Tag: Roberrt

  • ಬಾಲಿವುಡ್‍ಗಿಂತ ಕನ್ನಡದಲ್ಲೇ ನಟಿಸುವಾಸೆ: ರಾಬರ್ಟ್ ಬೆಡಗಿ

    ಬಾಲಿವುಡ್‍ಗಿಂತ ಕನ್ನಡದಲ್ಲೇ ನಟಿಸುವಾಸೆ: ರಾಬರ್ಟ್ ಬೆಡಗಿ

    ಬೆಂಗಳೂರು: ರಾಬರ್ಟ್ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಆಶಾ ಭಟ್ ಅವರಿಗೆ ಕನ್ನಡದಲ್ಲೇ ನಟಿಸುವಾಸೆಯಂತೆ. ಬಾಲಿವುಡ್‍ನಲ್ಲಿ ಸಿನಿಮಾ ಮಾಡಿದರೂ ನನಗೆ ಕನ್ನಡದ ಮೇಲೇ ಹೆಚ್ಚು ಪ್ರೀತಿ, ನಮ್ಮ ಜನರನ್ನೇ ರಂಜಿಸಲು ನನಗೆ ಹೆಚ್ಚು ಆಸೆ ಎಂದು ಹೇಳುವ ಮೂಲಕ ಕನ್ನಡಿಗರ ಮನಸು ಗೆದ್ದಿದ್ದಾರೆ.

    ಹೌದು ಈಗಾಗಲೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿ, ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಹಾಗೂ ಮೂಲತಃ ಕರ್ನಾಟಕದವರೇ ಆದ ಆಶಾ ಭಟ್ ತಮ್ಮ ನಟನೆ ಕರೀಯರ್ ಬಗ್ಗೆ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಆಶಾ ಭಟ್, ಇದೀಗ ಮತ್ತಷ್ಟು ಸಿನಿಮಾಗಳ ನಿರೀಕ್ಷೆಯಲ್ಲಿದ್ದು, ಈ ಕುರಿತು ಸುದ್ದಿಗಳು ಸಹ ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ತಮ್ಮ ನಟನೆ ಕರೀಯರ್ ಬಗ್ಗೆ ಮಾತನಾಡಿರುವ ಆಶಾ ಭಟ್, ಬಾಲಿವುಡ್ ಸಿನಿಮಾದಲ್ಲಿ ನಟಿಸಿದರೂ ಕನ್ನಡದಲ್ಲಿ ನಟಿಸಲು ತುಂಬಾ ಆಸೆ ಇದೆ ಎಂದಿದ್ದಾರೆ.

    ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ನಾನು ಸಿನಿಮಾ ಮಾಡಲು ನಿರ್ಧರಿಸಿದ ಬಳಿಕ ಭಾಷೆಯ ಎಲ್ಲೆ ಮೀರಿ ನಟಿಸಬೇಕು ಅಂದುಕೊಂಡೆ. ನನ್ನ ಮೊದಲ ಸಿನಿಮಾ ಬಾಲಿವುಡ್‍ನ ಜಂಗ್ಲಿ ಆದರೂ, ನನಗೆ ದಕ್ಷಿಣ ಭಾರತದ, ಅದರಲ್ಲೂ ಕನ್ನಡ ಸಿನಿಮಾಗಳಲ್ಲಿ ನಟಿಸಲು ತುಂಬಾ ಇಷ್ಟ. ನಾನು ಕರ್ನಾಟಕದವಳು, ಊರು ಭದ್ರಾವತಿ, ನನ್ನ ಮಾತೃ ಭಾಷೆ ಸಹ ಕನ್ನಡ. ಒಬ್ಬ ನಟಿಯಾಗಿ ವಿಭಿನ್ನ ನಟನೆ, ಡ್ಯಾನ್ಸ್ ಮೂಲಕ ನನ್ನ ಜನರನ್ನೇ ರಂಜಿಸಬೇಕು ಎಂಬುದು ನನ್ನ ಆಸೆ ಎಂದು ಮನದಾಳವನ್ನು ಹಂಚಿಕೊಂಡಿದ್ದಾರೆ.

