Tag: Road Accident

  • ಡ್ರೈವಿಂಗ್ ಕಲಿಯುತ್ತಿದ್ದಾಗ ವ್ಯಕ್ತಿಯ ಮೇಲೆ ಗಾಡಿಯನ್ನು ಹರಿಸಿದ ಮಾಜಿ ಪೊಲೀಸ್

    ಡ್ರೈವಿಂಗ್ ಕಲಿಯುತ್ತಿದ್ದಾಗ ವ್ಯಕ್ತಿಯ ಮೇಲೆ ಗಾಡಿಯನ್ನು ಹರಿಸಿದ ಮಾಜಿ ಪೊಲೀಸ್

    ಕೋಲ್ಕತ್ತಾ: ಡ್ರೈವಿಂಗ್ ಕಲಿಯುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಚಾಲನೆಯ ಸಮಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಗಾಡಿಯನ್ನು ಹರಿಸಿದ್ದು, ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನೆ ಸೋಮವಾರ ಕೋಲ್ಕತ್ತಾದ ಗರಿಯಾ ಸಹಕಾರಿ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ ನಡೆದಿದೆ. ಮೃತ ದುರ್ದೈವಿ ಪ್ರೊಫೆಸರ್ ಸುನಿಲ್ ಕುಮಾರ್ ಗರೈ ಮಾರುಕಟ್ಟೆಯಿಂದ ತರಕಾರಿಯನ್ನು ತರಲು ಹೋಗಿದ್ದು, ಮರಳುವಾಗ ದುರ್ಘಟನೆ ನಡೆದಿದೆ.

    ವರದಿಗಳ ಪ್ರಕಾರ ಗರೈ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದಾಗ ಹಿಂದಿನಿಂದ ಬಂದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ಮೇಲೆ ಕಾರು ಅವರ ಮೇಲೆಯೇ ಹರಿದುಕೊಂಡು ಹೋಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ

    ಪ್ರತ್ಯಕ್ಷದರ್ಶಿಗಳ ಪ್ರಕಾರ ಗರೈ ಅವರ ತಲೆ ಎಂಜಿನ್ ಮತ್ತು ಮಡ್‌ಗಾರ್ಡ್ ನಡುವೆ ಸಿಲುಕಿಕೊಂಡಿತ್ತು. ಸ್ಥಳದಲ್ಲಿ ನೆರೆದಿದ್ದ ಜನರು ಅವರನ್ನು ಅದರಿಂದ ಬಿಡಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಗರೈ ಸಾವನ್ನಪ್ಪಿದ್ದಾರೆ.

    ಗರೈಗೆ ಡಿಕ್ಕಿ ಹೊಡೆದ ಕಾರು ಮಧ್ಯಮ ಹಂತದ ಮಾಜಿ ಪೊಲೀಸ್ ಅಧಿಕಾರಿ ಓಡಿಸುತ್ತಿದ್ದು, ಅಪಘಾತದ ಸಮಯದಲ್ಲಿ ಕಾರು ಚಾಲನೆಯನ್ನು ಕಲಿಯುತ್ತಿದ್ದರು ಎನ್ನಲಾಗಿದೆ. ಗರೈ ಅವರ ಬೈಕ್ ಎದುರುಗಡೆ ಇದ್ದುದನ್ನು ಕಂಡು ಗಾಬರಿಗೊಳಗಾದ ಆರೋಪಿ ಗೊಂದಲದಲ್ಲಿ ಬ್ರೇಕ್ ಹಾಕುವ ಬದಲು ಆಕ್ಸಿಲೆಟರ್ ಒತ್ತಿದ್ದು, ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭದ್ರತೆಗಾಗಿ 12 ಕೋಟಿಯ ದುಬಾರಿ ಕಾರು- ವಿಶೇಷತೆ ಏನು..?

    ಸದ್ಯ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಿದ್ದಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ.

  • ಬೆಂಗಳೂರಿನ ಯಶವಂತಪುರದಲ್ಲಿ ಭೀಕರ ರಸ್ತೆ ಅಪಘಾತ!

