Tag: Roberrt

  • ಮೇಕಿಂಗ್ ವಿಡಿಯೋ ಜೊತೆ ಹೊರ ಬಿತ್ತು ರಾಬರ್ಟ್ ಸಿನಿಮಾದ ಜವಾರಿ ಲವ್ ಸಾಂಗ್

    ಮೇಕಿಂಗ್ ವಿಡಿಯೋ ಜೊತೆ ಹೊರ ಬಿತ್ತು ರಾಬರ್ಟ್ ಸಿನಿಮಾದ ಜವಾರಿ ಲವ್ ಸಾಂಗ್

    – ಲಿರಿಕ್ಸ್ ಜೊತೆ ಮೇಕಿಂಗ್ ವಿಡಿಯೋ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಿಂದ ಅಭಿಮಾನಿಗಳಿಗೆ ಮತ್ತೊಂದು ಅಪ್‍ಡೇಟ್ ಸಿಕ್ಕಿದ್ದು, ಉತ್ತರ ಕರ್ನಾಟಕ ಭಾಷೆಯ ಜವಾರಿ ಲವ್ ಸಾಂಗ್‍ನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.

    ರಾಬರ್ಟ್ ಸಿನಿಮಾದ ಬಹುತೇಕ ಹಾಡುಗಳು ಭಾರೀ ಮೆಚ್ಚುಗೆ ಗಳಿಸಿದ್ದು, ಇದೀಗ ಜವಾರಿ ಲವ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಲಿರಿಕಲ್ ವಿಡಿಯೋ ಜೊತೆಗೆ ಮೇಕಿಂಗ್ ವಿಡಿಯೋದೊಂದಿಗೆ ‘ಕಣ್ಣು ಹೊಡಿಯಾಕ’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸಾಂಗ್‍ಗೆ ಭರ್ಜರಿ ರೆಸ್ಪಾನ್ಸ್ ಬರುತ್ತಿದ್ದು, ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ 1 ಲಕ್ಷಕ್ಕೂ ಅಧಿಕ ವ್ಯೂವ್ಸ್ ಆಗಿದೆ.

    ಇತ್ತೀಚೆಗಷ್ಟೇ ಡಿ ಬಾಸ್ ಹುಟ್ಟುಹಬ್ಬಕ್ಕೆ ಟ್ರೈಲರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದ ಸಿನಿಮಾ ತಂಡ, ಇದೀಗ ಲಿರಿಕಲ್ ವಿಡಿಯೋ ಮೂಲಕ ಲವ್ ಸಾಂಗ್ ಬಿಡುಗಡೆ ಮಾಡಿದೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಹಿತ್ಯ ರಚಿಸಲಾಗಿದ್ದು, ಭಾರೀ ಬೀಟ್ಸ್‍ನೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಾಂಗ್, ಲಿರಿಕಲ್ ವಿಡಿಯೋ ಜೊತೆಗೆ ಮೇಕಿಂಗ್ ವಿಡಿಯೋವನ್ನು ಸಹ ಸೇರಿಸಲಾಗಿದ್ದು, ಡಿ ಬಾಸ್ ರೆಡಿಯಾಗುತ್ತಿರುವುದು ಹಾಗೂ ಡ್ಯಾನ್ಸ್ ಹೇಳಿಕೊಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

    ವಿಶಾಲವಾದ ಪ್ರದೇಶದಲ್ಲಿ ಸಾಂಗ್ ಚಿತ್ರೀಕರಣ ನಡೆಸಲಾಗಿದ್ದು, ಈ ದೃಶ್ಯಗಳು ಸಹ ಇಷ್ಟವಾಗುತ್ತವೆ. ಸುಮ್ಮಕ ಇರವಲ್ಲೆ, ಸರಿ ಹೊತ್ತಿಗೆ ಉಣವಲ್ಲೆ, ಹುಚ್ಚು ಹಿಡ್ದು ಆಗೇತಿ ಶತಮಾನ ಎಂಬ ಸಾಲುಗಳು ಪ್ರೇಮಿಗಳನ್ನು ಸೆಳೆಯುತ್ತವೆ. ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದು, ಶ್ರೇಯಾ ಘೋಶಾಲ್ ಕಂಠ ಸಿರಿಯಲ್ಲಿ ಮೂಡಿ ಬಂದಿದೆ. ಅಲ್ಲದೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಲಿರಿಕಲ್ ವಿಡಿಯೋ ಫುಲ್ ಕಲರ್‍ಫುಲ್ ಆಗಿದ್ದು, ಲವರ್ಸ್ ಗೆ ತುಂಬಾ ಇಷ್ಟವಾಗಲಿದೆ.

    ರಾಬರ್ಟ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 11ರಂದು ಬೆಳ್ಳಿಪರದೆ ಮೇಲೆ ಬರಲಿದೆ. ನಿರ್ದೇಶಕ ತರುಣ್ ಸುಧೀರ್ ರಾಬರ್ಟ್ ಸಿನಿಮಾವನ್ನು ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಲ್ಲದೆ ರಾಬರ್ಟ್ ಸಿನಿಮಾದಲ್ಲಿ ಜಗಪತಿ ಬಾಬು, ರವಿ ಕೃಷ್ಣನ್, ಆಶಾ ಭಟ್, ದೇವರಾಜ್, ವಿನೋದ್ ಪ್ರಭಾಕರ್, ಪಿ ರವಿಶಂಕರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