    ರಾಬರ್ಟ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಾಗ, ಕನ್ನಡದ ಚೊಚ್ಚಲ ಸಿನಿಮಾ ಈ ರೀತಿ ದೊಡ್ಡ ಮಟ್ಟದಲ್ಲಿ ಇರುತ್ತೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ರಾಬರ್ಟ್ ಸಿನಿಮಾಗೆ ನಾನು ಆಯ್ಕೆಯಾಗುತ್ತಿದ್ದಂತೆ ಚಿತ್ರ ತಂಡದವರು ಸಹ ಹೆಮ್ಮೆಪಟ್ಟರು, ‘ನಮ್ಮ ಕನ್ನಡತಿ’ ಎಂದು ಸ್ವಾಗತಿಸಿದರು. ಆದರೆ ಈ ಸಿನಿಮಾದಲ್ಲಿ ನಟಿಸಲು ನಾನು ಸಹ ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.

  • ರಾಬರ್ಟ್ ಸಿನಿಮಾ ನಿರ್ಮಾಪಕನ ಕೊಲೆಗೆ ಸಂಚು ಪ್ರಕರಣ- ಪ್ರಮುಖ ಆರೋಪಿಯ ಬಂಧನ

    ರಾಬರ್ಟ್ ಸಿನಿಮಾ ನಿರ್ಮಾಪಕನ ಕೊಲೆಗೆ ಸಂಚು ಪ್ರಕರಣ- ಪ್ರಮುಖ ಆರೋಪಿಯ ಬಂಧನ

    ಬೆಂಗಳೂರು: ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಸಂಬಂಧ ಮತ್ತೊಬ್ಬ ಕಿಂಗ್ ಪಿನ್ ರಾಜೇಶ್ ಅಲಿಯಾಸ್ ಕರಿಯನನ್ನ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

    ಮೂರು ತಿಂಗಳ ಹಿಂದೆ ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ನಡೆದಿತ್ತು. ಕೊನೆ ಕ್ಷಣದಲ್ಲಿ ಎಚ್ಚೆತ್ತ ಪೊಲೀಸರು, ಆ ಕೊಲೆಗೆ ರೆಡಿಯಾಗಿದ್ದ ಆರೋಪಿಗಳನ್ನು ಮಾರಕಾಸ್ತ್ರಗಳ ಸಮೇತ ಬಂಧಿಸಿದ್ದರು. ಈ ವೇಳೆ ಹಲವರು ಎಸ್ಕೇಪ್ ಕೂಡ ಆಗಿದ್ರು. ಅವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ರಾಜೇಶ್ ಅಲಿಯಾಸ್ ಕರಿಯ ಬಾಂಬೆ ರವಿ ಟೀಂ ನಲ್ಲಿ ಗುರುತಿಸಿಕೊಂಡಿದ್ದು, ಬಾಂಬೆ ರವಿ ಸೂಚನೆ ಯಂತೆ ಉಮಾಪತಿಯನ್ನು ಕೊಲೆ ಮಾಡಲು ತಂಡದೊಂದಿಗೆ ಪ್ಲ್ಯಾನ್ ಮಾಡಿಕೊಂಡಿದ್ದ ಎನ್ನಲಾಗಿದೆ.

    ಪೊಲೀಸರ ಎಂಟ್ರಿಯಾಗುತ್ತಲೇ ಕರಿಯ ತಪ್ಪಿಸಿಕೊಂಡು ನೇಪಾಳದ ಬಾರ್ಡರ್ ನಲ್ಲಿ ತಲೆಮರೆಸಿಕೊಂಡಿದ್ದನು. ಸತತ ಮೂರು ತಿಂಗಳು ಕಾರ್ಯಚರಣೆ ನಡೆಸಿದ ಪೊಲೀಸರು ರಾಜೇಶ್ ಅಲಿಯಾಸ್ ಕರಿಯನ್ನು ನೇಪಾಳದ ಗಡಿಯಲ್ಲಿ ಬಂಧಿಸಿದ್ದಾರೆ. ಲೋಕಲ್ ರೌಡಿಯಾಗಿದ್ದ ಕರಿಯ, ಬಾಂಬೆ ರವಿ ಜೊತೆಗೆ ಸೇರಿ ನ್ಯಾಷನಲ್ ಲೆವೆಲ್ ರೌಡಿ ಆಗಬೇಕು. ಹೆಸರು ಮಾಡಬೇಕು ಅಂತಾ ಆಸೆ ಪಟ್ಟಿದ್ದ. ಅದರಂತೆ ಕೆಲ ಉದ್ಯಮಿಗಳು, ಸಿನಿಮಾ ನಿರ್ಮಾಪಕರು, ನಟರಿಗೆ ಬೆದರಿಕೆ ಹಾಕುವುದು, ಕೊಲೆ, ವಸೂಲಿಯಂತ ದಂಧೆಗಳಲ್ಲಿ ತಲೆ ಹಾಕಿ ಬೆದರಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

