Tag: River Water

  • ಬಿಸಿಲಿನಿಂದ ಬರಿದಾದ ವೇದಾವತಿ ನದಿ ಒಡಲು – ತೀರದಲ್ಲೇ ಬೋರ್ ಕೊರೆಸಲು ರೈತರ ಸಾಹಸ

    ಬಿಸಿಲಿನಿಂದ ಬರಿದಾದ ವೇದಾವತಿ ನದಿ ಒಡಲು – ತೀರದಲ್ಲೇ ಬೋರ್ ಕೊರೆಸಲು ರೈತರ ಸಾಹಸ

    ಬಳ್ಳಾರಿ: ಕುಡಿಯುವ ನೀರಿಗಾಗಿ ಒಳ್ಳೆ ಪಾಯಿಂಟ್ ನೋಡಿಸಿ ಬೋರ್ ವೆಲ್ ಹಾಕಿಸೋದನ್ನ ನಾವೆಲ್ಲಾ ನೋಡಿದ್ದೇವೆ. ಆದ್ರೆ ಇಲ್ಲಿನ ರೈತರು (Farmers), ತಮ್ಮ ಬೆಳೆಗಳನ್ನ ಉಳಿಸಿಕೊಳ್ಳಲು ನದಿಯ ತೀರದಲ್ಲೇ ಬೋರ್ ಹಾಕಿಸಿ, ನೀರು ಪಡೆಯಲು ಹರಸಾಹಸ ಪಡ್ತಿದ್ದಾರೆ. ಅರೇ.. ನದಿಯಲ್ಲಿ ಬೋರ್‌ವೆಲ್ ಹಾಕಿಸ್ತಿರೋದಾದ್ರೂ ಯಾಕೆ ಅಂತೀರಾ?

    ಬಳ್ಳಾರಿ (Ballari) ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಹರಿಯುವ ಹಗರಿಯ ವೇದಾವತಿ ನದಿ ಬೇಸಿಗೆ ಆರಂಭದಲ್ಲೇ ಸಂಪೂರ್ಣ ಬತ್ತಿ ಬರಿದಾಗಿದೆ. ಇದೇ ವೇದಾವತಿ ನದಿಯ ನೀರನ್ನೇ ನಂಬಿ ಎಕರೆಗೆ 40-50 ಸಾವಿರ ರೂ. ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದ ನದಿ ಪಾತ್ರದ ಸಾವಿರಾರು ರೈತರು ಇದೀಗ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗಾಗಿ ನದಿಯ ಒಡಲಲ್ಲೇ ಗುಂಡಿ ತೋಡಿ, ಬೋರ್ ವೆಲ್ ಹಾಕಿಸಿ, ಬೆಳೆ ಉಳಿಸಿಕೊಳ್ಳಲು ರೈತರ ಹೆಣಗಾಡ್ತಿದ್ದಾರೆ.

    ಇನ್ನೂ ಈ ವೇದಾವತಿ-ಹಗರಿ ನದಿ ನಂಬಿ ಕೃಷಿ ಮಾಡ್ತಿದ್ದ ಸಿರಗುಪ್ಪ ಹಾಗೂ ಬಳ್ಳಾರಿ ತಾಲೂಕಿನ 40 ಸಾವಿರಕ್ಕೂ ಅಧಿಕ ರೈತರು ಪಂಪ್ ಸೆಟ್ ಅಳವಡಿಕೆ ಮಾಡಿಕೊಂಡಿದ್ದಾರೆ. ಆದ್ರೆ ಇದೀಗ ನದಿಯಲ್ಲಿ ನೀರು ಬತ್ತಿರೋದ್ರಿಂದ ನದಿಯಲ್ಲೇ ಬೋರ್ ವೆಲ್ ಹಾಕಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಭತ್ತದ ಬೆಳೆ ತೆನೆ ಕಟ್ತಿದ್ದು ಒಂದೇ ನೀರು ತಪ್ಪಿದ್ರೆ ಅರ್ಧದಷ್ಟು ಇಳುವರಿ ಕಡಿಮೆ ಆಗುವ ಆತಂಕದಲ್ಲಿ ರೈತರಿದ್ದಾರೆ.

