Tag: rizwan arshad

  • ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಮಾಡಿ ಅಂತಾ ಶಿಫಾರಸು ಮಾಡ್ತೇನೆ: ರಿಜ್ವಾನ್ ಅರ್ಷದ್

    ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಮಾಡಿ ಅಂತಾ ಶಿಫಾರಸು ಮಾಡ್ತೇನೆ: ರಿಜ್ವಾನ್ ಅರ್ಷದ್

    ಬೆಂಗಳೂರು: ನಾನು ನಾಳೆಯೇ ಶಿವಾಜಿನಗರ (Shivajinagar) ಸೇಂಟ್ ಮೇರಿಸ್ (St Mary) ಮೆಟ್ರೋ ನಿಲ್ದಾಣ ಮಾಡಿ ಎಂದು ಶಿಫಾರಸು ಮಾಡುತ್ತೇನೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ (Rizwan Arshad) ಹೇಳಿದ್ದಾರೆ.

    ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು ಇಡುವ ವಿಚಾರವಾಗಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಇನ್ನೂ ಶಿಫಾರಸು ಮಾಡಿಲ್ಲ. ಮೊನ್ನೆ ತಾನೇ ಶಿವಾಜಿನಗರ ಹಾಗೂ ಕ್ರೈಸ್ತ ಸಮುದಾಯದ ಬಹಳಷ್ಟು ಜನ ಮನವಿ ಮಾಡಿದ್ದಾರೆ. ಸೇಂಟ್ ಮೇರಿ ಮೆಟ್ರೋ ನಿಲ್ದಾಣ ಅಂತಾ ನಾಮಕರಣ ಮಾಡಿ ಅಂತಾ ಕೇಳಿಕೊಂಡಿದ್ದಾರೆ. ಆಗ ಸಿಎಂ ಸ್ಥಳೀಯ ಶಾಸಕರು ಏರಿಯಾ ಜನರಿಗೆ ಮಾತನಾಡಿ ಶಿಫಾರಸು ಕೊಡಲಿ. ಆ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿಕೊಡುತ್ತೇನೆ ಎಂದಿದ್ದಾರೆ. ನಾನು ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಎಂದು ಮಾಡಿ ಅಂತ ಶಿಫಾರಸು ಮಾಡುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನ ಶಿವಾಜಿನಗರ ಮೆಟ್ರೋ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸಿಎಂ ವಿರೋಧ

    ಶಿವಾಜಿನಗರ ಅನ್ನೋ ಹೆಸರು ತೆಗೆಯುತ್ತಿಲ್ಲ. ಶಿವಾಜಿ ಮಹಾರಾಜ ಗ್ರೇಟ್ ಮ್ಯಾನ್. ಇವರೆಲ್ಲಾ ಬಂದು ಅವರ ಹೆಸರು ಕಾಪಾಡಬೇಕಾ? ಶಿವಾಜಿನಗರ ಐತಿಹಾಸಿಕ ಪ್ರದೇಶ, ನನಗೆ ಹೆಮ್ಮೆಯಿದೆ. ಶಿವಾಜಿನಗರ-ಸೇಂಟ್ ಮೇರಿಸ್ ಬೆಸಿಲಿಕಾ ಅಂತಾ ಹೆಸರಲ್ಲಿದೆ. ಶಿವಾಜಿನಗರದಲ್ಲಿ ಎರಡು-ಮೂರು ಮೆಟ್ರೋ ನಿಲ್ದಾಣಗಳಿವೆ. ಒಂದು ಶಿವಾಜಿನಗರ-ಬೊಂಬು ಬಜಾರ್, ಇನ್ನೊಂದು ಶಿವಾಜಿ ನಗರ-ಸೇಂಟ್ ಬೆಸಲಿಕಾ ಅಂತಾ ಬರಲಿದೆ. ಬಾಲಗಂಗಾಧರ ಸ್ವಾಮೀಜಿ ಹೆಸರು ಸಹ ಇದೆ. ಜನ ಕೂಡಾ ಅದೇ ಹೇಳಿದ್ದಾರೆ. ಎರಡು-ಮೂರು ಸ್ಟೇಷನ್ ಇರುವುದರಿಂದ ಗುರುತಿಗಾಗಿ ಹೇಳಿದ್ದೇವೆ. ಸೇಂಟ್ ಬೆಸಲಿಕಾ ಮೆಟ್ರೋ ಸ್ಟೇಷನ್ ಹೆಸರಿಗೆ ವಿರೋಧ ಮಾಡೋರು ಯಾರೂ ಶಿವಾಜಿನಗರದಲ್ಲಿ ಇರೋದಿಲ್ಲ. ಎಷ್ಟು ವಿರೋಧ ಮಾಡುತ್ತಾರೋ ಅಷ್ಟು ಜೋರಾಗಿ ಶಿಫಾರಸು ಮಾಡುತ್ತೇನೆ. ನಾಳೆಯೇ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಉತ್ತರಾಖಂಡಕ್ಕೆ ಮೋದಿ ಭೇಟಿ – 1,200 ಕೋಟಿ ನೆರವು ಘೋಷಣೆ

