Tag: road

  • ಬಾಗಲಕೋಟೆ ನಡುರಸ್ತೆಯಲ್ಲಿ ಗೂಳಿಗಳ ಕಾದಾಟ – ವಾಹನಗಳು ಜಖಂ

    ಬಾಗಲಕೋಟೆ ನಡುರಸ್ತೆಯಲ್ಲಿ ಗೂಳಿಗಳ ಕಾದಾಟ – ವಾಹನಗಳು ಜಖಂ

    ಬಾಗಲಕೋಟೆ: ಜಿಲ್ಲೆಯಲ್ಲಿ ಬಿಡಾಡಿ ಗೂಳಿಗಳ (Bulls) ಕಾಟ ಹೆಚ್ಚಾಗಿದ್ದು, ರಸ್ತೆ ಮಧ್ಯೆ ಮದಗಜಗಳಂತೆ ಗೂಳಿಗಳ ಕಾದಾಟ ನಡೆಸುವುದು ಈಗ ಸಾಮಾನ್ಯವಾಗಿದೆ.

    ನವನಗರದಲ್ಲಿ ಎರಡು ಬೀದಿ ಗೂಳಿಗಳ ಕಾದಾಟಕ್ಕೆ ವಾಹನಗಳು ಜಖಂಗೊಂಡಿವೆ. ಕಾದಾಡುತ್ತಾ ಬೈಕ್ ಮೇಲೆ ಗೂಳಿಗಳು ಎಗರಿದ್ದರಿಂದ ಬೈಕ್‌ಗಳು ಕೆಳಗೆ ಬಿದ್ದಿದೆ.  ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್‌ ಸಿಂಹ

    ಬಿಡಾಡಿ ದನಗಳ ನಿಯಂತ್ರಣಕ್ಕೆ ಬಾಗಲಕೋಟೆ (Bagalkote) ನಗರಸಭೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಡಾಡಿ ಗೂಳಿಗಳ ಹಾವಳಿ ತಪ್ಪಿಸಿ ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

  • ಕಾಮಗಾರಿ ಪರಿಶೀಲನೆ ವೇಳೆ ರಸ್ತೆ ಕುಸಿದು ಉರುಳಿ ಬಿತ್ತು ಟ್ರಕ್‌ – ಓಡಿ ಪಾರಾದ ಜನ

    ಕಾಮಗಾರಿ ಪರಿಶೀಲನೆ ವೇಳೆ ರಸ್ತೆ ಕುಸಿದು ಉರುಳಿ ಬಿತ್ತು ಟ್ರಕ್‌ – ಓಡಿ ಪಾರಾದ ಜನ

    ಮುಂಬೈ: ಕಾಮಗಾರಿ ಪರಿಶೀಲನೆಗೆ ಬಂದ ಸಮಯದಲ್ಲೇ ಇದ್ದಕ್ಕಿದ್ದಂತೆ ರಸ್ತೆ (Road) ಕುಸಿದು ಟ್ರಕ್‌ (Truck) ಉರುಳಿದ ಘಟನೆ ಮಹಾರಾಷ್ಟ್ರದ ಬೀಡ್‌ (Beed) ಜಿಲ್ಲೆಯಲ್ಲಿ ನಡೆದಿದೆ.

    ಬೀಡ್‌ನ ವಡ್ವಾನಿ ತಾಲೂಕಿನ ಖಡ್ಕಿ ಗ್ರಾಮದಲ್ಲಿ ಎಂಜಿನಿಯರ್ ಮತ್ತು ಅವರ ತಂಡವು ಭೇಟಿ ನೀಡಿ ರಸ್ತೆ ಕಾಮಗಾರಿಯ ಪರಿಶೀಲನೆ ನಡೆಸುತ್ತಿತ್ತು. ಈ ಸಮಯದಲ್ಲೇ ಸರಕು ತುಂಬಿದ್ದ ಟ್ರಕ್‌ ಮಣ್ಣಿನ ರಸ್ತೆಯಲ್ಲಿ ಬಂದಿದೆ. ಇದನ್ನೂ ಓದಿ: ರೀಲ್ಸ್‌ ಹುಚ್ಚಿನಿಂದ ಎಡವಟ್ಟು, ಸ್ಟಂಟ್‌ ಮಾಡ್ತಿದ್ದಾಗಲೇ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು ಎದೆ ಝಲ್ ಎನಿಸುವ ದೃಶ್ಯ ಸೆರೆ!

    ಟ್ರಕ್‌ ಸಂಚರಿಸುತ್ತಿದ್ದಂತೆ ರಸ್ತೆ ದಿಢೀರ್‌ ಕುಸಿದು ಉರುಳಿ ಬಿದ್ದಿದೆ. ಉರುಳಿ ಬೀಳುವುದನ್ನು ನೋಡಿ ಅಲ್ಲಿದ್ದ ಜನರು ಓಡಿ ಹೋಗಿದ್ದಾರೆ. ಒಂದು ವೇಳೆ ನಿಂತಿದ್ದ ಜಾಗದಲ್ಲೇ ನಿಂತಿದ್ದರೆ ಭಾರೀ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು.  ಇದನ್ನೂ ಓದಿ: ಗಾರೆ ಕೆಲಸದವನ ಜೊತೆ ಕಂಟ್ರ್ಯಾಕ್ಟರ್ ಮಗಳ ಲವ್ – ಮದ್ವೆಯಾದ 15 ದಿನಕ್ಕೆ ಓಡಿಬಂದ ಗೃಹಿಣಿ!

