Tag: Robbers

  • ವಿಜಯಪುರದಲ್ಲಿ ಮುಸುಕುಧಾರಿ ಗ್ಯಾಂಗ್‌ ಅಟ್ಟಹಾಸ – ದರೋಡೆಕೋರರ ಬೆನ್ನತ್ತಿ ಗುಂಡಿಟ್ಟ ಖಾಕಿ ಪಡೆ

    ವಿಜಯಪುರದಲ್ಲಿ ಮುಸುಕುಧಾರಿ ಗ್ಯಾಂಗ್‌ ಅಟ್ಟಹಾಸ – ದರೋಡೆಕೋರರ ಬೆನ್ನತ್ತಿ ಗುಂಡಿಟ್ಟ ಖಾಕಿ ಪಡೆ

    ವಿಜಯಪುರ: ನಗರದಲ್ಲಿ ಖತರ್ನಾಕ್ ಮುಸುಕುಧಾರಿಗಳ ಗ್ಯಾಂಗ್ ದಾಂಧಲೆ ನಡೆಸಿದೆ. ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ ಮುಸುಕುಧಾರಿಗಳು ನಗರದ ಜೈನಾಪೂರ ಲೈಔಟ್‌ನಲ್ಲಿ ಅಟ್ಟಹಾಸ ಮೆರೆದಿದ್ದಾರೆ. ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಹಲ್ಲೆ ಮಾಡಿ ಬಂಗಾರ ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರ ಬೆನ್ನುಹತ್ತಿದ್ದ ಪೊಲಿಸರು ಗುಂಡಿನ ದಾಳಿ ಮಾಡಿದ್ದಾರೆ.

    ಕೈಯ್ಯಲ್ಲಿ ಕೊಡಲಿ, ರಾಡ್, ತಲ್ವಾರ್‌ ಹಿಡಿದು ಬರ್ತಿರೋ ಮುಸುಕುಧಾರಿ ಗ್ಯಾಂಗ್ ವಿಜಯಪುರ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಮುಸುಕುಧಾರಿಗಳ ಗ್ಯಾಂಗ್ ಜಿಲ್ಲೆಯಲ್ಲಿ ಆಕ್ಟೀವ್‌ ಆಗಿದ್ದು, ಒಂದು ವಾರದಲ್ಲಿ ಜಿಲ್ಲೆಯ ಮೂರು ಕಡೆ ದರೋಡೆ ನಡೆಸಿದ್ದಾರೆ. ಗುರುವಾರ ತಡರಾತ್ರಿ ನಗರದ ಜೈನಾಪುರ ಬಡಾವಣೆಯಲ್ಲಿ ಸಂತೋಷ ಎಂಬುವರ ಮನೆಯ ಬಾಗಿಲು ಮುರಿದು ನುಗ್ಗಿ ಸಂತೋಷನ ಪತ್ನಿಯ ಬಂಗಾರದ ಮಾಂಗಲ್ಯ ಸರ ಕದ್ದಿದ್ದಾರೆ. ಅಲ್ಲದೇ ಇದನ್ನ ತಡೆಯಲು ಬಂದ ಸಂತೋಷನ ಮೇಲೆ ಚಾಕುವಿನಿಂದ ಮೂರು ಕಡೆ ಚುಚ್ಚಿ ಮೊದಲನೇ ಮಹಡಿಯಿಂದ ಬಿಸಾಕಿ ಪರಾರಿಯಾಗಿದ್ದಾರೆ. ಈ ದರೋಡೆಕೋರರನ್ನ ಬೆನ್ನುಹತ್ತಿದ್ದ ಗೋಲ್‌ಗುಂಬಜ್‌ ಪೊಲೀಸರ ಶುಕ್ರವಾರ (ಇಂದು) ಬೆಳಗ್ಗಿನ ಜಾವ ನಗರದ ಹೊರವಲಯದ ಬೆಂಗಳೂರಿನ ಟೋಲ್ ಬಳಿ ದರೋಡೆಕೋರರನ್ನ ಚೇಸ್ ಮಾಡಿದ್ದಾರೆ. ಆಗ ಬೈಕ್ ಮೇಲಿಂದ ತಪ್ಪಿಸಿಕೊಳ್ಳಲು ದರೋಡೆಕೋರರು ಯತ್ನಿಸಿದ್ದು ಪೊಲೀಸರು ಗುಂಡು ಹಾರಿಸಿದ್ದಾರೆ.

