Tag: road

  • ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ

    ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ

    ಹುಬ್ಬಳ್ಳಿ: ರಸ್ತೆಗುಂಡಿ ಮತ್ತು ಧೂಳಿನಿಂದ ಕಂಗಾಲಾಗಿದ್ದ ಹುಬ್ಬಳ್ಳಿ, ಧಾರವಾಡ ಮಂದಿಗೆ ಆಸರೆಯಾಗಲು ಪ್ರಧಾನಿ ನರೇಂದ್ರ ಮೋದಿಯೇ (Narendra Modi) ಬರಬೇಕಾಯಿತು. ಮೋದಿ ಅವರನ್ನು ಮೆಚ್ಚಿಸಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ (Hubballi Dharwad Municipal Corporation) ಅಧಿಕಾರಿಗಳು ಹಗಲು ಡ್ರಾಮಾ ಶುರು ಮಾಡಿದ್ದಾರೆ.

    ಇದೇ ತಿಂಗಳ 12ರಂದು ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಅವಳಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಹೀಗಾಗಿ ಈ ಹಿಂದೆ ಬಿಬಿಎಂಪಿ (BBMP) ಮಾಡಿದ ಚಾಳಿಯನ್ನು, ಹುಬ್ಬಳ್ಳಿ-ಧಾರವಾಡ ಪಾಲಿಕೆ ಸಹ ಅಳವಡಿಸಿಕೊಳ್ಳಲು ಮುಂದಾಗಿದ್ದು, ರಾತ್ರೋರಾತ್ರಿ ರಸ್ತೆಗಳ (Road) ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.

    ತಮ್ಮ ಬಂಡವಾಳ ಬಯಲಾಗುವ ಭಯದಲ್ಲಿ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ರಸ್ತೆ ಅಕ್ಕಪಕ್ಕದ ಕಾಂಪೌಂಡ್‍ಗಳಿಗೆ ಸುಣ್ಣ, ಬಣ್ಣ ಬಳಿಸಲು ಸಹ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್ – ವದಂತಿಗಳಿಗೆ ಕಿವಿಕೊಡಬೇಡಿ: ಅಭಯ್ ಪಾಟೀಲ್ ಮನವಿ

    ಹುಬ್ಬಳ್ಳಿ ನಗರದ ರೈಲ್ವೆ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮೈದಾನದ ಅಕ್ಕ-ಪಕ್ಕದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ತಡೆಗೋಡೆಗಳಿಗೆ ಪೇಂಟಿಂಗ್ ಹಚ್ಚಲಾಗುತ್ತಿದೆ. ಇಷ್ಟು ದಿನ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು ಈಗ ದಿಢೀರ್ ಡಾಂಬರ್ ಕಾಣುತ್ತಿವೆ. ಆದರೆ ಇದನ್ನು, ಕೇವಲ ಮೋದಿ ಕಾರ್ಯಕ್ರಮ ಉದ್ದೇಶದಿಂದ ರಸ್ತೆಗೆ ತೆಪೆ ಹಾಕಿ, ಒಂದು ಇಂಚು ಡಾಂಬರ್ ಹಾಕಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

    ಹಲವು ವರ್ಷಗಳಿಂದ ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದರೂ, ತಲೆ ಕೆಡೆಸಿಕೊಳ್ಳದ ಪಾಲಿಕೆ ಈಗ ಸ್ಮಾರ್ಟ್ ಸಿಟಿ ಕಾಮಗಾರಿ ಕರ್ಮಕಾಂಡ ಮುಚ್ಚಿಹಾಕಲು ಈ ಡ್ರಾಮಾ ಮಾಡುತ್ತಿದೆ ಎಂದು ಜನರು ಕಿಡಿಕಾರಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ವರ್ಷಾಚರಣೆ; ದಶಪಥ ಹೆದ್ದಾರಿಯ ರಾಮನಗರ- ಚನ್ನಪಟ್ಟಣ ಬೈಪಾಸ್ ಬಂದ್

    ಹೊಸ ವರ್ಷಾಚರಣೆ; ದಶಪಥ ಹೆದ್ದಾರಿಯ ರಾಮನಗರ- ಚನ್ನಪಟ್ಟಣ ಬೈಪಾಸ್ ಬಂದ್

    ರಾಮನಗರ: ಹೊಸ ವರ್ಷಾಚರಣೆ (New Year) ಹಾಗೂ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಬೆಂಗಳೂರು (Bengaluru)-ಮೈಸೂರು (Mysuru) ದಶಪಥ ಹೆದ್ದಾರಿಯ ಬೈಪಾಸ್‌ಗಳಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಇರಲಿದೆ.

