ಬೆಂಗಳೂರು: ರಿಜ್ವಾನ್‍ಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ರೌಡಿಶೀಟರ್ ಒಬ್ಬ ಮನವಿ ಮಾಡಿದ್ದು, ಕಾಂಗ್ರೆಸ್‍ನಲ್ಲಿ ರೌಡಿ ಶೀಟರ್ ಗಳ ಅಬ್ಬರ ಜಾಸ್ತಿಯಾಗುತ್ತಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಹೌದು. ಇಂದು ಶಿವಾಜಿನಗರದ ರೌಡಿಶೀಟರ್ ಇಶ್ತಿಯಾಕ್ ಅಹ್ಮದ್ ಕೆಪಿಸಿಸಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದು, ರಿಜ್ವಾನ್ ಅರ್ಷದ್ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಅವರಿಗೆ ಮನವಿ ಮಾಡಿದ್ದಾನೆ. ಈಗ ಈ ಸುದ್ದಿ ಬಹಳಷ್ಟು ಚರ್ಚೆಯಾಗುತ್ತಿದ್ದು, ಶತಮಾನದ ಪಕ್ಷ ಕಾಂಗ್ರೆಸ್ ರೌಡಿ ಶೀಟರ್ ಗಳಿಗೆ ಮಣೆ ಹಾಕುತ್ತಿದ್ಯಾ ಎಂಬ ಅನುಮಾನಗಳು ಮೂಡುತ್ತೀವೆ.
ಇಶ್ತಿಯಾಕ್ ಕಾಂಗ್ರೆಸ್ ಕಚೇರಿಗೆ ಬರುವುದು ಇದು ಮೊದಲಲ್ಲ. ಎರಡು ವಾರದ ಹಿಂದೆಯೂ ಕೆಪಿಸಿಸಿ ಕಚೇರಿಗೆ ಇಶ್ತಿಯಾಕ್ ಅಹ್ಮದ್ ಬಂದಿದ್ದ. ಆಗ ಈ ವಿಚಾರದ ಬಗ್ಗೆ ಅಧ್ಯಕ್ಷರಾದ ದಿನೇಶ್ ಗೂಂಡುರಾವ್ ಅವರನ್ನು ಕೇಳಿದಾಗ, ರೌಡಿ ಶೀಟರ್ ಆಗಮನವನ್ನು ಸಮರ್ಥಿಸಿಕೊಂಡಿದ್ದು, ಯಾವ ಪಕ್ಷದಲ್ಲಿ ರೌಡಿ ಶೀಟರ್ ಇಲ್ಲ ಹೇಳಿ ಎಂದು ಮಾಧ್ಯಮಗಳ ಬಾಯಿ ಮುಚ್ಚಿಸಿದ್ದರು. ಪ್ರಮುಖ ನಾಯಕರೇ ರೌಡಿಗಳಿಗೆ ಮಣೆ ಹಾಕಿದರೆ ಮುಂದೇನು ಎಂದು ಕೈ ಕಾರ್ಯಕರ್ತರು ಈಗ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಕಚೇರಿಗೆ ಬಂದಿದ್ದ ರೌಡಿ ಇಶ್ತಿಯಾಕ್ ಅಹ್ಮದ್ ನಾನು ಹೇಳಿದ ರೀತಿಯಲ್ಲಿ ರಿಜ್ವಾನ್ ಅರ್ಷದ್ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಇಲ್ಲ ಎಂದರೆ ನಾನು ನಿಮ್ಮ ಪರ ಕೆಲಸ ಮಾಡಲ್ಲ ಎಂದು ಹೇಳಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಪದೇ ಪದೇ ಕಾಂಗ್ರೆಸ್ ಪಾಳ್ಯದಲ್ಲಿ ರೌಡಿ ಶೀಟರ್ ಕಾಣಿಸಿಕೊಳ್ಳುತ್ತಿದ್ದು, ಈ ವಿಚಾರದ ಬಗ್ಗೆ ರಾಜಕೀಯ ವಲಯದಲ್ಲಿ ಬಹಳ ಚರ್ಚೆಯಾಗುತ್ತದೆ.