    ಈ ವೇಳೆ ಒಟ್ಟು ನಾಲ್ವರು ದರೋಡೆಕೋರರು ಇದ್ದರು ಎನ್ನಲಾಗಿದೆ. ಪೊಲೀಸರು 5 ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಓರ್ವ ಆರೋಪಿ ಕಾಲಿಗೆ ಮೂರು ಗುಂಡು ತಗುಲಿದೆ. ಮಧ್ಯಪ್ರದೇಶ ಮೂಲದ ಮಹೇಶ್‌ ಎಂಬ ಆರೋಪಿಗೆ ಗುಂಡು ತಗುಲಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

    ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾಗ, ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ಆಗ ಅವರನ್ನ ಪೋಲಿಸರು ಚೇಸ್ ಮಾಡಿದ್ದಾರೆ. ದರೋಡೆಕೋರರು ಬೈಕ್ ಮೇಲೆ ಪರಾರಿಯಾಗಲು ಯತ್ನಿಸಿದ್ದಾಗ ಗುಂಡು ಹಾರಿಸಿದ್ದು, ಎಡಗಾಲಿಗೆ 2 ಗುಂಡು, ಬಲಗಾಲಿಗೆ ಒಂದು ಗುಂಡು ತಗುಲಿದೆ. ಸದ್ಯ ಆರೋಪಿ ಮಹೇಶ್‌ನ ಆರೋಗ್ಯ ಸ್ಥರವಾಗಿದೆ. ಸ್ಕ್ಯಾನಿಂಗ್‌ಗೆ ಒಳಪಡಿಸಿದ ನಂತರ ಗುಂಡು ತಗುಲಿದೆಯಾ ಇಲ್ವಾ ಅನ್ನೊದು ಗೊತ್ತಾಗಲಿದೆ ಅಂತಾ ಜಿಲ್ಲಾಸ್ಪತ್ರೆಯ ಸರ್ಜನ್ ಶಿವಾನಂದ ಮಾಸ್ತಿಹೊಳಿ ʻಪಬ್ಲಿಕ್ ಟಿವಿʼಗೆ ಸ್ಪಷ್ಟಪಡಿಸಿದ್ದಾರೆ.

    ಇನ್ನೂ ಮೂವರು ದರೋಡೆಕೋರರು ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಈ ನಡುವೆ ಕೆಲವು ಸ್ಥಳೀಯರು ದರೋಡೆಕೋರರನ್ನ ಹಿಡಿಯಲು ಹಕ್ಕು ಕೊಡಿ, ನಾವು ರಾತ್ರಿ ಹೊತ್ತು ಗಸ್ತು ಕಾಯುತ್ತೇವೆ ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ.

  • ಚಿನ್ನ ಕದಿಯಲು ಹೋದಾಗ ತನ್ನದೇ ಗ್ಯಾಂಗ್‌ನಿಂದ ಗುಂಡೇಟು – ಪರಾರಿಯಾಗಿದ್ದ ಆರೋಪಿ ಮಧ್ಯಪ್ರದೇಶ ಆಸ್ಪತ್ರೆಯಲ್ಲಿ ಸಾವು

    ಚಿನ್ನ ಕದಿಯಲು ಹೋದಾಗ ತನ್ನದೇ ಗ್ಯಾಂಗ್‌ನಿಂದ ಗುಂಡೇಟು – ಪರಾರಿಯಾಗಿದ್ದ ಆರೋಪಿ ಮಧ್ಯಪ್ರದೇಶ ಆಸ್ಪತ್ರೆಯಲ್ಲಿ ಸಾವು

    ಬೆಂಗಳೂರು: ಕೊಡಿಗೇಹಳ್ಳಿಯ ಚಿನ್ನದಂಗಡಿ ದರೋಡೆ ಯತ್ನದ ವೇಳೆ ತಮ್ಮ ಗುಂಪಿನವರೇ ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಸೂರಜ್ ಮಧ್ಯಪ್ರದೇಶದ ಗ್ವಾಲಿಯರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