    ಬಿಡದಿ (Bidadi), ರಾಮನಗರ (Ramanagar) ಹಾಗೂ ಚನ್ನಪಟ್ಟಣ (Channapatna) ಬೈಪಾಸ್‌ಗಳಲ್ಲಿ (Bypass) ಇಂದು ಸಂಜೆ 5.30ರಿಂದ ನಾಳೆ ಬೆಳಿಗ್ಗೆ 4.30ರವರೆಗೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಅಂತೆಯೇ ಕುಂಬಳಗೋಡು ಫ್ಲೈ ಓವರ್ ಕೂಡಾ ಇಂದು ರಾತ್ರಿ 8 ರಿಂದ ಭಾನುವಾರ ಬೆಳಿಗ್ಗೆ 4:30ರವರೆಗೆ ಬಂದ್ ಆಗಿರಲಿದೆ. ಹಳೇ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಪಾಘಾತ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರ ಪೊಲೀಸರು ಕ್ರಮವಹಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿ – ಬುಲ್ಡೋಜರ್ ಬಳಸಿ ಅಮೀರ್ ಖಾನ್ ಮನೆ ಕಾಂಪೌಂಡ್ ಧ್ವಂಸ

    ಅಲ್ಲದೇ ಜಿಲ್ಲಾದ್ಯಂತ ರಾತ್ರಿ 12:30ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದ್ದು, ಸಂಭ್ರಮಾಚರಣೆ ನೆಪದಲ್ಲಿ ಪುಂಡಾಟಿಕೆ ಮಾಡಿದರೆ ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ರಾತ್ರಿ ಇಡೀ ಡ್ರಿಂಕ್ ಡ್ರೈವ್ ಬಗ್ಗೆ ನಿಗಾ ವಹಿಸಿ, ತೀವ್ರ ತಪಾಸಣೆ ನಡೆಸಲಾಗುವುದು ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಮೃತಪಟ್ಟಿದ್ದಾಳೆಂದು ಭಾವಿಸಿದ್ದ ಪತ್ನಿಯನ್ನು 9 ವರ್ಷಗಳ ಬಳಿಕ ಕಂಡು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಪತಿ

    Live Tv
    [brid partner=56869869 player=32851 video=960834 autoplay=true]

  • ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

    ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

    ಬೆಳಗಾವಿ: ನಗರದ ಅನಗೋಳದಲ್ಲಿರುವ ಬೆಮ್ಕೊ ಹೈಡ್ರಾಲಿಕ್ಸ್‌ನಿಂದ 4ನೇ ರೈಲ್ವೇ ಗೇಟ್ ವರೆಗಿನ ರಸ್ತೆಯನ್ನು ʼಬಸವರಾಜ ಬೊಮ್ಮಾಯಿ ರಸ್ತೆʼ (Basavaraj Bommai Road) ಎಂದು ನಾಮಕರಣ ಮಾಡಲಾಗಿದೆ.

    ನಗರದ ಕೆ.ಎಲ್.ಇ. ಸಂಸ್ಥೆಯ ಡಾ.ಶೇಷಗಿರಿ ಎಂಜಿನಿಯರಿಂಗ್ ಕಾಲೇಜ್ ಎದುರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಬಸವರಾಜ್ ಅವರು, ‘ಬಸವರಾಜ ಬೊಮ್ಮಾಯಿ’ ರಸ್ತೆ ಫಲಕವನ್ನು ಅನಾವರಣಗೊಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ (Smart City Project) ಅಭಿವೃದ್ಧಿಪಡಿಸಲಾಗಿರುವ ರಸ್ತೆಗೆ ನಾಮಕರಣ ಮಾಡುವುದರ ಜೊತೆಗೆ ಅಲಂಕೃತ ವಿದ್ಯುದ್ದೀಪಗಳಿಗೂ ಸಚಿವರು ಚಾಲನೆ ನೀಡಿದರು. ಇದನ್ನೂ ಓದಿ: ಸ್ಪೆಷಲ್ ಮಾಸ್ಕ್ ರಿಲೀಸ್ – ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡ್ಬೋದು: ಆರ್.ಅಶೋಕ್

    ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿವರಿಸಿದರು. ಮಹಾನಗರ ಪಾಲಿಕೆ ಸದಸ್ಯ ಶ್ರೀಶೈಲ ಕಾಂಬಳೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ್ ಬಾಗೇವಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಹೂಡಿಕೆಗೆ ಅಮೆರಿಕದ ರಾಕ್ ಸ್ಪೇಸ್ ಕಂಪನಿ ಆಸಕ್ತಿ – ಸಚಿವರರೊಂದಿಗೆ ಮಾತುಕತೆ

    Live Tv
    [brid partner=56869869 player=32851 video=960834 autoplay=true]

  • ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

    ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

    ಹುಬ್ಬಳ್ಳಿ: ಹೈಕೋರ್ಟ್ (High Court) ಆದೇಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ (Hubli) ಭೈರಿದೇವರಕೊಪ್ಪ ದರ್ಗಾದ (Bairidevarkoppa Dargah) ತೆರವು ಕಾರ್ಯಾಚರಣೆ ಆರಂಭವಾಗಿದೆ.

