Tag: Roasted Tomato Soup

  • ಏರ್ ಫ್ರೈಯರ್‌ನಲ್ಲಿ ರೋಸ್ಟೆಡ್ ಟೊಮೆಟೊ ಸೂಪ್ ಮಾಡುವ ವಿಧಾನ

    ಏರ್ ಫ್ರೈಯರ್‌ನಲ್ಲಿ ರೋಸ್ಟೆಡ್ ಟೊಮೆಟೊ ಸೂಪ್ ಮಾಡುವ ವಿಧಾನ

    ನಾವು ಈ ಹಿಂದೆ ಸಾಮಾನ್ಯ ವಿಧಾನದಲ್ಲಿ ಟೊಮೆಟೊ ಸೂಪ್ ಮಾಡೋದು ಹೇಗೆಂದು ಹೇಳಿಕೊಟ್ಟಿದ್ದೇವೆ. ಆದರೆ ಇಂದು ನಾವು ವಿಭಿನ್ನ ರುಚಿ ನೀಡೋ ರೋಸ್ಟೆಡ್ ಟೊಮೆಟೊ ಸೂಪ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಇದಕ್ಕಾಗಿ ನೀವು ಏರ್ ಫ್ರೈಯರ್‌ನಲ್ಲಿ ಟೊಮೆಟೊ ಸೇರಿದಂತೆ ಇತರ ಕೆಲ ತರಕಾರಿಗಳನ್ನು ಮೊದಲು ರೋಸ್ಟ್ ಮಾಡಿಕೊಳ್ಳಬೇಕಾಗುತ್ತದೆ. ಕೊನೆಯಲ್ಲಿ ಈ ಸೂಪ್‌ನ ರುಚಿ ಅದ್ಭುತ ಎನ್ನದೇ ಇರಲು ಸಾಧ್ಯವಿಲ್ಲ. ಹಾಗಿದ್ದರೆ ರೋಸ್ಟೆಡ್ ಟೊಮೆಟೊ ಸೂಪ್ (Roasted Tomato Soup) ಹೇಗೆ ಮಾಡೋದು ಎಂಬುದನ್ನು ನೋಡಿಕೊಂಡು ಬರೋಣ.

    ಬೇಕಾಗುವ ಪದಾರ್ಥಗಳು:
    ಟೊಮೆಟೊ – 6
    ಈರುಳ್ಳಿ – 1
    ಸಿಪ್ಪೆ ಸುಲಿದ ಬೆಳ್ಳುಳ್ಳಿ – 5
    ಆಲಿವ್ ಎಣ್ಣೆ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಸಕ್ಕರೆ ಪುಡಿ – 1 ಟೀಸ್ಪೂನ್
    ಕತ್ತರಿಸಿದ ಪುದೀನಾ – ಕಾಲು ಕಪ್
    ಚಿಕನ್ ಸ್ಟಾಕ್ – ಒಂದೂವರೆ ಕಪ್
    ಹೆವಿ ಕ್ರೀಮ್ – ಕಾಲು ಕಪ್
    ತುರಿದ ಚೀಸ್ – ಕಾಲು ಕಪ್
    ಬೆಳ್ಳುಳ್ಳಿ ಪುಡಿ – 1 ಟೀಸ್ಪೂನ್
    ಉಪ್ಪು ಮತ್ತು ಮೆಣಸು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಕೋಲ್ಕತ್ತಾ ಸ್ಟ್ರೀಟ್ ಫುಡ್ ಎಗ್ ದಾಲ್ ತಡ್ಕಾ – ನೀವೊಮ್ಮೆ ಟ್ರೈ ಮಾಡ್ಲೇಬೇಕು

    ಮಾಡುವ ವಿಧಾನ:
    * ಮೊದಲಿಗೆ ಏರ್ ಫ್ರೈಯರ್ ಅನ್ನು 200 ಡಿಗ್ರಿಗೆ ಪೂರ್ವಭಾವಿಯಾಗಿ ಕಾಯಿಸಿ.
    * ಈಗ ಟೊಮೆಟೊವನ್ನು ಅರ್ಧಕ್ಕೆ ಹಾಗೂ ಈರುಳ್ಳಿಯನ್ನು 4 ಭಾಗಗಳಾಗಿ ಕತ್ತರಿಸಿಕೊಂಡು, ಏರ್ ಫ್ರೈಯರ್‌ನಲ್ಲಿರಿಸಿ.
    * ಅದಕ್ಕೆ ಬೆಳ್ಳುಳ್ಳಿ, ಆಲಿವ್ ಎಣ್ಣೆ, ಉಪ್ಪು, ಕರಿ ಮೆಣಸಿನಪುಡಿ ಹಾಗೂ ಸಕ್ಕರೆ ಸೇರಿಸಿ 30 ನಿಮಿಷ ರೋಸ್ಟ್ ಆಗುವವರೆಗೆ ಏರ್ ಫ್ರೈ ಮಾಡಿಕೊಳ್ಳಿ.
    * ತರಕಾರಿಗಳನ್ನು ತಣ್ಣಗಾಗಲು ಬಿಟ್ಟು ಬಳಿಕ ಟೊಮೆಟೊ ಸಿಪ್ಪೆಯನ್ನು ಬಿಡಿಸಿ.
    * ಇದೀದ ರೋಸ್ಟ್ ಮಾಡಿದ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಪುದೀನಾ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ರುಬ್ಬಿದ ಮಿಶ್ರಣವನ್ನು ಸುರಿಯಿರಿ.
    * ಅದಕ್ಕೆ ಚಿಕನ್ ಸ್ಟಾಕ್, ಹೆವಿ ಕ್ರೀಮ್, ಚೀಸ್ ಹಾಗೂ ಬೆಳ್ಳುಳ್ಳಿ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ರುಚಿಗೆ ತಕ್ಕಂತೆ ಕರಿಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ, ಸೂಪ್ ಅನ್ನು ಸ್ವಲ್ಪ ಕುದಿಸಿ.
    * ಇದೀಗ ರೋಸ್ಟೆಡ್ ಟೊಮೆಟೊ ಸೂಪ್ ತಯಾರಾಗಿದ್ದು, ಗಾರ್ಲಿಕ್ ಬ್ರೆಡ್‌ನೊಂದಿಗೆ ಅಥವಾ ಹಾಗೆಯೇ ಸವಿಯಬಹುದು. ಇದನ್ನೂ ಓದಿ: 7 ಲೇಯರ್ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