ಬೆಂಗಳೂರು: ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಟಿಕೆಟ್ ಲಾಬಿ ಜೋರಾಗಿದೆ. ಉಪಸಮರದ ಸಮಯದಲ್ಲಿ ಕಾಂಗ್ರೆಸ್ ಆಂತರಿಕ ಕಲಹ ಹೆಚ್ಚಾಗುತ್ತಿದ್ದು, ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಶಿವಾಜಿನಗರದ ಟಿಕೆಟ್ ಯಾರಿಗೆ ನೀಡಬೇಕೆಂಬ ವಿಚಾರದಲ್ಲಿ ಕಳೆದೊಂದು ವಾರದಿಂದ ಕಾಂಗ್ರೆಸ್ ನಾಯಕರ ನಡುವೆ ಚರ್ಚೆಗಳು ನಡೆಯುತ್ತಿವೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು ಶಿವಾಜಿನಗರದ ಟಿಕೆಟ್ ನ್ನು ರಿಜ್ವಾನ್ ಅರ್ಷದ್ ಅವರಿಗೆ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ರಿಜ್ವಾನ್ ಅರ್ಷದ್ ಅವರಿಗೆ ಎರಡು ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಈಗ ಮತ್ತೆ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡೋದು ಬೇಡ ಎಂದು ಮೂಲ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಒತ್ತಡ ಹಾಕಿದ್ದಾರೆ. ಸಲೀಂ ಅಹಮ್ಮದ್ ಅಥವಾ ಹುಸೇನ್‍ಗೆ ಟಿಕೆಟ್ ನೀಡುವಂತೆ ಮೂಲ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಯೊಂದು ವಿಚಾರದಲ್ಲಿ ಸಿದ್ದರಾಮಯ್ಯರದದೆ ಮೇಲುಗೈ ಏಕೆ? ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಿದ್ದರೂ ಅವರು ಗೆಲ್ಲಲಿಲ್ಲ. ಪದೇ ಪದೇ ಒಬ್ಬರಿಗೆ ಅವಕಾಶ ನೀಡೋದು ಸರಿ ಅಲ್ಲ. ಬೇರೆಯವರಿಗೂ ಅವಕಾಶ ನೀಡಬೇಕೆಂದು ಮೂಲ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಇಂದು ಲೋಕಸಮರದ ಮಹಾತೀರ್ಪು ಹೊರಬೀಳಲಿದೆ. ಯಾವ ಪಕ್ಷ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂದು ಇಡೀ ದೇಶವೇ ಕಾದು ಕೂತಿದೆ. ಈ ನಡುವೆ ಬೆಳ್ಳಂಬೆಳಗ್ಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಶಾಸಕ ರೋಷನ್ ಬೇಗ್ ವಿರುದ್ಧ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಾಜಿನಗರ ಶಾಸಕ ರೋಷನ್ ಬೇಗ್ ಮೇಲೆ ಕಿಡಿಕಾರಿದರು. ರೋಷನ್ ಬೇಗ್ ಅವರು ತಾನಿಲ್ಲದೇ ಇದ್ದರೆ ನಾನು ಗೆಲ್ಲೋಕೆ ಸಾಧ್ಯವಿಲ್ಲ ಅಂದುಕೊಂಡಿದ್ದಾರೆ. ಆದರೆ ನನಗೆ ಅವರದ್ದೇ ಕ್ಷೇತ್ರ ಶಿವಾಜಿನಗರದಲ್ಲಿ ಜನ ಬೆಂಬಲಿಸಿದ್ದಾರೆ. ಅವರು ತಾನೇ ದೊಡ್ಡ ಲೀಡರ್ ಅಂದ್ಕೊಂಡಿದ್ದಾರೆ. ನಾನು ಕನಿಷ್ಠ 50 ಸಾವಿರ ಬಹುಮತದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಜನ ಕೊಟ್ಟಿದ್ದಾರೆ ಎಂದು ಹೇಳಿದರು.
ಮೌಂಟ್ ಕಾರ್ಮೆಲ್ ಕಾಲೇಜ್‍ನಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತ ಏಣಿಕೆ ನಡೆಯುತ್ತಿದೆ. ಹೀಗಾಗಿ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೇರಿರುವ ಕೈ ಕಾರ್ಯಕರ್ತರು ಸದ್ಯ ಕೌಂಟಿಂಗ್ ಸೆಂಟರ್‍ಗೆ ಬಂದಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಎಲ್ಲ ಸಮಯದಲ್ಲಿ ಸತ್ಯವಾಗಲ್ಲ. ದೇಶದ ಪರ್ಸೆಂಟೆಜ್ ಲೆಕ್ಕದಲ್ಲಿ ಚುನಾವಣಾ ಸಮೀಕ್ಷೆ ಮಾಡಿದ್ದಾರೆ. ಕ್ಷೇತ್ರವಾರು ಸಮೀಕ್ಷೆ ಮಾಡಿಲ್ಲ. ಚುನಾವಣೋತ್ತರ ಸಮೀಕ್ಷೆಗಳೇ ನಿಜವಾದ್ರೆ ಚುನಾವಣೆ ಫಲಿತಾಂಶ ಯಾಕೆ ಬೇಕು ಎಂದು ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿದರು.
