Tag: Road Accidents

  • ಜನರಿಗೆ ಕಾನೂನಿನ ಬಗ್ಗೆ ಗೌರವವೂ ಇಲ್ಲ, ಭಯವೂ ಇಲ್ಲ: ರಸ್ತೆ ಅಪಘಾತಗಳ ಬಗ್ಗೆ ಗಡ್ಕರಿ ಆತಂಕ

    ಜನರಿಗೆ ಕಾನೂನಿನ ಬಗ್ಗೆ ಗೌರವವೂ ಇಲ್ಲ, ಭಯವೂ ಇಲ್ಲ: ರಸ್ತೆ ಅಪಘಾತಗಳ ಬಗ್ಗೆ ಗಡ್ಕರಿ ಆತಂಕ

    ನವದೆಹಲಿ: ರಸ್ತೆ ಅಪಘಾತಗಳಲ್ಲಿ (Road Accidents) ಸಾವುಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೂ ಜನರಿಗೆ ಕಾನೂನಿನ ಬಗ್ಗೆ ಗೌರವ ಹಾಗೂ ಭಯವಿಲ್ಲದ ಕಾರಣ ಸಾವುನೋವುಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Gadkari) ಆತಂಕ ವ್ಯಕ್ತಪಡಿಸಿದ್ದಾರೆ.

    ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ನಾಲ್ಕು ಅಂಶಗಳ ಬಗ್ಗೆ ಚರ್ಚಿಸಿದ್ದಾರೆ. ಅವುಗಳೆಂದರೆ ರಸ್ತೆ ಎಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಕಾನೂನು ಜಾರಿ ಮತ್ತು ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಶಿಕ್ಷಣ ನೀಡುವುದು ಎಂದು ಅವರು ಒತ್ತಿ ಹೇಳಿದ್ದಾರೆ.

    ನಮ್ಮ ಸಮಾಜದ ದೊಡ್ಡ ಸಮಸ್ಯೆ ಎಂದರೆ ಜನರಿಗೆ ಕಾನೂನಿನ ಬಗ್ಗೆ ಗೌರವವ ಹಾಗೂ ಭಯವಿಲ್ಲದಿರುವುದು. ರೆಡ್ ಸಿಗ್ನಲ್‌ನಲ್ಲಿ ನಿಲ್ಲುವುದಿಲ್ಲ. ಅಲ್ಲದೇ ನಮ್ಮ ಜನ ಹೆಲ್ಮೆಟ್ ಹಾಕುವುದಿಲ್ಲ. ಹೆಲ್ಮೆಟ್ ಹಾಕದ ಕಾರಣಕ್ಕೆ 30,000 ಜನ ಸಾಯುತ್ತಾರೆ. ಇನ್ನೂ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ನಾನೇ ಅಪಘಾತಕ್ಕೆ ಗುರಿಯಾಗಿದ್ದೆ. ಅಪಘಾತದಲ್ಲಿ ನನ್ನ ಕಾಲು ಮುರಿದಿತ್ತು ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

    ಅಪಘಾತ ತಡೆಗೆ ಕಠಿಣ ಪ್ರಯತ್ನದ ಹೊರತಾಗಿಯೂ ರಸ್ತೆ ಅಪಘಾತದಲ್ಲಿ ಈ ವರ್ಷ 1.68 ಲಕ್ಷ ಸಾವುಗಳು ಸಂಭವಿಸಿವೆ. ರಸ್ತೆಗಳ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದ ಕಾರಣ ಈ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿವೆ. ಸಾರ್ವಜನಿಕ ಪ್ರತಿನಿಧಿಗಳು, ಮಾಧ್ಯಮಗಳು ಅಥವಾ ಸಮಾಜದ ಸಹಕಾರವಿಲ್ಲದೆ ಇದರ ನಿಯಂತ್ರಣ ಸಾಧ್ಯವಿಲ್ಲ. ನಾವೂ ದಂಡವನ್ನು ಹೆಚ್ಚಿಸಿದ್ದೇವೆ, ಆದರೆ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಆತಂಕ ಹೊರ ಹಾಕಿದ್ದಾರೆ.

  • ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಅಪಘಾತಗಳಿಗೆ ಕಾರಣ ತಿಳಿಸಿದ ಕೇಂದ್ರ ಹೆದ್ದಾರಿ ಸಚಿವಾಲಯ

    ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಅಪಘಾತಗಳಿಗೆ ಕಾರಣ ತಿಳಿಸಿದ ಕೇಂದ್ರ ಹೆದ್ದಾರಿ ಸಚಿವಾಲಯ

    ನವದೆಹಲಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru Mysuru Expressway) ನಡೆದ ಅಪಘಾತಗಳಿಗೆ ಕಾರಣವೇನೆಂಬುದನ್ನು ಕೇಂದ್ರ ಹೆದ್ದಾರಿ ಸಚಿವಾಲಯ (MORTH) ತಿಳಿಸಿದೆ.