  • ವಿಜಯೇಂದ್ರಗೆ ಏನು ಸಮಸ್ಯೆ? ಇದು ಮುಸ್ಲಿಂ ಓಲೈಕೆ ಹೇಗಾಗುತ್ತೆ: ರಿಜ್ವಾನ್

    ವಿಜಯೇಂದ್ರಗೆ ಏನು ಸಮಸ್ಯೆ? ಇದು ಮುಸ್ಲಿಂ ಓಲೈಕೆ ಹೇಗಾಗುತ್ತೆ: ರಿಜ್ವಾನ್

    ಬೆಂಗಳೂರು: ವಿಜಯೇಂದ್ರಗೆ ಏನು ಸಮಸ್ಯೆ? ಇದು ಮುಸ್ಲಿಂ ಓಲೈಕೆ ಹೇಗಾಗುತ್ತದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು ಬಿವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮಗೇನು ಸಮಸ್ಯೆ? ಇದು ಓಲೈಕೆ ಹೇಗಾಗುತ್ತದೆ. ಅಲ್ಪಸಂಖ್ಯಾತರು ಈ ಸಮಾಜದಲ್ಲಿ ಬದುಕ್ತಿಲ್ಲವಾ? ನಾವು ಮುಖ್ಯ ವಾಹಿನಿಗೆ ಬರೋದು ಬೇಡ್ವಾ? ಎಂದು ಖಾರವಾಗಿ ಪ್ರಶ್ನಿಸಿದರು.ಇದನ್ನೂ ಓದಿ: ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಮ್ಮ ಪಕ್ಷ. ಎಸ್ಸಿ, ಎಸ್ಟಿ ಮತ್ತು ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದೀವಿ. ಅಲ್ಪಸಂಖ್ಯಾತ, ಸಣ್ಣ ಗುತ್ತಿಗೆದಾರರಿಗೆ ಮೀಸಲಾತಿ ಕೊಡಿ ಎಂದು ಕೇಳಿದ್ದೆವು. ಸರ್ಕಾರ ಕೊಟ್ಟರೆ ಸ್ವಾಗತ ಮಾಡುತ್ತೇವೆ. ಇದು 1 ಕೋಟಿ ರೂ.ವರೆಗಿನ ಗುತ್ತಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.

    ಇದಕ್ಕೂ ಮುನ್ನ ಮಾತನಾಡಿದ್ದ ಬಿವೈ ವಿಜಯೇಂದ್ರ, ಕಾಂಗ್ರೆಸ್‌ನವರ ಯೋಗ್ಯತೆಗೆ ಕಳೆದ 20 ತಿಂಗಳಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ. ಆದರೆ ಎಲ್ಲಿಯಾದರೂ ಕೆಲಸದ ಟೆಂಡರ್ ಕರೆದಿದ್ದಾರಾ? ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ಇಲ್ಲ, ಆದರೆ ಸರ್ಕಾರಿ ಗುತ್ತಿಗೆಯಲ್ಲಿ 4% ಮುಸ್ಲಿಂ ಮೀಸಲಾತಿ ನೀಡಲು ಹೊರಟಿದ್ದಾರೆ, ಬೇರೆಯವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ ಎಂದು ಕಿಡಿಕಾರಿದರು.

    ಸಿಎಂ ನೀವೂ ಅಹಿಂದಾ ನಾಯಕರೇ ಆಗಿದ್ರೆ, ಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಲು ಪ್ರೋತ್ಸಾಹ ನೀಡಬೇಕಿತ್ತು. ಸವಿತಾ ಸಮಾಜ, ಗುಡಿಕೈಗಾರಿಕೆಗೆ ಆರ್ಥಿಕ ಬೆಂಬಲ ನೀಡಬೇಕಿತ್ತು. ಅದರ ಹೊರತಾಗಿ ಈಗ ಮುಸ್ಲಿಮರಿಗೆ ಕೊಡಲು ಹೊರಟಿದ್ದಾರೆ. ಇವರಿಗೆ ಜನರೇ ಉತ್ತರ ಕೊಡಬೇಕು. ಇವರು ಬಂಡರಿದ್ದಾರೆ, ದಪ್ಪ ಚರ್ಮದವರು. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡ್ತೀವಿ, ಹೋರಾಟ ಮಾಡ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಸಾಧುಕೋಕಿಲ ನನ್ನನ್ನು ಆಹ್ವಾನಿಸಿಲ್ಲ, ಮಾತು ಸರಿಯಾಗಿ ಆಡಲ್ಲ: ಟೆನ್ನಿಸ್ ಕೃಷ್ಣ

     

  • ರಮ್ಯಾ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡ್ಲಿ ಅನ್ನೋ ನಲಪಾಡ್ ಹೇಳಿಕೆ ಸರಿಯಲ್ಲ: ರಿಜ್ವಾನ್ ಅರ್ಷದ್

    ರಮ್ಯಾ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡ್ಲಿ ಅನ್ನೋ ನಲಪಾಡ್ ಹೇಳಿಕೆ ಸರಿಯಲ್ಲ: ರಿಜ್ವಾನ್ ಅರ್ಷದ್

