Tag: RMC Yard

  • ಬೆಂಗಳೂರಿಗೂ ಕಾಲಿಟ್ಟಿತು ಗಾಂಜಾ ಚಾಕ್ಲೆಟ್ – 50 ರೂ.ಗೆ 3 ಚಾಕ್ಲೆಟ್

    ಬೆಂಗಳೂರಿಗೂ ಕಾಲಿಟ್ಟಿತು ಗಾಂಜಾ ಚಾಕ್ಲೆಟ್ – 50 ರೂ.ಗೆ 3 ಚಾಕ್ಲೆಟ್

    ಬೆಂಗಳೂರು: ಪ್ರಸ್ತುತ ಮಾದಕ ವಸ್ತುಗಳು ಚಾಕ್ಲೆಟ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲಾಗುತ್ತದೆ. ಇದೀಗ ಬೆಂಗಳೂರಿಗೂ (Bengaluru) ಗಾಂಜಾ ಚಾಕ್ಲೆಟ್ (Cannabis chocolate) ಕಾಲಿಟ್ಟಿದ್ದು, ಉತ್ತರಪ್ರದೇಶದಿಂದ (Uttar Pradesh) ಬೆಂಗಳೂರಿಗೆ ತಂದು ಮಾರಾಟ ಮಾಡುವ ಯತ್ನ ನಡೆದಿದೆ.

    ಮನೋಕಾ ಹೆಸರಿನ ಗಾಂಜಾ ಚಾಕ್ಲೆಟ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಮೂವರು ಅಂಗಡಿ ಮಾಲೀಕರಿಗೆ ಮಾರಾಟ ಮಾಡಲು ಯತ್ನ ಮಾಡಿದ್ದಾರೆ. ಈ ಕುರಿತು ಸಮೀಮ್ ಅಖ್ತಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, 6 ಲಕ್ಷ ರೂ. ಮೌಲ್ಯದ ಗಾಂಜಾ ಚಾಕ್ಲೆಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ಈ ಹಿಂದೆ ಕೂಡ ಗಾಂಜಾ ಚಾಕ್ಲೆಟ್ ಅನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿದ್ದ. ಇದೀಗ ಆರ್‌ಎಂಸಿ ಯಾರ್ಡ್ (RMC Yard) ಬಳಿ ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲು ಯತ್ನಿಸಿದ್ದು, 50 ರೂ.ಗೆ ಮೂರು ಚಾಕ್ಲೆಟ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ 17 ಕೋಟಿ ರೂ. ಮೌಲ್ಯದ ಕೊಕೇನ್ ವಶ – ಇಬ್ಬರು ಕೀನ್ಯಾ ಪ್ರಜೆಗಳ ಬಂಧನ

    ಮುನಾಕ್ಕಾ, ಮಹಾಕಾಲ, ಆನಂದ, ಚಾರ್ ಮಿನಾರ್ ಗೊಲ್ಕ್ ಹೆಸರಿನ ಚಾಕ್ಲೇಟ್ ಮಾರಾಟ ಜಾಲ ಪತ್ತೆಯಾಗಿದ್ದು, ರೈಲಿನ ಮೂಲಕ ಉತ್ತರಪ್ರದೇಶದಿಂದ ಬೆಂಗಳೂರಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಪೊಲೀಸರ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಹಲವರು ನಾಪತ್ತೆಯಾಗಿದ್ದಾರೆ. ಸಮೀಮ್‌ನಿಂದ ಚಾಕ್ಲೆಟ್ ಪಡೆಯುತ್ತಿದ್ದ ಮೂವರು ನಾಪತ್ತೆಯಾಗಿದ್ದಾರೆ. ಸಂಜಯ್, ಗೋವಿಂದ ಮತ್ತು ವಿನೋದ್ ಎಂಬವರು ನಾಪತ್ತೆಯಾಗಿದ್ದು, ನಾಪತ್ತೆಯಾದ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರ್‌ಎಂಸಿ ಯಾರ್ಡ್‌ನಲ್ಲಿ ಟೊಮೆಟೊ ವಾಹನ ಕಳ್ಳತನ ಪ್ರಕರಣ – ಖದೀಮರು ಯಾಮಾರಿಸಿದ್ದು ಹೇಗೆ?

    ಆರ್‌ಎಂಸಿ ಯಾರ್ಡ್‌ನಲ್ಲಿ ಟೊಮೆಟೊ ವಾಹನ ಕಳ್ಳತನ ಪ್ರಕರಣ – ಖದೀಮರು ಯಾಮಾರಿಸಿದ್ದು ಹೇಗೆ?

    ಬೆಂಗಳೂರು: ಟೊಮೆಟೊ (Tomato) ಬೆಲೆ ಗಗನಕ್ಕೇರಿದ್ದೇ ತಡ, ಟೊಮೆಟೊ ಗಾಡಿಯನ್ನೇ ಎಸ್ಕೇಪ್ ಮಾಡಿರುವಂತಹ ಘಟನೆ ಯಶವಂತಪುರದ ಆರ್‌ಎಂಸಿ ಯಾರ್ಡ್‌ನಲ್ಲಿ (RMC Yard) ನಡೆದಿದೆ. ಖದೀಮರು ಗಾಡಿ ಸಮೇತ ಸುಮಾರು 250ಕ್ಕೂ ಹೆಚ್ಚು ಟ್ರೇಗಳಲ್ಲಿದ್ದ ಟೊಮೆಟೊವನ್ನು ಹೇಗೆ ಹೈಜಾಕ್ ಮಾಡಿ ಕೊಂಡೊಯ್ದರು ಎಂದು ಅದೇ ಗಾಡಿಯ ಚಾಲಕ ಶಿವಣ್ಣ ವಿವರಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ನಾವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕೋಲಾರಕ್ಕೆ ಟೊಮೆಟೊ ಸಾಗಿಸುತ್ತಿದ್ದೆವು. ಸುಮಾರು 2 ಟನ್ ತೂಗುವಷ್ಟು ಟೊಮೆಟೊ ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದೆವು. ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ರಿಂಗ್ ರಸ್ತೆಯಲ್ಲಿ ಅಪಘಾತ ನಡೆಯಿತು.

    ಈ ವೇಳೆ ನಮ್ಮ ವಾಹನದಲ್ಲಿದ್ದ ಇಬ್ಬರು ಕೆಳಗೆ ಇಳಿದೆವು. ಆಗ ಕಾರಿನಲ್ಲಿದ್ದ ನಾಲ್ವರು ಗಲಾಟೆ ಮಾಡಿದರು. ಗಾಡಿ ಗುದ್ದಿದ್ದಕ್ಕೆ ಅವರು 10 ಸಾವಿರ ಹಣ ಕೊಡುವಂತೆ ಗಲಾಟೆ ಮಾಡಿದರು. ಆದರೆ ನಮ್ಮ ಹತ್ರ ಅಷ್ಟು ಹಣ ಇಲ್ಲ ಎಂದ್ವಿ. ಬಳಿಕ ಅವರು ನಮ್ಮನ್ನು ಕಾರಿನಲ್ಲಿ ಕೂರಿಸಿಕೊಂಡು ಬುದಿಗೆರೆ ರಸ್ತೆಗೆ ಕರೆದುಕೊಂಡು ಹೋದರು. ಅಲ್ಲಿನ ಖಾಲಿ ಜಾಗದಲ್ಲಿ ನಮ್ಮನ್ನು ಇಳಿಸಿ, ಟೊಮೆಟೊ ವಾಹನದ ಸಮೇತ ಅವರು ಎಸ್ಕೇಪ್ ಆಗಿದ್ದಾರೆ ಎಂದು ಚಾಲಕ ಶಿವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು

    ಘಟನೆಗೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೆ ಭಾರೀ ಮಳೆ ಸಾಧ್ಯತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು

    ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು

    ಬೆಂಗಳೂರು: ಬೆಲೆ ಏರಿಕೆ ಹಿನ್ನೆಲೆ ಜನಸಾಮಾನ್ಯರು ಈಗ ಟೊಮೆಟೊ (Tomato) ಖರೀದಿ ಮಾಡೋದೇ ಅಸಾಧ್ಯವಾಗಿದೆ. ಚಿನ್ನದ ಬೆಲೆ ಎನಿಸಿಕೊಂಡಿರುವ ಸಂದರ್ಭದಲ್ಲೇ 2 ಟನ್ ಟೊಮೆಟೊ ಹೊತ್ತಿದ್ದ ಬುಲೆರೋ ವಾಹನವನ್ನೇ ಖದೀಮರು ಎಗರಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಬೆಂಗಳೂರಿನ (Bengaluru) ಆರ್‌ಎಂಸಿ ಯಾರ್ಡ್‌ನಲ್ಲಿ (RMC Yard) ಘಟನೆ ನಡೆದಿದೆ. ರೈತರು ಚಿತ್ರದುರ್ಗದಿಂದ ಆರ್‌ಎಂಸಿ ಯಾರ್ಡ್‌ಗೆ ಟೊಮೆಟೊ ಲೋಡ್ ಅನ್ನು ತಂದಿದ್ದರು. ರೈತರು ಯಾವಾಗ ವಾಹನವನ್ನು ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದರೋ ಆಗ ಬಂದ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೊ ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ಹನುಮ ಜಯಂತಿ ವೇಳೆ ಗಲಾಟೆ – ಬಾಟಲಿಯಿಂದ ಇರಿದು ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ

    250 ಕ್ಕೂ ಹೆಚ್ಚು ಟೊಮೆಟೊ ಟ್ರೇ ಇದ್ದ ಬುಲೆರೋ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವರು ಹೈಜಾಕ್ ಮಾಡಿದ್ದಾರೆ. ಟೊಮೆಟೊ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್‌ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದಾರೆ. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‌ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಎಂದು ಅವಾಜ್ ಹಾಕಿದ್ದಾರೆ.

    ಹಣ ಇಲ್ಲ ಎಂದಾಗ ಮೊಬೈಲ್‌ನಲ್ಲಿದ್ದ ಹಣ ಟ್ರಾನ್ಸ್ಫರ್ ಮಾಡಿಕೊಂಡು ಟೊಮೆಟೊ ಗಾಡಿಯಲ್ಲಿ ರೈತನನ್ನು ಕೂರಿಸಿಕೊಂಡು ಹೈಜಾಕ್ ಮಾಡಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್‌ನ ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.  ಇದನ್ನೂ ಓದಿ: ಜೈನಮುನಿ ಕೊಲೆ ಖಂಡಿಸಿ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಲ್ಲಿ ರಸ್ತೆ ಮಧ್ಯೆ ಏಕಾಏಕಿ ಭೂ ಕುಸಿತ

    ಬೆಂಗಳೂರಲ್ಲಿ ರಸ್ತೆ ಮಧ್ಯೆ ಏಕಾಏಕಿ ಭೂ ಕುಸಿತ

    ಬೆಂಗಳೂರು: ಸಿಲಿಕಾನ್ ಸಿಟಿಯ ಆರ್‌ಎಂಸಿ ಯಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ ಭೂ ಕುಸಿತ ಸಂಭವಿಸಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

    ನಗರದ ಆರ್‌ಎಂಸಿ ಯಾರ್ಡ್‌ನ ಎಂಇಐ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಭೂ ಕುಸಿತ ಉಂಟಾಗಿದೆ. ಸುಮಾರು 12 ಅಡಿಗಿಂತ ಹೆಚ್ಚು ಆಳಕ್ಕೆ ರಸ್ತೆ ಕುಸಿದು ಸ್ಥಳೀಯರಲ್ಲಿ ಹಾಗೂ ವಾಹನಸವಾರರಲ್ಲಿ ಭಯ ಮೂಡುವಂತೆ ಮಾಡಿದೆ. ಎಂಇಐ ರಸ್ತೆಯ ಮಧ್ಯಭಾಗದಲ್ಲಿ ಭೂ ಕುಸಿತವಾಗಿದ್ದು, ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಭೂಮಿ ಕುಸಿಯುವ ಆತಂಕದಲ್ಲಿ ಜನ ಇದ್ದಾರೆ.

    ಮಣ್ಣು ಪೂರ್ತಿ ಕುಸಿದಿರುವುದರಿಂದ ಒಂದು ಭಾಗದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ರಸ್ತೆ ಸಮೀಪದಲ್ಲಿ ಓಡಾಡಲು ಜನ ಭಯ ಪಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಲಾರಿಯೊಂದು ಹಾದು ಹೋದ ನಂತರ ಈ ಭೂ ಕುಸಿತ ಸಂಭವಿಸಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ಸ್ಥಳೀಯರೇ ಭೂಕುಸಿತವಾದ ರಸ್ತೆಗೆ ಬ್ಯಾರಿಕೇಡ್ ಹಾಕಿ ಹಗ್ಗ ಕಟ್ಟಿದ್ದಾರೆ. ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಮಣ್ಣು ಕುಸಿಯುವ ಆತಂಕ ಎದುರಾಗಿದೆ.