    ಬೆಂಗಳೂರಿನ ಯಶವಂತಪುರದಲ್ಲಿ ಭೀಕರ ರಸ್ತೆ ಅಪಘಾತ!

    ಬೆಂಗಳೂರು: ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಜೀವ ಬದುಕುಳಿದಿದೆ.

    ಯಶವಂತಪುರ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. ಮಲ್ಲೇಶ್ವರಂನ ರಸ್ತೆಯಿಂದ ಕ್ಯಾಷ್ ಆಂಡ್ ಕ್ಯಾರಿ ರಸ್ತೆಯತ್ತ ಬರ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಡಿವೈಡರ್‍ಗೆ ಗುದ್ದಿ, ಚಿಕ್ಕ ಮರಗಳಿಗೆ ತಗಲಿಕೊಂಡಿದೆ. ಮರಕ್ಕೆ ಸಿಲುಕಿದ್ದರಿಂದ ರೈಲ್ವೆ ಹಳಿಗೆ ಬೀಳುವುದು ಜಸ್ಟ್ ಮಿಸ್ ಆಗಿದೆ. ಇದನ್ನೂ ಓದಿ: ಶಿಕ್ಷಣದಲ್ಲಿ ರಾಜಕೀಯ ಯಾಕೆ? : ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ


    ಅತಿ ವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಾಲು, ಕೈಗೆ ಗಾಯಾಗಳಾಗಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಐಸಿಸ್ ಉಗ್ರ ಸಂಘಟನೆಗೆ ಹಿಂದುತ್ವ ಹೋಲಿಕೆ – ವಿವಾದಕ್ಕೆ ಸಿಲುಕಿದ ಖುರ್ಷಿದ್ ಪುಸ್ತಕ

  • ಔರದ್‍ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು

    ಔರದ್‍ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು

    ಬೀದರ್: ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಿಪೂರ್ ಗ್ರಾಮದಲ್ಲಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ 18 ವರ್ಷದ ಶಾಲಿವಾನ ಹಾಗೂ 19 ವರ್ಷದ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಕೇಳಿಬರುತ್ತಿದೆ.  ಇದನ್ನೂ ಓದಿ:  ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಜೊಲ್ಲೆ

    ಶೆಂಬೆಳ್ಳಿ ಗ್ರಾಮದ ಇಬ್ಬರು ಯುವಕರು ಬೈಕ್ ನಲ್ಲಿ ಬೀದರ್ ಗೆ ಹೋಗುತ್ತಿರವಾಗ ಘಟನೆಯಾಗಿದ್ದು, ಸಂತಿಪೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ:  ಬೆಳಗಾವಿಯಲ್ಲಿ ದೇವಸ್ಥಾನಗಳ ತೆರವುಗೊಳಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ

  • ಶಾಲಾ ಮಕ್ಕಳು ತೆರಳ್ತಿದ್ದ ಟಾಟಾ ಸುಮೋ ಪಲ್ಟಿ- 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

    ಶಾಲಾ ಮಕ್ಕಳು ತೆರಳ್ತಿದ್ದ ಟಾಟಾ ಸುಮೋ ಪಲ್ಟಿ- 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

    – ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ವಾಹನ

    ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿದ್ದು, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯವಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೀಗೇನಹಳ್ಳಿ ಗೇಟ್ ಬಳಿ ನಡೆದಿದೆ.

    ಮುಳಬಾಗಿಲು ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ವಾಹನ ಅಪಘಾತಕ್ಕಿಡಾಗಿದೆ. ನಂಗಲಿಯಿಂದ ಶಾಲೆಗೆ ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದೊಯ್ತಿದ್ದ ವೇಳೆ ಟಾಟಾ ಸುಮೋ ಪಲ್ಟಿಯಾಗಿದೆ. ಈ ವೇಳೆ ವಾಹನದಲ್ಲಿದ್ದ 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿವೆ. ಗಾಯಾಳು ಮಕ್ಕಳನ್ನು ಕೋಲಾರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ನಂಗಲಿ, ವಡ್ಡಹಳ್ಳಿ ಗ್ರಾಮದಿಂದ ಶಾಲೆಗೆ ತೆರಳುತ್ತಿದ್ದ 6ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಇಲ್ಲ, ಚಾಲಕ ಸೇರಿ, ಕೆಲ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ವಿದ್ಯಾರ್ಥಿಗಳು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

