Tag: robbed

  • ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಕೈಹಾಕಿ ಸಿಕ್ಕಿಬಿದ್ದ ಡಾನ್ಸರ್..!

    ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಕೈಹಾಕಿ ಸಿಕ್ಕಿಬಿದ್ದ ಡಾನ್ಸರ್..!

    ನವದೆಹಲಿ: ಪ್ರಿಯತಮೆಯರಿಗಾಗಿ ದೆಹಲಿಯ ಡ್ಯಾನ್ಸರ್ ಒಬ್ಬ ಆಟೋ ಚಾಲಕನಿಂದ ಹಣ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಗೋವಿಂದಪುರಿ ನಿವಾಸಿ ರೋಹನ್ ಗಿಲ್ಲಿ(21) ಅಲಿಯಾಸ್ ಸನ್ನಿ ಬಂಧಿತ ಡ್ಯಾನ್ಸರ್. ರಾಹುಲ್ ಹಣ ಕಳೆದುಕೊಂಡಿದ್ದ ಆಟೋ ಚಾಲಕ. ಹಣ ಕಿತ್ತುಕೊಂಡು ಪರಾರಿಯಾಗುತ್ತಿದ್ದಾಗಲೇ ರೋಹನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಗೋವಿಂದ ಪುರಿ ಆಟೋ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಾ ನಿಂತಿದ್ದೆ. ಈ ವೇಳೆ ನನ್ನ ಬಳಿಯಿದ್ದ ಹಣವನ್ನು ಎಣಿಕೆ ಮಾಡಿ, ಪರ್ಸ್ ನಲ್ಲಿ ಇಟ್ಟುಕೊಂಡಿದ್ದಾಗ ನನ್ನ ಬಳಿಗೆ ಬಂದಿದ್ದ ರೋಹನ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದನು ಎಂದು ರಾಹುಲ್ ದೂರಿದ್ದಾನೆ.

    ಹಣ ಕಿತ್ತುಕೊಂಡು ಓಡುತ್ತಿದ್ದಂತೆ ರಾಹುಲ್ ಕಿರುಚಲು ಪ್ರಾರಂಭಿಸಿದ್ದಾನೆ. ಬಳಿಕ ರೋಹನ್‍ನ ಹಿಂದೆ ಓಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು, ರೋಹನ್‍ನನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ಬಯಲಿಗೆ ಬಂದಿದೆ. ಬಳಿಕ ಆರೋಪಿಯನ್ನು ಬಂಧಿಸಿ ದೆಹಲಿಯ ಆಗ್ನೇಯ ಪೊಲೀಸ್ ಠಾಣೆಗೆ ತರಲಾಗಿತ್ತು. ರೋಹನ್‍ನನ್ನು ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದಾಗ, ಆತನಿಗೆ ಮೂವರು ಪ್ರಿಯತಮೆಯರಿದ್ದು, ಅವರಿಗಾಗಿ ತಾನು ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ರೋಹನ್‍ನಿಂದ 1,900 ರೂಪಾಯಿ ಇದ್ದ ಪರ್ಸ್, ಒಂದು ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೋಹನ್ ನನ್ನು 2017 ಡಿಸೆಂಬರ್ ನಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 10 ರೂಪಾಯಿಗೆ ಆಸೆ ಪಟ್ಟು 1.40 ಲಕ್ಷ ರೂ. ಹಣ ಕಳೆದುಕೊಂಡ ಸೆಕ್ಯೂರಿಟಿ!

    10 ರೂಪಾಯಿಗೆ ಆಸೆ ಪಟ್ಟು 1.40 ಲಕ್ಷ ರೂ. ಹಣ ಕಳೆದುಕೊಂಡ ಸೆಕ್ಯೂರಿಟಿ!

    ಬೆಂಗಳೂರು: ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಖದೀಮರು ವ್ಯಕ್ತಿಯೊಬ್ಬರಿಗೆ 10 ರೂಪಾಯಿ ಆಸೆ ತೋರಿಸಿ 1.40 ಲಕ್ಷ ಹಣ ಎಗರಿಸಿರುವ ಘಟನೆ ವಿವೇಕನಗರದ ವಿಕ್ಟೋರಿಯಾ ಲೇಔಟ್ ನಲ್ಲಿ ನಡೆದಿದೆ.

    ಡೇವಿಡ್ ಥಾಮಸ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇವರು ಸೆಕ್ಯೂರಿಟಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಥಾಮಸ್ ಬ್ಯಾಂಕ್ ನಲ್ಲಿದ್ದ ಪಿಎಫ್ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದ ವೇಳೆ ಖದೀಮರು ಈ ಕೃತ್ಯ ಎಸಗಿದ್ದಾರೆ.

    ಥಾಮಸ್ ಎಸ್‍ಬಿಐ ಬ್ಯಾಂಕ್ ನಲ್ಲಿ 1.40 ಲಕ್ಷ ಹಣ ಡ್ರಾ ಮಾಡಿದ್ದರು. ಬಳಿಕ ಬ್ಯಾಂಕಿನಿಂದ ಹಣ ತಂದು ಬೈಕಿನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಇಬ್ಬರು ಖದೀಮರು ಡೇವಿಡ್ ಥಾಮಸ್ ಅವರನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ.