    ಬೆಂಗಳೂರು: ಮಾಜಿ ಸಂಸದೆ ರಮ್ಯಾ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡಲಿ ಎಂದು ನಲಪಾಡ್ ಹೇಳಿರುವುದು ಸರಿಯಲ್ಲ ಎಂದು ಹೇಳುವ ಮೂಲಕ ಸ್ಯಾಂಡಲ್‍ವುಡ್ ಕ್ವೀನ್ ಪರ ಶಾಸಕ ರಿಜ್ವಾನ್ ಅರ್ಷದ್ ಬ್ಯಾಟ್ ಬೀಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಮ್ಯಾ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಮ್ಯಾ ಒಳ್ಳೆಯ ನಟಿ, ಸಂಸದೆಯಾಗಿರೋರು. ಅವರ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡಲಿ ಅನ್ನುವ ನಲಪಾಡ್ ಹೇಳಿಕೆ ಸರಿಯಲ್ಲ. ಈ ರೀತಿ ಸಾರ್ವಜನಿಕ ಹೇಳಿಕೆ ಕೊಡೋದು ಸರಿಯಲ್ಲ ಎಂದಿದ್ದಾರೆ.

    ಪಕ್ಷದೊಳಗೆ ಕಾಲೆಳೆಯುವ ಬಗ್ಗೆ ರಮ್ಯಾ ಹೇಳಿರೋದು ರಾಜಕೀಯವೇ ಹೀಗೆ ಏನು ಮಾಡೋದು..? ಬೆಳೆಯೋವಾಗ ಇದೆಲ್ಲ ಸಹಜ ಪ್ರಕ್ರಿಯೆ. ಬೆಲೆಯೇರಿಕೆ ಬಗ್ಗೆ ಟ್ವೀಟ್ ಮಾಡೋಣ ಬಿಡಿ ಎಂದು ನನ್ನ ಕಾಂಗ್ರೆಸ್ ಮಿತ್ರರಿಗೂ ಇದನ್ನೇ ಹೇಳುವೆ ಎಂದರು. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

    ಬಿಜೆಪಿ ನಮ್ಮ ಆಂತರಿಕ ಸಂಘರ್ಷದ ಬಗ್ಗೆ ಮಾತಾನಾಡುವ ಮುನ್ನ ಯತ್ನಾಳ್ ಬಗ್ಗೆ ಯೋಚಿಸಲಿ. 2,500 ಕೋಟಿ ಕೊಟ್ಟಿದ್ರೇ ನಾನು ಸಿಎಂ ಆಗ್ತಿದೆ ಅಂತಾ ಯತ್ನಾಳ್ ಹೇಳಿದ್ದಾರೆ. ಒಂದು ನೋಟಿಸ್ ಕೊಟ್ಟಿಲ್ಲ. ಇದರ ಬಗ್ಗೆ ಬಿಜೆಪಿ ತನಿಖೆ ಮಾಡಲಿ ಎಂದು ಸವಾಲೆಸೆದಿದ್ದಾರೆ.

  • ಮುತಾಲಿಕ್ ಕೆಲವು ರಾಜಕಾರಣಿಗಳ ಏಜೆಂಟ್: ರಿಜ್ವಾನ್ ಅರ್ಷಾದ್ ಕಿಡಿ

    ಮುತಾಲಿಕ್ ಕೆಲವು ರಾಜಕಾರಣಿಗಳ ಏಜೆಂಟ್: ರಿಜ್ವಾನ್ ಅರ್ಷಾದ್ ಕಿಡಿ

    ಬೆಂಗಳೂರು: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೆಲವು ರಾಜಕಾರಣಿಗಳ ಏಜೆಂಟ್. ಅವರು ಹಿಂದೂ ಪರ ಅಲ್ಲ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷಾದ್ ಕಿಡಿಕಾರಿದರು.

    ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಜ ವಿಚಾರಗಳನ್ನು ಮುಚ್ಚಿ ಹಾಕಲು ಕೆಲವರು ಏಜೆಂಟ್ ಮೂಲಕ ಹಿಂದುತ್ವ ಎಂದು ಶುರು ಮಾಡಿದ್ದಾರೆ. ಮುಸ್ಲಿಂ ಚಿನ್ನದ ಅಂಗಡಿಗಳಿಂದ ಚಿನ್ನ ಖರೀದಿ ಮಾಡಬಾರದು ಅಂತಾ ಫರ್ಮಾನು ಹೊರಡಿಸಿದ್ದಾರೆ. ಹಾಗಾದ್ರೆ ಮುಸ್ಲಿಂ ಸೇವಿಸಿದ ಗಾಳಿ ಹಿಂದೂ ಸೇವನೆ ಮಾಡಬಾರದು. ಮುಸ್ಲಿಂಗೆ ಬೇರೆ ಬಿಸಿಲು, ಹಿಂದೂಗೆ ಬೇರೆ ಬಿಸಿಲು ಅಂತಿದ್ದೀಯಾ? ಮುಸ್ಲಿ ರಕ್ತ ಕೆಂಪು, ಹಿಂದೂ ರಕ್ತ ಬೇರೆ ಏನಾದರೂ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.

    ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದುತ್ವ ಪರ ಮಾತನಾಡುವವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಏನ್ ಮಾಡಲು ಹೊರಟಿದ್ದಾರೆ ಇವರು? ತಲೆಗಿಲೆ ಕೆಟ್ಟಿದ್ದೀಯಾ? ಮುತಾಲಿಕ್‍ಗೆ ಬಿಸಿಲು ಜಾಸ್ತಿ ಆಗಿದೆ ಎಂದು ಕಿಡಿಕಾರಿದರು. ಅವರು ಹಿಂದೂ ಪರ ಅಲ್ಲ. ಹಿಂದುತ್ವಪರ. ಹಿಂದೂ ಧರ್ಮ ವಿಶಾಲವಾದ ಧರ್ಮ, ಸಹಿಷ್ಣುತೆ ಇರುವ ಧರ್ಮ. ಆದ್ರೆ ರಾಜಕಾರಣಿಗಳಿಗೆ ಇವರು ಏಜೆಂಟ್ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹಿಂದೂ, ಮುಸ್ಲಿಂ ಭಾವೈಕ್ಯತೆಯ ಹಬ್ಬ – ಇಡೀ ಗ್ರಾಮದ ಆರಾಧ್ಯ ದೈವರಾದ ಜಮಾಲ್ ಮೌಲ್ವಿ 

    ನೈಜ ಸಮಸ್ಯೆ ಬಗ್ಗೆ ಚರ್ಚೆ ಮಾಡಬಾರದು ಅಂತೇಳಿ ಮುತಾಲಿಕ್ ಬಿಟ್ಟಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವ ಹುನ್ನಾರ ಇದು. ಈ ರೀತಿ ಪೋಲಿ ಪುಡಾರುಗಳಿಂದ ಹಿಂದೂ, ಮುಸ್ಲಿಂ ಬೇರೆ-ಬೇರೆ ಮಾಡಲು ಸಾಧ್ಯವಿಲ್ಲ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು. ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಹಿಂದುತ್ವ ಪರ ಸಂಘಟನೆಗಳಿಗೆ ಗುತ್ತಿಗೆ ಕೊಟ್ಟಿದೆ. ಸರ್ಕಾರ ಇದೆಯಾ ಇವತ್ತು? ಎಲ್ಲ ನೇಮಕಾತಿಗಳಲ್ಲೂ ಹಗರಣಗಳು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿಎಂ ಬೊಮ್ಮಾಯಿ ಕಂಟ್ರೋಲ್‍ನಲ್ಲಿ ಅಧಿಕಾರ ನಡೆಸಲು ಆಡಳಿತ ಇದೆಯಾ? ಜಾತ್ರೆಯಲ್ಲಿ ಯಾರೂ ಬೇಕಾದ್ರೂ ಏನ್ ಬೇಕಾದ್ರೂ ಮಾಡಬಹುದು ಅನ್ನುವಂತಿದೆ. ದೇವರು ರಾಜ್ಯದ ಜನರನ್ನು ಕಾಪಾಡುತ್ತಾನೆ. ಮುಸ್ಲಿಂ ದೇಶಗಳಲ್ಲಿ ಬೇರೆ ಬೇರೆ ಸಮುದಾಯದವರು ಹೋಗಿ ದುಡಿಯುತ್ತಿದ್ದಾರೆ. ಹಿಂದೂಪರ, ಮುಸ್ಲಿಂ ಸಂಘಟನೆಗಳು ಏಕೆ ಇರಬೇಕು? ನಮ್ಮನ್ನ ಕಾಪಾಡಲು ಸಂವಿಧಾನ ಇಲ್ಲವಾ?, ವ್ಯವಸ್ಥೆ ಇಲ್ಲವಾ? ಎಂದು ಪ್ರಶ್ನೆ ಮಾಡಿದರು.

    ಇದು ರಾಜಕಾರಣ, ಮುಂದಿನ ವರ್ಷ ಚುನಾವಣೆ ಇದೆ. ಜನರ ಬಳಿ ಅಭಿವೃದ್ಧಿ ಏನು ಅಂತಾ ಹೇಳಲು ಆಗಲ್ಲ. ಅದಕ್ಕೆ ಈ ಗಲಾಟೆ ಮಾಡಿಸ್ತಿದ್ದಾರೆ. ಜನರ ಹೆಣದ ಮೇಲೆ ರಾಜಕೀಯ ಮಾಡ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧವೂ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಮಳೆಹಾನಿ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕು: ಬಿ.ಸಿ.ಪಾಟೀಲ್ 

  • ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್

    ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್

    ಬೆಂಗಳೂರು: ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ನಿಷೇಧ ಬ್ಯಾನರ್ ಹಾಕುವ ಮೂಲಕ ಸರ್ಕಾರವೇ ಚುನಾವಣಾ ದೃಷ್ಟಿಯಿಂದ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಇಲ್ಲಾ ಅನ್ನೋ ಬ್ಯಾನರ್ ಹಾಕಿದ್ದಾರೆ. ಬಜರಂಗದಳದವರು ಎಲ್ಲಾ ಮಳಿಗೆಯನ್ನು ಪಡೆದುಕೊಂಡಿದ್ದಾರೆ. ಇದೆಲ್ಲಾ ರಾಜಕೀಯ ಉದ್ದೇಶಕ್ಕೆ ಆಗುತ್ತಿದೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ತಮ್ಮ ಸಹ ಸಂಘಟನೆಗಳ ಮೂಲಕ ಇದನ್ನು ಮಾಡಿಸುತ್ತಿದ್ದಾರೆ. ಸಂವಿಧಾನವೇ ನಮಗೆ ಎಲ್ಲಾ ಎಂದು ಅಧಿಕಾರಕ್ಕೆ ಬಂದವರು, ಈಗ ಇದನ್ನೆಲ್ಲಾ ನೋಡಿಕೊಂಡು ಮೌನವಾಗಿರುವುದು ನೋಡಿದರೆ ಎಲ್ಲಾ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಮಾರಿಕಾಂಬಾ ದೇವಸ್ಥಾನ ಕಟ್ಟಿಸಿದವನು ಒಬ್ಬ ಮುಸ್ಲಿಂ ಸೈನಿಕ. 1740ರಲ್ಲಿ ಮುಸ್ಲಿಂ ಸೈನಿಕನ ಕನಸಿನಲ್ಲಿ ಮಾರಿಕಾಂಬೆ ಬಂದು ದೇವಸ್ಥಾನ ಕಟ್ಟಲು ಹೇಳಿದಾಗ ದೇವಸ್ಥಾನ ನಿರ್ಮಾಣ ಆಗಿದ್ದು. ಅದು ನಿಜವಾದ ಸಾಮರಸ್ಯ. ಬಪ್ಪನಾಡು ದೇವಸ್ಥಾನ ಕಟ್ಟಿದ್ದು ಬಪ್ಪ ಬ್ಯಾರಿ ಎಂದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ಬ್ಯಾನರ್ ಹಾಕಿದವರು ಹೇಡಿಗಳು: ಖಾದರ್

    ಇಂದಿಗೂ ಬಪ್ಪ ಬ್ಯಾರಿ ವಂಶಸ್ಥರಿಂದ ಎಣ್ಣೆ ತಂದ ಮೇಲೆ ಪೂಜೆ ಪ್ರಾರಂಭವಾಗುತ್ತದೆ. ಇಂತಹ ಸಾಮರಸ್ಯಕ್ಕೆ ಇವರು ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ

  • ಡಿಜೆ ಹಳ್ಳಿ ಗಲಭೆ- ಇಬ್ಬರು ಶಾಸಕರನ್ನ ವಿಚಾರಣೆ ನಡೆಸಿದ ಎನ್‍ಐಎ

    ಡಿಜೆ ಹಳ್ಳಿ ಗಲಭೆ- ಇಬ್ಬರು ಶಾಸಕರನ್ನ ವಿಚಾರಣೆ ನಡೆಸಿದ ಎನ್‍ಐಎ

    ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎನ್‍ಐಎ ಇಬ್ಬರು ಕಾಂಗ್ರೆಸ್ ಶಾಸಕರನ್ನು ವಿಚಾರಣೆಗೆ ಒಳಪಡಿಸಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಇಬ್ಬರು ಎನ್‍ಐಎ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆಯನ್ನ ದಾಖಲಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಾಗ ಇಬ್ಬರು ಶಾಸಕರು ಘಟನಾ ಸ್ಥಳದಲ್ಲಿರುವ ಬಗ್ಗೆ ಎನ್‍ಐಎಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಎನ್‍ಐಎ ಇಬ್ಬರನ್ನು ಬೆಂಗಳೂರಿನ ದೊಮ್ಮಲೂರಿನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಮಂಗಳವಾರ ಜಮೀರ್ ಅಹ್ಮದ್ ಮತ್ತು ಸೋಮವಾರ ರಿಜ್ವಾನ್ ಅರ್ಷದ್ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

    ಜಮೀರ್ ಅಹ್ಮದ್ ಅವರನ್ನು ಸುಮಾರು 20 ನಿಮಿಷ ಮತ್ತು ರಿಜ್ವಾನ್ ಅರ್ಷದ್ ಅವರನ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಎನ್‍ಐಎ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಅಂದು ಗಲಭೆ ಸ್ಥಳಕ್ಕೆ ನೀವು ಹೋಗಿದ್ಯಾಕೆ? ಗಲಭೆ ಬಗ್ಗೆ ನಿಮಗೆ ಹೇಗೆ ಗೊತ್ತಾಯ್ತು? ಇದು ಪೂರ್ವ ನಿಯೋಜಿತ ಅಂತ ನಿಮಗೆ ಅನ್ನಿಸಿದೆಯಾ? ಉದ್ರಿಕ್ತರು ನಿಮ್ಮ ಮಾತು ಆಲಿಸುವ ಸೌಜನ್ಯ ತೋರಿಸಿದ್ರಾ? ಗಲಭೆ ಕೋರರನ್ನ ಕುರಿತು ಏನು ಹೇಳಿದಿರಿ ಎಂದು ಪ್ರಶ್ನೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಡಿ.ಜೆ. ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಿಸಿಬಿ ಕೋರ್ಟ್ ಗೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿನ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಜೀವಂತ ದಹನಕ್ಕೆ ಸಂಚು ನಡೆದಿತ್ತು ಎಂಬ ವಿಚಾರ ಬಯಲಾಗಿದೆ. ಡಿ.ಜೆ. ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್-ಎಸ್‍ಡಿಪಿಐ ಪಾತ್ರವಿರೋ ಬಗ್ಗೆ ಚಾರ್ಜ್‍ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