    ಕಳೆದ ಆರು ತಿಂಗಳಲ್ಲಿ ನಡೆದ ಅಪಘಾತಗಳ (Accidents) ಪೈಕಿ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳಿವೆ. ಒಟ್ಟಾರೆಯಾಗಿ 65-75% ಅಪಘಾತಗಳು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಕಾರುಗಳು ಮತ್ತು ಬೈಕ್‌ಗಳಿಂದ ಉಂಟಾಗಿವೆ ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.

    ಈ ಎಕ್ಸ್‌ಪ್ರೆಸ್‌ವೇಯ ವೇಗಮಿತಿ 80 ರಿಂದ 100 ಕಿಲೋಮೀಟರ್ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಎಕ್ಸ್‌ಪ್ರೆಸ್‌ವೇನ ಎರಡೂ ಬದಿಗಳಲ್ಲಿರುವ ಟೋಲ್ (Toll) ರಹಿತ ಸರ್ವೀಸ್ ರಸ್ತೆ ಬಳಸಬಹುದು ಎಂದಿರುವ ಸಚಿವಾಲಯ, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯಗಳಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾರಣ ಸರ್ವೀಸ್ ರಸ್ತೆ ಇಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಚಕ್ರ ಬ್ಲಾಸ್ಟ್ – ತಪ್ಪಿದ ಭಾರೀ ದುರಂತ

    ಇನ್ನೂ ಮಂಡ್ಯದ ಉಮ್ಮಡನಹಳ್ಳಿ ಗೇಟ್ ಬಳಿ ಟಿಪ್ಪರ್ ಟೈರ್ ಸ್ಪೋಟಗೊಂಡು, ಟೈರ್‌ನ ಒಂದು ಭಾಗ ಇಪ್ಪತ್ತಡಿ ದೂರಕ್ಕೆ ಹಾರಿದೆ. ಈ ಸಂದರ್ಭದಲ್ಲಿ ಕಾರೊಂದನ್ನು ಬಿಟ್ಟು ಉಳಿದ ವಾಹನಗಳ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಟೈರ್ ಬ್ಲಾಸ್ಟ್ ಆಗುವ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ವೇಗಮಿತಿ ಹೆಚ್ಚಾಗುತ್ತಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಲುವೆಗೆ ಉರುಳಿದ ಬಸ್ – ಭೀಕರ ಅಪಘಾತಕ್ಕೆ 22 ಬಲಿ, 7 ಮಂದಿಗೆ ಗಾಯ

    ಕಾಲುವೆಗೆ ಉರುಳಿದ ಬಸ್ – ಭೀಕರ ಅಪಘಾತಕ್ಕೆ 22 ಬಲಿ, 7 ಮಂದಿಗೆ ಗಾಯ

    ಕೈರೋ: ಉತ್ತರ ಈಜಿಪ್ಟ್‌ನ (Egypt) ದಕಹ್ಲಿಯಾ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ಮಿನಿಬಸ್‌ವೊಂದು ಕಾಲುವೆಗೆ (Canal) ಉರುಳಿಬಿದ್ದ ಪರಿಣಾಮ 22 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

    ರಾಜಧಾನಿ ಕೈರೋದ ಈಶಾನ್ಯಕ್ಕೆ 100 ಕಿಮೀ ದೂರದಲ್ಲಿರುವ ದಕಾಹ್ಲಿಯಾ ಪ್ರಾಂತ್ಯದಲ್ಲಿ ಅಪಘಾತ (Egypt Bus Accident) ಸಂಭವಿಸಿದೆ. ಬಸ್‌ನಲ್ಲಿ ಸುಮಾರು 46 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನಿಂದ ಸ್ಟೇರಿಂಗ್ ನಿಯಂತ್ರಣ ಕಳೆದುಕೊಂಡಿದ್ದು, ಕಾಲುವೆಗೆ ಉರುಳಿದೆ. ಅಪಘಾತದಲ್ಲಿ 3 ಮಕ್ಕಳು ಸೇರಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ (Health Ministry) ಅಧಿಕಾರಿ ಡಾ.ಶೆರಿಫ್ ಮಕೀನ್ ತಿಳಿಸಿದ್ದಾರೆ. ಇದನ್ನೂ ಓದಿ: ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ – ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ

    ಘಟನಾ ಸ್ಥಳಕ್ಕೆ ಒಟ್ಟು 18 ಅಂಬುಲೆನ್ಸ್ಗಳನ್ನು ಕಳುಹಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಮೃತರು ಹಾಗೂ ಗಾಯಗೊಂಡ ಕುಟುಂಬಗಳಿಗೆ ಈಗಾಗಲೇ ಪರಿಹಾರ ಘೋಷಿಸಲಾಗಿದೆ. ಇದನ್ನೂ ಓದಿ: 150 ವರ್ಷಗಳ ಬಳಿಕ ಧಾರವಾಡಕ್ಕೆ ಭೇಟಿ ನೀಡಿದ ಕನ್ನಡ ನಿಘಂಟು ತಜ್ಞ ಕಿಟೆಲ್ ಕುಟುಂಬ

    10.3 ಕೋಟಿ ಜನಸಂಖ್ಯೆ ಹೊಂದಿರುವ ಈಜಿಪ್ಟ್ನಲ್ಲಿ ರಸ್ತೆ ಅಪಘಾತಗಳು ಸಹಜವಾಗಿದೆ. ಕಳಪೆ ರಸ್ತೆಗಳು ಹಾಗೂ ಟ್ರಾಫಿಕ್ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚಾಗಿವೆ. ಪ್ರತಿ ವರ್ಷವೂ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ (Transport Safety Record) 2021ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 7 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕಳೆದ ಜುಲೈನಲ್ಲೂ ಭಾರೀ ರಸ್ತೆ ಅಪಘಾತ ಸಂಭವಿಸಿ 25 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. 35 ಮಂದಿ ಗಾಯಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಣ್ಣ ರಸ್ತೆ ಅಪಘಾತದಿಂದ ಕೋಮು ಗಲಭೆ – ದೇವಾಲಯ ಧ್ವಂಸ, 22 ಮಂದಿ ಅರೆಸ್ಟ್

    ಸಣ್ಣ ರಸ್ತೆ ಅಪಘಾತದಿಂದ ಕೋಮು ಗಲಭೆ – ದೇವಾಲಯ ಧ್ವಂಸ, 22 ಮಂದಿ ಅರೆಸ್ಟ್

    ಗಾಂಧಿನಗರ: ಎರಡು ಸಮುದಾಯಗಳಿಗೆ ಸೇರಿದ ದ್ವಿಚಕ್ರ ವಾಹನಗಳ ಸಣ್ಣದೊಂದು ಅಪಘಾತದಿಂದಾಗಿ ಸಂಘರ್ಷ ನಡೆದಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಪೊಲೀಸರು ಸಂಘರ್ಷಕ್ಕೆ ಸಂಬಂಧಪಟ್ಟ 22 ಜನರನ್ನು ಬಂಧಿಸಿದ್ದಾರೆ.

    ಎರಡು ಪ್ರತ್ಯೇಕ ಧರ್ಮದವರಿದ್ದ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದಿವೆ. ಈ ಘಟನೆ ವೇಳೆ ನಡೆದ ವಾಕ್ಸಮರದಿಂದ ಹಿಂಸಾಚಾರ ನಡೆದಿದೆ. ಗಲಭೆಕೋರರು ಕಲ್ಲು ತೂರಾಟ, ದೇವಾಲಯಗಳ ಧ್ವಂಸ ಹಾಗೂ ವಾಹನಗಳಿಗೆ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೀ ಕೊಡುಗೆಗಳಿಗೆ ಕಡಿವಾಣ ಹಾಕಿ: ರಾಜ್ಯಗಳಿಗೆ ತಜ್ಞರ ಎಚ್ಚರಿಕೆ

    ಭಾನುವಾರ ತಡರಾತ್ರಿ ನಡೆದ ರಸ್ತೆ ಅಪಘಾತ ಸಂಘರ್ಷಕ್ಕೆ ಕಾರಣವಾಗಿದ್ದು, 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಸ್ತೆ ಅಪಘಾತದಿಂದಾಗಿ ಎರಡು ಸಮುದಾಯದ ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಸಮಸ್ಯೆ ಉಲ್ಪಣಗೊಂಡಿದೆ. ಬಳಿಕ ಕಲ್ಲುತೂರಾಟ, ಹಿಂಸಾಚಾರ ನಡೆದಿದೆ. ಗಲಭೆಕೋರರು ರಸ್ತೆ ಬದಿಯಲ್ಲಿದ್ದ ದೇವಾಲಯಕ್ಕೆ ನುಗ್ಗಿ, ಅಲ್ಲಿನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಇದರೊಂದಿಗೆ 2 ಆಟೋರಿಕ್ಷಾಗಳು ಹಾಗೂ ಹಲವು ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಮತ್ತೆ 15 ಜನರ ಬಂಧನ

