Tag: Road Traffic Law

  • ಟ್ರಾಫಿಕ್ ಪೊಲೀಸ್ ಮೇಲೆ ಮಹಿಳೆಯಿಂದ ಹಲ್ಲೆ- ವಿಡಿಯೋ ವೈರಲ್

    ಟ್ರಾಫಿಕ್ ಪೊಲೀಸ್ ಮೇಲೆ ಮಹಿಳೆಯಿಂದ ಹಲ್ಲೆ- ವಿಡಿಯೋ ವೈರಲ್

    ಮುಂಬೈ: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಮೇಲೆ ಮಹಿಳೆ ಹಲ್ಲೆ ಮಾಡಿರುವ ಘಟನೆ ಮುಂಬೈನ ಸುರ್ತಿ ಹೋಟೆಲ್ ಬಳಿ ನಡೆದಿದೆ.

    ರಸ್ತೆ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದ 29 ವರ್ಷದ ಸಾಂಗ್ರಿಕಾ ತಿವಾರಿ ಎಂಬ ಮಹಿಳೆ ಪೊಲೀಸ್ ಕಾನ್‍ಸ್ಟೇಬಲ್ ಏಕನಾಥ್ ಪಾರ್ಟೆ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಎಲ್‍ಟಿ ಮಾರ್ಗ ಪೊಲೀಸರು ಆರೋಪಿ ಮಹಿಳೆಯನ್ನು ಶುಕ್ರವಾರ ಬಂಧಿಸಿದ್ದಾರೆ.

    ಸಾಂಗಿೃಕಾ ತಿವಾರಿ, ಮೊಶಿನ್ ಶಾಹಿಕ್ ಎಂಬಾತನೊಂದಿಗೆ ಬೈಕ್‍ನಲ್ಲಿ ಬಂದಿದ್ದಳು. ಹಿಂಬದಿ ಕುಳಿತಿದ್ದ ಸಾಂಗಿೃಕಾ ಹೆಲ್ಮೆಟ್ ಧರಿಸಿರಲಿಲ್ಲ. ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಸಾಂಗಿೃಕಾಗೆ ದಂಡವನ್ನು ವಿಧಿಸಿದ್ದಾರೆ. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಕೋಪಗೊಂಡ ಸಾಂಗಿೃಕಾ ನಡುರಸ್ತೆಯಲ್ಲೇ ಪೊಲೀಸ್ ಕಪಾಳಕ್ಕೆ ಹೊಡೆದಿದ್ದಾಳೆ. ಸ್ಥಳದಲ್ಲಿದ್ದ ಇತರ ಪೊಲೀಸರು ಕೂಡಲೇ ಪಾರ್ಟೆ ಅವರ ನೆರವಿಗೆ ಬಂದಿದ್ದಾರೆ.

    ಕರ್ತವ್ಯ ನಿರತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಿವಾರಿ ಮತ್ತು ಶಾಹಿಕ್ ಇಬ್ಬರನ್ನು ಬಂಧಿಸಲಾಗಿದೆ. ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ಮಾಡಿದ ಮಹಿಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಪೊಲೀಸ್ ಪೇದೆ ನನ್ನೊಂದಿಗೆ ನಿಂದಿಸಿದ್ದರು ಎಂದು ಬಂಧಿತ ಮಹಿಳೆ ಆರೋಪಿಸಿದ್ದಾಳೆ.