  • ಧಾರವಾಡ ಅಪಘಾತ, ಸಾವಿನ ಸಂಖ್ಯೆ 11ಕ್ಕೆ ಏರಿಕೆ- ಪ್ರಧಾನಿ ಮೋದಿ ಸಂತಾಪ

    ಧಾರವಾಡ ಅಪಘಾತ, ಸಾವಿನ ಸಂಖ್ಯೆ 11ಕ್ಕೆ ಏರಿಕೆ- ಪ್ರಧಾನಿ ಮೋದಿ ಸಂತಾಪ

    ಧಾರವಾಡ: ಟೆಂಪೋ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಕನ್ನಡದಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದ್ದಾರೆ.

    ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಘಟನೆ ನಡೆದಿದ್ದು, ಒಟ್ಟು 11 ಜನ ಸಾವನ್ನಪ್ಪಿದ್ದಾರೆ. 5 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, 6 ಜನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬಸ್ ದಾವಣಗೆರೆಯಿಂದ ಗೋವಾಗೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಮೃತರನ್ನು ಡಾ.ವೀಣಾ ಪ್ರಕಾಶ ಮಟ್ಟಿಹಳ್ಳಿ(47), ವರ್ಷೀತಾ ವಿರೇಶ ಬಿರಾದಾರ (45), ಮಂಜುಳಾ ನಟೇಶ (47), ರಾಜೇಶ್ವರಿ ಶಿವಕುಮಾರ ಬಂಡೆಮ್ಮನವರ(40) ಎಲ್ಲರೂ ದಾವಣಗೆರೆಯವರಾಗಿದ್ದಾರೆ. ಟೆಂಪೋ ಚಾಲಕ ಮಲ್ಲಿಕಾರ್ಜುನ ತಿಮ್ಮಪ್ಪ ವಡಗಟ್ಟಿ(26) ರಾಣೇಬೆನ್ನೂರಿನವರೆಂದು ಗುರುತಿಸಲಾಗಿದೆ.

    ಒಟ್ಟು 16 ಜನ ಟೆಂಪೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ 11 ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತರೆಲ್ಲರೂ ದಾವಣಗೆರೆಯ ಸೇಂಟ್ ಪಾಲ್ ಸ್ಕೂಲ್ ನ ಬ್ಯಾಚ್‍ಮೇಟ್‍ಗಳಾಗಿದ್ದು, ಎಲ್ಲರೂ ಸೇರಿ ಗೋವಾ ಟ್ರಿಪ್ ಗೆ ಹೊರಟಿದ್ದರು. ಡಿಐಜಿ ಡಿ.ರೂಪಾ ಸಹ ಇದೇ ಬ್ಯಾಚ್ ನವರು ಆಗಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಡಿಕ್ಕಿ ರಭಸಕ್ಕೆ ಲಾರಿಯಲ್ಲಿದ್ದ ಕ್ಲೀನರ್ ಸಹ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಲಾರಿ ಚಾಲಕ ಪಾರಾಗಿದ್ದಾನೆ.

    ಈ ಘಟನೆಯಲ್ಲಿ ದಾವಣಗೆರೆ ಮಾಜಿ ಶಾಸಕ ಗುರುಸಿದ್ದನಗೌಡ ಸೊಸೆ ಕೂಡ ಸಾವನ್ನಪ್ಪಿದ್ದಾಳೆ. ಸದ್ಯ ಘಟನೆಯಲ್ಲಿ ಸಾವನ್ನಪ್ಪಿದ ಕೆಲವರನ್ನು ಗುರುತಿಸಲಾಗಿದೆ. ಇನ್ನುಳಿದವರನ್ನು ಸಂಬಂಧಿಕರು ದಾವಣಗೆರೆಯಿಂದ ಬಂದು ಗುರುತಿಸುತ್ತಿದ್ದಾರೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • ನೆಲಮಂಗಲದ ಬಳಿ ಭೀಕರ ಅಪಘಾತ – ಯೂಟರ್ನ್‍ನಲ್ಲಿ ತರಗೆಲೆಯಂತೆ ಉರುಳಿದ ಮಕ್ಕಳು

