Tag: road

  • ಇಳಿವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಗ್ರಾಪಂ ಸದಸ್ಯ

    ಇಳಿವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಗ್ರಾಪಂ ಸದಸ್ಯ

    ಬೀದರ್: ತಾಲೂಕಿನ ಮಲ್ಕಾಪುರ ಗ್ರಾಮ ಪಂಚಾಯಿತಿ ಸದಸ್ಯ ಶಹಾಪುರದ 82 ವರ್ಷದ ಶಂಕರೆಪ್ಪ ಬಿರಾದಾರ ಅವರು ಸ್ವಂತ ಖರ್ಚಿನಲ್ಲಿ ರಸ್ತೆಯನ್ನು ದುರಸ್ತಿಗೊಳಿಸಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

    ಸಾವಿರಾರು ರೂ. ಖರ್ಚು ಮಾಡಿದ ಪರಿಣಾಮ ಇಂದು ಗ್ರಾಮದಲ್ಲಿ ಬಸ್ ಸಂಚಾರ ಪುನರಾರಂಭಗೊಂಡಿದೆ. ಬೀದರ್-ಜಹೀರಾಬಾದ್ ರಸ್ತೆಯಲ್ಲಿನ ಶಹಾಪುರ ಗೇಟ್‌ನಿಂದ ಶಹಾಪುರ ಗ್ರಾಮದ ವರೆಗಿನ 3 ಕಿ.ಮೀ. ಉದ್ದದ ರಸ್ತೆ ಹಾಳಾಗಿದ್ದರಿಂದ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದನ್ನೂ ಓದಿ: ಬಡವರ ರಕ್ಷಣೆಗಾಗಿ ಜೈಲಿಗೆ ಹೋಗಲು ಸಿದ್ಧ: ಹರೀಶ್ ಪೂಂಜಾ

    ಇದೀಗ ಇಳಿವಯಸ್ಸಿನಲ್ಲೂ ಶಂಕರೆಪ್ಪ ಅವರು ಮುಂದೆ ನಿಂತು ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ. ಇದರ ಪರಿಣಾಮ ಈಗ ಗ್ರಾಮಕ್ಕೆ ಬಸ್ ಬರುತ್ತಿದ್ದು, ಗ್ರಾಮಸ್ಥರು ಶಂಕರೆಪ್ಪ ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಮನೆಯೊಂದು ನೂರಾರು ಬಾಗಿಲು: ಮುನಿಸ್ವಾಮಿ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೀಲಿಂಗ್‌ ಮಾಡಿದ  ಬೈಕ್‌ ಸುಟ್ಟು ಹಾಕಿ, 45 ಲಕ್ಷ ಸಬ್‌ಸ್ಕ್ರೈಬ್‌ ಇರೋ ಯೂಟ್ಯೂಬ್‌ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್‌ ಚಾಟಿ

    ವೀಲಿಂಗ್‌ ಮಾಡಿದ ಬೈಕ್‌ ಸುಟ್ಟು ಹಾಕಿ, 45 ಲಕ್ಷ ಸಬ್‌ಸ್ಕ್ರೈಬ್‌ ಇರೋ ಯೂಟ್ಯೂಬ್‌ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್‌ ಚಾಟಿ

    ಚೆನ್ನೈ: ರಸ್ತೆಗಳಲ್ಲಿ ಬೈಕ್‌ನಲ್ಲಿ ವೀಲಿಂಗ್‌ ಮಾಡುವವರ ಬೈಕ್‌ಗಳನ್ನು (Bike) ಸುಟ್ಟು ಹಾಕಬೇಕು ಎಂದು ಮದ್ರಾಸ್ ಹೈಕೋರ್ಟ್ (Madras High Court) ಖಾರವಾಗಿ ಅಭಿಪ್ರಾಯಪಟ್ಟಿದೆ.

    ವೀಲಿಂಗ್ ಮಾಡಿ ಬಂಧಿತನಾಗಿರುವ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಜಾ ಮಾಡಿದ ಕೋರ್ಟ್‌ ಬಂಧಿತ ವ್ಯಕ್ತಿಯ ಚಾನೆಲನ್ನು ಯೂಟ್ಯೂಬ್‌ನಿಂದಲೇ ತೆಗೆದು ಹಾಕಬೇಕು ಎಂದು ಚಾಟಿ ಬೀಸಿದೆ.

    ಬೈಕಿಂಗ್‌ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ಯೂಟ್ಯೂಬರ್ ಟಿಟಿಎಫ್ ವಾಸನ್ (TTF Vasan) ಚೆನ್ನೈ-ವೆಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ (Bike Wheeling) ಮಾಡುತ್ತಾ ಚಿತ್ರೀಕರಣ ಮಾಡುವಾಗ ಬಿದ್ದು ಗಾಯಗೊಂಡಿದ್ದರು. ಅಪಾಯಕಾರಿ ಚಾಲನೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ವಾಸನ್ ಅವರನ್ನು ಬಂಧಿಸಿದ್ದರು. ಬಳಿಕ ವಾಸನ್ ಜಾಮೀನು ಅರ್ಜಿ ಸಲ್ಲಿಸಿದ್ದರು.