    ಮುಸ್ಲಿಂ ಬಾಹುಳ್ಯದ ತಿಲಕ್‍ನಗರ, ಚಾಮರಾಜಪೇಟೆ, ಗೋರಿಪಾಳ್ಯದ ಪುಂಡ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿಸಿದ್ದಾರೆ. ಅಖಂಡ ಮನೆಗೆ ಬೆಂಕಿ ಬಿದ್ದಾಗ, ಕೇವಲ 100 ಮೀಟರ್ ದೂರದಲ್ಲಿ ಇರುವ ಸಂತೋಷ್ ನಿವಾಸದಲ್ಲಿ ಸಂಪತ್ ರಾಜ್ ಇದ್ದರು. ಅಸಲಿಗೆ ಗಲಭೆಗೆ ಫಂಡಿಂಗ್ ಮಾಡಿದ್ದೇ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್.

    ಗಲಭೆ ನಡೆಸಲು ಬಂದಿದ್ದ ಪುಂಡರಿಗೆ ಸಂಪತ್ ರಾಜ್ ಫ್ರೀಯಾಗಿ ಸಂಪತ್ ರಾಜ್ ಪೆಟ್ರೋಲ್ ಕೊಡಿಸಿದ್ರು. ಇದರ ಜವಾಬ್ದಾರಿಯನ್ನು ಅರುಣ್ ವಹಿಸಿಕೊಂಡಿದ್ದನು. ಕಾವಲ್ ಬೈರಸಂದ್ರದ ಬಸ್ ನಿಲ್ದಾಣದಲ್ಲೇ ಹಣ ಕೂಡ ಹಂಚಲಾಗಿತ್ತು ಎಂಬುದಕ್ಕೆ ದೃಶ್ಯ ಸಾಕ್ಷ್ಯ ಸಮೇತ ಸಿಸಿಬಿ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್‍ಶೀಟ್ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಟ್ಯಾನರಿ ರೋಡ್‍ನ ಸಂಪತ್ ರಾಜ್ ನಿವಾಸದೆದರು ಪ್ರತಿಭಟನೆ ನಡೆಸಿದರು. ಸಂಪತ್ ರಾಜ್, ಜಾಕೀರ್ ಬಂಧಿಸುವಂತೆ ಒತ್ತಾಯಿಸಿದರು.

  • ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಿದೆ: ರಿಜ್ವಾನ್ ಅರ್ಷದ್

    ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಿದೆ: ರಿಜ್ವಾನ್ ಅರ್ಷದ್

    ರಾಯಚೂರು: ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಾ ಇದೆ. ಕಪ್ಪು ಹಣ ವಾಪಸ್ ತರುತ್ತೇನೆ ಎಂದವರು ಕಪ್ಪು ಹಣದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ರಿಜ್ವಾನ್ ಅರ್ಷದ್, ಅರಣ್ಯ ಒತ್ತುವರಿಗಾಗಿ ಆನಂದ್ ಸಿಂಗ್‍ರ ವಿರುದ್ಧ 15 ಕೇಸ್ ಗಳು ದಾಖಲಾಗಿವೆ. ಅವರಿಗೇ ಅರಣ್ಯ ಖಾತೆ ನೀಡುತ್ತಿದ್ದಾರೆ. ಈ ಡ್ರಾಮಾ, ಈ ಹಣದ ವ್ಯವಹಾರ ಎಲ್ಲವೂ ಹೊರಗೆ ಬರುತ್ತದೆ. ಜನರು ಎಲ್ಲವನ್ನು ನೋಡುತ್ತಿದ್ದಾರೆ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು.

    ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಸದನದಲ್ಲಿ ಧ್ವನಿ ಎತ್ತುತ್ತೇವೆ. ಕಾಯ್ದೆ ಮೀರಿ ಸಾಲ ಪಡೆದು ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ರೀತಿಯಾಗಿ ಸಾಲ ಪಡೆದು ಬಜೆಟ್ ಮಂಡನೆ ಮಾಡಬಾರದೆನ್ನುವುದು ನಮ್ಮ ನಿಲುವು. ಕೇಂದ್ರ ಸರ್ಕಾರದಿಂದ 30 ಸಾವಿರ ಕೋಟಿ ಕಡಿಮೆ ಬರುತ್ತಿದೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯಕ್ಕೆ 30 ಸಾವಿರ ಕೋಟಿ ವಂಚನೆ ಮಾಡಿದ್ದರ ಬಗ್ಗೆ ನಾವು ತೀವ್ರವಾಗಿ ಪ್ರತಿಭಟನೆ ಮಾಡುತ್ತೇವೆ. ಅಲ್ಲಿಂದ ಕಡಿಮೆ ದುಡ್ಡು ಸಿಕ್ಕಿದೆ ಎಂದು ಇಲ್ಲಿನ ಜನರ ಮೇಲೆ ಹೊರೆ ಹಾಕೋದು ಸರಿಯಲ್ಲ ಎಂದು ರಿಜ್ವಾನ್ ವಾಗ್ದಾಳಿ ಮಾಡಿದರು.