  • ನನ್ನ ಕಥೆ ಬಿಡಿ, ಯುವನಟರಿಗೆ ತೊಂದರೆಯಾಗುತ್ತೆ: ದರ್ಶನ್

    ನನ್ನ ಕಥೆ ಬಿಡಿ, ಯುವನಟರಿಗೆ ತೊಂದರೆಯಾಗುತ್ತೆ: ದರ್ಶನ್

    ಬೆಂಗಳೂರು: ನಂದು 50 ಸಿನಿಮಾ ಆಯ್ತು. ನನ್ನ ಕಥೆ ಬಿಡಿ. ಮುಂದೆ ಯುವನಟರ ಸಿನಿಮಾಗಳಿಗೆ ಸಮಸ್ಯೆಯಾಗುತ್ತೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ರಾಬರ್ಟ್ ಸಿನಿಮಾಗೆ ತೆಲುಗು ಇಂಡಸ್ಟ್ರಿಯಲ್ಲಿ ಅಡ್ಡಿಯಾಗುತ್ತಿರುವ ಸಂಬಂಧ ಫಿಲಂ ಚೇಂಬರ್‍ಗೆ ದೂರು ನೀಡಲು ಹೋಗುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ತೆಲುಗು ಸಿನಿಮಾಗಳು ಕರ್ನಾಟದಲ್ಲಿ ಯಾವುದೇ ತೊಂದರೆ ಇಲ್ಲದೇ ರಿಲೀಸ್ ಆಗುತ್ತೆ. ಆದರೆ ಆಂಧ್ರದಲ್ಲಿ ಕನ್ನಡ ಸಿನಿಮಾಗಳಿಗೆ ತೊಂದರೆಯಾಗುತ್ತೆ ಎಂದರು.

    ನಂದು 50 ಸಿನಿಮಾ ಆಯ್ತು. ನನ್ನ ಕಥೆ ಬಿಡಿ. ಮುಂದೆ ಯುವನಟರ ಸಿನಿಮಾಗಳಿಗೆ ಸಮಸ್ಯೆಯಾಗುತ್ತೆ ಎಂದು ತೆಲುಗು ಇಂಡಸ್ಟ್ರಿ ವಿರುದ್ಧ ಗರಂ ಆದರು.

    ಕೊರೊನಾ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿ ಹೊಸ ರೂಲ್ಸ್ ಜಾರಿ ಮಾಡಿಕೊಂಡಿದೆ. ಅದರ ಅನ್ವಯ ತೆಲುಗು ಸಿನಿಮಾ ಬಿಡುಗಡೆಯ ದಿನ ಬೇರೆ ಯಾವುದೇ ಪರಿಭಾಷೆಯ ಚಿತ್ರಗಳು ತಮ್ಮ ನಾಡಿನಲ್ಲಿ ಬಿಡುಗಡೆ ಮಾಡುವಂತಿಲ್ಲ ಅನ್ನೋ ನಿಯಮ ತೆಲುಗು ಸಿನಿಮಾ ಇಂಡಸ್ಟ್ರಿ ರೂಢಿಸಿಕೊಂಡಿದೆ. ಹೀಗಾಗಿ ಆಂಧ್ರ ತೆಲಂಗಾಣದಲ್ಲಿ ಮಾರ್ಚ್ 11 ಕ್ಕೆ ತೆಲುಗು ಸಿನಿಮಾ ರಿಲೀಸ್ ಇರುವ ಕಾರಣ ಕನ್ನಡದ ‘ರಾಬರ್ಟ್’ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಇದನ್ನ ಪ್ರಶ್ನಿಸಿ ದರ್ಶನ್ ಹಾಗೂ ರಾಬರ್ಟ್ ಟೀಮ್ ಇಂದು ಮಧ್ಯಾಹ್ನ ಕನ್ನಡ ಫಿಲ್ಮ್ ಚೇಂಬರ್ ಗೆ ದೂರು ನೀಡುತ್ತಿದೆ. ತೆಲುಗಿಗೆ ಡಬ್ ಆಗಿ ಮಾರ್ಚ್ 11ಕ್ಕೆ ‘ರಾಬರ್ಟ್’ ರಿಲೀಸ್ ಆಗುತ್ತಿದೆ. ಇದನ್ನ ತೆಲುಗು ಇಂಡಸ್ಟ್ರಿ ತಡೆದಿದೆ. ನಟ ದರ್ಶನ್, ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ತರುಣ್ ಸುಧೀರ್ ಫಿಲ್ಮ್ ಚೇಂಬರ್ಗೆ ದೂರು ಸಲ್ಲಿಸಲಿದ್ದಾರೆ.

  • ತೆಲುಗು ಇಂಡಸ್ಟ್ರಿ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ!

    ತೆಲುಗು ಇಂಡಸ್ಟ್ರಿ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತೆಲುಗು ಇಂಡಸ್ಟ್ರಿ ಮೇಲೆ ಗರಂ ಆಗಿದ್ದಾರೆ.

    ಮಾರ್ಚ್ 11 ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ದೇಶದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈ ವೇಳೆ ತೆಲುಗು ಸಿನಿಮಾ ಇಂಡಸ್ಟ್ರಿ ದರ್ಶನ್ ರಾಬರ್ಟ್ ಸಿನಿಮಾ ತಮ್ಮ ರಾಜ್ಯದಲ್ಲಿ ರಿಲೀಸ್ ಆಗುವುದನ್ನ ತಡೆಯುತ್ತಿದೆ.

    ಕೊರೊನಾ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿ ಹೊಸ ರೂಲ್ಸ್ ಜಾರಿ ಮಾಡಿಕೊಂಡಿದೆ. ಅದರ ಅನ್ವಯ ತೆಲುಗು ಸಿನಿಮಾ ಬಿಡುಗಡೆಯ ದಿನ ಬೇರೆ ಯಾವುದೇ ಪರಿಭಾಷೆಯ ಚಿತ್ರಗಳು ತಮ್ಮ ನಾಡಿನಲ್ಲಿ ಬಿಡುಗಡೆ ಮಾಡುವಂತಿಲ್ಲ ಅನ್ನೋ ನಿಯಮ ತೆಲುಗು ಸಿನಿಮಾ ಇಂಡಸ್ಟ್ರಿ ರೂಢಿಸಿಕೊಂಡಿದೆ. ಹೀಗಾಗಿ ಆಂಧ್ರ ತೆಲಂಗಾಣದಲ್ಲಿ ಮಾರ್ಚ್ 11 ಕ್ಕೆ ತೆಲುಗು ಸಿನಿಮಾ ರಿಲೀಸ್ ಇರುವ ಕಾರಣ ಕನ್ನಡದ ‘ರಾಬರ್ಟ್’ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಇದನ್ನ ಪ್ರಶ್ನಿಸಿ ದರ್ಶನ್ ಹಾಗೂ ರಾಬರ್ಟ್ ಟೀಮ್ ಇಂದು ಕನ್ನಡ ಫಿಲ್ಮ್ ಚೇಂಬರ್ ಗೆ ದೂರು ನೀಡುತ್ತಿದೆ.

    ತೆಲುಗಿಗೆ ಡಬ್ ಆಗಿ ಮಾರ್ಚ್ 11ಕ್ಕೆ ‘ರಾಬರ್ಟ್’ ರಿಲೀಸ್ ಆಗುತ್ತಿದೆ. ಇದನ್ನ ತೆಲುಗು ಇಂಡಸ್ಟ್ರಿ ತಡೆದಿದೆ. ನಟ ದರ್ಶನ್, ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ತರುಣ್ ಸುಧೀರ್ ಫಿಲ್ಮ್ ಚೇಂಬರ್ಗೆ ದೂರು ಸಲ್ಲಿಸಲಿದ್ದಾರೆ. ಕನ್ನಡದಲ್ಲಿ ಪರಭಾಷಾ ಚಿತ್ರಗಳಿಗೆ ಅನುಮತಿ ನೀಡಲಾಗುತ್ತದೆ. ಆದರೆ ಅವರು ಇಂಥಹ ಕಠಿಣ ನಿಯಮ ಮಾಡಿಕೊಂಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತೆ.

  • ಮರಿ ಟೈಗರ್ ಹುಟ್ಟುಹಬ್ಬಕ್ಕೆ ರಾಬರ್ಟ್ ತಂಡದಿಂದ ಗಿಫ್ಟ್

    ಮರಿ ಟೈಗರ್ ಹುಟ್ಟುಹಬ್ಬಕ್ಕೆ ರಾಬರ್ಟ್ ತಂಡದಿಂದ ಗಿಫ್ಟ್

    ಬೆಂಗಳೂರು: ಟೈಗರ್ ಪ್ರಭಾಕರ್ ಪುತ್ರ ಮರಿ ಟೈಗರ್ ವಿನೋದ್ ಪ್ರಭಾಕರ್ ಬಹುದಿನಗಳ ನಂತರ ದೊಡ್ಡ ಬ್ರೇಕ್ ಸಿಗುವ ನಿರೀಕ್ಷೆಯಲ್ಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅವರ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಭರ್ಜರಿ ಗಿಫ್ಟ್ ನೀಡಿದೆ.

    ಈಗಾಗಲೇ ರಾಬರ್ಟ್ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲ ಅಂದುಕೊಂತೆ ಆಗಿದ್ದರೆ ಕ್ರಿಸ್ ಪ್ರಯುಕ್ತ ಡಿಸೆಂಬರ್ 25ರಂದು ಚಿತ್ರ ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಚಿತ್ರೀಕರಣ ಸ್ವಲ್ಪ ತಡವಾಯಿತು. ಮಾತ್ರವಲ್ಲ ಇದೀಗ ಸ್ಟಾರ್ ನಟರ ಚಿತ್ರಗಳನ್ನು ಬಿಡುಗಡೆ ಮಾಡಲು ಅನುಮತಿ ಇಲ್ಲ. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ.

    ರಿಲೀಸ್ ತಡವಾದರೂ ಚಿತ್ರತಂಡ ಹಾಡು, ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ತಣಿಸಿದೆ. ಆದರೂ ಅಭಿಮಾನಿಗಳು ಬಹುನಿರೀಕ್ಷಿತ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಡಿ ಬಾಸ್ ಈ ಸಿನಿಮಾದಲ್ಲಿ ತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಇನ್ನೂ ಹೆಚ್ಚಿದೆ. ಹೀಗಾಗಿ ಚಿತ್ರ ಬಿಡುಗಡೆ ಕುರಿತು ಎದುರು ನೋಡುತ್ತಿದ್ದಾರೆ.

    ಇದೆಲ್ಲದರ ನಡುವೆ ಮರಿ ಟೈಗರ್ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಭರ್ಜರಿ ಉಡುಗೊರೆ ನಿಡಿದ್ದು, ಅವರ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಪೋಸ್ಟರ್ ನಲ್ಲಿ ವಿನೋದ್ ಪ್ರಭಾಕರ್ ಗನ್ ಹಿಡಿದು ಮಾಸ್ ಲುಕ್ ನೀಡಿದ್ದು, ಬಾಯಿ ಮೇಲೆ ಗನ್ ಹಿಡಿದು ನಿಶ್ಶಬ್ದದ ಸಂಕೇತ ನೀಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಫಿದಾ ಆಗಿದದ್ದಾರೆ. ಆದರೆ ವಿನೋದ್ ಪ್ರಭಾಕರ್ ದರ್ಶನ್ ಜೊತೆ ಸಪೋರ್ಟಿವ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೋ ಅಥವಾ ಎದುರಾಳಿಯಾಗಿಯೋ ಎಂಬುದು ಅಭಿಮಾನಿಗಳ ಸದ್ಯ ಪ್ರಶ್ನೆಯಾಗಿದೆ.