    ಸದ್ಯ ಪೊಲೀಸರ ವಶದಲ್ಲಿರುವ ರಾಜೇಶ್ ಅಲಿಯಾಸ್ ಕರಿಯನ ವಿಚಾರಣೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬರಬೇಕಿದೆ.

  • ನಾನಲ್ಲ, ಇವರು ನಿಜವಾದ ಸಾರಥಿ: ದರ್ಶನ್

    ನಾನಲ್ಲ, ಇವರು ನಿಜವಾದ ಸಾರಥಿ: ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಸರಳತೆ. ಕಷ್ಟ ಕಾಲದಲ್ಲಿ ಕೈ ಹಿಡಿದರನ್ನ ಚಕ್ರವರ್ತಿ ಮರೆಯಲ್ಲ ಅನ್ನೋ ಮಾತಿದೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಎಷ್ಟೋ ಘಟನೆಗಳು ನಮ್ಮ ಮುಂದಿವೆ. ಇದೀಗ ತಮ್ಮನ್ನ ಶಾಲೆಗೆ ಕರೆದೊಯ್ಯುತ್ತಿದ್ದ ಸಾರಥಿಯನ್ನ ಭೇಟಿಯಾಗಿರುವ ದರ್ಶನ್, ಹಿರಿಯ ಸಾರಥಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಅಸಲಿ ಸಾರಥಿಯ ಫೋಟೋಗಳನ್ನ ಹಂಚಿಕೊಂಡಿರುವ ಯಜಮಾನ, ಸಾರಥಿಯಿಂದ ಇವತ್ತು ರಿಯಲ್ ಸಾರಥಿಯ ಭೇಟಿ. ನಾವು ಶಾಲೆಗೆ ತೆರಳುತ್ತಿದ್ದ ಕೆಎಸ್‍ಆರ್ಟಿಸಿಯ ರೂಟ್ ಬಸ್ ಚಾಲಕರಿವರು. 80ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿಜವಾದ ಸಾರಥಿಯನ್ನ ಭೇಟಿಯಾಗಿ ಶುಭಾಶಯ ತಿಳಿಸಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸರಳತೆ ಸಾಮ್ರಾಟ್ ನಮ್ಮ ಡಿ ಬಾಸ್ ಎಂದು ಕೊಂಡಾಡುತ್ತಿದ್ದಾರೆ. ಓರ್ವ ನೆಟ್ಟಿಗ ಅಂದು ಪ್ರಯಾಣಿಸುತ್ತಿದ್ದ ಬಸ್ ರೂಟ್ ನಂಬರ್ 24, ಇವರ ಹೆಸರು ಸುಂದರ್ ಅಂಕಲ್ ಅಲ್ವಾ ಎಂದು ಕಮೆಂಟ್ ಮಾಡಿದ್ದಾರೆ.

    ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಅಬ್ಬರಿಸುತ್ತಿದೆ. ಸಿನಿಮಾ ಬಿಡುಗಡೆಯಾದ ಮರುದಿನವೇ ಚಂದನವನದಲ್ಲಿ ಹೊಸ ದಾಖಲೆಯನ್ನ ಚಿತ್ರ ಬರೆದಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದು, ಅಲ್ಲಿಯ ಗೋ ಶಾಲೆ ವೀಕ್ಷಿಸಿದ್ದರು.