    ಈ ಹಿಂದೆ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಸಹ ಗುಂಡಿ ಬಿದ್ದು ಆತಂಕ ಸೃಷ್ಟಿಸಿತ್ತು. ನಂತರ ದುರಸ್ಥಿ ಮಾಡಲಾಯಿತು. ಈಗಲೂ ಸಹ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಬಳಿಕ ಇದೀಗ ಆರ್‍ಎಂಸಿ ಯಾರ್ಡ್ ಬಳಿ ರಸ್ತೆ ಮಧ್ಯೆ ಭೂ ಕುಸಿತ ಸಂಭವಿಸಿದೆ.

  • ಐಟಿ ಬಿಟಿ ಸಿಟಿಯಲ್ಲಿ ಬಯಲು ಶೌಚ? ಬೆಂಗಳೂರಿನಲ್ಲಿ ಇದೆಂಥ ನರಕ ಸ್ವಾಮಿ

    ಐಟಿ ಬಿಟಿ ಸಿಟಿಯಲ್ಲಿ ಬಯಲು ಶೌಚ? ಬೆಂಗಳೂರಿನಲ್ಲಿ ಇದೆಂಥ ನರಕ ಸ್ವಾಮಿ

    ಬೆಂಗಳೂರು: ಬಯಲು ಮುಕ್ತ ಶೌಚಾಲಯ, ಕುಡಿಯುವ ನೀರು ದೇಶದ ಎಲ್ಲ ಜನತೆಗೂ ಸಿಗಲೇಬೇಕು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯ. ಆದರೆ ಮೋದಿ ಭಾಷಣಕ್ಕೆ ಮೋದಿ ಪಾರ್ಟಿ ಅಧಿಕಾರಕ್ಕೆ ಬಂದ್ರು ಬೆಲೆ ಸಿಕ್ತಿಲ್ಲ. ಬೆಂಗಳೂರಿನಂತಹ ನಗರದ ಹಲವು ಭಾಗಗಳಲ್ಲಿ ಇಂದು ಕುಡಿಯಲು ನೀರು ಸಿಗುತ್ತಿಲ್ಲ. ಸಿಕ್ಕ ನೀರು ಕುಡಿದ್ರೆ ಶೌಚ ಮಾಡೊದೆಲ್ಲಿ ಅಂತ ಪ್ರಶ್ನಿಸುವವರ ಕಣ್ಣೀರ ಕಥೆ ಇಲ್ಲಿದೆ.

    ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿ ಬಿಟಿ ಹೀಗೆ ಇಡೀ ವಿಶ್ವದಲ್ಲಿ ಬೆಂಗಳೂರು ನಗರಕ್ಕೆ ತನ್ನದೇ ಆದ ಹೆಸರಿದೆ. ಬೆಂಗಳೂರಿನ ಯಶವಂತಪುರ ಆರ್‍ಎಂಸಿ ಯಾರ್ಡ್ ಬರೋಬ್ಬರಿ 68 ಎಕರೆ ವ್ಯಾಪ್ತಿಯಲ್ಲಿದೆ. ಇಲ್ಲಿ ಕೆಲಸ ಮಾಡುವ ಮಹಿಳೆಯರ ಕಷ್ಟ ಯಾರಿಗೂ ಬೇಡ ಅನ್ನುವಂತಾಗಿದೆ. ಎಪಿಎಂಸಿಯಲ್ಲಿ ನಿತ್ಯ ಸಾವಿರಾರು ಮಹಿಳೆಯರು ಕೆಲಸ ಮಾಡ್ತಾರೆ. ಅವರಿಗೆ ಎಪಿಎಂಸಿಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇದಕ್ಕಾಗಿ ಅವರು ಬಯಲು ಶೌಚಾಲಯಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ.

