Tag: Road Accident

  • ಬೆಳಗಾವಿಯಲ್ಲಿ ಲಾರಿ ಹರಿದು 10 ವರ್ಷದ ಬಾಲಕ ದುರ್ಮರಣ- ರೊಚ್ಚಿಗೆದ್ದ ಜನ ಮಾಡಿದ್ದೇನು?

    ಬೆಳಗಾವಿಯಲ್ಲಿ ಲಾರಿ ಹರಿದು 10 ವರ್ಷದ ಬಾಲಕ ದುರ್ಮರಣ- ರೊಚ್ಚಿಗೆದ್ದ ಜನ ಮಾಡಿದ್ದೇನು?

    ಬೆಳಗಾವಿ: ಸರಕು ಸಾಗಣೆ ಮಾಡುತ್ತಿದ್ದ ಲಾರಿ ಹರಿದು 10 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ರೊಚ್ಚಿಗೆದ್ದ ಜನರು ಕಲ್ಲು ತೂರಾಟ ನಡೆಸಿದ್ದಾರೆ.

    ಬೆಳಗಾವಿ ಕ್ಯಾಂಪ್ ಪ್ರದೇಶದ ವೆಲ್‌ಕಮ್ ಹೋಟೆಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಪೊಲೀಸರ ಎದುರೇ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಲಾರಿ ಜಖಂಗೊಂಡಿದೆ. ಸದ್ಯ ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಆಕಸ್ಮಿಕವಾಗಿ ನದಿಗೆ ಬಿದ್ದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಯುವಕ!

    ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ಅಕ್ಕ-ತಮ್ಮ ಹಾಗೂ ಮತ್ತೊಬ್ಬ ಪಾದಚಾರಿಗೆ ಲಾರಿ ಡಿಕ್ಕಿ ಹೊಡಿದೆ. ಬಳಿಕ ಬಾಲಕನ ಮೇಲೆಯೇ ಲಾರಿ ಹರಿದಿದ್ದು, ಬಾಲಕ ಸಾವಿಗೀಡಾಗಿದ್ದಾನೆ. ಬಾಲಕನ ಅಕ್ಕ ಅತಿಕಾ ಹಾಗೂ ಆಯುಷ್ ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಇದನ್ನೂ ಓದಿ: ಮಿಡ್-ಡೇ ಮೀಲ್ ಯೋಜನೆಯಿಂದ 11 ಕೋಟಿ ರೂ. ವಸೂಲಿ – ಪ್ರಾಂಶುಪಾಲರ ವಿರುದ್ಧ ಆರೋಪ

    CRIME

    ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಡಿಸಿಪಿ ಸ್ನೇಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹೆಣಗಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • HDK ಬೆಂಗಾವಲು ವಾಹನ ಅಪಘಾತ – ಮೂವರಿಗೆ ಗಂಭೀರ ಗಾಯ

    HDK ಬೆಂಗಾವಲು ವಾಹನ ಅಪಘಾತ – ಮೂವರಿಗೆ ಗಂಭೀರ ಗಾಯ

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತಿಪ್ಪೂರು ಗೇಟ್ ಬಳಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

    ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮೂವರು ಗಂಭೀರ ಗಾಯಗೊಂಡಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥನ ಹತ್ಯೆ – ಅಮೆರಿಕದ ಡ್ರೋನ್‌ ದಾಳಿ ಖಂಡಿಸಿದ ತಾಲಿಬಾನ್‌

    ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಎಸ್ಕಾರ್ಟ್ ವಾಹನ ನಿನ್ನೆ ತಡರಾತ್ರಿ ಅಪಘಾತಕ್ಕೀಡಾಗಿದ್ದು, ವಾಹನದಲ್ಲಿದ್ದ ಐವರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎಸ್ಕಾರ್ಟ್ ಸಿಬ್ಬಂದಿಯಾದ ಮಹೇಶ್, ಮಂಜುನಾಥ್ ಹಾಗೂ ಆನಂದ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ವಾಹನ ಅಪಘಾತಕ್ಕೆ ಸ್ಪಷ್ಟ ಕಾರಣವೆನೆಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ಹಿಜಬ್ ನಿಷೇಧದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವಿಳಂಬ: ಸಿಜೆಐ

    ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಮೃತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • L- ಬೋರ್ಡ್‌ ಕಾರಿಗೆ ಲಾರಿ ಡಿಕ್ಕಿ : ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

    L- ಬೋರ್ಡ್‌ ಕಾರಿಗೆ ಲಾರಿ ಡಿಕ್ಕಿ : ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಾಲಯ್ಯ ಕ್ಯಾಂಪ್ ಬಳಿ L-BOARD ಆಲ್ಟೋ ಕಾರಿಗೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮೃತರನ್ನ ಆಂಧ್ರಪ್ರದೇಶ ಮೂಲದ ದೀಪ್(35), ಪೂರ್ಣಿಮಾ(30), ಜಶಿನ್(12) ಹಾಗೂ ಮಾಹಿನ್(7) ಎಂದು ಗುರುತಿಸಲಾಗಿದೆ. ತಂದೆ ತಾಯಿ ಇಬ್ಬರು ಮಕ್ಕಳು ಅಪಘಾತಕ್ಕೀಡಾಗಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮ, ಜಾತಿಯವರಿಗೆ ಸಿಎಂ ಸ್ಥಾನ ಮೀಸಲು ಅಲ್ಲ: ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    ಬೆಂಗಳೂರಿನಿಂದ ಸಿಂಧನೂರು ಮಾರ್ಗವಾಗಿ ಹೈದರಾಬಾದ್‌ಗೆ ತೆರಳುತ್ತಿದ್ದ ಕುಟುಂಬ ದುರಂತ ಸಾವಿಗೀಡಾಗಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮೃತ ದೇಹಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: 100 ಅಡಿಯಿಂದ ನರ್ಮದಾ ನದಿಗೆ ಬಿತ್ತು ಬಸ್ – 12 ಸಾವು, ಹಲವರು ಗಂಭೀರ

    ಘಟನೆ ಸಂಬಂಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸ್ಥಳದಲ್ಲಿ ವಾಹನ ದಟ್ಟಣೆಯಾಗಿದ್ದು, ಎರಡು ಜೆಸಿಬಿಗಳಿಂದ ಅಪಘಾತವಾದ ವಾಹನಗಳ ತೆರವು ಕಾರ್ಯಾಚರಣೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಸ್ಪೇನ್: ಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮಾಲೀಕತ್ವದ 13.3 ಕೋಟಿ ಮೌಲ್ಯದ ಬುಗಾಟಿ ವೆರಾನ್ ಕಾರು ಅಪಘಾತಕ್ಕೀಡಾಗಿದೆ.

    ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶದ್ವಾರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ರೊನಾಲ್ಡೊ ಅವರ ಸಿಬ್ಬಂದಿಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿರುವ ಆಟಗಾರರ ಪೈಕಿ ರೊನಾಲ್ಡೊ ಸಹ ಒಬ್ಬರಾಗಿದ್ದಾರೆ. ಪ್ರಸ್ತುತ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಫೋಕ್ಸ್ ವ್ಯಾಗನ್ ಕಂಪನಿಯ ಬುಗಾಟಿ ವೆರಾನ್ ಕಾರು ಪ್ರಪಂಚದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ.

    Live Tv

  • ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕ ಸಾವು – ಕಾರು ಬಿಟ್ಟು ಪರಾರಿಯಾದ ಶಾಸಕ

    ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕ ಸಾವು – ಕಾರು ಬಿಟ್ಟು ಪರಾರಿಯಾದ ಶಾಸಕ

    ಕೋಲಾರ: ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸಾವನ್ನಪ್ಪಿದ್ದು, ಕಾರನ್ನು ಬಿಟ್ಟು ಆಂಧ್ರಪ್ರದೇಶದ ಶಾಸಕ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಂತರಾಜ ವೃತ್ತದಲ್ಲಿ ನಡೆದಿದೆ.

    ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಸಿರ ಶಾಸಕ ತಿಪ್ಪೆಸ್ವಾಮಿಗೆ ಸೇರಿದ ಕಾರು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಆಸ್ಪತ್ರೆ ಮೇಲ್ಛಾವಣಿ ಕುಸಿತ- ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಚಿಂತಾಜನಕ

    ರಸ್ತೆ ಅಪಘಾತದಲ್ಲಿ ಮಡಕಸಿರ ಶಾಸಕ ಹಾಗೂ ಕಾರು ಚಾಲಕನಿಗೆ ಗಾಯಗಳಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅಪಘಾತದಲ್ಲಿ ಮುಳಬಾಗಲು ಮೂಲದ ಟ್ರ್ಯಾಕ್ಟರ್ ಚಾಲಕ ಸುಬ್ರಮಣಿ(35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ದಲಿತ್ Vs ಎಸ್‌ಡಿಪಿಐ ಜಟಾಪಟಿ

    ಮುಳಬಾಗಲು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶಾಸಕನ ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ತಿಪ್ಪೆಸ್ವಾಮಿ ಆಂಧ್ರಪ್ರದೇಶದ ಪ್ರಸ್ತುತ ಜಗನ್ ಸರ್ಕಾರದ ವೈಎಸ್‌ಆರ್ ಕಾಂಗ್ರೇಸ್‌ನ ಹಾಲಿ ಶಾಸಕನಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿರಬಹುದು ಎನ್ನಲಾಗಿದೆ.

  • ಭೀಕರ ರಸ್ತೆ ಅಪಘಾತ- 6 ಜನ ಸಾವು

    ಭೀಕರ ರಸ್ತೆ ಅಪಘಾತ- 6 ಜನ ಸಾವು

    ಹೈದರಾಬಾದ್: ನಿಂತಿದ್ದ ಲಾರಿ ಮತ್ತು ಟೆಂಪೋ ಟ್ರಾವೆಲರ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 110 ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದಿದೆ.

    ಅಪಘಾತದ ಸಮಯದಲ್ಲಿ ಮಿನಿವ್ಯಾನ್‍ನಲ್ಲಿ ಸುಮಾರು 39 ಪ್ರಯಾಣಿಕರು ಇದ್ದರು. ಆ ಟೆಂಪೋ ಟ್ರಾವೆಲರ್‌ನಲ್ಲಿದ್ದ ನಾಲ್ವರು ಸ್ಥಾಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಗದೇ ಸಾವನ್ನಪ್ಪಿದ್ದಾರೆ.

    ಗಾಯಾಳುಗಳನ್ನು ನರಸರಾಯಪೇಟೆಯ ಗುರಜಾಲ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆ- ಜೆಡಿಎಸ್ ಅಭ್ಯರ್ಥಿಯಾಗಿ ಕುಪ್ಪೇಂದ್ರ ರೆಡ್ಡಿ ಫೈನಲ್

    ನಿನ್ನೆಯಷ್ಟೇ ಉತ್ತರ ಪ್ರದೇಶದ ಖೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 8 ಜನ ಮೃತಪಟ್ಟಿದ್ದರು. ಅಯೋಧ್ಯೆಗೆ ಟೆಂಪೋ ಟ್ರಾವೆಲರ್‌ನಲ್ಲಿ ಬೀದರ್‌ನ 16 ಜನರು ಪ್ರಯಾಣ ಬೆಳೆಸುತ್ತಿದ್ದರು. ಈ ಟೆಂಪೋ ಟ್ರಾವೆಲರ್‌ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಎದುರಿನ ಲೇನ್‍ಗೆ ಪ್ರವೇಶಿಸಿದೆ. ಈ ವೇಳೆ ಟೆಂಪೋ ಟ್ರಾವೆಲರ್‌ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಯುಪಿಯಲ್ಲಿ ಬೀದರ್‌ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