    ಭೈರಿದೇವರಕೊಪ್ಪದ ದರ್ಗಾವು ಹುಬ್ಬಳ್ಳಿ – ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿದೆ. ಆದರೆ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕನುಸಾರವಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್‍ನಿಂದ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ತೆರವು ಕಾರ್ಯಾಚರಣೆ ಬೆಳ್ಳಂಬೆಳಗ್ಗೆ ಆರಂಭವಾಗಿದೆ.

    ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಹುಬ್ಬಳ್ಳಿಯಿಂದ ಧಾರವಾಡ ಸಂಪರ್ಕಿಸುವ 500 ಮೀಟರ್ ರಸ್ತೆಯನ್ನು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮುಖ್ಯರಸ್ತೆಗೆ ಬ್ಯಾರಿಕೇಡ್ ಇಟ್ಟು ತೆರವು ಕಾರ್ಯ ಆರಂಭಿಸಿದ್ದು, ಭದ್ರತೆಗಾಗಿ 5 ಡಿವೈಎಸ್‍ಪಿ ಅಥವಾ ಎಸಿಪಿ, 13 ಪಿಐ, 15 ಪಿಎಸ್‍ಐ, 250 ಕಾನ್ಸ್‌ಟೇಬಲ್ ಹಾಗೂ ಆರ್‌ಎಎಫ್, ಕೆಎಸ್‍ಆರ್‌ಪಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಸಮುದಾಯ, ಆರ್ಥಿಕ ಅಭಿವೃದ್ಧಿಗೆ ಸಾಕ್ಷರತೆಯ ಪಾತ್ರ ಪ್ರಮುಖ – ಗೆಹ್ಲೋಟ್‌

    ಪೊಲೀಸ್ ಸರ್ಪಗಾವಲಿನಲ್ಲಿ ದರ್ಗಾ ತೆರವು ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಜೊತೆಗೆ ದರ್ಗಾ ತೆರವಿನ ದೃಶ್ಯ ಸೆರೆ ಹಿಡಿಯದಂತೆ ಮಾಧ್ಯಮದಲ್ಲಿ ನಿರ್ಬಂಧಿಸಲಾಗಿದೆ. ದರ್ಗಾ ಸುತ್ತ ತಗಡು ಜೋಡಿಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    Live Tv
    [brid partner=56869869 player=32851 video=960834 autoplay=true]

  • 2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ಗಡ್ಕರಿ

    2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ಗಡ್ಕರಿ

    ನವದೆಹಲಿ: 2024ರ ಅಂತ್ಯದ ವೇಳೆಗೆ ದೇಶದ ರಸ್ತೆ (Road) ಗುಣಮಟ್ಟವು ಅಮೆರಿಕದ (America) ರಸ್ತೆಗೆ ಸಮನಾಗಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) ತಿಳಿಸಿದರು.

    95ನೇ ಎಫ್‍ಐಸಿಸಿಐ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಯನ್ನು ಮಾಡುತ್ತಿದ್ದೇವೆ. 2024ರ ಅಂತ್ಯದ ವೇಳೆಗೆ ನಮ್ಮ ರಸ್ತೆ ಮೂಲ ಸೌಕರ್ಯವು ಅಮೆರಿಕ, ಇಂಗ್ಲೆಂಡ್‍ಗೆ ಸಮನಾಗಿರುತ್ತದೆ ಎಂದು ಭರವಸೆ ನೀಡಿದರು.