  • ರಾಯರ ದರ್ಶನ ಪಡೆಯುವುದೇ ಪುಣ್ಯ, ಸನ್ಮಾನ ಮುಖ್ಯವಲ್ಲ- ಮಂತ್ರಾಲಯದಲ್ಲಿ ದರ್ಶನ್‌

    ರಾಯರ ದರ್ಶನ ಪಡೆಯುವುದೇ ಪುಣ್ಯ, ಸನ್ಮಾನ ಮುಖ್ಯವಲ್ಲ- ಮಂತ್ರಾಲಯದಲ್ಲಿ ದರ್ಶನ್‌

    ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು.

    ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ದರ್ಶನ್‍ಗೆ ಸನ್ಮಾನಿಸಿ ಆಶೀರ್ವಚನ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ದರ್ಶನ್ ರಾಯರ ಅನುಗ್ರಹದಿಂದ ಮಾತ್ರ ಮಂತ್ರಾಲಯಕ್ಕೆ ಬರಲು ಸಾಧ್ಯ ಎಂದರು.

    ಇದಕ್ಕೂ ಮುನ್ನ ರಾಯರ ವೃಂದಾವನ ದರ್ಶನ ಪಡೆದು ಬಳಿಕ ಮಾತನಾಡಿದ ದರ್ಶನ್ ರಾಯರ ದರ್ಶನ ಪಡೆಯುವುದೇ ಪುಣ್ಯ, ಸನ್ಮಾನ ಮುಖ್ಯವಲ್ಲ.ರಾಬರ್ಟ್ ಸಿನೆಮಾ ತನ್ನ ಪಾಡಿಗೆ ತಾನು ಯಶಸ್ವಿಯಾಗುತ್ತಿದೆ. ರಾಬರ್ಟ್ 100 ದಿನ ಓಡಬಹುದು ಕಾದು ನೋಡಿ ಎಂದರು.

    ಈಗ ರಾಬರ್ಟ್ ನಡೆಯುತ್ತಿದೆ. ಮುಂದಿನ ಪ್ರಾಜೆಕ್ಟ್ ಮುಂದೆ ನೋಡೋಣ. ಅಭಿಮಾನಿಗಳು ಸಿನೆಮಾ ನೋಡುತ್ತಿದ್ದಾರೆ ಅವರಿಗೆ ನನ್ನ ಧನ್ಯವಾದಗಳು ಅಂತ ಕೃತಜ್ಞತೆ ತಿಳಿಸಿದರು.

    ಪೈರಸಿ ನಂತರವೂ ರಾಬರ್ಟ್‌ ಸಿನಿಮಾ ಓಡುತ್ತಿದೆ. ಪೈರಸಿ ಮಾಡಿ ಏನು ಮಾಡಿದರೋ ಅವರನ್ನೇ ಕೇಳಬೇಕು ಅಂತ ಅಸಮಾಧಾನ ವ್ಯಕ್ತಪಡಿಸಿದರು. ಮಂತ್ರಾಲಯದಲ್ಲೂ ಅಭಿಮಾನಿಗಳು ಡಿ ಬಾಸ್ ಎಂದು ಘೋಷಣೆ ಕೂಗಿ ತಮ್ಮ ನೆಚ್ಚಿನ ನಟನನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

  • ಎರಡನೇ ದಿನವೂ ಗಲ್ಲಾಪೆಟ್ಟಿಗೆಯಲ್ಲಿ ರಾಬರ್ಟ್ ಅಬ್ಬರ

    ಎರಡನೇ ದಿನವೂ ಗಲ್ಲಾಪೆಟ್ಟಿಗೆಯಲ್ಲಿ ರಾಬರ್ಟ್ ಅಬ್ಬರ

    ಬೆಂಗಳೂರು: ಗುರುವಾರ ತೆರಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ರಾಬರ್ಟ್ ಎರಡನೇ ದಿನವೂ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡಿದೆ. ಕರ್ನಾಟಕದಲ್ಲಿ ಎರಡನೇ ದಿನ ರಾಬರ್ಟ್ 12 ಕೋಟಿ 78 ಲಕ್ಷ ರೂ. ಹಣ ಗಳಿಸಿದೆ.