  • ವಾರದ ಹಿಂದೆ ಮದುವೆಯಾಗಿದ್ದ ಯುವಕ ರಸ್ತೆ ಅಪಘಾತಕ್ಕೆ ಬಲಿ – ಒಂದೇ ವಾರದಲ್ಲಿ 12 ಸಾವು

    ವಾರದ ಹಿಂದೆ ಮದುವೆಯಾಗಿದ್ದ ಯುವಕ ರಸ್ತೆ ಅಪಘಾತಕ್ಕೆ ಬಲಿ – ಒಂದೇ ವಾರದಲ್ಲಿ 12 ಸಾವು

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಮುಂದುವರಿಯುತ್ತಿದೆ. ಕಳೆದ 1 ವಾರದಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 12 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಹುಬ್ಬಳ್ಳಿಯ ತಾರಿಹಾಳ ಬಳಿಯ ಬೈಪಾಸ್‌ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಈಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತಕ್ಕೆ 5ರ ಮಗು ಬಲಿ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಬುಲೇರೊ ಕಾರ್ ಮತ್ತು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯುವಕ ಆನಂದ ಮಾದರ (27) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ತಾಲೂಕಿನ ಚಳಮಟ್ಟಿ ಗ್ರಾಮದ ನಿವಾಸಿಯಾಗಿರುವ ಆನಂದ ಕಳೆದ ಮೇ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

    ACCIDENT

    ಅಣ್ಣಿಗೇರಿ ತಾಲ್ಲೂಕಿನ ಭದ್ರಾಪೂರ ಬಳಿ ನಡೆದ ಮತ್ತೊಂದು ಪ್ರಕರಣದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ತಿಮ್ಮಣ್ಣ ಮರಿಗೌಡರ್ (27), ಮುಹಬಕರ್ ಅಲಿ (22), ಜುಬೇಕರ್ (25) ಮತ್ತು ಸುಹೇಬಾ (23) ಗಾಯಗೊಂಡಿದ್ದಾರೆ. ಸುಹೇಬಾಗೆ ಎದೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಣ್ಣಿಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಮೂರು ಬೈಕ್‌ಗಳು ಡಿಕ್ಕಿ – ನಾಲ್ವರು ಸಾವು

    ಮೂರು ಬೈಕ್‌ಗಳು ಡಿಕ್ಕಿ – ನಾಲ್ವರು ಸಾವು

    ತುಮಕೂರು: ಇಲ್ಲಿನ ತುರುವೆಕೆರೆ ತಾಲೂಕಿನ ಶೆಟ್ಟಿಗೊಂಡನಹಳ್ಳಿ ಸಮೀಪ 3 ಬೈಕ್‌ಗಳು ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾರೆ.

    ಕುಣಿಗಲ್ ತಾಲೂಕಿನ ಜಲಧಿಗೆರೆ ಕಡೆಯಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಲ್ಲೂರು ಕಡೆಗೆ ಬೈಕ್‌ಗಳಲ್ಲಿ ಈ ನಾಲ್ವರು ತೆರಳುತ್ತಿದ್ದರು. ಇದೇ ವೇಳೆ ಕಲ್ಲೂರು ಕಡೆಯಿಂದ ಸ್ಪ್ಲೆಂಡರ್ ಬೈಕ್‌ನಲ್ಲಿ ಇಬ್ಬರು ಬರುತ್ತಿದ್ದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

    BIKe (1)c

    ಈ ಮೂರು ಬೈಕ್‌ಗಳ ನಡುವೆ ಅಪಘತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಯಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧಾರವಾಡದಲ್ಲಿ ಮರಕ್ಕೆ ಕ್ರೂಸರ್ ಡಿಕ್ಕಿ – 7 ಮಂದಿ ಸಾವು