    ನೆಲಮಂಗಲದ ಬಳಿ ಭೀಕರ ಅಪಘಾತ – ಯೂಟರ್ನ್‍ನಲ್ಲಿ ತರಗೆಲೆಯಂತೆ ಉರುಳಿದ ಮಕ್ಕಳು

    ಬೆಂಗಳೂರು: ನೆಲಮಂಗಲದ ರಸ್ತೆ ತಿರುವಿನಲ್ಲಿ ಭಾರೀ ಅಪಘಾತವೊಂದು ನಡೆದಿದೆ. ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ನೆಲಮಂಗಲ ತಾಲೂಕಿನ ರಾಯರಪಾಳ್ಯದ ಯೂ ಟರ್ನ್‍ನಲ್ಲಿ ಈ ಅಪಘಾತ ಸಂಭವಿಸಿದೆ. ಗಂಡ, ಹೆಂಡತಿ ಹಾಗೂ ಮೂರು ಚಿಕ್ಕ ಮಕ್ಕಳ ಕುಟುಂಬವೊಂದು ಬೆಂಗಳೂರಿನಿಂದ ಬೈಕಿನಲ್ಲಿ ದಾವಣೆಗೆರೆಗೆ ತೆರಳುತ್ತಿತ್ತು. ಅದೃಷ್ಟವಶಾತ್ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ರಾಯರಪಾಳ್ಯದ ಗೇಟ್ ಬಳಿ ಯೂ ಟರ್ನ್‍ನಲ್ಲಿ ಬೈಕ್ ಸ್ಕಿಡ್ ಆಗಿ ಮಕ್ಕಳು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲು ಮಾಡಲಾಗಿದೆ.

    ಇಡೀ ಕುಟುಂಬಕ್ಕೆ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಒಂದು ಮಗುವಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ರಸ್ತೆ ತಿರುವು ಹಾಗೂ ಸರ್ವಿಸ್ ರೋಡ್ ಅವ್ಯವಸ್ಥೆ ಹಿನ್ನೆಲೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

  • ನಿದ್ರೆ ಮಂಪರಿನಲ್ಲಿ ಚಾಲನೆ – ಬಸ್ ಪಲ್ಟಿ, ಇಬ್ಬರು ಸಾವು

    ನಿದ್ರೆ ಮಂಪರಿನಲ್ಲಿ ಚಾಲನೆ – ಬಸ್ ಪಲ್ಟಿ, ಇಬ್ಬರು ಸಾವು

    -ಚಾಲಕ, ನಿರ್ವಾಹಕರಿಬ್ಬರು ಸ್ಥಳದಿಂದ ಪರಾರಿ
    -ಅತಿ ವೇಗದಿಂದಾಗಿ ಬಸ್ ಪಲ್ಟಿ

    ಚಿತ್ರದುರ್ಗ: ಚಾಲಕನ ಅಜಾಗರೂಕತೆಯಿಂದ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶಿವಮೂರ್ತಿ ಬಡಾವಣೆಯಲ್ಲಿ ನಡೆದಿದೆ.

    ಬಸ್‍ನಲ್ಲಿದ್ದ ಬಾಲಕಿ ಸೇರಿದಂತೆ ಓರ್ವ ಯುವಕ ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕೆಎ:33 ಎಫ್ 0386 ನಂಬರ್ ನ ಸರ್ಕಾರಿ ಬಸ್‍ನಲ್ಲಿ 50 ಜನ ಪ್ರಯಾಣಿಕರು ಯಾದಗಿರಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ಆದರೆ ಬೆಳಗಿನ ಜಾವ ನಿದ್ರೆ ಮಂಪರಿನಲ್ಲಿದ್ದ ಚಾಲಕ ಅತಿ ವೇಗವಾಗಿ ಬಸ್ ಚಾಲಾಯಿಸಿರುವ ಪರಿಣಾಮ ಬಸ್ ಪಲ್ಟಿಯಾಗಿದೆ.