    ವಿಚಾರಣೆ ಸಂದರ್ಭದಲ್ಲಿ ವಾಸನ್‌ 20 ಲಕ್ಷ ರೂ. ಮೌಲ್ಯದ ಬೈಕನ್ನು ಹೊಂದಿದ್ದಾರೆ. ಅಪಾಯಕಾರಿ ಸ್ಟಂಟ್‌ ಮಾಡುವ ವೇಳೆ 3 ಲಕ್ಷ ರೂ. ಮೌಲ್ಯದ ಜಾಕೆಟ್‌ ಧರಿಸಿದ್ದರಿಂದ ಅವರು ಪಾರಾಗಿದ್ದಾರೆ. ಅವರ Twin Throttlers ಚಾನೆಲನ್ನು 45 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಈ ವಿಡಿಯೋದಿಂದ ಯುವಕರು ಪ್ರಭಾವಿತರಾಗಿ ಮಿತಿಮೀರಿದ ವೇಗದಲ್ಲಿ ಸಂಚರಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೆ ಜಾಮೀನು ಮಂಜೂರು ಮಾಡಬೇಡಿ ಎಂದು ಪೊಲೀಸರು ಪರ ವಕೀಲರು ಮನವಿ ಮಾಡಿದರು.  ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಸಿವಿ ಕಾರ್ತಿಕೇಯನ್‌ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿ ವಾಸನ್‌ಗೆ ಇದೊಂದು ಪಾಠವಾಗಬೇಕು. ಕಸ್ಟಡಿಯಲ್ಲಿ ಇರಲಿ ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೇ ವಾಸನ್‌ ಸ್ಟಂಟ್‌ ಮಾಡಿದ ಬೈಕನ್ನು ಸುಟ್ಟು ಹಾಕಬೇಕು. ಯೂಟ್ಯೂಬ್‌ ಚಾನೆಲನ್ನು ಡಿಲೀಟ್‌ ಮಾಡಬೇಕು ಎಂದು ಖಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ವಾಸನ್ ಅವರ ಕೋರಿಕೆಯಂತೆ ವೈದ್ಯಕೀಯ ಸಹಾಯವನ್ನು ಒದಗಿಸುವಂತೆ ನ್ಯಾಯಾಲಯವು ಆದೇಶಿಸಿತು. ಕೋರ್ಟ್‌ ಈ ಹಿಂದೆ ಎರಡು ಬಾರಿ ವಾಸನ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

    ಟಿಟಿಎಫ್ ವಾಸನ್ ಅವರು ತಮ್ಮ ಟ್ವಿನ್ ಥ್ರಾಟ್ಲರ್‌ ಚಾನೆಲ್‌ನಲ್ಲಿ ಬೈಕಿಂಗ್ ವೀಡಿಯೊಗಳಿಗೆ ಪ್ರಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಅವರು ಕಾಲಿವುಡ್‌ಗೆ ಎಂಟ್ರಿಯಾಗಬೇಕಿತ್ತು. ಸೆಲ್ ಆಮ್ ನಿರ್ದೇಶನದ ‘ಮಂಜಲ್ ವೀರನ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಕಳೆದ ತಿಂಗಳು ವಾಸನ್ ಅವರು ತಮ್ಮ ಐಷಾರಾಮಿ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಲು ಪ್ರಯತ್ನಿಸಿದಾಗ ರಸ್ತೆ ಅಪಘಾತಕ್ಕೀಡಾಗಿದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಮಗಾರಿ ವಿಳಂಬ: ಬಾಗಲಕೋಟೆ ನಗರದ ವ್ಯಾಪಾರಸ್ಥರು ಆಕ್ರೋಶ

    ಕಾಮಗಾರಿ ವಿಳಂಬ: ಬಾಗಲಕೋಟೆ ನಗರದ ವ್ಯಾಪಾರಸ್ಥರು ಆಕ್ರೋಶ

    ಬಾಗಲಕೋಟೆ: ನಗರದ ವಿದ್ಯಾಗಿರಿಯ 19ನೇ ಕ್ರಾಸ್ ನಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ (Road Development Works) ಅತೀ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ನಗರದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿ ಬಾಗಲಕೋಟೆ (Bagalkote) ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ.