  • ಒಂದು ಎಂಎಲ್‍ಸಿ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ

    ಒಂದು ಎಂಎಲ್‍ಸಿ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ

    ಬೆಂಗಳೂರು: ಖಾಲಿ ಇರುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಇಬ್ಬರು ನಾಯಕರ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಅನರ್ಹ ಶಾಸಕ ಶಂಕರ್ ಮತ್ತು ಡಿಸಿಎಂ ಲಕ್ಷ್ಮಣ ಸವದಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ಶತಾಯಗತಾಯ ಶಾಸಕರಾಗಲು ಕಸರತ್ತು ಪ್ರಾರಂಭ ಮಾಡಿದ್ದಾರೆ.

    ಅನರ್ಹರಾಗಿ ಉಪಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರವನ್ನು ಬಿಜೆಪಿ ಸೂಚಿಸಿದ ಅಭ್ಯರ್ಥಿಗೆ ಆರ್.ಶಂಕರ್ ಬಿಟ್ಟುಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಶಂಕರ್ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಶಿವಾಜಿನಗರದಿಂದ ಆಯ್ಕೆ ಆಗಿರುವ ರಿಜ್ವಾನ್ ಅರ್ಷದ್ ಅವರಿಂದ ಖಾಲಿಯಾಗಿರುವ ಸ್ಥಾನವನ್ನು ನನಗೆ ನೀಡಿ ಎಂದು ಸಿಎಂಗೆ ಶಂಕರ್ ದುಂಬಾಲು ಬಿದ್ದಿದ್ದಾರೆ. ಸಿಎಂ ಅವರನ್ನು ಭೇಟಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಿ ಅಂತ ಆರ್. ಶಂಕರ್ ಒತ್ತಡ ಹಾಕಿದ್ದಾರೆ.

    ಹೈಕಮಾಂಡ್ ಕೃಪಾಕಟಾಕ್ಷದಿಂದ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡ ಲಕ್ಷ್ಮಣ ಸವದಿ ಯಾವುದೇ ಮನೆಯ ಸದಸ್ಯರಲ್ಲ. ಈಗಾಗಲೇ ಬಹುತೇಕ 4 ತಿಂಗಳು ಕಳೆದು ಹೋಗಿದೆ. ಇನ್ನು ಎರಡು ತಿಂಗಳಲ್ಲಿ ಸವದಿ ಪರಿಷತ್ ಸದಸ್ಯರಾಗದೇ ಹೋದರೆ ಡಿಸಿಎಂ ಸ್ಥಾನ ಹೋಗುತ್ತದೆ. ಉಪ ಚುನಾವಣೆಯಲ್ಲಿ ಕೊಟ್ಟ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿರುವ ಸವದಿ, ಪರಿಷತ್ ಸದಸ್ಯರಾಗಿ ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ಸಿಎಂಗೆ ದುಂಬಾಲು ಬಿದ್ದಿದ್ದಾರೆ.

    ಶಂಕರ್ ಮತ್ತು ಸವದಿ ಒತ್ತಡದಿಂದ ಸಿಎಂ ಅಕ್ಷರಶಃ ಗೊಂದಲಕ್ಕೆ ಒಳಗಾಗಿದ್ದಾರೆ. ಇರುವ ಒಂದು ಸ್ಥಾನ ಯಾರಿಗೆ ನೀಡುವುದು ಎಂದು ಸಿಎಂ ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ಜೂನ್ ನಲ್ಲಿ ಸುಮಾರು 7-8 ವಿಧಾನ ಪರಿಷತ್ ಸ್ಥಾನಗಳು ಖಾಲಿ ಆಗಲಿದೆ. ಹೀಗಾಗಿ ಈಗ ಒಬ್ಬರಿಗೆ ಕೊಟ್ಟು ಮುಂದಿನ ಜೂನ್ ವೇಳೆ ಇನ್ನೊಬ್ಬರಿಗೆ ನೀಡುವ ಚಿಂತನೆಯಲ್ಲಿ ಸಿಎಂ ಇದ್ದಾರೆ. ಯಾರಿಗೆ ಮೊದಲು ಕೊಡಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಲಿದೆ.

  • ದೆಹಲಿಯಲ್ಲಿ ಸಿದ್ದರಾಮಯ್ಯ ಬಣದ ಲಾಬಿ ಜೋರು

    ದೆಹಲಿಯಲ್ಲಿ ಸಿದ್ದರಾಮಯ್ಯ ಬಣದ ಲಾಬಿ ಜೋರು

    ಬೆಂಗಳೂರು: ಡಿಕೆಶಿಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಸಿದ್ದರಾಮಯ್ಯ ಪಡೆ ದೆಹಲಿಗೆ ಎಂಟ್ರಿ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಬರುವುದು ಖಚಿತವಾಗುತ್ತಿದ್ದಂತೆ ಅದನ್ನ ತಪ್ಪಿಸಲು ಸಿದ್ದರಾಮಯ್ಯ ಬಣ ದೆಹಲಿಯಲ್ಲಿ ಲಾಬಿ ಆರಂಭಿಸಿದೆ ಎನ್ನಲಾಗುತ್ತಿದೆ.