    ಅಪಘಾತ ಸಂಭವಿಸಿದ ತಕ್ಷಣ ಪ್ರಯಾಣಿಕರ ನೆರವಿಗೆ ಧಾವಿಸಬೇಕಿದ್ದ ಚಾಲಕ, ನಿರ್ವಾಹಕರಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಸ್ತೆ ಗುಂಡಿಯಿಂದ ಅಪಘಾತ – ಬಿಬಿಎಂಪಿಯಿಂದ ಪಡೆಯಿರಿ ಪರಿಹಾರ

    ರಸ್ತೆ ಗುಂಡಿಯಿಂದ ಅಪಘಾತ – ಬಿಬಿಎಂಪಿಯಿಂದ ಪಡೆಯಿರಿ ಪರಿಹಾರ

    – ಹೈಕೋರ್ಟ್‌ ಚಾಟಿಯಿಂದ ಎಚ್ಚೆತ್ತ ಬಿಬಿಎಂಪಿ
    – ಅಪಘಾತವಾದ 1 ತಿಂಗಳ ಒಳಗಡೆ ಅರ್ಜಿ ಸಲ್ಲಿಕೆ ಕಡ್ಡಾಯ

    ಬೆಂಗಳೂರು: ಹೆಲ್ಮೆಟ್ ಹಾಕಿಲ್ಲದಿಂದರೆ ದಂಡ. ಮಾಸ್ಕ್ ಹಾಕದಿದ್ದರೆ ಫೈನ್. ಆದರೆ ರಸ್ತೆ ಸರಿ ಮಾಡದ ಬಿಬಿಎಂಪಿಗೆ ಏನು ದಂಡ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಕರ್ನಾಟಕ ಹೈಕೋರ್ಟ್ ಚಾಟಿ ಏಟಿಗೆ ಕೊನೆಗೂ ಎಚ್ಚೆತ್ತ ಬಿಬಿಎಂಪಿ ರಸ್ತೆ ಗುಂಡಿಯಿಂದ ಆಗುವ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದೆ. ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದವರಿಗೆ ಪರಿಹಾರ ಪಡೆಯಲು ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ.

    ಫುಟ್‌ಪಾತ್ ಗಳ ಎಡವಟ್ಟಿನಿಂದ ಗಾಯ, ರಸ್ತೆಗುಂಡಿಯಿಂದಾಗಿ ಆಗುವ ಅಪಘಾತದಲ್ಲಿ ಗಾಯ/ ಸಾವಿಗೀಡಾದವರಿಗೆ ಪರಿಹಾರ ಸಿಗಲಿದೆ.

    ಪರಿಹಾರ ಹೇಗೆ ಸಿಗಲಿದೆ?
    ಸಂತ್ರಸ್ತರು ಪೊಲೀಸ್ ದೂರಿನೊಂದಿಗೆ ಬಿಬಿಎಂಪಿ ವಲಯ ಆಯುಕ್ತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಕ್ಷಿಗಳಾಗಿ ಪೊಲೀಸ್ ದೂರು, ಪ್ರತ್ಯಕ್ಷದರ್ಶಿಯ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಗಣಿಸಿ ಪರಿಹಾರ ನೀಡಲಾಗುತ್ತದೆ. ಅಪಘಾತವಾದ ದಿನದಿಂದ 30 ದಿನಗಳ ಒಳಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

    ಎಷ್ಟು ಪರಿಹಾರ?
    ಕೆಟ್ಟ ರಸ್ತೆ ಅಥವಾ ಗುಂಡಿಗೆ ಬಿದ್ದು ಅಪಘಾತಗೊಂಡರೆ ಗರಿಷ್ಟ 15 ಸಾವಿರ, ಮೃತಪಟ್ಟರೆ 3 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲಿದೆ. ಸಣ್ಣ ಪ್ರಮಾಣದ ಗಾಯಕ್ಕೆ 5 ಸಾವಿರ ರೂ., ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ 10 ಸಾವಿರ ರೂ. ಸಿಗಲಿದೆ.