    ಬಾಗಲಕೋಟೆಯ ವಿದ್ಯಾಗಿರಿಯ 19ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಸುಮಾರು ಐದು ತಿಂಗಳಿನಿಂದ ಮಂದಗತಿಯಲ್ಲಿ ನಡೆಯುತ್ತಿದೆ. ಅಂದಾಜು 1 ಕಿಲೋ ಮೀಟರ್ ಅಂತರದ ಈ ರಸ್ತೆ ನಿರ್ಮಾಣ ಕಾಮಗಾರಿ ಸುಮಾರು ಐದು ತಿಂಗಳಾದರೂ ಪೂರ್ಣಗೊಂಡಿಲ್ಲ. ಇದರಿಂದ ನಮ್ಮ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗುತ್ತಿದೆ ಎಂದು ವ್ಯಾಪಾರಸ್ಥರು ಗುತ್ತಿಗೆದಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನಿತ್ಯ ನಾವು ವ್ಯಾಪಾರ- ವಹಿವಾಟನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿದ್ದೇವೆ. ಸದ್ಯ ರಸ್ತೆ ಕಾಮಗಾರಿಯಿಂದ ಅಂಗಡಿಗಳು ಬಂದ್ ಆಗಿ ವ್ಯಾಪಾರವಿಲ್ಲದೇ ನಮ್ಮ ಬದುಕು ದುಸ್ತರವಾಗಿದೆ. ನಾವೆಂದೂ ಅಭಿವೃದ್ಧಿಗೆ ಅಡ್ಡಿಪಡಿಸಿಲ್ಲ. ಸಾರ್ವಜನಿಕರ ಉದ್ದೇಶಕ್ಕಾಗಿ ನಡೆಯುವ ಅಭಿವೃದ್ದಿ ಕಾಮಗಾರಿಗೆ ಸಹಕರಿಸಬೇಕೆಂಬ ಕಾರಣಕ್ಕಾಗಿಯೇ ಕಳೆದ ಐದಾರು ತಿಂಗಳಿನಿಂದ ಸಹಕರಿಸುತ್ತಾ ಬಂದಿದ್ದೇವೆ. ಆದರೆ ಈಗ ರಸ್ತೆ ಮಾಡುವುದಕ್ಕಾಗಿ ಕಳೆದ 20 ದಿನಗಳಿಂದ ರಸ್ತೆಯನ್ನು ಬಂದ್ ಮಾಡಿದ್ದರಿಂದ ನಮ್ಮ ವ್ಯಾಪಾರ- ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ಪ್ರಮುಖ ರಸ್ತೆಯನ್ನು ಬಂದ್ ಮಾಡಿ ಕೆಲಸ ಮಾಡುವಾಗ ವೇಗದಲ್ಲಿ ಕಾಮಗಾರಿ ಮುಂದುವರಿಯಲಿ ಎಂದು ನಾವು ಭಾವಿಸಿದ್ದೆವು. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಇತ್ತೀಚಿಗಿನ ಗಣೇಶ ಚತುರ್ಥಿಯ ವ್ಯಾಪಾರವನ್ನು ಈ ಕಾಮಗಾರಿ ಈಗಾಗಲೇ ನುಂಗಿ ಹಾಕಿದೆ. ಈಗಲೂ ಕಾಮಗಾರಿ ವಿಳಂಬವಾದರೆ ಮುಂಬರುವ ಸಾಲು, ಸಾಲು ಹಬ್ಬಗಳಿಗೂ ನಮಗೆ ವ್ಯಾಪಾರ ಇಲ್ಲದಂತಾಗುತ್ತದೆ. ಅದಕ್ಕಾಗಿ ಕಾಮಗಾರಿಗೆ ವೇಗ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ಜಾನಕಿಯವರಿಗೆ ನಗರದ ವ್ಯಾಪಾರಸ್ಥರು ಮನವಿ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಾರಿ ಬರುತ್ತಲ್ಲ ಕಲ್ಲು ಹೊಡೆಯಿರಿ, ಮುತ್ತಿಗೆ ಹಾಕಿ: ಗ್ರಾಮಸ್ಥರಿಗೆ ಶಾಸಕರಿಂದ ಪ್ರಚೋದನೆ

    ಲಾರಿ ಬರುತ್ತಲ್ಲ ಕಲ್ಲು ಹೊಡೆಯಿರಿ, ಮುತ್ತಿಗೆ ಹಾಕಿ: ಗ್ರಾಮಸ್ಥರಿಗೆ ಶಾಸಕರಿಂದ ಪ್ರಚೋದನೆ

    – ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕರಿಂದ ಸ್ಪಷ್ಟನೆ

    ಚಾಮರಾಜನಗರ: ಲಾರಿ (Lorry) ಬರುತ್ತಲ್ಲ ಕಲ್ಲು ಹೊಡೆಯಿರಿ, ಮುತ್ತಿಗೆ ಹಾಕಿ ಎಂದು ಗ್ರಾಮಸ್ಥರಿಗೆ ಗುಂಡ್ಲುಪೇಟೆ (Gundlupete) ಶಾಸಕ ಗಣೇಶ್ ಪ್ರಸಾದ್ (Ganesh Prasad) ಪ್ರಚೋದನೆ ಕೊಟ್ಟಿದ್ದಾರೆ ಎನ್ನಲಾದ ವಿಡಿಯೋ (Video) ಎಲ್ಲೆಡೆ ವೈರಲ್ ಆಗುತ್ತಿದೆ.

    ಯಾರೋ ರಸ್ತೆ ಅಗಲೀಕರಣ ಮಾಡ್ಕೊಂಡಿದ್ದಾರೆ. ಅವರಿಗೆ ಮುತ್ತಿಗೆ ಹಾಕಿ ಎಂದು ಪ್ರಚೋದನೆ ನೀಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ನಿನ್ನೆ ಗುಂಡ್ಲುಪೇಟೆ ತಾಲೂಕಿನ ಕಾಲ ಹಿರಿಕಾಟಿ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಶಾಸಕ ಗಣೇಶ್ ಪ್ರಸಾದ್ ಭೇಟಿ ನೀಡಿದ್ದರು. ಇದನ್ನೂ ಓದಿ: ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ – ಅಪ್ರಾಪ್ತರನ್ನೇ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಬಂಧನ

    ಈ ವೇಳೆ ಟಿಪ್ಪರ್ ಲಾರಿ ಸಂಚಾರ, ರಸ್ತೆ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂದರ್ಭ ಶಾಸಕರು, ಲಾರಿ ಬರುತ್ತಲ್ಲ ಕಲ್ಲು ಹೊಡೆಯಿರಿ ಎಂಬ ಪ್ರಚೋದನೆ ಕೊಟ್ಟಿದ್ದಾರೆ. ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಸಕರ ಮಾತಿಗೆ ಪರ-ವಿರೋಧ ಚರ್ಚೆಯಾಗ್ತಿದೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಕೊಂದು ಪತ್ನಿಯೊಂದಿಗೆ ಟೆಕ್ಕಿ ಆತ್ಮಹತ್ಯೆ

    ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕ ಗಣೇಶ್ ಪ್ರಸಾದ್ ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ರಸ್ತೆ ನೋಡಲು ಅಲ್ಲಿಗೆ ಹೋಗಿದ್ದೆ. ಲಾರಿಗಳು ಓಡಾಡಿ ರಸ್ತೆ ಹಾಳಾಗಿದೆ. ಮಾನವೀಯತೆ ದೃಷ್ಟಿಯಿಂದ ಯಾರು ರಸ್ತೆ ಉಪಯೋಗಿಸುತ್ತಾರೋ ಅವರೇ ಇದನ್ನು ತುಂಬಿಕೊಡಬೇಕು. ಫುಟ್‌ಪಾತ್‌ಗೂ ರಸ್ತೆ ಮಾಡಿದ್ದಾರೆ. ಸರ್ಕಾರದ ರಸ್ತೆಯನ್ನು ಅಧ್ವಾನ ಮಾಡಿದ್ದಾರೆ. ಶಾಲಾ ಮಕ್ಕಳು ಕೂಡಾ ಲಾರಿ ನಿಲ್ಲಿಸಿ ಎಂದು ಮನವಿ ಕೊಟ್ಟಿದ್ದಾರೆ. ಕಲ್ಲು ಇಡಿ ಅಂತಾ ಹೇಳಲು ಹೋಗಿ ಕಲ್ಲು ಹೊಡೆಯಿರಿ ಅಂದಿದ್ದೇನೆ ಎಂದರು. ಇದನ್ನೂ ಓದಿ: ಮಗುವನ್ನು ನೋಡಲೆಂದು ಪತ್ನಿ ಮನೆಗೆ ಹೋದಾಗ ಹಲ್ಲೆಗೈದು ಹಲ್ಲು ಕಿತ್ತ ಮಾವ!

    ಬಿಜೆಪಿಯವರು (BJP) ಸೋತು ಡಿಪ್ರೆಷನ್‌ಗೆ ಒಳಗಾಗಿ ಈ ರೀತಿ ಆಡುತ್ತಿದ್ದಾರೆ. ನಮ್ಮದು ಕೂಡಾ ಕ್ರಷರ್ ಇದೆ. ಸಾರ್ವಜನಿಕರು ದೂರು ಕೊಟ್ಟಿದ್ದರು. ನಾವು ಬೇರೆ ರಸ್ತೆ ಮಾಡಿಕೊಂಡಿದ್ದೇವೆ. ನಾನು ಸಾರ್ವಜನಿಕವಾಗಿ ಯಾರಿಗೂ ಕೂಡ ಪ್ರಚೋದನೆ ಮಾಡಲ್ಲ. ನಾನು ಯಾರನ್ನೂ ಕೂಡ ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದರು.  ಇದನ್ನೂ ಓದಿ: ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಳಪೆ ರಸ್ತೆ ಕಾಮಗಾರಿ ಆರೋಪ – ಎಂಜಿನಿಯರ್‌ಗೆ ಕಲ್ಲೇಟು

    ಕಳಪೆ ರಸ್ತೆ ಕಾಮಗಾರಿ ಆರೋಪ – ಎಂಜಿನಿಯರ್‌ಗೆ ಕಲ್ಲೇಟು

    ಚಿತ್ರದುರ್ಗ: ಕಳಪೆ ರಸ್ತೆ ಕಾಮಗಾರಿಯ ಆರೋಪ ಹೊರಿಸಿ ಗ್ರಾಮಸ್ಥರು ಎಂಜಿನಿಯರ್‌ಗೆ (Engineer) ಕಲ್ಲೇಟು ಹೊಡೆದಿರುವ ಘಟನೆ ಚಿತ್ರದುರ್ಗ (Chitradurga)  ಜಿಲ್ಲೆಯಲ್ಲಿ ನಡೆದಿದೆ. ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಎಂಜಿನಿಯರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಚಿತ್ರದುರ್ಗ ಜಿಲ್ಲೆಯ ಕಸವನಹಳ್ಳಿಯಲ್ಲಿ ನಡೆದಿದೆ. ಕಸವನಹಳ್ಳಿ ಪಿಡಬ್ಲ್ಯುಡಿ ಎಂಜಿನಿಯರ್ ನಾಗರಾಜ್‌ಗೆ ಗ್ರಾಮಸ್ಥರು ಸೇರಿಕೊಂಡು ಕಲ್ಲೆಸೆದಿದ್ದಾರೆ ಎನ್ನಲಾಗಿದೆ. ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಸವನಹಳ್ಳಿ ರಸ್ತೆ ಕಾಮಗಾರಿ ಮಾಡಲಾಗುತ್ತಿತ್ತು. ಆದರೆ ರಸ್ತೆ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ರಸ್ತೆ ಕಾಮಗಾರಿ ವೀಕ್ಷಣೆಗೆಂದು ತೆರಳಿದ್ದ ವೇಳೆ ಎಂಜಿನಿಯರ್ ಅನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಗಲಾಟೆ ನಡೆದು, ನೂಕಾಟ, ತಳ್ಳಾಟದ ವೇಳೆ ನಾಗರಾಜ್ ಮೇಲೆ ಕಲ್ಲೆಸೆಯಲಾಗಿದೆ. ನಾಗರಾಜ್ ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಜ್ಯುವೆಲರಿ ಶಾಪ್‌ನಲ್ಲಿ ಕೈಚಳಕ – ಆಭರಣ ಖರೀದಿ ನೆಪದಲ್ಲಿ ನೆಕ್ಲೇಸ್ ಎಗರಿಸಿದ ಮಹಿಳೆ