    ಡಿಸೆಂಬರ್ 3 ವಿನೋದ್ ಪ್ರಭಾಕರ್ ಹುಟ್ಟುಹಬ್ಬವಾಗಿದ್ದು, ಸ್ನೇಹಿತರು ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಚಿತ್ರ ತಂಡ ಸಹ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಪ್ರ್ರೈಸ್ ನೀಡಿದೆ.

    ರಾಬರ್ಟ್ ಡಿ ಬಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದ ಹಾಡುಗಳು, ಟೀಸರ್ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿವೆ. ಉಮಾಪತಿ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಮೊದಲ ಬಾರಿಗೆ ದರ್ಶನ್ ತ್ರಿಪಾತ್ರದಲ್ಲಿ ನಟಿಸುತ್ತಿರೋದರಿಂದ ಚಿತ್ರ ಹೆಚ್ಚು ಭರವಸೆಯನ್ನು ಮೂಡಿಸಿದೆ. ರಾಬರ್ಟ್ ಗೆ ಜೊತೆಯಾಗಿ ಆಶಾ ಭಟ್ ನಟಿಸುತ್ತಿದ್ದು, ಜಗಪತಿ ಬಾಬು, ರವಿ ಕಿಶನ್, ರವಿ ಶಂಕರ್, ದೇವರಾಜ್, ವಿನೋದ್ ಪ್ರಭಾಕರ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

  • ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ ‘ಯಜಮಾನ’

    ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ ‘ಯಜಮಾನ’

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಹೌದು. ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾ ಟೀಸರ್ ರಿಲೀಸ್ ಆಗಿ ಕೇವಲ ಒಂದು ಗಂಟೆಯ ಒಳಗೆ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಜೊತೆಗೆ 16 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ‘ದಾಸ’ ತನ್ನ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.

    ಈ ಸಂಬಂಧ ಟೀಸರ್ ಜೊತೆಗೆ ಟ್ವೀಟ್ ಮಾಡಿರುವ ಸಾರಥಿ, ರಾಬರ್ಟ್ ಚಿತ್ರದ ಟೀಸರ್ 5 ಮಿಲಿಯನ್(50 ಲಕ್ಷ) ಬಾರಿ ವೀಕ್ಷಣೆಯಾಗಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು, ನಿಮ್ಮ ದಾಸ ದರ್ಶನ್ ಎಂದು ಬರೆದುಕೊಂಡಿದ್ದಾರೆ.

    ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇನ್ನೇನು ತೆರೆಗಪ್ಪಲಿಸಲು ಸಜ್ಜಾಗಿದೆ. ಕಳೆದ ಏಪ್ರಿಲ್‍ನಲ್ಲಿಯೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮ ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಪ್ರತಿ ಹಬ್ಬಕ್ಕೂ ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಒಂದಿಲ್ಲೊಂದು ಸಪ್ರ್ರೈಸ್ ನೀಡಲಾಗುತ್ತಿದೆ.

    ದರ್ಶನ್ ಅವರ ಹುಟ್ಟುಹಬ್ಬದಂದು (ಫೆಬ್ರವರಿ 16)ರಂದು ಅಭಿಮಾನಿಗಳಿಗೆಂದೇ ರಾಬರ್ಟ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಪೋಸ್ಟರ್, ಮೋಷನ್ ಪೋಸ್ಟರ್ ನಿಂದಲೇ ಭಾರೀ ಸದ್ದು ಮಾಡಿದ್ದ ರಾಬರ್ಟ್ ಸಿನಿಮಾದ ಟೀಸರ್ ನೋಡಿರುವ ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಅವರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಐರಾವತನಿಗೆ ನಾಯಕಿಯಾಗಿ ಕನ್ನಡತಿ ಆಶಾ ಭಟ್ ನಟಿಸಿದ್ದಾರೆ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬರ್ಟ್ ಬೆಡಗಿ – ಚಿತ್ರತಂಡದಿಂದ ಫಸ್ಟ್‌ಲುಕ್ ಗಿಫ್ಟ್

    ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬರ್ಟ್ ಬೆಡಗಿ – ಚಿತ್ರತಂಡದಿಂದ ಫಸ್ಟ್‌ಲುಕ್ ಗಿಫ್ಟ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಈಗಾಗಲೇ ಪೋಸ್ಟರ್ ಮೂಲಕ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಶಾ ಭಟ್‍ಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ.

