Tag: Road Accident

  • ಗರ್ಭಿಣಿ ಪತ್ನಿ ಸಾವಿನಿಂದ ಮೆಂಟಲ್ ಶಾಕ್ – ವಿಷ ಸೇವಿಸಿ ಪತಿಯೂ ಆತ್ಮಹತ್ಯೆ

    ಗರ್ಭಿಣಿ ಪತ್ನಿ ಸಾವಿನಿಂದ ಮೆಂಟಲ್ ಶಾಕ್ – ವಿಷ ಸೇವಿಸಿ ಪತಿಯೂ ಆತ್ಮಹತ್ಯೆ

    ಮುಂಬೈ: ಆಸ್ಪತ್ರೆಗೆ ಗಂಡನ ಜೊತೆಗೆ ತಿಂಗಳ ಚಿಕಿತ್ಸೆಗೆ ಬಂದಿದ್ದ ಗರ್ಭಿಣಿ (Pregnant) ರಸ್ತೆ ಅಪಘಾತದಲ್ಲಿ (Road Accident) ದಾರುಣ ಸಾವಿಗೀಡಾದರು. ಕರಳುಬಳ್ಳಿ ಹೊತ್ತಿದ್ದ ಹೆಂಡತಿಯ ಸಾವನ್ನು ಕಣ್ಣೆದುರೆ ಕಂಡ ಪತಿ ಈ ದುಃಖದಿಂದ ತಾನೂ ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುಣೆಯ ಜುನ್ನಾರ್ ತಾಲೂಕಿನಲ್ಲಿ ನಡೆದಿದೆ.

    ದೊಂಡಕರ್ವಾಡಿಯ ರಮೇಶ್ ನವನಾಥ್ ಕಂಸ್ಕರ್ (29) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಎಂಟು ತಿಂಗಳ ಹಿಂದೆ ವಿದ್ಯಾ ಕಂಸ್ಕರ್ ನನ್ನು ವಿವಾಹವಾಗಿದ್ದರು (Marriage). ಆಕೆ ಗರ್ಭಿಣಿಯಾಗಿದ್ದು (Pregnant), ಕಳೆದ ವಾರ ಇಲ್ಲಿನ ನಾರಾಯಣ ಗಾಂವ್ ಆಸ್ಪತ್ರೆಗೆ (Hospital) ತಿಂಗಳ ಚಿಕಿತ್ಸೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ಗಂಡನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಬೈಕ್‌ನಿಂದ ಕೆಳಗೆ ಇಳಿದರು. ಆಗ ಕಬ್ಬು ತುಂಬಿಕೊಂಡು ಬಂದ ಟ್ರ್ಯಾಕ್ಟರ್‌ ವಿದ್ಯಾ ಕಂಸ್ಕರ್‌ಗೆ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್‌ ಚಕ್ರಗಳು ತಲೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಜ್ಯೂ.ಎನ್‌ಟಿಆರ್ ಎಂಟ್ರಿ: ಇಲ್ಲಿದೆ ಮಾಹಿತಿ

    ಈ ಘಟನೆ ಕಣ್ಣಾರೆ ಕಂಡ ರಮೇಶ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಒಂದು ದಿನ ಅವರನ್ನು ಜುನ್ನಾರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಡೆಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮೆಜೆಸ್ಟಿಕ್‌ ಶಾಂತಲಾ ಸರ್ಕಲ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆ 1 ತಿಂಗಳು ಬಂದ್‌

    ನಗರದ ಕಿರಿದಾದ ಮತ್ತು ಕೆಟ್ಟ ರಸ್ತೆಗಳಿಂದಾಗಿ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೀದರ್‌ನಲ್ಲಿ ಭೀಕರ ರಸ್ತೆ ಅಫಘಾತ – ಐವರು ಕೂಲಿಕಾರ್ಮಿಕ ಮಹಿಳೆಯರು ಸಾವು

    ಬೀದರ್‌ನಲ್ಲಿ ಭೀಕರ ರಸ್ತೆ ಅಫಘಾತ – ಐವರು ಕೂಲಿಕಾರ್ಮಿಕ ಮಹಿಳೆಯರು ಸಾವು

    ಬೀದರ್: ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಐವರು ಮಹಿಳೆಯರು (Women) ದಾರುಣವಾಗಿ ಸಾವಿಗೀಡಾದ ಘಟನೆ ಬೀದರ್‌ನಲ್ಲಿ ನಡೆದಿದೆ.

    ಬೀದರ್ (Bidar) ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಘಟನೆ ನಡೆದಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನುಳಿದ 6 ಮಂದಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಪ್ರಭಾವತಿ (36), ಯಾದಮ್ಮ (40), ಗುಂಡಮ್ಮ (52), ಜಕ್ಕಮ್ಮ (32) ಹಾಗೂ ರುಕ್ಮಿಣಿ (60) ಮೃತಪಟ್ಟ ಮಹಿಳೆಯರು. ಇದರೊಂದಿಗೆ ಚಿಕಿತ್ಸೆ ಪಡೆಯುತ್ತಿರುವ 6 ಮಂದಿ ಮಹಿಳೆಯರು ಉಡುಬಾಳು ಗ್ರಾಮದವರೇ ಆಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್

    crime

    ಕೂಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ಆಟೋದಲ್ಲಿ (Auto Rickshaw) ವಾಪಸಾಗುತ್ತಿದ್ದಾಗ ಬೆಮಳಖೇಡಾ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

    ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

    ಆನೇಕಲ್: ಚಾಲಕನ ಅಜಾರೂಕತೆಯಿಂದ ಕ್ರೇನ್ (Crane Vehicle) ಹರಿದು ವಿದ್ಯಾರ್ಥಿನಿ (Student) ದಾರುಣ ಸಾವಿಗೀಡಾದ ಘಟನೆ ಮಹದೇವಪುರ ಕ್ಷೇತ್ರದ ಕನ್ನಮಂಗಲ ಗೇಟ್‌ನ ಜೈನ್ ಶಾಲೆ (Jain School) ಬಳಿ ನಡೆದಿದೆ.

    ಕುಮಾರಿ ನೂರ್ ಫಿಜ (19) ಮೃತ ವಿದ್ಯಾರ್ಥಿನಿ (Student). ಶಾಲೆ ಮುಗಿಸಿಕೊಂಡು ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ – ಹೊಸಕೋಟೆ ಮಾರ್ಗವಾಗಿ ಕನ್ನಮಂಗಲ ಬಳಿ ಹೋಗುತ್ತಿದ್ದಾಗ ಕ್ರೇನ್ ಚಾಲಕನ ಹಿಂಬದಿಯಿಂದ ಬಂದು ಗುದ್ದಿ, ವಿದ್ಯಾರ್ಥಿನಿ ಮೇಲೆ ಕ್ರೇನ್ ಹತ್ತಿಸಿದ್ದಾನೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಅಪಘಾತಕ್ಕೀಡಾಗಿ ರಕ್ತಸಿಕ್ತವಾಗಿ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ (Hospital) ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿ ತಂದೆ ರೆಹಮಾನ್ ಖಾನ್ ವೈಟ್ ಫೀಲ್ಡ್ ಸಂಚಾರ (Traffic Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾರು, ಬಸ್ ನಡುವೆ ಡಿಕ್ಕಿ – ಭೀಕರ ಅಪಘಾತದಲ್ಲಿ 11 ಸಾವು

    ಕಾರು, ಬಸ್ ನಡುವೆ ಡಿಕ್ಕಿ – ಭೀಕರ ಅಪಘಾತದಲ್ಲಿ 11 ಸಾವು

    ಭೋಪಾಲ್: ಕಾರು (Car) ಹಾಗೂ ಬಸ್ (Bus) ನಡುವೆ ಡಿಕ್ಕಿ ಉಂಟಾಗಿ ಭೀಕರ ಅಪಘಾತದಲ್ಲಿ (Accident) 11 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಬೇತುಲ್‌ನಲ್ಲಿ (Betul) ಶುಕ್ರವಾರ ನಸುಕಿನ ವೇಳೆ ನಡೆದಿದೆ.

    ಘಟನೆ ಗುಡ್ಗಾಂವ್ ಹಾಗೂ ಭೈಸ್ದೇಹಿ ಪ್ರದೇಶದ ನಡುವೆ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಧಾವಿಸಿದ್ದಾರೆ. ಗಾಯಗೊಂಡ ಒಬ್ಬ ಪ್ರಯಾಣಿಕನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ: ಸಚಿವೆ ಉಷಾ ಠಾಕೂರ್

    ವರದಿಗಳ ಪ್ರಕಾರ ಘಟನೆಯಲ್ಲಿ ಸಾವನ್ನಪ್ಪಿರುವ 11 ಪ್ರಯಾಣಿಕರು ಮಹಾರಾಷ್ಟçದ ಅಮರಾವತಿಯಿಂದ ಹಿಂದಿರುಗುತ್ತಿದ್ದರು. ಘಟನೆ ಮಧ್ಯರಾತ್ರಿ 2 ಗಂಟೆ ವೇಳೆ ನಡೆದಿದೆ. ಕಾರು ಚಾಲಕ ವಾಹನ ಚಲಾಯಿಸುತ್ತಿದ್ದ ವೇಳೆ ನಿದ್ರೆಗೆ ಜಾರಿದ್ದರಿಂದ ಅಪಘಾತ ಉಂಟಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲೂ ಸಂಚಾರ ಆರಂಭಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ – ನ.11ಕ್ಕೆ ಮೋದಿ ಚಾಲನೆ

    ಭೀಕರ ಘಟನೆಯ ಬಳಿಕ 7 ಶವಗಳನ್ನು ತಕ್ಷಣವೇ ಹೊರತೆಗೆಯಲಾಗಿದೆ. ಉಳಿದ ದೇಹಗಳನ್ನು ಹೊರತೆಗೆಯಲು ನಜ್ಜುಗುಜ್ಜಾದ ವಾಹನದ ಭಾಗಗಳನ್ನು ಬೇರ್ಪಡಿಸಬೇಕಾಯಿತು ಎಂದು ಬೇತುಲ್ ಹಿರಿಯ ಪೊಲೀಸ್ ಅಧಿಕಾರಿ ಸಿಮಲಾ ಪ್ರಸಾದ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭೀಕರ ಅಪಘಾತ – ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಬ್ಬ ಯುವಕ ಬಲಿ

    ಭೀಕರ ಅಪಘಾತ – ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಬ್ಬ ಯುವಕ ಬಲಿ

    ಬೆಂಗಳೂರು: ನಗರವಾಸಿಗಳನ್ನು ಹೈರಾಣಾಗಿಸಿರುವ ಬೆಂಗಳೂರಿನ ರಸ್ತೆಗುಂಡಿಗಳು (Bengaluru Potholes) ಇದೀಗ ಮತ್ತೊಬ್ಬ ಯುವಕನನ್ನು ಬಲಿ ಪಡೆದಿದೆ.

    ಜಕ್ಕೂರು ಸಮೀಪದ ಸ್ವಾಮಿ ವಿವೇಕನಂದ ಶಾಲೆ ಬಳಿ ನಡೆದ ಕಾರು-ಬೈಕ್ ನಡುವಿನ ಅಪಘಾತದಲ್ಲಿ ಕೇರಳ (Kerala) ಮೂಲದ ಯುವಕ ಅರ್ಷದ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಒಂದೇ ದಿನದಲ್ಲಿ ಕಾಡಿನಲ್ಲಿ ಶೂಟಿಂಗ್ – ಟವೆಲ್ ಸುತ್ತಿಕೊಂಡು ಅಭಿನಯಿಸಿದ್ದೆ

    ಬೈಕ್‌ನಲ್ಲಿ (Bike) ತೆರಳುತ್ತಿದ್ದ ಅರ್ಷದ್ ಭಾರೀ ಗಾತ್ರದ ರಸ್ತೆಗುಂಡಿ ಕಂಡು ತಕ್ಷಣ ಬ್ರೇಕ್‌ಹಾಕಿದ್ದಾನೆ, ಇದರಿಂದ ಬೈಕ್ ಸ್ಕಿಡ್ ಆಗಿದೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು (Car) ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ (Road Accident) ಗಂಭೀರವಾಗಿ ಗಾಯಗೊಂಡಿದ್ದ ಅರ್ಷದ್ ತಲೆಗೆ ಗಂಭೀರವಾದ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕವಾಡಿದ 12ರ ಬಾಲಕ

    ಬೈಕ್ ಸವಾರನನ್ನು ತಪ್ಪಿಸಲು ಹೋಗಿ ತಾನೂ ಆಳವಾದ ಗುಂಡಿಗೆ ಬಿದ್ದು ಕಾರು ಪಲ್ಟಿಯಾಗಿ ಬಿದ್ದಿದೆ. ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್‌ನಲ್ಲಿದ್ದ ಮತ್ತೊಬ್ಬರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆದು ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಆಗಸ್ಟ್‌ ಬಿಟಿಎಂ ಲೇಔಟ್‌ನ (BTM layout) ಕುವೆಂಪು ನಗರ ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಪರಿಣಾಮ ಬಿಎಂಟಿಸಿ ಬಸ್ ಹರಿದು ದ್ವಿಚಕ್ರ ಸವಾರ ಶಿವಕುಮಾರ್ (35) ಸ್ಥಳದಲ್ಲೇ ಮೃತಪಟ್ಟಿದ್ದರು.

    ರಸ್ತೆ ಗುಂಡಿಗೆ ಅನೇಕ ಜೀವಗಳು ಬಲಿ:
    ರಸ್ತೆ ಅಪಘಾತ ಇದೇ ಮೊದಲೇನಲ್ಲ ಕಳೆದ ವಾರ ಜೆ.ಸಿ.ನಗರದ ನಿವಾಸಿಯಾಗಿರುವ 38 ವರ್ಷದ ಬಾಲಾಜಿ ಎಂಬುವರು ಯಶವಂತಪುರದ ಬಿಇಎಲ್ ಸರ್ಕಲ್ ಬೈಕ್‌ನಲ್ಲಿ ಬರುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ರಭಸಕ್ಕೆ ಬಾಲಾಜಿಯ ಕತ್ತು, ಭುಜದ ಮೂಳೆ ಮುರಿದು ಹೋಗಿತ್ತು. ಇದನ್ನೂ ಓದಿ: ಹೆಡ್ ಬುಷ್ ಚಿತ್ರದ ಪ್ರಚಾರ – ತೊಂದರೆ ಕೊಡ್ತಿದ್ದಾರೆಂದು ಐವರ ವಿರುದ್ಧ FIR

    ಸುಜಾತಾ ಥಿಯೇಟರ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯ ಬಸ್ ಗುದ್ದಿ ದ್ವಿಚಕ್ರ ವಾಹನದಲ್ಲಿದ್ದ ತಾಯಿ, ಮಗಳು ರಸ್ತೆ ಬಿದ್ದಿದ್ದರು. ಬಿದ್ದು ಬಸ್ ಅಡಿ ಸಿಲುಕಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸಾವು

    ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸಾವು

    ವಿಜಯಪುರ: ಬೆಳ್ಳಂಬೆಳಗ್ಗೆ ಕಬ್ಬು (sugar kane) ಸಾಗಿಸುತ್ತಿದ್ದ ಟ್ಯಾಕ್ಟರ್‌ಗೆ ಹಿಂಬದಿಯಿಂದ ಕ್ರೂಸರ್ (Cruiser) ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್‌ನಲ್ಲಿದ್ದ ಬೆಳಗಾವಿ (Belagavi) ಜಿಲ್ಲೆಯ ಅಥಣಿ ಮೂಲದ ದಂಪತಿ ಮೃತಪಟ್ಟಿದ್ದಾರೆ.

    ಇತರೆ ಒಂಬತ್ತು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಮಹಾರಾಷ್ಟ್ರದ (Maharastra) ಸೊಲ್ಲಾಪುರಕ್ಕೆ ರವಾನೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ್ ಬಳಿಯ ಎನ್‌ಎಚ್ 50 ರಲ್ಲಿ ಘಟನೆ ಸಂಭವಿಸಿದೆ. ಭಯ್ಯಾಜಿ ಶಿಂಧೆ (50), ಸುಮಿತ್ರಾ ಶಿಂಧೆ (45) ಮೃತ ದಂಪತಿ. ಇದನ್ನೂ ಓದಿ: ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ

    ಬೆಳಗಾವಿ (Belagavi) ಜಿಲ್ಲೆಯ ಅಥಣಿ ಮೂಲದ ಇವರೆಲ್ಲಾ ಕ್ರೂಸರ್‌ನಲ್ಲಿ ಮಹಾರಾಷ್ಟ್ರದ ಅಕ್ಕಲಕೋಟ ಬಳಿಯ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು. ಆಗ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಝಳಕಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಭೀಕರ ರಸ್ತೆ ಅಪಘಾತ- ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

    ಭೀಕರ ರಸ್ತೆ ಅಪಘಾತ- ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

    ಚಿತ್ರದುರ್ಗ: ಇಲ್ಲಿನ ಪ್ರವಾಸಿ ಮಂದಿರ ಬಳಿ ರೋಡ್ ಡಿವೈಡರ್ ಗೆ ಕಾರು (Car Accident) ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

    ಈ ಭೀಕರ ಅಪಘಾತ ನಿನ್ನೆ ತಡರಾತ್ರಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಕಾರು ಬಿಡುಗಡೆ ಮಾಡಲು 50 ಸಾವಿರ ರೂ.ಗೆ ಒತ್ತಾಯಿಸಿದ್ದ ಪೇದೆ ಅಮಾನತು

    ಈವರೆಗೆ ಮೃತರ ಗುರುತು ಪತ್ತೆ ಆಗಿಲ್ಲ. ಗಾಯಾಳುಗಳಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಚಿತ್ರದುರ್ಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ – ದೀಪಾವಳಿ ಸಂಭ್ರಮಿಸಲು ಮನೆಗೆ ಹೋಗ್ತಿದ್ದ 15 ಕಾರ್ಮಿಕರು ಸಾವು

    ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ – ದೀಪಾವಳಿ ಸಂಭ್ರಮಿಸಲು ಮನೆಗೆ ಹೋಗ್ತಿದ್ದ 15 ಕಾರ್ಮಿಕರು ಸಾವು

    ಲಕ್ನೋ/ಭೋಪಾಲ್: ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ (Bus Accident) ಹೊಡೆದ ಪರಿಣಾಮ ದೀಪಾವಳಿ (Diwali) ಸಂಭ್ರಮಿಸಲು ಮನೆಗೆ ತೆರಳುತ್ತಿದ್ದ ಉತ್ತರಪ್ರದೇಶದ (UttarPradesh) 15 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ರೇವಾ ಹೆದ್ದಾರಿಯಲ್ಲಿ ನಡೆದಿದೆ.

    ಸುಮಾರು 100 ಮಂದಿ ಪ್ರಯಾಣಿಕರಿದ್ದ ಬಸ್ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳುತ್ತಿದ್ದಾಗ ತಡರಾತ್ರಿ ರೇವಾದ ಸುಹಾಗಿ ಪಹಾರಿ ಬಳಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡ 40 ಮಂದಿಯನ್ನು ರೇವಾದ ಸಂಜಯ್ ಗಾಂಧಿ ಮೆಮೊರಿಯಲ್‌ ಆಸ್ಪತ್ರೆಗೆ (Sanjay Gandhi Memorial Hospital) ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಈ ಅಪಘಾತಕ್ಕೂ ಮುನ್ನ ಇದೇ ದಾರಿಯಲ್ಲಿ ಮತ್ತೊಂದು ಟ್ರಕ್ ಅಪಘಾತ ಸಂಭವಿಸಿತ್ತು. ಹಾಗಾಗಿ ಟ್ರಕ್ ಹೆದ್ದಾರಿಯಲ್ಲೇ ಸಿಲುಕಿತ್ತು. ಈ ವೇಳೆ ಬಸ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ರೇವಾ ಎಸ್ಪಿ ನವನೀತ್ ಭಾಸಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧಭೂಮಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ

    ಉತ್ತರ ಪ್ರದೇಶ ಕಾರ್ಮಿಕರು (Labourers) ಮಧ್ಯಪ್ರದೇಶದ ಕಟ್ನಿಯಿಂದ ಬಸ್ ಹತ್ತಿದ್ದರು. ಹೈದರಾಬಾದ್‌ನಿಂದ ಕಟ್ನಿಗೆ ಪ್ರತ್ಯೇಕ ಬಸ್‌ನಲ್ಲಿ ಬಂದಿದ್ದರು. ದೀಪಾವಳಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಅವರ ಕುಟುಂಬ ಸದಸ್ಯರಿಗೆ ಮೃತದೇಹಗಳನ್ನು ರವಾನಿಸಲು ರೇವಾ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡುತ್ತಿದೆ ಎಂದು ಸಿಎಂ ಹೇಳಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪಿಎಂ ಮೋದಿ ಮೃತರ ಕುಟುಂಬಕ್ಕೆ ತಲಾ 50 ಸಾವಿರ ಪರಿಹಾರಧನ ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ – ಐವರು ಪ್ರಾಣಾಪಾಯದಿಂದ ಪಾರು

    ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ – ಐವರು ಪ್ರಾಣಾಪಾಯದಿಂದ ಪಾರು

    ಅಮರಾವತಿ: ಸೀನಿಯರ್ಸ್ ಮಹಿಳಾ ಟಿ20 (Womens T20) ಲೀಗ್ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವಿದ್ದ (Womens Cricket Team) ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಜ್ಞಾನಪುರಂನಲ್ಲಿ ನಡೆದಿದೆ.

    ಬಸ್‌ನಲ್ಲಿದ್ದ ನಾಲ್ವರು ಆಟಗಾರರು ಹಾಗೂ ಕೋಚ್ ಗಾಯಗೊಂಡಿದ್ದು, ಎಲ್ಲರನ್ನೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಯಿತು. ಚಿಕಿತ್ಸೆ ಪಡೆದ ನಂತರ ಅವರು ಬರೋಡಕ್ಕೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಆಂಧ್ರಪ್ರದೇಶದಲ್ಲಿ ಸೀನಿಯರ್ ಮಹಿಳಾ ಟಿ20 ಲೀಗ್ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಟ್ರಕ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಖಚಿತ ಮಾಹಿತಿ ಪಡೆದ ಸ್ಥಳೀಯ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ಸೀನಿಯರ್ ಮಹಿಳಾ ಟಿ20 ಟ್ರೋಫಿಗೆ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವು ಅ.20 ರಂದು ಡಾ.ಪಿವಿಜಿ ರಾಜು ಎಸಿಎ ಕ್ರೀಡಾಂಗಣದಲ್ಲಿ ಸೌರಾಷ್ಟ್ರಗಳೊಂದಿಗೆ ನಡೆದ ಪಂದ್ಯದಲ್ಲಿ ಬರೋಡಾ 7 ವಿಕೆಟ್‌ಗಳಿಂದ ಗೆದ್ದಿತ್ತು. ಯಾಶಿಕಾ ಭಾಟಿಯಾ 60 ಎಸೆತಗಳಲ್ಲಿ 64 ರನ್ ಮತ್ತು ಅಮೃತಾ ಜೋಸೆಫ್ 24 ರನ್ ಗಳಿಸಿದರು. ಯಾಶಿಕಾ ಭಾಟಿಯಾ ಅವರ ನಿರ್ಣಾಯಕ ಹೊಡೆತವು ಬರೋಡಾ ತಂಡಕ್ಕೆ ಪಂದ್ಯವನ್ನು ಗೆಲ್ಲಲು ನೆರವಾಯಿತು.