    ಮಾ.14 ರಂದು ಕೊಡಿಗೇಹಳ್ಳಿಯ ಲಕ್ಷ್ಮೀ ಬ್ಯಾಂಕರ್ಸ್ & ಜ್ಯುವೆಲರ್ಸ್ ದರೋಡೆಗೆ ನಾಲ್ವರ ಗುಂಪು ಯತ್ನಿಸಿತ್ತು. ಈ ವೇಳೆ ದರೋಡೆಕೋರರ ಗುಂಪು ಗುಂಡು ಹಾರಿಸಿತ್ತು. ಪರಿಣಾಮ ಮಾಲೀಕ ಹಾಗೂ ಕೆಲಸಗಾರರೊಬ್ಬರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಇದೇ ವೇಳೆ ಅದೇ ಗ್ಯಾಂಗ್‍ನ ಆರೋಪಿ ಆಶು ಪಂಡಿತ್ ಹಾರಿಸಿದ್ದ ಗುಂಡು ಸೂರಜ್ ಕತ್ತಿಗೆ ತಗುಲಿತ್ತು. ಬಳಿಕ ಜನ ಸೇರುತ್ತಿದ್ದಂತೆ ಆತನನ್ನು ಕರೆದುಕೊಂಡು ಕಳ್ಳರ ಗ್ಯಾಂಗ್ ಪರಾರಿಯಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಾಡಹಗಲೇ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

    ದರೋಡೆಕೋರರ ಗುಂಪು, ಆಂಧ್ರಪ್ರದೇಶದ ಆನಂತರಪುರಕ್ಕೆ ತೆರಳಿ ಅಲ್ಲಿಂದ ರೈಲಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‍ಗೆ ಪರಾರಿಯಾಗಿತ್ತು. ಬಳಿಕ ಸೂರಜ್‍ನ ಸಹಚರರು ಆತನನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವಿಗೀಡಾಗಿದ್ದಾನೆ. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು

  • ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ – ನಾಲ್ವರು ದರೋಡೆಕೋರರು ಅರೆಸ್ಟ್

    ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ – ನಾಲ್ವರು ದರೋಡೆಕೋರರು ಅರೆಸ್ಟ್

    ಬೆಂಗಳೂರು: ಕೊಡಿಗೆಹಳ್ಳಿಯಲ್ಲಿ (Kodigehalli) ಚಿನ್ನದ ಅಂಗಡಿ (Jewellary Shop) ಮಾಲೀಕನ ಮೇಲೆ ಶೂಟೌಟ್ (Shootout) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಖತರ್ನಾಕ್ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

    ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಹಾಗೂ ಸೂರಜ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಖದೀಮರು ಸಣ್ಣ ಸಣ್ಣ ಆಭರಣದ ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸಾಕಷ್ಟು ಜನರು ಕೆಲಸ ನಿರ್ವಹಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಲ್ಲಿ ಒಬ್ಬರು, ಇಬ್ಬರು ಮಾತ್ರ ಕೆಲಸ ಮಾಡುವುದರಿಂದ ಅಂತಹ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇದನ್ನೂ ಓದಿ: ನಾನು ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾಗದಿದ್ದರೆ ದೇಶದಲ್ಲಿ ರಕ್ತಪಾತವಾಗುತ್ತೆ: ಟ್ರಂಪ್‌

    ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಘಟನೆ ಸಂಬಂಧ ಆರೋಪಿಗಳು ಯಡವಟ್ಟು ಮಾಡಿದ್ದು, ಶೂಟೌಟ್ ವೇಳೆ ತಮ್ಮದೇ ಗ್ಯಾಂಗ್‌ನ ಸದಸ್ಯ ಸೂರಜ್ ಎಂಬಾತನಿಗೆ ಗುಂಡು ಹಾರಿಸಿದ್ದಾರೆ. ಆಶು ಪಂಡಿತ್ ಮಾಡಿದ ಯಡವಟ್ಟಿಗೆ ಸೂರಜ್ ಗಂಟಲಿಗೆ ಗುಂಡೇಟು ಬಿದ್ದಿದೆ. ಸದ್ಯ ಸೂರಜ್ ಗ್ವಾಲಿಯರ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್‌

