Tag: robbing

  • ದೇವಸ್ಥಾನ ಕಳ್ಳತನಕ್ಕೆ 7 ಬೀದಿನಾಯಿಗಳನ್ನು ಕೊಂದ ಕಳ್ಳರು

    ದೇವಸ್ಥಾನ ಕಳ್ಳತನಕ್ಕೆ 7 ಬೀದಿನಾಯಿಗಳನ್ನು ಕೊಂದ ಕಳ್ಳರು

    ಬಿಹಾರ: ದೇವಸ್ಥಾನವನ್ನು ದರೋಡೆ ಮಾಡುವ ಮೊದಲು ಕಳ್ಳರು 7 ಬೀದಿ ನಾಯಿಗಳನ್ನು ಕೊಂದಿರುವ ಘಟನೆ ಬಿಹಾರದ ಕೈಮೂರ್‌ನಲ್ಲಿ ನಡೆದಿದೆ.

    ಬಿಹಾರದ ಕೈಮೂರ್‌ನ ದೇವಸ್ಥಾನದಲ್ಲಿ ನಡೆದ ದರೋಡೆಯ ಸಂದರ್ಭದಲ್ಲಿ ಏಳು ನಾಯಿಗಳು ಸಾವನ್ನಪ್ಪಿವೆ. ಕಳ್ಳರು ಬೀದಿ ನಾಯಿಗಳಿಗೆ ವಿಷ ಉಣಿಸಿ ನಂತರ ದೇವಸ್ಥಾನದ ಬಾಗಿಲನ್ನು ಒಡೆದು ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ 15,000 ರೂ.ಗಳನ್ನು ಕದ್ದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಶ್ವಾನಗಳು ಘಟನಾ ಸ್ಥಳದ ಸಮೀಪವೇ ಸಾವನ್ನಪ್ಪಿವೆ. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

    POLICE JEEP

    ಅರ್ಚಕರು ಇಂದು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಹೋದ ನಂತರ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು  ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ:  ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್

    ಘಟನೆ ಕುರಿತು ಪ್ರತಿಕ್ರಿಯಿಸಿರುವ ದೇವಸ್ಥಾನದ ಕಾರ್ಯದರ್ಶಿ ಧೀರೇಂದ್ರ ಪ್ರತಾಪ್ ಸಿಂಗ್, ದೇಗುಲದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ 15 ರಿಂದ 20 ಸಾವಿರ ರೂಪಾಯಿ ಕದ್ದಿದ್ದಾರೆ. ದೇವಸ್ಥಾನದ ಬಳಿ ವಾಸಿಸುತ್ತಿದ್ದ ಏಳು ಅಮಾಯಕ ಪ್ರಾಣಿಗಳಿಗೂ ವಿಷ ಹಾಕಿ ಸಾಯಿಸಲಾಗಿದೆ. ಈ ಮುಗ್ಧ ಜೀವಿಗಳು ಆರತಿಯ ನಂತರ ಪ್ರಸಾದ ತೆಗೆದುಕೊಳ್ಳಲು ದೇವಸ್ಥಾನದಲ್ಲಿಯೇ ಇರುತ್ತಿದ್ದವು. ಕಳ್ಳರೂ ಅವುಗಳನ್ನು ಬಿಡಲಿಲ್ಲ. ಈ ವಿಷಯವನ್ನು ಆದಷ್ಟು ಬೇಗ ಬಹಿರಂಗಪಡಿಸಬೇಕೆಂದು ನಾನು ಆಡಳಿತವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.