    ಘಟನೆ ಸಂಬಂಧ ಕಸವನಹಳ್ಳಿಯ ವೀರಕರಿಯಪ್ಪ ಮತ್ತಿತರರ ವಿರುದ್ಧ ಹಲ್ಲೆಯ ಆರೋಪ ಹೊರಿಸಲಾಗಿದೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೂದಲೆಳೆಯ ಅಂತರದಲ್ಲಿ ಹುಬ್ಬಳ್ಳಿಯಲ್ಲಿ ತಪ್ಪಿತು ದೊಡ್ಡ ದುರಂತ

    ಕೂದಲೆಳೆಯ ಅಂತರದಲ್ಲಿ ಹುಬ್ಬಳ್ಳಿಯಲ್ಲಿ ತಪ್ಪಿತು ದೊಡ್ಡ ದುರಂತ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

    ಹುಬ್ಬಳ್ಳಿ: ರೈಲ್ವೇ ಇಲಾಖೆ ಆಲಸ್ಯವೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

    ಅತ್ಯಂತ ಜನದಟ್ಟಣೆಯ ಪ್ರದೇಶ ಹಾಗೂ ಹುಬ್ಬಳ್ಳಿ-ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಹುಬ್ಬಳ್ಳಿಯ ರೈಲ್ವೇ ನಿಲ್ದಾಣದ ( Hubballi Railway Station) ಬಳಿ ಬೃಹತ್ ಗಾತ್ರದ ಕಬ್ಬಿಣದ ಕಂಬ (Iron Pillar) ನೆಲಕ್ಕೆ ಅಪ್ಪಳಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಧ್ಯಾಹ್ನ 12:30ರ ವೇಳೆಗೆ ಕಂಬ ಉರುಳಿ ಬೀಳುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಂತರ್ಜಾತಿ ಪ್ರೇಮ – ಮಗಳ ಕತ್ತು ಹಿಸುಕಿ ಕೊಂದ ತಂದೆ

    ಸೇತುವೆ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಹಾಕಲಾಗಿದ್ದ ಕಬ್ಬಿಣದ ಬೃಹತ್ ಕಂಬ, ತುಕ್ಕು ಹಿಡಿದು ತನ್ನಷ್ಟಕ್ಕೆ ತಾನೆ ನೆಲಕ್ಕೆ ಬಿದ್ದಿದೆ. ಕಳೆದ ಮೂರು ತಿಂಗಳ ಹಿಂದೆ ಈ ರೀತಿಯ ದುರ್ಘಟನೆ ನಡೆದಿತ್ತು. ಆದರೂ ಎಚ್ಚೆತ್ತುಕೊಳ್ಳದ ರೇಲ್ವೆ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ನಿರ್ಲಕ್ಷ್ಯ ತೋರಿಸಿದ್ದಾರೆ.

    ಬಸ್, ಕಾರು, ದ್ವಿಚಕ್ರ ವಾಹನಗಳು ಹೋದ ಕೆಲವೇ ಕ್ಷಣಗಳಲ್ಲಿ ಕಂಬ ಉರುಳಿಬಿದ್ದಿದೆ. ಒಂದು ವೇಳೆ ಬಸ್ ಅಥವಾ ಕಾರು ಮೇಲೆ ಬಿದ್ದಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು.

  • ಶಿರಾಡಿಯಲ್ಲಿ 3.8 ಕಿ.ಮೀ ಉದ್ದದ ಸುರಂಗ ಮಾರ್ಗ: ಸತೀಶ್‌ ಜಾರಕಿಹೊಳಿ

    ಶಿರಾಡಿಯಲ್ಲಿ 3.8 ಕಿ.ಮೀ ಉದ್ದದ ಸುರಂಗ ಮಾರ್ಗ: ಸತೀಶ್‌ ಜಾರಕಿಹೊಳಿ

    ಹಾಸನ: ಶಿರಾಡಿ ಘಾಟ್ (Shiradi Ghat) ಮಾರ್ಗದಲ್ಲಿ ನಿರ್ಮಾಣವಾಗಲಿರುವ ಸುರಂಗ ಮಾರ್ಗದ (Tunnel Road) ಪ್ರಾಥಮಿಕ ಹಂತದ ರೂಪುರೇಷೆ ತಯಾರು ಮಾಡಲಾಗಿದೆ. ಕೇಂದ್ರದ ಮಂತ್ರಿಗಳು ಒಪ್ಪಿಗೆ ಕೊಟ್ಟ ಮೇಲೆ ಯೋಜನೆ ಮುಂದುವರಿಯಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ (Satish Jarkiholi) ಹೇಳಿದ್ದಾರೆ.

    ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್ ರಸ್ತೆಯಲ್ಲಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 30 ಕಿಲೋಮೀಟರ್ ಉದ್ದದ ಕರ್ನಾಟಕದ ಹೆಮ್ಮೆಯ ಯೋಜನೆ ಇದಾಗಿದೆ. ಅದರಲ್ಲಿ 3.8 ಕಿಲೋಮೀಟರ್ ಸುರಂಗ ಇದ್ದರೆ, 10 ಕಿ.ಮೀ ವಯಡಕ್ಟ್‌ ಇರಲಿದೆ ಎಂದರು.