    ಇಲ್ಲಿರುವ ಬಾತ್‍ರೂಂಗಳನ್ನು ಒಡೆದು ಬಿಲ್ಡಿಂಗ್ ಕಟ್ಟಲಾಗಿದೆ. ಇನ್ನೊಂದು ಶೌಚಾಲಯಕ್ಕೆ ಹೋಗೋದಕ್ಕೆ ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ನಾವು ಇಲ್ಲಿ ನೀರು ಕುಡಿಯೋಕು ಯೋಚನೆ ಮಾಡ್ತೀವಿ. ಬಯಲು ಶೌಚಾಲಯಕ್ಕೆ ಹೋಗುವ ಅನಿವಾರ್ಯತೆ ಇದೆ ಅಂತಾ ಮಹಿಳೆಯರು ಹೇಳುತ್ತಾರೆ.

    ಯಶವಂತಪುರದಲ್ಲಿ 15ಕ್ಕೂ ಹೆಚ್ಚು ಕಡೆ ಶೌಚಾಲಯವಿದೆ. ಆದರೆ ಸ್ವಚ್ಛತೆ ಕೊರತೆ, ನಿರ್ವಹಣೆ ಸಮಸ್ಯೆ ಬಯಲು ಶೌಚಕ್ಕೆ ದಾರಿ ಮಾಡಿಕೊಟ್ಟಿದೆ. ಶೌಚಾಲಯದ ಸಮಸ್ಯೆ ಒಂದೆಡೆಯಾದರೆ ಕುಡಿಯುವ ನೀರಿನ ಸಮಸ್ಯೆ ಮತ್ತೊಂದೆಡೆ. ಹತ್ತಾರು ಎಕರೆಯ ಎಪಿಎಂಸಿಯಲ್ಲಿ ಈಗಲೂ ಕೇವಲ 5 ಕಡೆ ಮಾತ್ರ ನೀರಿನ ವ್ಯವಸ್ಥೆ ಇದೆ. ಅದು ಶುದ್ಧ ಕುಡಿಯುವ ನೀರಲ್ಲ. ಲಕ್ಷ ಜನರ ಸಂಚಾರ ಇರುವ ಕಡೆ ಬೆರಳೆಣಿಕೆಯಷ್ಟು ಶೌಚಾಲಯಗಳಿವೆ. ಕುಡಿಯುವ ನೀರಿನ ನಿರ್ವಹಣೆ ಇಲ್ಲ ಎಂದು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ.

    ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ, ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಈ ಬಗ್ಗೆ ಗಮನ ಹರಿಸಬೇಕಿದೆ.

  • ಟ್ರಾಫಿಕ್ ನಲ್ಲೇ ಆಟೋ ಡ್ರೈವರ್‍ಗೆ ಗೂಸಾ ಕೊಟ್ಟ ಮಹಿಳೆ

    ಟ್ರಾಫಿಕ್ ನಲ್ಲೇ ಆಟೋ ಡ್ರೈವರ್‍ಗೆ ಗೂಸಾ ಕೊಟ್ಟ ಮಹಿಳೆ

    ಬೆಂಗಳೂರು: ಆಟೋಗೆ ಅಡ್ಡ ಬಂದಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ತರಾಟಗೆ ತೆಗೆದುಕೊಂಡಿದ್ದಕ್ಕೆ ಮಹಿಳೆಯೊಬ್ಬರು ಡ್ರೈವರ್‍ಗೆ ಹೊಡೆದ ಘಟನೆ ನಗರ ಆರ್‍ಎಂಸಿ ಯಾರ್ಡ್‍ನಲ್ಲಿ ನಡೆದಿದೆ.

    https://youtu.be/GnD4vSp5TsA

    ಆರ್‍ಎಂಸಿ ಯಾರ್ಡ್‍ನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿತ್ತು. ಆ ವೇಳೆ ಮಹಿಳೆ ಆಟೋಗೆ ಅಡ್ಡ ಬಂದಳು ಅಂತಾ ಡ್ರೈವರ್ ಅವಾಚ್ಯ ಶಬ್ದಗಳಿಂದ ಮಹಿಳೆಯನ್ನು ಬೈದಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಆಟೋ ಡ್ರೈವರ್‍ಗೆ ಮುಖ ಮೂತಿ ನೋಡದೆ ಬಾರಿಸಿದ್ದಾರೆ.

    ನಂತರ ಅಲ್ಲಿದ ಜನರು ಮಹಿಳೆಯನ್ನು ಸಮಾಧಾನ ಮಾಡಿಸಿ ಆಟೋ ಡ್ರೈವರ್‍ನನ್ನು ಹೋಗಲು ಬಿಟ್ಟರು.