    ಸೇತುವೆ ನಿರ್ಮಾಣದಿಂದಾಗಿ ಸಂಚರಿಸಲು ಪರ್ಯಾಯವಾಗಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ರಸ್ತೆಯ ಅಪಾಯಕಾರಿ ಸ್ಥಿತಿಯ ಬಗ್ಗೆ ಸ್ಥಳೀಯ ವಿದ್ಯಾರ್ಥಿಗಳ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀದ್ದರು. ಟ್ರಕ್‌ ಉರುಳಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

  • ನಿರಂತರ ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ; ಬೆಳಗಾವಿ- ಗೋವಾ ರಸ್ತೆ ಸಂಚಾರ ಬಂದ್

    ನಿರಂತರ ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ; ಬೆಳಗಾವಿ- ಗೋವಾ ರಸ್ತೆ ಸಂಚಾರ ಬಂದ್

    ಬೆಳಗಾವಿ: ನಿರಂತರ ಮಳೆಯ (Rain) ಹಿನ್ನೆಲೆ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಬೆಳಗಾವಿ-ಗೋವಾ (Belagavi-Goa) ರಸ್ತೆ ಸಂಚಾರ ಮತ್ತೆ ಬಂದ್ ಆಗಿದೆ.

    ಖಾನಾಪುರ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದೆ. ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವ ಹಿನ್ನೆಲೆ ಸೇತುವೆ ಪಕ್ಕ ವಾಹನ ಓಡಾಟಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಧಾರಾಕಾರ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಭೀಕರ ಹತ್ಯೆ

    ಮಲಪ್ರಭಾ ನದಿಯ ಒಳ ಹರಿವು ಹೆಚ್ಚಾಗಿದ್ದರಿಂದ ರಸ್ತೆ ಕೊಚ್ಚಿಹೋಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗವಾಗಿ ಗೋವಾಗೆ ಪ್ರಯಾಣಿಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: 2028ಕ್ಕೆ ದಲಿತ ಸಿಎಂ ಬಗ್ಗೆ ಗಂಭೀರ ಚರ್ಚೆ ಮಾಡೋಣ: ಸತೀಶ್ ಜಾರಕಿಹೊಳಿ

  • ನಿಮ್ಮ ಕೆಟ್ಟ ರಸ್ತೆಗಳಿಂದ ಕುತ್ತಿಗೆ, ಬೆನ್ನು ನೋವು – 50 ಲಕ್ಷ ಪರಿಹಾರ ಕೋರಿ ಬಿಬಿಎಂಪಿಗೆ ಲೀಗಲ್‌ ನೋಟಿಸ್‌

    ನಿಮ್ಮ ಕೆಟ್ಟ ರಸ್ತೆಗಳಿಂದ ಕುತ್ತಿಗೆ, ಬೆನ್ನು ನೋವು – 50 ಲಕ್ಷ ಪರಿಹಾರ ಕೋರಿ ಬಿಬಿಎಂಪಿಗೆ ಲೀಗಲ್‌ ನೋಟಿಸ್‌

    ಬೆಂಗಳೂರು: ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಗಳಿಂದ ನಿರಂತರ ದೈಹಿಕ ಯಾತನೆ ಅನುಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತೆರಿಗೆದಾರರೊಬ್ಬರು 50 ಲಕ್ಷ ರೂ. ಪರಿಹಾರ ಕೋರಿ ಬಿಬಿಎಂಪಿಗೆ (BBMP) ಲೀಗಲ್‌ ನೋಟಿಸ್‌ (Legal Notice) ಕಳುಹಿಸಿದ್ದಾರೆ.

    ರಿಚ್ಮಂಡ್ ಟೌನ್ ನಿವಾಸಿಯಾಗಿರುವ ದಿವ್ಯ ಕಿರಣ್ ಅವರು ಕಳುಹಿಸಿದ ನೋಟಿಸ್‌ನಲ್ಲಿ, ನಾನು ತೆರಿಗೆ ಪಾವತಿಸುವ (Tax Payer) ನಾಗರಿಕನಾಗಿದ್ದೇನೆ. ಆದರೆ ಬಿಬಿಎಂಪಿ (BBMP) ಮೂಲಭೂತ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಇದರಿಂದ ನಾನು ದೈಹಿಕ ಯಾತನೆ ಮತ್ತು ಮಾನಸಿಕ ಯಾತನೆಯನ್ನು ನಿರಂತರವಾಗಿ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

    ಕೆಟ್ಟ ರಸ್ತೆಯಿಂದ ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆ ಅನುಭವಿಸುತ್ತಿದ್ದೇನೆ. ಮೂಳೆ ನೋವಿನ ಸಂಬಂಧ ಐದು ಬಾರಿ ಭೇಟಿ ನೀಡಿದ್ದೇನೆ ಅಷ್ಟೇ ಅಲ್ಲದೇ ನಾಲ್ಕು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಎಂದು ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