    ಸರಕು ವೆಚ್ಚದ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರಕು ವೆಚ್ಚವು ನಮ್ಮ ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ 14 ಪ್ರತಿಶತವಿದೆ. ಆದರೆ 2024ರ ಅಂತ್ಯದ ವೇಳೆಗೆ 9 ಪ್ರತಿಶತಕ್ಕೆ ಇಳಿಕೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

    ಜಗತ್ತಿನಲ್ಲಿ ಜಾಗತಿಕ ಸಂಪನ್ಮೂಲವು ಶೇ.40ರಷ್ಟು ಖರ್ಚಾಗುತ್ತಿದೆ. ಇದರ ಬದಲಾಗಿ ನಿರ್ಮಾಣ ಕಾರ್ಯದಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಿ, ಉಕ್ಕಿನ ಬಳಕೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    Live Tv
    [brid partner=56869869 player=32851 video=960834 autoplay=true]

  • ಪುಟ್ಟರಾಜು ಎಚ್ಚರಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ರಸ್ತೆ ವೀಕ್ಷಣೆ

    ಪುಟ್ಟರಾಜು ಎಚ್ಚರಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ರಸ್ತೆ ವೀಕ್ಷಣೆ

    ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿಯಿಂದ ಹಳ್ಳಿ ರಸ್ತೆಗಳು ಹಾಳಾಗಿವೆ ಇವುಗಳನ್ನು ಸರಿಪಡಿಸದಿದ್ದರೆ ಸಂಸದ ಪ್ರತಾಪ್ ಸಿಂಹ (Pratap Simha) ಮನೆ ಮುಂದೆ ಧರಣಿ ಮಾಡುವುದಾಗಿ ಹೇಳಿದ್ದ ಮೇಲುಕೋಟೆ ಶಾಸಕ ಪುಟ್ಟರಾಜು (Puttaraju) ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಗಂಭೀರವಾಗಿ ತೆಗೆದುಕೊಂಡು ಇಂದು ಗುಂಡಿ ಬಿದ್ದಿರುವ ರಸ್ತೆಗಳನ್ನು ವೀಕ್ಷಣೆ ಮಾಡಿದ್ದಾರೆ.

    ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿಗೆ ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲೂಕು ವ್ಯಾಪ್ತಿಯ ಹಳ್ಳಿಗಳ ರಸ್ತೆಯಲ್ಲಿ ಮಣ್ಣು ಹಾಗೂ ಕಲ್ಲನ್ನು ಟಿಪ್ಪರ್ ಲಾರಿಗಳ ಮುಕಾಂತರ ತೆಗೆದುಕೊಂಡು ಹೋಗಿರುವುದರಿಂದ ಇದೀಗ ಈ ಭಾಗದ ರಸ್ತೆಗಳು ಗುಂಡಿ ಬಿದ್ದು ಸಂಪೂರ್ಣವಾಗಿ ಹಾಳಾಗಿವೆ. ಈ ರಸ್ತೆಗಳನ್ನು ಸರಿಪಡಿಸುವಂತೆ ಶಾಸಕ ಪುಟ್ಟರಾಜು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ರು. ಅಲ್ಲಿಯೇ ಸಂಸದ ಪ್ರತಾಪ್ ಸಿಂಹ ಗಮನಕ್ಕೆ ತರಲು ಪುಟ್ಟರಾಜು ಪ್ರಯತ್ನಿಸಿದಾಗ ಪ್ರತಾಪ್ ಸಿಂಹ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ತಿಂಗಳು ಸುದ್ದಿಗೋಷ್ಠಿಯಲ್ಲಿ ಶಾಸಕ ಪುಟ್ಟರಾಜು ರಸ್ತೆಗಳನ್ನು ಸರಿಪಡಿಸುವ ಕಡೆ ಗಮನ ಕೊಡಲಿಲ್ಲ ಎಂದರೆ ನಾನು ಪ್ರತಾಪ್ ಸಿಂಹ ಮನೆ ಎದುರು ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕಬಡ್ಡಿ ಅಂಗಳಕ್ಕಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು

    ಇದೀಗ ಪುಟ್ಟರಾಜು ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂಸದರು, ಇಂದು ಶಾಸಕ ಪುಟ್ಟರಾಜು ಜೊತೆಗೂಡಿ ಅಧಿಕಾರಿಗಳೊಂದಿಗೆ ಹಾಳಾಗಿರುವ ರಸ್ತೆಗಳನ್ನು ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಪ್ರತಾಪ್ ಸಿಂಹ, ಒಂದು ಹೆದ್ದಾರಿಗಾಗಿ ಹಳ್ಳಿಗಳ ರಸ್ತೆ ಮಾಡಿದ್ರೆ ಅದು ಶ್ರೇಯವಾಗುವುದಿಲ್ಲ. ಹಾಳಾಗಿರುವ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ. ಪುಟ್ಟರಾಜು ಅವರು ಸಹ ಅಭಿವೃದ್ಧಿ ಪರವಾಗಿ ಇದ್ದಾರೆ, ಅವರ ಮಾತಿನಂತೆ ಇಂದು ನಾನು ಬಂದಿದ್ದೇನೆ. ಹೆದ್ದಾರಿ ಕಾಮಗಾರಿಯಿಂದ ಯಾವ ಯಾವ ರಸ್ತೆಗಳು ಆಳಾಗಿವೆ ಅವುಗಳನ್ನು ಸರಿಪಡಿಸುತ್ತೇವೆ ಎಂದರು.  ಇದನ್ನೂ ಓದಿ: ನಾಳೆ ಮದ್ದೂರು ಬೈಪಾಸ್ ಓಪನ್