    ಖದೀಮರು ಬೈಕ್ ಹಿಂಭಾಗ 10 ರೂಪಾಯಿ ಎಸೆದಿದ್ದಾರೆ. ಬಳಿಕ ಸರ್, ಅಲ್ಲಿ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಯಾಮಾರಿಸಿದ್ದಾರೆ. ಥಾಮಸ್ 10 ರೂಪಾಯಿ ಹಣ ತಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಖದೀಮರು ಅವರ 1.40 ಲಕ್ಷ ಹಣವಿದ್ದ ಬ್ಯಾಗ್ ಎಗರಿಸಿ ಬೈಕಿನಲ್ಲಿ ಪರಾರಿಯಾಗಿದ್ದಾರೆ.

    ಈ ಬಗ್ಗೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆಯಾಗಿ ಪತಿಯ ಮನೆಗೆ ತೆರಳುತ್ತಿದ್ದಾಗಲೇ ದುರಂತ – ನವ ವಧು ದುರ್ಮರಣ

    ಮದ್ವೆಯಾಗಿ ಪತಿಯ ಮನೆಗೆ ತೆರಳುತ್ತಿದ್ದಾಗಲೇ ದುರಂತ – ನವ ವಧು ದುರ್ಮರಣ

    ಲಕ್ನೋ: ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ನವ ವಿವಾಹಿತರಿದ್ದ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ವಧುವನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

    18 ವರ್ಷದ ಮಹ್ವಿಶ್ ಪರ್ವೀನ್ ಮೃತ ನವವಿವಾಹಿತೆ. ಈ ಘಟನೆ ರಾಷ್ಟ್ರೀಯ ಹೆದ್ದಾರಿ58 ರಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

    ಏನಿದು ಘಟನೆ?: ವಧು ಪರ್ವೀನ್, ವರ ಮೊಹಮ್ಮದ್ ಷಾಝೆಬ್(22) ಹಾಗೂ ಇತರೆ ಮೂವರು ಕುಟುಂಬ ಸದಸ್ಯರು ಶುಕ್ರವಾರ ಗಾಜಿಯಾಬಾದ್ ನಹ್ಲಾ ಹಳ್ಳಿಯಲ್ಲಿ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಮುಜಫರ್ ನಗರದ ಮನೆಗೆ ಹಿಂದಿರುಗುತ್ತಿದ್ದರು. ಮೀರತ್ ಜಿಲ್ಲೆಯ ಮಟೋರಾ ಗ್ರಾಮದ ಬಳಿ ಕಾರು ಹೋಗುತ್ತಿದ್ದಂತೆಯೇ ನವ ವಿವಾಹಿತರಿದ್ದ ವಾಹನದ ಮೇಲೆ ಎರಡು ಕಾರುಗಳಲ್ಲಿ ಶಸ್ತ್ರಸಜ್ಜಿತವಾಗಿ ಬಂದ ಸುಮಾರು 12 ದರೋಡೆಕೋರರು ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ಓರ್ವರ ಮೇಲೆ ಗನ್ ಪಾಯಿಂಟ್ ಇಟ್ಟರು. ಈ ವೇಳೆ ವಧು ಪರ್ವೀನ್ ಭಯದಿಂದ ಕಿರುಚಿಕೊಂಡಿದ್ದಾರೆ. ಆಗ ದರೋಡೆಕೋರ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಲಕ್ಷಾಂತರ ರೂ. ಮೌಲ್ಯದ ಹಣ, ಬಂಗಾರವನ್ನು ದೋಚಿ ಪರಾರಿಯಾಗಿದ್ದಾರೆ.

    ಗುಂಡೇಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪರ್ವೀನ್ ರನ್ನು ಕೂಡಲೇ ಸಮೀಪದ ಮುಜಾಫರ್ ನಗರ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ಕಾರಿನ ಮುಂಭಾಗದ ಸೀಟಿನಲ್ಲಿ ನನ್ನ ¸ಸಹೋದರ ಕುಳಿತಿದ್ದರು. ದರೋಡೆಕೋರರು ಅವರಿಗೆ ಗನ್ ತೋರಿಸಿ ಬಂಗಾರ ಮತ್ತು ಹಣವನ್ನು ಕೊಡುವಂತೆ ಬೇಡಿಕೆ ಇಟ್ಟರು. ನಂತರ ನಾವು ನಮ್ಮ ಬಳಿ ಇದ್ದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ಕೊಟ್ಟಿದ್ದೆವು. ಆದ್ರೂ ನನ್ನ ಪತ್ನಿಗೆ ಗುಂಡು ಹಾರಿಸಿದ್ದಾರೆ ಎಂದು ನೊಂದ ವರ ದುಃಖಿತರಾಗಿದ್ದಾರೆ.

    ಈ ಕುರಿತು ದರೋಡೆ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ. ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುತ್ತಿದ್ದೇವೆ. ನವ ವಿವಾಹಿತರಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಕಾರಿನ ನಂಬರ್ ಪ್ಲೇಟ್ ದೆಹಲಿಯಲ್ಲಿ ನೋಂದಣಿಯಾಗಿದ್ದು, ಮೀರತ್ ಮೂಲದ ವ್ಯಾಪಾರಿ ಪ್ರದೀಪ್ ಬನ್ಸಾಲ್ ಹೆಸರಿನಲ್ಲಿ ಈ ಸಂಖ್ಯೆಯನ್ನ ನೋಂದಾಯಿಸಲಾಗಿದೆ ಎಂದು ಮೀರತ್ ನ ಎಸ್‍ಪಿ ದ್ವಿವೇದಿ ಹೇಳಿದ್ದಾರೆ.