    ತೀವ್ರ ನೋವನ್ನು ನಿವಾರಿಸಲು ಚುಚ್ಚುಮದ್ದು ಹಾಕಿಸಿದ್ದೇನೆ. ಹಲವಾರು ಔಷಧಿಗಳು ಮತ್ತು ನೋವು ನಿವಾರಕಗಳನ್ನು ತೆಗೆದುಕೊಂಡಿದ್ದೇನೆ. ನೋವನ್ನು ತಡೆಯಲು ಸಾಧ್ಯವಾಗದೇ ಅತ್ತಿದ್ದೇನೆ. ಮಾನಸಿಕ ಯಾತನೆಯಿಂದ ನಿದ್ದೆಯೂ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಆರೋಗ್ಯ ಮತ್ತು ದೈನಂದಿನ ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

    ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಹಿಂದೆ ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ತಿಳಿಸಿದ್ದರೂ ಯಾವುದೇ ಫಲಪ್ರದವಾಗಿಲ್ಲ. ನಾವು ತೆರಿಗೆಯನ್ನು ಪಾವತಿಸುತ್ತಿದ್ದೇನೆ. ನಮಗೆ ಉತ್ತಮ ರಸ್ತೆಗಳನ್ನು ಒದಗಿಸುವುದು ಬಿಬಿಎಂಪಿಯ ಕೆಲಸ. ಉತ್ತಮ ಮೂಲಸೌಕರ್ಯಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ದುಃಖಕರ. ಈ ಕಾರಣಕ್ಕೆ ನೋಟಿಸ್‌ ಕಳುಹಿಸಿ 15 ದಿನಗಳ ಒಳಗಡೆ ಪರಿಹಾರ ಪಾವತಿಸಬೇಕೆಂದು ಕೋರಿದ್ದೇನೆ. ಒಂದು ವೇಳೆ ಪರಿಹಾರ ನೀಡದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

  • ರಸ್ತೆ ಗುಂಡಿ ಬಗ್ಗೆ ದೂರು ಕೊಟ್ಟವರ ಎಕ್ಸ್ ಖಾತೆ ಬ್ಲಾಕ್; ಬಿಬಿಎಂಪಿ ನಡೆಗೆ ಸಾರ್ವಜನಿಕರ ಆಕ್ರೋಶ

    ರಸ್ತೆ ಗುಂಡಿ ಬಗ್ಗೆ ದೂರು ಕೊಟ್ಟವರ ಎಕ್ಸ್ ಖಾತೆ ಬ್ಲಾಕ್; ಬಿಬಿಎಂಪಿ ನಡೆಗೆ ಸಾರ್ವಜನಿಕರ ಆಕ್ರೋಶ

    ಬೆಂಗಳೂರು: ಬಿಬಿಎಂಪಿಗೆ (BBMP) ಎಕ್ಸ್ ಖಾತೆಯಲ್ಲಿ ದೂರು ನೀಡಿದರೆ, ಅಂತಹವರನ್ನು ಬ್ಲಾಕ್ ಮಾಡ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಾಲಿಕೆಯ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪಾಲಿಕೆಗೆ ನಾಚಿಕೆಯಾಗಬೇಕು ಅಂತ ಬೈಯುತ್ತಿದ್ದಾರೆ.

    ಬಿಬಿಎಂಪಿಗೆ ಮಾನ ಮರ್ಯಾದೆ ಯಾವ್ದು ಇಲ್ಲ ಅನ್ಸುತ್ತೆ. ಸಾರ್ವಜನಿಕರು ಎಕ್ಸ್ ಖಾತೆಯಲ್ಲಿ ಬಿಬಿಎಂಪಿಗೆ ದೂರು ನೀಡಿದ್ರೆ, ದೂರು ಕೊಟ್ಟವ್ರ ಖಾತೆಯನ್ನೆ ಬ್ಲಾಕ್ ಮಾಡಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಬಿಎಂಪಿಯ ಐಟಿ ಸೆಲ್ ವಿಭಾಗದ ಈ ನಡೆಗೆ ಬೆಂಗಳೂರಿನ ನಾಗರಿಕರು ನಿಗಿನಿಗಿ ಅಂತಿದ್ದಾರೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಶೂಟೌಟ್‌ ಕೇಸ್‌: ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿ ನಾಲ್ವರ ವಿರುದ್ಧ FIR

    ಬೆಂಗಳೂರಿಗರು ಯಾವ್ದೇ ದೂರುಗಳಿದ್ರೆ ಪಾಲಿಕೆಯ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ, ಪಾಲಿಕೆಯ ಗಮನಕ್ಕೆ ತರ್ತಾರೆ. ಹೀಗೆ ರಸ್ತೆ ಸರಿ ಮಾಡಿ ಕೊಡಿ ಅಂತ ನೀತು ಅನ್ನೋ ಮಹಿಳೆ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಬಿಎಂಪಿ ಎಕ್ಸ್ ಖಾತೆ ಯಾವುದೇ ಪ್ರತಿಕ್ರಿಯೆ ನೀಡದೇ, ನೀತು ಖಾತೆಯನ್ನ ಬ್ಲಾಕ್ ಮಾಡಿದೆ. ಇದು ದೂರು ಕೊಟ್ಟರೆ ನಿಮ್ಮನ್ನ ಬ್ಲಾಕ್ ಮಾಡುತ್ತೇವೆ ಅನ್ನೋ ಮನಸ್ಥಿತಿಯನ್ನ ತೋರಿಸಿದೆ. ಇದನ್ನೂ ಓದಿ: ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಲು ಮುಂದಾದ ಮಹಿಳೆ