    ಮಾರೇನಹಳ್ಳಿಯಿಂದ ಪ್ರಾರಂಭವಾಗಿ ಅಡ್ಡಹೊಳೆಯವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಬಹಳಷ್ಟು ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ವಿವರವಾದ ಅಂದಾಜು ಮಾಡಬೇಕಿದೆ. ಈಗಾಗಲೇ ಒನ್‌ವೇ ಸಂಚಾರದ ಪ್ರಸ್ತಾಪ ಬಂದಿದೆ. ಒಂದು ಕಡೆಯಿಂದ ವಾಹನಗಳು ಹೋಗಲು ಒಂದು ಕಡೆಯಿಂದ ಬರಲು ಅನುಕೂಲ ಆಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಹಿಟ್‌ಮ್ಯಾನ್

    ಹಾಸನದಿಂದ ಸಕಲೇಶಪುರ ಬೈಪಾಸ್‌ವರೆಗೆ ನವೆಂಬರ್‌ 1 ರೊಳಗೆ ಕಾಮಗಾರಿ ಮುಗಿಸಲು ಸಮಯ ನೀಡಿದ್ದೇವೆ. ಅಧಿಕಾರಿಗಳು ಮುದಿನ ಕಾಮಗಾರಿ ಮುಗಿಸಲು ಮುಂದಿನ ವರ್ಷ ಮಾರ್ಚ್‌24 ರವರೆಗೆ ಸಮಯ ಕೇಳಿದ್ದಾರೆ. ಸಂಪೂರ್ಣ ಕಾಮಗಾರಿ ಮಾಡಲು ಸಮಯ ಕೇಳಿದ್ದಾರೆ. ನಾವು ಪ್ರತಿ ತಿಂಗಳು ಯೋಜನೆಯ ಪ್ರಗತಿಯನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.

    ಎಲ್ಲಾ ಸರ್ಕಾರಗಳು ಇದ್ದ ವೇಳೆ ಕಾಮಗಾರಿ ಯಾಕೆ ವಿಳಂಬವಾಗಿದೆ ಗೊತ್ತಿಲ್ಲ. ಏಕೆ ಆಗಿದೆ ಎಂಬುದನ್ನು ಹುಡುಕುವ ಬದಲು ಮುಂದಿನ ಪರಿಹಾರ, ಎಷ್ಟು ಸಮಯದ ಅವಧಿಯಲ್ಲಿ ಕಾಮಗಾರಿ ಮುಗಿಸುತ್ತೇವೆ ಎನ್ನುವುದು ಮುಖ್ಯ. ಎರಡು ಟೈಂ ಕೊಟ್ಟಿದ್ದೇವೆ ಒಂದು ನ.1, ಇನ್ನೊಂದು ಮಾ.24 ಕ್ಕೆ ಮುಗಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     

    ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆಲಸ ವಿಳಂಬವಾಗಿದೆ. ಮಳೆಗಾಲದಲ್ಲಿ ಭೂಕುಸಿತವಾಗಿದೆ. ಅದಕ್ಕೆ ಕಡ್ಡಾಯವಾಗಿ ಎಲ್ಲಾ ಕಡೆ ರಿಟೈನಿಂಗ್ ವಾಲ್ ಮಾಡಬೇಕು. ಎಲ್ಲೆಲ್ಲಿ ಬಹಳಷ್ಟು ಸಮಸ್ಯೆಯಿದೆ ಅಲ್ಲಲ್ಲಿ ಕಾಂಕ್ರಿಟ್ ವಾಲ್ ಕಟ್ಟಲು ಸೂಚನೆ ಕೊಟ್ಟಿದ್ದೇವೆ. ಭೂಕುಸಿತದಿಂದ ನಷ್ಟ ಅನುಭವಿಸುವವರಿಗೆ ಪರಿಹಾರ ಕೊಡುತ್ತೇವೆ ಎಂದರು.

  • ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ!

    ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ!

    – ಮಹಿಳೆಯರಿಗೆ ಸಿಗುತ್ತಿಲ್ಲ ಫ್ರೀ ಬಸ್‌ ಸೌಲಭ್ಯ

    ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಜನರಿಗೆ ಸಂಚಾರ ಮಾಡಲು ಸುಸಜ್ಜಿತ ರಸ್ತೆಗಳು ಇಲ್ಲದಿರುವುದಕ್ಕೆ ಸಾರಿಗೆ ಸೇವೆ ನೀಡಲು ಕೆಎಸ್‌ಆರ್‌ಟಿಸಿ (KSRTC) ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

    ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ ಕುಂದಾನಗರಿ ಬೆಳಗಾವಿ (Belagavi) ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುಸಜ್ಜಿತ ರಸ್ತೆಗಳು (Road) ಇಲ್ಲದೇ ಇರುವುದಕ್ಕೆ ಗ್ರಾಮಗಳ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ (Shakti Scheme) ಲಾಭ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ನಿತ್ಯ ರಾಜ್ಯದ ಲಕ್ಷಾಂತರ ಮಹಿಳೆಯರು ಶಕ್ತಿ ಯೋಜನೆಯಡಿ ಲಾಭ ಪಡೆಯುತ್ತಿದ್ದಾರೆ. ಹೀಗಿದ್ದರೂ ಬೆಳಗಾವಿಯ ಈ 20 ಗ್ರಾಮಗಳ ಮಹಿಳೆಯರಿಗಿಲ್ಲಿ ಶಕ್ತಿ ಯೋಜನೆಯ ಲಾಭವಿಲ್ಲ. ಉತ್ತಮ ರಸ್ತೆ ನಿರ್ಮಿಸಿದರೆ ಬಸ್ ಸೌಕರ್ಯ ಕಲ್ಪಿಸಲು ಸಿದ್ಧರಿದ್ದೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್