    ಬಿಕೆಟಿ ಮತ್ತು ಸೌತ್ ಕೆನರಾ – 5 ಕೋಟಿ(ಮಲ್ಟಿಪ್ಲೆಕ್ಸ್), ಎಂಎಂಸಿಎಚ್ -2 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆ -1.5 ಕೋಟಿ, ಶಿವಮೊಗ್ಗ -78 ಲಕ್ಷ, ಹೈದರಾಬಾದ್ ಕರ್ನಾಟಕ -2 ಕೋಟಿ, ಬಾಂಬೆ ಕರ್ನಾಟಕದಲ್ಲಿ 1.5 ಕೋಟಿ ಗಳಿಸಿದೆ.

    ಕರ್ನಾಟಕದಲ್ಲಿ ಮೊದಲ ದಿನವೇ 17. 24 ಕೋಟಿ ಗಳಿಸಿದರೆ ಆಂಧ್ರ- ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟು 20.36 ಕೋಟಿ ರೂ. ಗಳಿಕೆ ಮಾಡಿದೆ. ಈ ಮೊದಲು ಯಶ್ ಅಭಿನಯದ ಕನ್ನಡ ಕೆಜಿಎಫ್ ಮೊದಲ ದಿನ 12.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಕೋವಿಡ್ ಲಾಕ್‍ಡೌನ್ ಬಳಿಕ ಬಿಡುಗಡೆಯಾದ ಎರಡನೇ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ದಚ್ಚು ಅಭಿಮಾನಿಗಳು ಸಂತೋಷದಿಂದ ಸಲೆಬ್ರೆಟ್ ಮಾಡಿ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ.

  • ಕನ್ನಡದಲ್ಲಿ ರಾಬರ್ಟ್ ಹೊಸ ದಾಖಲೆ – ಮೊದಲ ದಿನವೇ 17.24 ಕೋಟಿ ಕಲೆಕ್ಷನ್

    ಕನ್ನಡದಲ್ಲಿ ರಾಬರ್ಟ್ ಹೊಸ ದಾಖಲೆ – ಮೊದಲ ದಿನವೇ 17.24 ಕೋಟಿ ಕಲೆಕ್ಷನ್

    ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ದಾಖಲೆ ಮಾಡಿದೆ. ಒಟ್ಟು 17.24 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬಿಡುಗಡೆಯಾದ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ.

     

    ಕರ್ನಾಟಕದಲ್ಲಿ ಮೊದಲ ದಿನವೇ 17. 24 ಕೋಟಿ ಗಳಿಸಿದರೆ ಆಂಧ್ರ – ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟು 20.36 ಕೋಟಿ ರೂ. ಗಳಿಕೆ ಮಾಡಿದೆ. ಈ ಮೊದಲು ಯಶ್ ಅಭಿನಯದ ಕನ್ನಡ ಕೆಜಿಎಫ್ ಮೊದಲ ದಿನ 12.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಕೋವಿಡ್ ಲಾಕ್‍ಡೌನ್ ಬಳಿಕ ಬಿಡುಗಡೆಯಾದ ಎರಡನೇ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ದಚ್ಚು ಅಭಿಮಾನಿಗಳು ಸಂತೋಷದಿಂದ ಸಲೆಬ್ರೆಟ್ ಮಾಡಿ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ.

    ಕಲೆಕ್ಷನ್ ವಿಚಾರವನ್ನು ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ ಟ್ವೀಟ್ ಮಾಡಿ ತಿಳಿಸಿದೆ. ಚಿತ್ರ ಮಂದಿರಗಳ ಮುಂದೆ ಜನಸಾಗರವೇ ಸೇರಿದೆ. ಸಿನಿಮಾ ಬಿಡುಗಡೆಯಾದ ಮೊದಲೇ ಕನ್ನಡ ಮತ್ತು ತೆಲಗು ವರ್ಷನ್ ಹಾಡುಗಳು ಎಲ್ಲಡೆ ಸದ್ದು ಮಾಡಿದ್ದು, ಸಿನಿಮಾ ಮೇಲೆ ಇರುವ ನೀರಿಕ್ಷೆಯನ್ನು ಹೆಚ್ಚಿಸಿತ್ತು. ಇದೀಗ ಸಿನಿಮಾ ಸೂಪರ್ ಎನ್ನುವ ಕೂಗು ಎಲ್ಲಡೆ ಕೇಳಿ ಬರುತ್ತಿದೆ.