    ಕೇವಲ ನೀತು ಖಾತೆ ಮಾತ್ರವಲ್ಲ. ಬೇರೆಯವರ ಖಾತೆಯನ್ನೂ ಬ್ಲಾಕ್ ಮಾಡಲಾಗಿದೆ. ಯಾವುದೇ ದೂರುಗಳಿದ್ದರೇ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ತನ್ನಿ ಎಂದು ಡಿಸಿಎಂ, ಬಿಬಿಎಂಪಿ ಕಮಿಷನರ್ ಹೇಳುತ್ತಾರೆ. ಆದರೆ ಇದೀಗಾ ಎಕ್ಸ್ ಖಾತೆ ಮೂಲಕ ಗಮನಕ್ಕೆ ತಂದವರ ಖಾತೆಯನ್ನ ಬ್ಲಾಕ್ ಮಾಡ್ತಿರೋ ಬಿಬಿಎಂಪಿ ನಡೆಗೆ ವ್ಯಾಪಾಕ ಆಕ್ರೋಶಗಳು ವ್ಯಕ್ತವಾಗ್ತಿವೆ. ಬಿಬಿಎಂಪಿ ಐಟಿ ಸೆಲ್ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಏನು ಸಮಜಾಯಿಷಿ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.

  • ಶೀಘ್ರವೇ ಹೊಸ ಟೋಲ್ ನೀತಿ ಜಾರಿ: ನಿತಿನ್ ಗಡ್ಕರಿ

    ಶೀಘ್ರವೇ ಹೊಸ ಟೋಲ್ ನೀತಿ ಜಾರಿ: ನಿತಿನ್ ಗಡ್ಕರಿ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ (Toll Collection) ಸಂಬಂಧಿಸಿದಂತೆ ಸರ್ಕಾರ ಶೀಘ್ರದಲ್ಲೇ ಹೊಸ ನೀತಿಯನ್ನು ಪ್ರಕಟಿಸಲಿದ್ದು, ಗ್ರಾಹಕರಿಗೆ ಸೂಕ್ತ ರಿಯಾಯಿತಿಯನ್ನು ನೀಡಲಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಬುಧವಾರ ಹೇಳಿದ್ದಾರೆ.

    ರಾಜ್ಯಸಭೆಯಲ್ಲಿ (Rajya Sabha) ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರವು ರಸ್ತೆ ಮೂಲಸೌಕರ್ಯ ನಿರ್ಮಾಣಕ್ಕೆ ಸಾಕಷ್ಟು ಖರ್ಚು ಮಾಡುತ್ತಿದೆ. ಆದ್ದರಿಂದ ಟೋಲ್ ಸಂಗ್ರಹ ಅಗತ್ಯ. ಉತ್ತಮ ರಸ್ತೆ ಬೇಕಾದರೆ, ನೀವು ಅದಕ್ಕೆ ಹಣ ಪಾವತಿಸಬೇಕು ಎಂಬುದು ಇಲಾಖೆಯ ನೀತಿ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಡಿಕೆಶಿ ಕನಸಿಗೆ ತಣ್ಣೀರೆರಚಿದ ಕೇಂದ್ರ ಸರ್ಕಾರ – ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಕ್ಕೆ ಕೇಂದ್ರ ತಡೆ

    ಅಸ್ಸಾಂನಲ್ಲಿ ರಸ್ತೆಗಳಿಗೆ ಸರ್ಕಾರ 3 ಲಕ್ಷ ಕೋಟಿ ರೂ. ಖರ್ಚು ಮಾಡಲು ಯೋಜಿಸಿದೆ. ನಾವು ಬಹಳಷ್ಟು ದೊಡ್ಡ ರಸ್ತೆಗಳು, ನಾಲ್ಕು ಪಥಗಳು, ಆರು ಪಥಗಳನ್ನು ನಿರ್ಮಿಸುತ್ತಿದ್ದೇವೆ. ಬ್ರಹ್ಮಪುತ್ರ ನದಿಗೆ ಸೇತುವೆಗಳನ್ನು ನಿರ್ಮಿಸುತ್ತಿದ್ದೇವೆ. ಆದ್ದರಿಂದ ಟೋಲ್ ಇಲ್ಲದೆ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಈ ವಿಚಾರದಲ್ಲಿ ಉದಾರವಾಗಿ ಚಿಂತಿಸಿ, ನಾಲ್ಕು ಪಥಗಳಲ್ಲಿ ಮಾತ್ರ ಟೋಲ್ ವಿಧಿಸುತ್ತಿದ್ದೇವೆ. ಎರಡು ಪಥಗಳ ಸುಸಜ್ಜಿತ ರಸ್ತೆಗಳಲ್ಲಿ ಯಾವುದೇ ಶುಲ್ಕ ವಿಧಿಸಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾಗ್ಪುರ ಹಿಂಸಾಚಾರ – ಮಾಸ್ಟರ್‌ಮೈಂಡ್ ಫಹೀಮ್ ಖಾನ್ ಬಂಧನ

