Tag: RK datta

  • ದಕ್ಷಿಣ ಕನ್ನಡಕ್ಕೆ ಪೊಲೀಸ್ ಮುಖ್ಯಸ್ಥ ಆರ್‍ಕೆ ದತ್ತಾ ಭೇಟಿ

    ದಕ್ಷಿಣ ಕನ್ನಡಕ್ಕೆ ಪೊಲೀಸ್ ಮುಖ್ಯಸ್ಥ ಆರ್‍ಕೆ ದತ್ತಾ ಭೇಟಿ

    ಮಂಗಳೂರು: ಕೋಮು ಗಲಭೆಗೆ ಸಾಕ್ಷಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪೊಲೀಸ್ ಮಹಾನಿರ್ದೇಶಕ ಆರ್‍ಕೆ ದತ್ತಾ ಭೇಟಿ ನೀಡಿದ್ದಾರೆ.

    ಗುರುವಾರ ರಾತ್ರಿಯೇ ಡಿಜಿಪಿ ದತ್ತಾ ಮಂಗಳೂರಿಗೆ ಆಗಮಿಸಿದ್ದಾರೆ. ಜುಲೈ 10ರಂದು ಬೆಂಗಳೂರಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಡಿಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವಂತೆ ಸೂಚಿಸಿದ್ದರು. ಪಶ್ಚಿಮ ವಲಯ ಐಜಿಪಿ ಹರಿಶೇಖರನ್, ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಡಿಜಿಪಿ ಆರ್‍ಕೆ ದತ್ತಾ ಸಭೆ ನಡೆಸಲಿದ್ದಾರೆ.

    ಕೊಲೆಯಾಗಿರುವ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ನಿವಾಸಕ್ಕೂ ದತ್ತಾ ಅವರು ಭೇಟಿ ನೀಡುವ ಸಾಧ್ಯತೆ ಇದೆ. ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಶರತ್ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆಯೋ ನಿರೀಕ್ಷೆ ಇದೆ. ಜೊತೆಗೆ ಕಲ್ಲು ತೂರಾಟ ನಡೆದ ಕೈಕಂಬ, ಬಿ.ಸಿ ರೋಡ್‍ಗೂ ಡಿಜಿ ಭೇಟಿ ನೀಡಲಿದ್ದಾರೆ.