    ಇನ್ನೂ ಈ ಬಗ್ಗೆ ಮಾತನಾಡಿ ಶಾಸಕ ಪುಟ್ಟರಾಜು, ಹೆದ್ದಾರಿ ಕಾಮಗಾರಿಯಿಂದ ಹಳ್ಳಿಗಾಡಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ರೆ ಗಮನಹರಿಸಿರಲಿಲ್ಲ, ಹೀಗಾಗಿ ನಾನು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಇದೀಗ ಪ್ರತಾಪ್ ಸಿಂಹ ನನ್ನ ಮಾತಿಗೆ ಬೆಲೆ ಕೊಟ್ಟು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಸರಿಪಡಿಸಬೇಕು, ಒಂದು ವೇಳೆ ತಡವಾದ್ರೆ ನಾನು ಹೋರಾಟದ ಹಾದಿಯನ್ನು ಮುಂದುವರೆಸುತ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಕಾಮಗಾರಿ ನಡೆದ ಎರಡೇ ದಿನಕ್ಕೆ ಕಿತ್ತೋದ ರಸ್ತೆ- 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ ಕಳಪೆ

    ಕಾಮಗಾರಿ ನಡೆದ ಎರಡೇ ದಿನಕ್ಕೆ ಕಿತ್ತೋದ ರಸ್ತೆ- 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ ಕಳಪೆ

    ಕೊಪ್ಪಳ: ಆ ಸಚಿವರು ಮಾತೆತ್ತಿದರೆ ಸಾಕು ನಾನು ಪ್ರಾಮಾಣಿಕ, ನನ್ನ ಕ್ಷೇತ್ರದ ಯಾವುದೇ ಕಾಮಗಾರಿಯಲ್ಲಿ ಕಳಪೆ ಎನ್ನುವ ಮಾತೇ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಾನೆ. ಆದರೆ ಇದೀಗ ಆತನದ್ದೇ ಸ್ವಕ್ಷೇತ್ರದಲ್ಲಿ ಇದೀಗ ರಸ್ತೆ ಕಾಮಗಾರಿ ಕಳಪೆಯಾಗಿದೆ. ಕೈಯಿಂದ ಅಗೆದರೆ ಸಾಕು ಡಾಂಬಾರ್ ಕಿತ್ತು ಬರುತ್ತಿದೆ.

    ಹೌದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಮಾಡಿರುವ ಡಾಂಬಾರ್ ರಸ್ತೆ (Road) ಕಿತ್ತು ಹೋಗಿದೆ. ಕುದರಿಮೋತಿ ಗ್ರಾಮದಿಂದ ಚಂಡಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, 1 ಕೋಟಿ 20 ಲಕ್ಷ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಳಪೆ ಗುಣಮಟ್ಟದಿಂದ ರಸ್ತೆ ನಿರ್ಮಾಣ ಮಾಡಿದ್ದರ ಕಾರಣಕ್ಕಾಗಿ ಇದೀಗ ಇಡೀ ರಸ್ತೆ ಸಂಪೂರ್ಣವಾಗಿ ಕಿತ್ತು ಬರುತ್ತಿದೆ. ಕೈ ಹಾಕಿ ಅಗೆದರೆ ಸಾಕು ಡಾಂಬಾರ್ ಕಿತ್ತುಕೊಂಡು ಬರುತ್ತಿದೆ.