    ಸರಿಸುಮಾರು ಒಂದೂವರೆ ವರ್ಷಗಳಿಂದ ದುಚ್ಚು ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ರಾಬರ್ಟ್ ಮೂಲಕ ದಚ್ಚುನ ಗ್ರ್ಯಾಂಡ್ ಎಂಟ್ರಿಗೆ ಅಭಿಮಾನಿಗಳು ಫೀದಾ ಆಗಿದ್ದಾರೆ. ಸಿನಿಮಾ ವೀಕ್ಷಣೆಗೆ ಚಿತ್ರಮಂದಿರಗಳತ್ತ ದಚ್ಚು ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಅಭಿಮಾನಿಗಳು ದಂಡು ಹರಿದು ಬರುತ್ತಿದೆ.

    ಎಲ್ಲೆಲ್ಲಿ ಎಷ್ಟು ಕಲೆಕ್ಷನ್?
    ಬೆಂಗಳೂರು ಕೋಲಾರ, ತುಮಕೂರು ಮತ್ತು ದಕ್ಷಿಣ ಕನ್ನಡ 7 ಕೋಟಿ ರೂ., ಮಂಡ್ಯ, ಮೈಸೂರು, ಚಾಮರಾಜನಗರ 2 ಕೋಟಿ ರೂ., ಚಿತ್ರದುರ್ಗ ಮತ್ತು ದಾವಣಗೆರೆ 2.24 ಕೋಟಿ ರೂ., ಶಿವಮೊಗ್ಗ 1 ಕೋಟಿ ರೂ., ಹೈದರಾಬಾದ್ ಕರ್ನಾಟಕ 3 ಕೋಟಿ ರೂ., ಬಾಂಬೆ ಕರ್ನಾಟಕ 2 ಕೋಟಿ ರೂ. ಗಳಿಸಿದೆ.

    ಎರಡನೇ ದಿನವೂ ತನ್ನ ವಿಜಯಯಾತ್ರೆ ಯನ್ನು ಅದ್ಧೂರಿಯಾಗಿ ಮುಂದುವರಿಸಿದ್ದು ಶನಿವಾರ, ಭಾನುವಾರ ರಜೆ ಇರುವ ಕಾರಣ ಮತ್ತಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಥಿಯೇಟರ್ ಕಡೆ ಬರಲಿದ್ದಾರೆ.

  • ಶಿವರಾತ್ರಿಯಂದು ದಚ್ಚು ಅಭಿಮಾನಿಗಳಿಗೆ ರಾಬರ್ಟ್ ಜಾತ್ರೆ

    ಶಿವರಾತ್ರಿಯಂದು ದಚ್ಚು ಅಭಿಮಾನಿಗಳಿಗೆ ರಾಬರ್ಟ್ ಜಾತ್ರೆ

    ಬೆಂಗಳೂರು: ರಾಬರ್ಟ್ ಸಿನಿಮಾ ಕರ್ನಾಟಕದ 656 ಚಿತ್ರಮಂದಿರ, ನೂರಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್, ಆಂಧ್ರಪ್ರದೇಶದಲ್ಲಿ 433 ಥಿಯೇಟರ್, ತೆಲಂಗಾಣದಲ್ಲಿ 407 ಥಿಯೇಟರ್‍ಗಳಲ್ಲಿ ರಾರಾಜಿಸುತ್ತಿದೆ.

    ದರ್ಶನ್ ಜೊತೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದು ತರುಣ್ ಸುಧೀರ್ ಚಿತ್ರವನ್ನ ನಿರ್ದೇಶಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ಚಿತ್ರವನ್ನ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯಾ ಹಾಡುಗಳು ಈಗಾಗಲೇ ಹಿಟ್ ಆಗಿದೆ.

