರ್ಟ್ ಅನ್ನು ತೆರೆಗೆ ತರಲು ನಿರ್ದರಿಸಿದೆ ಎನ್ನಲಾಗಿದೆ.

    ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ – ಡಿ ಬಾಸ್ ನಂಬರಿನ ಬೈಕಲ್ಲಿ ದಾಸ

    ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ – ಡಿ ಬಾಸ್ ನಂಬರಿನ ಬೈಕಲ್ಲಿ ದಾಸ

    ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದೆ.

    ದರ್ಶನ್ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಚಿತ್ರ ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ದರ್ಶನ್ ಬೈಕಿನ ಮೇಲೆ ಕುಳಿತಿದ್ದು, ಅವರ ಮುಖವನ್ನು ಬಹಿರಂಗವಾಗಿಲ್ಲ. ಅಲ್ಲದೆ ಬೈಕಿನ ಮೇಲೆ ದರ್ಶನ್ ಆನೆ ಚಿತ್ರವಿರುವ ಜಾಕೆಟ್ ಧರಿಸಿದ್ದಾರೆ. ಪೋಸ್ಟರ್ ನಲ್ಲಿ ದರ್ಶನ್ ಕೆಎ 19 ಒ 8055 ನಂಬರಿನ ಬೈಕಿನ ಮೇಲೆ ಕುಳಿತ್ತಿದ್ದಾರೆ. 8055 ಗಮನಿಸುವಾಗ ಡಿ-ಬಾಸ್ ತರ ಕಾಣುತ್ತಿದೆ. ಈ ಪೋಸ್ಟರ್ ನನ್ನು ಆದರ್ಶ್ ಮೋಹನ್ ದಾಸ್ ಡಿಸೈನ್ ಮಾಡಿದ್ದಾರೆ.

    ಈ ಬಗ್ಗೆ ದರ್ಶನ್ ತಮ್ಮ ಚಿತ್ರದ ಪೋಸ್ಟರ್ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ `ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. ಉಮಾಪತಿ ಫಿಲಂ ಬ್ಯಾನರ್ ಅಡಿಯಲ್ಲಿ, ತರುಣ್ ಸುದೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮಂಗಳವಾರ ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಇಂದು ಬೆಳಗ್ಗೆ 11:04 ಗಂಟೆಗೆ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ನನ್ನ ಅಕೌಂಟ್ ಅಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಅನಾವರಣಗೊಳಿಸಲಿದ್ದೇನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂತ ಕಲಾವಿದರ ಮೇಲೆ ಸದಾ ಇರಲಿ. ರಾಬರ್ಟ್ ಥೀಮ್ ಪೋಸ್ಟರ್ ಎಂಬ ಹ್ಯಾಶ್‍ಟ್ಯಾಗ್ ಬಳಿಸಿ ನಿಮ್ಮ ಪ್ರೀತಿಗೆ ಆಭಾರಿ ದಾಸ ದರ್ಶನ್” ಎಂದು ಟ್ವೀಟ್ ಮಾಡಿದ್ದರು.

    ಈ ಹಿಂದೆ ದರ್ಶನ್ ಅವರು ಬಿಡುಗಡೆ ಮಾಡಿದ್ದ ರಾಬರ್ಟ್ ಚಿತ್ರದ ಟೈಟಲ್ ಪೋಸ್ಟರ್ ಅಭಿಮಾನಿಗಳಿಗೆ ಅಟ್ರ್ಯಾಕ್ಟ್ ಮಾಡಿತ್ತು. ಹನುಮಂತನ ಅವತಾರವೆತ್ತಿರುವ ದಾಸ ರಾಮನನ್ನು ಹೆಗಲ ಮೇಲಿರಿಸಿಕೊಂಡು ನಿಂತಿರುವ ಪೋಸ್ಟರ್ ಅಭಿಮಾನಿಗಳನ್ನು ಥ್ರಿಲ್ಲಾಗುವಂತೆ ಮಾಡಿತ್ತು. ಚೌಕಾ ಸಿನಿಮಾ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ‘ಹೆಬ್ಬುಲಿ’ ಚಿತ್ರದ ಖ್ಯಾತಿಯ ಉಮಾಪತಿ ನಿರ್ಮಾಣದಲ್ಲಿ `ರಾಬರ್ಟ್’ ಅದ್ಧೂರಿಯಾಗಿ ತಯಾರಾಗುತ್ತಿದೆ.