    ಧಾರವಾಡದಲ್ಲಿ ಮರಕ್ಕೆ ಕ್ರೂಸರ್ ಡಿಕ್ಕಿ – 7 ಮಂದಿ ಸಾವು

    ಧಾರವಾಡ: ರಾಜ್ಯದಲ್ಲಿ ಒಂದು ಕಡೆ ಮಳೆಯ ಅಬ್ಬರದಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದರೆ ಇನ್ನೊಂದು ಕಡೆ ಇವತ್ತು ಎರಡು ಭೀಕರ ಅಪಘಾತಗಳು ಸಂಭವಿಸಿದೆ.

    ಧಾರವಾಡದ ಬಾಡಾ ಗ್ರಾಮದ ಬಳಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ಎಚ್ಚರಿಕೆ – ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಣ್ಗಾವಲು

    ACCIDENT (1)

    ಇಂದು ನಡೆಯಬೇಕಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನಸೂರ ಗ್ರಾಮದಿಂದ ಬೆನಕನಟ್ಟಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ಮೃತರನ್ನು ಮಹೇಶ್ವರಯ್ಯ (11), ಅನನ್ಯ (14), ಹರೀಶ್ (12), ಶಿಲ್ಪಾ (34), ನೀಲವ್ವ(60), ಮಧುಶ್ರೀ (20) ಹಾಗೂ ಶಂಭುಲಿಂಗಯ್ಯ (35) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ

    ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಬೆನ್ನಲ್ಲೇ ಕ್ರೂಸರ್ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ದುರಸ್ತಿ ಕೆಲಸ ಮುಗಿಸಿ ರಸ್ತೆ ಬದಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದ ಲಾರಿ – 3 ಸಾವು

    ದುರಸ್ತಿ ಕೆಲಸ ಮುಗಿಸಿ ರಸ್ತೆ ಬದಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದ ಲಾರಿ – 3 ಸಾವು

    ಚಂಡೀಗಢ: ಅತೀ ವೇಗವಾಗಿ ಬಂದ ಸರಕು ಸಾಗಣೆ ಲಾರಿಯೊಂದು ರಸ್ತೆ ದುರಸ್ತಿ ಕೆಲಸ ಮುಗಿಸಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದು ಮೂವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಜಜ್ಜರ್ ಬಳಿ ನಡೆದಿದೆ.

    Road accident

    ಇಲ್ಲಿನ ಕುಂಡ್ಲಿ ಮನೇಸರ್ ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌- ವೇ ಹೆದ್ದಾರಿಯಲ್ಲಿ ರಸ್ತೆ ಅಪಘಾತ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡ 11 ಮಂದಿ ಪೈಕಿ 10 ಮಂದಿಯನ್ನು PGIMS ಆಸ್ಪತ್ರೆಗೆ, ಗಂಭೀರ ಗಾಯಗೊಂಡ ಓರ್ವನನ್ನು ಬಹದ್ದೂರ್‌ಗಢ್‌ನ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    CRIME 2

    ಅಪಘಾತಕ್ಕೆ ಒಳಗಾದವರು ಇಲ್ಲಿನ ಕೆಎಂಪಿ ಎಕ್ಸ್‌ಪ್ರೆಸ್‌-ವೇ ಹೆದ್ದಾರಿಯಲ್ಲಿ ರಸ್ತೆದುರಸ್ತಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ, ರಸ್ತೆ ಬದಿಯಲ್ಲೇ ಮಲಗಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಲಾರಿಯೊಂದು ಕಾರ್ಮಿಕರ ಮೇಲೆ ಹರಿದಿದೆ. ಇದನ್ನೂ ಓದಿ: ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

    ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬಹದ್ದೂರ್‌ಗಢ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.