Tag: RL Jalappa

  • ಚೆಕ್‌ ಬೌನ್ಸ್‌ ಕೇಸ್‌ – ಮಾಜಿ ಸಚಿವ ಜಾಲಪ್ಪ ಪುತ್ರಗೆ ಜೈಲು ಶಿಕ್ಷೆ

    ಚೆಕ್‌ ಬೌನ್ಸ್‌ ಕೇಸ್‌ – ಮಾಜಿ ಸಚಿವ ಜಾಲಪ್ಪ ಪುತ್ರಗೆ ಜೈಲು ಶಿಕ್ಷೆ

    ಬೆಂಗಳೂರು: ಚೆಕ್‌ ಬೌನ್ಸ್‌ (Check Bounce) ಪ್ರಕರಣದಲ್ಲಿ ಮಾಜಿ ಸಚಿವ ಆರ್ ಎಲ್ ಜಾಲಪ್ಪ (RL Jalappa) ಅವರ ಪುತ್ರ ನರಸಿಂಹಮೂರ್ತಿಗೆ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ.

    ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Courts for MPs/MLAs) ನರಸಿಂಹಮೂರ್ತಿ (Narasimha Murthy) 6 ತಿಂಗಳು ಜೈಲು ಶಿಕ್ಷೆ, 20 ಲಕ್ಷ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಇಂದು ಕೇರಳಕ್ಕೆ ತೆರಳಲಿದ್ದಾನೆ ಬೆಂಗಳೂರು ಬಾಂಬ್‌ ಸ್ಫೋಟದ ಆರೋಪಿ ಮದನಿ

     

    ಪ್ರಕಾಶ್ ಕುಮಾರ್ ಎಂಬುವವರ ಪುತ್ರಿಗೆ ಸೀಟ್ ಕೊಡಿಸಲು ನರಸಿಂಹಮೂರ್ತಿ 45 ಲಕ್ಷ ರೂ. ಹಣವನ್ನು ಪಡೆದಿದ್ದರು. ಮೆಡಿಕಲ್‌ ಸೀಟ್‌ ಸಿಗದ ಕಾರಣ 45 ಲಕ್ಷ ರೂ.ಗೆ ಚೆಕ್‌ ನೀಡಿದ್ದರು. ಆದರೆ ಈ ಚೆಕ್‌ ಬೌನ್ಸ್‌ ಆಗಿತ್ತು. ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದಕ್ಕೆ ಚೆಕ್‌ ಬೌನ್ಸ್‌ ಪ್ರಕರಣ ದಾಖಲಾಗಿತ್ತು.

    ಶಿಕ್ಷೆ ಪ್ರಮಾಣವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಗೆ ಕೋರ್ಟ್‌ 2 ತಿಂಗಳು ಕಾಲಾವಕಾಶ ನೀಡಿದೆ.

  • ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಮಂತ್ರಿ ಜಾಲಪ್ಪ ನಿಧನ

    ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಮಂತ್ರಿ ಜಾಲಪ್ಪ ನಿಧನ

    ಕೋಲಾರ: ರಾಜ್ಯದ ಹಿಂದುಳಿದ ವರ್ಗಗಳ ನೇತಾರ, ಹಿರಿಯ ಕಾಂಗ್ರೆಸ್ಸಿಗ, ಕೇಂದ್ರದ ಮಾಜಿ ಮಂತ್ರಿ ಆರ್ ಎಲ್ ಜಾಲಪ್ಪ(98) ನಿಧನರಾಗಿದ್ದಾರೆ.

    ವಯೋಸಹಜ ಅನಾರೋಗ್ಯಗಳ ಕಾರಣದಿಂದ ಜಾಲಪ್ಪ ಅವರು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ  ಜಾಲಪ್ಪ ಅವರಿಗೆ ಆಸ್ಪತ್ರೆಯಲ್ಲಿ ಕಳೆದ 40 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಜಾಲಪ್ಪ ಶ್ವಾಸಕೋಶ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದಲೂ ಬಳಲುತ್ತಿದ್ದರು. ಅವರ ಬಿಪಿ ಮತ್ತು ಪ್ಲೇಟ್‍ಲೆಟ್ಸ್ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿದು, ಆರೋಗ್ಯ ಕ್ಷೀಣಿಸಿತ್ತು. ವೈದ್ಯರು ಅವರನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ 7:30ಕ್ಕೆ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಯೊಂದಿಗೆ ಮೈತ್ರಿ – ಅಮರೀಂದರ್‌ ಸಿಂಗ್‌ ಅಧಿಕೃತ ಘೋಷಣೆ

    1925 ಅಕ್ಟೋಬರ್ 19 ರಂದು ಜನಿಸಿದ್ದ ಇವರ ಪೂರ್ಣ ಹೆಸರು ಅರ್.ಲಕ್ಷ್ಮಿ ನಾರಾಯಣಪ್ಪ ಜಾಲಪ್ಪ. 1996 ರಿಂದ 2009 ರ ವರೆಗೆ ಚಿಕ್ಕಬಳ್ಳಾಪುರ ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ಇವರು ನಾಲ್ಕು ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಚುನಾಯಿತರಾಗಿದ್ದರು. 1996 ರಿಂದ 98ರ ವರೆಗೆ ಕೇಂದ್ರ ಜವಳಿ(ಟೆಕ್ಸ್ ಟೈಲ್) ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

    ದೇವರಾಜ ಅರಸು ಅವರೊಂದಿಗೆ 1980 ರಲ್ಲಿ ಜನತಾ ಪಾರ್ಟಿಗೆ ಸೇರ್ಪಡೆಯಾದ ಬಳಿಕ 1989 ರಲ್ಲಿ ಜನತಾ ದಳಕ್ಕೆ ಸೇರಿದ್ದರು. ಈಡಿಗ ಸಮುದಾಯದವರಾಗಿದ್ದ ಜಾಲಪ್ಪ 1951 ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದರು. ಪತ್ನಿ ವಿಜಯಲಕ್ಷ್ನೀ ಅವರನ್ನು ಮದುವೆಯಾಗಿದ್ದ ಇವರು ದೊಡ್ಡ ಬಳ್ಳಾಪುರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದರು.