    ಬೆಳಗಾವಿ ವಿಭಾಗದಲ್ಲಿ ಖಾನಾಪುರ ತಾಲೂಕಿನ ಬಾಳಗುಂದ, ಹುಳಂದ, ಗವ್ವಾಳಿ, ಆಮಗಾಂವ ಗ್ರಾಮಗಳಲ್ಲಿ ಬಸ್ ಸೌಲಭ್ಯವಿಲ್ಲ. ಚಿಕ್ಕೋಡಿ ವಿಭಾಗದಲ್ಲಿ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ, ನಿಪ್ಪಾಣಿ ತಾಲೂಕಿನ ಗವ್ವಾಣಿ, ಅಮಲಝರಿ, ರಾಯಬಾಗ ತಾಲೂಕಿನ ಗಿರಿನಾಯಕವಾಡಿ, ಅಥಣಿ ತಾಲೂಕಿನ ಜನವಾಡ, ದಬದಬಹಟ್ಟಿ, ಚಿಕ್ಕೂಡ, ಕೇಸರಕರ ದಡ್ಡಿ, ಕಾಗವಾಡ ತಾಲೂಕಿನ ತೆವರಟ್ಟಿ, ಅಗ್ರಾಣಿ ಇಂಗಳಗಾಂವ, ಗೋಕಾಕ ತಾಲೂಕಿನ ಗುಜನಾಳ, ಕಲಾರಕೊಪ್ಪ, ಚಿಗಡೊಳ್ಳಿ, ಮೆಳವಂಕಿ, ಗಡ್ಡಿಹೋಳಿ ಗ್ರಾಮಗಳಿಗೆ ಸುಸಜ್ಜಿತ ರಸ್ತೆಗಳಿಲ್ಲ.

    ಧಾರವಾಡ ವಿಭಾಗ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮಗಳಿಗೆ ಸುಸಜ್ಜಿತ ರಸ್ತೆಗಳು ಇಲ್ಲದೇ ಇರುವುದಕ್ಕೆ ಬಸ್ ಸೌಲಭ್ಯ ಕುಂಠಿತಗೊಂಡಿದೆ. ಇದರಿಂದ ಸಾಕಷ್ಟು ಜನರು ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದು ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕ್ರಮ ವಹಿಸುತ್ತಾರಾ ಎಂಬುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: `ಗ್ಯಾರಂಟಿ’ಗೆ ಅರ್ಜಿ ಸಲ್ಲಿಸುವ ಮುನ್ನ ಹುಷಾರ್ – ಸೈಬರ್ ಕಳ್ಳರಿದ್ದಾರೆ ಎಚ್ಚರ!

  • ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಅಪಾರ ಪ್ರಮಾಣದ ಬೆಳೆ ನಾಶ

    ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಅಪಾರ ಪ್ರಮಾಣದ ಬೆಳೆ ನಾಶ

    – ರಸ್ತೆ ಸಂಪರ್ಕ ಕಡಿತಗೊಂಡು ಜನರ ಪರದಾಟ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ (Chikkamagaluru) ಧಾರಾಕಾರವಾಗಿ ಮಳೆ (Rain) ಸುರಿದಿದ್ದು, ಭಾರೀ ಪ್ರಮಾಣದ ಬೆಳೆಗಳು ನಾಶವಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ರಸ್ತೆ (Road) ಸಂಪರ್ಕ ಕಡಿತಗೊಂಡು ಜನರು ಪರದಾಡುತ್ತಿದ್ದಾರೆ.

    ಬುಧವಾರ ಚಿಕ್ಕಮಗಳೂರಿನ ಹಲವೆಡೆ ವರುಣನ ಆಗಮನವಾಗಿದೆ. ಕಡೂರು (Kadur) ತಾಲೂಕಿನ ಸಖರಾಯಪಟ್ಟಣ (Sakharayapatna) ಸುತ್ತಮುತ್ತ ಭಾರೀ ಮಳೆಯಾಗಿದೆ. ಹುಲಿಕೆರೆ, ಕೇತಮಾರನಹಳ್ಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ಅನಾಹುತ ಸೃಷ್ಟಿಯಾಗಿದೆ. ಮಳೆಯಿಂದಾಗಿ ಕೆರೆ ಕೋಡಿ ಬಿದ್ದುಹೋಗಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದನ್ನೂ ಓದಿ: ಬಿಜೆಪಿಯಿಂದ ಸರಣಿ ಸಭೆ- ಸೋಲಿನ ಪರಾಮರ್ಶೆ ಮಾಡಲಿರುವ ನಾಯಕರು

    ಕೋಡಿ ನೀರು ಜಮೀನು ಹಾಗೂ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ. ಅಲ್ಲದೇ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ. ಬೆಳೆ ಚಿಗುರುವ ಸಮಯದಲ್ಲಿ ಭಾರೀ ಮಳೆ ಸುರಿದಿದ್ದು, ಮಳೆಯಿಂದಾಗಿ ನೀರು ಹೊಲದಲ್ಲಿ ನಿಂತು ಅಪಾರ ಬೆಳೆಗಳು ನಾಶವಾಗಿವೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಶವ ಸಾಗಿಸ್ತಿದ್ದ ಅಂಬುಲೆನ್ಸ್ ಡಿಕ್ಕಿ- ಮೂವರ ದುರ್ಮರಣ!

  • ಬೆಂ-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಭಯಾನಕ ಅಪಘಾತ- 5 ತಿಂಗಳಲ್ಲೇ 55 ಮಂದಿ ಸಾವು!

    ಬೆಂ-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಭಯಾನಕ ಅಪಘಾತ- 5 ತಿಂಗಳಲ್ಲೇ 55 ಮಂದಿ ಸಾವು!

    ಮಂಡ್ಯ: ಮೈಸೂರು ನಗರಕ್ಕೆ ಕೈಗಾರಿಕೆಗಳು ಬರಲಿ, ಸಾಂಸ್ಕೃತಿಕ ನಗರಿ ಬೆಳೆಯಲಿ. ಪ್ರತಿದಿನ ಬೆಂಗಳೂರು-ಮೈಸೂರು ಸಂಚರಿಸುವ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ 9000 ಕೋಟಿ ವೆಚ್ಚದಲ್ಲಿ ಮೈ-ಬೆಂ ದಶಪಥ ಹೆದ್ದಾರಿ (Mysuru Bengaluru Expressway) ನಿರ್ಮಾಣ ಮಾಡಲಾಗಿದೆ. ಆದರೆ ಈ ಹೆದ್ದಾರಿ ಇದೀಗ ಡೆಡ್ಲಿ ಆಕ್ಸಿಡೆಂಟ್ ಪ್ಲೇಸ್ ಆಗ್ತಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಕೇವಲ 5 ತಿಂಗಳಲ್ಲೆ 55 ಮಂದಿ ಅಪಘಾತದಲ್ಲಿ ಮೃತಪಟ್ಟಿರೋದು ಆತಂಕ ಮೂಡಿಸಿದೆ.

    ಹೌದು. ಮೈ-ಬೆಂ ಟೆನ್ ಲೈನ್ ಹೈವೇ ಮಂಡ್ಯ (Mandya) ಜಿಲ್ಲೆ ವ್ಯಾಪ್ತಿಯಲ್ಲಿಯೇ ಹೆಚ್ಚು ಹಾದು ಹೋಗಿದೆ. ಬರೋಬ್ಬರಿ 55 ಕಿ.ಮೀಗೂ ಹೆಚ್ಚು ದಶಪಥ ಹೆದ್ದಾರಿ ಇದೆ. ಸದ್ಯ ದಶಪಥ ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಗಿದಿದ್ದು, ವಾಹನ ಸವಾರರು ಖುಷಿಯಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಮಂಡ್ಯ ಜಿಲ್ಲಾ ವ್ಯಾಪ್ತಿಯ ದಶಪಥ ಹೆದ್ದಾರಿಯಲ್ಲಿ ನಡೆದಿರುವ ಅಪಘಾತ ಪ್ರಕರಣ ಹಾಗೂ ಅದರಿಂದ ಮೃತಪಟ್ಟವರ ಸಂಖ್ಯೆ ನೋಡಿದರೆ ಜನರಲ್ಲಿ ಆತಂಕ ಮೂಡಿಸುತ್ತಿದೆ. ಜನವರಿ ತಿಂಗಳಿಂದ ಮೇ ತಿಂಗಳ ಅಂತ್ಯದ ವರೆಗೆ 570 ಅಪಘಾತ ಪ್ರಕರಣ ಸಂಭವಿಸಿದ್ದು, 55 ಮಂದಿ ಮೃತಪಟ್ಟರೇ, 52 ಮಂದಿಗೆ ತೀವ್ರ ಪೆಟ್ಟು ಬಿದ್ದಿದೆ. ಇನ್ನು 184 ಮಂದಿಗೆ ಕೈಕಾಲು ಮುರಿದಿದ್ದು, 279 ಜನರಿಗೆ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಜನರಲ್ಲಿ ಆಘಾತ ಮೂಡಿಸಿದೆ.

    ಅಪಘಾತಕ್ಕೆ ಕಾರಣಗಳನ್ನ ನೋಡೋದಾದ್ರೆ ಮೊದಲಿಗೆ ಕೇಳಿಬರುವಂತ ವಿಚಾರ ಅಂದ್ರೆ ಅತಿ ವೇಗ. ಎಕ್ಸ್ ಪ್ರೆಸ್ ವೇ ಸೇರಿದಂತೆ ಸರ್ವಿಸ್ ರಸ್ತೆಯಲ್ಲಿಯು ವೇಗವಾಗಿ ವಾಹನಗಳು ಬರುತ್ತಿದ್ದು, ನಿಯಂತ್ರಿಸಲಾಗದೇ ಅಪಘಾತ ನಡೆಯುತ್ತಿದೆ. ಇನ್ನೊಂದೆಡೆ ಅವೈಜ್ಞಾನಿಕವಾಗಿ ಕಾಮಗಾರಿಯು ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮತ್ತೊಂದೆಡೆ ಸರ್ವಿಸ್ ರಸ್ತೆಗಳಲ್ಲಿ ದಿಬ್ಬ ನಿರ್ಮಾಣ ಆಗ್ತಿದ್ದು, ಅಲ್ಲಿಯು ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಇನ್ನು ಹಲವು ಕಾರಣಗಳಿಂದ ಅಪಘಾತ ದಿನೇ ದಿನೇ ಹೆಚ್ಚಾಗ್ತಿದ್ದು, ಸ್ವಲ್ಪ ಯಾಮಾರಿದ್ರು ಅಪಘಾತ ಕಟ್ಟಿಟ್ಟ ಬುತ್ತಿ ಎನಿಸುತ್ತಿದೆ.

    ಒಟ್ಟಿನಲ್ಲಿ ಸವಾರರು ಜಾಗರೂಕರಾಗಿ ವಾಹನ ಚಲಾಯಿಸಬೇಕಿದ್ದು, ಅಪಘಾತಕ್ಕೆ ಜನರಿಂದಲೇ ಕಡಿವಾಣ ಹಾಕಿಕೊಳ್ಳಬೇಕಿದೆ. ಇದನ್ನೂ ಓದಿ: ಯುಪಿ ಕೋರ್ಟ್‍ನಲ್ಲೇ ಗ್ಯಾಂಗ್‍ಸ್ಟರ್ ಹತ್ಯೆ