Tag: roadside

  • ರಸ್ತೆ ಬದಿ ಸೊಪ್ಪು ಮಾರೋ ವೃದ್ಧೆ ತಲೆಗೆ ಮಚ್ಚಿನಿಂದ ಹಲ್ಲೆ

    ರಸ್ತೆ ಬದಿ ಸೊಪ್ಪು ಮಾರೋ ವೃದ್ಧೆ ತಲೆಗೆ ಮಚ್ಚಿನಿಂದ ಹಲ್ಲೆ

    ಬೆಂಗಳೂರು: ಬೀದಿ ಬದಿ ಸೊಪ್ಪು ಮಾರುವ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆಗೈದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ಕಳೆದ ಶನಿವಾರ ಜಯನಗರದ 26ನೇ ಕ್ರಾಸ್ ನಲ್ಲಿರುವ ಬಾಲಾಜಿ ಮೆಡಿಕಲ್ ಬಳಿ ಈ ಘಟನೆ ನಡೆದಿದೆ. ವೃದ್ಧೆ ಚಂದ್ರಮ್ಮ ಫುಟ್ ಬಾತ್ ನಲ್ಲಿ ಕಳೆದ ಕೆಲ ವರ್ಷಗಳಿಂದ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದಾರೆ. ಅಂತೆಯೇ ಶನಿವಾರ ಸಂಜೆ ಕೂಡ ತಮ್ಮ ಕಾರ್ಯದಲ್ಲಿ ತೊಡಗಿದ್ದರು.

    ಈ ವೇಳೆ ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚಂದ್ರಮ್ಮ ತಲೆಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದಾರೆ. ಚಂದ್ರಮ್ಮ ತಲೆಗೆ ತೀವ್ರ ಪೆಟ್ಟಾಗಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ಕೊಟ್ಟ: ಪವಿತ್ರಾ ಬರೆದ ಡೆತ್‍ನೋಟ್‍ನಲ್ಲೇನಿದೆ?

    ಘಟನೆ ಕುರಿತು ತಿಲಕ್ ನಗರ ಠಾಣೆಯಲ್ಲಿ (Tilak Nagar Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರು ರಸ್ತೆ ಬದಿಗಳಲ್ಲಿ ರಾಜರೋಷವಾಗಿ ಮಾರಾಟವಾಗ್ತಿದೆ ಮಚ್ಚು ಲಾಂಗ್‍ಗಳು

    ಬೆಂಗ್ಳೂರು ರಸ್ತೆ ಬದಿಗಳಲ್ಲಿ ರಾಜರೋಷವಾಗಿ ಮಾರಾಟವಾಗ್ತಿದೆ ಮಚ್ಚು ಲಾಂಗ್‍ಗಳು

    ಬೆಂಗಳೂರು: ರೌಡಿಗಳ ಕೈಗೆ ಮಾರಕಾಸ್ತ್ರಗಳು ಹೇಗೆ ಸಿಗುತ್ತೆ, ಎಲ್ಲಿ ಸಿಗುತ್ತೆ ಎನ್ನುವುದು ಸಾಮಾನ್ಯರಿಗೆ ತಿಳಿಯದ ವಿಚಾರ. ಎಲ್ಲೋ ಅಜ್ಞಾತ ಸ್ಥಳಗಳಲ್ಲಿ ಈ ಮಚ್ಚು ಲಾಂಗ್‍ಗಳು ರೆಡಿಯಾಗುತ್ತಿದ್ದವು. ಆದರೆ ಮಧ್ಯಪ್ರದೇಶ ಮೂಲದ ಅಲೆಮಾರಿ ಜನರು ರಾಜರೋಷವಾಗಿ ಬೆಂಗಳೂರು ರಸ್ತೆಯ ಪಕ್ಕದಲ್ಲೇ ಇಂತಹ ಮಾರಕಾಸ್ತ್ರಗಳನ್ನ ರೆಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ.