    ಇಂದು ನಟಿ ಆಶಾ ಭಟ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ರಾಬರ್ಟ್ ಚಿತ್ರತಂಡ ಆಶಾ ಭಟ್ ಅವರ ಫಸ್ಟ್‌ಲುಕ್ ರಿಲೀಸ್ ಮಾಡಿದೆ. ಇದುವರೆಗೂ ದರ್ಶನ್ ಅವರ ಪೋಸ್ಟರ್ ಮತ್ತು ಟೀಸರ್ ಮಾತ್ರ ರಿವೀಲ್ ಮಾಡಿತ್ತು. ಇದೀಗ ಮೊದಲ ಬಾರಿಗೆ ನಾಯಕಿಯ ಪಾತ್ರವನ್ನು ಪರಿಚಯಿಸಿದೆ. ಸಿನಿಮಾದಲ್ಲಿ ಆಶಾ ಭಟ್, ದರ್ಶನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಬಿಡುಗಡೆಯಾಗಿರುವ ಫ‌ಸ್ಟ್‌ಲುಕ್‌ನಲ್ಲಿ ನಟಿ ಆಶಾ ಭಟ್ ಡ್ಯಾನ್ಸ್ ಮಾಡುತ್ತಿರುವ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಚಿತ್ರತಂಡ ಸಿನಿಮಾದ ಬಗ್ಗೆ ಹೆಚ್ಚಾಗಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದ್ದರಿಂದ ನಟಿ ಆಶಾ ಭಟ್ ಪಾತ್ರ ಹೇಗಿರಲಿದೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಸೋಶಿಯಲ್ ಮೀಡಿಯಾದ ಮೂಲಕ ನಟಿಗೆ ದರ್ಶನ್ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

    ಫಸ್ಟ್‌ಲುಕ್ ರಿಲೀಸ್ ಮಾಡಿದ್ದಕ್ಕೆ ನಟಿ ಕೂಡ ಟ್ವೀಟ್ ಮಾಡುವ ಮೂಲಕ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. “ರಾಬರ್ಟ್ ತಂಡ, ನೀವು ನನಗೆ ಕುಟುಂಬದವರಂತೆ ಇದ್ದೀರಿ. ನನ್ನ ಹುಟ್ಟುಹಬ್ಬವನ್ನು ಹೇಗೆ ಅದ್ಭುತವಾಗಿಸಬೇಕೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಕೊನೆಯ ಹುಟ್ಟುಹಬ್ಬದ ದಿನ ನಾವು ಒಟ್ಟಿಗೆ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಈ ಬರ್ತ್ ಡೇಯಲ್ಲಿ ನಮ್ಮ ಪ್ರಯತ್ನವನ್ನು ಆಚರಿಸುತ್ತಿದ್ದೇವೆ” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

  • ರಗಡ್ ಲುಕ್‍ನಲ್ಲಿ ‘ರಾಬರ್ಟ್’ ಮಿಂಚಿಂಗ್

    ರಗಡ್ ಲುಕ್‍ನಲ್ಲಿ ‘ರಾಬರ್ಟ್’ ಮಿಂಚಿಂಗ್

    ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

    ಭಾನುವಾರವೇ ಈ ಸಂಬಂಧ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ “ಮೇ 25ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದರ್ಶನ್ ಅವರ ಖಾತೆಯಿಂದ ಪೋಸ್ಟರ್ ಬಿಡುಗಡೆಯಾಗಲಿದೆ” ಎಂದು ತಿಳಿಸಿದ್ದರು. ಅದರಂತೆಯೇ ಚಿತ್ರದ ಪೋಸ್ಟರ್ ನಟ ದರ್ಶನ್ ಅವರ ಖಾತೆಯಿಂದ ಬಿಡುಗಡೆಯಾಗಿದೆ.

    ಬಿಡುಗಡೆಯಾಗಿರುವ ಪೋಸ್ಟರಿನಲ್ಲಿ ದರ್ಶನ್ ಉದ್ದ ಕೂದಲು, ಗಡ್ಡ ಬಿಟ್ಟಿದ್ದು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    “ಎಲ್ಲಾ ನಲ್ಮೆಯ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ಧಿಕ ಶುಭಾಶಯಗಳು. ನಮ್ಮ ‘ರಾಬರ್ಟ್’ ಚಿತ್ರದ ಪೋಸ್ಟರ್ ನಿಮಗಾಗಿ. ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರವೂ ನಿಮ್ಮ ಮಡಿಲಿಗೆ ಸೇರಲಿದೆ. ಮನೆಯಲ್ಲಿ ಇರಿ, ಮನೆಯವರಿಗಾಗಿ ಜಾಗೃತರಾಗಿರಿ” ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ರಾಬರ್ಟ್ ಸಿನಿಮಾ ರಿಲೀಸ್ ಆಗಿ, ಐವತ್ತು ದಿನ ಮುಗಿಸಿ, ನೂರನೇ ದಿನದತ್ತ ಭರ್ಜರಿಯಾಗಿ ಓಡುತ್ತಿರಬೇಕಿತ್ತು. ಆದರೆ ಕೊರೊನಾದಿಂದ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಈ ಮೂಲಕ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಈ ನಡುವೆಯೇ ರಾಬರ್ಟ್ ಸಿನಿಮಾವನ್ನು ಆನ್‍ಲೈನ್ ಅಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಉಮಾಪತಿ ಸುಳ್ಳು ಎಂದು ಹೇಳಿದ್ದಾರೆ.

  • ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್

    ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್

    ಬೆಂಗಳೂರು: ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ರಾಬರ್ಟ್ ಚಿತ್ರದ ಪೋಸ್ಟರ್ ಸೋಮವಾರ ಬೆಳಗ್ಗೆ ಬಿಡುಗಡೆಯಾಗಲಿದೆ.