    2008ರ ನಿಯಮಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯ ಒಂದೇ ವಿಭಾಗದಲ್ಲಿ ಮತ್ತು ಒಂದೇ ದಿಕ್ಕಿನಲ್ಲಿ ಟೋಲ್ ಪ್ಲಾಜಾವನ್ನು 60 ಕಿಲೋಮೀಟರ್ ಒಳಗೆ ಸ್ಥಾಪಿಸಲು ಸಾಧ್ಯವಿಲ್ಲ. ಈ ಅಧಿವೇಶನ ಮುಗಿದ ನಂತರ, ನಾವು ಟೋಲ್‌ಗಾಗಿ ಹೊಸ ನೀತಿಯನ್ನು ಘೋಷಿಸಲಿದ್ದೇವೆ, ಅಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೇ ಗ್ರಾಹಕರಿಗೆ ಸೂಕ್ತ ರಿಯಾಯಿತಿಯನ್ನು ನೀಡುತ್ತೇವೆ ಎಂದರು. ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಶೇ.4ರಷ್ಟು ಹೊಸ ಮೀಸಲಾತಿ ನೀಡುವುದು ಕಾನೂನುಬಾಹಿರ – ಬಿಜೆಪಿ ವಿರೋಧ

  • 7 ದಶಕಗಳ ಕನಸು ಭಗ್ನ – ಟಾರ್ ಹಾಕುವ ಮುನ್ನವೇ ರಸ್ತೆಗೆ ಬೇಲಿ ಹಾಕಿದ ಅರಣ್ಯ ಇಲಾಖೆ

    7 ದಶಕಗಳ ಕನಸು ಭಗ್ನ – ಟಾರ್ ಹಾಕುವ ಮುನ್ನವೇ ರಸ್ತೆಗೆ ಬೇಲಿ ಹಾಕಿದ ಅರಣ್ಯ ಇಲಾಖೆ

    ಚಿಕ್ಕಮಗಳೂರು: ಏಳು ದಶಕಗಳ ಬಳಿಕ ಜಲ್ಲಿ-ಟಾರ್ ಕಾಣುವ ಭಾಗ್ಯ ಕಂಡಿದ್ದ ರಸ್ತೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು (Forest Department) ಈ ಜಾಗ ನಮ್ದು ಅಂತ ರಸ್ತೆ ಮಧ್ಯೆಯೇ ಬೇಲಿ ಹಾಕಿರುವ ಘಟನೆ ಚಿಕ್ಕಮಗಳೂರು (Chikkamgaluru) ಜಿಲ್ಲೆ ಕಳಸ (Kalasa) ತಾಲೂಕಿನ ನಾಗಲಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಕಳಸ-ಇಡಕಣಿ ಮಾರ್ಗದ ನಾಗಲಮಕ್ಕಿಯ ಈ ರಸ್ತೆಯನ್ನ (Road) ನಂಬಿಕೊಂಡು ಕಾಫಿ ಎಸ್ಟೇಟ್ ಸೇರಿದಂತೆ ಹಲವು ಹಳ್ಳಿಗಳು ಸೇರಿ 250ಕ್ಕೂ ಹೆಚ್ಚು ಮನೆಗಳಿವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ರಸ್ತೆ ಜಲ್ಲಿ-ಟಾರ್ ನೋಡುವ ಭಾಗ್ಯ ಕಂಡಿರಲಿಲ್ಲ. ಆದರೆ ಈಗ ಸರ್ಕಾರ 4-5 ಕಿ.ಮೀ. ಕಾಂಕ್ರೀಟ್ ರಸ್ತೆಗೆ (Concrete Road) ಅನುಮೋದನೆ ನೀಡಿತ್ತು.  ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ವಕ್ಫ್‌ ಅಧ್ಯಕ್ಷ ಸ್ಥಾನಕ್ಕೆ ಜಟಾಪಟಿ – ಅಧ್ಯಕ್ಷರಾಗಿ ಸೈಯದ್ ಹುಸೈನಿ ಆಯ್ಕೆ

    a dream of 7 decades was shattered the forest department fenced the road before tarring it kalasa chikkamgaluru (1)

    ಅನುಮೋದನೆ ಸಿಕ್ಕಿದ ನಂತರ ಗುತ್ತಿಗೆದಾರರು ಕೆಲಸ ಕೂಡ ಆರಂಭಿಸಿದ್ದರು.‌ ಆದರೆ ಅರಣ್ಯ ಅಧಿಕಾರಿಗಳು ಈ ಜಾಗ ನಮ್ಮದು ಎಂದು ನಡು ರಸ್ತೆಗೆ ಬೇಲಿ ಹಾಕಿದ್ದು ರಸ್ತೆ ಕಾಮಗಾರಿ ಕೆಲಸ ಕೂಡ ಸ್ಥಗಿತಗೊಂಡಿದೆ. ಎರಡು ಚರಂಡಿಗಳಲ್ಲಿ ಒಂದು ಚರಂಡಿಯನ್ನ ಮುಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 200 ಮೀಟರ್ ರಸ್ತೆ ಮಧ್ಯೆ ಬೇಲಿ ಹಾಕಿದ್ದಾರೆ. ಇದರಿಂದ ಕಂಟ್ರಾಕ್ಟರ್ ಕೆಲಸ ಕೂಡ ನಿಲ್ಲಿಸಿದ್ದಾರೆ.

    75 ವರ್ಷಗಳಿಂದ ರಸ್ತೆ ನೋಡದ ಜನ ರಸ್ತೆಯಾಗಲಿದೆ ಎಂಬು ಖುಷಿಯಲ್ಲಿದ್ದರು. ಈಗ ಅರಣ್ಯ ಅಧಿಕಾರಿಗಳು ಹಳ್ಳಿಗರ ಆಸೆಗೆ ತಣ್ಣೀರೆರಚಿದ್ದಾರೆ. ಜನನಾಯಕರು, ಅಧಿಕಾರಿಗಳ ವಿರುದ್ಧ ಹೋರಾಡಿ, ಕಾಡಿ-ಬೇಡಿ ರಸ್ತೆ ಮಂಜೂರು ಮಾಡಿಸಿಕೊಂಡಿದ್ದರು.