    ತಿರಸ್ಕರಿಸಬಹುದು:
    1 ತಿಂಗಳ ಒಳಗಡೆ ಅರ್ಜಿ ಸಲ್ಲಸದೇ ಇದ್ದರೆ, ಸರಿಯಾದ ದಾಖಲೆಗಳು ಇರದಿದ್ದರೆ ತಿರಸ್ಕರಿಸಬಹುದು. ರಸ್ತೆ ಗುಣಮಟ್ಟದ ಬಗ್ಗೆ ಎಚ್ಚರಿಕೆ ಫಲಕ ಹಾಕಿದ್ದರೂ ಆ ಜಾಗದಲ್ಲಿ ಅಪಘಾತ ಸಂಭವಿಸಿದರೆ ಪರಿಹಾರದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

    ಕೋರ್ಟ್‌ ಏನು ಹೇಳಿತ್ತು?
    ಕೋರಮಂಗಲದ ನಿವಾಸಿ ವಿಜಯನ್‌ ಮೆನನ್‌ 2015ರಲ್ಲಿ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಈ ವರ್ಷದ ಫೆಬ್ರವರಿಯಲ್ಲಿ ಸಿಜೆ ಎ.ಎಸ್‌. ಓಕ್‌ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯಪೀಠದಲ್ಲಿ ನಡೆದಿತ್ತು.

    ಈ ವೇಳೆ ರಸ್ತೆಗುಂಡಿಯಿಂದ ಸಂಭವಿಸುವ ಅಪಘಾತ ಹಾಗೂ ಸಾವು ನೋವಿಗೆ ಪರಿಹಾರ ನೀಡುವ ಕುರಿತಂತೆ ಕೋರ್ಟ್‌ ಆದೇಶವನ್ನು ಪಾಲಿಸದ್ದಕ್ಕೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಬಿಎಂಪಿಯ ಮಾಜಿ ಆಯಕ್ತ ಬಿ.ಎಚ್‌.ಅನಿಲ್‌ಕುಮಾರ್‌ಗೆ ಬೆವರಿಳಿಸಿದ ಹೈಕೋರ್ಟ್‌ ಬೇಷರತ್‌ ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.

  • ಕಂಠಪೂರ್ತಿ ಕುಡಿದು ರೋಗಿಯ ಮೇಲೆ ಬಿದ್ದು ಗೂಸಾ ತಿಂದ ವೈದ್ಯ

    ಕಂಠಪೂರ್ತಿ ಕುಡಿದು ರೋಗಿಯ ಮೇಲೆ ಬಿದ್ದು ಗೂಸಾ ತಿಂದ ವೈದ್ಯ

    ಲಕ್ನೋ: ಕಂಠಪೂರ್ತಿ ಕುಡಿದು ಪರೀಕ್ಷಿಸುತ್ತಿರುವುದನ್ನು ಕಂಡು ರೋಗಿಯ ಕುಟುಂಬಸ್ಥರು ವೈದ್ಯನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮದನ್ ಎಂಬುವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಕುಟುಂಬಸ್ಥರು ರೋಗಿಯನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆಸ್ಪತ್ರೆಯ ವೈದ್ಯ ರೋಗಿಯನ್ನು ಪರೀಕ್ಷಿಸುವ ವೇಳೆ ರೋಗಿಯ ಮೇಲೆಯೇ ಬಿದ್ದಿದ್ದಾನೆ. ಇದನ್ನು ಕಂಡ ರೋಗಿಯ ಸಂಬಂಧಿಕರು ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಅಪಘಾತದಿಂದ ತೀವ್ರ ಗೊಂಡಿದ್ದ ಮದನ್‍ನನ್ನು ಆಸ್ಪತ್ರೆಗೆ ಕರೆ ತಂದೆವು. ಆಸ್ಪತ್ರೆಗೆ ಬರುತ್ತಿದ್ದಂತೆ ವೈದ್ಯರು ರೋಗಿಯನ್ನು ದಾಖಲಿಸಲು 10 ಸಾವಿರ ರೂ. ನೀಡುವಂತೆ ಕೇಳಿದರು. ಆದರೂ ರೋಗಿ ತೀವ್ರ ಗಾಯಗೊಂಡಿದ್ದರಿಂದ ಹೇಗೋ ಮಾಡಿ 5 ಸಾವಿರ ರೂ. ನೀಡಿದೆವು. ವೈದ್ಯರು ಉಳಿದ ಹಣವನ್ನೂ ನೀಡುವಂತೆ ಬೇಡಿಕೆ ಇಟ್ಟರು. ಅಲ್ಲದೆ, ಉಳಿದ ಹಣ ನೀಡದಿದ್ದಲ್ಲಿ ಬೇರೆ ಆಸ್ಪತ್ರೆಯನ್ನು ಸೂಚಿಸುವುದಿಲ್ಲ ಎಂದು ಹೆದರಿಸಿದರು ಎಂದು ರೋಗಿ ಮದನ್ ಸಹೋದರ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

