Tag: RK Singh

  • ಸಾಲದ ಸುಳಿಗೆ ಸಿಲುಕಲಿವೆ – ಉಚಿತ ವಿದ್ಯುತ್‌ ನೀಡುವ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

    ಸಾಲದ ಸುಳಿಗೆ ಸಿಲುಕಲಿವೆ – ಉಚಿತ ವಿದ್ಯುತ್‌ ನೀಡುವ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

    ನವದೆಹಲಿ: ಸಾಲ ಮಾಡಿ ಜನರಿಗೆ ಉಚಿತ ವಿದ್ಯುತ್‌ (Free Electricity) ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕೇಂದ್ರ ಇಂಧನ ಸಚಿವ ಆ‌ರ್.ಕೆ. ಸಿಂಗ್ (RK Singh), ಪಂಜಾಬ್‌ನಂತಹ ರಾಜ್ಯಗಳು ಸಾಲದ ಹಣದಲ್ಲಿ ವಿದ್ಯುತ್ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಿವೆ. ರಾಜ್ಯ ಸರ್ಕಾರದ ಬಳಿಯೇ ಸಾಕಷ್ಟು ಹಣವಿದ್ದರೆ ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವುದು ಸರಿ. ಆದರೆ, ಸಾಲ ಮಾಡಿ ವಿದ್ಯುತ್ ನೀಡಿದರೆ ಅದಕ್ಕೆ ಸರ್ಕಾರಗಳು ಬೆಲೆ ತೆರಬೇಕಾಗುತ್ತದೆ. ಏಕೆಂದರೆ ವಿದ್ಯುತ್ ತಯಾರಿಸಲು ಖರ್ಚು ತಗಲುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು

    ಬೇರೆಲ್ಲಾ ಉತ್ಪನ್ನಗಳಂತೆ ವಿದ್ಯುತ್ ತಯಾರಿಸಲು ಕೂಡ ಹಣ ಬೇಕು. 2022 ರಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಜನಪರ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಪಂಜಾಬ್‌ನ ಎಎಪಿ ಸರ್ಕಾರದ (Punjab Government) ಈಗಾಗಲೇ 2 ವರ್ಷಗಳಲ್ಲಿ 47,000 ಕೋಟಿ ರೂಪಾಯಿಗಳಷ್ಟು ಸಾಲ ಪಡೆದುಕೊಂಡಿದೆ. ಜನರಿಗೆ ಯಾವುದೇ ರಾಜ್ಯ ಸರ್ಕಾರ ವಿದ್ಯುತ್ತನ್ನು ಉಚಿತವಾಗಿ ನೀಡುತ್ತದೆಯಾದರೆ ಅಷ್ಟು ಹಣ ರಾಜ್ಯ ಸರ್ಕಾರದ ಬಳಿಯೇ ಇರಬೇಕು. ಸಾಲ ಮಾಡಿ ಹಣ ತಂದು ಜನರಿಗೆ ಉಚಿತ ವಿದ್ಯುತ್‌ ನೀಡಿದರೆ ಖಂಡಿತ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರಕ್ಕೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ವಿದ್ಯುತ್ ಉಚಿತವಾಗಿ ಸಿಗೋದಿಲ್ಲ ಎಂದು ನಾನು ರಾಜ್ಯಗಳಿಗೆ ಹೇಳುತ್ತಲೇ ಬಂದಿದ್ದೇನೆ. ಆದರೂ ಅವು ವಿದ್ಯುತ್ತನ್ನು ಉಚಿತವಾಗಿ ನೀಡುತ್ತವೆಯಾದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಸಾಲದಲ್ಲಿರುವ ರಾಜ್ಯಗಳು ಉಚಿತ ವಿದ್ಯುತ್‌ನಂತಹ ಜನಪ್ರಿಯ ಯೋಜನೆಗಳಿಗಾಗಿ ಇನ್ನಷ್ಟು ಸಾಲ ಮಾಡುತ್ತಿವೆ. ಹೀಗೆ ಸಾಲದ ಸುಳಿಗೆ ರಾಜ್ಯವನ್ನು ಸಿಲುಕಿಸಬಾರದು. ಉಚಿತಗಳಿಂದಾಗಿಯೇ ಅನೇಕ ರಾಜ್ಯ ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಲುಕುತ್ತಿವೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಸುಲಭವಾಗಿ ಮಾಡಿ ಮಾವಿನಕಾಯಿ ಚಿತ್ರಾನ್ನ