    ಎರಡು ದಿನದಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಕೃಷ್ಣ ಬೈರೇಗೌಡ ಹಾಗೂ ರಿಜ್ವಾನ್ ಅರ್ಷದ್ ಅವರು ಶತಾಯಗತಾಯ ಎಂ.ಬಿ.ಪಾಟೀಲ್ ರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರ ಮನವೊಲಿಕೆ ಮಾಡತೊಡಗಿದ್ದಾರೆ. ಒಕ್ಕಲಿಗರಿಗೆ ಕೊಡುವುದಾದರೆ ಕ್ಲೀನ್ ಇಮೇಜ್ ಇರುವ ಕೃಷ್ಣ ಬೈರೇಗೌಡರಿಗೆ ಕೊಡುವಂತೆ ಸಿದ್ದರಾಮಯ್ಯ ಒತ್ತಡ ಹೇರತೊಡಗಿದ್ದಾರೆ.

    ರಾಹುಲ್ ಗಾಂಧಿ ಆಪ್ತರ ಮೂಲಕ ಎಂ.ಬಿ.ಪಾಟೀಲ್ ಪರವಾಗಿ ಕೃಷ್ಣ ಬೈರೇಗೌಡ ಹಾಗೂ ರಿಜ್ವಾನ್ ಲಾಬಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಣಕ್ಕೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಹ ಸಾಥ್ ನೀಡಿದ್ದಾರೆ. ಎಂ.ಬಿ.ಪಾಟೀಲ್ ಅಥವಾ ಕೃಷ್ಣ ಬೈರೇಗೌಡರಿಗೆ ಅವಕಾಶ ಕೊಡುವಂತೆ ಕಡೆಗಳಿಗೆಯಲ್ಲಿ ಲಾಬಿ ಜೋರಾಗಿದೆ.  ಇದನ್ನೂ ಓದಿ: ‘ಕೆಪಿಸಿಸಿ ಪಟ್ಟ ಅಲಂಕರಿಸಲು ಸಿದ್ಧ, ಆದ್ರೆ 8 ಷರತ್ತು ಒಪ್ಪಬೇಕು’ – ಡಿಕೆ ಶಿವಕುಮಾರ್

  • ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಜಯಭೇರಿ

    ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಜಯಭೇರಿ

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ಜಯಭೇರಿ ಗಳಿಸಿದ್ದಾರೆ. 13,520 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಎಂ ಸರವಣ ವಿರುದ್ಧ ಗೆಲುವನ್ನ ದಾಖಲಿಸಿದ್ದಾರೆ.

    ಚುನಾವಣೆ ಘೋಷಣೆಯಾದಾಗಿನಿಂದಲೂ ಶಿವಾಜಿನಗರ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿತ್ತು. ಶಿವಾಜಿನಗರದಲ್ಲಿ ಕಾಂಗ್ರೆಸ್ ಕಾರ್ಪೋರೆಟರ್ ಗಳೆಲ್ಲಾ ಬಂಡಾಯ ಎದ್ದು ರಿಜ್ವಾನ್ ಅರ್ಷದ್ ವಿರುದ್ಧ ತೊಡೆತಟ್ಟಿದ್ದರು. ಇದನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಕ್ಷೇತ್ರದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿ ರಿಜ್ವಾನ್ ಗೆಲುವು  ಸಾಧಿಸಿದ್ದಾರೆ.

    ಶಿವಾಜಿನಗರದ ಉಪ ಚುನಾವಣೆ ಕಣದಲ್ಲಿ ಕಾಂಗ್ರೆಸ್‍ನಿಂದ ರಿಜ್ವಾನ್ ಅರ್ಷದ್, ಬಿಜೆಪಿಯಿಂದ ಎಂ.ಸರವಣ ಮತ್ತು ಜೆಡಿಎಸ್ ನಿಂದ ತನ್ವೀತ್ ಅಹಮದ್ ಸ್ಪರ್ಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟ ಆದರೂ ಶಿವಾಜಿನಗರದಲ್ಲಿ ವಿಜಯದ ಪತಾಕೆ ಹಾರಿಸಿದೆ. ರಿಜ್ವಾನ್ ಅರ್ಷದ್ ಒಟ್ಟು 49,887 ಮತಗಳು ತೆಗೆದುಕೊಂಡು 13,520 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ ಸರವಣ 36,367 ಮತಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರೆ, ಎಸ್‍ಡಿಪಿಐನಿಂದ ಸ್ಪರ್ಧಿಸಿದ್ದ ಅಬ್ದುಲ್ ಹನಾನ್ 3,141 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಜೆಇಡಿಎಸ್‍ನಿಂದ ಸ್ಪರ್ಧಿಸಿದ್ದ ತನ್ವೀರ್ ಅಹಮದ್ 1,098 ಮತಗಳನ್ನ ಹಾಗೂ ವಾಟಾಳ್ ನಾಗರಾಜು 255 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

    ಯಾರಿಗೆ ಎಷ್ಟು ಮತ?:
    ರಿಜ್ವಾನ್ ಅರ್ಷದ್ (ಕಾಂಗ್ರೆಸ್): 49,887 ಮತಗಳು
    ಸರವಣ (ಬಿಜೆಪಿ) : 36,367 ಮತಗಳು
    ಅಬ್ದುಲ್ ಹನಾನ್ (ಎಸ್‍ಡಿಪಿಐ): 3,141 ಮತಗಳು
    ತನ್ವಿರ್ ಅಹಮದ್ (ಜೆಡಿಎಸ್): 1,098
    ವಾಟಾಳ್ ನಾಗರಾಜು: 255