    ಸದ್ಯ ನದಿಯಲ್ಲಿ ನೀರು ಬತ್ತಿರೋದ್ರಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕದ ಜೊತೆ ಜಲ-ಚರಗಳಿಗೂ ಸಂಕಷ್ಟ ಎದುರಾಗಿದೆ. ಬಿರು ಬಿಸಿಲಿನ ತಾಪಮಾನಕ್ಕೆ ಸಿಕ್ಕು ನದಿಯಲ್ಲಿ ನೀರಿಲ್ಲದೇ ಮೀನುಗಳು ಸತ್ತು ಬಿದ್ದಿವೆ. ಹೀಗಾಗಿ ರೈತರ ಮನವಿಯಂತೆ ಸರ್ಕಾರ ಎಚ್ಚೆತ್ತುಕೊಂಡು ಕಾಲುವೆ ಮೂಲಕ ನದಿಗೆ ನೀರು ಹರಿಸಿ, ರೈತರ ಬದುಕಿನ ಜೊತೆಗೆ ಜಲಚರಗಳನ್ನು ಬದುಕಿಸುವ ಕೆಲಸಕ್ಕೆ ಮುಂದಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

  • ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!

    ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!

    – 102 ಬಗೆಯ ವಿಶೇಷ ಆರತಿ, 1,08,000 ತುಳಸಿ ದಳ ರಸದಿಂದಲೂ ಅಭಿಷೇಕ

    ಮೈಸೂರು: ಶ್ರೀರಾಮನ ಮೂರ್ತಿಗೆ ಸಪ್ತ ನದಿಗಳ ನೀರಿನಿಂದ (River water) ಜಲಾಭೀಷೆಕ ನೇರವೇರಿಸಲು ಮೈಸೂರಿನಲ್ಲಿ (Mysuru) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಮೈಸೂರಿನ ವಾಸವಿ ಟ್ರಸ್ಟ್ ನವರು ಶ್ರೀರಾಮನ ಮೂರ್ತಿಯ ಅಭಿಷೇಕಕ್ಕೆ ಸಪ್ತ ನದಿಗಳ ನೀರನ್ನ ತರಿಸಿದ್ದಾರೆ. ಕಾವೇರಿ, ಕಪಿಲಾ, ನರ್ಮಾದಾ, ಸಿಂಧು, ಗಂಗಾ, ಸರಯೂ, ಯುಮುನಾ ನದಿ ನೀರನ್ನು ತಂದು ಜಲಾಭಿಷೇಕಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ

    ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಅದೇ ಸಮಯಕ್ಕೆ ಮೈಸೂರಿನ ದೇವಾಲಯದಲ್ಲೂ ಪ್ರಭು ಶ್ರೀರಾಮನಿಗೆ ಜಲಾಭೀಷೇಕ ನೆರವೇರಿಸಲಾಗುತ್ತದೆ. ಜೊತೆಗೆ ಪಂಚಾಮೃತ ಅಭಿಷೇಕ, 1,08,000 ತುಳಸಿ ದಳದಿಂದ ತೆಗೆದಿರುವ ರಸದಿಂದ ವಿಶೇಷ ಅಭಿಷೇಕವನ್ನೂ ನೆರವೇರಿಸಲಾಗುತ್ತದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಮತ್ತೊಂದು ದೀಪಾವಳಿ, ಕ್ರಿಶ್ಚಿಯನ್ ಮಹಿಳೆಯಾದ್ರೂ ನಾನು ಆಚರಿಸುತ್ತೇನೆ – ಮೇರಿ ಮಿಲ್ಬೆನ್ ಸಂತಸ