     

    ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಸಹಕಾರ ಹಾಗೂ ಕಂದಾಯ ಸಚಿವರಾಗಿ ಸೇವ ಸಲ್ಲಿಸಿದ್ದ ಇವರು ಕೃಷಿ, ಶಿಕ್ಷಣ ಕ್ಷೇತ್ರದಲ್ಲೂ ಅವರು ಆಸಕ್ತಿ ಹೊಂದಿದ್ದರು. ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜು ಹಾಗೂ ಅರ್.ಎಲ್ ಜಾಲಪ್ಪ ಅಸ್ಪತ್ರೆ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದ ಆರ್ ಎಲ್ ಜಾಲಪ್ಪ ಮೂರು ಗಂಡು ಮಕ್ಕಳು ಹಾಗೂ ನಾಲ್ಕು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

  • ‘ಕಿರುಕುಳ ನೀಡೋ ಉದ್ದೇಶದಿಂದಲೇ ಐಟಿ ದಾಳಿ’- ಐಟಿ ಶೋಧದ ಬಳಿಕ ಜಾಲಪ್ಪ ಅಳಿಯ ಜಿ.ಎಚ್.ನಾಗರಾಜ್ ಆರೋಪ

    ‘ಕಿರುಕುಳ ನೀಡೋ ಉದ್ದೇಶದಿಂದಲೇ ಐಟಿ ದಾಳಿ’- ಐಟಿ ಶೋಧದ ಬಳಿಕ ಜಾಲಪ್ಪ ಅಳಿಯ ಜಿ.ಎಚ್.ನಾಗರಾಜ್ ಆರೋಪ

    ಚಿಕ್ಕಬಳ್ಳಾಪುರ: ನಮಗೆ ಕಿರುಕುಳ ನೀಡಲು ಉದ್ದೇಶಪೂರ್ವಕವಾಗಿಯೇ ಐಟಿ ದಾಳಿ ನಡೆಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಸೋದರ ಅಳಿಯ ಜಿ.ಎಚ್.ನಾಗರಾಜ್ ಆರೋಪಿಸಿದ್ದಾರೆ.

    ಐಟಿ ದಾಳಿ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಜಿ.ಎಚ್.ನಾಗರಾಜ್, ನಮ್ಮ ಮನೆಯಲ್ಲಿ ಸಿಕ್ಕಿರುವುದು 12 ಲಕ್ಷ ರೂ. ಹಣ. ಅದರಲ್ಲಿ ಅಕೌಂಟ್ ಸರಿಯಾಗಿ ನಿರ್ವಹಿಸಿಲ್ಲ ಎಂದು 10 ಲಕ್ಷ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಅದನ್ನು ಹೊರತು ಪಡಿಸಿದರೆ ಬೇರೇನೂ ಇಲ್ಲ. ನಮ್ಮ ಮನೆಯ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ ಎಂದರು.

    ಈ ಐಟಿ ದಾಳಿ ಬೇಕಂತಲೇ ನಮಗೆ ಕಿರುಕುಳ ನೀಡುಲು ನಡೆಸಿದ್ದಾರೆ. ಸಣ್ಣ ವಿಷಯವನ್ನ ಕೇವಲ ಒಂದು ದಿನದಲ್ಲಿ ಮುಗಿಯಬೇಕಾದ ಐಟಿ ವಿಚಾರಣೆಯನ್ನ ಮೂರು ದಿನಗಳ ಕಾಲ ಕೇಳಿದ್ದನ್ನೇ ಕೇಳಿ-ಕೇಳಿ, ಕೆದಕಿ-ಕೆದಕಿ ವಿಚಾರಣೆ ನಡೆಸಿದರು ಎಂದು ಐಟಿ ಅಧಿಕಾರಿಗಳ ಕಾರ್ಯವೈಖರಿಗೆ ಜಿ.ಎಚ್.ನಾಗರಾಜ್ ಅಸಮಾಧಾನ ಹೊರಹಾಕಿದರು.

    ಐಟಿ ಅಧಿಕಾರಿಗಳ ವಿಚಾರಣೆಗೆ ನಾನು ಸಂಪೂರ್ಣ ಸಹಕಾರ ನೀಡಿದ್ದು, ನಮ್ಮ ಮನೆ ಹಾಗೂ ಆಸ್ಪತ್ರೆಯಲ್ಲಿ ಏನೂ ಸಿಕ್ಕಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಇದೇ ತಿಂಗಳ 15 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.

    ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಸುದ್ದಿ ಕೇಳಿ ಅಘಾತ ವ್ಯಕ್ತಪಡಿಸಿದ ಜಿ.ಎಚ್.ನಾಗರಾಜ್, ಇದೊಂದು ಹೇಯಕೃತ್ಯ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು. ಅಲ್ಲದೇ ಮಾಜಿ ಸಚಿವ ಡಿಕೆ ಶಿವಕುಮಾರ್ ಅದ್ಯಾವ ರೀತಿ ಇವರ ದಾಳಿ ತಡೆದಯಕೊಂಡರೋ ಎಂದು ಅಚ್ಚರಿ ವ್ಯಕ್ತಪಡಿಸಿದರು.

    https://www.youtube.com/watch?v=h8eKCo5zXfI