    ಈಗ ರಸ್ತೆ ಮಧ್ಯೆ ಬೇಲಿ ಹಾಕಿದ್ದರಿಂದ ಗುತ್ತಿಗೆದಾರ ಕೆಲಸ ನಿಲ್ಲಿಸಿದರೆ ಇತ್ತ ಕಾಡಂಚಿನ ಕುಗ್ರಾಮದ ಜನ ಮತ್ತೆ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಡಲು ಶಕ್ತಿ ಇಲ್ಲದೆ ಅಸಹಾಯಕರಾಗಿದ್ದಾರೆ.

  • ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿಕೆಶಿ

    ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿಕೆಶಿ

    – 1,700 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಯೋಜನೆ

    ಬೆಂಗಳೂರು: ಬ್ರ‍್ಯಾಂಡ್ ಬೆಂಗಳೂರು (Brand Bengaluru) ಸುಗಮ ಸಂಚಾರ ಯೋಜನೆ ಅಡಿಯಲ್ಲಿ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದೆ. 30 ವರ್ಷಗಳ ಬಾಳಿಕೆ ಬರುವ ಶಾಶ್ವತ ರಸ್ತೆ ನಿರ್ಮಿಸುವ ಈ ಯೋಜನೆಗೆ 1,700 ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.

    ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯಲ್ಲಿ 14 ಪ್ಯಾಕೇಜ್‌ಗಳ ಮೂಲಕ ಬೆಂಗಳೂರಿನ 150 ಕಿ.ಮೀ ಉದ್ದದ 97 ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಬಿಡಬ್ಲ್ಯೂಎಸ್‌ಎಸ್‌ಬಿ, ಬಿಬಿಎಂಪಿ, ಬಿಡಿಎ, ಬೆಸ್ಕಾಂಗಳ ನಡುವೆ ಸಮನ್ವಯತೆ ಸಾಧಿಸಿ ಶಾಶ್ವತ ರಸ್ತೆ ನಿರ್ಮಿಸಲಾಗುತ್ತಿದೆ. ಕೇಬಲ್, ಪವರ್ ವೈಯರ್‌ಗಳಿಗೆ ಅವಕಾಶ ಕಲ್ಪಿಸಿ, ಯಾವುದೇ ಕಾರಣಕ್ಕೂ ರಸ್ತೆ ಅಗೆಯಲು ಅವಕಾಶ ನೀಡದೆ, ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಈ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 422 ವಸ್ತುಗಳನ್ನು ಗುರುತಿಸಿ, ನೊಬೆಲ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ 9 ತಿಂಗಳ ಐರಾ

    ನಮಗೆ ಗುಣಮಟ್ಟದ ಕಾಮಗಾರಿ ಮುಖ್ಯ. ಕಾಮಗಾರಿ ಶೀಘ್ರಗತಿಯಲ್ಲಿ ಸಾಗಬೇಕು ಎಂದು ಇಂದು ಪರಿಶೀಲನೆ ಮಾಡಿದ್ದೇನೆ. ಈ ಯೋಜನೆ ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯ ಎರಡನೇ ಹಂತದಲ್ಲಿ 450 ಕಿ.ಮೀ ಉದ್ದದ ರಸ್ತೆ ವೈಟ್ ಟ್ಯಾಪಿಂಗ್ ಮಾಡಲಾಗುವುದು. ಈ ಎಲ್ಲಾ ಹಂತಗಳ ಕಾಮಗಾರಿ ಮುಕ್ತಾಯವಾದರೆ ಬೆಂಗಳೂರಿನಲ್ಲಿ ಒಟ್ಟಾರೆ 1,700 ಕಿ.ಮೀ ಉದ್ದದ ರಸ್ತೆ ವೈಟ್ ಟ್ಯಾಪಿಂಗ್ ಮುಕ್ತಾಯಗೊಳ್ಳಲಿದೆ ಎಂದರು. ಇದನ್ನೂ ಓದಿ: IPL 2025 Schedule | ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ KKR vs RCB ಕಾದಾಟ – ಪಂದ್ಯ ಯಾವಾಗ?

    ರಸ್ತೆ ಗುಣಮಟ್ಟ ಪರೀಕ್ಷೆಗೆ ನಾನು ಇಂದು ಭೇಟಿ ನೀಡಿದ್ದೇನೆ. ಪಾದಚಾರಿ ಮಾರ್ಗಗಳನ್ನು ನೋಡಿದ್ದೇನೆ. ಭಾನುವಾರ ವಾಹನ ದಟ್ಟಣೆ ಕಡಿಮೆ ಇರುವ ಕಾರಣ ಇಂದು ಕಾಮಗಾರಿ ಪರಿಶೀಲನೆ ಮಾಡುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಎಲ್ಲಾ ಭಾಗಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ: ಕೊತ್ತೂರು ಮಂಜುನಾಥ್