    ಮುಖ್ಯವಾಗಿ ಅಯೋಧ್ಯೆ (Ayodhya) ಮತ್ತು ವಾರಣಾಸಿಯಿಂದ 102 ಬಗೆಯ ಆರತಿಗಳನ್ನ ತರಿಸಲಾಗಿದೆ. ಈ ಆರತಿಯನ್ನ ದೇಶದಲ್ಲಿ ಎಲ್ಲಿಯೂ ಮಾಡುತ್ತಿಲ್ಲ. ಸೋಮವಾರ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಮೈಸೂರು ನಗರದ ಆಲಮ್ಮ ಛತ್ರದಲ್ಲಿ 102 ಬಗೆಯ ಆರತಿ ನೆರವೇರಿಸಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಬೆಳೆದಿರುವ ವಿವಿಧ ಬಗೆಯ ಪುಷ್ಪಗಳಿಂದ ರಾಮನ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುವಂತೆ ಇಲ್ಲಿಯೂ ನೆರವೇರಿಸಲಾಗುತ್ತದೆ ಎಂದು ವಾಸವಿ ಟ್ರಸ್ಟ್‌ ಸಿಬ್ಬಂದಿ ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

  • ಕಾವೇರಿ, ಕಬಿನಿ, ಕಾಳಿ ಸೇರಿ ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ- ವರದಿ ಸ್ಫೋಟ

    ಕಾವೇರಿ, ಕಬಿನಿ, ಕಾಳಿ ಸೇರಿ ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ- ವರದಿ ಸ್ಫೋಟ

    – ನದಿ ಹರಿವಿನ ನೀರಿನ ಪರೀಕ್ಷೇಯಲ್ಲಿ ಕಲುಷಿತ
    – ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಹಿರಂಗ

    ಬೆಂಗಳೂರು: ಆಧುನಿಕತೆ ಬೆಳೆದಂತೆ ಪರಿಸರದಲ್ಲಿ ಮಾಲಿನ್ಯ (Pollution) ಪ್ರಮಾಣ ಕೂಡ ಹೆಚ್ಚಾಗ್ತಾ ಇದೆ. ಅದರಲ್ಲೂ ಕುಡಿಯುವ ನೀರು ಹಾಗೂ ಗಾಳಿಯಲ್ಲಿ ಕಲುಷಿತ ಪ್ರಮಾಣ ಹೆಚ್ಚುತ್ತಲೇ ಇದೆ. ಇದಕ್ಕೆ ನಿದರ್ಶನ ಎನ್ನುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ವರದಿಯೊಂದನ್ನ ಬಿಡುಗಡೆ ಮಾಡಿದೆ.

    ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿಯಲ್ಲಿ ರಾಜ್ಯದ ಪ್ರಮುಖ 17 ನದಿಗಳು ಕಲುಷಿತ ಆಗಿರೋದು ಬಯಲಾಗಿದೆ. ಈ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿ ನದಿಗಳ (Rivers) ಹರಿವಿನಲ್ಲಿ ನೀರನ್ನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 15 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ ಅಂತಾ ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್ ಏಕೆ ನಿರೀಕ್ಷಿಸಬಾರದು- ಕಮಲ್ ಹಾಸನ್ ಪ್ರಶ್ನೆ

    ಯಾವೆಲ್ಲಾ ನದಿ ನೀರು ಯೋಗ್ಯವಲ್ಲ?: ಅರ್ಕಾವತಿ ನದಿ, ಲಕ್ಷ್ಮಣ ತೀರ್ಥ ನದಿ, ಮಲಪ್ರಭಾ ನದಿ, ತುಂಗಭದ್ರಾ ನದಿ, ಭದ್ರಾ ನದಿ, ಕಾವೇರಿ ನದಿ (Cauvery), ಕಬಿನಿ ನದಿ (Kabini), ಕಗಿನಿ ನದಿ, ಕಾಳಿ ನದಿ, ಕೃಷ್ಣ ನದಿ, ಅಸಂಗಿ ಕೃಷ್ಣ ನದಿ, ಶಿಂಷಾ ನದಿ, ಭೀಮಾ ನದಿ, ನೇತಾವತಿ ನದಿ, ಕುಮಾರಧಾರ ನದಿ, ತುಂಗಾ ನದಿ, ಯಗಚಿ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ.