    ಬೆಳಗ್ಗೆ ಆರು ಗಂಟೆಯಿಂದಲೇ ಶೋ ಆರಂಭಗೊಂಡಿದ್ದು, ಚಿತ್ರಮಂದಿರಗಳ ಮುಂದೆ ಹೌಸ್‍ಫುಲ್ ಬೋರ್ಡ್ ಕಾಣಿಸುತ್ತಿದೆ. ರಾಜ್ಯದ ಎಲ್ಲ ಕಡೆ ಚಿತ್ರಮಂದಿರಗಳ ಮುಂದೆ ದರ್ಶನ್ ಕಟೌಟ್ ಗಳು ಅಬ್ಬರಿಸುತ್ತಿವೆ.

  • ರಾಬರ್ಟ್ ಸ್ವಾಗತಕ್ಕೆ ಭರ್ಜರಿ ಸಿದ್ಧತೆ – ಥಿಯೇಟರ್‌ಗಳ ಮುಂದೆ ಮಿಂಚುತ್ತಿದೆ ಕಟೌಟ್‍ಗಳು

    ರಾಬರ್ಟ್ ಸ್ವಾಗತಕ್ಕೆ ಭರ್ಜರಿ ಸಿದ್ಧತೆ – ಥಿಯೇಟರ್‌ಗಳ ಮುಂದೆ ಮಿಂಚುತ್ತಿದೆ ಕಟೌಟ್‍ಗಳು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸ್ವಾಗತಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

    ಹೌದು. ಮಾರ್ಚ್ 11ಕ್ಕೆ ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿದೆ. ಇದೀಗ ದಾಸನ ಅಭಿಮಾನಿಗಳು ಚಿತ್ರವನ್ನು ಭರ್ಜರಿಯಾಗಿ ಸ್ವಾಗತ ಮಾಡಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ರಾಬರ್ಟ್ ರಿಲೀಸ್ ಸಂಭ್ರಮ ಶುರುವಾಗಿದೆ. ಥಿಯೇಟರ್ ಗಳ ಮುಂದೆ ದರ್ಶನ್ ಕಟೌಟ್ ಮಿಂಚುತ್ತಿದೆ.

    ಎಂಜಿ ರಸ್ತೆಯ ಶಂಕರ್ ನಾಗ್ ಚಿತ್ರಮಂದಿರದಲ್ಲಿ ರಾಬರ್ಟ್ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಎಂಜಿ ರಸ್ತೆಯಲ್ಲಿ ಕನ್ನಡ ಸಿನಿಮಾದ ಕಟೌಟ್ ಹಾಕಲಾಗ್ತಿದೆ.

    ಈ ಹಿಂದೆ ಫೇಸ್‍ಬುಕ್ ನಲ್ಲಿ ಲೈವ್ ಬಂದಿದ್ದ ದಾಸ ಮಾರ್ಚ್ 11ಕ್ಕೆ ಸಿನಿಮಾ ರಿಲೀಸ್ ಆಗುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ ಓಟಿಟಿ ಪ್ಲಾಟ್‍ಫಾರಂನಲ್ಲಿ ಸಿನಿಮಾ ಬಿಡುಗಡೆಗೆ ದರ್ಶನ್ ವಿರೋಧ ವ್ಯಕ್ತಪಡಿಸಿದ್ದರು. ಥಿಯೇಟರ್ ನಲ್ಲಿ ಕೇಳುವ ಚಪ್ಪಾಳೆಗಳೇ ನಮಗೆ ಮುಖ್ಯ. ಸದ್ಯ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೂ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರು.

  • ಬೆಣ್ಣೆ ನಗರಿಯಲ್ಲಿ ರಾಬರ್ಟ್ ರಿಲ್ಯಾಕ್ಸ್

    ಬೆಣ್ಣೆ ನಗರಿಯಲ್ಲಿ ರಾಬರ್ಟ್ ರಿಲ್ಯಾಕ್ಸ್

    ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮ ಮುಗಿಸಿ ಬೆಣ್ಣೆ ನಗರಿಗೆ ಆಗಮಿಸಿದ್ದ ದರ್ಶನ್ ಕೆಲ ಕಾಲ ರಿಲ್ಯಾಕ್ ಆಗಿ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ದಾರೆ.