    ರೈತಾಪಿ ವರ್ಗದವರಿಗೆ ಬೇಕಾದ ಸಲಕರಣೆಗಳ ಜೊತೆಗೆ ಭಾರೀ ಹರಿತವಾಗಿರೋ ಮಚ್ಚುಗಳನ್ನ ರಸ್ತೆ ಪಕ್ಕದಲ್ಲೇ ಮಾರಾಟ ಮಾಡುತ್ತಿದ್ದಾರೆ. ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಟ್ಟಿಯ ರಸ್ತೆ ಪಕ್ಕ ಬಿಡಾರ ಹಾಕಿರುವ ಅಲೆಮಾರಿಗಳು ಹೆಚ್ಚು ಉದ್ದವಾದ ಮಚ್ಚುಗಳನ್ನ ಮಾಡಿಕೊಡಲ್ಲ ಎನ್ನುತ್ತಾರೆ. ಆದರೆ ನಮಗೆ ಸಿನಿಮಾ ಶೂಟಿಂಗ್‍ಗೆ ಲಾಂಗ್ ಬೇಕು ಮಾಡಿ ಕೊಡುತ್ತಿರಾ ಎಂದು ಕೇಳಿದರೆ, “ಮಾಡ್ತಿವಿ ಇದೇ ಲಾಸ್ಟ್ ಸೈಜ್” ಎಂದು ಹೇಳಿ ಚೀಲಗಳ ಮಧ್ಯೆ ಇಟ್ಟಿದ್ದ ದೊಡ್ಡ ಮಚ್ಚುಗಳನ್ನು ತೋರಿಸುತ್ತಾರೆ. ಇದೇ ಅಳತೆಯಲ್ಲಿ ಲಾಂಗ್ ಮಾಡಿಕೊಡುವಂತೆ ಕೇಳಿದರೆ, ಮಾಡಿಕೊಡಲು ಈ ಮಧ್ಯಪ್ರದೇಶದ ಗ್ಯಾಂಗ್ ಒಪ್ಪಿಕೊಂಡಿರುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ.

    ಮೊದಲು ಲಾಂಗ್ ತಯಾರಿಸಿ ಕೊಡಲು ಒಪ್ಪಿಕೊಂಡಿದ್ದ ಅಲೆಮಾರಿಗಳು ನಂತರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಯ ಸುಳಿವು ತಿಳಿದು ಆಗಲ್ಲ ಮುಂದೆ ಇರೋದನ್ನು ತಗೆದುಕೊಳ್ಳಿ, ನಮಗೆ ಆ ಲಾಂಗ್ ತರ ಮಾಡೋದಕ್ಕೆ ಬರೋದಿಲ್ಲ ಎಂದು ದೂರ ಸರಿದಿದ್ದಾರೆ.

    ಎಷ್ಟು ಸುಲಭವಾಗಿ ಮಚ್ಚು, ಚೂರಿ, ಲಾಂಗ್‍ಗಳು ಕಡಿಮೆ ಬೆಲೆಗೆ ಸಿಗುತ್ತೆ ಎಂದು ತಿಳಿದ ಪುಡಿ ರೌಡಿಗಳ ಇದನ್ನೇ ಕೊಂಡುಕೊಂಡು ನಾನೇ ಡಾನ್ ಎಂದುಕೊಂಡು ಬಿಲ್ಡಪ್ ನೀಡುತ್ತಿದ್ದಾರೆ. ಇಷ್ಟೆಲ್ಲಾ ರಾಜರೋಷವಾಗಿ ರಸ್ತೆಯಲ್ಲಿ ಮಾರಕಾಸ್ತ್ರಗಳು ತಯಾರಿಕೆಯಾಗಿ, ಮಾರಾಟವಾಗುತ್ತಿದ್ದರೂ ಪೊಲೀಸರು ಮಾತ್ರ ಸುಮ್ಮನಿದ್ದಾರೆ.

  • ಚಳಿಯಲ್ಲಿ ನಡುಗುತ್ತಾ ರಸ್ತೆ ಬದಿಯಲ್ಲೇ ಮಲಗಿದ್ರು ಭಾವಿ ಸೈನಿಕರು..!

    ಚಳಿಯಲ್ಲಿ ನಡುಗುತ್ತಾ ರಸ್ತೆ ಬದಿಯಲ್ಲೇ ಮಲಗಿದ್ರು ಭಾವಿ ಸೈನಿಕರು..!

    ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಸೈನಿಕ ಹುದ್ದೆಗಳ ನೇಮಕಾತಿ ರ‍್ಯಾಲಿಯಲ್ಲಿ ಬಂದಿರುವ ಸಾವಿರಾರು ಯುವಕರು ರಾತ್ರಿ ಮಲಗಲು ಜಾಗವಿಲ್ಲದೆ ರಸ್ತೆ ಬದಿಯಲ್ಲಿ ಚಳಿಯಲ್ಲೇ ಸೂರಿಲ್ಲದೆ ಮಲಗುತ್ತಿದ್ದಾರೆ.

    ಇಲ್ಲಿನ ಕೃಷಿ ವಿವಿಯಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ನೇಮಕಾತಿ ರ‍್ಯಾಲಿಗೆ ಒಟ್ಟು 34,492 ಸೇನಾ ಉದ್ಯೋಗಾರ್ಥಿಗಳು ಬಂದಿದ್ದಾರೆ. ಆದರೆ ಜಿಲ್ಲಾಡಳಿತವಾಗಲಿ, ಸೇನಾ ನೇಮಕಾತಿ ಅಧಿಕಾರಿಗಳಾಗಲಿ ಊಟ, ವಸತಿ ವ್ಯವಸ್ಥೆ ಮಾಡಿಲ್ಲ. ಡಿಸೆಂಬರ್ 11 ರಿಂದ 20ರ ವರೆಗೆ ನೇಮಕಾತಿ ರ‍್ಯಾಲಿ ನಡೆಯುತ್ತಿದ್ದು, ದೂರದ ಊರುಗಳಿಂದ ಬಂದ ಯುವಕರು ಮಲಗಲು ಜಾಗವಿಲ್ಲದೆ ರಸ್ತೆ ಬದಿಯಲ್ಲೇ ಚಳಿಯಲ್ಲಿ ನಡುಗುತ್ತಾ ಮಲಗುತ್ತಿದ್ದಾರೆ.

    ನಗರದ ಈಶ್ವರ ದೇವಾಲಯ ಸೇವಾ ಸಮಿತಿ ಊಟ, ತಿಂಡಿಯ ವ್ಯವಸ್ಥೆ ಹಾಗೂ ರೋಟರಿ ಕ್ಲಬ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಆದರೆ ವಸತಿ ವ್ಯವಸ್ಥೆಯಿಲ್ಲದೆ ಭಾವಿ ಸೈನಿಕರು ಈಗಾಗಲೇ ಚಳಿಯಲ್ಲಿ ನಡುಗುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ರಸ್ತೆಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ರು!

    ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ರಸ್ತೆಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ರು!

    ಲಕ್ನೋ: ವೈದ್ಯರು ತಂಬು ಗರ್ಭಿಣಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ ಪರಿಣಾಮ ಕೊನೆಗೆ ರಸ್ತೆ ಬದಿಯಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಉತ್ತರಪ್ರದೇಶದ ಶ್ರವಸ್ತಿ ಜಿಲ್ಲೆಯ ಭಿಂಗಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯನ್ನು ಸುನಿತಾ ಎಂದು ಗುರುತಿಸಲಾಗಿದ್ದು, ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಘಟನೆ ವಿವರ:
    ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಕೆಯನ್ನು ಅಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಭಿಂಗಾ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅಲ್ಲಿಂದ ಬಹ್ರಾಯ್ಚ್ ಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಆದ್ರೆ ಆ ಸಂದರ್ಭದಲ್ಲಿ ನನ್ನ ಕೈಯಲ್ಲಿ ಬೇಕಾದಷ್ಟು ಹಣ ಇರಲಿಲ್ಲ. ಹೀಗಾಗಿ ನನ್ನ ಪತ್ನಿ ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಅಂತ ಪತಿ ರಮೇಶ್ ವಿವರಿಸಿದ್ದಾರೆ.

    ಘಟನೆ ಸಂಬಂಧ ತನಿಖೆ ನಡೆಸುವಂತೆ ಶ್ರವಸ್ತಿ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ಅವರು ಆದೇಶಿಸಿದ್ದಾರೆ. ಮಹಿಳೆಯೊಬ್ಬರು ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಸುದ್ದಿ ಕೇಳಿದ್ದೇವೆ. ಹೀಗಾಗಿ ಘಟನೆ ಸಂಬಂಧ ಶೀಘ್ರವೇ ತನಿಖೆ ನಡೆಸುವಂತೆ ಈಗಾಗಲೇ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv