Tag: Road Accident

  • ಹರಿಯಾಣ | ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ದಂಪತಿ ಸೇರಿ ಸ್ಥಳದಲ್ಲೇ ಪ್ರಾಣಬಿಟ್ಟ ಐವರು

    ಹರಿಯಾಣ | ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ದಂಪತಿ ಸೇರಿ ಸ್ಥಳದಲ್ಲೇ ಪ್ರಾಣಬಿಟ್ಟ ಐವರು

    – ಐವರ ಸ್ಥಿತಿ ಗಂಭೀರ

    ಚಂಡೀಗಢ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಐವರು ಸಾವನ್ನಪ್ಪಿದ ಘಟನೆ ಹರಿಯಾಣದ (Hariyana) ಕುರುಕ್ಷೇತ್ರ-ಕೈತಾಲ್ ರಸ್ತೆಯಲ್ಲಿ ನಡೆದಿದೆ.

    ಮೃತರನ್ನು ಪ್ರವೀಣ್, ಪವನ್, ಅವರ ಪತ್ನಿ ಉರ್ಮಿಳಾ, ರಾಜೇಂದ್ರ ಹಾಗೂ ಸುಮನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಅಂಡ್‌ ರನ್‌ಗೆ ಬಿ.ಕಾಂ ಪದವೀಧರೆ ಬಲಿ

    ಸೋಮವಾರ (ಸೆ.29) ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಐವರು ಟಾಟಾ ಹ್ಯಾರಿಯರ್ ಕಾರಿನಲ್ಲಿ ಅಂಬಾಲಾ ಕಡೆಗೆ ಹೋಗುತ್ತಿದ್ದರು. ಇದೇ ಸಮಯಕ್ಕೆ ಯಮುನಾನಗರ HR 13F 3611 ನೋಂದಣಿ ಸಂಖ್ಯೆ ಹೊಂದಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಎದುರಿಗೆ ಬಂದಿದ್ದು, ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಎರಡು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ.

    ಕೂಡಲೇ ಸ್ಥಳೀಯರು ಕಾರಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಅತೀ ವೇಗದಿಂದ ಕಾರು ಚಲಾಯಿಸಿದ್ದಕ್ಕೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಇದನ್ನೂ ಓದಿ: ಬೆಂಗಳೂರು | ಮೂರೇ ದಿನದಲ್ಲಿ 37 ದರೋಡೆ – 6 ಜನ ಅಪ್ರಾಪ್ತರ ಗ್ಯಾಂಗ್ ಅರೆಸ್ಟ್

  • ಗೋವಾದ ಬಸ್, ಕಾರ್‌ ನಡ್ವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು

    ಗೋವಾದ ಬಸ್, ಕಾರ್‌ ನಡ್ವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು

    ಗದಗ: ಗೋವಾ ರಾಜ್ಯಕ್ಕೆ ಸಂಬಂಧಿಸಿದ ಕದಂಬ ಬಸ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಹರ್ಲಾಪೂರ ಕ್ರಾಸ್ ಬಳಿ ನಡೆದಿದೆ.

    ಮೃತರು ಹಾವೇರಿ ಜಿಲ್ಲೆ ಬಂಕಾಪೂರ ತಾಲೂಕಿನ ಹುನಗುಂದ ನಿವಾಸಿ ಎನ್ನಲಾಗ್ತಿದೆ. ಇನ್ನು ಬಸ್ ಚಾಲಕನಿಗೂ ಗಾಯಗಳಾಗಿವೆ. ಹಾವೇರಿ ಜಿಲ್ಲೆ ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಅರ್ಜುನ್ ನೆಲ್ಲೂರ (32), ಸಹೋದರ ಸಂಬಂಧಿ ರವಿ ನೆಲ್ಲೂರ (35) ಹಾಗೂ ಕೊಪ್ಪಳ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಈರಣ್ಣ ಉಪ್ಪಾರ (36) ಮೃತ ದುರ್ದೈವಿಗಳು.

    ಗೋವಾ ರಾಜ್ಯದ ಕದಂಬ ಬಸ್ ಪೋಂಡಾ, ಹುಬ್ಬಳ್ಳಿ, ಗದಗ ಮಾರ್ಗವಾಗಿ ಹೊಸಪೇಟೆ ಹೊರಡಿದ್ದ ಬಸ್ ಇದಾಗಿದೆ. ಗಂಗಾವತಿಯಿಂದ ಕೊಪ್ಪಳ, ಗದಗ ಮಾರ್ಗವಾಗಿ ಬಂಕಾಪೂರ ಕಡೆಗೆ ಹೊರಟಿದ್ದ ಕಾರ್. ಕಾರ್ ಚಾಲಕನ ನಿರ್ಲಕ್ಷ್ಯದಿಂದ ರೋಡ್ ಡಿವೈಡರ್ ದಾಟಿಕೊಂಡು ಎದುರು ಬರುವ ಬಸ್‌ಗೆ ಡಿಕ್ಕಿ ಹೊಡೆದ್ದಾರೆ. ಕಾರ್ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

    ಬಸ್ ಮುಂದಿನ ಭಾಗ ಹಾಗೂ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ಹಾಗೂ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಂಬೈ-ಬೆಂಗ್ಳೂರು ಹೈವೇಯಲ್ಲಿ ಅಪಘಾತ – ಲೋನಾವಾಲಾ ಟ್ರಿಪ್‌ನಿಂದ ವಾಪಸ್ಸಾಗ್ತಿದ್ದ ಇಬ್ಬರ ದುರಂತ ಅಂತ್ಯ

    ಮುಂಬೈ-ಬೆಂಗ್ಳೂರು ಹೈವೇಯಲ್ಲಿ ಅಪಘಾತ – ಲೋನಾವಾಲಾ ಟ್ರಿಪ್‌ನಿಂದ ವಾಪಸ್ಸಾಗ್ತಿದ್ದ ಇಬ್ಬರ ದುರಂತ ಅಂತ್ಯ

    ಮುಂಬೈ: ಲೋನಾವಾಲಾ (Lonavala) ಟ್ರಿಪ್‌ದಿಂದ ವಾಪಸ್ಸಾಗುತ್ತಿದ್ದ ಕಾರೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈ-ಬೆಂಗಳೂರು (Mumbai-Bengaluru) ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ದಿವ್ಯಾ ರಾಜ್ ಸಿಂಗ್ ರಾಥೋಡ್ (20), ಸಿದ್ಧಾಂತ್ ಆನಂದ್ ಶೇಖರ್ (20) ಎಂದು ಗುರುತಿಸಲಾಗಿದೆ. ಇನ್ನೂ ಹರ್ಷ್ ಮಿಶ್ರಾ (21) ಮತ್ತು ನಿಹಾರ್ ತಂಬೋಲಿ (20) ಗಾಯಗೊಂಡಿದ್ದಾರೆ. ನಾಲ್ವರು ಪುಣೆಯ ಸಿಂಬಿಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಬಿಬಿಎ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಲಿವ್ ಇನ್‌ ಗೆಳೆಯನಿಗೆ ಮಗು ಇಷ್ಟವಿಲ್ಲದ್ದಕ್ಕೆ ಲಾಲಿ ಹಾಡಿ ಮಲಗಿಸಿ ಕೆರೆಗೆ ಎಸೆದ ತಾಯಿ!

    ಬುಧವಾರ (ಸೆ.18) ನಾಲ್ವರು ವಿದ್ಯಾರ್ಥಿಗಳು ಲೋನಾವಾಲಾಕ್ಕೆ ತೆರಳಿದ್ದರು. ಗುರುವಾರ ಬೆಳಗ್ಗೆ 5:45ರ ಸುಮಾರಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕ್ಯಾಂಪಸ್‌ಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಬರುತ್ತಿದ್ದಾಗ ಪುಣೆಯ ಈದ್ಗಾ ಮೈದಾನದ ಬಳಿ ನಿಂತಿದ್ದ ಕಂಟೇನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಪೊಲೀಸರು ಟ್ರಕ್ ಚಾಲಕ ಮನೀಶ್ ಕುಮಾರ್ ಸೂರಜ್ ಮಣಿಪಾಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಅಪಘಾತದ ಕಾರಣವನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.ಇದನ್ನೂ ಓದಿ: Asia Cup 2025 | ಮತ್ತೊಮ್ಮೆ ರೋಚಕ ಹಣಾಹಣಿ – ಸೂಪರ್‌ ಸಂಡೇ ಭಾರತ-ಪಾಕ್‌ ಮುಖಾಮುಖಿ

  • ಪೊಲೀಸ್‌ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವು – ಕುಡಿದು ಚಲಾಯಿಸಿದ್ದ ಇಬ್ಬರು ಪೊಲೀಸರು ಸಸ್ಪೆಂಡ್‌

    ಪೊಲೀಸ್‌ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವು – ಕುಡಿದು ಚಲಾಯಿಸಿದ್ದ ಇಬ್ಬರು ಪೊಲೀಸರು ಸಸ್ಪೆಂಡ್‌

    ನವದೆಹಲಿ: ಕಂಠಪೂರ್ತಿ ಕುಡಿದು ಇಬ್ಬರು ಪೊಲೀಸ್ ಅಧಿಕಾರಿಗಳು ವಾಹನ ಚಲಾಯಿಸಿದ್ದಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೆಹಲಿಯ (Delhi) ರಾಮಕೃಷ್ಣ ಆಶ್ರಮ ಮೆಟ್ರೋ ಸ್ಟೇಷನ್ (Ramakrishna Ashram Metro Station) ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಗಂಗಾರಾಮ್ ತಿವಾರಿ ಎಂದು ಗುರುತಿಸಲಾಗಿದ್ದು, ಟೀ ಸ್ಟಾಲ್‌ವೊಂದನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಸಹಾಯಕ ಸಬ್-ಇನ್ಸ್‌ಪೆಕ್ಟರ್‌ ರವೀಂದ್ರ ಹಾಗೂ ಕಾನ್‌ಸ್ಟೆಬಲ್ ಅರುಣ್ ಅನ್ನು ಅಮಾನತುಗೊಳಿಸಿದ್ದಾರೆ.ಇದನ್ನೂ ಓದಿ:ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ: ಸುದ್ದಿಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಗಂಭೀರ ಆರೋಪ

    ಗುರುವಾರ (ಸೆ.18) ಬೆಳಗ್ಗೆ 5ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ಕುರಿತು ಮೃತ ವ್ಯಕ್ತಿಯ ಮಗ ಮಾತನಾಡಿ, ಇಬ್ಬರು ಅಧಿಕಾರಿ ಹಾಗೂ ಓರ್ವ ಮಹಿಳೆಯಿದ್ದ ಪೊಲೀಸ್ ವಾಹನವು ನನ್ನ ತಂದೆಗೆ ಡಿಕ್ಕಿ ಹೊಡೆದಿದೆ. ಅವರು ತುಂಬಾ ಕುಡಿದಿದ್ದರು. ನನ್ನ ತಂದೆ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರ‍್ಯಾಂಪ್ ಮೇಲೆ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆ ನಡೆದ ಸ್ಥಳದ ಹತ್ತಿರದಲ್ಲಿಯೇ ಒಂದು ಜಾಗವಿದೆ. ಅವರು ಯಾವಾಗಲೂ ಅಲ್ಲಿ ಕುಡಿಯಲು ಬರುತ್ತಾರೆ. ಅಲ್ಲದೇ ಅವರ ವ್ಯಾನ್‌ನಲ್ಲಿ ಖಾಲಿ ಮದ್ಯದ ಬಾಟಲಿಗಳಿದ್ದವು, ಅಲ್ಲದೇ ಮದ್ಯದ ವಾಸನೆಯೂ ಬರುತ್ತಿತ್ತು ಎಂದು ತಿಳಿಸಿದ್ದಾರೆ.

    ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಬ್ಬರು ಪೊಲೀಸರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.ಇದನ್ನೂ ಓದಿ:ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು

  • ತಲೆ ಮೇಲೆ ಕ್ಯಾಂಟರ್‌ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

    ತಲೆ ಮೇಲೆ ಕ್ಯಾಂಟರ್‌ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

    ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ‌ ಕ್ಯಾಂಟರ್ ಲಾರಿ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ ಬಳಿ ನಡೆದಿದೆ.

    ರಾಜೀವ್ ಗಾಂಧಿ ಬಡವಾಣೆಯ ಪ್ರದೀಪ್ (35) ಮೃತ ದುರ್ದೈವಿ. ಅಂದಹಾಗೆ ದ್ವಿಚಕ್ರ ವಾಹನ ಸವಾರ ಟಿ.ಬಿ ವೃತ್ತದಿಂದ ಪಾಲನಜೋಗಿಹಳ್ಳಿ ಕಡೆಗೆ ರಾಂಗ್ ರೂಟ್ ನಲ್ಲಿ ಹೋಗುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಕಾರೊಂದು ವೇಗವಾಗಿ ಬಂದು ಕ್ಯಾಂಟರ್ ಲಾರಿಯನ್ನು ಓವರ್ ಟೇಕ್ ಮಾಡುವ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಚಿನ್ನಯ್ಯನನ್ನು ಬಾಡಿಗಾರ್ಡ್‌ ಎಂದಿದ್ರು, ದೆಹಲಿಗೆ ಅವ್ರು ಕರೆದುಕೊಂಡು ಹೋಗಿದ್ರು: ಸುಜಾತ ಭಟ್‌

    ಕಾರಿಗೆ ಟಚ್ ಆಗಿ ಲಾರಿಯ ಚಕ್ರದ ಅಡಿಗೆ ದ್ವಿಚಕ್ರ ವಾಹನ ಸವಾರ ಬಿದ್ದಿದ್ದಾನೆ. ಬಿದ್ದ ಕೂಡಲೇ ಲಾರಿಯ ಚಕ್ರ ಬೈಕ್ ಸವಾರನ (Bike Rider) ತಲೆಯ ಮೇಲೆ ಹರಿದ ಪರಿಣಾಮ‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೆದುಳು ಬಿದ್ದಿದೆ. ಇದನ್ನೂ ಓದಿ: ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ: ಡಿ.ವೀರೇಂದ್ರ ಹೆಗ್ಗಡೆ

    ದೊಡ್ಡಬಳ್ಳಾಪುರ ಶವಾಗರಕ್ಕೆ ಮೃತ ದೇಹ ರವಾನೆ ಮಾಡಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕ್ಯಾಂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

  • ಬೀದರ್‌ನಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ತಾಯಿ, ಮಗಳ ದುರಂತ ಅಂತ್ಯ

    ಬೀದರ್‌ನಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ತಾಯಿ, ಮಗಳ ದುರಂತ ಅಂತ್ಯ

    ಬೀದರ್: ವೇಗವಾಗಿ ಬಂದ ಗೂಡ್ಸ್ ಗಾಡಿಯೊಂದು ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basava Kalyana) ತಾಲೂಕಿನ ಉಮಾಪುರ ಗ್ರಾಮದ ಬಳಿ ನಡೆದಿದೆ.

    ಬೋಸ್ಲಾ ಗ್ರಾಮದ ಮೂಲದವರಾದ ತಾಯಿ ತುಕ್ಕಮ್ಮ ಕಿಶನ್ (56) ಹಾಗೂ ಮಗಳು ಸುರೇಖಾ ಗುಂಡಪ್ಪ (30) ಮೃತರು.ಇದನ್ನೂ ಓದಿ:  1+ 1 = 3 ಎಂದರು ನಟಿ ಪರಿಣಿತಿ ಚೋಪ್ರಾ

    ಮಹಾರಾಷ್ಟ್ರಕ್ಕೆ ಹೋಗಿದ್ದ ಇಬ್ಬರು ಬೈಕ್ ಮೇಲೆ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಹಾಲಿನ ಗೂಡ್ಸ್ ಗಾಡಿ ಟಿವಿಎಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಅಂಗವಿಕಲರ ಬಗ್ಗೆ ತಮಾಷೆ – ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಿಗೆ ಸುಪ್ರೀಂ ತರಾಟೆ

  • ಕೂಲಿ ವೀಕ್ಷಣೆಗಾಗಿ 100 ಕಿ.ಮೀ. ವೇಗದಲ್ಲಿ ಚಾಲನೆ – ಡಿವೈಡರ್‌ಗೆ ಡಿಕ್ಕಿ, ಇಬ್ಬರು ಸಾವು

    ಕೂಲಿ ವೀಕ್ಷಣೆಗಾಗಿ 100 ಕಿ.ಮೀ. ವೇಗದಲ್ಲಿ ಚಾಲನೆ – ಡಿವೈಡರ್‌ಗೆ ಡಿಕ್ಕಿ, ಇಬ್ಬರು ಸಾವು

    – ಪವಾಡ ಸದೃಶ ಓರ್ವ ಪ್ರಾಣಾಪಾಯದಿಂದ ಪಾರು

    ಹಾಸನ: ಕೂಲಿ ಸಿನಿಮಾ (Coolie Cinema) ನೋಡಲು 110 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು (Arakalagudu) ತಾಲೂಕಿನ ಬಸವಾಪಟ್ಟಣದ ಸಮೀಪದಲ್ಲಿ ನಡೆದಿದೆ.

    ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ (25), ಬಡಿಗೆ ಕೆಲಸ ಮಾಡುತ್ತಿದ್ದ ರಂಗನಾಥ ಪ್ರಸಾದ್ (22) ಮೃತ ಯುವಕರು.ಇದನ್ನೂ ಓದಿ: `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    ಮೈಸೂರಿನಲ್ಲಿ ಕೂಲಿ ಸಿನಿಮಾ ನೋಡಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಎಂಟು ಗಂಟೆಗೆ ಹೋಗಬೇಕಿದ್ದ ಕಾರಣ KA-53-MA-1196 ನಂಬರ್‌ನ ಕಾರಿನಲ್ಲಿ ಕೊಣನೂರು ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಗಂಟೆಗೆ 110 ಕಿ.ಮೀ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದರು. ಪರಿಣಾಮ ಬಸವಾಪಟ್ಟಣ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇನ್ನೂ ಅಪಘಾತದಲ್ಲಿ ಮೃತ ದರ್ಶನ್ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ

  • ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ – ರಾಯರ ದರ್ಶನ ಪಡೆದು ವಾಪಸ್ಸಾಗ್ತಿದ್ದ ಇಬ್ಬರು ಸಾವು

    ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ – ರಾಯರ ದರ್ಶನ ಪಡೆದು ವಾಪಸ್ಸಾಗ್ತಿದ್ದ ಇಬ್ಬರು ಸಾವು

    ಬಳ್ಳಾರಿ: ರಸ್ತೆ ಬದಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರುಗುಪ್ಪ (Siraguppa) ತಾಲೂಕಿನ ಬೈರಾಪುರ ಕ್ರಾಸ್ (Bairapura Cross) ಬಳಿ ನಡೆದಿದೆ.

    ಮಂಡ್ಯ (Mandya) ಮೂಲದ ಶ್ವೇತಾ(38), ಕನಕಪುರ (Kanakapura) ಮೂಲದ ಬಾಲನಾಯಕ(42) ಮೃತರು. ಘಟನೆಯಲ್ಲಿ 10ಕ್ಕೂಜ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ಮೃತರಿಬ್ಬರು ಮಂತ್ರಾಲಯ (Mantralaya) ರಾಯರ ದರ್ಶನಕ್ಕೆ ಬಂದಿದ್ದರು. ರಾಯರ ದರ್ಶನ ಮುಗಿಸಿ ಮಸ್ಕಿಯಿಂದ (Maski) ಬೆಂಗಳೂರಿಗೆ (Bengaluru) ಸರ್ಕಾರಿ ಬಸ್ಸಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಗಾಯಾಳುಗಳನ್ನು ಸಿರುಗುಪ್ಪ ತಾಲೂಕಾಸ್ಪತ್ರೆ ಹಾಗೂ ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನಾ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ.ಶೋಭಾರಾಣಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

  • ನಿಂತಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿ – ಏಳು ಮಕ್ಕಳು ಸೇರಿ 10 ಮಂದಿ ಸಾವು

    ನಿಂತಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿ – ಏಳು ಮಕ್ಕಳು ಸೇರಿ 10 ಮಂದಿ ಸಾವು

    ಜೈಪುರ: ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ನಿಂತಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿಯಾದ ಪರಿಣಾಮ 7 ಮಕ್ಕಳು ಸೇರಿ 11 ಮಂದಿ ಸಾವನ್ನಪ್ಪಿರುವ ಭೀಕರ ಅಪಘಾತ ರಾಜಸ್ಥಾನದ (Rajasthan) ದೌಸಾ (Dausa) ಎಂಬಲ್ಲಿ ನಡೆದಿದೆ.

    ಬುಧವಾರ (ಆ.13) ಬೆಳಗಿನ ಜಾವ 3:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಪಿಕಪ್ ವ್ಯಾನ್‌ನಲ್ಲಿ ಖತುಶ್ಯಾಮ್ಜಿ ದೇವಸ್ಥಾನದ ದರ್ಶನ ಪಡೆದು ಭಕ್ತರು ಹಿಂತಿರುಗುತ್ತಿದ್ದರು. ಈ ವೇಳೆ ನಿಲ್ಲಿಸಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಏಳು ಮಕ್ಕಳು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಟ್ಯಾರಿಫ್‌ ವಾರ್‌ ನಡುವೆ ಮುಂದಿನ ತಿಂಗಳು ಅಮೆರಿಕಗೆ ಮೋದಿ ಭೇಟಿ

    ಅಧಿಕಾರಿಗಳ ಮಾಹಿತಿ ಪ್ರಕಾರ, ಮೃತಪಟ್ಟವರ ಪೈಕಿ ಹೆಚ್ಚಿನವರು ಉತ್ತರಪ್ರದೇಶದ ಇಟಾವಾ ಜಿಲ್ಲೆಯವರು ಎಂದು ತಿಳಿಸಿದ್ದಾರೆ. ಇನ್ನೂ ಅಪಘಾತದಲ್ಲಿ 15ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ 9 ಜನರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

    ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತೀಚಿಗೆ ದೌಸಾದಲ್ಲಿ ಚಲಿಸುತ್ತಿದ್ದ ಟ್ರೇಲರ್ ಅರ್ಧ ಕತ್ತರಿಸಿ ಹಿಂದೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ್ದರು. ಅದಾದ ನಾಲ್ಕು ದಿನಗಳಲ್ಲಿಯೇ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಬೆಂಗಳೂರು| ಅಗ್ನಿಶಾಮಕದಳ ಕಚೇರಿ ಬಳಿಯೇ ಹೊತ್ತಿ ಉರಿದ ಶಾಲಾ ವಾಹನ – ವ್ಯಕ್ತಿ ಸಜೀವ ದಹನ

  • ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

    ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

    ಮುಂಬೈ: ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಹೋಗಿ ಆಮೇಲೆ ಕೋರ್ಟ್, ಕಚೇರಿ ಅಂತಾ ಅಲೆಯೋದು ಯಾರೆಂದು ಈಗಿನ ಜನರು ಹಿಂದೆ ಸರಿಯೋದೇ ಹೆಚ್ಚು. ಇಂತಹದೊಂದು ಘಟನೆ ನಾಗ್ಪುರದಲ್ಲಿ (Nagpur) ನಡೆದಿದ್ದು, ಟ್ರಕ್ ಡಿಕ್ಕಿಯಾಗಿ ಮೃತಪಟ್ಟಿದ್ದ ಪತ್ನಿಯ ಸಹಾಯಕ್ಕಾಗಿ ಪತಿ ಅಂಗಲಾಚಿ, ಕೊನೆಗೆ ಆಕೆಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ್ದಾರೆ.

    ಹೌದು, ಆಗಸ್ಟ್ 9 ರಂದು ಮಧ್ಯಪ್ರದೇಶ ಮೂಲದವರು ಅಮಿತ್ ಯಾದವ್ ಹಾಗೂ ಗ್ಯಾರ್ಸಿ ಅಮಿತ್ ಯಾದವ್ ದಂಪತಿ ನಾಗ್ಪುರದ ಲೋನಾರಾದಿಂದ ಮಧ್ಯಪ್ರದೇಶದ (Madhya Pradesh) ಕರಣ್‌ಪುರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ನಾಗ್ಪುರ – ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಟ್ರಕ್ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಗ್ಯಾರ್ಸಿ ಅಮಿತ್ ಯಾದವ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನೂ ಓದಿ: ಚಾ.ನಗರ| ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ

    ಪತ್ನಿಯ ಮೃತದೇಹವನ್ನು ಮೇಲೆತ್ತಲು ಸಹಾಯ ಮಾಡುವಂತೆ ಅಲ್ಲಿದ್ದ ಸಾರ್ವಜನಿಕರಲ್ಲಿ ಪತಿ ಅಮಿತ್ ಯಾದವ್ ಕೇಳಿಕೊಂಡಿದ್ದರು. ಆದರೆ ಯಾರು ಸಹಾಯಕ್ಕೆ ಬಾರದ ಹಿನ್ನೆಲೆ ತಾನೇ ಪತ್ನಿಯ ಮೃತದೇಹವನ್ನು ಬೈಕ್‌ಗೆ ಕಟ್ಟಿ ಮಧ್ಯಪ್ರದೇಶಕ್ಕೆ ಕೊಂಡೊಯ್ಯತ್ತಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | SIT ಭೇಟಿಯಾದ ಪದ್ಮಲತಾ ಕುಟುಂಬ – 38 ವರ್ಷಗಳ ಹಳೆಯ ಕೇಸ್ ತನಿಖೆಗೆ ಒತ್ತಾಯ

    ಬೈಕ್‌ನಲ್ಲಿ ಪತ್ನಿಯ ಮೃತದೇಹವನ್ನು ಸಾಗಿಸುತ್ತಿದ್ದ ಅಮಿತ್ ಯಾದವ್‌ರನ್ನು ಹೆದ್ದಾರಿ ಪೊಲೀಸರು ತಡೆದಿದ್ದಾರೆ. ಬಳಿಕ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.