Rizwan Arshad,Congress candidate from Bangalore Central: Roshan Baig has tried to help the BJP& sabotage my campaign. But in his own constituency Shivaji Nagar, people have supported me overwhelmingly & blessed me. Workers of Congress party have defied his diktats & supported me. pic.twitter.com/eHyEZQa0UW
ಬೆಂಗಳೂರು: ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಶಿವಾಜಿನಗರದಲ್ಲಿ ಚುನಾವಣೆ ಎದುರಿಸಿ ಎಂದು ಶಾಸಕ ರೋಷನ್ ಬೇಗ್ ಅವರಿಗೆ ರಿಜ್ವಾನ್ ಅರ್ಷದ್ ಸವಾಲು ಎಸೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಿಜ್ವಾನ್ ಅರ್ಷದ್ ಅವರು, ರೋಷನ್ ಬೇಗ್ ಅವರು ಎಕ್ಸಿಟ್ ಪೋಲ್ ಬಗ್ಗೆ ಎಕ್ಸೈಟ್ ಆಗಿದ್ದಾರೆ. ಅವರು ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ. ಇದನ್ನೂ ಓದಿ:ವೇಣುಗೋಪಾಲ್ ಬಫೂನ್, ಸಿದ್ದರಾಮಯ್ಯ ಅಹಂಕಾರಿ ಎಂದ ಬೇಗ್‍ಗೆ ಶೋಕಾಸ್ ನೋಟಿಸ್
ಅವರು ಪಕ್ಷ ಮತ್ತು ನಾಯಕರ ಬಗ್ಗೆ ಮಾತನಾಡುವ ಮೊದಲು ತಮ್ಮ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಲಿ. ಈ ಹಿಂದೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದಾಗ ಏನೆಲ್ಲಾ ಮಾಡಿದ್ದಾರೆ ಅನ್ನೊದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ರೋಷನ್ ಬೇಗ್ ಕೆಲಸ ಮಾಡಿಲ್ಲ ಅಂತ ರಿಜ್ವಾನ್ ಟಾಂಗ್ ಕೊಟ್ಟಿದ್ದಾರೆ.
ಮೊಸಳೆ ಕಣ್ಣಿರು ಹಾಕುವುದನ್ನು ನಿಲ್ಲಿಸಿ. ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು ಶಿವಾಜಿನಗರದಲ್ಲಿ ಚುನಾವಣೆ ಎದುರಿಸಿ. ನಿಮಗೆ ಕಾಂಗ್ರೆಸ್ ಸರಿಯಿಲ್ಲ ಅಂತ ಹೇಳುವುದಾದರೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಎಂದು ರಿಜ್ವಾನ್ ಸವಾಲು ಎಸೆದಿದ್ದಾರೆ.
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಾಮಪತ್ರ ಸಲ್ಲಿಕೆಯ ವೇಳೆ ಅವರ ಬೆಂಬಲಿಗರು ಕೇಸರಿ ಪೇಟಾ ತೊಟ್ಟು, ಕುಂಕುಮ ಇಟ್ಟುಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಇಂದು ರಿಜ್ವಾನ್ ಅರ್ಷದ್ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಬೆಂಬಲಿಗರೊಂದಿಗೆ ಸಾಗುತ್ತಿದ್ದರು. ಈ ವೇಳೆ ಅವರ ಬೆಂಬಲಿಗರೇ ಕೇಸರಿ ಪೇಟ ಹಾಗೂ ಕೇಸರಿ ಕುಂಕುಮ ತೊಟ್ಟು ರ್ಯಾಲಿಯಲ್ಲಿ ಭಾಗಿಯಾಗಿದ್ದ ದೃಶ್ಯ ಕಂಡುಬಂದಿತ್ತು. ಬಿಜೆಪಿ ಮಾತ್ರ ಹಿಂದೂಗಳ ಧ್ವನಿಯಲ್ಲ, ಕಾಂಗ್ರೆಸ್ ಕೂಡ ಹಿಂದೂಗಳ ಪರವಿದೆ ಎಂದು ಸಂದೇಶ ಸಾರಲು ರಿಜ್ವಾನ್ ಅರ್ಷದ್ ಬೆಂಬಲಿಗರು ಕುಂಕುಮ, ಪೇಟಾ ಧರಿಸಿದ್ದರು.