    POLICE JEEP

    ಅಪಘಾತ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾವ್ಪುರ ಮತ್ತು ಕರೇಲಿಬಾಗ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದುವರೆಗೆ ಒಟ್ಟು 22 ಜನರನ್ನು ಬಂಧಿಸಲಾಗಿದೆ. ಘಟನಾ ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಭೀಕರ ರಸ್ತೆ ಅಪಘಾತ – ಸಂಸದ ಎನ್‌ಆರ್‌ ಇಳಂಗೋವನ್‌ ಪುತ್ರ ಸಾವು

    ಭೀಕರ ರಸ್ತೆ ಅಪಘಾತ – ಸಂಸದ ಎನ್‌ಆರ್‌ ಇಳಂಗೋವನ್‌ ಪುತ್ರ ಸಾವು

    ಚೆನ್ನೈ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಜ್ಯಸಭಾ ಸಂಸದ ಎನ್‍ಆರ್ ಇಳಂಗೋವನ್ ಅವರ ಪುತ್ರ ರಾಕೇಶ್(22) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಮತ್ತೊರ್ವ ಪ್ರಯಾಣಿಕನೊಂದಿಗೆ ಪುದುಚೇರಿಯಿಂದ ಚೆನ್ನೈಗೆ ರಾಕೇಶ್ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ವಾಹನವು ರಸ್ತೆ ವಿಭಜಕಕ್ಕೆ (ಡಿವೈಡರ್​)  ಡಿಕ್ಕಿ ಹೊಡೆದ ಪರಿಣಾಮ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದಾರೆ ಮತ್ತು ಮತ್ತೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು

    ಸದ್ಯ ಈ ಘಟನೆ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಗಾಯಾಳು ಪ್ರಯಾಣಿಕನನ್ನು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಮಾಜಿ ಹಿರಿಯ ವಕೀಲರಾದ ಎನ್‍ಆರ್ ಇಳಂಗೋವನ್ ಅವರು 2020ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾದರು. ಇದೇ ಮೊದಲ ಅವರ ಮೊದಲ ಅವಧಿಯಾಗಿದೆ. ಇದನ್ನೂ ಓದಿ:  ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು

  • ಹಬ್ಬದ ಸಿದ್ಧತೆ – ಕೆಲಸ ಮುಗಿಸಿ ಮನೆ ಸೇರಲು ಹೊರಟವರು ಮಸಣ ಸೇರಿದರು

    ಹಬ್ಬದ ಸಿದ್ಧತೆ – ಕೆಲಸ ಮುಗಿಸಿ ಮನೆ ಸೇರಲು ಹೊರಟವರು ಮಸಣ ಸೇರಿದರು

    ಚಿಕ್ಕಬಳ್ಳಾಪುರ: ಆಪೆ ಆಟೋಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಮಹಿಳೆಯರು ಆಸ್ಪತ್ರೆ ಸೇರಿರುವ ಮನಕಲಕುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಗುಂಡಾಪುರದ ಬಳಿ ನಡದಿದೆ.

    ಗೌರಿಬಿದನೂರು ನಗರ ಹೊರವಲಯದ ರೇಮೆಂಡ್ಸ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮುಗಿಸಿಕೊಂಡು ಗಣೇಶ ಹಬ್ಬದ ಅಂಗವಾಗಿ ಆಟೋ ಹತ್ತಿ ಊರಿಗೆ ಹೊರಟ ಮಹಿಳೆಯರೇ ಇದ್ದ ಆಪೆ ಅಟೋಗೆ ಮಧುಗಿರಿ ಕಡೆಯಿಂದ ಗೌರಿಬಿದನೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯತ್ರಿ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸವಿತಾ ಎಂಬುವರು ಮಾರ್ಗ ಮಧ್ಯೆ ಅಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

    ಆಟೋ ಚಾಲಕ ಹಾಗೂ ಉಳಿದ 4 ನಾಲ್ವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಗೌರಿಬಿದನೂರು ತಾಲೂಕು ತೊಂಡೆಬಾವಿ ಬಳಿ ಸಹ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಟ್ರೇಮೋರ್ ಜೋಸೆಫ್ ಪುರ್ತಧೋ(53) ಮೃತಪಟ್ಟಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.