    ನಾನು ದಯಾಮಾಡಿ ಬೇರೆ ಆಸ್ಪತ್ರೆಯನ್ನು ಸೂಚಿಸಿ ಎಂದು ಕೇಳಿದಾಗ ವೈದ್ಯರು ನನಗೆ ಹೊಡೆದರು. ನಂತರ ಜಗಳ ಪ್ರಾರಂಭವಾಯಿತು. ಅಲ್ಲದೆ, ವೈದ್ಯರು ತುಂಬಾ ಕುಡಿದಿದ್ದರು. ನಿಲ್ಲಲು ಸಾಧ್ಯವಾಗದೆ ನನ್ನ ತಮ್ಮನ ಮೇಲೂ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಕುಟುಂಬದ ಇತರ ಸದಸ್ಯರು ಸಹ ಇದೇ ರೀತಿ ಆರೋಪ ಮಾಡಿದ್ದಾರೆ.

  • ಅಪಘಾತದಲ್ಲಿ ಮೃತಪಟ್ಟ ಮರಿಗಾಗಿ ತಾಯಿ ಶ್ವಾನದ ಮೂಕರೋಧನೆ

    ಅಪಘಾತದಲ್ಲಿ ಮೃತಪಟ್ಟ ಮರಿಗಾಗಿ ತಾಯಿ ಶ್ವಾನದ ಮೂಕರೋಧನೆ

    ವಿಜಯಪುರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ತನ್ನ ಮರಿಗಾಗಿ ತಾಯಿ ಶ್ವಾನವೊಂದು ಮೂಕರೋಧನೆ ಪಟ್ಟ ಮನಕಲಕುವ ದೃಶ್ಯ ತಾಯಿ ಪ್ರೀತಿ ಏನು ಎನ್ನುವುದನ್ನ ಸಾರುತ್ತಿದೆ.

    ಹೌದು. ತಾಯಿಗೆ ಮಕ್ಕಳೇ ಜೀವ. ಮಕ್ಕಳ ಮೇಲೆ ತಾಯಿ ತೋರುವ ಪ್ರೀತಿಗೆ ಸಾಟಿಯಿಲ್ಲ ಎನ್ನುತ್ತಾರೆ. ಹೀಗೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಯಿ ಮರಿಯೊಂದು ರಸ್ತೆ ಮಧ್ಯೆ ಮೃತಪಟ್ಟಿತ್ತು. ಇದನ್ನು ಕಂಡ ತಾಯಿ ನಾಯಿ ಮರಿ ಬಿಟ್ಟು ಅತ್ತ ಇತ್ತ ಕದಲದೇ ರಸ್ತೆ ಮಧ್ಯೆಯೇ ಕೂತು ಮೂಕರೋಧನೆ ಪಡುತ್ತಿದೆ.

    ಮೃತ ಪಟ್ಟ ನಾಯಿಮರಿ ಬಳಿ ಒಂದು ಗಂಟೆಗೂ ಅಧಿಕ ಕಾಲದಿಂದ ತಾಯಿ ಶ್ವಾನ ಕೂತು ಕಣ್ಣೀರಿಡುತ್ತಿದೆ. ತನ್ನ ಮರಿ ಮೇಲಿಟ್ಟಿರುವ ಪ್ರೀತಿ ಕಂಡು ಸ್ಥಳೀಯರು ಕೂಡ ಮರುಗಿದ್ದಾರೆ.