    ನಗರದ ಬಾಪೂಜಿ ಗೆಸ್ಟ್ ಹೌಸ್‍ಗೆ, ದರ್ಶನ್ ಜೊತೆ ಹಾಸ್ಯ ನಟ ಚಿಕ್ಕಣ್ಣ ಹಾಗೂ ವಿನೋದ್ ಪ್ರಭಾಕರ್ ಕೂಡ ಆಗಮಿಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಪ್ರೀ ರಿಲೀಸ್ ಮುಗಿಸಿ ನೇರವಾಗಿ ದಾವಣಗೆರೆಗೆ ಆಗಮಿಸಿದ್ದು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮನೆಗೆ ಕೂಡ ಭೇಟಿ ನೀಡಿ ಅವರ ಜೊತೆ ಊಟ ಮಾಡಿ ಕೆಲ ಹೊತ್ತು ಹರಟೆ ಹೊಡೆದು ಸಮಯ ಕಳೆದು ರಿಲಾಕ್ಸ್ ಆಗಿದ್ದ ಬೆಂಗಳೂರಿಗೆ ಮರಳಿದ್ದಾರೆ.

    ದರ್ಶನ್ ಜೊತೆ ವಿನೋದ್ ಪ್ರಭಾಕರ್ ಹಾಗೂ ಚಿಕ್ಕಣ್ಣ ಸೇರಿ ಹತ್ತಕ್ಕೂ ಹೆಚ್ಚು ಜನ ಚಿತ್ರರಂಗದ ಕಲಾವಿದರಿದ್ದರು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಂದ ಆಗಮಿಸಿದ್ದ ನಟರಿಗೆ ಸನ್ಮಾನ ಮಾಡಲಾಯಿತು. ಇನ್ನು ದರ್ಶನ್ ನೋಡಲು ಅಭಿಮಾನಿಗಳು ಬಾಪೂಜಿ ಗೆಸ್ಟ್ ಹೌಸ್ ಬಳಿ ಜಮಾಯಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

  • ಗಂಡು ಮೆಟ್ಟಿದ ನಾಡಲ್ಲಿ ರಾಬರ್ಟ್ ಅಬ್ಬರ – ಪ್ರಿ-ರಿಲೀಸ್‍ನಲ್ಲಿ ದರ್ಶನ್ ಡೈಲಾಗ್‍ಗಳ ಆರ್ಭಟ

    ಗಂಡು ಮೆಟ್ಟಿದ ನಾಡಲ್ಲಿ ರಾಬರ್ಟ್ ಅಬ್ಬರ – ಪ್ರಿ-ರಿಲೀಸ್‍ನಲ್ಲಿ ದರ್ಶನ್ ಡೈಲಾಗ್‍ಗಳ ಆರ್ಭಟ

    ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿ ‘ರಾಬರ್ಟ್’ ಅಬ್ಬರಿಸಿದ್ದಾನೆ.

    ಹೌದು. ಡಿ ಬಾಸ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ಲಕ್ಷಾಂತರ ಅಭಿಮಾನಿಗಳು ಡಿ ಬಾಸ್ ದರ್ಶನ ಪಡೆದ್ರು. ನಗರದ ರೈಲ್ವೆ ಮೈದಾನದಲ್ಲಿ ನಡೆದ ರಾಬರ್ಟ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷದಷ್ಟು ಅಭಿಮಾನಿಗಳು ಜಮಾಯಿಸಿದ್ರು.

    ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ಸಮಾರಂಭದಲ್ಲಿ ನಾಯಕಿ ನಟಿ ಆಶಾ ಭಟ್, ದೇವರಾಜ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ರವಿಶಂಕರ್, ವಿನೋದ್ ಪ್ರಭಾಕರ್, ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರ ತಂಡ ಭಾಗವಹಿಸಿತ್ತು.

    ಈ ವೇಳೆ ದರ್ಶನ್ ಡೈಲಾಗ್ ಹೊಡೆದ್ರು. ತಮ್ಮ ನೆನಪುಗಳನ್ನ ಹಚ್ಚಿಕೊಂಡರು. ಹಾಡು-ಡ್ಯಾನ್ಸ್‍ನಿಂದ ವೇದಿಕೆ ರಂಗೇರಿತ್ತು. ಸಮಾರಂಭದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಬಿ.ಸಿ.ಪಾಟೀಲ್ ಕೂಡ ಭಾಗವಹಿಸಿದ್ರು.