    ಮಹಾನಗರಗಳು ಹಾಗೂ ನಗರಗಳಲ್ಲಿನ ಕಂಪನಿಗಳು, ಕಾರ್ಖಾನೆಗಳು (Chemical Factory) ಹೊರಸೂಸುವ ಕೆಮಿಕಲ್ ಹಾಗೂ ತ್ಯಾಜ್ಯದಿಂದಳೇ ನೀರು ಕಲುಷಿತ ಆಗ್ತಿದೆ ಎಂದು ಹೇಳಲಾಗ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾಲಿನ್ಯ ಉಂಟಾಗುವ ಜಾಗದಲ್ಲಿ ಪ್ಲಾಂಟ್‌ಗಳನ್ನ ರಚನೆ ಮಾಡಿ ನಿಯಂತ್ರಣ ಮಾಡದೇ ಇರೋದು ಮಾಲಿನ್ಯಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತು ನಿಯಂತ್ರಣ ಮಾಡಬೇಕು. ಮಾನಿಟರ್‌ಗೆ ಹೆಚ್ಚು ಸಿಬ್ಬಂದಿ ನೇಮಕ ಮಾಡಿ ಮಾನಿಟರ್ ಮೂಲಕ ಮಾಲಿನ್ಯ ತಡೆಗಟ್ಟಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.

    ಒಟ್ಟಾರೆ 17 ನದಿಗಳು ಕಲುಷಿತ ಆಗಿರೋದು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಯಲ್ಲಿ ಬಯಲಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರೀ ಪ್ರಮಾಣದ ನೀರು ಬಿಡುಗಡೆ- ಯಾದಗಿರಿಯಲ್ಲಿ ತುಂಬು ಗರ್ಭಿಣಿಯ ಪರದಾಟ

    ಭಾರೀ ಪ್ರಮಾಣದ ನೀರು ಬಿಡುಗಡೆ- ಯಾದಗಿರಿಯಲ್ಲಿ ತುಂಬು ಗರ್ಭಿಣಿಯ ಪರದಾಟ

    ಯಾದಗಿರಿ: ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆಯು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದಲ್ಲಿ ನಡೆದಿದೆ.

    ಪೂಜಮ್ಮ, ತುಂಬು ಗರ್ಭಿಣಿಯಾಗಿರುವುದರಿಂದ ಯಾವುದೇ ಸಮಯದಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಹಾಗಾಗಿ ಪೂಜಮ್ಮ ತಪಾಸಣೆಗೆಂದು ಆಸ್ಪತ್ರೆಗೆ ಹೋಗಲು ನರಳಾಡುವಂತಾಗಿದೆ. ಗ್ರಾಮದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಕಕ್ಕೇರಾಕ್ಕೆ ತೆರಳದೆ ತತ್ತರಿಸಿ ಹೋಗಿದ್ದಾರೆ. ಅದೇ ರೀತಿ ಗ್ರಾಮದ ಸಂಪರ್ಕ ಕಡಿದುಕೊಂಡ ಕಾರಣ ಶಾಲಾ ಶಿಕ್ಷಕ ಬಸನಗೌಡ ಕೂಡ ಸೋಮವಾರದಿಂದ ಗ್ರಾಮದಲ್ಲೇ ತಂಗಿದ್ದಾರೆ.

    ಈಗಾಗಲೇ ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆ ಬಸವಸಾಗರ ಡ್ಯಾಂಗೆ ಹೆಚ್ಚು ನೀರು ಹರಿಸಿದರೆ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ. ಸದ್ಯ ಬಸವಸಾಗರ ಡ್ಯಾಂ ನಿಂದ 1,28,000 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದರಿಂದ ನೀಲಕಂಠರಾಯನಗಡ್ಡಿ ಸಂಪರ್ಕ ಕಳೆದುಕೊಂಡಿದೆ. ಪ್ರವಾಹ ಭೀತಿ ಎದುರಾಗುವ ಸಂಭವ ಹೆಚ್ಚಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ನದಿ ಪಾತ್ರದ ಜನರಿಗೆ ನದಿ ಕಡೆ ತೆರಳದಂತೆ ಜಿಲ್ಲಾಧಿಕಾರಿ ಎಂ ಕೂರ್ಮಾರಾವ್ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv