Tag: Road King

  • ಹಾಲಿವುಡ್ ನಿರ್ದೇಶಕರಿಂದ ಕನ್ನಡ ಚಿತ್ರ: ಸ್ಕೈಪ್ ಮೂಲಕ ಡೈರೆಕ್ಷನ್

    ಹಾಲಿವುಡ್ ನಿರ್ದೇಶಕರಿಂದ ಕನ್ನಡ ಚಿತ್ರ: ಸ್ಕೈಪ್ ಮೂಲಕ ಡೈರೆಕ್ಷನ್

    ತೀನ್ ಹುಸೇನ್ (Mateen Hussain) ಅಭಿನಯದ ‘ರೋಡ್ ಕಿಂಗ್’ ಚಿತ್ರವು ಬಿಡುಗಡೆ ಹೊಸ್ತಿಲಿನಲ್ಲಿದೆ. ವಿಶೇಷವೆಂದರೆ, ರಾಂಡಿ ಕೆಂಟ್ (Randy Kent) ಎಂಬ ಹಾಲಿವುಡ್ (Hollywood)ನಿರ್ದೇಕರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ರೋಡ್ ಕಿಂಗ್’  (Road King)ಚಿತ್ರದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಮತೀನ್ ಹುಸೇನ್, ಮೂಲತಃ ಬೆಂಗಳೂರಿನವರಾದರೂ ಬೆಳೆದಿದ್ದೆಲ್ಲ ಅಮೆರಿಕಾದಲ್ಲಿ. ಕೋಲಾರದಲ್ಲಿ ನಡೆದ ನೈಜ ಘಟನೆ ಆಧರಿಸಿ ಒಂದು ಸಣ್ಣ ಬಜೆಟ್ ಚಿತ್ರ ಮಾಡುವುದಕ್ಕೆ ಹೊರಟಾಗ, ಸೂಕ್ತ ನಿರ್ದೇಶಕರು ಸಿಗಲಿಲ್ಲವಂತೆ. ಆಗ ಅವರಿಗೆ ನೆನಪಾಗಿದ್ದೇ ರಾಂಡಿ ಕೆಂಟ್. ಮತೀನ್ ಮತ್ತು ರಾಂಡಿ ಹಳೆಯ ಸ್ನೇಹಿತರು. ಸ್ನೇಹದಲ್ಲಿ ಚಿತ್ರ ಮಾಡಿಕೊಡುವುದಕ್ಕೆ ಕೇಳಿಕೊಂಡಾಗ, ಮೊದಲು ರಾಂಡಿ ಹಿಂದೇಟು ಹಾಕಿದರಂತೆ. ಕಾರಣ, ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು. ಕೊನೆಗೆ ಒಪ್ಪಿ ಅವರು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.

    ಅಂದಹಾಗೆ, ಈ ಚಿತ್ರದ ನಿರ್ದೇಶನವನ್ನು ದೂರದ ಅಮೆರಿಕಾದಲ್ಲಿದ್ದುಕೊಂಡು ಸ್ಕೈಪ್ ಮೂಲಕವೇ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಬಗ್ಗೆ ಮಾತನಾಡುವ ಮತೀನ್, ‘ಚಿತ್ರೀಕರಣಕ್ಕೆ ಎಲ್ಲ ತಯಾರಿಯೂ ಆಗಿತ್ತು. ಆದರೆ, ರಾಂಡಿಗೆ ವೀಸಾ ಸಿಗಲಿಲ್ಲ. ಎರಡನೆಯ ಬಾರಿಗೂ ಅದೇ ರೀತಿ ಆಯಿತು. ಕೊನೆಗೆ ಅವರು ಸ್ಕೈಪ್ ಮೂಲಕವೇ ಚಿತ್ರ ನಿರ್ದೇಶನ ಮಾಡಿದ್ದಾರೆ’ ಎನ್ನುತ್ತಾರೆ ಮತೀನ್. ಇದನ್ನೂ ಓದಿ:‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ಮತೀನ್ ಇದಕ್ಕೂ ಮುನ್ನ ‘ಬಿಂದಾಸ್ ದಾದಾಗಿರಿ’ ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದು, ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ‘ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದು, ಲೀಲಾ ಮೋಹನ್, ಹರೀಶ್ ಸೆಜೆಕೆನ್, ನಯನಾ ಶೆಟ್ಟಿ ಮುಂತಾದವರು ತಾರಾಗಣದಲ್ಲಿ ಇದ್ದಾರೆ. ಚಿತ್ರಕ್ಕೆ ಆರಿಫ್ ಲಲಾನಿ ಛಾಯಾಗ್ರಹಣ ಮಾಡಿದ್ದು, ಹಾಲಿವುಡ್ ನ ಜನಪ್ರಿಯ ಸೌಂಡ್ ಡಿಸೈನರ್ ಸ್ಕಾಟ್ ವುಲ್ಫ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

     

    ಈಗಾಗಲೇ ಜಗತ್ತಿನಾದ್ಯಂತ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ರೋಡ್ ಕಿಂಗ್’ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ಈ ಚಿತ್ರಕ್ಕಿದೆ.

  • ಹಾಲಿವುಡ್ ನಿರ್ದೇಶಕನ ಕನ್ನಡ ಸಿನಿಮಾ ರೋಡ್ ಕಿಂಗ್

    ಹಾಲಿವುಡ್ ನಿರ್ದೇಶಕನ ಕನ್ನಡ ಸಿನಿಮಾ ರೋಡ್ ಕಿಂಗ್

    ನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತದೆ. ಆದರೆ ಈ ಬಾರಿ ವಿಭಿನ್ನ ಹಾಗೂ ಈ ಹಿಂದೆ ನಡೆದಿರದ ಪ್ರಯೋಗವೊಂದು ಕನ್ನಡ ಚಿತ್ರರಂಗದದಲ್ಲಿ ನಡೆದಿದೆ. ಸ್ಕೈಪ್(ಅಂತರಜಾಲ)ದ ಮೂಲಕವೇ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ.  ಈ ಚಿತ್ರದ ನಾಯಕ ಮತೀನ್ ಹುಸೇನ್ ಮೂಲತಃ ಯು ಎಸ್ ಎ ನಿವಾಸಿ. ಕೆಲವು ವರ್ಷಗಳ ನಂತರ ಮುಂಬೈಗೆ ಆಗಮಿಸಿದ್ದ ಮತೀನ್,  ಆನಂತರ ಅನುಪಮ್ ಖೇರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಭೇತಿ ಪಡೆಯುತ್ತಾರೆ. ಆ ಬಳಿಕ ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ನಿರ್ದೇಶನಕ್ಕಾಗಿ ಹಾಲಿವುಡ್ ನ ಖ್ಯಾತ ನಿರ್ದೇಶಕ ರಾಂಡಿ ಕೆಂಟ್ ಅವರನ್ನು ಸಂಪರ್ಕಿಸುತ್ತಾರೆ. ರಾಂಡಿ ಕೆಂಟ್ ಒಪ್ಪುತ್ತಾರೆ. ಆದರೆ ವೀಸಾ ತೊಂದರೆಯಿಂದ ರಾಂಡಿ ಕೆಂಟ್ ಇಲ್ಲಿಗೆ ಬರಲಾಗುವುದಿಲ್ಲ.‌ ಆಗ, ಈಗಿನ ತಂತ್ರಜ್ಞಾನ ಬಳಸಿಕೊಂಡು ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ‌ ಮಾಡಲು ಆರಂಭಿಸುತ್ತಾರೆ. ಕಲಾವಿದರು ಬೆಂಗಳೂರಿನಲ್ಲಿ. ನಿರ್ದೇಶಕ ಲಾಸ್ ಎಂಜಲೀಸ್ ನಲ್ಲಿ. ಹೀಗೆ “ರೋಡ್ ಕಿಂಗ್” ಚಿತ್ರ ಸಿದ್ದವಾಗುತ್ತದೆ.

    ಮತೀನ್ ಹುಸೇನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ರುಕ್ಷರ್ ದಿಲ್ಹಾನ್ (ರನ್ ಆಂತೋನಿ ಖ್ಯಾತಿ) ನಾಯಕಿಯಾಗಿ ನಟಿಸಿದ್ದಾರೆ. ಲವ್ ಬ್ರೇಕಪ್ ನಿಂದ ಎಕ್ಸ್ ಸಿಂಡ್ರೋಮ್ ಗೆ ತುತ್ತಾದ ಯುವಪ್ರೇಮಿಗಳ ಸುತ್ತ ಹೆಣೆದಿರುವ ಕಥೆಯಿದು. ರೊಮ್ಯಾಂಟಿಕ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ. ಇದನ್ನೂ ಓದಿ:ಪತ್ನಿ ಪ್ರಿಯಾಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

    ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ಹಾಡಿರುವ “ಕೊಡು ನನಗೆ” ಎಂಬ ಹಾಡು ಕೂಡ ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಅರೀಫ್ ಲಲಾನಿ ಈ ಚಿತ್ರದ ಛಾಯಾಗ್ರಹಕರು. ಹಾಲಿವುಡ್ ನ ಖ್ಯಾತ ಚಿತ್ರಗಳಿಗೆ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿರುವ ಸ್ಕಾಟ್ ವಾಲ್ಫ್ ಈ ಚಿತ್ರಕ್ಕೂ ಸೌಂಡ್‌ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ಕಾಟ್ ವಾಲ್ಫ್ ಅವರ ಸೌಂಡ್ ಡಿಸೈನ್ “ರೋಡ್ ಕಿಂಗ್” ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • 30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳೊಂದಿಗೆ ತಮ್ಮ ನಿವಾಸದ ಬಳಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚಂದನ್ ಶೆಟ್ಟಿ, ಹುಟ್ಟು ಹಬ್ಬದ ವಿಶೇಷವಾಗಿ ‘ಬ್ಯಾಡ್ ಬಾಯ್’ ಹಾಡಿನ ಟೀಸರ್ ಇಂದು ಸಂಜೆ ಲಹರಿ ಸಂಸ್ಥೆಯ ಅಡಿ ಬಿಡುಗಡೆ ಮಾಡಲಿದ್ದೇವೆ. ‘ರೋಡ್ ಕಿಂಗ್’ ಸಿನಿಮಾಗೆ ಈ ಹಾಡನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ನಾನು ಹಾಡಿರುವ ಹಾಡು ಬಿಡುಗಡೆಯಾಗಲಿದೆ. ಇದು ನನ್ನ ಕಡೆಯಿಂದ ಅಭಿಮಾನಿಗಳಿಗೆ ನೀಡುತ್ತಿರುವ ಉಡುಗೊರೆಯಾಗಿದ್ದು, ನಿಮ್ಮ ಬೆಂಬಲ ಸದಾ ಮುಂದುವರಿಯಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದನ್ನು ಓದಿ: 5 ಹಾಡಿಗೆ ಚಂದನ್ ಶೆಟ್ಟಿಗೆ ಸಿಕ್ತು ಊಹಿಸಲಾಗದಷ್ಟು ಸಂಭಾವನೆ

    ಅಭಿಮಾನಿಗಳೊಂದಿಗೆ ನಟಿ ನಿವೇದಿತಾ ಗೌಡ ಅವರು ಕೂಡ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಂದನ್ ಶೆಟ್ಟಿ ಅವರಿಗೆ ಹುಟ್ಟ ಹಬ್ಬದ ಶುಭಾಶಯ ಕೋರಿದರು.

    ಮೂಲತಃ ಹಾಸನದವರಾದ ಚಂದನ್ ಶೆಟ್ಟಿ ಹುಟ್ಟಿದ್ದು, 1989 ರಲ್ಲಿ, 2012 ರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಅಲೆಮಾರಿ ಸಿನಿಮಾಗೆ ಗೀತ ರಚನೆ ಮಾಡಿದ್ದರು. ಕನ್ನಡ ಬಿಗ್ ಬಾಸ್ ನ ಸೀಸನ್ 5ರ ರಿಯಾಲಿಟಿ ಶೋದಲ್ಲಿ ವಿಜೇತರಾಗಿದ್ದರು. ಇವರಿಗೆ ‘ಹಾಳಾಗೋದೆ’ ಆಲ್ಬಂ ಬಹುದೊಡ್ಡ ಬ್ರೇಕ್ ನೀಡಿತ್ತು. ಇದರೊಂದಿಗೆ 2 ಪೇಗ್, ಚಾಕೋಲೇಟ್ ಗರ್ಲ್, ಟಕಿಲಾ, ಫೈಯರ್ ಆಲ್ಬಂ ಗಳನ್ನು ಮಾಡಿದ್ದಾರೆ. ಸದ್ಯ ಸಿನಿಮಾ ಸಂಗೀತ ನಿರ್ದೇಶನದೊಂದಿಗೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.