    ಇದರ ಜೊತೆಗೆ ಬೆಂಗಳೂರಿನಾದ್ಯಂತ ಸಂಪೂರ್ಣವಾಗಿ ಮಳೆನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದೇವೆ. ನಾವು ಒಂದೇ ದಿನದಲ್ಲಿ ಎಲ್ಲಾ ಬದಲಾವಣೆ ಮಾಡುತ್ತೇವೆ ಎಂದು ಹೇಳುವುದಿಲ್ಲ. ಹಂತ ಹಂತವಾಗಿ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಯೋಜನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: Bengaluru| ಅರಮನೆ ಮೈದಾನದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

    ಈ ಯೋಜನೆಗೆ ಮೀಸಲಿಟ್ಟಿರುವ 1,700 ಕೋಟಿ ಹಣ ರಸ್ತೆಗೆ ವೆಚ್ಚವಾಗಬೇಕಲ್ಲವೇ. ಈ ರಸ್ತೆ ನಿರ್ದಿಷ್ಟ ಪ್ರಮಾಣದಲ್ಲಿ ದಪ್ಪ ಇರಬೇಕು, ಈ ರಸ್ತೆಗಳಲ್ಲಿ ಬಿಡಬ್ಲೂಎಸ್‌ಎಸ್‌ಬಿ ಕೆಲಸಗಳು ಒಟ್ಟಿಗೆ ಮುಗಿಯಬೇಕು. ಹೀಗಾಗಿ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿ ಮುಗಿದ ನಂತರವೂ ಗುಣಮಟ್ಟ ಪರಿಶೀಲನೆ ಮಾಡಲಾಗುವುದು. ಎಲ್ಲಾ ಕಡೆಗಳಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ನನಗೆ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ತಾಂತ್ರಿಕ ತಂಡವನ್ನು ಅಲ್ಲಿಗೆ ಕಳುಹಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ದರ್ಶನ್ ಬರ್ತ್‌‌ಡೇ ಸಂಭ್ರಮ; ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ

    ಟನಲ್ ರಸ್ತೆ ಸರಿಯಿಲ್ಲ ಎಂಬ ಕೇಂದ್ರ ರೈಲ್ವೆ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಗಿದ್ದರೆ ಅವರು ಮಹಾರಾಷ್ಟ್ರದಲ್ಲಿ ಯಾಕೆ ಟನಲ್ ರಸ್ತೆ ಮಾಡಿಸುತ್ತಿದ್ದಾರೆ? ಅವರಿಗೂ ಇದಕ್ಕೂ ಏನು ಸಂಬಂಧ? ಅವರ ಇಲಾಖೆ ಕೆಲಸ ಅವರು ಮಾಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮುಂಬೈ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ಕಾರ್ಮಿಕರು ಸಜೀವ ದಹನ

    ಬೆಂಗಳೂರಿನಲ್ಲಿ ನೀರಿನ ಅಭಾವ ಎದುರಾಗಬಾರದು ಎಂಬ ಕಾರಣಕ್ಕೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಜನರು ಮುಂದೆ ಬಂದು ನೀರಿನ ಸಂಪರ್ಕ ಪಡೆಯಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು: ಬಿ.ಕೆ ಹರಿಪ್ರಸಾದ್

  • ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

    ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

    ನವದೆಹಲಿ: ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನಯಂತೆ (Priyanka Gandhi Cheeks) ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ ಎಂದು ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ (Ramesh Bidhuri) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನವದೆಹಲಿ ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಚಾರ ನಡೆಸಿದ ವೇಳೆ ಈ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ ಹೇಮಾಮಾಲಿನಿಯ ಕೆನ್ನೆಯಂತೆ ರಸ್ತೆಗಳನ್ನು ಸುಗಮಗೊಳಿಸುವುದಾಗಿ ಲಾಲು ಹೇಳಿದರು. ಆದರೆ ಲಾಲು ಸುಳ್ಳು ಹೇಳಿದ್ದರು. ನಾನು ನಿಮಗೆ ಭರವಸೆ ನೀಡುತ್ತೇನೆ. ಓಖ್ಲಾ ಮತ್ತು ಸಂಗಮ್ ವಿಹಾರ್‌ನಲ್ಲಿ ನಿರ್ಮಿಸಿರುವಂತೆ, ಕಲ್ಕಾಜಿಯಲ್ಲೂ ಪ್ರಿಯಾಂಕ ಗಾಂಧಿಯವರ ಕೆನ್ನಯಂತಹ ರಸ್ತೆಗಳನ್ನು ನಿರ್ಮಿಸುತ್ತೇನೆ ಎಂದರು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಇದನ್ನೂ ಓದಿ: ದರ ಏರಿಕೆ; ಟಿಕೆಟ್ ತೆಗೆದುಕೊಳ್ಳದೇ ಬಸ್‌ನಲ್ಲಿ ಪ್ರಯಾಣಿಸಿ ವಾಟಾಳ್ ಪ್ರತಿಭಟನೆ 