    ಹೌದು, ಈ ಸಂಬಂಧ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮೇ 25ರ 11 ಗಂಟೆ 5 ನಿಮಿಷಕ್ಕೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದರ್ಶನ್ ಅವರ ಖಾತೆಯಿಂದ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ರಾಬರ್ಟ್ ಸಿನಿಮಾ ರಿಲೀಸ್ ಆಗಿ, ಐವತ್ತು ದಿನ ಮುಗಿಸಿ, ನೂರನೇ ದಿನದತ್ತ ಭರ್ಜರಿಯಾಗಿ ಓಡುತ್ತಿರಬೇಕಿತ್ತು. ಆದರೆ ಕೊರೊನಾ ಕ್ರಿಮಿಯಿಂದ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಈ ಮೂಲಕ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಈ ನಡುವೆಯೇ ರಾಬರ್ಟ್ ಸಿನಿಮಾವನ್ನು ಆನ್‍ಲೈನ್ ಅಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಉಮಾಪತಿ ಸುಳ್ಳು ಎಂದು ಹೇಳಿದ್ದಾರೆ.

    ದರ್ಶನ್ ಫ್ಯಾನ್ಸ್ ರಾಬರ್ಟ್ ಚಿತ್ರವನ್ನು ಕೈಬಿಡಲ್ಲ ಥೀಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ ಎಂದು ಹೇಳಿ ಚಿತ್ರದ ನಿರ್ದೇಶಕ ಉಮಾಪತಿ ಅವರು ಅಮೆಜಾನ್ ಕಂಪನಿ ನೀಡಿದ ಭಾರೀ ಆಫರ್ ತಿರಸ್ಕರಿಸಿದ್ದಾರೆ.

    ರಾಬರ್ಟ್ ಸಿನಿಮಾವನ್ನು ಆನ್‍ಲೈನ್‍ನಲ್ಲೇ ರಿಲೀಸ್ ಮಾಡಲು ಬೇಡಿಕೆ ಇಡಲಾಗಿತ್ತು. ಕೋಟಿ ಕೋಟಿ ಕೊಡುತ್ತೇವೆ ನಮಗೆ ರಾಬರ್ಟ್ ಕೊಡಿ ಎಂದು ಅಮೆಜಾನ್ ಫ್ರೈಮ್ ಅವರು ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಮಾತನಾಡಿದ್ದ ಚಿತ್ರದ ನಿರ್ಮಾಪಕ ಉಮಾಪತಿ ಅವರು, ಅಮೆಜಾನ್ ಚಾನೆಲ್‍ನಿಂದ ನಮ್ಮ ರಾಬರ್ಟ್ ಸಿನಿಮಾಕ್ಕೆ ಆಫರ್ ಬಂದಿದ್ದು ನಿಜ. 70 ಕೋಟಿಗೆ ಅವರು ಬೇಡಿಕೆ ಇಟ್ಟಿದ್ದೂ ಸತ್ಯ. ಆದರೆ ನಾವು ಒಪ್ಪಲಿಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವವರೆಗೂ ಓಟಿಟಿ ಫ್ಲಾಟ್‍ಫಾರ್ಮ್‍ಗಳಲ್ಲಿ ರಾಬರ್ಟ್ ರಿಲೀಸ್ ಮಾಡಲ್ಲ. ತಡವಾದರೂ ಪರವಾಗಿಲ್ಲ. ಥೀಯೇಟರ್ ನಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ರಾಜಾರೋಷವಾಗಿ ಹೇಳಿದ್ದಾರೆ.

    ಕೊರೊನಾ ಮುಗಿದ ಮೇಲೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎನ್ನುವ ಬಲವಾದ ನಂಬಿಕೆ ಇದೆ. ದರ್ಶನ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸಿನಿಮಾ ಕೈ ಬಿಡುವುದಿಲ್ಲ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವುದಕ್ಕೆ ಮುಗಿಬೀಳುತ್ತಾರೆ. ಅಂದಹಾಗೆ ಈಗಾಗಲೇ ನಮ್ಮ ಚಿತ್ರಕ್ಕೆ ಹಾಕಿದ ಬಂಡವಾಳ ಹಲವು ಮೂಲಗಳಿಂದ ವಾಪಸ್ ಬಂದಿದೆ. ಇನ್ನು ಮುಂದೆ ಬರುವುದೆಲ್ಲವೂ ಲಾಭವೇ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರಿಲೀಸ್‍ಗೂ ಮೊದಲೇ ದಾಖಲೆ ಲೆಕ್ಕದಲ್ಲಿ ಲಾಭದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ಸಿನಿಮಾ ರಿಲೀಸ್‍ಗೆ ರೆಡಿಯಾಗಿ ತಿಂಗಳುಗಳೇ ಕಳೆದಿವೆ. ಹಲವು ಬಾರಿ ರಿಲೀಸ್ ಡೇಟ್ ಕೂಡ ಹೊರಬಿದ್ದಿತ್ತು. ಅಷ್ಟರಲ್ಲಿ ಕೊರೊನಾದಿಂದ ಥೀಯೇಟರ್ ಗಳು ಬಂದ್ ಅದವು. ಇಂದು ಹಾಕಿದ ಬಂಡವಾಳಕ್ಕೆ ಹೆಚ್ಚು ಕಮ್ಮಿ ಡಬಲ್ ದುಡ್ಡು. ಜೊತೆಗೆ ಎಷ್ಟೆಷ್ಟು ಜನರು ನೋಡುತ್ತಾರೊ, ಅಷ್ಟಷ್ಟು ಹಣ ನಿರ್ಮಾಪಕರು ಮತ್ತು ಚಾನೆಲ್ ನಡುವೆ ಹಂಚಿಕೆಯಾಗುತ್ತದೆ.

  • ದಾಖಲೆಯ ಮೊತ್ತಕ್ಕೆ ರಾಬರ್ಟ್ ಖರೀದಿಗೆ ಮುಂದಾಯ್ತಾ ಅಮೆಜಾನ್ ಪ್ರೈಮ್?