ರಿಜ್ವಾನ್ ಅವರು ಕೇವಲ ಮುಸ್ಲಿಮರ ಪರವಾಗಿ ಮಾತ್ರ ಇರಲ್ಲ, ಹಿಂದೂಗಳ ಪರ ಕೂಡ ನಿಲ್ಲುತ್ತಾರೆ. ಇದರ ಸಂಕೇತವಾಗಿ ಕೇಸರಿ ಪೇಟಾ, ಕೇಸರಿ ಕುಂಕುಮ ತೊಟ್ಟಿದ್ದೇವೆ ಎಂದು ಹೇಳಿದ ರಿಜ್ವಾನ್ ಬೆಂಬಲಿಗರು ಕೇಸರಿ ಕೇವಲ ಬಿಜೆಪಿಯ ಸ್ವತ್ತಲ್ಲ ಎಂದು ಹೇಳಿ ಕಿಡಿಕಾರಿದರು.
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ಡಿಕೆಶಿ ಸೇರಿದಂತೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಸಿದ್ದಕ್ಕೆ ಕಾಂಗ್ರೆಸ್ ನಾಯಕರು ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರೆ, ಬಿಜೆಪಿ ನಾಯಕರು ಇದು ಸಹಜ ಪ್ರಕ್ರಿಯೆ ಎಂದು ದಾಳಿಯನ್ನು ಸಮರ್ಥಿಸಿದ್ದಾರೆ.
ಕೈ ನಾಯಕರ ಆರೋಪಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಸ್ವಾತಂತ್ರ್ಯ ಬಂದ 70 ವರ್ಷದಲ್ಲಿ 50 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಹಾಗೆಯೇ ದೇಶದಲ್ಲಿ ಐಟಿ ದಾಳಿಗಳು ಕಾಂಗ್ರೆಸ್ ಆಡಳಿತದ ಹಲವು ಬಾರಿ ಆಗಿದೆ. ಆ ಎಲ್ಲಾ ಐಟಿ ದಾಳಿಗಳು ಇದೇ ರೀತಿ ಅಂತ ಅಂದುಕೊಳ್ಳುವುದಾದರೆ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದವರು ಮಾತಾಡುವಂತಹ ಮಾತುಗಳು ಇವು. 2012ರಲ್ಲಿ ನಮ್ಮ ಸಂಬಂಧಿಕರನ್ನು ಗುರಿಯಾಗಿಸಿ ಐಟಿ ದಾಳಿ ನಡೆದಿದೆ. ಆ ಸಂದರ್ಭದಲ್ಲಿ ನಾನೇನು ಹೇಳಿಕೆ ನೀಡಲಿಲ್ಲ. ಲೋಕಸಭಾ ಉಪಚುನಾವಣೆ ಮುಂಚೆ ನನ್ನನ್ನೇ ಗುರಿಯಾಗಿಸಿ ಐಟಿ ದಾಳಿ ನಡೆಸಲಾಗಿತ್ತು. ಸಹಜ ಪ್ರಕ್ರಿಯೆ ಅಂತ ಅಂದುಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಕೈ ನಾಯಕರ ಆರೋಪ ಸುಳ್ಳು, ಬಿಜೆಪಿ ಮುಖಂಡ ಸಿದ್ದೇಶ್ವರ್ ಅವರ ನಿವಾಸ, ಕಂಪನಿ ಮೇಲೂ ದಾಳಿ ನಡೆದಿತ್ತು. ಆದಾಯ ಇಲಾಖೆಯ ದಾಳಿಯನ್ನು ಕಾಂಗ್ರೆಸ್ ರಾಜಕೀಯ ದಾಳಿ ಎಂದು ಆರೋಪಿಸುವುದು ಸರಿಯಲ್ಲ ಎಂದರು.