    ಶಾಸಕ ಹಾಗೂ ಸಚಿವ ಹಾಲಪ್ಪ ಆಚಾರ್ (Halappa Achar) ಕ್ಷೇತ್ರದಲ್ಲೇ ಕಳಪೆ ಕಾಮಗಾರಿ ಆಗಿದ್ದು, ಅಧಿಕಾರಿಗಳಿಗೆ ಜನ ಛೀಮಾರಿ ಹಾಕ್ತಿದ್ದಾರೆ. ಈ ಕಳಪೆ ರಸ್ತೆಯನ್ನು ಮಾಡಿದ್ದು ಸ್ವತಃ ಸಚಿವರ ಸಂಬಂಧಿಕರಾದ ಬಾಪುಗೌಡ (Bapu Gowda) ಅನ್ನೋರು ಎನ್ನಲಾಗ್ತಿದೆ. ರಸ್ತೆ ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರು ಕೇಳಿದ್ರೆ ಗುತ್ತಿಗೆದಾರ ಬಾಪುಗೌಡ ಧಮ್ಕಿ ಹಾಕಿದ್ದಾನಂತೆ. ಅಲ್ಲದೇ ಪೊಲೀಸರಿಂದಲೂ ಧಮ್ಕಿ ಹಾಕಿಸಿದ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬಾವ್ಲಾ ರ‍್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ – ನಿಯಮ ಉಲ್ಲಂಘಿಸಿ ಡ್ರೋನ್ ಹಾರಿಸಿದ ಮೂವರು ವಶಕ್ಕೆ

    ಇನ್ನಾದರೂ ಸಚಿವ ಹಾಲಪ್ಪ ಆಚಾರ್ ಕ್ರಮಕೈಗೊಳ್ಳಬೇಕಿದೆ. ಕುದರಿಮೋತಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಕಳಪೆ ಕಾಮಗಾರಿ ರಸ್ತೆಯನ್ನು ಉತ್ತಮ ಗುಣಮಟ್ಟದ ರಸ್ತೆಯನ್ನಾಗಿ ಪುನರ್ ನಿರ್ಮಾಣ ಮಾಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಶಾಸಕ ಮಹೇಶ್‌ ಕುಮಟಳ್ಳಿಗೆ ಒಳ್ಳೆ ಬುದ್ಧಿ ಬರಲಿ – ಗ್ರಾಮಸ್ಥರಿಂದ ರಸ್ತೆ ಮಧ್ಯೆ ಹೋಮ ಮಾಡಿ ವಿನೂತನ ಪ್ರತಿಭಟನೆ

    ಶಾಸಕ ಮಹೇಶ್‌ ಕುಮಟಳ್ಳಿಗೆ ಒಳ್ಳೆ ಬುದ್ಧಿ ಬರಲಿ – ಗ್ರಾಮಸ್ಥರಿಂದ ರಸ್ತೆ ಮಧ್ಯೆ ಹೋಮ ಮಾಡಿ ವಿನೂತನ ಪ್ರತಿಭಟನೆ

    ಚಿಕ್ಕೋಡಿ: ಸಾಮಾನ್ಯವಾಗಿ ದೇವಸ್ಥಾನ ಹಾಗೂ ಮನೆ ಗೃಹಪ್ರವೇಶ ಸಮಯದಲ್ಲಿ ಹೋಮ ಹವನ ಮಾಡುವುದನ್ನು ನೋಡಿದ್ದೇವೆ. ಆದರೆ ಕಳೆದ 15 ವರ್ಷಗಳಿಂದ ರಸ್ತೆ (Road) ನಿರ್ಮಾಣವಾಗದ ಹಿನ್ನೆಲೆಯಲ್ಲಿ ಆದಷ್ಟು ಬೇಗನೇ ರಸ್ತೆ ಅಭಿವೃದ್ಧಿಯಾಗಬೇಕು ಎಂದು ರಸ್ತೆ ಮಧ್ಯದಲ್ಲೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮಸ್ಥರು ಹೋಮ ನಡೆಸಿದ್ದಾರೆ.

    ಅಥಣಿ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ನೀಡಪ್ಪ ದೇವರೇ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಸುಟ್ಟಟ್ಟಿ ಗ್ರಾಮದಿಂದ ಯಲ್ಲಮ್ಮವಾಡಿ ಗ್ರಾಮದವರೆಗೆ ಸರಿಸುಮಾರು 6 ಕಿ.ಮೀ ರಸ್ತೆ ಕಳೆದ 15 ವರ್ಷದಿಂದ ಸಂಪೂರ್ಣವಾಗಿ ಹದಿಗೆಟ್ಟ ಪರಿಣಾಮವಾಗಿ, ವಾಹನ ಸವಾರರು ಗರ್ಭಿಣಿಯರು, ರೋಗಿಗಳು, ಶಾಲೆ ಮಕ್ಕಳು ಪ್ರತಿಕ್ಷಣವೂ ಸಂಕಷ್ಟ ಪಡುವಂತಾಗಿತ್ತು. ಇದನ್ನೂ ಓದಿ: ಮತ್ತೆ ಹೊಸ ವರಸೆ ಶುರು ಮಾಡಿದ ಮಹಾರಾಷ್ಟ್ರ ಸಿಎಂ, ಗಡಿ ವಿವಾದ ಮಾತುಕತೆಯಿಂದ ಬಗೆಹರಿಯಲಿ: ಏಕನಾಥ ಶಿಂಧೆ

    ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು. ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ರಸ್ತೆ ಮಧ್ಯದಲ್ಲಿ ಹೋಮ ಹವನ ಮಾಡಿ, ಆದಷ್ಟು ಬೇಗನೆ ರಸ್ತೆ ಅಭಿವೃದ್ಧಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ವಿನೂತನವಾಗಿ ಪ್ರತಿಭಟನೆ ಮಾಡಿ ಸರ್ಕಾರ ಗಮನವನ್ನು ಸೆಳೆದಿದ್ದಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್‌ – ಮೊಬೈಲ್‌ನಲ್ಲಿ 6 ಜಾಗ ಸರ್ಚ್‌ ಮಾಡಿದ್ದ ಬಾಂಬರ್‌

    Live Tv
    [brid partner=56869869 player=32851 video=960834 autoplay=true]

  • ನೋವಿನಿಂದ ಚೀರಾಡಿದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ – ಅಪರಿಚಿತನ ಸಹಾಯದಿಂದ ರಸ್ತೆಯಲ್ಲೇ ಮಹಿಳೆಗೆ ಹೆರಿಗೆ

    ನೋವಿನಿಂದ ಚೀರಾಡಿದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ – ಅಪರಿಚಿತನ ಸಹಾಯದಿಂದ ರಸ್ತೆಯಲ್ಲೇ ಮಹಿಳೆಗೆ ಹೆರಿಗೆ

    ಅಮರಾವತಿ: ತನ್ನನ್ನು ನೋಡಿಕೊಳ್ಳಲು ಕುಟುಂಬದವರು ಯಾರೂ ಇಲ್ಲ ಎಂಬ ಕಾರಣಕ್ಕೆ ತುಂಬು ಗರ್ಭಿಣಿಯನ್ನು (Pregnant) ಆಸ್ಪತ್ರೆಗೆ (Hospital) ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿಯ (Tirupati) ಆಸ್ಪತ್ರೆಯೊಂದರಲ್ಲಿ ನಡೆದಿದೆ. ಕೊನೆಗೆ ಮಹಿಳೆ ಅಪರಿಚಿತ ವ್ಯಕ್ತಿಯೊಬ್ಬನ ಸಹಾಯದಿಂದ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

    ವರದಿಗಳ ಪ್ರಕಾರ 100 ಹಾಸಿಗೆಗಳ ತಿರುಪತಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಗೆ ದಾಖಲಾತಿಯನ್ನು ನಿರಾಕರಿಸಿದ ಬಳಿಕ ಅಲ್ಲಿಂದ ಹೊರ ಬರುತ್ತಿದ್ದಂತೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಮಹಿಳೆಗೆ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ (Road) ಹೆರಿಗೆ (Delivery) ಮಾಡಿಸಿದ್ದಾನೆ.

    ಮಹಿಳೆಗೆ ಹೆರಿಗೆ ಮಾಡಿಸುವ ವೇಳೆ ಅಲ್ಲೇ ಇದ್ದ ಕೆಲ ಮಹಿಳೆಯರು ಬೆಡ್‌ಶೀಟ್ ಹಿಡಿದುಕೊಂಡು ಆಕೆಯನ್ನು ಸುತ್ತುವರಿದಿದ್ದಾರೆ. ಮಹಿಳೆ ಹೆರಿಗೆ ವೇಳೆ ಚೀರಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ. ಆಕೆಗೆ ಹೆರಿಗೆ ಮಾಡಿಸಿದ ವ್ಯಕ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದು ಬಳಿಕ ತಿಳಿದುಬಂದಿದೆ. ಇದನ್ನೂ ಓದಿ: ಜನಪ್ರಿಯ ಪಾನೀಯ ರಸ್ನಾ ಸೃಷ್ಟಿಕರ್ತ ಅರೀಜ್ ಪಿರೋಜ್‍ಶಾ ಖಂಬಟ್ಟಾ ನಿಧನ

    ರಸ್ತೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗರ್ಭಿಣಿಯೊಂದಿಗೆ ಯಾರೂ ಇಲ್ಲವೆಂದರೂ ಆಸ್ಪತ್ರೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿರುಪತಿ ಜಿಲ್ಲಾ ಆರೋಗ್ಯ ಉಸ್ತುವಾರಿ ಶ್ರೀಹರಿ ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ – ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