    ಪ್ರಿಯಾಂಕಾ ಗಾಂಧಿ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲದೆ ಮಹಿಳೆಯರ ಬಗ್ಗೆ ಅವರ ಅಸಹ್ಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಬಳಿಕ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಬಿಧುರಿ, ಹೇಮಾ ಮಾಲಿನಿ ಕೂಡ ಮಹಿಳೆಯೇ. ತಪ್ಪು ಮಾಡಿದವರು ಮೊದಲು ಕ್ಷಮೆ ಕೇಳಲಿ. ಅವರು ಸರಳ ಕುಟುಂಬದಿಂದ ಬಂದವರು. ಕಾಂಗ್ರೆಸ್ ಮೊದಲು ಸರಿದಾರಿಗೆ ತರಲಿ. 140 ಕೋಟಿ ಜನ ಸಾಮಾನ್ಯರಿದ್ದಾರೆ ಅಲ್ಲವೇ? ಹೇಮಾ ಮಾಲಿನಿ ಅವರ ವಿರುದ್ಧ ಕಾಮೆಂಟ್ ಮಾಡಿದಾಗ ಅವರು ಮಹಿಳೆ ಅಲ್ಲ ಎಂದರ್ಥನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸ್ವಾಮಿ ಅವಧೇಶಾನಂದ ಗಿರಿ, ಸದ್ಗುರು ಭೇಟಿಯಾದ ಅಮಿತ್‌ ಶಾ

    ಕಾಂಗ್ರೆಸ್‌ ಟೀಕೆಯ ಬಳಿಕ ಪ್ರತಿಕ್ರಿಯಿಸಿದ ಬಿಧುರಿ, ಲಾಲು ಪ್ರಸಾದ್‌ ಅವರು ಮಾತನಾಡಿದ್ದ ದಾಟಿಯಲ್ಲಿ ಹೇಳಿಕೆ ನೀಡಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ರೆ ವಿಷಾದಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಆಂಧ್ರ, ತಮಿಳುನಾಡಿನಲ್ಲಿ ನಮಗಿಂತಲೂ ಹೆಚ್ಚಿನ ದರ ಇದೆ: ಶಿವಾನಂದ ಪಾಟೀಲ್ ಸಮರ್ಥನೆ

  • ರಸ್ತೆಗೆ ಸಿದ್ದರಾಮಯ್ಯ ಹೆಸರು – ಮೈಸೂರು ಪಾಲಿಕೆ ನಿರ್ಧಾರಕ್ಕೆ ಆಕ್ಷೇಪ

    ರಸ್ತೆಗೆ ಸಿದ್ದರಾಮಯ್ಯ ಹೆಸರು – ಮೈಸೂರು ಪಾಲಿಕೆ ನಿರ್ಧಾರಕ್ಕೆ ಆಕ್ಷೇಪ

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddarmaiah) ಅವರ ಹೆಸರನ್ನು ರಸ್ತೆಗೆ ಇಡಲು ಮುಂದಾದ ಮಹಾನಗರ ಪಾಲಿಕೆ (Mysore City Corporation) ಚಿಂತನೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

    ಕೆಆರ್‌ಎಸ್ ರಸ್ತೆಗೆ (KRS Road) ಸಿಎಂ ಸಿದ್ದರಾಮಯ್ಯ ಹೆಸರು ಇಡಲು ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದ್ದು ಅದಕ್ಕಾಗಿ ಪತ್ರಿಕಾ ಜಾಹಿರಾತು ನೀಡಿದೆ. ಕೆಆರ್‌ಎಸ್ ರಸ್ತೆಯಲ್ಲಿ ಅತಿ ಹೆಚ್ಚಿನ ಆಸ್ಪತ್ರೆಗಳಿವೆ. ಹೀಗಾಗಿ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರು ಇಡಲು ಮುಂದಾಗಿದೆ.

    ಪಾಲಿಕೆಯ ಈ ನಿಲುವಿಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ (Snehamayi Krishna) ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ನಾನು ಮಾಡಿರುವ ಆರೋಪದಲ್ಲಿ ಸಿದ್ದರಾಮಯ್ಯ ಎ1 ಆರೋಪಿ ಆಗಿದ್ದಾರೆ. ಅಂತಹ ಆರೋಪಿ ಹೆಸರನ್ನು ಮೈಸೂರಿನ ಪ್ರಮುಖ ರಸ್ತೆಗೆ ಇಡಲು ಹೊರಟಿರೋದು ವಿಷಾದನೀಯ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹೊಸ ಧಾರ್ಮಿಕ ವಿವಾದ ಕೆದಕಬೇಡಿ ಎಂದಿದ್ದಕ್ಕೆ ಸಿಟ್ಟು – ಭಾಗವತ್ ವಿರುದ್ಧ ಸ್ವಾಮೀಜಿಗಳ ಆಕ್ರೋಶ

    ಮೈಸೂರು ಅರಸರು ಕೊಟ್ಟಿರುವ ಕೊಡುಗೆ ಮನಗಾಣಬೇಕು. ಆ ರಸ್ತೆಯಲ್ಲಿ ಕೆಂಪಜಮಣಿ ಕ್ಷಯರೋಗ ಆಸ್ಪತ್ರೆ ಕೂಡ ಇದೆ. ಮೊದಲಿಂದ ಅದನ್ನು  ಪಿ.ಕೆ.ಟಿ.ಬಿ ರಸ್ತೆ ಅಂತಲೇ ಕರೆಯುತ್ತಾರೆ. ಅಂತಹ ಐತಿಹಾಸಿಕ ರಸ್ತೆಗೆ ಗುರುತರ ಆರೋಪ ಹೊತ್ತಿರುವ ವ್ಯಕ್ತಿ ಹೆಸರಿಡುತ್ತಿರುವುದು ಸರಿಯಲ್ಲ. ಇದರ ಬಗ್ಗೆ ನಾನು ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.