ಐಟಿ ದಾಳಿ ಮಾಡುವ ವೇಳೆ ನಾಯಕರ ಮನೆಯಲ್ಲಿ ಏನೂ ಸಿಕ್ಕಿಲ್ಲವೆಂದ್ರೆ ಬರೀಗೈಯಲ್ಲಿ ಹೋಗ್ತಾರೆ. ಸಿಕ್ಕಿದ್ರೆ ತಾನೇ ತೆರಿಗೆ ಕಟ್ಟಬೇಕಾಗಿರೋದು. ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಮಾತ್ರ ಭಯಪಡಬೇಕು. ತೆರಿಗೆ ವಂಚಿಸದವರ ಮನೆ ಮೇಲೆ 100 ಸಲ ಐಟಿ ದಾಳಿಯಾದ್ರೂ ಅವರು ತಲೆ ಕೆಡಿಸೋ ಅಗತ್ಯವಿಲ್ಲ ಎಂದು ಉತ್ತರಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಷ್ಟು ವರ್ಷ ಯಾರ ಕಣ್ಣಿಗೂ ಬೀಳದ ಈಗಲ್ ಟನ್ ರೆಸಾರ್ಟ್ ಮೇಲೆ ಈಗಲೇ ಯಾಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಅನ್ನೋ ಪಬ್ಲಿಕ್ ಟಿವಿ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಮ್ಮೆ ಕಾಕತಾಳೀಯವೂ ಇರಬಹುದು, ಸೊಹ್ರಾಬುದ್ದೀನ್ ಎನ್ ಕೌಂಟರ್ ನಲ್ಲಿ ಸಿಬಿಐ ಒಂದು ರಾಜ್ಯದ ಗೃಹ ಸಚಿವ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕೇಸ್ ಹಾಕಿರೋದು ಅದು ರಾಜಕೀಯ ಪ್ರೇರಿತವಾಗಿದ್ದು, ಐಟಿ ಅಲ್ಲ. ಅದಕ್ಕೆ ನಾಚಿಕೆಯಿಂದ ತಲೆ ತಗ್ಗಿಸದೇ ಇರೋ ಜನ ಆಡಳಿತ ವ್ಯವಸ್ಥೆಲ್ಲಿರೋ ಒಂದು ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದು ನಾಚಿಕೆಗೇಡಿನ ಸಂಗತಿ ಅಂತ ಹೇಳಿದ್ದಾರೆ.
ಕಾಂಗ್ರೆಸ್‍ನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಇದು ನಿಶ್ಚಿತವಾಗಿಯೂ ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಸಿಟಿ ರವಿ ಕೇಸರಿ, ಕನ್ನಡಕ ತೆಗೆದು ಮಾತನಾಡಿದಾಗ ಅವರಿಗೆ ಗೊತ್ತಾಗುತ್ತದೆ. ಇಡೀ ದೇಶದಲ್ಲಿ ಅವರ ಸರ್ಕಾರ ಬಂದ ಬಳಿಕ ವಿರೋಧ ಪಕ್ಷದ ನಾಯಕರ ಮೇಲೆ ಐಟಿ ದಾಳಿಗಳು ಆಗಿದೆ. ಇತ್ತೀಚೆಗೆ ದೇಶದಲ್ಲಿ ನಡೆದಂತಹ ದಾಳಿಗಳಲ್ಲಿ ಎಷ್ಟು ಬಿಜೆಪಿ ಹಾಗೂ ಬೇರೆ ಪಕ್ಷದ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ ಎಂಬುವುದನ್ನು ನೋಡಿ. ಈಗಲೇ ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿ ಅದರಲ್ಲೂ ಶಾಸಕರು ಉಳಿದಿದ್ದ ರೂಮ್ ನ್ನು ಪರಿಶೀಲನೆ ನಡೆಸಬೇಕು ಅಂದ್ರೆ ಏನು ಅರ್ಥ ಅಂತ ಅವರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳ ಮನೆ ಮೇಲೆ ದಾಳಿ ನಡೆಯುತ್ತದೆ. ಯಾಕಂದ್ರೆ ಐಟಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರುತ್ತೆ. ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವ ಮನೋಭಾವನೆಯೇ ಕೈ ನಾಯಕರದ್ದು. ಇವರಿಗೆ ದೇಶ ಕಟ್ಟುವ ಮನೋಭಾವನೆ ಅಲ್ಲ ಬದಲಾಗಿ ರಾಜಕೀಯ ದೃಷ್ಟಿಯಿಂದ ಎಲ್ಲವನ್ನೂ ಆಲೋಚನೆ ಮಾಡುವ ದೃಷ್ಟಿ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತೆ ಅಂತ ಹೇಳಿದ್ರು.