    ಆಶು ಪಂಡಿತ್ ಹಾಗೂ ಖಾನಾ ಪಂಡಿತ್ ಮೇಲೆ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಕಳೆದ ವಾರವಷ್ಟೇ ಇದೇ ರೀತಿಯಾಗಿ ಮುಂಬೈನಲ್ಲಿ ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದೀಗ ನಾಲ್ವರ ಪೈಕಿ ಮೂವರನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ – ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ಎಫ್‍ಐಆರ್

    ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳಲ್ಲಿ, ಇಬ್ಬರು ಇಳಿದು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಅಪ್ಪುರಾಮ್ ಎಂಬವರ ಹೊಟ್ಟೆಗೆ ಗುಂಡು ತಗುಲಿದೆ. ಅಲ್ಲದೇ ಅಂತರಾಮ್ ಎಂಬವರ ಕಾಲಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ಪುರಾಮ್ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಉಜ್ಬೇಕಿಸ್ತಾನ್ ಮಹಿಳೆ ಕೊಲೆ ಕೇಸ್; ಹಣದಾಸೆಗೆ ನಡೆದಿತ್ತು ಕೃತ್ಯ – ಕೇರಳದಲ್ಲಿ ಇಬ್ಬರ ಬಂಧನ

  • ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

    ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

    ಬೆಳಗಾವಿ: ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಡರಾತ್ರಿ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದರು.

    ಗೋವಾದ ಮಡಗಾವ್‍ನ ಹುಸೇನ್ ದೇಸಾಯಿ ಹಾಗೂ ಆಜಾದ್ ಕಾದ್ರೊಳ್ಳಿ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಬೆಳಗಾವಿ ತಾಲೂಕಿನ ಹಾಲಗಿಮರಡಿ ಕ್ರಾಸ್ ಮೂಲಕ ಎರಡು ವಾಹನಗಳಲ್ಲಿ ಅಕ್ರಮವಾಗಿ ಗೋವಾ ರಾಜ್ಯಕ್ಕೆ ಗೋಮಾಂಸವನ್ನು ಸಾಗಿಸುತ್ತಿದ್ದರು.

    ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹಿರೇಬಾಗೆವಾಡಿ ಪೊಲೀಸರು ಗೋಮಾಂಸ ಸಮೇತ ಇಬ್ಬರು ಆರೋಪಿಗಳು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸ್ ಸಿಬ್ಬಂದಿ ನಾಗಪ್ಪ ಸುತಗಟ್ಟಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದ್ದು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಾರ್ಯಾಚರಣೆಯಲ್ಲಿ ಹಿರೇಬಾಗೇವಾಡಿ ಠಾಣೆ ಸಿಪಿಐ ವಿಜಯಕುಮಾರ್ ಸಿನ್ನೂರ್ ಮಾರ್ಗದರ್ಶನದಲ್ಲಿ ಪಿಎಸ್‍ಐ ಶಶಿಕುಮಾರ್ ಕೊರಲೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.