    ಸೀನಿಯರ್ ಮಹಿಳಾ ಟಿ20 ಲೀಗ್‌ನ 14ನೇ ಆವೃತ್ತಿ ಅಕ್ಟೋಬರ್ 11ರಿಂದ ಆರಂಭವಾಯಿತು. ಅಕ್ಟೋಬರ್ 30 ರಂದು ಕ್ವಾಲಿಫೈರ್ ಪಂದ್ಯಗಳು ಆರಂಭವಾಗಲಿದ್ದು, ನವೆಂಬರ್ 5ರಂದು ಫೈನಲ್ ಪಂದ್ಯ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ವಾಹನ ಸವಾರರೇ ಎಚ್ಚರ – ಸೀಟ್ ಬೆಲ್ಟ್ ಧರಿಸದಿದ್ರೆ ಇನ್ಮುಂದೆ ದುಪ್ಪಟ್ಟು ದಂಡ

    ವಾಹನ ಸವಾರರೇ ಎಚ್ಚರ – ಸೀಟ್ ಬೆಲ್ಟ್ ಧರಿಸದಿದ್ರೆ ಇನ್ಮುಂದೆ ದುಪ್ಪಟ್ಟು ದಂಡ

    ಬೆಂಗಳೂರು: ವಾಹನ ಸವಾರರೇ ಇನ್ಮುಂದೆ ವಾಹನ ಚಲಾಯಿಸುವಾಗ ಎಚ್ಚರವಾಗಿರಿ. ಅದರಲ್ಲೂ ಕಾರು ಚಾಲಕರು ಇದನ್ನು ಗಮನಿಸಲೇಬೇಕು. ಇನ್ನು ಮುಂದೆ ಸೀಟ್ ಬೆಲ್ಟ್ (Seat Belt) ಧರಿಸದೇ ಹೋದಲ್ಲಿ 1,000 ರೂ. ದಂಡ (Fine) ಕಟ್ಟಬೇಕಾಗುತ್ತದೆ.

    ಹೌದು, ಕೇಂದ್ರ ಸರ್ಕಾರದ ಹೊಸ ಆದೇಶದ ಅನ್ವಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಈ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಎಸ್‌ಪಿ ಕಚೇರಿಗೆ ಈ ಆದೇಶ ಪ್ರತಿ ರವಾನೆಯಾಗಿದೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಏಷ್ಯಾದಿಂದಲೇ ಮೊದಲು, ಕೋಲಾರದ ಮಹಿಳೆ ನೇಮಕ

    ಸೀಟ್ ಬೆಲ್ಟ್ ಧರಿಸದೇ ಜನರು ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳ (Road Accident) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೊಸದಾಗಿ ದಂಡವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಸೀಟ್ ಬೆಲ್ಟ್ ಹಾಕದೇ ಕಾರನ್ನು ಚಲಾಯಿಸುತ್ತಿದ್ದವರಿಗೆ 500 ರೂ. ದಂಡ ಹಾಕಲಾಗುತ್ತಿತ್ತು. ಆದರೆ ಇದೀಗ ದಂಡವನ್ನು ದುಪ್ಪಟ್ಟು ಮಾಡಲಾಗಿದೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]