  • ಕೇಂದ್ರೀಯ ಉತ್ಪಾದನಾ ಕೇಂದ್ರಗಳಿಂದ ವಿದ್ಯುತ್‌ ನೀಡಿ: ಜಾರ್ಜ್‌ ಮನವಿ

    ಕೇಂದ್ರೀಯ ಉತ್ಪಾದನಾ ಕೇಂದ್ರಗಳಿಂದ ವಿದ್ಯುತ್‌ ನೀಡಿ: ಜಾರ್ಜ್‌ ಮನವಿ

    ನವದೆಹಲಿ: ಇಂಧನ ಸಚಿವ ಕೆಜೆ ಜಾರ್ಜ್ (KJ George) ಅವರು ಕೇಂದ್ರ ಸರ್ಕಾರದ ವಿದ್ಯುತ್, ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ (RK Singh) ಅವರನ್ನು ಕರ್ನಾಟಕದ (Karnataka) ಇಂಧನ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲು ಬುಧವಾರ ಸಂಜೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಈ ಸಂದರ್ಭದಲ್ಲಿ ಕೆ ಜೆ ಜಾರ್ಜ್ ಅವರು ವಿದ್ಯುತ್ ಬೇಡಿಕೆಯ ಹೆಚ್ಚಳದ ದೃಷ್ಟಿಯಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಈ ವೇಳೆ ಕೇಂದ್ರೀಯ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚಿನ ಪಾಲು ನೀಡುವ ಮೂಲಕ ಕರ್ನಾಟಕದ ಹೆಚ್ಚುವರಿ ವಿದ್ಯುತ್ ಅಗತ್ಯವನ್ನು ಪೂರೈಸಲು ಬೆಂಬಲಿಸಬೇಕೆಂದು ವಿನಂತಿಸಿದರು.  ಇದನ್ನೂ ಓದಿ: ರಾಜ್ಯದಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ – ಗ್ರಾಮೀಣ, ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

     

    ಕೆಜೆ ಜಾರ್ಜ್ ಅವರು ಕರ್ನಾಟಕ ಇಂಧನ ಸಚಿವಾಲಯದ ವಿವಿಧ ನವೀನ ಯೋಜನೆಗಳ ವಿವರಗಳನ್ನು ಹಂಚಿಕೊಳ್ಳುತ್ತಾ ರಾಜ್ಯವು ವಾಯು ಮತ್ತು ಸೌರ ಶಕ್ತಿಯ ಮೂಲಗಳಿಂದ ಶಕ್ತಿ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಆ ಮೂಲಕ ನವೀಕರಿಸಲಾಗದ ಇಂಧನ ಉತ್ಪಾದನೆಯ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿರುವ ಬಗ್ಗೆ ತಿಳಿಸಿ ಈ ಮೂಲಕ ಶುದ್ಧ ಮತ್ತು ಸಮರ್ಥ ನವೀಕರಿಸಬಹುದಾದ ಇಂಧನ ಮೂಲಗಳತ್ತ ಸಾಗುತ್ತಿರುವ ಬಗ್ಗೆ ವಿವರಿಸಿದರು.  ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗಿಲ್ಲ, ಅವಶ್ಯಕತೆ ಇಲ್ಲದ್ದಕ್ಕೆ ಥರ್ಮಲ್ ಪ್ಲಾಂಟ್ ಬಂದ್: ಸಚಿವ ದರ್ಶನಾಪುರ

    ಭೇಟಿ ವೇಳೆ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸಭೆಯಲ್ಲಿ ಭಾಗವಹಿಸಿದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]