    Live Tv
    [brid partner=56869869 player=32851 video=960834 autoplay=true]

  • ದಶಪಥ ರಸ್ತೆ ನೋಡಿದ್ರೆ ಅಸಹ್ಯವಾಗುತ್ತೆ- ಸಂಸದರ ಮನೆ ಮುಂದೆ ಧರಣಿ ಮಾಡ್ತೀನಿ: ಶಾಸಕ ಎಚ್ಚರಿಕೆ

    ದಶಪಥ ರಸ್ತೆ ನೋಡಿದ್ರೆ ಅಸಹ್ಯವಾಗುತ್ತೆ- ಸಂಸದರ ಮನೆ ಮುಂದೆ ಧರಣಿ ಮಾಡ್ತೀನಿ: ಶಾಸಕ ಎಚ್ಚರಿಕೆ

    ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಸ್ತೆ (Mysuru Bengaluru Highway) ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಆ ರಸ್ತೆ ನೋಡಿದ್ರೆ ನನಗೆ ಅಸಹ್ಯವಾಗುತ್ತದೆ. ಹೆದ್ದಾರಿ ಕಾಮಗಾರಿಗೆ ಬೇರೆ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಒಂದು ವಾರದಲ್ಲಿ ಹಾಳಾದ ರಸ್ತೆ ದುರಸ್ತಿ ಮಾಡಿಸದಿದ್ರೆ ಪ್ರತಾಪ್ ಸಿಂಹ (Pratap Simha) ಮನೆ ಮುಂದೆ ಧರಣಿ ಮಾಡ್ತೀನಿ ಎಂದು ಮೇಲುಕೋಟೆ ಶಾಸಕ ಪುಟ್ಟರಾಜು (Puttaraju) ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರು-ಮೈಸೂರು ಹೆದ್ದಾರಿ (Mysuru Bengaluru Highway) ಕಾಮಗಾರಿಯಿಂದ ಮೇಲುಕೋಟೆ ಕ್ಷೇತ್ರದ ರಸ್ತೆಗಳು ಹಾಳಾಗಿವೆ. ದಶಪಥ ಹೆದ್ದಾರಿ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ, ನಾನು ಸಂಸದನಾಗಿದ್ದಾಗ ಈ ಯೋಜನೆಗೆ ಒತ್ತಾಯಿಸಿದ್ದೆ. ಕಾಮಗಾರಿ ಪ್ರಾರಂಭವಾದ ವೇಳೆ ಹಾಳಾದ ರಸ್ತೆ ದುರಸ್ತಿ ಮಾಡುವುದಾಗಿ ಮಾತು ನೀಡಿದ್ರು. ಆದರೆ ಪ್ರತಾಪ್ ಸಿಂಹ ಒಂದು ತಿಂಗಳಿನಿಂದ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ವಾರದಲ್ಲಿ ರಸ್ತೆ ದುರಸ್ತಿ ಮಾಡದಿದ್ರೆ ಅವರ ಮನೆ ಮುಂದೆ ಧರಣಿ ಮಾಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಲುಕೋಟೆ ಬೆಟ್ಟದಲ್ಲಿ ಬಿದ್ದ ಮರ – ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ, ಶಿಕ್ಷಕರಿಗೆ ಗಂಭೀರ ಗಾಯ

    ಬೆಂಗಳೂರು-ಮೈಸೂರು ರಸ್ತೆಯಿಂದ ಮಂಡ್ಯ (Mandya) ಜನರ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದ ಹಾಗೆ ಆಗಿದೆ. ಈ ರಸ್ತೆಯಿಂದ ಮಂಡ್ಯದ ಸಾರ್ವಜನಿಕರಿಗೆ ಇಷ್ಟು ತೊಂದರೆಯಾಗುತ್ತದೆ ಎಂದು ಊಹಿಸಲು ಆಗುವುದಿಲ್ಲ. ಗುಣಮಟ್ಟದ ಕಾಮಗಾರಿ ನಡೆದೇ ಇಲ್ಲ, ಬಹಳಷ್ಟು ಕಳಪೆ ಕೆಲಸ ನಡೆದಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನನಗೆ ಸಮಾಧಾನ ತಂದಿಲ್ಲ, ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ರಸ್ತೆ ನೋಡಲು ಅಸಹ್ಯವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಂಡವಪುರದಲ್ಲಿ ಮೂರು ದಿನಗಳ ಕಾಲ ಪುನೀತೋತ್ಸವ

    Live Tv
    [brid partner=56869869 player=32851 video=960834 autoplay=true]