  • ಸಿನಿಮಾದಿಂದ ಪ್ರೇರಿತರಾಗಿ 40 ಐಷಾರಾಮಿ ಕಾರುಗಳನ್ನು ಕದ್ದ ಖದೀಮರ ಅರೆಸ್ಟ್

    ಸಿನಿಮಾದಿಂದ ಪ್ರೇರಿತರಾಗಿ 40 ಐಷಾರಾಮಿ ಕಾರುಗಳನ್ನು ಕದ್ದ ಖದೀಮರ ಅರೆಸ್ಟ್

    ನವದೆಹಲಿ: ಹಾಲಿವುಡ್ ಸಿನಿಮಾ ಫಾಸ್ಟ್ ಆ್ಯಂಡ್ ಫ್ಯೂರಿಯಸ್ 7 ನಿಂದ ಪ್ರೇರಿತರಾಗಿ ಹಲವು ಹೈಟೆಕ್ ಗ್ಯಾಜೆಟ್ಸ್‌ಗಳನ್ನು ಬಳಸಿಕೊಂಡು 40 ಐಷಾರಾಮಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದ ಮೂಲದವನಾದ ರವಿ ಈ ಗ್ಯಾಂಗ್‍ನ ಕಿಂಗ್‍ಪಿನ್ ಆಗಿದ್ದು, ಆರೋಪಿಗಳನ್ನು ಮನೀಶ್ ರಾವ್ (42) ಮತ್ತು ಜಗದೀಪ್ ಶರ್ಮಾ (43) ಮತ್ತು ಆಸ್ ಮೊಹಮ್ಮದ್ (40) ಎಂದು ಗುರುತಿಸಲಾಗಿದೆ. ರಾವ್ ಮತ್ತು ಶರ್ಮಾ ದೆಹಲಿಯ ಉತ್ತಮ್ ನಗರದ ನಿವಾಸಿಗಳಾಗಿದ್ದರೆ, ಮೊಹಮ್ಮದ್ ಮೀರತ್ ಮೂಲದವನಾಗಿದ್ದನು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

    ಆರೋಪಿಗಳು ಹಾಲಿವುಡ್ ಚಲನಚಿತ್ರ ‘ದಿ ಫಾಸ್ಟ್ ಆಂಡ್ ದಿ ಫ್ಯೂರಿಯಸ್’ ನಿಂದ ಪ್ರೇರಿತರಾಗಿದ್ದರು. ಕೆಲವೇ ನಿಮಿಷಗಳಲ್ಲಿ ಕಾರುಗಳನ್ನು ಅನ್ಲಾಕ್ ಮಾಡಲು ಸ್ಕ್ಯಾನರ್‌ಗಳನ್ನು ಬಳಸಿಕೊಳ್ಳುತ್ತಿದ್ದರು. ನಂತರ ಕಾರುಗಳಲ್ಲಿ ಅಳವಡಿಸಲಾದ ಜಿಪಿಎಸ್ ಅನ್ನು ನಿಷ್ಕ್ರಿಯಗೊಳಿಸಲು ಜಾಮರ್ ಅನ್ನು ಬಳಸುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ ಮನೋಜ್ ಸಿ ತಿಳಿಸಿದ್ದಾರೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಆರೋಪಿಗಳಿಂದ ಎರಡು ಪಿಸ್ತೂಲ್‍ಗಳಲ್ಲದೆ, ಸೆನ್ಸಾರ್ ಕಿಟ್, ಮ್ಯಾಗ್ನೆಟ್, ಎಲ್‍ಎನ್‍ಟಿ ಕೀಗಳು ಮತ್ತು ಎಂಟು ರಿಮೋಟ್ ಕಾರಿನ ಕೀಗಳು ಸೇರಿದಂತೆ ವಿವಿಧ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

    police (1)

    ಸಾಫ್ಟ್‌ವೇರ್ ಆಧಾರಿತ ಹ್ಯಾಕಿಂಗ್ ಸಾಧನ ಬಳಸಿಕೊಂಡು ಕಾರನ್ನು ಅನ್‍ಲಾಕ್ ಮಾಡುತ್ತಿದ್ದರು. ಈ ಸಾಧನದ ನೆರವಿನಿಂದ ಕಾರಿನ ಸಾಫ್ಟ್‌ವೇರ್ ಅನ್ನು ಫಾಮ್ರ್ಯಾಟ್ ಮಾಡಿ ಹೊಸ ಸಾಫ್ಟ್‌ವೇರ್ ಇನ್‍ಸ್ಟಾಲ್ ಮಾಡುತ್ತಿದ್ದರು. 2ರಿಂದ 3 ನಿಮಿಷಗಳ ಒಳಗೆ ಕಾರು ಕಳವು ಮಾಡುತ್ತಿದ್ದರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

    ಕಾರನ್ನು ಕದ್ದ ನಂತರ, ಅವರು ಅದನ್ನು ಸೊಸೈಟಿಗಳ ಹೊರಗೆ, ಆಸ್ಪತ್ರೆಗಳ ಬಳಿ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದ ಇತರ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದರು. ಕದ್ದ ಕಾರುಗಳನ್ನು ಆರೋಪಿಗಳು ರಾಜಸ್ಥಾನ ಮತ್ತು ಮೀರತ್‍ನಲ್ಲಿ ದುಬಾರಿ ವ್ಯವಹಾರಗಳ ಮೂಲಕ ಮಾರಾಟ ಮಾಡುತ್ತಿದ್ದರು.

    ಪಶ್ಚಿಮ ವಿಹಾರ್ ಪ್ರದೇಶದಿಂದ ಕದ್ದ ಕಾರಿಗೆ ಡೀಲ್ ಮಾಡಲು ಬಂದಾಗ ರಾವ್ ಮತ್ತು ಶರ್ಮಾ ಅವರನ್ನು ಬಂಧಿಸಲಾಯಿತು. ಆರೋಪಿಗಳು ಏಪ್ರಿಲ್‍ನಿಂದ ಉತ್ತಮ್ ನಗರ, ತಿಲಕ್ ನಗರ, ಸುಭಾಷ್ ನಗರ, ಪಾಶಿಮ್ ವಿಹಾರ್, ಮುನಿರ್ಕಾ ಮತ್ತು ದ್ವಾರಕಾದಿಂದ 40 ಕಾರುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  • ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

    ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

    ಮುಂಬೈ: ಜೆಸಿಬಿಯನ್ನೇ ನುಗ್ಗಿಸಿ ದರೋಡೆಕೋರರು ಎಟಿಎಂ ಎಗರಿಸಿಕೊಂಡು ಹೋಗಲು ವಿಫಲ ಯತ್ನ ನಡೆಸಿದ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

    ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಅರಗ್ ಎಂಬಲ್ಲಿ ಈ ಘಟನೆ ನಡೆದಿದೆ. ಜೆಸಿಬಿಯಿಂದ ಎಟಿಎಂ ಕಳವುಗೈಯುತ್ತಿರುವ ದೃಶ್ಯ ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಸ್ವಾಮೀಜಿಗೆ ಜಾಮೀನು

    ವೀಡಿಯೋದಲ್ಲಿ ರಾತ್ರಿ ವೇಳೆ ದರೋಡೆಕೋರರು ಜೆಸಿಬಿಯನ್ನು ಎಟಿಎಂ ಕೇಂದ್ರಕ್ಕೆ ನುಗ್ಗಿಸಿದ್ದಾರೆ. ನಂತರ ಎಟಿಎಂ ಮೆಷಿನ್ ಅನ್ನು ಜೆಸಿಬಿಯಿಂದ ಎಳೆದಿದ್ದಾರೆ. ಈ ವೇಳೆ ಆದ ಸದ್ದಿನಿಂದ ಎಚ್ಚರಗೊಂಡ ಸ್ಥಳೀಯ ನಿವಾಸಿಗಳು ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಗಾಬರಿಗೊಂಡ ಖದೀಮರು ಎಟಿಎಂ ಬಿಟ್ಟು ಜೆಸಿಬಿ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಗ್ರಾಮಸ್ಥರ ಮಾಹಿತಿ ಅಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಕಳ್ಳರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆವರೆಗೆ ಕಾದು ನೋಡಿ..- ಆಪರೇಷನ್ ಕಮಲ ಸುಳಿವು ಕೊಟ್ಟ ಕಟೀಲ್

     

  • ಬೆಂಗಳೂರಿನಲ್ಲಿ ಕುಖ್ಯಾತ ಮೂವರು ಕಳ್ಳರು ಅರೆಸ್ಟ್

    ಬೆಂಗಳೂರಿನಲ್ಲಿ ಕುಖ್ಯಾತ ಮೂವರು ಕಳ್ಳರು ಅರೆಸ್ಟ್

    ಬೆಂಗಳೂರು: ಕುಖ್ಯಾತ 3 ಕಳ್ಳರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ಬೆಲೆಬಾಳುವ 65 ಗ್ರಾಂ ಚಿನ್ನ, 25 ಬೈಕ್ 1 ಆಟೋ, ವಿವಿಧ ಕಂಪನಿಯ 24 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಕಬೀರ್ ಪಾಷಾ, ಸಯ್ಯದ್ ಖಲೀಂ, ಅಪ್ತಬ್ ಪಾಷಾ ಬಂಧಿತ ಆರೋಪಿಗಳು. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಬೆಂಗಳೂರಿನ ಬ್ಯಾಟರಾಯನಪುರ, ಕೆಂಗೇರಿ, ವಿಜಯ ನಗರ, ಚಂದ್ರಾಲೇಔಟ್, ಕೆ.ಪಿ ಅಗ್ರಹಾರ, ಚಾಮರಾಜಪೇಟೆ, ಡಿ.ಜೆ.ಹಳ್ಳಿ, ಗೋವಿಂದರಾಜನಗರ, ಸುಬ್ರಮಣ್ಯನಗರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದಾರೆ.  ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ

    ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿ ಬಿದ್ದಾಗ ಅಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಕಲೇಶಪುರದಲ್ಲಿ ಕಲ್ಲು ಎತ್ತಿ ಹಾಕಿ ವೃದ್ಧೆಯ ಬರ್ಬರ ಹತ್ಯೆ

  • ಎಟಿಎಂ ಹೊತ್ತೊಯ್ದ ಕಳ್ಳರು- ಸಿಕ್ಕಿದ್ದು 6 ಸಾವಿರ ಮಾತ್ರ

    ಎಟಿಎಂ ಹೊತ್ತೊಯ್ದ ಕಳ್ಳರು- ಸಿಕ್ಕಿದ್ದು 6 ಸಾವಿರ ಮಾತ್ರ

    ಮುಂಬೈ: ಕಳ್ಳರು ಖಾಸಗಿ ಬ್ಯಾಂಕ್‍ನ ಎಟಿಎಂ ಮಷೀನ್ ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಉಸಾತ್ನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊತ್ತೊಯ್ದ ಎಟಿಎಂ ಯಂತ್ರದಲ್ಲಿ ಕೇವಲ 6,000 ರೂ. ಸಿಕ್ಕಿದೆ. ಪ್ರಕರಣದ ಕುರಿತು ಉಲ್ಲಾಸ್‍ನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 380(ಕಳ್ಳತನ) ಹಾಗೂ 427(ವಂಚನೆ) ಅಡಿ ಅನಾಮಧೇಯ ಕಳ್ಳರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.

    ಕಳ್ಳರು ಎಟಿಎಂ ಯಂತ್ರವನ್ನು ಹೊತ್ತೊಯ್ಯುವ ಮುನ್ನ ಸ್ಕ್ರೀನ್ ಗಾಜು, ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಇದೀಗ ಬಲೆ ಬೀಸಿದ್ದಾರೆ.

  • ಮೂವರು ಖತರ್ನಾಕ್ ಮನೆಗಳ್ಳರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

    ಮೂವರು ಖತರ್ನಾಕ್ ಮನೆಗಳ್ಳರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

    ಹುಬ್ಬಳ್ಳಿ: ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಐನಾತಿ ಮನೆಗಳ್ಳರನ್ನು ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸರು ಬಂಧಿಸಿದ್ದಾರೆ.

    ಪ್ರೇಮ್‍ಕುಮಾರ್ ಭೀಮಪ್ಪ ಪೂಜಾರ, ವಿರೇಶ ಜಂಬುನಾಥ ಕಾಂಬಳೆ, ರಾಘವೇಂದ್ರ ಮಲ್ಲಪ್ಪ ಸಲಗಾರ ಬಂಧಿತ ಆರೋಪಿಗಳು. ಬಂಧಿತರಿಂದ ದ್ವಿಚಕ್ರ ವಾಹನ, ಲ್ಯಾಪ್‍ಟಾಪ್, ಟಿವಿ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದನ್ನು ಅರಿತ ಚಾಲಾಕಿ ಕಳ್ಳರು ಬೀಗ ಮುರಿದು ಮನೆಗೆ ಕನ್ನ ಹಾಕುತ್ತಿದ್ದರು. ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದವು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಮೂಲಕ ಮೂವರು ಮನೆಗಳ್ಳರನ್ನು ಬಂಧಿಸಿದ್ದಾರೆ.