    ದಾಖಲೆಯ ಮೊತ್ತಕ್ಕೆ ರಾಬರ್ಟ್ ಖರೀದಿಗೆ ಮುಂದಾಯ್ತಾ ಅಮೆಜಾನ್ ಪ್ರೈಮ್?

    ಬೆಂಗಳೂರು: ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರಿಗೆ ಅಪ್ಯಾಯಮಾನವಾಗಿವೆ. ಹೀಗಾಗಿ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಪರಿಸ್ಥಿತಿ ಸಹಜವಾಗಿ ಇದ್ದಿದ್ದರೆ, ಇಷ್ಟೊತ್ತಿಗೆ ಡಿ ಬಾಸ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತಿತ್ತು. ಏಕೆಂದರೆ ಏಪ್ರಿಲ್ 9 ರಂದು ರಾಬರ್ಟ್ ಚಿತ್ರ ಡುಗಡೆ ಆಗಬೇಕಿತ್ತು. ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಎಲ್ಲವೂ ಅಲ್ಲೋಲಕಲ್ಲೋಲವಾಗಿದೆ. ಸಿನಿಮಾ ರಂಗದ ಸ್ಥಿತಿಯಂತೂ ಹೇಳತೀರದಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ.

    ಇಷ್ಟು ದಿನ ಟೀಸರ್, ಹಾಡುಗಳು ಸೇರಿದಂತೆ ಸಿನಿಮಾ ಕುರಿತು ವಿವಿಧ ರೀತಿಯಲ್ಲಿ ಅಪ್‍ಡೇಟ್ ನೀಡುತ್ತಿದ್ದ ರಾಬರ್ಟ್ ಚಿತ್ರತಂಡ, ಇದೀಗ ಮೌನಕ್ಕೆ ಶರಣಾಗಿದೆ. ಈ ಹಿಂದೆ ಸ್ವತಃ ಡಿ ಬಾಸ್ ಟ್ವೀಟ್ ಮಾಡಿ ಲಾಕ್‍ಡೌನ್ ಇರುವುದರಿಂದ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದ್ದರು. ಇದಾದ ಬಳಿಕ ಸಿನಿಮಾ ಕುರಿತು ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ.

    ಈ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ರಾಬರ್ಟ್ ತೆರೆಗೆ ಬರಲಿದೆ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಲ್ಲ. ಸಿನಿಮಾ ಬಿಡುಗಡೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಇನ್ನೊಂದು ಸುದ್ದಿ ಹೊರ ಬಿದ್ದಿದೆ. ಓಟಿಟಿ ಪ್ಲಾಟ್‍ಫಾರ್ಮ್ ಆಗಿರುವ ಅಮೆಜಾನ್ ಪ್ರೈಮ್ ದಾಖಲೆ ಮೊತ್ತಕ್ಕೆ ರಾಬರ್ಟ್ ಸಿನಿಮಾ ಖರೀದಿಸಲು ಮುಂದಾಗಿದೆಯಂತೆ.

    ಲಾಕ್‍ಡೌನ್ ಇರುವ ಹಿನ್ನೆಲೆ ಇದನ್ನೇ ಅವಕಾಶವನ್ನಾಗಿ ಬಳಿಸಿಕೊಂಡಿರುವ ಒಟಿಟಿ ಪ್ಲಾಟ್‍ಫಾರ್ಮ್‍ಗಳು, ಥೀಯೇಟರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳನ್ನು ಖರೀದಿಸಲು ಮುಂದಾಗಿವೆ. ಈ ಕುರಿತು ಹಲವು ಭಾಷೆಗಳ ಸಿನಿಮಾ ಇಂಡಸ್ಟ್ರಿಗಳಲ್ಲಿ ಚರ್ಚೆ ನಡೆದಿದೆ. ಅದೇ ರೀತಿ ಇದೀಗ ಅಮೆಜಾನ್ ಪ್ರೈಮ್ ರಾಬರ್ಟ್ ಚಿತ್ರಕ್ಕೂ ಬೇಡಿಕೆ ಇಟ್ಟಿದೆ. ಆದರೆ ಈ ಆಫರ್ ನ್ನು ನಿರ್ಮಾಪಕರು ತಿರಸ್ಕರಿಸಿದ್ದಾರಂತೆ.

    ಡಿ ಬಾಸ್ ಸಿನಿಮಾ ಎಂದರೆ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬ ಇದ್ದಂತೆ. ಚಿತ್ರ ರಿಲೀಸ್ ಆಗುತ್ತಿದ್ದಂತೆ ಸಂಭ್ರಮಾಚರಣೆ, ಕಟೌಟ್ ಹಾಕುವುದು, ಫಸ್ಟ್ ಡೇ ಫಸ್ಟ್ ಶೋ ನೋಡುವುದು ಹೀಗೆ ಅಭಿಮಾನಿಗಳು ಯೋಜನೆ ರೂಪಿಸಿರುತ್ತಾರೆ. ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆ ಮಾಡಿದರೆ ಈ ಸಂಭ್ರಮವೆಲ್ಲ ತಪ್ಪುತ್ತದೆ. ಹಣಕ್ಕಿಂತ ಅಭಿಮಾನಿಗಳ ಸಂಭ್ರಮ ಮುಖ್ಯ ಎಂದು ತೀರ್ಮಾನಿಸಿ ನಿರ್ಮಾಪಕರು ಈ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ತಡವಾದರೂ ಅಡ್ಡಿಯಿಲ್ಲ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರಂತೆ.