  • ಆಸ್ಪತ್ರೆ ಸೇರಿದ್ದ ತಾಯಿಗಾಗಿ ಹಣ ಹಾಕಲು ಹೊರಟಿದ್ದವನಿಗೆ ಚಾಕು ತೋರಿಸಿ ದರೋಡೆ

    ಆಸ್ಪತ್ರೆ ಸೇರಿದ್ದ ತಾಯಿಗಾಗಿ ಹಣ ಹಾಕಲು ಹೊರಟಿದ್ದವನಿಗೆ ಚಾಕು ತೋರಿಸಿ ದರೋಡೆ

    – ತಾಯಿ ಆಸ್ಪತ್ರೆ ವೆಚ್ಚಕ್ಕಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲು ಹೊರಟಿದ್ದ

    ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ತಾಯಿಯ ವೈದ್ಯಕೀಯ ನೆರವಿಗಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲು ಹೋಗುತ್ತಿದ್ದ ಯುವಕನನ್ನು ಗುರಿಯಾಗಿಸಿಕೊಂಡು ಬಂದು, ಹಣ ದರೋಡೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.17 ರಂದು ಈ ಘಟನೆ ನಡೆದಿದೆ. ಪತ್ರಾಸ್ ಗುರಿಯಾ ಹಣ ಕಳೆದುಕೊಂಡ ಯುವಕ. ಚಾಕು ತೋರಿಸಿ ಈತನಿಂದ 27 ಸಾವಿರ ರೂ. ಹಣ ದರೋಡೆ ಮಾಡಲಾಗಿದೆ.

    ಅಸ್ಸಾಂ ಮೂಲದ ಪತ್ರಾಸ್ ಗುರಿಯಾ, 2012ರಲ್ಲಿ ಬೆಂಗಳೂರಿಗೆ ಬಂದು ಹೊಟ್ಟೆ ಪಾಡಿಗಾಗಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಅವಿವಾಹಿತನಾಗಿದ್ದ ಈತ ಕೋಲ್ಸ್ ಪಾರ್ಕ್ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅಸ್ಸಾಂನಲ್ಲಿರುವ ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗೆ ತಗುಲುವ ಹಣ ಹೊಂದಿಸುತ್ತಿದ್ದ ಈತ ಹಲವು ತಿಂಗಳಿಂದ ಕೂಡಿಟ್ಟ 27 ಸಾವಿರ ಹಣ ಜೇಬಿನಲ್ಲಿಟ್ಟುಕೊಂಡು ಇದೇ ತಿಂಗಳು ತಾಯಿಯ ಬ್ಯಾಂಕ್ ಖಾತೆ ಹಣ ಹಾಕಲು ನಿರ್ಧರಿಸಿದ್ದ.

    ಬ್ಯಾಂಕಿಗೆ ಹೋಗಲು ಅಪಾರ್ಟ್ ಮೆಂಟ್ ಮಾಲೀಕರೊಬ್ಬರ ಸೂಟ್ಕರ್ ಪಡೆದಿದ್ದಾರೆ. 27 ಸಾವಿರ ರೂ. ಹಣವನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು ಬ್ಯಾಂಕ್ ನತ್ತ ಪ್ರಯಾಣ ಬೆಳೆಸಿದ್ದ. ಯುವಕನ ಬಳಿ ಹಣ ಇರುವುದನ್ನು ಅರಿತ ದರೋಡೆಕೋರರು ಬೈಕ್ ಹಿಂಬಾಲಿಸಿದ್ದಾರೆ. ಬಳಿಕ ಪ್ರೇಜರ್ ಟೌನ್ ನ ಐಟಿಸಿ ಬಳಿ ಪ್ರತಾಸ್ ಗುರಿಯಾ ಬೈಕ್‍ನನ್ನು ಅಡ್ಡಗಟ್ಟಿ ಚಾಕು ತೋರಿಸಿ ಜೇಬಿನಲಿದ್ದ 27 ಸಾವಿರ ಹಣ ಡರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯ ಹೇಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.