    ರಾಬರ್ಟ್ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಜಗಪತಿಬಾಬು, ರವಿ ಕಿಶನ್, ದೇವರಾಜ್ ಹಾಗೂ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

  • ರಾಬರ್ಟ್ ಚಿತ್ರ ತಂಡದಿಂದ ಸರ್ಪ್ರೈಸ್- ಕ್ಯಾಮೆರಾ ಹಿಂದಿನ ಸೈನಿಕರಿಗೆ ನಮನ

    ರಾಬರ್ಟ್ ಚಿತ್ರ ತಂಡದಿಂದ ಸರ್ಪ್ರೈಸ್- ಕ್ಯಾಮೆರಾ ಹಿಂದಿನ ಸೈನಿಕರಿಗೆ ನಮನ

    ಬೆಂಗಳೂರು: ಕಾರ್ಮಿಕ ದಿನಾಚರಣೆ ಮೂಲಕ ಶ್ರಮಿಕ ವರ್ಗಕ್ಕೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಸಂಸ್ಥೆಗಳು ರಜೆ ನೀಡುತ್ತವೆ. ಅದೇ ರೀತಿ ರಾಬರ್ಟ್ ಚಿತ್ರ ತಂಡ ಶ್ರಮಿಕ ವರ್ಗಕ್ಕೆ ವಿಶೇಷವಾಗಿ ಗೌರವ ಸಲ್ಲಿಸಲು ಮುಂದಾಗಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ ಆಗಾಗ ಸರ್ಪ್ರೈಸ್ ನೀಡುತ್ತಲೇ ಇದ್ದು, ಈಗಾಗಲೇ ಚಿತ್ರದ ಟೀಸರ್ ಹಾಗೂ ಮೂರು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದೆ. ಆದರೆ ಈ ಬಾರಿ ಅಭಿಮಾನಿಗಳ ಜೊತೆಗೆ ಶ್ರಮಿಕ ವರ್ಗವನ್ನು ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ. ಒಂದು ಚಿತ್ರ ತಯಾರಾಗಬೇಕಾದರೆ ತೆರೆಯ ಹಿಂದಿನ ಹೀರೋಗಳು ಸಾಕಷ್ಟು ಶ್ರಮಿಸಬೇಕಾಗುತ್ತದೆ. ಇದರಲ್ಲಿ ಲೈಟ್ ಬಾಯ್ಸ್ ಸೇರಿದಂತೆ ಇತರೆ ದಿನಗೂಲಿ ನೌಕರರ ಪಾತ್ರ ಮಹತ್ವದ್ದು.

    ಇದನ್ನರಿತ ಚಿತ್ರ ತಂಡ ಮೇ 1 ಅಂದರೆ ಇದೇ ಶುಕ್ರವಾರ ಕಾರ್ಮಿಕರಿಗಾಗಿಯೇ ಸಿದ್ಧಪಡಿಸಿದ ಗೀತೆಯೊಂದನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಕಾರ್ಮಿಕರಿಗೆ ಗೀತ ನಮನ ಸಲ್ಲಿಸುತ್ತಿದೆ. ಈಗಾಗಲೇ ಮೂರು ಹಾಡುಗಳೊಂದಿಗೆ ಅಭಿಮಾನಿಗಳು ಹಾಗೂ ಚಿತ್ರ ರಸಿಕರನ್ನು ರಂಜಿಸಿರುವ ಚಿತ್ರ ತಂಡ ಇದೀಗ ಕಾರ್ಮಿಕರನ್ನು ನೆನೆಯುತ್ತಿದೆ.

    ಈ ಕುರಿತು ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಪರದೆಯಲ್ಲಿ ಮ್ಯಾಜಿಕ್ ನಡೆಯಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದುಡಿದಿರುವ ಆಫ್‍ಸ್ಕ್ರೀನ್ ವಾರಿಯರ್ಸ್ ಕುರಿತು ರಾಬರ್ಟ್ ಚಿತ್ರ ತಂಡ ವಿಡಿಯೋ ಸಿದ್ಧಪಡಿಸಿದೆ. ಡಿ ಬಾಸ್ ಹಾಗೂ ರಾಬರ್ಟ್ ಕುರಿತ ಮೇಕಿಂಗ್ ವಿಡಿಯೋವನ್ನು ಕಾರ್ಮಿಕರ ದಿನ ಮೇ 1ರಂದು ಬೆಳಗ್ಗೆ 10.05ಕ್ಕೆ ಉಮಾಪತಿ ಫಿಲಂಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ರಾಬರ್ಟ್ ಚಿತ್ರ ಇಷ್ಟೊತ್ತಿಗಾಗಲೇ ತೆರೆಕಂಡು ಘರ್ಜನೆ ಮುಂದುವರಿಸಬೇಕಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಸಿನಿಮಾ ವಲಯದ ಎಲ್ಲ ಕೆಲಸಗಳು ಸ್ಥಗಿತವಾಗಿವೆ. ಹೀಗಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿರುವುದಾಗಿ ಹಾಗೂ ಪರಿಸ್ಥಿತಿ ತಿಳಿಯಾದ ನಂತರ ಚಿತ್ರ ಬಿಡುಗಡೆಯಾಗುತ್ತದೆ ಎಂದು ಸ್ವತಃ ದಾಸ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏ.4ರಂದು ಚಿತ್ರ ತೆರೆಗೆ ಬರಬೇಕಿತ್ತು.

    ಡಿ ಬಾಸ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಆಶಾ ಭಟ್, ಜಗಪತಿ ಬಾಬು, ರವಿಶಂಕರ್, ಪ್ರಮುಖ ಮಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ.